ಶುಕ್ರವಾರ, ಡಿಸೆಂಬರ್ 31, 2010

ನಮ್ಮ ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು

ಹೊಸ ವರುಷವನ್ನು ಪ್ರೀತಿ,ಏಕತಾ ಭಾವದಿಂದ, ದ್ವೇಷ-ರೋಷಗಳನ್ನು ದೂರ ಮಾಡುತ್ತಾ, ಹರುಷದಿಂದಲೇ ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಆಗಿಹೊದ ಕೆಟ್ಟ ಘಟಣೆಗಳನ್ನು ಮರೆತು ಮನಸ್ಸನ್ನು ಶುಭ್ರಗೊಳಿಸಿ ಆಗದೇ ಇದ್ದ ಕನಸನ್ನು ನನಸಾಗಿಸಿಕೊಳ್ಳಲು ಮತ್ತೊಂದು ವರ್ಷ ಬಂದಿದೆ ಎನ್ನುತ್ತಾ ಮುಂದಡಿಯಿಡೋಣ.
ಆತ್ಮೀಯ ಓದುಗರೆಲ್ಲರಿಗೂ ಹೊಸ ವರುಷವು ಶುಭ ತರಲಿ, ಜೀವನವನ್ನು ಬೆಳಗಲಿ, ಅಂದುಕೊಂಡ ಗುರಿ ಸಾಧನೆಯಾಗಲಿ, ಕನಸು ನನಸಾಗಲಿ, ಅದೇರೀತಿ ನಮ್ಮ-ತಮ್ಮೆಲ್ಲರ ಆರೊಗ್ಯ ಚೆನ್ನಾಗಿರಲಿ,. ಎಲ್ಲರಿಗೊ ಶುಭವಾಗಲಿ.

ಬುಧವಾರ, ಡಿಸೆಂಬರ್ 15, 2010

ಇಂಟರ್ ನೆಟ್ ಬ್ರೌಸಿಂಗ್ ಭಾರತಕ್ಕೆ ನಂ.3 ಸ್ಥಾನ

k 
ಎಲ್ಲಾ ಕ್ಷೇತ್ರಗಳಲ್ಲೂ ಅಂತರ್ಜಾಲ ಬಳಕೆ ಅಗತ್ಯ ಹೆಚ್ಚುತ್ತಿದ್ದು, ಅತಿ ಹೆಚ್ಚು ನೆಟ್ ಬ್ರೌಸ್ ಮಾಡುವ ದೇಶ ಯಾವುದು ಎಂಬುದರ ಬಗ್ಗೆ ಗೂಗಲ್ ಇಂಡಿಯಾ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ವಿಶ್ವದಲ್ಲಿ ಅತ್ಯಧಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟಾರೆ 100 ಮಿಲಿಯನ್ ಇಂಟರ್ ನೆಟ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
300 ಮಿಲಿಯನ್ ನೆಟ್ ಬಳಕೆದಾರರೊಂದಿಗೆ ಚೀನಾ ಅಗ್ರಸ್ಥಾನದಲ್ಲಿದ್ದರೆ, 207 ಮಿಲಿಯನ್ ಗ್ರಾಹಕರೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ ಎಂದು ಗೂಗಲ್ ಇಂಡಿಯಾದ ಉತ್ಪನ್ನ ವಿಭಾಗದ ಮುಖ್ಯಸ್ಥ ವಿನಯ್ ಗೋಯಲ್ ಹೇಳಿದ್ದಾರೆ.

ಸುಮಾರು 40 ಮಿಲಿಯನ್ ಜನ ಮೊಬೈಲ್ ಫೋನ್ ಬಳಸಿ ಇಂಟರ್ ನೆಟ್ ಬ್ರೌಸಿಂಗ್ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಬಳಸಿ ಬ್ರೌಸ್ ಮಾಡುವವರಿಗಿಂತ ಮೊಬೈಲ್ ಬಳಕೆ ಮಾಡಿ ಬ್ರೌಸ್ ಮಾಡುವವರ ಸಂಖ್ಯೆ ಅಧಿಕವಾಗಲಿದೆ.
 
2007ರಲ್ಲಿ ಭಾರತದಲ್ಲಿ 2 ಮಿಲಿಯನ್ ನಷ್ಟಿದ್ದ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕುತೂಹಲದ ಸಂಗತಿ ಎಂದರೆ ಮೊಬೈಲ್ ನೆಟ್ ಬಳಕೆದಾರರು ಹೆಚ್ಚಾಗಿ ಇತ್ತೀಚಿನ ಹಾಡು ಹಾಗೂ ಸಿನಿಮಾ ಟ್ರೈಲರ್ ಗಳ ಹುಡುಕಾಟದಲ್ಲಿ ತಮ್ಮ ಬ್ರೌಸಿಂಗ್ ಸಮಯ ವ್ಯಯಿಸುತ್ತಿದ್ದಾರೆ ಎಂದು ವಿನಯ್ ಹೇಳಿದರು.

ಭಾರತದಲ್ಲಿ 3ಜಿ ಈಗಷ್ಟೇ ಕಾಲಿಡುತ್ತಿದೆ. ವಿಶ್ವದ ಹಲವೆಡೆ 4ಜಿ ಬಳಕೆಯಲ್ಲಿದೆ. ಇಂಟರ್ ನೆಟ್ ಸೌಲಭ್ಯಕ್ಕೆ ಬೇಕಾದ ಖರ್ಚು ವೆಚ್ಚ, ತಿಳುವಳಿಕೆ ಕಮ್ಮಿ ಇರುವುದರಿಂದ ಭಾರತದಲ್ಲಿ ಇನ್ನೂ ಇಂಟರ್ ನೆಟ್ ವಿಸ್ತರಣೆ ಸುಲಭವಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಬ್ರಾಡ್ ಬ್ಯಾಂಡ್ ಕೊಂಡೊಯ್ಯಲು ಸರ್ಕಾರ ಹರ ಸಾಹಸ ಪಡುತ್ತಿದೆ. ಆದರೂ, ನಿಧಾನವಾಗಿಯಾದರೂ ಭಾರತ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದೆ. ವಿಕಿಪೀಡಿಯಾ ವರದಿಯಂತೆ ಜಾಗತಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಭಾನುವಾರ, ಡಿಸೆಂಬರ್ 12, 2010

ಬಿಲ್ ಮೇಡ್ ಐಡಿ ಮೂಲಕ ಅತಿ ಸರಳ ವಿಧಾನದಿಂದ ಪಾವತಿ

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಲಾಭ ಪಡೆದಿರುವ ಸ್ಥಳೀಯ ಯುವ ಟೆಕ್ಕಿಗಳ ತಂಡ ಬಿಲ್ ಪಾವತಿ ಮಾಡಲು ಜನಸಾಮಾನ್ಯರು ಪಡುವ ಪಾಡನ್ನು ಹೋಗಲಾಡಿಸಲು ’ಬಿಲ್ ಮೇಲ್ ಐಡಿ’ ಎಂಬ ವೆಬ್ ಪೋರ್ಟಲ್ ಗೆ ಡಿ.13ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಲ್ ಪಾವತಿ ಅಷ್ಟೇ ಅಲ್ಲದೆ, ಇ ವಾಣಿಜ್ಯ ಉದ್ಯಮಿಗಳು, ಮಾರಾಟಗಾರರು ಇತರೆ ಗ್ರಾಹಕರಿಗೂ ಈ ತಾಣ ಅನುಕೂಲವಾಗಲಿದೆ. ಬ್ಯಾಂಕ್ ಹಾಗೂ ಜನಸಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿರುವ ಈ ತಾಣ ವಿಶ್ವದ ಪ್ರಪ್ರಥಮ ವಾಣಿಜ್ಯ ನೆಟ್ ವರ್ಕಿಂಗ್ ಸಾಧನವಾಗಲಿದೆ.

ಬಿಲ್ ಪಾವತಿ ಅತಿ ಸರಳ: ಬಿಲ್ ಮೇಲ್ ಐಡಿಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾದ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಬಿಲ್ ಮೇಲ್ ಐಡಿ ಪಡೆದ ಬಳಕೆದಾರ ನೀರು, ವಿದ್ಯುತ್ ಹಾಗೂ ಇನ್ನಿತರ ಸಂಸ್ಥೆಗಳ ಬಿಲ್ ಪಾವತಿಯನ್ನು ಸರಳ ವಿಧಾನದಿಂದ ಮಾಡಬಹುದು. ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಕೌಂಟರ್, ಎಟಿಎಂ, ಕಿಯೋಸ್ಕ್, ತೃತೀಯ ಪಕ್ಷದ ಫ್ರಾಂಚೈಸಿ ಮುಂತಾದ ಸ್ಥಳಗಳಲ್ಲಿ ಬಿಲ್ ಮೇಲ್ ಐಡಿ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾಗಿದೆ.

ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳೊಂದಿಗೆ ಬಿಲ್ ಮೇಲ್ ಐಡಿ ಹಲವು ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳಲಿದ್ದು, ಈ ತಾಣದಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ವಿವಿಧ ಬಿಲ್ಲಿಂಗ್ ಏಜೆನ್ಸಿಗಳು ಮತ್ತು ಸೇವೆ ನೀಡುವವರಿಗೆ ಬಿಲ್ ಮೇಲ್ ಐಡಿ ಮೂಲಕ ಬಿಲ್‌ಗಳನ್ನು ಪಾವತಿಸಬಹುದು. ಬಿಲ್ ಪಾವತಿದಾರರಿಗೆ ಬಿಲ್‌ಮೇಲ್ ಐಡಿ ಉಚಿತವಾಗಿ ಈ ಸೇವೆ ನೀಡುತ್ತದೆ.

ಇ ವಾಣಿಜ್ಯಕ್ಕೂ ಅನುಕೂಲ: ವ್ಯಾಪಾರಿಗಳು ತಮ್ಮ ಸಂಸ್ಥೆಗೆ ಸಂಬಂಧಿಸಿದ ಬಿಲ್‌ಗಳನ್ನು ತಯಾರಿಸಲು ಬಿಲ್‌ಮೇಲ್ ಐಡಿ ಯನ್ನು ಉಪಯೋಗಿಸಬಹುದಾಗಿದ್ದು, ಇದು ಪ್ರಸಕ್ತ ಲಭ್ಯವಿರುವ ಎಲ್ಲ ಅಕೌಂಟಿಂಗ್ ಸಾಫ್ಟ್‌ವೇರ್‌ಗೂ ಸಂಪರ್ಕಿತವಾಗಿದೆ. ಉಚಿತವಾಗಿ ಡೌನ್‌ಲೋಡ್ ಮಾಡಬಲ್ಲಂತಹ ಬಿಲ್ಲಿಂಗ್ ಸಾಫ್ಟ್‌ವೇರ್ ಆವೃತ್ತಿ ಇದರಲ್ಲಿ ಲಭ್ಯವಿದೆ. ಇದನ್ನು ಆಫ್‌ಲೈನಮ್ ಬಳಕೆಗೆ ಬಳಸಿಕೊಳ್ಳಬಹುದಾಗಿದೆ. ಜಗತ್ತಿನ ಎಲ್ಲರೂ ಬಿಲ್ ಮೇಲ್ ಐಡಿ ಸಮುದಾಯದ ಸದಸ್ಯರಾಗಬಹುದು. ಬಿಲ್‌ಮೇಲ್ ಐಡಿ ಸದಸ್ಯ ಇನ್ನೊಬ್ಬ ಬಿಲ್‌ಮೇಲ್ ಐಡಿ ಸದಸ್ಯನಿಗೆ ಪರ್ಚೆಸ್ ಆರ್ಡರ್, ಬಿಲ್ ನೀಡುವಿಕೆ, ಬಿಲ್ ಹಣಪಾವತಿ, ವಸ್ತುವಿನ ಬಟವಾಡೆ ಮೊದಲಾದ ವಾಣಿಜ್ಯ ಪ್ರಕ್ರಿಯೆಗಳನ್ನು ಸರಳವಾಗಿ ನಡೆಸಬಹುದಾಗಿದೆ .

ಗುರುವಾರ, ಡಿಸೆಂಬರ್ 9, 2010

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂ

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂಗಳನ್ನು ವಿನ್ಯಾಸಗೊಳಿಸಿದೆ. ಯಾರ ಸಹಾಯವಿಲ್ಲದೆ ಅಂಧರು ಹಣವನ್ನು ಪಡೆಯಬಹುದಾದ ವ್ಯವಸ್ಥೆಯನ್ನು ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಪ್ರಕಟಿಸಿದೆ. ಬ್ರೈಲ್ ಲಿಪಿ ಸಹಾಯದಿಂದ ಎಟಿಎಂ ಯಂತ್ರ ಬಳಕೆಗೆ ಅನುಕೂಲ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ ಈ ಡೈಬೋಲ್ಡ್ (D450) ಎಟಿಎಂಗಳನ್ನು ಅಳವಡಿಸಲಾಗುವುದು. ಇದು ಸದ್ಯಕ್ಕೆ ಚಾಲ್ತಿಯಲ್ಲಿರುವ ಎಟಿಎಂಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ. ಗ್ರಾಹಕ ಸ್ನೇಹಿ ವಿನ್ಯಾಸದ ಹೊಂದಿರುವುದರಿಂದ ವಿಕಲ ಚೇತನರು ಕೂಡಾ ಸುಲಭವಾಗಿ ಬ್ಯಾಂಕ್ ನೊಡನೆ ವ್ಯವಹರಿಸಬಹುದಾಗಿದೆ.

15 ಇಂಚಿನ LCD ದರ್ಶಕದ ಜೊತೆಗೆ ಬ್ರೈಲ್ ಲಿಪಿ ಬಳಸಲು ಕೀ ಪ್ಯಾಡ್ ಇರುತ್ತದೆ. ಹೆಡ್ ಫೋನ್ ಜಾಕ್ ಹಾಗೂ ಸ್ಪೀಕರ್ ಗಳನ್ನು ಅಳವಡಿಸಲಾಗಿದ್ದು, ಧ್ವನಿ ಸಹಾಯ ಪಡೆದು ವ್ಯವಹರಿಸಬಹುದಾಗಿದೆ. ಡಿಜಿಟಲ್ ವಿಡಿಯೋ ಮುದ್ರಣ(DVRs) ಹಾಗೂ ಸ್ಕಿಮಿಂಗ್ ತಂತ್ರಜ್ಞಾನ (ASD)ಗಳನ್ನು ಈ ಯಂತ್ರಗಳು ಹೊಂದಿದ್ದು, ಅತ್ಯಂತ ಸುರಕ್ಷಿತವಾಗಿರುತ್ತದೆ.

ಸುಮಾರು ಬ್ರೈಲ್ ಸುಧಾರಿತ 4,500 ಎಟಿಎಂಗಳನ್ನು ಅಳವಡಿಸಲು ಡೈಬೋಲ್ಡ್ ಜೊತೆ ಎಚ್ ಡಿಎಫ್ ಸಿ ಕೈ ಜೋಡಿಸಿದೆ. ಮಾಹಿತಿ ಮುದ್ರಣ, ಸಂಗ್ರಹಣೆ ಹಾಗೂ ಸ್ಥಳೀಯ ದರ್ಶಕ ಸೌಲಭ್ಯಗಳನ್ನು ಸುಮಾರು 700 ಎಚ್ ಡಿಎಫ್ ಸಿ ಬ್ರಾಂಚ್ ಗಳಲ್ಲಿ ಡೈಬೋಲ್ಡ್ ಅಳವಡಿಸಿದೆ.

ಮಂಗಳವಾರ, ಡಿಸೆಂಬರ್ 7, 2010

ವೆಬ್ ಸೈಟಿನಲ್ಲಿ ವೇದಾಂತ ಪಾಠ ಬೇಕೇನು

ಇವತ್ತು ಎಲ್ಲಿ ನೋಡಿದರೂ ಹಿಂಸೆ, ಅಶಾಂತಿ, ಅತೃಪ್ತಿ, ದ್ವೇಷ ಮತ್ತು ಭಯದ ವಾತಾವರಣ. ಭಯ ಹೊರಗೂ ಇದೆ. ಒಳಗೂ ಇದೆ. ಇದನ್ನು ಗೆಲ್ಲುವ ಮಾರ್ಗೋಪಾಯಗಳನ್ನು ವ್ಯಕ್ತಿ ತಾನೇ ಕಂಡುಕೊಳ್ಳಬೇಕಾದ ಆವಶ್ಯಕತೆ ಎಂದಿಗಿಂತ ಇಂದು ಹೆಚ್ಚೇ ಕಂಡುಬಂದಿದೆ. ನೆಮ್ಮದಿ ಪಡೆಯಲು ನಮಗಿರುವ ಸುಲಭವಾದ ಒಂದು ಪರಿಹಾರವೆಂದರೆ "ವೇದಾಂತ ವಿಚಾರ ಚಿಂತನೆ ".

