ಭಾನುವಾರ, ಆಗಸ್ಟ್ 29, 2010

ಸಿಡಿ ನೋಡಿ ಚಟ ಬಿಡಿ

ವ್ಯಸನಮುಕ್ತರಾಗಲು ವಿಶ್ವವ್ಯಾಪಿ ಆಂದೋಲನ
ಮಾದಕ ವ್ಯಸನಿಗಳ ವಿರುದ್ದ ನೀವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾದರೆ ಸಂಸ್ಥೆಯು ಶಿಕ್ಷಕರು, ಕೌನ್ಸಿಲರುಗಳು, ಕಾನೂನು ಸಲಹೆಗಾರರು ಆರೋಗ್ಯ ಮಾರ್ಗದರ್ಶಕರ ನೆರವು, ಪುರ್ನವಸತಿ ಕೇಂದ್ರ ಸೌಲಭ್ಯವದಗಿಸುವುದಂತೆ. ಸಂಸ್ಥೆಯು ಮೊದಲು ಕಿರುಚಿತ್ರದ ಒಂದು ಡಿವಿಡಿ, ಎಲ್ಲಾ ರೀತಿಯ ಮಾದಕ ವಸ್ತುಗಳ ಮಾಹಿತಿ ಒಳಗೊಂಡ ೨೪ ಕಿರು ಪುಸ್ತಕಗಳು, ೧೨ ಮುಖ್ಯ ಚಿತ್ರಗಳು, ೧೬ ಪಿ.ಎಸ್ ಎ.ಗಳನ್ನು ಉಚಿತವಾಗಿ ನೀಡುತ್ತದೆ. ಒಬ್ಬರಿಗಾದರೆ ಇಂದು ಕಿಟ್, ಸಂಘ ಸಂಸ್ಥೆ ಮತ್ತು ಶಾಲೆ ಕಾಲೇಜುಗಳಿಗಾದರೆ ೫೦ ಕಿಟ್ ಗಳನ್ನು ನೀಡುತ್ತದೆಯಂತೆ. ಇಂಗ್ಲೀಷ್ ಸೇರಿದಂತೆ ವಿಶ್ವ ದ೨೧ ಭಾಷೆಗಳಲ್ಲಿ ಕಿಟ್ ಲಭ್ಯ. ನಾವೂ ಒಂದು ಕೈ ನೋಡಿಬಿಡೋಣ ಎನ್ನಿಸುತ್ತಿದೆಯೇ? http://www.drugfreeworld.org/ ವೆಬ್ ಸೈಟ್ ನಲ್ಲಿ ಒಮ್ಮೆ ಇಣುಕಿ ನೋಡಿ.

ಶುಕ್ರವಾರ, ಆಗಸ್ಟ್ 27, 2010

ಮೈಸೂರು ಅರಮನೆಯ ಯಥಾದರ್ಶನ


http://www.mysorepalace.tv/360_Kan/index.html ಅಂತರ್ಜಾಲ ವಿಳಾಸಕ್ಕೆ ಭೇಟಿ ಕೊಟ್ಟರೆ,ನಿಮಗೆ ಮೈಸೂರು ಅರಮನೆಯ ದರ್ಶನವಾಗುತ್ತದೆ.ಅರಮನೆಯ ಒಳಗೆ ನಿಂತು ನೋಡಿದ ಅನುಭವ ಕೊಡುವ ಈ ಮಿಥ್ಯಾದರ್ಶನ,ವೀಕ್ಷಕ
ವಿವರಣೆಯನ್ನೂ ಒಳಗೊಂಡಿದೆ.ಅರಮನೆಯ 21 ವಿವಿಧ ಭಾಗಗಳ ಯಥಾದರ್ಶನ ನಿಮಗಾಗುತ್ತದೆ. ಚಾವಣಿಯ ಕಡೆಯ ನೋಟ,ಅರಮನೆಯ ಒಳಗಡೆ ನಿಂತು ನೋಡಿದ ಅನುಭವಗಳೂ ನಿಮಗೆ ಲಭ್ಯ.

ಮನೆ ವಿಳಾಸ ಹುಡುಕಿ ಕೊಡುವ ಮ್ಯಾಪ್ ಮೈ ಇಂಡಿಯಾ


ಮ್ಯಾಪ್ ಮೈ ಇಂಡಿಯಾ ಐದನೇ ಆವೃತ್ತಿಯ ಭೂಪಟಗಳನ್ನು ಅನಾವರಣಗೊಳಿಸಿದ್ದು, ದೆಹಲಿ ಎನ್ ಸಿಆರ್ ಪ್ರದೇಶ ಹಾಗೂ ಚಂಡೀಗಢದಲ್ಲಿ ಮನೆ ವಿಳಾಸ ಹುಡುಕಲು ಸಹಾಯಕವಾಗುವಂತೆ ರೂಪಿಸಲಾಗಿದೆ.

ನಕ್ಷೆಯನ್ನು ಒಮ್ಮೆ ಹಾಗೆ ಹರಡಿದರೆ ಒಂದು ಪ್ರದೇಶ ಸುಮಾರು 52 ವಿಭಾಗಗಳು ಎದ್ದು ಕಾಣಲಿದೆ. ಅಂದರೆ, ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಲು ಸಹಾಯಕವಾಗಿದೆ. ಕಚೇರಿಗಳು, ರೆಸ್ಟೋರೆಂಟ್ ಗಳು, ಕ್ಲಬ್ ಗಳು, ಅಪಾರ್ಟ್ಮೆಂಟ್ ಗಳು, ಮನೆಗಳು, ಹೋಟೆಲ್ ಗಳು, ಪೆಟ್ರೋಲ್ ಬಂಕ್ ಗಳು, ಎಟಿಎಂಗಳು ಇತ್ಯಾದಿ ಸ್ಥಳಗಳ ಮಾರ್ಗಸೂಚಿಯನ್ನು ಮ್ಯಾಪ್ ಮೈ ಇಂಡಿಯಾ ನೀಡಲಿದೆ.

ಭಾರತದ ಸುಮಾರು 809 ನಗರ ಪ್ರದೇಶ 76,000 ಪಟ್ಟಣಗಳು ಹಾಗೂ ಹಳ್ಳಿಗಳನ್ನು ಮ್ಯಾಪ್ ಮೈ ಇಂಡಿಯಾ ಆವರಿಸಿದೆ. ಸ್ಥಳೀಯ ವ್ಯಾಪಾರಿ ಕೇಂದ್ರಗಳನ್ನು ನಕಾಶೆಯಲ್ಲಿ ಗುರುತಿಸಬಹುದಾಗಿದೆ.

