ಶುಕ್ರವಾರ, ಸೆಪ್ಟೆಂಬರ್ 24, 2010

ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್


ಜನಾಗ್ರಹ ಸಂಘಟನೆಯು ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್ ( ಐ ಪೇಡ್ ಎ ಬ್ರೈಬ್ .ಕಾಮ್)  ಆರಂಭಿಸಿದೆ. 
ಯಾವ ಇಲಾಖೆಯ ಅಧಿಕಾರಿಗೆ ಎಷ್ಟು ಲಂಚ ನೀಡಲಾಗಿದೆ ಇತ್ಯಾದಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಬರೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟನೆಯ ಸಹಸ್ಥಾಪಕಿ ಸ್ವಾತಿ ರಾಮನಾಥನ್ ಮತ್ತು ಸಮನ್ವಯಕಾರ ಟಿ.ಆರ್.ರಘುನಂದನ್ ತಿಳಿಸಿದ್ದಾರೆ.
ಕಾರು ಹಾಗೂ ಇತರ ವಾಹನಗಳ ನೋಂದಣಿ ಮಾಡುವಾಗ, ಆಪರ್ಟ್ ಮೆಮಟ್ ಮಾರಾಟಕ್ಕೆ ಅಗತ್ಯವಿರುವ ಸರ್ಟಿಫಿಕೇಟ್ ಅಥವಾ ಮತ್ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರಿ ಸಿಬ್ಬಂದಿಗೆ ಲಂಚ ನೀಡಿರಬಹುದು. ಈ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು  ( ಐ ಪೇಡ್ ಎ ಬ್ರೈಬ್ .ಕಾಮ್) ಆರಂಭಿಸಲಾಗಿದೆ.
ಈ ವೆಬ್ ಸೈಟ್ ಅನ್ನು ವಿಶ್ವಾದ್ಯಾಂತ ಸಾವಿರಾರು ಜನರು ವೀಕ್ಷಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಪಿಡುಗು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶ್ವಾದ್ಯಂತ ಈ  ಸಮಸ್ಯೆ ಇದೆ ಎಂಬುದು ಇದರಿಂದ ಗೊತ್ತಾಗಲಿದೆ.
ನೀವೂ ಸಹ ಈ ಆಂದೋಲನದಲ್ಲಿ ಭಾಗವಹಿಸಿ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಬಾರದೇಕೆ ?.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