ವಿದ್ಯೆಯನ್ನು, ಜ್ಞಾನವನ್ನು, ಶಾಂತಿ ಸಮಾಧಾನಗಳನ್ನು ಗುರುಕುಲ ಕ್ರಮದಿಂದ ಅಧ್ಯಯನ ಮಾಡುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಅಂಥ ವಾತಾವರಣವೂ ಇಲ್ಲ. ಇಂದಿನ ಯುಗ ಕಂಪ್ಯೂಟರ್ ಯುಗ. ಕಳ್ಳಕಾಕರ ಯುಗ. ದೊರೆಯೇ ಧೂರ್ತನಾಗುವ ಯುಗ. ವೈಜ್ಞಾನಿಕ ಯುಗ. ವೇಗದ ಯುಗ. ಆವೇಗದ ಯುಗ. ಉದ್ವೇಗದ ಯುಗ. ಪ್ರಮುಖವಾಗಿ ಈಗಿನ ಯುವಕ ಯುವತಿಯರು, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರು ಐಹಿಕ ಸುಖಕ್ಕೆ ಮತ್ತು ವಸ್ತು ಭೋಗಕ್ಕೆ ತುತ್ತಾಗಿ ಬಳಲಿದ್ದಾರೆ. ತಮ್ಮನ್ನು ಕಾಡುತ್ತಿರುವ ಕಾಯಿಲೆ ಯಾವುದು ಎನ್ನುವುದು ನರಳುತ್ತಿರುವ ವ್ಯಕ್ತಿಗೇ ತಿಳಿಯದಾಗಿದೆ.

ಇದನ್ನು ಗಮನದಲ್ಲಿ ಇಟ್ಟುಕೊಂಡು "ವೇದಾಂತ ಸತ್ಸಂಗ ಕೇಂದ್ರ"ದ ವತಿಯಿಂದ "ಶಂಕರಹೃದಯಂ" ಎಂಬ ಅಂತರ್ಜಾಲ ತಾಣವನ್ನು ತೆರೆಯಲಾಗುತ್ತಿದೆ. ವೇದಾಂತ ಪಾಠಗಳನ್ನು ಪ್ರಚುರ ಪಡಿಸುವುದು ಈ ವೆಬ್ ಸೈಟಿನ ಉದ್ದೇಶವಾಗಿರುತ್ತದೆ.
ವೆಬ್ ಸೈಟ್ ವಿಳಾಸ : http://www.satchidanandendra.org

ಶಂಕರ ಭಗವತ್ಪಾದರು ತೋರಿದ ಆದರ್ಶಗಳನ್ನು ಮನಸಾ ಮೆಚ್ಚುವವರು ಮತ್ತು ನೆಮ್ಮದಿ ಅರಸುತ್ತಿರುವವರು ಈ ತಾಣದ ಪ್ರಯೋಜನ ಪಡೆಯಬಹುದೆಂದು ವೇದಾಂತ ಸತ್ಸಂಗ ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ : 98860 51222 ದೂರವಾಣಿ ಸಂಖ್ಯೆಯನ್ನು ತಲುಪಿರಿ.
ಇಮೇಲ್ : shankarahridayam@gmail.com

ಮಂಗಳವಾರ, ನವೆಂಬರ್ 30, 2010

ಮುತ್ಯಾಲಮಡುವು

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ಮುತ್ಯಾಲಮಡುವು, ಆನೇಕಲ್ ನಿಂದ ೫ ಕಿ.ಮೀ ಹಾಗು ಬೆಂಗಳೂರಿನಿಂದ ೪೦ ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
ಮುತ್ಯಾಲಮಡುವಿನ ಹೆಸರು, ತೆಲುಗು ಭಾಷೆಯ ಮುತ್ಯಾಲ - ಮುತ್ತುಗಳು (Pearl) ಹಾಗು ಮಡುವು - ಮಡು (Valley) ಪದಗಳಿಂದ ಉಗಮ ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ ಧುಮುಕುವುದರಿಂದ, ಈ ಹೆಸರು ಬಂದಿದೆ.
ಬೆಂಗಳೂರಿನಿಂದ ೪೫ ಕಿ.ಮೀ ಇರುವ ಇಲ್ಲಿ ನೀರಿನ ಝರಿ ಸುಮಾರು 90 ಮೀ ಎತ್ತರದಿಂದ ಬೀಳುವಾಗ ಮುತ್ತಿನ ಹನಿಗಳಂತೆ ಕಾಣುತ್ತವೆ. ಆದ್ದರಿಂದ ಹೆಸರು 'ಮುತ್ಯಾಲ ಮಡುವು' (pearl valley).
ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸರವಾದಾಗ 'ಒಮ್ಮೆ' ಹೋಗಿ ಬರಬಹುದಾದಂತಹ ಸುಂದರ ಸ್ಥಳ. ವಾರಾಂತ್ಯಗಳಲ್ಲಿ ಹೋಗಬಯಸಿದರೆ ಬೆಳಿಗ್ಗೆ 8, 9 ಗಂಟೆ ಸುಮಾರಿಗೆ ಅಲ್ಲಿದ್ದರೆ ನೀವು ಝರಿಯ ನಾದ, ಹಕ್ಕಿಗಳ ಕಲರವ ಕೇಳಿ ಪ್ರಕೃತಿಯ ಶಾಂತತೆ ಸವಿಯಬಹುದು. ಮಳೆಗಾಲವಾದರೆ ಸೂಕ್ತ. ಇಲ್ಲವಾದಲ್ಲಿ ಮತ್ತೆ ಅದೇ ಜನರ ಗಲಾಟೆ ಗೌಜು!.
 
ಹಾಗೆ ಊಟ ವಸತಿಗೆ ಮಯೂರ ನಿಸರ್ಗ ಹೋಟೆಲ್ ( ಕರ್ನಾಟಕ ಪ್ರವಾಸೋದ್ಯಮ ಇಲಾಖೆ) ಯ ಸೌಲಭ್ಯವಿದೆ.
ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಬಸ್ ಸೌಕರ್ಯ ಆನೇಕಲ್ ಮಾತ್ರ ಲಭ್ಯವಿದೆ. ಇಲ್ಲಿಂದ ಆಟೋ ಮುಖಾಂತರ ಸುಮಾರು 5 ಕಿ.ಮೀ ಗಳ ಪ್ರಯಾಣ.

ಬೆಂಗಳೂರಿನಿಂದ ಮಾರ್ಗ.
ಬನ್ನೇರುಘಟ್ಟ ರಸ್ತೆ ----> ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ----> ಆನೇಕಲ್ ----> ಮುತ್ಯಾಲ ಮಡುವು.
ಅಥವಾ
ಹೊಸೂರು ರಸ್ತೆ---------> ಚಂದಾಪುರ ----> ಆನೇಕಲ್ ----> ಮುತ್ಯಾಲ ಮಡುವು .

ಬೋಲ್ಟ್ ಮೊಬೈಲ್ ಬ್ರೌಸರ್ ನಲ್ಲಿ ಭಾರತೀಯ ಭಾಷೆ ವೀಕ್ಷಿಸಿ

ಮೊಬೈಲ್ ನಲ್ಲಿ ಭಾರತೀಯ ಭಾಷೆ ಬಳಕೆ ಹೆಚ್ಚುತ್ತಿದ್ದಂತೆ ಹೊಸ ಹೊಸ ಸೌಲಭ್ಯಗಳು, ಅನ್ವಯ ತಂತ್ರಾಂಶಗಳನ್ನು ರೂಪಿಸಲಾಗುತ್ತಿದೆ. ಬಿಟ್ ಸ್ಟ್ರೀಮ್ ಕಂಪೆನಿ ಹೊಸ ಬೋಲ್ಟ್ ಮೊಬೈಲ್ ಬ್ರೌಸರ್ ಅನ್ನು ಪರಿಚಯಿಸಿದ್ದು ಇದು ಭಾರತೀಯ ಭಾಷೆಗಳನ್ನು ವೀಕ್ಷಿಸಲು ಅನುಕೂಲವಾಗಿದೆ. ಇಂಡಿಕ್ ಟೆಕ್ಸ್ ಬಳಕೆ ಹಾಗೂ ಬ್ರೌಸರ್ ಮೂಲಕ ಸ್ಪಷ್ಟವಾಗಿ ಭಾರತೀಯ ಭಾಷೆ ವೆಬ್ ತಾಣಗಳನ್ನು ವೀಕ್ಷಿಸಬಹುದಾಗಿದೆ.

ಇಂಗ್ಲೀಷ್ ಅಲ್ಲದೆ, ಬೆಂಗಾಳಿ, ಗುಜರಾತಿ, ಗುರುಮುಖಿ, ಹಿಂದಿ, ಕನ್ನಡ, ಮಲೆಯಾಳಂ, ಒರಿಯಾ, ತಮಿಳು, ತೆಲುಗು ಭಾಷೆಯ ತಾಣಗಳನ್ನು ಸುಲಭವಾಗಿ ವೀಕ್ಷಿಸಬಹುದು ಎಂದು ಕಂಪೆನಿ ಹೇಳಿದೆ. ಮುಂಬರುವ ದಿನಗಳಲ್ಲಿ ಮೊಬೈಲ್ ಇಂಟರ್ ನೆಟ್ ಕ್ಷೇತ್ರಕ್ಕೂ ಬಿಟ್ ಸ್ಟ್ರೀಮ್ ಕಾಲಿಡಲಿದೆ ಎಂದು ಕಂಪೆನಿಯ ಸಿಇಒ ಅನ್ನಾ ಮಗ್ಲಿಒಕೊ ಛಾಕ್ನೊನ್ ಹೇಳುತ್ತಾರೆ. 
ಬ್ಲಾಕ್ ಬೆರ್ರಿ ಹಾಗೂ ಸಮಾನಾಂತರ ಮೊಬೈಲ್ ಸಾಧನಗಳಲ್ಲಿ ಮಾತ್ರವಲ್ಲದೆ, J2ME ಸೌಲಭ್ಯವಿರುವ Palm ಸಾಧನ, ವಿಂಡೋಸ್ ಆಧಾರಿತ ಎಚ್ ಟಿಸಿ ಟಚ್, ಮೋಟೊ ಕ್ಯೂ, ಮೊಟೊ ಕ್ಯೂ 9ಸಿ ಸರಣಿ ಮೊಬೈಲ್ ಗಳನ್ನು ಬೋಲ್ಟ್ ಬ್ರೌಸರ್ ಬಳಸಬಹುದು. ನಿಮ್ಮ ಜಾವಾ ಆಧಾರಿತವಾದ ಮೊಬೈಲ್ ನಲ್ಲಿ Java MIDP 2 ಹಾಗೂ CLDC 1.0 ಇದ್ದರೆ ಸುಲಭವಾಗಿ ಬೋಲ್ಟ್ ಕಾರ್ಯ ನಿರ್ವಹಿಸುತ್ತದೆ.

ಡೌನ್ ಲೋಡ್ ಹೇಗೆ :
ಪ್ರಮಾಣಿಕೃತ ಹಾಗೂ ಪ್ರಮಾಣ ಪತ್ರವಿಲ್ಲದ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, ಇನ್ನೊಂದು ಲೈಟ್ ಆವೃತ್ತಿ(lower end mobiles) ಕೂಡಾ ಗ್ರಾಹಕರಿಗೆ ಸಿಗಲಿದೆ. VeriSign and Thawte ನ ಪ್ರಮಾಣ ಪತ್ರವುಳ್ಳ ಆವೃತ್ತಿ ಸರಿಯಾಗಿ ಕಾರ್ಯ ನಿರ್ವಹಿಸಸಿದ್ದರೆ, ಬೋಲ್ಟ್ ಲೈಟ್ ಆವೃತ್ತಿ ಡೌನ್ ಲೋಡ್ ಮಾಡಿಕೊಳ್ಳಬಹುದು ಬ್ಲಾಕ್ ಬೆರ್ರಿ ಗ್ರಾಹಕರಿಗೆ ಪ್ರತ್ಯೇಕ ಡೌನ್ ಲೋಡ್ ಕೊಂಡಿ ನೀಡಲಾಗಿದೆ.

Wi-Fi, GPRS, 3G, ActiveSync or EDGE ಉಳ್ಳ ಯಾವುದೇ ಮೊಬೈಲ್ ಮೂಲಕ ಬೋಲ್ಟ್ ಬ್ರೌಸರ್ ಬಳಸಿ ಇಂಟರ್ ನೆಟ್ ನಲ್ಲಿ ಸರ್ಫ್ ಮಾಡಬಹುದು. HTML 5, ಫ್ಲಾಷ್, ವಿಡಿಯೋ ಹಾಗೂ ಸಮಾಜಿಕ ಜಾಲ ತಾಣಗಳಲ್ಲಿ ವಿಹರಿಸಲು ಬೋಲ್ಟ್ ಅನುಕೂಲಕರವಾಗಿದ್ದು, ಸುರಕ್ಷಿತವಾಗಿದೆ.

ಶನಿವಾರ, ನವೆಂಬರ್ 27, 2010

ಭಾರತೀಯ ಭಾಷೆ ಕಲಿಯಲು ಆಪಲ್ ಅಪ್ಲಿಕೇಷನ್

ಭಾರತೀಯ ಭಾಷೆಗಳು ಕಲಿತವರಿಗೆ ಎಷ್ಟು ಸರಳವೋ, ಅದು ಕಲಿಯದವರಿಗೆ ಅನ್ಯಗ್ರಹ ಜೀವಿಗಳ ಸಂಭಾಷಣೆಯಂತೆ ತೋರುವುದು ಸಹಜ.

ವಿಶ್ವದೆಲ್ಲೆಡೆ ಹರಡಿರುವ ಭಾರತೀಯ ಜನರು ಫೋನ್ ಮೂಲಕ ಮಾತನಾಡುವಾಗ ಅಥವಾ ಸಂದೇಶ ಕಳಿಸುವಾಗ ಹೆಚ್ಚಾಗಿ ತಮ್ತಮ್ಮ ಭಾಷೆಯನ್ನೇ ಸಹಜವಾಗಿ ಬಳಸುತ್ತಾರೆ. ಆದರೆ, ಮೊಬೈಲ್ ಫೋನ್ ಗಳಲ್ಲಿ ಭಾಷೆ ಕಳಿಸಬಲ್ಲ ಸಾಧನ ತೀರಾ ವಿರಳ. ಅಮೆರಿಕದಲ್ಲಿ ಅತ್ಯಧಿಕವಾಗಿ ಜಾಲ ಹೊಂದಿರುವ ಐಫೋನ್ ಉತ್ಪನ್ನಗಳ ಮೂಲಕ ಭಾರತೀಯ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲ ಸಾಧನವನ್ನು ಏಮ್ ಕಾರ ಎಂಬ ಸಂಸ್ಥೆ ವಿನ್ಯಾಸಗೊಳಿಸಿದೆ.

ಜಾಗತಿಕವಾಗಿ ಎಲ್ಲೆಡೆ ಭಾರತೀಯರು ಹರಡಿರುವುದರಿಂದ, ನಮ್ಮ ಸ್ಥಳೀಯ ಭಾಷೆಗಳು ಕೂಡಾ ವಲಸೆ ಹೋಗಿ ವಿಶ್ವದ ಇತರೆ ಜನರಿಗೆ ರುಚಿ ಹತ್ತಿಸಿದೆ. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅದರಲ್ಲೂ ಮೊಬೈಲ್ ಫೋನ್ ನಲ್ಲಿ ಭಾರತೀಯ ಭಾಷೆ ಲಭ್ಯವಿಲ್ಲದಿರುವುದನ್ನು ಮನಗಂಡ ಏಮ್ ಕಾರ ಸಂಸ್ಥೆ, ಆಪಲ್ ಉತ್ಪನ್ನಗಳಾದ ಐಫೋನ್, ಐಪೊಡ್, ಐಪ್ಯಾಡ್ ಮೂಲಕ ಭಾಷೆ ಕಲಿಸುವ ಅಪ್ಲಿಕೇಷನ್ ಅನ್ನು ಆಪ್ ಸ್ಟೋರ್ ನಲ್ಲಿ ಪರಿಚಯಿಸಿದೆ.
ಮೊಬೈಲ್ ಮೂಲಕ ಭಾರತೀಯ ಭಾಷೆಯನ್ನು ಸರಳ ಹಾಗೂ ಸುಲಭವಾಗಿ ಕಲಿಯಬಹುದಾಗಿದೆ. ಮಕ್ಕಳಿನಿಂದ ಹಿಡಿದು ಮುದುಕರವರೆಗೂ ಎಲ್ಲರೂ ಶಬ್ದ ಹಾಗೂ ವ್ಯಾಕರಣಬದ್ಧವಾದ ಭಾಷೆಯನ್ನು ಕಲಿಯಲು ಅನುಕೂಲ ಕಲ್ಪಿಸಲಾಗಿದೆ.