ಹೊಸ ಆವೃತ್ತಿಯಲ್ಲಿ ನಿಮಗೆ ಬೇಕಾದ ಮಾಹಿತಿ ಅಂದರೆ, ಊರಿನ ಪ್ರಮುಖ ಹೋಟೆಲ್, ಎಟಿಎಂ ಹುಡುಕಬೇಕಿದ್ದರೆ, ಸರ್ಚ್ ಬಾಕ್ಸ್ ನಲ್ಲಿ ಕೀ ಪದ ವನ್ನು ಹಾಕಿದರೆ ಸಾಕು, ಕೀ ಪದ ತಪ್ಪಿದ್ದರೆ ತಾನೇ ಸರಿಪಡಿಸಿಕೊಳ್ಳುತ್ತದೆ ಅಥವಾ ನಿಮಗೆ ಸರಿಪದಯಾವುದೆಂದು ಸಲಹೆ ನೀಡುತ್ತದೆ.

ಧ್ವನಿ ಆಧಾರಿತ ಮಾರ್ಗದರ್ಶನ ನೀಡುತ್ತಿದೆ. ಅದರಲ್ಲೂ ಕನ್ನಡ [^] ಸೇರಿದಂತೆ ಬೆಂಗಾಳಿ, ಗುಜರಾತಿ , ಹಿಂದಿ, ಮಲೆಯಾಳಂ, ಪಂಜಾಬಿ, ತಮಿಳು ಹಾಗೂ ತೆಲುಗು ಇತ್ಯಾದಿ ಎಂಟು ಭಾಷೆಗಳಲ್ಲಿ ಈ ಸೌಲಭ್ಯ ಸಿಗುತ್ತದೆ.

ಮ್ಯಾಪ್ ಮೈ ಇಂಡಿಯಾದ ನಕಾಶೆಗಳು ವೆಬ್ ಸೈಟ್ ಅಲ್ಲದೆ ಮೊಬೈಲ್ ನಲ್ಲೂ ಲಭ್ಯ. ಇದೀಗ ಐಷಾರಾಮಿ ಕಾರುಗಳಲ್ಲಿ ಖಾಯಂ ಆಗುತ್ತಿದೆ. ಮ್ಯಾಪ್ ಮೈ ಇಂಡಿಯಾದ ಜಿಪಿಎಸ್ ನ್ಯಾವಿಗೇಷನ್ ಸಾಧಕಗಳು, ನ್ಯಾವಿಗೇಟರ್ ಗಳು ಪ್ರಮುಖ ಆಟೋ ಮಳಿಗೆಗಳಲ್ಲಿ ಲಭ್ಯವಿದೆ.

ಟೊಯೋಟಾ, ಜನರಲ್ ಮೋಟಾರ್ಸ್, ಫೋರ್ಡ್ ,ಮಹೀಂದ್ರಾ, ಫಿಯೆಟ್, ಮಾರುತಿ ಹಾಗೂ ಟಾಟಾ ಮೋಟಾರ್ಸ್ ವಾಹನಗಳಲ್ಲಿ ಈಗಾಗಲೇ ಮ್ಯಾಪ್ ಮೈ ಇಂಡಿಯಾದ ಪರಿಕರಗಳು ಬಳಕೆ ಯಾಗುತ್ತಿದೆ. ಕ್ರೋಮಾ, ಜಂಬೋ, ಲ್ಯಾಂಡ್ ಮಾರ್ಕ್, ಗಿಜ್ಮೋಸ್ ಮುಂತಾದ ಎಲೆಕ್ಟ್ರಾನಿಕ್ ರಿಟೈಲ್ ಮಳಿಗೆಗಳಲ್ಲೂ ಈ ಸಾಧಕಗಳು ಲಭ್ಯವಿದೆ.
http://mapmyindia.com/#1 

ಕಂಪ್ಯೂಟರಿನಲ್ಲಿ ಕನ್ನಡ ಬರೆಯುವುದಕ್ಕೆ ಮಾರ್ಗದರ್ಶಿ

 
ಕಂಪ್ಯೂಟರ್ ನಲ್ಲಿ ಕನ್ನಡ [^] ಬಳಕೆಗೆ ಅನೇಕ ವಿಧಾನಗಳಿದ್ದರೂ, ಗೂಗಲ್ ಸಾಧನಗಳು ತಮ್ಮ ಸರಳತೆಯಿಂದ ಜನಮೆಚ್ಚುಗೆ ಪಡೆದಿವೆ. ಇಂಗ್ಲೀಷ್ ಭಾಷೆ ಅರಿವಿದ್ದರೆ ಸಾಕು ಸುಲಭವಾಗಿ ಕನ್ನಡ ಅಕ್ಷರಗಳನ್ನು ಹಿಂಪಡೆಯಬಹುದು. ಹೌದು, ಗೂಗಲ್ ಟ್ರಾನ್ ಲಿಟರೇಷನ್ ಸಾಧನ ದಿನೇ ದಿನೇ ಜನಪ್ರಿಯತೆ ಗಳಿಸುತ್ತಿದೆ. ಕನ್ನಡದಲ್ಲೇ ಇಮೇಲ್, ಚಾಟ್ ಮಾಡಲು ಬಯಸುವವರು, ಟ್ರಾನ್ ಲಿಟರೇಷನ್ ಬಳಸುತ್ತಿದ್ದಾರೆ.

ಗೂಗಲ್ ಟ್ರಾನ್ ಲಿಟರೇಷನ್ ಜನಪ್ರಿಯತೆಗೆ ಕಾರಣವೂ ಇದೆ. ಸರಳತೆ ಹಾಗೂ ಸ್ಪಷ್ಟ ಮಾಹಿತಿ ನೀಡಿಕೆ ಇದರ ಹೆಗ್ಗುರುತು. ಇಂಗ್ಲೀಷ್ ನಲ್ಲಿ ಟೈಪ್ ಮಾಡೋಕೆ ಬರುವವರು ಗೂಗಲ್ ಟ್ರಾನ್ ಲಿಟರೇಷನ್ (ಲಿಪ್ಯಂತರ) ಕಿಂಡಿಯನ್ನು ತೆರೆದುಕೊಂಡು ಸುಲಭವಾಗಿ ಟೈಪ್ ಮಾಡಿ ಒಂದು ಪದದ ನಂತರ ಸ್ಪೇಸ್ ಬಾರ್ ಒತ್ತಿದರೆ ಸಾಕು. ನಿಮಗೆ ಬೇಕಾದ ಕನ್ನಡ ಪದ ತೆರೆಯ ಮೇಲೆ ಕಾಣುತ್ತದೆ.

ಉದಾ: http://www.google.co.in/transliterate/indic/Kannada ದಲ್ಲಿ kannada sundara bhashe ಎಂದು ಟೈಪ್ ಮಾಡಿದರೆ ಕನ್ನಡ ಸುಂದರ ಭಾಷೆ ಎಂದು ಪಡೆಯಬಹುದು. ಕನ್ನಡದಿಂದ ಇಂಗ್ಲೀಷ್ ಗೆ ಅಥವಾ ಇಂಗ್ಲೀಷ್ ನಿಂದ ಕನ್ನಡಕ್ಕೆ ಬದಲಾಯಿಸಿಕೊಳ್ಳಲು Ctrl+g ಕೀಲಿ ಒತ್ತಬಹುದು. ಇಷ್ಟೇ ಅಲ್ಲದೆ, ಇಲ್ಲಿ ಟೈಪ್ ಆಗುವ ಬರಹ [^]ವನ್ನು ತಿದ್ದಲು, ಸಂಕಲನ ಮಾಡಲು, ವೆಬ್ ಲಿಂಕ್ ಸೇರಿಸಲು ಬೇಕಾಗುವ ಟೂಲ್ ಗಳನ್ನು ಸಹ ಒದಗಿಸಲಾಗಿದೆ. ನೀವು ಬರೆದ ಬರಹವನ್ನು ಇದೇ ವೆಬ್ ಕಿಂಡಿಯಿಂದ ನೇರವಾಗಿ ಪ್ರಿಂಟ್ ತೆಗೆದುಕೊಳ್ಳುವ ವ್ಯವಸ್ಥೆ ಕೂಡ ಲಭ್ಯವಿದೆ. ಆದರೆ, ನೀವು ಬರೆದ ಪದಗಳು ಸರಿಯಿದೆಯೇ ಇಲ್ಲವೇ ಎಂದು ಸಂದೇಹವೇ ಇದಕ್ಕಾಗಿ ಪದಗಳ ಚೆಕ್ ಮಾಡಲು ಪದಕೋಶ ಲಭ್ಯವಿದೆ. ಅಲ್ಲದೆ ಡ್ರಾಪ್ ಡೌನ್ ಮೂಲಕ ನಿಮಗೆ ಸೂಕ್ತ ಪದದ ಸಲಹೆ ಸಿಗುತ್ತದೆ. ಪದ ಆಯ್ಕೆ ಅವಾಂತರವಾದರೆ ಕಷ್ಟ. ಇದಕ್ಕಾಗಿ ಪದಕೋಶದ ನೆರವು ಪಡೆಯಬಹುದು.

ಉದಾ: ಮೇಲಿನ ಉದಾಹರಣೆಯಲ್ಲಿ ಸುಂದರ ಎಂಬ ಪದ ಮೇಲೆ ಮೌಸ್ ಕರ್ಸರ್ ಇಟ್ಟರೆ ಡ್ರಾಪ್ ಡೌನ್ ನಲ್ಲಿ ಸುಂದರ, ಸುನ್ದರ, ಸುಂದರಾ, ಸುನದರ.. ಹೀಗೆ ಪದಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ಆಯ್ಕೆ ಮಾಡಬಹುದು.

ಇಂಗ್ಲೀಷ್-ಕನ್ನಡ ಸರಳ ಪದಕೋಶ: ಇಲ್ಲಿ ನೀಡಿರುವ ಪದಕೋಶ ಬಳಸಿ ಆಂಗ್ಲಪದಗಳಿಗೆ ಕನ್ನಡದಲ್ಲಿ ಸರಳ ಅರ್ಥವನ್ನು ಪಡೆಯಬಹುದು. ಹಾಗೂ ಕನ್ನಡದಿಂದ ಆಂಗ್ಲ ಪದಕ್ಕೆ ತರ್ಜುಮೆ ಮಾಡಿ ಬಳಸಬಹುದು.  ಗೂಗಲ್ ಟ್ರಾನ್ ಲಿಟರೇಷನ್ ಸಾಧನವು ಬ್ಲಾಗ್ [^], ಜೀಮೆಲ್, ಕ್ಲೋನ್, ಆರ್ಕುಟ್ [^] ಗಳಲ್ಲಿ ಲಭ್ಯವಿದೆ. ಅಲ್ಲದೆ, ನಿಮ್ಮದೇ ವೆಬ್ ತಾಣದಲ್ಲೂ ಟ್ರಾನ್ ಲಿಟರೇಷನ್ ಸಾಧನದ API ಅಳವಡಿಸಿಕೊಳ್ಳಬಹುದು.ಕನ್ನಡ ಸೇರಿದಂತೆ ಸುಮಾರು 22ಕ್ಕೂ ಅಧಿಕ ಭಾಷೆಗಳಲ್ಲಿ ಈ ಸಾಧನವು ಲಭ್ಯವಿದೆ.

ಗುರುವಾರ, ಆಗಸ್ಟ್ 26, 2010

ಜಿಮೇಲ್ ನಿಂದ ನೇರವಾಗಿ ದೂರವಾಣಿ ಕರೆ ಮಾಡಿ

                              
ಈ-ಮೇಲ್ ಮುಖಾಂತರ ಸ್ನೇಹಿತರಿಗೆ, ನೆಂಟರಿಗೆ, ಪರಿಚಯದವರಿಗೆ ನೇರವಾಗಿ ದೂರವಾಣಿ ಕರೆ ಮಾಡುವುದು ಸಾಧ್ಯವೆ? ಸರ್ಚ್ ಇಂಜಿನ್ ದೈತ್ಯ ಗೂಗಲ್ ಕಂಪನಿ [^] ತನ್ನ ಈ-ಮೇಲ್ ಸೇವೆ ಜಿಮೇಲ್ ನಿಂದ ಇದನ್ನು ಸಾಧ್ಯವಾಗಿಸಿದೆ.

ಜಿಮೇಲ್ ಬಳಕೆದಾರರು ಇನ್ನು ಮುಂದೆ ಈ-ಮೇಲ್ ಮುಖಾಂತರವೇ ನೇರವಾಗಿ ಇತರರಿಗೆ ಟೆಲಿಫೋನ್ ಕರೆಗಳನ್ನು ಮಾಡಬಹುದು. ಅಮೆರಿಕ [^] ಮತ್ತು ಕೆನಡದಲ್ಲಿರುವ ಜಿಮೇಲ್ ಬಳಕೆದಾರರು 2010ರಲ್ಲಿ ಉಚಿತವಾಗಿ ಕರೆಗಳನ್ನು ಮಾಡಬಹುದು. ಆದರೆ, ಇತರ ದೇಶಗಳಲ್ಲಿರುವವರು ಈ ಸೇವೆ ಬಳಸಿಕೊಳ್ಳಲು ಅಲ್ಪ ಮೊತ್ತವನ್ನು ತೆತ್ತಬೇಕು.