ಆಡಿಯೋ ವಿಷ್ಯುಯಲ್ ಸೌಲಭ್ಯವನ್ನು ಒದಗಿಸಲಾಗಿರುವುದರಿಂದ ಅಪ್ಲಿಕೇಷನ್ ಇನ್ನಷ್ಟು ಆಕರ್ಷಣೆಯುಕ್ತವಾಗಿದೆ. ಆಪ್ ಸ್ಟೋರ್ ನಲ್ಲಿ ಎಮ್ ಕಾರಾ ಭಾಷೆ ಅಪ್ಲಿಕೇಷನ್ ಆವೃತ್ತಿ 1.0 ಡೌನ್ ಲೋಡ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕವಾಗಿ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ತಿ ಶೈಕ್ಷಣಿಕ ಪಠ್ಯವನ್ನು ಸೇರಿಸಲಾಗುವುದು. ಇನ್ಮುಂದೆ ಗ್ರಾಹಕರು ಯಾವುದೇ ಭಾಷೆಯನ್ನು ಓದಿ, ಬರೆದು ಸುಲಲಿತವಾಗಿ ಮಾತನಾಡಬಲ್ಲರು ಎಂದು ಏಮ್ ಕಾರ ಸಂಸ್ಥೆ ಹೇಳಿದೆ.

ಶುಕ್ರವಾರ, ನವೆಂಬರ್ 26, 2010

ದೇಶದಲ್ಲಿರುವ ನಕಲಿ ಹಣ 1.20 ಲಕ್ಷ ಕೋಟಿ ರು!

 
ನಕಲಿ ಹಣದ ಚಲಾವಣೆಯನ್ನು ತಡೆಯಲು ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ದೇಶದಲ್ಲಿ ಈಗಲೂ ಸುಮಾರು 1,20,000 ಕೋಟಿ ರೂಪಾಯಿಗಳಷ್ಟು ಮೌಲ್ಯದ ನಕಲಿ ಹಣ ಚಲಾವಣೆಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಇಂದು ದೇಶದ ನಕಲಿ ಕರೆನ್ಸಿ ಚಲಾವಣೆ ಜಾಲದಲ್ಲಿ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಭಯೋತ್ಪಾದನಾ ಗುಂಪುಗಳು ಸಕ್ರಿಯವಾಗಿದ್ದು ಇವು ಅಫೀಮು, ಚರಸ್, ಹೆರಾಯಿನ್ ಕಳ್ಳ ಸಾಗಣೆಯಲ್ಲೂ ಗಣನೀಯ ಪಾಲು ಹೊಂದಿವೆ. ಬಹುತೇಕ ಈ ಗುಂಪುಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೂರ್ಣ ಬೆಂಬಲ ನೀಡುತ್ತಿದೆ. ಇನ್ನುಳಿದಂತೆ ದೇಶದೊಳಗಿರುವ ಕೆಲ ಗುಂಪುಗಳು ನಕಲಿ ನೋಟುಗಳ ದಂಧೆಯಲ್ಲಿ ತೊಡಗಿದ್ದರೂ ಇವುಗಳು ಪಾತ್ರ ನಗಣ್ಯವಾಗಿದೆ. ಈ ಗುಂಪುಗಳು ಬಳಸುವ ಕಾಗದದ ಗುಣಮಟ್ಟ ಸಾಮಾನ್ಯವಾಗಿರುವದರಿಂದ ಪತ್ತೆ ಹಚ್ಚಲು ಬಹಳ ಸುಲಭವಾಗಿದೆ. ಆದರೆ ಭಯೋತ್ಪಾದಕ ಗುಂಪುಗಳು ಚಲಾವಣೆ ಮಾಡುತ್ತಿರುವ ನಕಲಿ ನೋಟುಗಳ ಗುಣಮಟ್ಟ ಉತ್ತಮವಾಗಿದ್ದು ಯಂತ್ರದಲ್ಲಿ ಪರೀಕ್ಷಿಸದೆ ಕಂಡು ಹಿಡಿಯುವದು ಕಷ್ಟ. ಈ ಉತ್ತಮ ಗುಣಮಟ್ಟದ ನಕಲಿ ನೋಟುಗಳ ಚಲಾವಣೆಗೆ ಥೈಲ್ಯಾಂಡ್ ಮೂಲ.

ಥೈಲ್ಯಾಂಡ್ ಕಾರಸ್ಥಾನ : ಸರ್ಕಾರ ಪಾಕಿಸ್ತಾನ ಹಾಗೂ ನೇಪಾಳದಿಂದ ಹರಿದು ಬರುತ್ತಿರುವ ನಕಲಿ ಹಣದ ಹರಿವನ್ನು ತಡೆಗಟ್ಟಲು ಬಹುತೇಕ ಯಶಸ್ವಿಯಾಗಿದ್ದರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಎಸ್‌ಐ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಥೈಲ್ಯಾಂಡನ್ನು ಕೇಂದ್ರವನ್ನಾಗಿರಿಸಿಕೊಂಡು ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಕುಖ್ಯಾತ ಭಯೋತ್ಪಾದಕ ದಾವೂದ್ ಇಬ್ರಾಹಿಂ ಥೈಲ್ಯಾಂಡಿನಿಂದ ನಕಲಿ ಕರೆನ್ಸಿಯನ್ನು ದೇಶದೊಳಗೆ ಪಂಪ್ ಮಾಡುತ್ತಿದ್ದಾನೆ ಎಂದು ಗುಪ್ತಚರ ಮೂಲಗಳ ವರದಿ ಹೇಳುತ್ತದೆ. ಡಿ ಕಂಪೆನಿಯು ವಿವಿಧ ಸರಕುಗಳ, ಡ್ರಗ್ಸ್ ಗಳ ಕಳ್ಳಸಾಗಣೆ, ಹವಾಲ ದಂಧೆ ಮತ್ತು ಮಾಫಿಯಾದಲ್ಲಿ ಸಕ್ರಿಯವಾಗಿದ್ದು ಇದರ ಪ್ರಮುಖ ಏಜೆಂಟ್ ಆಗಿರುವ ಅರ್ಷದ್ ಭಕ್ತಿ ಎಂಬ ಕಳ್ಳ ವ್ಯವಹಾರಗಳ ಪ್ರಮುಖನಾಗಿದ್ದಾನೆ. ನೇರವಾಗಿ ಐಎಸ್‌ಐನ ಉನ್ನತಾಧಿಕಾರಿಗಳಾದ ಮೇಜರ್ ಅಲಿ ಮತ್ತು ಅರ್ಷದ್ ಅವರಿಗೆ ವರದಿ ಮಾಡುತ್ತಾನೆ. ಥೈಲ್ಯಾಂಡಿನಲ್ಲಿ ದಾವೂದ್ ಗ್ಯಾಂಗ್ ಬಲವಾಗಿ ಬೇರು ಬಿಟ್ಟಿದ್ದು ನಕಲಿ ನೋಟುಗಳು ಹಾಗೂ ಡ್ರಗ್ಸ್ ಗಳು ಬಾಂಗ್ಲಾದೇಶದ ಮೂಲಕ ದೇಶದೊಳಗೆ ಬರುತ್ತಿವೆ.

ಬಾಂಗ್ಲಾ ಮೂಲಕ ದೇಶ ಪ್ರವೇಶ : ಮೊದಲಿನಿಂದ ಪಾಕಿಸ್ತಾನದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ನೇಪಾಳ ಮೂಲಕ ದೇಶದೊಳಗೆ ತಂದು ಚಲಾವಣೆ ಮಾಡಲಾಗುತಿತ್ತು. ಆದರೆ 26/11ರ ದಾಳಿಯ ನಂತರ ಐಎಸ್‌ಐ ತನ್ನ ತಂತ್ರವನ್ನು ಬದಲಾಯಿಸಿತು. ಈಗ ಥೈಲ್ಯಾಂಡಿನಲ್ಲೇ ಮುದ್ರಿಸಿ ಬಾಂಗ್ಲಾ ಮೂಲಕ ದೇಶದೊಳಗೆ ಚಲಾವಣೆ ಮಾಡುತ್ತಿದೆ. ಈ ಮಾಹಿತಿಯನ್ನು ಗುಪ್ತಚರ ಮೂಲಗಳು ಸಿಬಿಐ ಜತೆ ಹಂಚಿಕೊಂಡಿದ್ದು, ಈ ಕುರಿತು ತನಿಖೆ ಮುಂದುವರೆದಿದೆ. ಡಿ ಕಂಪೆನಿ 1993ಕ್ಕೂ ಮೊದಲು ಇದೇ ರೀತಿಯಲ್ಲಿ ದೇಶದೊಳಗೆ ಆಯುಧಗಳು, ಬಾಂಬ್ ಗಳನ್ನು ಸರಬರಾಜು ಮಾಡುತಿತ್ತು. ಇದೀಗ ಡಿ ಕಂಪೆನಿಯ ಕಳ್ಳ ವ್ಯವಹಾರಗಳನ್ನು ಪಾಕಿಸ್ತಾನದಲ್ಲಿ ಮುಂದುವರಿಸಬೇಕಾದರೆ ಮೊದಲಿನಂತೆ ಭಾರತದೊಳಗೆ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಬೇಕು ಎಂದು ಐಎಸ್‌ಐ ತಾಕೀತು ಮಾಡಿದೆ.

ಸರ್ಕಾರದ ಬಿಗಿ ಕಾನೂನಿನ ನಡುವೆಯೂ ಈ ನಕಲಿ ನೋಟುಗಳು ದೇಶದೊಳಗೆ ಪ್ರವೇಶಿಸಲು ಈ ಕಾನೂನುಗಳು ನೋಟುಗಳಂತೆ ಕಾಗದದಲ್ಲಿರುವದೇ ಕಾರಣ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ನಕಲಿ ನೋಟುಗಳನ್ನು ದೇಶದೊಳಗೆ ತರಲು ಬಾಂಗ್ಲಾ ಅಲ್ಲದೆ ದುಬೈ ಸೇರಿದಂತೆ ಇತರ ಮಾರ್ಗಗಳನ್ನೂ ಡಿ ಕಂಪೆನಿ ಬಳಸಿಕೊಳ್ಳುವ ಸಾದ್ಯತೆಗಳಿವೆ. ಸರ್ಕಾರ ದೇಶದ ಕರೆನ್ಸಿಯನ್ನು ಮುದ್ರಿಸಲು ಅವಶ್ಯಕತೆಯ ಶೇ.98ರಷ್ಟು ಉತ್ತಮ ಗುಣಮಟ್ಟದ ಕಾಗದವನ್ನು ಯೂರೋಪ್ ನ ದೇಶಗಳಿಂದ ಆಮದು ಮಾಡಿಕೊಳ್ಳುತಿದ್ದು ಇದಕ್ಕಾಗಿ 11 ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಾಗದಕ್ಕಾಗಿ ಸರ್ಕಾರ ವಿದೇಶೀ ಕಂಪೆನಿಗಳನ್ನೇ ಅವಲಂಬಿಸಿಕೊಂಡಿದೆ.

ಕಾಗದದ ಭದ್ರತೆಯ ಮೇಲೆ ಸರ್ಕಾರಿ ನಿಯಂತ್ರಣವಿಲ್ಲ : ದೇಶದಲ್ಲಿ ರಿಸರ್ವ್ ಬ್ಯಾಂಕು ನೋಟುಗಳನ್ನು ಬಿಗಿ ನಿಯಮದಡಿ, ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಡಿ ಮುದ್ರಿಸುವುದಾದರೂ ಇದಕ್ಕೆ ಬಳಕೆಯಾಗುವ ಕಾಗದದ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಏಕೆಂದರೆ ಈ ಕಾಗದಗಳನ್ನು ಆಮದು ಮಾಡಿಕೊಳ್ಳುವಾಗಲೇ ಭದ್ರತಾ ಚಿಹ್ನೆಗಳಾದ ವಾಟರ್ ಮಾರ್ಕ್, ಅಯಸ್ಕಾಂತೀಯ ನೂಲು ಸಹಿತವೇ ದೇಶಕ್ಕೆ ಬಂದಿರುತ್ತದೆ! ಸರ್ಕಾರ ರಾಷ್ಟ್ರಪಿತನ ಚಿತ್ರ ಹಾಗೂ ಸೂಕ್ಷ್ಮ ಅಕ್ಷರಗಳನ್ನು ಮುದ್ರಿಸಬೇಕಾಗಿರುತ್ತದೆ. ಭಯೋತ್ಪಾದಕ ಗುಂಪುಗಳಿಗೆ ಈ ರೀತಿಯ ಕಾಗದವನ್ನು ಪಡೆಯಲು ಕಷ್ಟವೇನೂ ಇಲ್ಲ. ದೇಶದೊಳಗೆ ಪ್ರವೇಶಿಸುವ ಮಾರ್ಗಗಳಲ್ಲಿ ಬಿಗಿ ಪರಿಶೀಲನೆಯಿಂದ ಶೇ.10ರಷ್ಟು ನಕಲಿ ನೋಟುಗಳ ಹಾವಳಿಯನ್ನಷ್ಟೇ ತಡೆಗಟ್ಟಬಹುದು. ಉಳಿದದ್ದು ಕಳ್ಳ ಮಾರ್ಗಗಳಿಂದಲೇ ಬರುತ್ತಿದೆ.

ಸರ್ಕಾರ ನೋಟುಗಳ ಮುದ್ರಣಕ್ಕೆ ಬಳಸಲಾಗುವ ಕಾಗದಗಳನ್ನು ದೇಶದೊಳಗೇ ತಯಾರಿಸಲು ಮುಂದಾಗಬೇಕಿದೆ ಎಂದು ಆರ್ಥಿಕ ತಜ್ಷರು ಹೇಳುತ್ತಾರೆ. ಇದರಿಂದಾಗಿ ದೇಶದ ಕರೆನ್ಸಿಯ ವಿಶಿಷ್ಟ ವಿನ್ಯಾಸ ಹಾಗೂ ಸುರಕ್ಷತೆಗೆ ಹೆಚ್ಚಿನ ಅನುಕೂಲ ಆಗಲಿದೆ.