ಚಾಟಿಂಗ್ ಪಟ್ಟಿಯಲ್ಲಿರುವ ಸ್ನೇಹಿತರಿಗೆ 'ಕಾಲ್ ಫೋನ್' ಬಟನ್ ಕ್ಲಿಕ್ ಮಾಡಿ ಫೋನ್ ನಂಬರ್ ಅಥವಾ ಹೆಸರು ನಮೂದಿಸಿ ಸಂಭಾಷಣೆಯನ್ನು ಆರಂಭಿಸಬಹುದು. ಆನ್ ಲೈನ್ ಖಾತೆ ಬಳಸಿ ಹಣ ಸಂದಾಯ ಮಾಡಬಹುದಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ವಿನೂತನ ಸೇವೆ ನೀಡುವ ಮುಖಾಂತರ ವೆಬ್ ಕಾಲಿಂಗ್ ಸೇವೆ ನೀಡುತ್ತಿರುವ ಸ್ಕೈಪ್ ಮತ್ತು ಎಟಿ ಅಂಡ್ ಟಿ ಹಾಗು ವೆರಿಜೋನ್ ಕಮ್ಯುನಿಕೇಷನ್ಸ್ ಕಂಪನಿಗಳಿಗೆ ನೇರವಾಗಿ ಪೈಪೋಟಿಗೆ ಗೂಗಲ್ ಇಳಿದಿದೆ.

ತುಂಟ ಪ್ರಶ್ನೆ : ಪ್ರಿಯತಮ ಪ್ರಿಯತಮೆಗೆ ಜಿಮೇಲ್ ಮುಖಾಂತರ ಫೋನ್ ಮಾಡಬೇಕಿದ್ದರೆ, 'ಈ-ಮೇಲ್ ಮುಖಾಂತರ ಫಿಮೇಲ್ ಗೆ ನೇರ ಕರೆ' ಎಂದು ಕರೆಯಬಹುದೆ?.

ಶುಕ್ರವಾರ, ಆಗಸ್ಟ್ 20, 2010

“ಐ-ಸುಧಾ” – ಒಂದು ಐ-ಫೋನ್ ಅಪ್ಲಿಕೇಶನ್

 ಗೆಳೆಯರೆ,
ಸುಧಾ ಮ್ಯಾಗಝೀನ್ ನಿಮಗೆಲ್ಲ ತಿಳಿದಿರಬಹುದು. ಈ ನನ್ನ ನೆಚ್ಚಿನ ಸುಧಾ ಮ್ಯಾಗಝೀನಿಗೋಸ್ಕರ ಐ-ಸುಧಾ ಎನ್ನುವಂತಹ ಒಂದು ಐ-ಫೋನ್ ಅಪ್ಲಿಕೇಶನ್ ಅನ್ನು ಬರೆದಿದ್ದೇನೆ. ಇಂದಿನಿಂದ ಅದು, Apple App Store ನಿಂದ ಲಭ್ಯವಾಗಲಿದೆ.
ಇದರ ಪ್ರಯೋಜನಗಳು ಇಂತಿವೆ
೧. ಯಾವುದೇ ತಾಂತ್ರಿಕ ಅಡಚಣೆಗಳೂ ನಿಮ್ಮನ್ನು ಕಾಡವು.
೨. ಪ್ರಸ್ತುತ ವಾರದಿಂದ ಹಿಡಿದು ಹಿಂದಿನ ಮೂರು ವರ್ಷಗಳ ತನಕದ ಸುಧಾವನ್ನು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಓದಬಹುದು.
೩. ಪುಟಗಳ ನಾವಿಗೇಶನ್ ಅನ್ನು ಸುಲಭವಾಗಿ, ಸ್ಕ್ರಬಿಂಗ್ ಮೂಲಕ ಮಾಡಬಹುದು. ಬಲದಿಂದ ಎಡಕ್ಕೆ ಸ್ಕ್ರಬಿಂಗ್ ಮಾಡಿದರೆ ಮುಂದಿನ ಪುಟ ಮತ್ತು ಎಡದಿಂದ ಬಲಕ್ಕೆ ಸ್ಕ್ರಬಿಂಗ್ ಮಾಡಿದರೆ ಹಿಂದಿನ ಪುಟ ಲೋಡ್ ಆಗುವುದು.
೪. ಯಾವುದೇ ಪುಟದ ಅಕ್ಷರಗಳು ಸರಿಯಾಗಿ ಕಾಣದಿದ್ದಲ್ಲಿ, ಎರಡೇ ಎರಡು ಬೆರಳುಗಳ ನೆರವಿನಿಂದ ಅಕ್ಷರಗಳ ಗಾತ್ರವನ್ನು ಹಿಗ್ಗಿಸಬಹುದು, ಹಾಗೆಯೇ ಕುಗ್ಗಿಸಲೂ ಬಹುದು.
೫. ಈ ಅಪ್ಲಿಕೇಶನ್ನಿನ ಬಹುಮುಖ್ಯ ಉಪಯೋಗವೆಂದರೆ, ಇಂಟರ್ನೆಟ್ ಇಲ್ಲದಿರುವ ಕಡೆಯೂ ಇದರ ಬಳಕೆ. ನೀವು ಒಮ್ಮೆ ಒಂದು ಪುಟವನ್ನು ಓದಿದೆವೆಂದರೆ, ಆ ಪುಟ ಐ-ಪೋನಿನಲ್ಲಿ ಸೇವ್ ಆಗಿರುತ್ತದೆ. ಹಾಗಾಗಿ, ನೀವು ಬಸ್ಸಿನಲ್ಲಿಯೋ, ಆಟೋದಲ್ಲಿಯೂ, ಅಥವಾ ಟ್ರೈನಿನಲ್ಲಿಯೋ ಹೋಗುವಾಗ, ಈಗ ಸುಧಾ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೊರಗಬೇಕಿಲ್ಲ. ನಿಮ್ಮ ಫೋನಿನಲ್ಲಿ ನಿಮ್ಮ ನೆಚ್ಚಿನ ಮ್ಯಾಗಝೀನ್ ಅನ್ನು ಯಾವಾಗಲೂ ಓದಬಹುದು.



ಗುರುವಾರ, ಆಗಸ್ಟ್ 19, 2010

3 ಜಿ ಬಳಸಿ 1ರೂಪಾಯಿಗೆ ವಿದೇಶಕ್ಕೆ ಕರೆ ಮಾಡಿ

3ಜಿ ತರಂಗಾಂತರ ಸೇವೆಯಿಂದ ಮೊಬೈಲ್ ಇಂಟರ್ ನೆಟ್ ಬಳಕೆ ಗಣನೀಯವಾಗಿ ಹೆಚ್ಚುವುದಲ್ಲದೆ, ಇಂಟರ್ ನೆಟ್ ಮೂಲಕ ಮಾಡುವ ಅಂತಾರಾಷ್ಟ್ರೀಯ ಕರೆ ದರಗಳಲ್ಲಿ ಗಣನೀಯವಾಗಿ ಇಳಿಮುಖ ಆಗಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಗ್ಲೋಬಲ್ ಮಾರ್ಕೆಟಿಂಗ್ ಅಂಡ್ ಸ್ಟ್ರಾಟಜಿಯ ವ್ಯವಸ್ಥಾಪಕ ನಿರ್ದೇಶಕ ಸಂಜಿತ್ ಚಟರ್ಜಿ ಪ್ರಕಾರ ಅಂತಾರಾಷ್ಟ್ರೀಯ ಕರೆಗಳನ್ನು ಧ್ವನಿ ವರ್ಗಾವಣೆ ಮೂಲಕ ಕರೆ (VoIP)ಮಾಡುವುದರಿಂದ ಕರೆ ದರಗಳು ತೀವ್ರವಾಗಿ ಕಡಿಮೆಯಾಗಲಿವೆ. ಈ ಕರೆಗಳನ್ನು ಮಾಡಬೇಕಾದರೆ ಮೊಬೈಲ್ ಬಳಕೆದಾರರು 100 ಕೆಬಿ ಗಾತ್ರದ ಐ ಟೆಲ್ ನ ಸಾಫ್ಟ್ ವೇರ್ [^] ಅಳವಡಿಸಿಕೊಳ್ಳಬೇಕಾಗುತ್ತದೆ.

ಇದನ್ನು ಬಳಸಿ ವಿದೇಶೀ ಮೊಬೈಲ್ ಅಥವಾ ಲ್ಯಾಂಡ್ ಲೈನ್ ನಂಬರಿಗೆ ಕರೆ ಮಾಡಬಹುದಾಗಿದೆ. ಈಗ ಅಮೆರಿಕಾಗೆ ಕರೆ ಮಾಡುವ ದರ ನಿಮಿಷಕ್ಕೆ 8-10 ರೂಪಾಯಿಗಳಾಗಿದ್ದು 3ಜಿ ಸೇವೆ ಯ ಇಂಟರ್ ನೆಟ್ ಬಳಸಿದರೆ ಕೇವಲ ಒಂದು ರುಪಾಯಿ ಆಗಲಿದೆ.

ಗ್ಲೋಬಲ್ ಮಾರ್ಕೆಟಿಂಗ್ ಸ್ಟ್ರಾಟಜಿಯ ಅಂಗ ಸಂಸ್ಥೆ ರೀವ್ 50ಕ್ಕೂ ಹೆಚ್ಚು ದೇಶಗಳಲ್ಲಿ 1,200 ಇಂಟರ್ ನೆಟ್ ಸರ್ವೀಸ್ ಪ್ರೊವೈಡರ್ ಗಳನ್ನು ಹೊಂದಿದ್ದು, 50 ದೇಶಗಳ 30 ಮಿಲಿಯನ್ ಗೂ ಅಧಿಕ ಗ್ರಾಹಕರು ಈ ಸಂಬಂಧ ಸಾಫ್ಟ್ ವೇರ್ ಅಳವಡಿಸಿಕೊಂಡಿದ್ದಾರೆ.

ಈ ಹಿಂದೆ ಅಮೆರಿಕಾದ ಎಟಿ ಟಂಡ್ ಟಿ ಯ ಗ್ರಾಹಕರು ಐಫೋನ್ ಮೂಲಕ ವೈ ಫೈ ಸೇವೆ ಬಳಸಿಕೊಂಡು ಅಂತಾರಾಷ್ಟ್ರೀಯ ಕರೆ ಮಾಡುತ್ತಿದ್ದರು.ಗ್ರಾಹಕರ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಟಿ ಅಂಡ್ ಟಿ ತನ್ನ ಗ್ರಾಹಕರಿಗೆ ಐ ಫೋನ್ ವಿಒಐಪಿ(VoIP) ಸೌಲಭ್ಯದ ಮೂಲಕ ಕರೆ ಮಾಡುವ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಸಿಂಗಪುರ ಮೂಲದ ರೀವ್, ಭಾರತ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ನಲ್ಲಿ ಕಚೇರಿಗಳನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗೆ..

ಬುಧವಾರ, ಆಗಸ್ಟ್ 18, 2010

ನೀರಿಲ್ಲದೆ ಬಟ್ಟೆ ತೊಳೆಯುವ ಗೋದ್ರೇಜ್ ವಾಷಿಂಗ್ ಮೆಷಿನ್!

ಬಟ್ಟೆ ತೊಳೆಯಲು ನೀರಿಲ್ಲದಿದ್ದರೆ ಹೇಗೆ ಹೇಳಿ. ವಾಷಿಂಗ್ ಮೆಶಿನ್‌ನಲ್ಲೂ ಅಷ್ಟೆ, ನೀರಿಲ್ಲದಿದ್ದರೆ ಅದು ಬಟ್ಟೆಯನ್ನು ಹೇಗೆ ತೊಳೆದೀತು ಹೇಳಿ? ಆದರೆ ಇದೀಗ ಅಂಥ ಅಸಾಧ್ಯವೂ ಸಾಧ್ಯವಾಗಿದೆ. ಗೋದ್ರೇಜ್ ಕಂಪನಿ ದೇಶದಲ್ಲೇ ಇದೇ ಮೊದಲ ಬಾರಿಗೆ ನೀರು ಬಳಸದೇ ಬಟ್ಟೆ ತೊಳೆಯುವ ವಾಷಿಂಗ್ ಮೆಷಿನನ್ನು ಬಿಡುಗಡೆ ಮಾಡಿದೆ!

ಹೌದು. ಇದು ಆಶ್ಚರ್ಯವಾದರೂ ಸತ್ಯ. ನೀರು ಬಳಸದೆ ಬಟ್ಟೆಗಳನ್ನು ಓರೆನ್ ತಂತ್ರಜ್ಞಾನ ಆಧಾರಿತ ವಾಷಿಂಗ್ ಮೆಷಿನನ್ನು ಗೋದ್ರೆಜ್ ಕಂಪೆನಿ ತಯಾರಿಸಿದೆ. ಅಂದಹಾಗೆ, ಈ ನೀರು ಬಳಸದೆ ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ರೂ 24,990ರಿಂದ 27,990 ರೂಪಾಯಿಗಳ ಬೆಲೆಯಲ್ಲಿ ದೊರೆಯುತ್ತದೆ.
ಇಯಾನ್ ಇರ್ಗೋಜ್ ವಾಷಿಂಗ್ ಮೆಷಿನ್ ಬ್ರಾಂಡ್ ಅಡಿ ಓರೆನ್ ಕ್ಲೀನ್ ವಾಷಿಂಗ್ ಮೆಷಿನ್ ಎನ್ನುವ ಈ ವಾಷಿಂಗ್ ಮೆಷಿನ್ ಜೊತೆಗೆ ಟರ್ಬುಲೇಟರ್ ಮಾಡೆಲ್ ಕೂಡಾ ಬಿಡುಗಡೆ ಮಾಡಲಾಗಿದೆ. ಈ ಟರ್ಬುಲೆಟರ್ ಮಾಡೆಲ್ ವಾಷಿಂಗ್ ಮೆಷಿನ್‌ನಲ್ಲಿ ಕಡಿಮೆ ನೀರು ಹಾಗೂ ವಿದ್ಯುತ್ ಬಳಸಿ ಬಟ್ಟೆಯನ್ನು ಸ್ವಚ್ಛಗೊಳಿಸಬಹುದಾಗಿದೆ.