ಮಂಗಳವಾರ, ನವೆಂಬರ್ 16, 2010

ಕಿಂದರಜೋಗಿ

ಕಿಂದರಜೋಗಿ ಬಗ್ಗೆ

ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ? http://kindarajogi.com/

ಭಾನುವಾರ, ನವೆಂಬರ್ 14, 2010

ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ಕೆಲವೊಂದು ಸಲಹೆಗಳು…


ಹಿಂದೆ ಮುಖದಲ್ಲಿ ಕನ್ನಡಕ ಬಂತು ಎಂದರೆ ವಯಸ್ಸಾಗಿದೆ ಎಂದೇ ಅರ್ಥ. ವಯಸ್ಸಾದರೂ ಹಲವರು ಕನ್ನಡಕ ಧರಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಕಾಲ ಬದಲಾದಂತೆ, ನಮ್ಮ ಜೀವನ ಶೈಲಿ ಚೇಂಜ್ ಆದಂತೆ ಇಂದು ಐದನೇ ಕ್ಲಾಸಿನ ಹುಡುಗನಿಂದ ಹಿಡಿದು ಪಡ್ಡೆ ಹೈಕಳ ಮುಖದಲ್ಲೂ ಕನ್ನಡಕ ರಾರಾಜಿಸುತ್ತಿರುತ್ತದೆ.
ಬಹಳ ಹೊತ್ತು ಕಂಪ್ಯೂಟರ್, ಟಿವಿ ಮುಂದೆ ಕುಳಿತುಕೊಳ್ಳುತ್ತಿರುವುದರಿಂದ ದೂರದೃಷ್ಟಿ, ಸಮೀಪದೃಷ್ಟಿ, ತಲೆನೋವು ಮುಂತಾದ ನೇತ್ರ ಸಂಬಂಧಿ ಬೇನೆಗಳು ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಕಾಡತೊಡಗಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಐದು ಮಂದಿಯಲ್ಲಿ ಇಬ್ಬರು ತಲೆನೋವಿನಿಂದ ಬಳಲುತ್ತಿದ್ದರೆ ಉಳಿದೆರಡು ಜನರಿಗೆ ಕಣ್ಣು ನೋವು, ಮತ್ತೊಬ್ಬರಿಗೆ ದೃಷ್ಟಿದೋಷ ಇದಕ್ಕೆಲ್ಲ ಕಾರಣ.
ಎಲ್ಲಾ ವಯಸ್ಸಿನವರು ಶೇ. 64 ರಷ್ಟು ಜನ ಏನಿಲ್ಲವೆಂದರೂ ಒಂದರಿಂದ ಒಂದೂವರೆ ಗಂಟೆ ಕಂಪ್ಯೂಟರ್ ಪರದೆಯ ಮುಂದೆ ಕಳೆಯುತ್ತಿದ್ದಾರೆ. ಪರದೆಯನ್ನು ಎವೆ ಇಕ್ಕದೆ ನೋಡುತ್ತಿರುವುದು ಅನೇಕ ನೇತ್ರ ಸಂಬಂಧಿ ಬೇನೆಗಳು ಬರಲು ಕಾರಣವಾಗಿದೆ. ಕಣ್ಣಿಗೆ ಸುಸ್ತಾಗುವುದರಿಂದ ತಲೆನೋವು, ಮಂದ ದೃಷ್ಟಿ ಸಮೀಪ ಹಾಗೂ ದೂರದೃಷ್ಟಿ ಸಮಸ್ಯೆ ಉಂಟಾಗುತ್ತವೆ. ನಾವು ಮಾಡುವ ಕೆಲಸದ ಮೇಲೂ ದುಷ್ಪರಿಣಾಮವಾಗುತ್ತದೆ. ನೀವು ಕಂಪ್ಯೂಟರ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವವರಾದರೆ ಕಾಲಕಾಲಕ್ಕು ಸ್ವಲ್ಪ ವಿರಾಮ ತೆಗೆದುಕೊಳ್ಳುವುದರೀಂದ ಕಣ್ಣಿಗಾಗುವ ಅಪಾಯವನ್ನು ತಪ್ಪಿಸಬಹುದು.
ಸತತ ಕಂಪ್ಯೂಟರ್ ನೋಡುವವರಿಗೆ ಇಲ್ಲಿಗೆ ಕೆಲವು ಸಲಹೆಗಳು…
* ಪರದೆಯನ್ನು ನೋಡುವಾಗ ಮಂಜಾಗಿ ಕಾಣಿಸುತ್ತಿದ್ದರೆ ತಕ್ಷಣ ನೇತ್ರ ವೈದ್ಯರನ್ನು ಕಾಣಿ.
* ಕಣ್ಣನ್ನು ಆಗಾಗ ಮಿಟುಕಿಸುತ್ತಿರಿ. ಇದರಿಂದ ಕಣ್ಣೀರಿನ ಉತ್ಪಾದನೆ ಹೆಚ್ಚಾಗಿ, ದೃಷ್ಟಿಪಟಲವನ್ನು ತೇವವಾಗಿಟ್ಟುಕೊಂಡು ಕಾಪಾಡುತ್ತದೆ.
* ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣನ್ನು ಇತರೆಡೆ ಹಾಯಿಸಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿರಾಮ ಸಿಗುತ್ತದೆ.
* ನಿಮ್ಮ ಕಣ್ಣು ಹಾಗೂ ಪರದೆಗೆ 16 ರಿಂದ 30 ಇಂಚುಗಳಷ್ಟು ಅಂತರವಿರಲಿ. ಕೆಲವರಿಗೆ 20ರಿಂದ 26 ಇಂಚು ಸೂಕ್ತವೆಂದು ಹೇಳಲಾಗುತ್ತದೆ.
* ಕಂಪ್ಯೂಟರ್ ಪರದೆಯ ಮೇಲ್ಬಾಗ ನಿಮ್ಮ ಕಣ್ಣಿನ ನೇರಕ್ಕೆ ಅಥವಾ ಸಮಾನಾಂತರವಾಗಿರಲಿ.
* ಕಂಪ್ಯೂಟರ್ ಮಾನಿಟರ್ 10 ರಿಂದ 20 ಡಿಗ್ರಿ ಕೋನದಲ್ಲಿ ಬಗ್ಗಿರಲಿ, ಇದರಿಂದ ನಿಮಗೆ ಅನುಕೂಲವಾದ ದೃಷ್ಟಿಕೋನ ಲಭಿಸುತ್ತದೆ.
* ಬಹಳ ಹೊತ್ತು ಡೇಟಾ ಎಂಟ್ರಿ ಕೆಲಸ ಮಾಡುವವರಾಗಿದ್ದರೆ ಮಾನಿಟರ್ ಪಕ್ಕದಲ್ಲಿ ನೀವು ಟೈಪ್ ಮಾಡುತ್ತಿರುವ ಪುಸ್ತಕವನ್ನೋ ದಾಖಲೆಯನ್ನೋ ಇಟ್ಟುಕೊಳ್ಳಲು ಸ್ಟ್ಯಾಂಡ್ ಬಳಸಿ, ಇದರಿಂದ ಓದುವ ಪಠ್ಯ ಹಾಗೂ ಕಂಪ್ಯೂಟರ್ ಪರದೆ ಒಂದೇ ದೂರ, ಎತ್ತರದಲ್ಲಿರುವುದರಿಂದ ಕಣ್ಣಿಗೆ ಸುಸ್ತಾಗುವುದಿಲ್ಲ.
* ರಿವಾಲ್ವಿಂಗ್ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿ. ಇದರಿಂದ ಕಂಪ್ಯೂಟರ್ ಪರದೆಯ ನೇರಕ್ಕೆ ಹಾಗೂ ಸರಿಯಾದ ದೂರಕ್ಕೆ ಅಡ್ಜಸ್ಟ್ ಮಾಡಿಕೊಂಡು ಕಂಫರ್ಟ್ಬಲ್ ಆಗಿ ಕುಳಿತುಕೊಳ್ಳಬಹುದು.
* ಪರದೆಯ ಮೇಲೆ ನಿಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತಹ ಅಕ್ಷರ ಹಾಗೂ ಗಾತ್ರ ಆರಿಸಿಕೊಳ್ಳಿ.ಇದರಿಂದ ಕಣ್ಣಿಗೆ ಆಯಾಸವಾಗುವುದಿಲ್ಲ.
* ಪರದೆಯ ಬಣ್ಣ ಆದಷ್ಟು ತಿಳಿಯಾಗಿರಲಿ. ಡಾರ್ಕ್ ಕಲರ್ ಇದ್ದರೆ ತಲೆನೋವು ಬರುತ್ತದೆ. ಹಿಂಬದಿ ಬಣ್ಣ ಆದಷ್ಟು ತಿಳಿಯಾಗಿರಲಿ .

ಭಾನುವಾರ, ನವೆಂಬರ್ 7, 2010

ಕನ್ನಡ ತಂತ್ರಾಂಶ ಉಪಕರಣಗಳು (ಉಚಿತ CD)

 
ಕನ್ನಡ ತಂತ್ರಾಂಶ (ಕನ್ನಡ ವರ್ಡ್, ಎಕ್ಸೆಲ್ ಮುಂತಾದ ಒಪೆನ್ ಆಫಿಸ್ ತಂತ್ರಾಂಶಗಳು ಕನ್ನಡದಲ್ಲಿ), ಕನ್ನಡ ಆಟಗಳು, ಕನ್ನಡ ಡಿಕ್ಷನರಿ ಮತ್ತು ಕನ್ನಡ ಫಾಂಟ್ ಗಳನ್ನು ಒಳಗೊಂಡ ಉಚಿತ CD (ಅಡಕ ಮುದ್ರಿಕೆ) ಬೇಕೆ...... ಇಲ್ಲಿ ಕ್ಲಿಕ್ಕಿಸಿ.
ಕೇಂದ್ರ ಸರ್ಕಾರವು ಗಣಕದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಅನೇಕ ಉಚಿತ ಕನ್ನಡ ತಂತ್ರಾಂಶ, ಕನ್ನಡ ಫಾಂಟ್ ಹಾಗೂ ಇನ್ನೀತರ ಕನ್ನಡಕ್ಕೆ ಸಂಬಂಧ ಪಟ್ಟ ಟೂಲ್ಸ್ ಗಳನ್ನು ಒಳಗೊಂಡ ಉಚಿತ CD ಯನ್ನು ಹಂಚುತ್ತಿದೆ. ಈ ಅಡಕ ಮುದ್ರಿಕೆಯಲ್ಲಿ ಏನೇನಿದೆ ಎಂಬ ಸಿಂಹಾವಲೋಕನವನ್ನು ಇಲ್ಲಿ ಬರೆದಿದ್ದೇನೆ.
೧] ಟ್ರೂ ಟೈಪ್ ಫಾಂಟ್ಸ್ ಮತ್ತು ಕೀಬೊರ್ಡ್ ಡ್ರೈವರ್
೩] ಮಲ್ಟಿಫಾಂಟ್ ಕೀಬೊರ್ಡ್ ಇಂಜಿನ್ ಫಾರ್ ಟ್ರು ಟೈಪ್ ಫಾಂಟ್ಸ್
೩] ಯುನಿಕೋಡ್ ಒಪೆನ್ ಟೈಪ್ ಫಾಂಟ್ಸ್
೪] ಯುನಿಕೋಡ್ ಕೀಬೊರ್ಡ್ ಡ್ರೈವರ್
೫] ಜೆನೆರಿಕ್ ಫಾಂಟ್ಸ್ ಕೋಡ್ ಮತ್ತು ಸ್ಟೋರೆಜ್ ಕೋಡ್ ಕನ್ವರ್ಟರ್
೬] ಸ್ಪ್ರೆಡ್ ಶೀಟ್ (Excel), ಸಂಪಾದಕ (Word), ಪ್ರಸ್ತುತಿ (Powerpoint) ಹಾಗೂ ಡ್ರಾಯಿಂಗ್ ಟೂಲ್ಸ್ ಗಳು ಇಷ್ಟೇ ಅಲ್ಲದೇ ಫೈರ್ ಫಾಕ್ಸ್, ಥಂಡರ್ ಬರ್ಡ್ ಹಾಗೂ ಗೈಮ್ ಎಲ್ಲವೂ ಕನ್ನಡದಲ್ಲಿ
೭] ಪದ ಪರೀಕ್ಷಕ
೮]ಬೈಲ್ಯಾಂಗ್ಯುಅಲ್ ಡಿಕ್ಷನರಿ
೯] ಡೆಕೊರೇಟಿವ್ ಫಾಂಟ್ಸ್ ಡಿಸೈನ್ ಟುಲ್
೧೦] ಡಾಟಾಬೆಸ್ ಸಾರ್ಟಿಂಗ್ ಟೂಲ್
೧೧] ಟೈಪ್ ಅಸಿಸ್ಟೆಂಟ್
೧೨] ಮೈಕ್ರೊಸಾಫ್ಟ್ ವರ್ಡ್ ಟುಲ್ಸ್
೧೩] ಮೈಕ್ರೊಸಾಫ್ಟ್ ಎಕ್ಸೆಲ್ ಟುಲ್ಸ್
೧೪] ಟ್ರಾಂಸ್ಲಿಟರೆಶನ್ ಟುಲ್ಸ್
೧೫] ಟೈಪಿಂಗ್ ಟೂಟರ್ ಫಾರ್ ಕನ್ನಡ
೧೬] ಕನ್ನಡ ಟೆಕ್ಸ್ಟ ಟು ಸ್ಪೀಚ್
೧೭] ಕನ್ನಡ ಟೆಕ್ಸ್ಟ ಎಡಿಟರ್ (ನುಡಿ)
೧೮] ಕಂಟೆಂಟ್ ಮ್ಯಾನೆಜ್ ಮೆಂಟ್ ಸಿಸ್ಟಮ್ ಫಾರ್ ಕನ್ನಡ
೧೯] ಕನ್ನಡ ಲೈಬ್ರರಿ ಮ್ಯಾನೆಜ್ ಮೆಂಟ್ ಸಿಸ್ಟಮ್
೨೦] ಕನ್ನಡ ಲ್ಯಾಂಗ್ವೇಜ್ ಟೂಟರ್ ಪ್ಯಾಕೆಜ್
೨೧] ಕನ್ನಡ ಪರ್ಸನಲ್ ಯುಟಿಲಿಟಿಸ್
೨೨] ಕನ್ನಡ ಗೇಮ್ಸ್ ಮತ್ತು ಪಜಲ್ಸ್
೨೩] ಕನ್ನಡ ಲೋಗೊ
೧೪] ಕನ್ನಡ ಸೀಮಲೆಸ್ ಇ-ಮೇಲ್ ಕ್ಲೈಂಟ್

ಈ ಉಚಿತ ಕನ್ನಡ ಸಿ.ಡಿ ಯನ್ನು ಪಡೆಯಲು ರೆಜಿಸ್ಟ್ರೆಶನ್ ನ ಅವಶ್ಯಕತೆಯಿರುತ್ತದೆ. ರೆಜಿಸ್ಟರ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

"ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್

ಸೈಬರ್ ನೆಟ್ ಕಂಪನಿಯು ತನ್ನ "ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್ ಅನ್ನು ಸಿದ್ಧಪಡಿಸಿದೆ. ಎಂದರೆ ನಿಮ್ಮ ಬಳಿ ಈ ಕೀ ಬೊರ್ಡ್ ಒಂದಿದ್ದರೆ ಸಾಕು ಅದರಲ್ಲೇ ಸಿ.ಪಿ.ಯು, ರಾಮ್, ಡಿ.ವಿ.ಡಿ ದ್ರೈವ್, ಮೌಸ್ ಎಲ್ಲವೂ ಇದೆ! ನೀವು ಎಲ್ಲೇ ಹೋದರೂ ಇದನ್ನು ನಿಮ್ಮ ಜೊತೆಗೊಯ್ದರೆ ಸಾಕು, ನೀವು ಹೋದಲ್ಲಿ ಇರುವ ಗಣಕ ಪರದೆಗೆ (ಮಾನಿಟರ್) ಇದನ್ನು ಅಳವಡಿಸಬಹುದು. ಇದರಲ್ಲಿ ಸಧ್ಯಕ್ಕೆ Intel Core 2 Quad ಪ್ರಾಸೆಸರ್, ೪ ಜಿಬಿ ವರೆಗೆ ರಾಮ್, ೭೫೦ ಸಾಟಾ ಹಾರ್ಡ್ ಡಿಸ್ಕ್, ೧ ಜಿಬಿ ಇಂಟರ್ನಲ್ ವೈರ್ಲೆಸ್ ಲ್ಯಾನ್ ಅನ್ನು ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾವು www.cybernetman.com ಗೆ ಭೇಟಿ ಕೊಡಬಹುದು.

ಕನ್ನಡದಲ್ಲಿ ಶುಭಾಶಯ

ಕನ್ನಡದ ಶುಭಾಶಯ ಪತ್ರಗಳನ್ನು ಲಭ್ಯವಾಗಿಸುವ ಅಂತರ್ಜಾಲ ತಾಣ.ವಿವಿಧ ಸಂದರ್ಭಗಳಿಗೆ ಸೂಕ್ತವಾದ ಶುಭಾಶಯ ಪತ್ರಗಳು ಇಲ್ಲಿವೆ.ಬೇಕಾದರೆ ನಿಮಗೆ ಸೂಕ್ತವಾದ ಪತ್ರವನ್ನು ವಿನ್ಯಾಸ ಮಾಡಿಕೊಡುವ ಸೇವೆಯೂ ಇಲ್ಲಿ ಲಭ್ಯ.ಆಯ್ದ ಪತ್ರವನ್ನು ಬೇಕಾದ ಮಿಂಚಂಚೆ ವಿಳಾಸಕ್ಕೆ ಕಳುಹಿಸಲು ಅಂತರ್ಜಾಲ ತಾಣವು ಅನುಕೂಲ ಕಲ್ಪಿಸಿದೆ.ಶುಭಾಶಯ ಪತ್ರಗಳ ಜತೆ ಹಿನ್ನೆಲೆ
ಸಂಗೀತ,ಅನಿಮೇಶನ್ ಮುಂತಾದ ಸೌಲಭ್ಯಗಳೂ ಸಿಗುತ್ತವೆ. http://www.shubhashaya.com/

ಶುಕ್ರವಾರ, ನವೆಂಬರ್ 5, 2010

ಮೊಬೈಲ್ ನಲ್ಲೇ ಟ್ರಾವೆಲ್ಲಿಂಗ್ ಗೈಡ್ಸ್ !