ಮಂಗಳವಾರ, ಆಗಸ್ಟ್ 17, 2010

ದುಬೈನ ಹೋಟೆಲ್ ಬುರ್ಜ್ ಅಲ್ ಅರಬ್ ಒಮ್ಮೆ ನೋಡಿ ಬರೋಣ ಬನ್ನಿ……

 ಜಗತ್ತಿನ ಐಶಾರಾಮಿ ಹೊಟೇಲುಗಳಲ್ಲಿ ಒಂದಾದ ಬುರ್ಜ್ ಅಲ್ ಅರಬ್  ಅನ್ನು  ಸಂದರ್ಶಿಸಿ  ಅಲ್ಲಿ  ವಾಸಿಸುವುದು ಮಧ್ಯಮ ವರ್ಗದ ಜನರಿಗೆ ಅಷ್ಟೇನೂ ಸುಲಭವಲ್ಲ. ಬುರ್ಜ್ ಅಲ್ ಅರಬ್ ಹೋಟೆಲಿನ ಚಿತ್ರಗಳು ಇಂತಿವೆ. 
Filed under: ಗಲ್ಫ್ ಸುದ್ಧಿಗಳು

ಬುಧವಾರ, ಆಗಸ್ಟ್ 11, 2010

ಆಟೋದವ್ರು ಬರಲ್ವೇ?: 12ರಂದು ‘ಮೀಟರ್‌ಜಾಮ್’! August 11, 2010


ರಾಜ್ಯದ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹೆಚ್ಚಿನ ಆಟೋ ಚಾಲಕರ ದುರ್ವರ್ತನೆ, ಸುಲಿಗೆ ಮುಂತಾದವುಗಳ ಬಗ್ಗೆ ಸಾಕಷ್ಟು ಆಗೀಗ್ಗೆ ಕೇಳುತ್ತಿರುತ್ತೇವೆ. ಜನರ ಓಡಾಟಕ್ಕೆ ಲೋಕಲ್ ರೈಲುಗಳಿಲ್ಲದಿರುವ ಮಹಾನಗರಗಳಲ್ಲಿ ಆಟೋ ರಿಕ್ಷಾಗಳು ಅನಿವಾರ್ಯ ಎಂಬ ಹಂತಕ್ಕೆ ತಲುಪಿರುವುದರಿಂದಾಗಿ ಈ ಪರಿಸ್ಥಿತಿ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಸುಲಿಗೆಕೋರ ಆಟೋಗಳ ವಿರುದ್ಧದ ‘ಆಟೋ ಬಹಿಷ್ಕಾರ’ ಆಂದೋಲನವೊಂದು ಆನ್‌ಲೈನ್ ಜಗತ್ತಿನಲ್ಲಿ ನಲಿದಾಡುತ್ತಿದೆ.
ಮುಂಬೈಯ ಆಟೋ ಚಾಲಕರು ಹಾಗೂ ದೆಹಲಿಯ ಆಟೋ ಚಾಲಕರ ವಿರುದ್ಧ ಆರಂಭವಾಗಿರುವ ಈ ಆಂದೋಲನವು ಬೆಂಗಳೂರಿಗೆ ಕೂಡ ತಲುಪಿದೆ ಎಂದರೆ ಪ್ರಯಾಣಿಕರು ಎಷ್ಟರ ಮಟ್ಟಿಗೆ ಈ ಆಟೋವಾಲಗಳಿಂದ ರೋಸಿ ಹೋಗಿರಬಹುದು? ನೀವೇ ಯೋಚಿಸಿ.
ಈ ಆಟೋ ಬಹಿಷ್ಕಾರದ ಮುಖ್ಯ ಉದ್ದೇಶ ಕರೆದಲ್ಲಿಗೆ ‘ಬರುವುದಿಲ್ಲ’ ಎಂದು ಉದ್ಧಟತನ ತೋರುವ ಆಟೋಗಳ ವಿರುದ್ಧ. ಈ ಆಂದೋಲನದ ಹೆಸರು ಮೀಟರ್ ಜಾಮ್. ಬರಲು ನಿರಾಕರಿಸುವ ಮತ್ತು ಬಾಯಿಗೆ ಬಂದಂತೆ ದರ ಹೇಳುವ ರಿಕ್ಷಾ ಚಾಲಕರ ವಿರುದ್ಧ ನಡೆಯುತ್ತಿರುವ ಈ ಆಂದೋಲನಕ್ಕಾಗಿಯೇ ಮೀಟರ್‌ಜಾಮ್ ಡಾಟ್ ಕಾಂ ಎಂಬ ಸೈಟನ್ನೂ ತೆರೆಯಲಾಗಿದೆ.
ಈ ಸೈಟಿಗೆ ಹೋಗಿ ನೋಡಿದರೆ, ಆಗಸ್ಟ್ 12ರಂದು ಮೀಟರ್ ಜಾಮ್ ಆಂದೋಲನ ನಡೆಯಲಿದ್ದು, ಈ ರೀತಿಯಾಗಿ ‘ಬರಲೊಲ್ಲೆ’ ಎಂದು ಹೇಳುವ ಆಟೋಗಳು ಮತ್ತು ಟ್ಯಾಕ್ಸಿಗಳಿಗೇ ‘ನೋ’ ಹೇಳಬೇಕು ಎಂದು ಪಣ ತೊಟ್ಟ ಹದಿಮೂರುವರೆ ಸಾವಿರ ಮಂದಿ ಮೀಟರ್ ಜಾಮ್‌ನ ಫೇಸ್‌ಬುಕ್ ಪುಟದಲ್ಲಿದ್ದಾರೆ. ಅಂತೆಯ ಟ್ವಿಟರ್‌ನಲ್ಲಿಯೂ ಇದು ಸುಳಿದಾಡುತ್ತಿದೆ.
ಈ ಅಂತರಜಾಲ ತಾಣವು ಐದಾರು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ. ಫೇಸ್‌ಬುಕ್ ನೋಡಿದರೆ, ಅಲ್ಲಿ ರೋಷಾವೇಷಗೊಂಡಿರುವ ಆಟೋ ಪ್ರಯಾಣಿಕರು, ಈ ಆಂದೋಲನದ ಕುರಿತು ರಸ್ತೆಗಳಲ್ಲಿಯೂ ಪ್ರಚಾರ ಮಾಡಿ, ಆಟೋ ಚಾಲಕರಿಗೆ ಬಿಸಿ ಮುಟ್ಟಿಸಬೇಕಾಗಿದೆ.