ದೇಶ ಸುತ್ತು ಕೋಶ ಓದು ಎನ್ನುವ ಗಾಧೆ ಹಳೆಯದು. ಈಗ ದೇಶವೂ, ಕೋಶವೂ ಅಂಗೈಯಲ್ಲೇ ಇದೆ. ಸ್ಮಾರ್ಟ್ಫೋನ್ಗಳ ರೂಪದಲ್ಲಿ. ಇದರಲ್ಲಿರುವ ಸೌಲಭ್ಯಗಳೂ ಹಲವು. ಮೊಬೈಲ್ ಟ್ರಾವಲಿಂಗ್ ಗೈಡ್ಸ್ ಇಂಥದ್ದೊಂದು ಅನುಕೂಲಕರ ಮಾರ್ಗಸೂಚಿ.
ಈಗಂತೂ ಹಲವರ ಕೈಯಲ್ಲಿ ಸ್ಮಾರ್ಟ್ ಫೋನ್, ಐಫೋನ್ಗಳು ಇರುವುದರಿಂದ ಅನೇಕರಿಗೆ ಇವುಗಳೇ ದಾರಿ ಸೂಚಿಗಳು. ಸ್ಮಾರ್ಟ್ ಫೋನ್ ಕಂಪನಿಗಳು ಈ ಸೇವೆಗಾಗಿ ಬಳಕೆದಾರನಿಗೆ ಕಡಿಮೆ ದರ ವಿಧಿಸುತ್ತವೆ. ಕೈಯಲ್ಲೊಂದು ಸ್ಮಾರ್ಟ್ಫೋನ್ ಇದ್ದರೆ ಈಗ ಜಗತ್ತನ್ನೇ ಸುತ್ತಬಹುದು ಎನ್ನುವ ಮಾತಿಗೆ. ಪ್ರವಾಸಿ ಮಾರ್ಗಸೂಚಿ ಪುಸ್ತಕಗಳು, ನಕಾಶೆಗಳನ್ನು ಹೊತ್ತು ತಿರುಗಬೇಕಾದ ಅನಿವಾರ್ಯತೆ ಇಲ್ಲ ಎನ್ನುವ ನೆಮ್ಮದಿ ಪ್ರವಾಸಿಗರದು.
ಫೋಡರ್ ಐಫೋನ್ ಸಿಟಿ ಗೈಡ್ಸ್ ಅಂಡ್ರಾಯ್ಸ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲಿ ಲಭ್ಯವಿರುವ ಲೋನ್ಲಿ ಪ್ಲಾನೆಟ್ ಕಂಪಾಸ್ ಗೈಡ್ಸ್ ಆಪಲ್ನ ಕೊಂಡ್ ನಾಸ್ಟ್ಸ್ ಟ್ರಾವಲೆಂಗ್ ಸೀರಿಸ್ ಇವೆಲ್ಲ ಅತ್ಯುತ್ತಮ ಮೊಬೈಲ್ ಟ್ರಾವಲೆಂಗ್ ಮಾರ್ಗಸೂಚಿಗಳು. ಈ ಸೌಲಭ್ಯಕ್ಕಾಗಿ ಬಳಕೆದಾರ 6 ರಿಂದ 8 ಡಾಲರ್ ಹಣ ತೆತ್ತರೆ ಸಾಕು ಸಮಯ, ಹಣ ಉಳಿಯುತ್ತದೆ.
ಪ್ರವಾಸದ ಸುರಕ್ಷತೆಯನ್ನು ಇನ್ನಷ್ಟು ಖಾತರಿಗೊಳಿಸುತ್ತವೆ ಎನ್ನುವ ಅಗ್ಗಳಿಕೆ, ಉದಾಹರಣೆಗೆ ‘ಲೋನ್ಲಿ ಪ್ಲಾನೆಟ್ ಕಂಪಾಸ್ ಗೈಡ್ಸ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿದ್ದರೆ ಇದರಲ್ಲಿ 24 ನಗರಗಳ ವಿಳಾಸ ಪತ್ತೆ ಹಚ್ಚಬಹುದು. ನಗರದ ಪ್ರತಿಯೊಂದು ಓಣಿ, ಬಡಾವಣೆ, ಗಲ್ಲಿಗಳ ನಕಾಶೆಯೂ ಇದರಲ್ಲಿದೆ. ಹೋಟೆಲ್, ರೆಸ್ಟೋರೆಂಟ್,ಪೆಟ್ರೋಲ್ ಬಂಕ್, ಆಸ್ಪತ್ರೆಗಳ ನಿಖರ ವಿಳಾಸವಿದೆ. ಹೆಚ್ಚುವರಿ ಮಾಹಿತಿ ಬೇಕಾದರೆ ಹುಡುಕಲು ಸರ್ಚ್ ವ್ಯವಸ್ಥೆ ಇದೆ. ಮಾಹಿತಿಯೊಳಗಿನ ಮಾಹಿತಿಗಾಗಿಗಿ ಹೈಪರ್ಲಿಂಕ್ ವ್ಯವಸ್ಥೆ ಕೂಡ ಇದೆ.
ಸ್ಮಾರ್ಟ್ಫೋನ್ನಲ್ಲಿರುವ ಪ್ರವಾಸಿ ಮಾರ್ಗ ಸೂಚಿಗಳಿಗಿಂತ ಇ -ಪುಸ್ತಕಗಳ ಮಾಹಿತಿಯನ್ನು ಹೆಚ್ಚು ನಂಬಬಹುದು. ಐಫೋನ್ನಲ್ಲಿರುವ ಲೋನ್ಲಿ ಪ್ಲಾನೆಟ್ ಡಿಸ್ಕವರ್ ಇ ಪುಸ್ತಕಕ್ಕೆ 13 ಡಾಲರ್ ತೆತ್ತರಾಯಿತು. ಇದು ಫ್ರಾನ್ಸ್, ಇಂಗ್ಲೆಂಡ್, ಐರ್ಲೆಂಡ್, ಥಾಯ್ಲೆಂಡ್ ಒಳಗೊಂಡಂತೆ ಪ್ರಪಂಚದ 12 ದೇಶಗಳ ಪ್ರವಾಸಿ ಸ್ಥಳದ ಮಾಹಿತಿಯನ್ನು ನೀಡುತ್ತದೆ. ಒಮ್ಮೆ ಇ-ಪುಸ್ತಕ ತೆರೆದು ನಿಮಗೆ ಬೇಕಾದ ಪುಟಗಳನ್ನು ಬುಕ್ ಮಾರ್ಕ್ ಮಾಡಿಕೊಳ್ಳಬಹುದು.
ಎಲ್ಲ ಪ್ರವಾಸಿ ಸ್ಥಳದ ಮಾಹಿತಿ ಬೆರಳ ತುದಿಯಲ್ಲೇ ಸಿಗುತ್ತದೆ. ಇಲ್ಲಿರುವ ಮಾಹಿತಿಯನ್ನು ನಕಲಿಸಿ ಬಳಕೆದಾರ ತನ್ನ ಸಾಮಾಜಿಕ ಸಂವಹನ ತಾಣಗಳಾದ ಟ್ವಿಟ್ಟರ್, ಫೇಸ್ಬುಕ್ನಲ್ಲೂ ಹಂಚಿಕೊಳ್ಳಬಹುದು. ಈ ಪುಸ್ತಕದಲ್ಲಿ ಹೈಪರ್ಲಿಂಕ್ ಸೌಲಭ್ಯ (ನೇರ ಇಂಟರ್ನೆಟ್ ಸಂಪರ್ಕ) ಕೂಡ ಇದೆ. ಬಳಕೆದಾರ ತನಗೆ ಬೇಕಾದ ಸ್ಥಳದ ಬಗ್ಗೆ ಅಂತರ್ಜಾಲದಲ್ಲಿ ಮತ್ತಷ್ಟು ಮಾಹಿತಿ ಕಲೆ ಹಾಕಬಹುದು. ಪ್ರವಾಸ ಸ್ಥಳದ ಬಗ್ಗೆ ಮುಂಚಿತವಾಗಿ ಒಂದಿಷ್ಟು ಓದಿಕೊಳ್ಳುವ ಅಭ್ಯಾಸ ಇರುವವರಿಗೆ ‘ಡಿಸ್ಕವರ್’ ಇ-ಪುಸ್ತಕ ಹೇಳಿ ಮಾಡಿಸಿದಂತದ್ದು .

ಗುರುವಾರ, ನವೆಂಬರ್ 4, 2010

ಸಾಹಿತ್ಯ ಲೋಕ

ಸಾಹಿತ್ಯ ೆಂದರೆ ನಿಮಗೆ ಇಷ್ಟವೇ? ಷೇಕ್ಸ್ ಪಿಯರ್, ಲಿಯೋ ಟಾಲ್ ಸ್ಟಾಯ್, ಪುಷ್ಕಿನ್, ಮಿಲ್ಟಾ, ವಡ್ಸ್ ವರ್ಥ್, ಕಾಪ್ಕಾ, ಕಮೂ, ಕೀಟ್ಸ್, ರಾಬರ್ಟ್ ಬ್ರೌನಿಂಗ್, ಆರಿಸ್ಟಾಟಲ್, ಟ್ಯಾಗೂರ್, ಒ.ಹೆನ್ರಿ, ಪ್ಲೇಟೂ, ಎವರನ್ನೇಲ್ಲಾ ಓದಿದ್ದೀರಾ? ಅಥವಾ ಓದಬೇಕೆಂದುಕೊಂಡಿದ್ದೀರಾ? ಈ ಧಾವಂತದ ಬದುಕಿನಲ್ಲಿ ಇವನ್ನೇಲ್ಲ ಓದೋದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಈ ತಾಣದಲ್ಲಿ ಸಾಹಿತ್ಯದ ಸಮೃದ್ದ ರಸದೌತಣ ದೊರೆಯುತ್ತದೆ. ಬಿಡುವಿನಲ್ಲಿ ಈ ತಾಣಕ್ಕೆ ಬಂದರೆ ಇವರನ್ನೆಲ್ಲ ಓದಿಕೊಳ್ಳಬಹುದು. 250 ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ಪುಸ್ತಕಗಳು ಇಲ್ಲಿ ನಿಮಗೆ ಓದಿಗೆ ದೊರೆಯುತ್ತದೆ. ಜತೆಗೆ ಈ ಎಲ್ಲ ಲೇಖಕರಜೀವನದ ಸಂಕ್ಷಿಪ್ತ ಪರಿಚಯವೂ ಇದೆ. ಜೊತೆಗೆ ಸಾಹಿತ್ಯದ ಓದುಗರಿಗಾಗಿ ಆಕರ್ಷಕ ಸ್ಪರ್ಧೆಗಳೂ ಇರುವುದು ಈ ತಾಣದ ವಿಶೇಷ. ನಿಮ್ಮ ನೆಚ್ಚಿನ ಬರಹಗಾರರನ್ನೆಲ್ಲ ಇಲ್ಲಿ ಓದಿಕೊಳ್ಳಬಹುದು. ಹಾಗಿದ್ದರೆ ಏಕೆ ತಡ? ಕೊಂಡಿ ಕ್ಲಿಕ್ಕಿಸಿ. http://www.online-literature.com/

ಭಾನುವಾರ, ಅಕ್ಟೋಬರ್ 24, 2010

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

ಸಾಮಾಜಿಕ ಭದ್ರತೆಯ ಸಂಕ್ಷಿಪ್ತ ಇತಿಹಾಸ
1880ನೇ ಇಸವಿಯಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ, ಜರ್ಮನಿಯ ದುರ್ಬಲ ಹಾಗೂ ಅಸಹಾಯಕ ಜನತೆಗಾಗಿ 
ಸಾಮಾಜಿಕ ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬೇರೆ ಯೂರೋಪಿಯನ್ ದೇಶಗಳು ತಮ್ಮ 
ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ತದನಂತರ ಅಮೇರಿಕ ಸಂಯುಕ್ತ ಸಂಸ್ಥಾನದ 
ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್, ಸಾಮಾಜಿಕ ಭದ್ರತಾ ಕಾನೂನನ್ನು 1935ನೇ ಇಸವಿಯಲ್ಲಿ , ದೇಶವನ್ನು ಅತ್ಯಂತ 
ವಿಷಮ ಆರ್ಥಿಕ ಸಂಕಷ್ಟದಿಂದ (ದಿಗ್ರೇಟ್ ಡಿಪ್ರೆಷನ್) ಮಾಡಲು ಜಾರಿಗೆ ತಂದರು.

ಕರ್ನಾಟಕ ರಾಜ್ಯ ಸರ್ಕಾರವು ಅಶಕ್ತ ವೃದ್ಧರ ರಕ್ಷಣೆಗಾಗಿ 1965 ನೇ ಇಸವಿಯಲ್ಲಿ ರೂ. 40/- ರಂತೆ ಮಾಸಿಕ 

ಪಿಂಚಣಿಯನ್ನು ನೀಡುತ್ತಾ ಬಂದಿದೆ. 
ಅಲ್ಲದೆ ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ 1979ರಲ್ಲಿ ಹಾಗೂ ನಿರ್ಗತಿಕ ವಿಧವೆಯರ ರಕ್ಷಣೆಗಾಗಿ 
1984ರಲ್ಲಿ ರೂ.40/-ರಂತೆ ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿದೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು 

(ಎನ್ ಎಸ್ ಎ ಪಿ) ಅನುಷ್ಠಾನಗೊಳಿಸಿದೆ. 
ಈ ಮಹತ್ವದ ಯೋಜನೆಯಡಿ ನಾಲ್ಕು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಿವೆ.
1. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ
2. ರಾಷ್ಟ್ರೀಯ ಕುಟುಂಬ ನೆರವು ಯೋಜನೆ
3. ಅನ್ನಪೂರ್ಣ ಯೋಜನೆ
4. ಜನನಿ ಶಿಶು ಸುರಕ್ಷಾ ಯೋಜನೆ


ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರವು ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

 
1. ಅಂತ್ಯ ಸಂಸ್ಕಾರ ಯೋಜನೆ
2. ಆದರ್ಶ ವಿವಾಹ ಯೋಜನೆ
3. ದೇವದಾಸಿ ಪಿಂಚಣಿ
4. ಸಂಧ್ಯಾ ಸುರಕ್ಷಾ ಯೋಜನೆ

http://dssp.kar.nic.in/ 

ಸ್ವದೇಶೀ ತಂತ್ರಜ್ಞರ ಸಮಾವೇಶ

ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು, ರೈತರಿಗೆ ಸುಲಭ, ಅಗ್ಗ, ಪರಿಸರಸ್ನೇಹೀ ಮತ್ತು ಸಣ್ಣ ಯಂತ್ರಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಪಣತೊಟ್ಟ ಸ್ವದೇಶೀ ತಂತ್ರಜ್ಞರ ಸಮಾವೇಶವೇ ಸ್ವತಂಸಮ್.ಇದರ ಅಂತರ್ಜಾಲ ತಾಣ http://swatamsam.in.

ಶನಿವಾರ, ಅಕ್ಟೋಬರ್ 23, 2010

ಸುಪ್ರಸಿದ್ಧ ಉಧೃತಗಳು :: ವ್ಯಕ್ತಿಗಳಾದಿಯಾಗಿ :: Sorted By People


ಪರೀಕ್ಷೆಯನುಸಾರ ಪ್ರಶ್ನೆಪತ್ರಿಕೆಗಳು - ಪ್ರಶ್ನೋತ್ತರ

ನಮಸ್ತೆ... ಕನ್ನಡದಲ್ಲಿ Online ಪ್ರಶ್ನೋತ್ತರಗಳನ್ನ ಒದಗಿಸುವ ಪುಟ್ಟ ಪ್ರಯತ್ನವಿದು ..

ಹವ್ಯಾಸಿ ಇತಿಹಾಸಕಾರನ ಇತ್ಯೋಪರಿಗಳು e - ದಿನವಹಿ

ಸ್ಪರ್ಧಾಪರೀಕ್ಷೆಗಳಿಗೆ ಸ್ಪರ್ಧಾರ್ಥಿ

http://spardharthi.blogspot.com/ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಸಹಾಯ ಮಾಡುವ ಮೊದಲ ಇ-ಪತ್ರಿಕೆಯಂತೆ. ರವಿ, ಪರಶುರಾಮ್, ಲಾವಣ್ಯ, ನಿಹಾರಿಕಾ, ಗೌರಿ, ಪವನ್, ಸ್ಪಂದನಾ ಇವರೆಲ್ಲಾ ಈ ಬ್ಲಾಗಿಗೆ ವಿಷಯ ಒದಗಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳ ಒಳನೋಟವೂ ಇಲ್ಲಿ ಲಭ್ಯ...... ವಿವಿಧ ಸ್ಥಾನಮಾನಗಳನ್ನು ಹೊಂದಿದವರ ವಿವರಗಳೂ ಇಲ್ಲಿವೆ.ಇಲ್ಲಿಯ ಬರಹಗಳನ್ನು ಫೇಸ್‌ಬುಕ್ ಮೂಲಕ ಪಡೆಯುವ ಸವಲತ್ತೂ ಕೂಡಾ ಇದೆ.ಸುಮಾರು ಎಂಟುನೂರು ಜನ ಫೇಸ್‌ಬುಕ್ ಮೂಲಕ ಸ್ಪರ್ಧಾರ್ಥಿಯನ್ನು ಪಡೆಯುತ್ತಾರೆ.ಈ ಬ್ಲಾಗಿಗೆ ನೂರು ಜನಕ್ಕಿಂತ ಹೆಚ್ಚು ಜನ ಹಿಂಬಾಲಕರಿದ್ದಾರೆ.