ಶನಿವಾರ, ಆಗಸ್ಟ್ 7, 2010

ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ

ಕರ್ನಾಟಕದ ತಾಜಾ ಸುದ್ದಿಗಳನ್ನು ತಕ್ಷಣ ತಿಳಿಯಲು ಮರುದಿನ ದಿನಪತ್ರಿಕೆ ಬರುವವರೆಗೆ ಕಾಯಬೇಕಿಲ್ಲ, ಆಫೀಸಿಗೆ ಹೋಗಿ ಇಂಟರ್ನೆಟ್ [^] ಬ್ರೌಸ್ ಮಾಡಬೇಕಿಲ್ಲ. ಟಿವಿಗಳ ಅರುಚುವಿಕೆಗೆ ಕಿವಿಗೊಡಬೇಕಿಲ್ಲ! ಅವರಿವರನ್ನು ಕೇಳಬೇಕಾಗಿಲ್ಲ. ಅಂಗೈಯಲ್ಲೇ ಇರುವ ನಿಮ್ಮ ಮೊಬೈಲಿನಲ್ಲಿ ಕನ್ನಡ ಸುದ್ದಿ [^] ಸ್ವಾರಸ್ಯಗಳು ಆಗಾಗ ಬಂದು ಬಾಗಿಲು ತಟ್ಟುವ ಸೌಲಭ್ಯ ಇರುವಾಗ ಅನ್ಯಥಾ ಚಿಂತೆಯಿಲ್ಲ. ಇದು ಹೇಗೆ ಸಾಧ್ಯವಾಗುತ್ತದೆ? ಅದೂ ಕನ್ನಡ [^] ಭಾಷೆಯಲ್ಲೇ ಹೇಗೆ ಸಾಧ್ಯ? ತಂತ್ರಜ್ಞಾನದ ಬೆಳಕಿನಲ್ಲಿ ಕನ್ನಡದ ಹೂವುಗಳು ಅರಳುತ್ತಿರುವ ಒಂದು ಹೊಸ ಕಥೆ ಹೀಗಿದೆ :

ಮೊಬೈಲ್ ಬಳಕೆದಾರರಿಗೆ ದಟ್ಸ್ ಕನ್ನಡ [^] ಸುದ್ದಿ ಸಮಾಚಾರಗಳನ್ನು ತಲುಪಿಸುವ ಹೊಸ ಸೇವೆಯನ್ನು ಮೈಟುಡೆ.ಕಾಂ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಿದೆ. ಇಡೀ ಜಗತ್ತಿನ ಆಗುಹೋಗುಗಳ ಬಗ್ಗೆ ಮೊಬೈಲಿಗೆ ಬಂದು ಬೀಳುವ ಸಂದೇಶಗಳ ಮುಖಾಂತರ ನೀವು ಎಲ್ಲೇ ಇದ್ದರೂ ತಿಳಿಯಬಹುದು. ಕನ್ನಡ ಭಾಷೆಯಲ್ಲಿ ಸುದ್ದಿಗಳು ಮಾತ್ರವಲ್ಲ ಸಿನೆಮಾ ಜಗತ್ತಿನ ಸ್ವಾರಸ್ಯಕರ ಸಂಗತಿಗಳು ನಿಮಗೆ ತಿಳಿಯಲಿವೆ.

ಈ ಸಂದೇಶಗಳ ವಿಶೇಷತೆಯೇನೆಂದರೆ, ನಿಮ್ಮ ಬಳಿ ಇಂಟರ್ನೆಟ್ ಮೊಬೈಲ್ ಇದ್ದರೆ ಸಂದೇಶಗಳ ಜೊತೆ ಇರುವ ಲಿಂಕ್ ಕ್ಲಿಕ್ ಮಾಡಿ ಸುದ್ದಿಯ ಸಂಪೂರ್ಣ ವಿವರ ಪಡೆಯಬಹುದು. ಕಚೇರಿಯಲ್ಲೇ ಇರಿ, ಬೈಕ್ ಮೇಲೆ ಓಡಾಡುತ್ತಲೇ ಇರಿ, ತಾಜಾ ತಾಜಾ ಸುದ್ದಿಗಳನ್ನು ನಿಮ್ಮದಾಗಿಸಿಕೊಳ್ಳಿರಿ.

ಈ ಸೇವೆಗೆ ಚಂದಾದಾರರಾಗಲು ಅಗತ್ಯವಿರುವ ಶುಲ್ಕವನ್ನು ತಿಳಿದರೆ ಹೌಹಾರಿ ಬೀಳುತ್ತೀರಿ! ತಿಂಗಳಿಗೆ ಬರೀ ಐದು ರು. ವರ್ಷಕ್ಕೆ 60 ರು. ಮಾತ್ರ! ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಕ್ಲಿಕ್ ಮಾಡಿ. http://blog.mytoday.com/faqs/#pay

ಕನ್ನಡ ಸುದ್ದಿಗಳಿಗೆ ಚಂದಾದಾರರಾಗುವುದು ಸುಲಭ

ಮೊಬೈಲ್ ಮೂಲಕ ONE-KNNEWS ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ http://bit.ly/cFlxf1

ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. 15 ದಿನಗಳ ಉಚಿತ ಸೇವೆಯನ್ನು ಪಡೆಯಲು ಕೂಡಲೇ ಚಂದಾದಾರರಾಗಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.

ನಿಮ್ಮ ಮೊಬೈಲಲ್ಲಿ ಕನ್ನಡ ಲಿಪಿಗೆ ಬೆಂಬಲವಿದೆಯೇ ಈ ಕೊಂಡಿಯನ್ನು ಕ್ಲಿಕ್ಕಿಸಿ ಪರೀಕ್ಷಿಸಿ.