ಶುಕ್ರವಾರ, ಅಕ್ಟೋಬರ್ 22, 2010

ಹಬ್ಬ ಸೈಟ್


ಇತ್ತೀಚೆಗಷ್ಟೆ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇವೆ. ಇದರ ಹಿನ್ನೆಲೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಜತೆಗೆ ಅನೇಕ ಧರ್ಮಗಳ ಬೀಡಾದ ಭಾರತದಲ್ಲಿ ಸದಾ ಹಬ್ಬಗಳು ಜರುಗುತ್ತಲೇ ಇರುತ್ತವೆ. ಹಾಂಗತ ಎಲ್ಲರಿಗೂ, ಎಲ್ಲಾ ಧರ್ಮಗಳ ಹಬ್ಬಗಳ ಬಗೆಗೂ ಗೊತ್ತಿರುತ್ತದೆ ಅಂತೇನಿಲ್ಲ. ನಿಮಗೇನಾದರೂ ಬೇರೆ ಬೇರೆ ಧರ್ಮಗಳ, ಮಹತ್ವದ ಹಬ್ಬಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸುವುದೇ? ಹಾಗಿದ್ದರೆ ಈ ವೆಬ್ ಸೈಟ್ ಗೆ ಬರಲೇಬೇಕು. ಯಾವ್ಯಾವ ಹಬ್ಬಗಳನ್ನು ಯಾವ್ಯಾವಾಗ, ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ಮಹತ್ವ ಏನು? ಎನ್ನುವಂತಹ ವಿವರಗಳಿವೆ. ಅಲ್ಲದೆ ಯಾವ ವಿವರ ನಿಮಗೆ ಬೇಕೋ ಅದು ತಕ್ಷಣ ಕೈಗೆಟಕುವಂತೆ ಆಕಾರಾದಿಯಾಗಿ, ತಿಂಗಳುಗಳ ಪ್ರಕಾರ, ಧರ್ಮಗಳ ವಿಭಾಗದ ಮೂಲಕ ಹೀಗೆ ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇಲ್ಲಿಗೊಮ್ಮೆ ನಿಮ್ಮ ಬೇಟಿ ಜರುಗಲಿ. ಲಿಂಕ್- http://www.festivalsofindia.in/

ಬುಧವಾರ, ಅಕ್ಟೋಬರ್ 20, 2010

ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ವಿಶ್ವೇಶ್ವರಯ್ಯ


ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್  ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15.
1860 ರಲ್ಲಿ ಮೈಸೂರು ಪ್ರಾಂತ್ಯ (ಈಗಿನ ಕರ್ನಾಟಕ ರಾಜ್ಯ)ಚಿಕ್ಕಬಳ್ಳಪುರದ ಮುದ್ದೇನ ಹಳ್ಳಿ ಯಲ್ಲಿ ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಚಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರ ಜನ್ಮದಿನವನ್ನು ಭಾರತ ದೇಶ "ಇಂಜಿನಿಯರುಗಳ ದಿನ" ವನ್ನಾಗಿ ಆಚರಿಸುತ್ತಿದೆ. ಇತಿ ಹಾಸದ ಪುಟಗಳಲ್ಲಿ ದಾಖಲೆಯಾಗಿರುವ ಸಾಧನೆಗಳನ್ನು ಒಮ್ಮೆ ನೋಡಿ ಭಾರತ ಮಾತೆಯ ವರಪುತ್ರ, ಅಪ್ಪಟ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರದ ಪ್ರೌಢ ಶಾಲಾ ಹಂತವನ್ನು ಬೆಂಗಳೂರಿನಲ್ಲಿ, 1881 ರಲ್ಲಿ ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಉನ್ನತ ವ್ಯಾಸಂಗ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರ್ ಪದವಿಯನ್ನು 1883 ರಲ್ಲಿ ರ್ಯ್ಯಾಂಕ್ ಪಡೆ ಯುವುದರ ಮೂಲಕ ಸಾಧನೆಯ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದರು. ಬಾಂಬೆ ಸರ್ಕಾರದ ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭ ವಾಯಿತು.
ಬಾಂಬೆಯ ಆಡಳಿತದಲ್ಲಿದ ಸಿಂಧ್ ಪ್ರಾಂತ್ಯದ ಜಲವಿತರಣೆ ಕಾಮಗಾರಿಕೆಯಲ್ಲಿ ಸಿಂಧೂ ನದಿ ಯಿಂದ ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ. ವಿ. ಯವರಿಗೆ ದೊರೆತು ತಮ್ಮ ತಂತ್ರಜ್ಞಾನ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯಿತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಪೂರ್ಣ ಗೊಳಿಸಿದರು. ನೂರು ವರ್ಷಗಳ ನಂತರ ಆ ಭಾಗಗಳಲ್ಲಿ ಭಾರೀ ಭೂಕಂಪವಾದರೂ ಯಾವುದೇ ಹಾನಿಯಾಗದೆ ಸರ್ ಎಂ. ವಿ. ಯವರ ಕಾಮಗಾರಿ ಭದ್ರವಾಗಿದೆ.
 
1903 ರಲ್ಲಿ ಪುಣೆಯ ಬಳಿ ಖಡಕ್ ವಾಸ್ಲಾ ಜಲಾಶಯದಲ್ಲಿ ತಮ್ಮ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರ ಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. 
1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣಗೊಳಿಸಿದರು.
 
ಜನಕೋಟಿಯನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು
1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದದು ಎಂದು ಹೆಗ್ಗಳಿಕೆಗೆ ಪಾತ್ರವಾದ ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿ ದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ. ಆರ್. ಎಸ್. ಆಣೆಕಟ್ಟು ಸರ್ ಎಂ. ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣ ದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು ಮಂಡ್ಯ, ಬೆಂಗಳೂರು, ತಮಿಳುನಾಡಿಗೆ  ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪ ವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದು ಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು  ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲೇ ಆಳವಾದ ನಾಲೆ ಯ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆ ಕಟ್ಟು  ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ.
ಬೃಂದಾವನ ಉಧ್ಯಾನ ವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿ ಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.
ಕರ್ನಾಟಕದ ಕನ್ನಡಿಗರ ಭಾಗ್ಯೋದಯ....
1912 ರಲ್ಲಿ ಮೈಸೂರು ಪ್ರಾಂತ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು. ’ಕರ್ನಾಟಕದ ಭಗಿರಥ’ ಎಂದೇ ಕರೆಯಲ್ಪಡುವ ಸರ್ ಎಂ. ವಿ. ಯವರಿಂದ 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಯಾದ ರೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಕನ್ನಡ ಭಾಷೆಗೆ ಶತಮಾನದ ಪ್ರಾರಂಭ ದಲ್ಲೆ ಭದ್ರ ಬುನಾದಿ ದೊರೆಯಿತು. ಮೈಸೂರು ಪ್ರಾಂತ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. 1916 ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿ, ನಂತರ ಹುಡುಗಿಯರಿಗಾಗಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಸ್ಥಾಪಿಸಿ ಜ್ಞಾನದ ದೀಪ ಬೆಳಗಿದರು. 1912 ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 4,500 ಶಾಲೆಗಳಿದ್ದು, ಆರು ವರ್ಷದ ಅವಧಿಯಲ್ಲಿ ಒಟ್ಟು 6,500 ಶಾಲೆಗಳಾಗುವಂತೆ ಮಾಡಿ 1,40,000 ವಿದ್ಯಾರ್ಥಿಗಳಿದ್ದದು 1918 ರಲ್ಲಿ ನಿವೃತಿ ಪಡೆಯುವಾಗ 3,66,000 ವಿದ್ಯಾರ್ಥಿಗಳು ವಿದ್ಯಾಭಾಸ ಪಡೆಯುವಂತಾಯಿತು. ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ  ತರುವಲ್ಲಿ ಮತ್ತು ಹೆಣ್ಣು ಮಕ್ಕಳು ಶಾಲೆಗೆ ತೆರಳಿ ವಿದ್ಯಭಾಸ ಪಡೆಯುವಂತೆ ಪ್ರೋತ್ಸಾಹಿಸಿ ಸಾಕ್ಷರತೆಗೆ ಅಡಿಪಾಯ ಹಾಕಿದವರು ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ ಮಾಡಿದ ಪ್ರಥಮ ಕನ್ನಡಿಗನಾಗಿ ದ್ದಾರೆ. 
1917 ರಲ್ಲಿ ಬೆಂಗಳೂರು ವಿ. ವಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಭಾರತದಲ್ಲೇ ಪ್ರಾರಂಭ ವಾದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಕನ್ನಡಿಗನ ಕೊಡುಗೆಯಾಗಿದೆ. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕಾ ಕಾರ್ಖಾನೆ ಸ್ಥಾಪಿಸಿದ ಮಹಾನುಭಾವ ಸರ್ ಎಂ. ವಿ. ಯವರು ಸ್ಥಾಪಿಸಿದ ಹಲವಾರು ಸಂಸ್ಥೆ ಗಳಲ್ಲಿ ಕೋಟ್ಯಾಂತರ ಮಂದಿಗೆ ಉದ್ಯೋಗ ಅವಕಾಶ ದೊರೆತು, ಅನ್ನದಾತರಾಗಿರುವುದನ್ನು  ಇಂದಿಗೂ ಸ್ಮರಿಸಿಕೊಳ್ಳುವಂತಾಗಿದೆ.
ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆಗೆ ಬ್ರಿಟಿಷರ ಅಡ್ಡಗಾಲು....
ಸರ್ ಎಂ. ವಿ. ಯವರಿಗೆ ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆ ಸ್ಥಾಪಿಸಬೇಕೆಂದು ಮಹದಾಸೆ ಇತ್ತು. ಅದಕ್ಕಾಗಿ ಅವರು ತಿಂಗಳುಗಟ್ಟಲೆ ಯುರೋಪು, ಅಮೇರಿಕಾ ಸುತ್ತಿ ಬಂದರು. ಸರ್ ಎಂ. ವಿ. ಯವರ ಮನದಾಕಾಂಕ್ಷೆಯ ಯೋಜನೆಗೆ ಮೈಸೂರು ಮಹಾರಾಜರು ಸೂಕ್ತವಾದ ಸ್ಥಳವನ್ನು ನೀಡಿದರು. ಆದರೆ ಆಗಿನ ಆಡಳಿತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಇವರ ಯೋಜನೆಗೆ ಅಡ್ಡಕಾಲಿಟ್ಟರು. ಆದರೆ ಎದೆಗುಂದದ ಸರ್. ಎಂ.ವಿ. ಯವರು ಹಿಂದುಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಸರ್. ಎಂ. ವಿ. ಯವರು ಟಾಟಾ ಇನ್ಸ್ಟಿಟ್ಯೂಟ್ ಮುಖ್ಯಸ್ಥರಿಗೆ ಏರೋನಾ ಟಿಕ್ಸ್ ಪ್ರಾರಂಭಿಸುವಂತೆ ಮಾಡಿದರು ನಂತರ ಇದರ ಫಲವಾಗಿ ಬೆಂಗಳೂರಿನಲ್ಲಿಯೂ ಬಾಹ್ಯ ಕಾಶ ಸಂಶೋಧನಾ ಕೇಂದ್ರ, ವಾಯುಪಡೆ ನೆಲೆಯೂ ಪ್ರಾರಂಭವಾಯಿತು. ಇಂದು ಬೆಂಗಳೂರು ಹಂತ ಹಂತವಾಗಿ ಏರೊನಾಟಿಕ್ಸ್ ಸಂಶೋಧನಾ ಕೇಂದ್ರ, ಉಪಗ್ರಹ ಸಂಪರ್ಕ ಜಾಲ, ಮಾಹಿತಿ ತಂತ್ರ ಜ್ಞಾನ, ಮೆಟ್ರೋ ರೈಲಿನವರೆಗೆ ತಲುಪಿದೆ.
ಸರ್ ಎಂ. ವಿ. ಅಂದಿನ ಅವರ ಕನಸಿನ ತಂತ್ರಜ್ಞಾನ ಭದ್ರ ಭುನಾದಿಯೇ ಇಂದಿನ ವಿಶ್ವ ನಿಬ್ಬೆರ ಗಾಗಿ ನೋಡುವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಿಶ್ವದರ್ಜೆಯ ಮಟ್ಟದಲ್ಲಿ ಬೆಳೆದು ನಿಂತಿದೆ. ಜೋಗದ ಜಲ ವಿದ್ಯುತ್ ಯೋಜನೆ, ಮೈಸೂರು ಸಕ್ಕರೆ ಕಾರ್ಖಾನೆ, ಪ್ರಿಂಟಿಂಗ್ ಪ್ರೆಸ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು ಇವರ ಕೊಡುಗೆ. ಭದ್ರಾವತಿ ಕಾರ್ಖಾನೆಯ ಚೇರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಸರ್ಕಾರ ವೇತನ ನಿಗಧಿ ಪಡಿಸಿರಲಿಲ್ಲ. ಕೆಲವು ವರ್ಷಗಳ ನಂತರ ಲಕ್ಷಕಿಂತಲೂ ಹೆಚ್ಚು ಹಣವನ್ನು ಪಾವತಿಸಲು ಬಂದಾಗ ಅವರು ಒಂದು ರೂಪಾಯಿ ಸಹ ಮುಟ್ಟಲಿಲ್ಲ, ಆ ಹಣದಿಂದ ಹುಡುಗರ ಪಾಲಿಟೆಕ್ನಿಕ್ ಪ್ರಾರಂಭಿಸಲು ಸಲಹೆ ನೀಡಿದರು!. ಅವರ ಇಚ್ಚೆಯಂತೆ ನೂತನ ಪಾಲಿಟೆಕ್ನಿಕ್ ಪ್ರಾರಂಭಿಸಿ  ಸರ್ ಎಂ. ವಿ. ಯವರ ಹೆಸರನ್ನು  ಇಡಲು ಕೇಳಿಕೊಂಡಾಗ ಅವರು ಮೈಸೂರಿನ ಮಹಾರಾಜರ ಹೆಸರನನ್ನು ಇಡುವಂತೆ ಸೂಚಿಸಿದ ನಂತರ, ಶ್ರೀ ಜಯ ಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಬೆಂಗಳೂರು ಸ್ಥಾಪನೆಯಾಯಿತು. ನಂತರ ಭಾರತದ ಬೆನ್ನೆಲುಬು ಅನ್ನ ದಾತ ರೈತರ ಅಭಿವೃದ್ದಿಗಾಗಿ ಬೆಂಗ ಳೂರು ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದರು.
ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ...
ಸರ್ ಎಂ. ವಿಶ್ವೇಶ್ವರಯ್ಯ ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಅವತಾರ ಪುರುಷ ನಂತೆ ನಮ್ಮ ಕಣ್ಣಿನ ಮುಂದೆ ಬರುತ್ತಾರೆ. ಅಪ್ಪಟ ಕನ್ನಡಿಗ ಭಾರತದ ಭಾಗ್ಯ ಶಿಲ್ಪಿ, ಕಟ್ಟಾ ಶಿಸ್ತಿನ ಸಿಪಾಯಿ, ದೇಶಭಕ್ತ ಈ ಮಾಹಾ ತಪಸ್ವಿಯನ್ನು ಕಂಡಾಗ ಭಕ್ತಿ ಭಾವ, ಗೌರವ ತುಂಬಿ ಬರುತ್ತದೆ.
ಸರ್ಕಾರಿ ಕೆಲಸ ದೇವರ ಕೆಲಸ...!
ಮೈಸೂರು ಪೇಟಾ ಧರಿಸಿ ಶುಭ್ರ ಉಡುಪನ್ನುಟ್ಟು, ಬೆಳಿಗೆ 7.00 ಗಂಟೆಯಿಂದ ಸೇವಾ ದಿನಚರಿ ಯನ್ನು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾರಂಭಿಸುತ್ತಿದ್ದರು. ಸರ್ ಎಂ. ವಿ. ಯವರು ತಮ್ಮ ಬಂಧುಬಳಗದವರಿಗೆ ತಮ್ಮ ಬಳಿಗೆ ಶಿಪಾರಸು ಉಪಯೋಗಿಸಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಡಲು ಬರದಂತೆ ಸೂಚನೆ ನೀಡಿ, ಅದರಂತೆ  ಅಧಿಕಾರ ದುರುಪಯೋಗ ಪಡಿಸದೆ ಪಾಲಿಸಿ ತೋರಿಸಿದ್ದಾರೆ. ಮನೆಯಲ್ಲಿ ರಾತ್ರಿಯ ವೇಳೆ ಕಛೇರಿಯ ಕೆಲಸವನ್ನು ಮಾಡು ವಾಗ ಸರ್ಕಾರ ನೀಡಿದ ದೀಪವನ್ನು ಉರಿಸಿಕೊಂಡು, ಪೆನ್ ಬಳಸುತಿದ್ದರು. ನಂತರ ಸ್ವಂತ ಕೆಲಸಕ್ಕೆ ಸ್ವಂತ ದೀಪ ಪೆನ್ನನ್ನು ಬಳಸುತಿದ್ದರು. ಅದೇ ರೀತಿ ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಸ್ವಂತ ಕೆಲಸಕ್ಕೆ ಸ್ವಂತ ಕಾರು ಬಳಸುತ್ತಿದ್ದ ಅಪ್ಪಟ ದೇಶಪ್ರೇಮಿ.
ಭಾರತದ ರಾಜದಾನಿ ದೆಹಲಿ ಮತ್ತು ದೇಶದ ಪ್ರಮುಖ ನಗರಗಳ ಸೌಂದರ್ಯದ ರೂವಾರಿ ಯಾಗಿರುವ ಸರ್ ಎಂ. ವಿ. ಯವರು ಒರಿಸ್ಸಾ ರಾಜ್ಯದ ಹಿರಾಕುಡ್ ಆಣೆಕಟ್ಟು, ಯಮೆನ್ ರಾಷ್ಟ್ರದ ನಿರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ, ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಮುಖ್ಯವಾದ ಒಂದು ಕಲ್ಲಿನಲ್ಲಿ " ಮೇಡ್ ಇನ್ ಇಂಡಿಯಾ" ಕೆತ್ತಿಸಿ ಇಟ್ಟಿದ್ದಾರೆ. ಯಾರದಾರೂ ಭಾರತ ದೇಶದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸು ಶಿಲ್ಪ ಕುಸಿದು ಬೀಳುವ ರೀತಿಯಲ್ಲಿ ಭಾರತೀಯ ತಂತ್ರ ಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ತೋರಿಸಿಕೊಟ್ಟಿದಾರೆ.