ಮರೆಯದಿರಿ : ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿರಿ
ದಟ್ಸ್ ಕನ್ನಡದ ಟ್ವೀಟ್‌ಕನ್ನಡಕ್ಕೆ ಸುಸ್ವಾಗತ

ಶುಕ್ರವಾರ, ಆಗಸ್ಟ್ 6, 2010

ಚೀನಾದಲ್ಲಿ ಕಾರುಗಳ ಮೇಲಿನಿಂದ ಹೋಗುವ ಬಸ್ಸುಗಳು

 
ಬೀಜಿಂಗ್: ತಂತ್ರಜ್ಞಾನದಲ್ಲಿ ಒಂದಲ್ಲ ಒಂದು ವಿಷಯದಲ್ಲಿ  ಸದಾ ಮುಂದಿರುವ ಚೀನಾ ಇದೀಗ ಕಾರುಗಳ ಮೇಲಿನಿಂದ ಹೋಗುವ ಬಸ್ಸುಗಳನ್ನು ತಯಾರಿಸುತ್ತಿದೆ. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಶೇ ೩೦ ರಷ್ಟು ಕಡಿಮೆಯಾಗುತ್ತದೆ ಎಂಬುವುದು ಇಲ್ಲಿನ ತಂತ್ರಜ್ಞರ ಅಭಿಪ್ರಾಯ. ಈ ಬಸ್ಸು ಗಂಟೆಗೆ ೬೦ ಕಿ.ಮೀ. ವೇಗದಲ್ಲಿ ಚಲಿಸಲಿದ್ದು ಇದರ ಮೇಲ್ಭಾಗದಲ್ಲಿ ಪ್ರಯಾಣಿಕರಿರುತ್ತಾರೆ. ಕೆಲ ಭಾಗದಲ್ಲಿ ಸಂಪೂರ್ಣ ರಸ್ತೆ ಇದ್ದು ಇದರೊಳಗಿನಿಂದ ಇತರ ಕಾರುಗಳು ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು. ಈ ಬಸ್ಸಿನಲ್ಲಿ ಏಕಕಾಲಕ್ಕೆ ೧೪೦೦ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಅಬ್ಬಾ:!!!! ಚೀನಾದ ಇಂಜಿನಿಯರುಗಳು ಇನ್ನೂ ಏನೇನನ್ನು ಕಂಡು ಹಿಡಿಯುತ್ತಾರೋ ?.

ಭಾನುವಾರ, ಆಗಸ್ಟ್ 1, 2010

ಒಂದೇ ಸೂರಿನಲ್ಲಿ ನೂರೆಂಟ್ ತಾಣ ( 101ನೇ ಪೋಸ್ಟ್)

ಅಂತರ್ಜಾಲವೆಂಬ ಜ್ಞಾನಕೋಶಕ್ಕೆ ಹೋಗುವವರು ಮೊದಲು ನುಗ್ಗುವುದು ಗೂಗಲ್ ಎಂಬ ಹುಡುಕಾಟದ ಹುತ್ತಕ್ಕೆ. ನಿಮಗೆ ಬೇಕಿರುವ ವಿಷಯಗಳಿಗೆ ಸಂಬಂದಿಸಿದ ವೆಬ್ ಸೈಟ್ ಹುಡುಕಲು ಇದೇ ಆಧಾರ. ಹಾಗಂತ ಹುಡುಕಾಟಕ್ಕಿರೊದು ಅದು ಒಂದೇ ತಾಣ ಅಲ್ಲ. ಅಂತ ಹತ್ತೆಂಟು ತಾಣಗಳಿವೆ. ಅವೆಲ್ಲದರ ಮಾಹಿತಿ ಒಂದೇ ಕಡೆ ಸಿಕ್ಕರೆ ಅದೆಷ್ಟು ಸಂತೋಷವಾಗುತ್ತೆ ಅಲ್ವಾ? ಹೌದು, ಎಲ್ಲಾ ಪತ್ರಿಕೆಗಳ ಸಂಗ್ರಹವನ್ನು ಹೊಂದಿರುವ ತಾಣವಿದೆ, ಅಲ್ಲಿಗೆ ಬೇಟಿನೀಡಿದರೆ, ನೀವು ನಿತ್ಯವೂ ನೂರಾರು ಪತ್ರಿಕೆ ಓದಬಹುದು, ಜಗತ್ತಿನ ಪ್ರವಾಸಿಗರಿಗ ಮಾರ್ಗಸೂಚಿ ವಿವರಿಸುವ ತಾಣಗಳನ್ನು ಹಿಡಿದಿಟ್ಟುಕೊಂಡಿರುವ ಒಂದು ಸೈಟ್ ಇದೆ. ಪೋಟೋಶಾಪ್, ನಿಕಾನ್.....ಮೊದಲಾದುವುಗಳನ್ನು ಹೊರತುಪಡಿಸಿ ಬೇರೆ ಉಚಿತ ಪೋಟೊ ಎಡಿಟಿಂಗ್ ಸಾಪ್ಟ್ ವೇರ್ ಇದೇ ಎಂಬುದನ್ನು ತಿಳಿದುಕೊಳ್ಳಬಹುದು. ಅಂತರ್ಜಾಲ ಗ್ರಂಥಾಲಯಕ್ಕೆ ಹೋಗುವ ಹಾದಿ ಅಲ್ಲಿದೆ. ಹೀಗೆ ನಮ್ಮ ಅಗತ್ಯಗಳನ್ನು ಪೋರೈಸುವ ಅನೇಕ ತಾಣಗಳ ಸಂಗ್ರಹವನ್ನು ನೀವು http://interestingwebsitecollection.blogspot.com/ ನಲ್ಲಿ ಕಾಣಬಹುದು, ಕುತೂಹಲಕಾರಿ ವಿಡಿಯೋ ವೀಕ್ಷಿಸಲು ಯುಟ್ಯೂಬ್ ಮಾತ್ರ ನಮಗೆ ಗೊತ್ತು. ಆದರೆ ಅದನ್ನು ಹೊರತುಪಡಿಸಿ ಬ್ಲಿಪ್ ಟಿವಿ, ಸ್ಟೇಜ್ 6 ಮೊದಲಾದ ಸೇವಾ ಪ್ರವರ್ತಕರು ಇದ್ದಾರೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ . ಇಂಥ ಅನೇಕ ಕುತೂಹಲಕಾರಿ ಸಂಗತಿಗಳನ್ನು ಈ ಬ್ಲಾಗ್ ಹೊಂದಿದೆ. ಒಂದೇ ವಿಚಾರಕ್ಕೆ ಸಂಬಧಿತ ಮಾಹಿತಿ ಸಂಗ್ರಹಿಸಿರುವ ವೆಬ್ ಸೈಟ್ ಮತ್ತು ಅದರ ಲಿಂಕ್ ಗಳು ಇದರಲ್ಲಿವೆ. ಓಳ ಹೊಕ್ಕರೆ ನಿಜಕ್ಕೂ ಇದೊಂದು ಅದ್ಬುತ ಪ್ರಪಂಚ ಒಂದ್ಸಲ ಬೇಟಿ ನೀಡಿ.
ಮಾಹಿತಿ ಸಂಗ್ರಹ. 31-7-2010 ವಿ.ಕ.