ಸರ್ ಎಂ. ವಿ. ಯವರು ಸೇವೆ ಸಲ್ಲಿಸಿದ ಸಂಸ್ಥೆಗಳು.
~ ಸಹಾಯಕ ಇಂಜಿನಿಯರ್, ಬಾಂಬೆ ಸರ್ಕಾರಿ ಸೇವೆ (1884)
~ ಚೀಫ್ ಇಂಜಿನಿಯರ್, ಹೈದರಬಾದ್ ರಾಜ್ಯ (1909)
~ ಚೀಫ್ ಇಂಜಿನಿಯರ್ ಮೈಸೂರು ರಾಜ್ಯ (1909) ಕಾರ್ಯದರ್ಶಿ - ರೈಲ್ವೆಸ್.
~ ಅಧ್ಯಕ್ಷರು, ಎಜುಕೇಶನ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಮಿಟೀಸ್ ಇನ್ ಮೈಸೂರು ರಾಜ್ಯ
~ ದಿವಾನ್ ಆಫ್ ಮೈಸೂರು 1912- 18
~ ಚೇರ್ಮನ್, ಭದ್ರಾವತಿ ಉಕ್ಕಿನ ಕಾರ್ಖಾನೆ.
~ ಸದಸ್ಯರು, ಆಡಳಿತ ಮಂಡಳಿ- ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ಬೆಂಗಳೂರು.
~ ಸದಸ್ಯರು, ಆಡಳಿತ ಮಂಡಳಿ ಟಾಟಾ ಕಬ್ಬಿಣ ಮತ್ತು ಉಕ್ಕಿನ ಸಂಸ್ಥೆ
~ ಸದಸ್ಯರು, ಬ್ಯಾಕ್ ಬೇ ಎನ್ಕೈರಿ ಕಮಿಟಿ, ಲಂಡನ್
~ ಸದಸ್ಯರು, ಭವಿಷ್ಯ ಭಾರತದ ರಾಜ್ಯಗಳ ಸಂವಿಧಾನಾತ್ಮಕ ಸಲಹಾ ಸಮಿತಿ (1917): ಭಾರತದ ಸಂವಿಧಾನದಲ್ಲಿ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಸಲಹೆ ನೀಡಿಕೆ.

ಸರ್ ಎಂ .ವಿ. ಯವರ ಹೆಸರಿನ ಮೂಲಕ ಗೌರವ ನೀಡಿ ಸೇವೆ ಸಲ್ಲಿಸುತ್ತಿ ರುವ ಸಂಸ್ಥೆಗಳು
* ವಿಶ್ವೇಶ್ವರಯ್ಯ ಟೆಕ್ನಾಲಜಿ ಯೂನಿವರ್ಸಿಟಿ ಬೆಳಗಾಂ.
* ವಿಶ್ವೇಶ್ವರಯ್ಯ ಇನ್ಸ್ಟ್ಯೂಟ್ ಅಫ್ ಅಡ್ವಾನ್ಸ್ಡ್ ಟೆಕ್ನಾಲಜಿ - ಮುದ್ದೇನ ಹಳ್ಳಿ ಕಣಿವೆನಾರಾಯಣ ಪುರ
* ಇಂಡಿಯನ್ ಇನ್ಸ್ಟ್ಯೂಟ್ ಅಫ್ ಟೆಕ್ನಾಲಜಿ ಮುದ್ದೇನ ಹಳ್ಳಿ - ಸರ್ ಎಂ. ವಿ. ಯವರ ಜನ್ಮಸ್ಥಳ
* ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್ - ಬೆಂಗಳೂರು.
* ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್
* ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ- ಬೆಂಗಳೂರು.
* ವಿಶ್ವೇಶ್ವರಯ್ಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ನಾಗಪುರ
* ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ - ಬೆಂಗಳೂರು.
* ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರಾವತಿ.
* ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ - ಕಾಲೇಜ್ ಅಫ್ ಇಂಜಿನಿಯರಿಂಗ್ - ಪುಣೆ
* ಸರ್ ಎಂ. ವಿಶ್ವೇಶ್ವರಯ್ಯ ಹಾಸ್ಟೆಲ್ - ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ - ಬನಾರಸ್ ಹಿಂದೂ    ಯೂನಿವರ್ಸಿಟಿ (ಏಶ್ಯಾದಲ್ಲೇ ಅತಿ ದೊಡ್ದ ರೆಶಿಡೆನ್ಸಿಯಲ್ ಯೂನಿವರ್ಸಿಟಿ)
* ಕರ್ನಾಟಕ ಇಂಡಸ್ಟ್ರಿಯಲ್ ಕೋಪರೇಟಿವ್ ಬ್ಯಾಂಕ್ ಲಿಮಿಟೆಡ್.
* ಎನ್. ಐ. ಟಿ. ರೂರ್ಕೆಲಾ - ವಿಶ್ವೇಶ್ವರಯ್ಯ ಸಭಾಂಗಣ

ಸರ್ ಎಂ. ವಿ.ಯವರ ಪುಸ್ತಕಗಳು :
’ರಿ ಕನ್ಸ್ಟ್ರಕ್ಷನ್ ಇಂಡಿಯಾ - ( 1934 ), ’ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ.
ತಮ್ಮ 94 ರ ಇಳಿ ವಯಸ್ಸಿನಲ್ಲಿಯೂ ’ಪ್ಲಾನಿಂಗ್’ ನ ಬಗ್ಗೆ ಪುಸ್ತಕ ಬರೆಯುತಿದ್ದರು.
ಸರ್ ಎಂ. ವಿ. ಯವರಿಗೆ ದೊರೆತ ಗೌರವ, ಪ್ರಶಸ್ತಿಗಳು
* 1904  - ಗೌರವ ಸದಸ್ಯತ್ವ, ಲಂಡನ್ ಇನ್ಸ್ಟಿಟ್ಯೂಶನ್ ಅಫ್ ಸಿವಿಲ್ ಇಂಜಿನಿಯರ್ಸ್ - 50 ವರ್ಷಗಳ ವರೆಗೆ
* 1906  - ಕೈಸರ್ - ಇ - ಹಿಂದ್
* 1911  - ಸಿ. ಐ. ಇ. (ಕಾಂಪನಿಯನ್ ಅಫ್ ದಿ ಇಂಡಿಯನ್ ಏಂಪೈರ್) ದೆಹಲಿ ದರ್ಬಾರ್ ನಲ್ಲಿ
* 1915  - ಕೆ.ಸಿ. ಐ. ಇ. (ನೈಟ್ ಕಮಾಂಡರ್ ಅಫ್ ದಿ ಆರ್ಡರ್ ಅಫ್ ದಿ ಇಂಡಿಯನ್ ಏಂಪೈರ್)
* 1921  - ಡಿ. ಎಸ್ ಸಿ - ಕಲ್ಕತಾ ಯೂನಿವರ್ಸಿಟಿ
* 1931  - ಎಲ್ ಎಲ್ ಡಿ - ಬಾಂಬೆ ಯೂನಿವರ್ಸಿಟಿ
* 1937 - ಡಿ. ಲಿಟ್. - ಬನಾರಸ್ ಯೂನಿವರ್ಸಿಟಿ
* 1943  - ಅಜೀವ ಸದಸ್ಯತ್ವ - ಇನಿಸ್ಟಿಟ್ಯೂಶನ್ ಅಫ್ ಇಂಜಿನೀಯರ್ಸ್ - ಭಾರತ
* 1944  - ಡಿ. ಎಸ್ ಸಿ. - ಅಲಹಾಬಾದ್ ಯೂನಿವರ್ಸಿಟಿ
* 1948  - ಡಾಕ್ಟರೇಟ್ - ಎಲ್ ಎಲ್ ಡಿ., ಮೈಸೂರು ಯೂನಿವರ್ಸಿಟಿ
* 1953   - ಡಿ. ಲಿಟ್. - ಆಂದ್ರ ಯೂನಿವರ್ಸಿಟಿ
* 1955  - ಭಾರತ ರತ್ನ (ಭಾರತದ ಅತ್ಯುನ್ನತ ಗೌರವದ ಪ್ರಶಸ್ತಿ)
* 1958  - ದುರ್ಗಾ ಪ್ರಸಾದ್ ಕೈತಾನ್ ಮೆಮೊರಿಯಲ್ ಗೋಲ್ಡ್ ಮೆಡಲ್ -ರಾಯಲ್ ಏಶಿಯಾಟಿಕ್ ಸೊಸೈಟಿ ಕೌನ್ಸಿಲ್, ಬಂಗಾಳ* 1959 - ಫೆಲೋಶಿಫ್ - ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ - ಬೆಂಗಳೂರು

ಸರ್ ಎಂ. ವಿ ಯವರ ಶತವರ್ಷ ಜನ್ಮದಿನಾಚರಣೆ - 1960
ಭಾರತ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯ ನವರ ಶತ ಜನ್ಮ ದಿನಾಚರಣೆ ಸಮಾರಂಭ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಆಚರಿಸಲಾಯಿತು. ಆಗಿನ ಭಾರತದ ಪ್ರಧಾನ ಮಂತ್ರಿಯಾ ಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ರವರು ವಿಶೇಷ ವಿಮಾನದಲ್ಲಿ ಅಗಮಿಸಿದ್ದು ಸಮಾ ರಂಭದ ಅಧ್ಯಕ್ಷತೆಯನ್ನು ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಓಡೆ ಯರ್ ವಹಿಸಿದ್ದರು.
ಅಂದಿನ ಸಮಾರಂಭದ ಸವಿನೆನಪಿಗಾಗಿ ಭಾರತ ಸರ್ಕಾರ ಸರ್ ಎಮ್. ವಿ. ಯವರ ಭಾವ ಚಿತ್ರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.
ಸರ್ ಎಂ. ವಿ ಯವರು ದಿವಂಗತರಾಗಿದ್ದು ಏಪ್ರಿಲ್ 12, 1962
ದೇಶ ಕಂಡ ಮಾಹಾನ್ ಚೇತನ 102  ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆಯನ್ನು ಮಾಡಿ ಶಿಸ್ತಿನ ಜೀವನ ನಡೆಸಿ ತಮ್ಮ ಕೊನೆಯುಸಿರು ಎಳೆದರು. ಅವರ ಜನ್ಮ ಸ್ಥಳವಾದ ಮುದ್ದೆನ ಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸ ಲಾಯಿತು, ಆ ಸ್ಥಳದಲ್ಲಿ ಸರ್ ಎಂ. ವಿ. ಯವರ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ.
ಭಾರತದ ಇತಿಹಾಸದ ಪುಟಗಳಲ್ಲಿ ಹಲವಾರು ಮಹಾತ್ಮರ ಹೆಜ್ಜೆ ಗುರುತುಗಳು ಮುಚ್ಚಿಹೋಗಿ ವೆ. ಸರ್ ಎಂ. ವಿ. ಯವರ ಜನ್ಮ ದಿನದ ಈ ಸುಸಂದರ್ಭದಲ್ಲಿ ಅವರನ್ನು ನೆನಪು ಮಾಡಿ ಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಅದರ್ಶಗಳಲ್ಲಿ ಕೆಲವನ್ನಾದರೂ ಪಾಲಿಸಿದರೆ ಭಾರತ ದಲ್ಲಿ ಜನ್ಮ ಪಡೆದುದಕ್ಕೆ ಸಾರ್ಥಕವಾದೀತು.

ಭಾನುವಾರ, ಅಕ್ಟೋಬರ್ 17, 2010

400 ವರ್ಷಗಳ ದಸರಾ ಇತಿಹಾಸ ಹೇಳುವ ಕಥೆ ಇದು… !

 
ಮೈಸೂರು: ಇಂದಿನ ಮೈಸೂರು ‘ಮಹಿಷೂರು’ ಆಗಿದ್ದಾಗ ಹದಿನಾಡು ಗ್ರಾಮದಿಂದ ಬಂದ ಅರಸು ಜನಾಂಗದ ಮನೆತನವೊಂದು ಇತ್ತು. ದೂರದಿಂದ ಬಂದ ಯದುರಾಯನಿಗೆ ಸದ್ಗುಣ ಸಂರಕ್ಷಕನೆಂದು ತಿಳಿದು ಇದೇ ಕುಟುಂಬ ನಂಟು ಬೆಳೆಸಿತು. ಆಗ ಯದುರಾಯ ಈ ಸಣ್ಣ ಊರೊಂದರ ನೇತೃತ್ವ ವಹಿಸಿದ. ರಾಜನೆಂದು ಕರೆದರು. ಮುಂದಿನ ಉತ್ತರಾಧಿಕಾರಿಗಳಿಗೆಲ್ಲ ಹೆಸರಿನ ಮುಂದೆ ‘ಒಡೆಯರ್’ ಎಂದು ಸೇರಿಸಿಕೊಂಡು, ಕದಂಬ, ಗಂಗ, ಚಾಲುಕ್ಯರಂತೆ ಈ ಮನೆತನವೂ ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಈ ಒಡೆಯರ್ ಎಂಬ ರಾಜಮನೆತನದಲ್ಲಿ ಪ್ರಜಾಪ್ರಭುತ್ವ ಬರುವವರೆಗೆ ‘ರಾಜತ್ವ’ ನೀಡಿದವರು 25 ಮಂದಿ. ಈ ಪೈಕಿ ಯದುರಾಯ, ಒಬ್ಬ ರಣಧೀರ ಕಂಠೀರವ, ಇನ್ನೊಬ್ಬ ತಿಮ್ಮರಾಜ, ಮತ್ತಿಬ್ಬರು ರಾಜ ಒಡೆಯರ್, ಹತ್ತು ಮಂದಿ ಚಾಮರಾಜರು, ನಾಲ್ವರು ಕೃಷ್ಣರಾಜರು, ಕೊನೆಯದಾಗಿ ಜಯಚಾಮರಾಜೇಂದ್ರ ಆಗಿ ಹೋದವರು.
ಈ ಒಡೆಯರ ಹೆಸರಿನ ರಾಜರು ಗಂಡಭೇರುಂಡ ಲಾಂಛನ ಹೊತ್ತು ಎರಡು ಕಡೆ ಆಳ್ವಿಕೆ ನಡೆಸಿದ್ದಾರೆ. ಒಂದು ಮೈಸೂರು ಮತ್ತೊಂದು ಶ್ರೀರಂಗಪಟ್ಟಣ, ಮೊದಲಿಂದ ಐವರು ಮೈಸೂರನ್ನು ಕೇಂದ್ರವಾಗಿರಿಸಿಕೊಂಡರೆ 6 ರಿಂದ 21ರವರೆಗಿನ ರಾಜರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ನಂತರದ ನಾಲ್ವರು ಮತ್ತೆ ಮೈಸೂರಿಗೆ ಸ್ಥಳಾಂತರವಾಗಿ ಅಧಿಕಾರ ನಡೆಸಿದ್ದಾರೆ. ಹಲವರು ಯುದ್ಧ ಮಾಡಿದ್ದರೆ ಮತ್ತೆ ಕೆಲವರು ಇಂಗ್ಲಿಷರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿಯೊಂದಿಗೆ ಅಪ್ಪಿಕೊಂಡು ರಾಜತ್ವ ಸಾಧಿಸಿದವರಿದ್ದಾರೆ.
ಈ ಹಿನ್ನೆಲೆಯಲ್ಲಿ ಎಂದೋ ವಿಜಯನಗರದಲ್ಲಿ ನಡೆದಿದ್ದ ಮಹಾನವಮಿ ಆಚರಣೆಯನ್ನು ಪುನರ್ ಜಾರಿಗೊಳಿಸಿ ವೈಭವೀಕರಿಸಬೇಕೆಂದು ರಾಜ ಒಡೆಯರ್ ಇಂದಿಗೆ 400 ವರ್ಷಗಳ ಹಿಂದೆ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಈ ದಸರೆಯ ದಿಬ್ಬಣವನ್ನು ಗೌರಿ ಕಡುವೆ ಎಂಬ ಸ್ಥಳದಲ್ಲಿ ಪುನಾರಂಭಿಸಿದರು.
ಈತ ದಸರೆ ಪದ್ಧತಿಗೊಂದು ಕಟ್ಟಳೆ ರೂಪಿಸಿದ. ಇದೇ ಸಂದರ್ಭದಲ್ಲಿ ಸಿಂಹಾಸನವನ್ನೇರಿದ. ಕೆಲ ಊರುಗಳನ್ನೂ ಗೆದ್ದ. ದಳವಾಯಿ ಹುದ್ದೆಯನ್ನು ಸೃಷ್ಟಿಸಿದ. ದಸರೆಯನ್ನು ಈತ ರಾಜನ ವಾರ್ಷಿಕ ವರದಿ, ಆಡಳಿತದ ಪ್ರತಿಬಿಂಬ ಜನಮುಖಿ ಕಾರ್ಯಕ್ರಮವೆಂದುಕೊಂಡು ಆಳಿದವನು. ಇದೇ ಮಾದರಿಯಲ್ಲಿ ಮುಂದಿನ ಎಲ್ಲಾ ದಸರೆಗಳೂ ನಡೆದಿವೆ. ಆ ವೈಭವವನ್ನು ಮುಂದೆ ಬಂದ ರಾಜರು ತರಲಾಗದಿದ್ದರೂ ಯಾವ ಮಾರ್ಪಾಡನ್ನೂ ಮಾಡಿಲ್ಲ.ಕೆಲವು ಬಿಟ್ಟು ಹೋಗಿವೆ. ಹಲವು ಆಧುನಿಕ ಸ್ಪರ್ಶಕ್ಕೆ ಸಿಕ್ಕಿವೆ. ಇದೊಂದು ಪರಂಪರೆಯಾಗಿ ಶ್ರೀರಂಗಪಟ್ಟಣದಿಂದ ಮೈಸೂರಿನ ಬನ್ನಿಮಂಟಪದವರೆಗೆ ಬಂದು ನಿಂತಿದೆ. ಮೈಸೂರಿನ ದಸರೆ ಪ್ರಾರಂಭವಾಗಿ (ಮುಮ್ಮಡಿ ಕೃಷ್ಣರಾಜ ಒಡೆಯರ್) 205ನೇ ವರ್ಷ ತುಂಬುತ್ತಿದೆ.
ಬದಲಾದ ಕಾಲಘಟ್ಟದಲ್ಲಿ ಮೆರವಣಿಗೆಯಲ್ಲಿ ಹೊಸದು ತುಂಬಿಕೊಂಡಿದೆ. ಆಡಳಿತ, ಹಣಬಲದ ಅನುಕೂಲ ನೋಡಿಕೊಂಡು ಜಂಬೂಸವಾರಿಯಂತೂ ಸಾಗಿದೆ. ಆದರೆ ಅರಮನೆಯ ಅಂತರಂಗದಲ್ಲಿ ನಡೆಯುವ ದಸರೆ ಹಬ್ಬ ಪೂಜೆ-ಪುನಸ್ಕಾರ, ಕಲಾಪಗಳು ಒಂದಿಷ್ಟೂ ಬದಲಾಗಿಲ್ಲ. ಅದೇ ಕಂಕಣ, ಅದೇ ದೇವಪೂಜೆ, ಅದೇ ದರ್ಬಾರ್, ಅದೇ ವ್ಯವಸ್ಥೆ ಶಿಸ್ತುಗಳು ಇಂದೂ ಖಾಸಗಿ ದರ್ಬಾರ್ನಲ್ಲೂ ಸಾಕ್ಷೀಭೂತವಾಗಿದೆ. ಎಲ್ಲರಿಗೂ, ರಾಜ್ಯಕ್ಕೂ ಅದೇ ಅಧಿದೇವತೆ ಚಾಮುಂಡೇಶ್ವರಿ. ಈ ಹಿನ್ನೆಲೆಯಲ್ಲಿ ಈ ರಾಜ ಮಹಾರಾಜರು ಮಾಡಿದುದನ್ನೂ ಸೂಕ್ಷ್ಮವಾಗಿ ಗುರುತಿಸುವುದು ಈಗ ಸೂಕ್ತ. ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಚಾಮುಂಡಿಬೆಟ್ಟದಲ್ಲಿ ಹಿರೀಕೆರೆ ಕಟ್ಟಿಸಿದರು. ಬಿರುದಂತೆಂಬರ ಗಂಡ ಬಿರುದನ್ನು ತಿಮ್ಮರಾಜ ಹೊತ್ತ, ಸುಗುಣ ಗಂಭೀರನೆಂದು ಬೋಳ ಚಾಮರಾಜ ಕರೆಸಿಕೊಂಡ. ರಣಧೀರ ಕಂಠೀರವ ನರಸಿಂಹರಾಜ ತಿರುಚಿನಾಪಳ್ಳಿ ಜಟ್ಟಿಯನ್ನುಹೊಡೆದ. ಆಯುಧ ಶಾಲೆ ಕಟ್ಟಿಸಿದ. ಮೈಸೂರಿನಲ್ಲಿ ಕೋಟೆಯನ್ನು ಬಲಪಡಿಸಿ ಫಿರಂಗಿಗಳನ್ನಿಟ್ಟು, ಚಿಕ್ಕದೇವರಾಜ ಒಡೆಯರ್ 18 ಇಲಾಖೆಗಳನ್ನೂ ಅಂಚೆ ಪದ್ಧತಿಯನ್ನು ಜಾರಿಗೊಳಿಸಿದ. ಅರಸು ಮನೆತನದ ಗಣತಿ ಕಾರ್ಯ ನಡೆಸಿದ. ಬೆಟ್ಟದ ಭೀಮರಾಜರಿದ್ದಾಗ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ರಥಕ್ಕೂ ಮದ್ದಿನಮನೆಗಳಿಗೂ ಬೆಂಕಿ ಬಿತ್ತು. ಖಾಸಾ ಭೀಮರಾಜರಿದ್ದಾಗಲೇ ಹೈದರ್- ಟಿಪ್ಪು ಅಧಿಕಾರಕ್ಕೆ . ಮುಮ್ಮಡಿ ಕಾಲದಲ್ಲಿ ಇಂಗ್ಲಿಷರ ಪ್ರಾಬಲ್ಯ. ಆದರೂ ಸಾಹಿತ್ಯ-ಸಂಗೀತಕ್ಕೆ ಪೋಷಣೆ. ಒಡೆಯರ್ ಕಾಲದಲ್ಲಿ ಆಧುನಿಕ ಶಿಕ್ಷಣ, ಪ್ರಜಾಸತ್ತೆಯ ಕಲ್ಪನೆ ರೂಪ ಪಡೆದುಕೊಂಡಿತು. ನಾಲ್ವಡಿಯವರಿಂದ ಸಾಮಾಜಿಕ -ಕೈಗಾರಿಕೆ ಅಭಿವೃದ್ಧಿ ಜಯಚಾಮರಾಜೇಂದ್ರರ ಕಾಲದಲ್ಲಿ ರಾಜತ್ವ ಹಿಂದೆ ಸರಿದು ಪ್ರಜಾಪ್ರಭುತ್ವ ಪ್ರತ್ಯಕ್ಷವಾಯಿತು.
ಈ ಎಲ್ಲಾ ರಾಜರೂ ಹತ್ತಿತರದ ಸಂಬಂಧಿಗಳಾದ ಹಳ್ಳಿಯ ಹುಡುಗಿಯರನ್ನು ರಾಣಿಯರನ್ನಾಗಿ ಮಾಡಿಕೊಂಡಿದ್ದಾರೆ. ಇಬ್ಬರಿಂದ ಹತ್ತು ಮಂದಿವರೆಗೆ ಹಾಗೂ ಒಂದಿಬ್ಬರು ದೂರದ ರಾಜಸ್ಥಾನದವರನ್ನು ಮದುವೆಯಾದವರಿದ್ದಾರೆ.
ಆದಷ್ಟೂ ಜನಮುಖಿಯಾಗಿ ನಡೆದುಕೊಂಡು ಜನರಲ್ಲಿ ವಿಶ್ವಾಸ, ಭಕ್ತಿ ರೂಢಿಸಿಕೊಂಡ ರಾಜಮನೆತನ ಇದಾಗಿದೆ. ದಾನ, ಧರ್ಮ, ಧರ್ಮಕಾರಣ, ಜನೋಪಯೋಗಿ, ಲೋಕೋಪಯೋಗಿ ಕೆಲಸ ಮಾಡಿದವರೇ ಹೆಚ್ಚು. ಮೈಸೂರು ಒಡೆಯರ್ ಮನೆತನದಲ್ಲಿ ವರ್ಣರಂಜಿತ ಮತ್ತು ವಿವೇಕತನದಲ್ಲಿ ಬಾಳಿದವರೂ ಇದ್ದಾರೆ. ಇವರನ್ನು ನಂಬಿದವರಿಗೆಲ್ಲ ಇವರೊಂದಿಗೆ ಕಷ್ಟ ನಷ್ಟ ಹೇಳಿಕೊಂಡವರಿಗೆಲ್ಲ ಫಲ ಸಿಕ್ಕಿದೆ. ಆ ಮೂಲಕ ರಾಜ್ಯಕ್ಕೂ ಒಳ್ಳೆಯದೇ ಆಗಿದೆ.

ಶುಕ್ರವಾರ, ಅಕ್ಟೋಬರ್ 15, 2010

ಮುಖೇಶ್ ಅಂಬಾನಿ ಶತಕೋಟಿ ರು.ಗಳ ಅರಮನೆ!

ಜಗತ್ತಿನ ನಾಲ್ಕನೆ ಅತಿ ಶ್ರೀಮಂತ ಮುಖೇಶ್ ಅಂಬಾನಿ ಜಗತ್ತಿನ ಪ್ರಪ್ರಥಮ ಶತಕೋಟಿ (2 ಶತಕೋಟಿ ಡಾಲರ್) ವೆಚ್ಚದ ಮನೆಯೊಂದನ್ನು ಮುಂಬೈಯಲ್ಲಿ ನಿರ್ಮಿಸಿದ್ದಾರೆ. 27 ಮಹಡಿಗಳ ಈ ಮನೆ 173 ಮೀಟರ್ ಎತ್ತರವಿದೆ. ಸುಮಾರು 630 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ಇಷ್ಟು ವೆಚ್ಚದ ಮನೆ ಜಗತ್ತಿನಲ್ಲೇ ಪ್ರಥಮ ಎನ್ನಲಾಗಿದೆ.

ಈ ಅರಮನೆಯಲ್ಲಿ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ವಾಸಿಸಲಿದ್ದಾರೆ. ಮನೆಯಲ್ಲಿ ವಿಶಾಲವಾದ ಜಿಮ್ ಮತ್ತು ನೃತ್ಯ ಸ್ಟುಡಿಯೊವನ್ನು ಹೊಂದಿರುವ ಆರೋಗ್ಯ ಕ್ಲಬ್ ಇದೆ. ಒಂದು ಈಜು ಕೊಳ, ಅತಿಥಿ ಕೋಣೆ, ವಿವಿಧ ರೀತಿಯ ಅಂಗಣಗಳು, 50 ಮಂದಿ ಕುಳಿತುಕೊಳ್ಳಬಹುದಾದ ಸಿನೆಮಾ ಮಂದಿರ ಮನೆಯೊಳಗೇ ಇದೆ ಎಂದು ವರದಿಯೊಂದು ಹೇಳಿದೆ.
ಮನೆಯ ಛಾವಣಿಯಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಕೆಳಗಿನ ಅಂತಸ್ತಿನಲ್ಲಿ ಸುಮಾರು 160 ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಸ್ಥಳಾವಕಾಶವಿದೆ. ಅತಿಥಿಗಳನ್ನು ಪ್ರಾಂಗಣದಿಂದ ಕಾರ್ಯಕ್ರಮಗಳು ನಡೆಯುವ ವಿವಿಧ ಮಹಡಿಗಳಿಗೆ ತಲುಪಿಸಲು ಕಟ್ಟಡದಲ್ಲಿ 9 ಲಿಫ್ಟ್‌ಗಳಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ 53ರ ಹರೆಯದ ಉದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಗರ ಮತ್ತು ಸಮುದ್ರದ ಸವಿಯನ್ನು ವೀಕ್ಷಿಸಲು ಅನುಕೂಲವಿದೆ.
ಕಟ್ಟಡವು 37,000 ಚದರ ಮೀಟರ್ ವಿಸ್ತಾರವಿದ್ದು, ಇದು ವೆರ್ಸಲಿಸ್ ಅರಮನೆಗೂ ದೊಡ್ಡದಾಗಿದೆ. ಇಷ್ಟು ದೊಡ್ಡ ಮನೆಯನ್ನು ಸರಿಯಾಗಿ ನಿರ್ವಹಿಸಲು ಸುಮಾರು 600 ಸಿಬ್ಬಂದಿ ಸೇವೆಗಿದ್ದಾರೆ. ಈ ಮನೆಯನ್ನು ನಿರ್ಮಿಸಲು 44 ಮಿಲಿಯನ್ ಪೌಂಡ್‌ನಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಮುಂಬೈಯ ಪ್ರಮುಖ ಕೇಂದ್ರದಲ್ಲಿ ಭೂಮಿ ಮತ್ತು ಆಸ್ತಿ ವೌಲ್ಯ ಆ ಅಂದಾಜಿನಿಂದ 15 ಪಟ್ಟು ಅಧಿಕ ವೌಲ್ಯವನ್ನು ಈ ಮನೆಗೆ ನೀಡಿದೆ. ಹೀಗಾಗಿ ಈ ಮನೆಯ ನಿರ್ಮಾಣ ವೆಚ್ಚ 630 ಮಿಲಿಯನ್ ಪೌಂಡ್ ಆಗಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ, ಅಕ್ಟೋಬರ್ 13, 2010

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

ಮೊಬೈಲ್ ಬಳಕೆದಾರರಿಗೆ ಕನ್ನಡ ಸುದ್ದಿಗಳನ್ನು ಎಸ್ಎಮ್ಎಸ್ ಮುಖಾಂತರ ದಟ್ಸ್ ಕನ್ನಡ [^] [^] ತಲುಪಿಸುತ್ತಿರುವುದು ನಮ್ಮ ಓದುಗರಿಗೆ ತಿಳಿದ ವಿಚಾರ. ಈ ನಮ್ಮ ಸೇವೆಯನ್ನು ಬಳಕೆದಾರರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಆದರೆ, ಅನೇಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಕನ್ನಡ ಅಕ್ಷರಗಳಿಗೆ ಬೆಂಬಲ ನೀಡದ ಕಾರಣ ಸಾವಿರಾರು ಓದುಗರು ಮೋಬೈಲಲ್ಲಿ ಕನ್ನಡ ಓದುವ ಅವಕಾಶದಿಂದ ವಂಚಿತರಾಗಿದ್ದಾರೆ.

ಕನ್ನಡ ಓದಬಯಸುವ ಪ್ರತಿ ಮೊಬೈಲ್ ಬಳಕೆದಾರರಿಗೆ ತಾಜಾ ಕನ್ನಡ ಸುದ್ದಿ [^]ಗಳನ್ನು ತಲುಪಿಸಬೇಕೆಂಬ ಒತ್ತಾಸೆ ನಮ್ಮದು. ಈ ಕಾರಣದಿಂದಾಗಿ ಆಂಗ್ಲ ಲಿಪಿಯಲ್ಲಿಯೇ ದಟ್ಸ್ ಕನ್ನಡ ಸುದ್ದಿ ಸಂದೇಶಗಳನ್ನು ನೀಡುವ ಉದ್ದೇಶದಿಂದ ಹೊಸ ಪದ್ಧತಿಯನ್ನು ಮೈಟುಡೆ.ಕಾಂ ಪ್ರಾರಂಭಿಸಿದೆ. ಕನ್ನಡ ಲಿಪಿ ಸಪೋರ್ಟ್ ಮಾಡ ಮೊಬೈಲ್ ಬಳಕೆದಾರರ ಆಗ್ರಹದ ಮೇರೆಗೆ ಈ ಹೆಚ್ಚುವರಿ ಸೇವೆಯನ್ನು ಪ್ರಾರಂಭಿಸಲಾಗಿದೆ.

ಮೊಬೈಲನ್ನು ಲಕ್ಷಾನುಲಕ್ಷ ಕನ್ನಡ ಭಾಷಿಗರು ಉಪಯೋಗಿಸುತ್ತಿದ್ದಾರೆ. ಮಾತೃಭಾಷೆಯಲ್ಲಿಯೇ ಸುದ್ದಿಗಳನ್ನು ಓದಬೇಕೆಂಬ ಆಸೆ ಅವರದು. ಸುದ್ದಿ ಸಂದೇಶಗಳು ಕನ್ನಡದಲ್ಲಿ ಬಂದರೂ ಹ್ಯಾಂಡ್ ಸೆಟ್ ನಲ್ಲಿ ಸೆಟ್ ಇರದ ಕಾರಣ ಇದರಿಂದ ವಂಚಿತರಾಗುತ್ತಿದ್ದಾರೆ. ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರಹ [^]) ಸುದ್ದಿ ಸಂದೇಶಗಳು ಈ ಕೊರತೆಯನ್ನು ನಿವಾರಣೆ ಮಾಡಲಿದೆ. ಈ ಸದವಕಾಶವನ್ನು ಕನ್ನಡ ಓದುಗರು ಬಳಸಿಕೊಳ್ಳುತ್ತಾರೆಂಬ ಸದಾಶಯ ನಮ್ಮದು.

ಈ ಸೇವೆಯ ಶುಲ್ಕ ಕೂಡ ರು.5, ಅದೂ ತಿಂಗಳಿಗೆ. ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಈ ಕೊಂಡಿಯನ್ನು ಕ್ಲಿಕ್ ಮಾಡಿ.

ಚಂದಾದಾರರಾಗುವುದು ಸುಲಭ

ಮೊಬೈಲ್ ಮೂಲಕ ONE-KNNEWSENG ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ  ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.

ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.

ಮೊಬೈಲಲ್ಲಿ ಕನ್ನಡ ಇಲ್ಲವೆ? ಚಿಂತಿಸಬೇಡಿ. ಇಂಗ್ಲಿಷ್ ನಲ್ಲಿ ಕನ್ನಡ ಸುದ್ದಿಗೆ ಚಂದಾದಾರರಾಗಿ.

ಮಂಗಳವಾರ, ಅಕ್ಟೋಬರ್ 12, 2010

ಅವಿರತ - ಸಂಸ್ಥೆ

ನಾಡಿಗಾಗಿ ನಿರಂತರ ತಾಯಿನಾಡು ಹಾಗು ಮಾನವೀಯತೆಗಾಗಿ ನಿರಂತರವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವ ಪಡೆ.