ಗುರುವಾರ, ಸೆಪ್ಟೆಂಬರ್ 9, 2010

ಎಡ್ವರ್ಡ್ ನಿನೋ ಈಗ ವಿಶ್ವದಲ್ಲಿರುವ ಅತ್ಯಂತ ಕುಳ್ಳ ವ್ಯಕ್ತಿ

ಕೊಲಂಬಿಯಾದ 24ರ ಹರೆಯದ ಎಡ್ವರ್ಡ್ ನಿನೋ ಎಂಬಾತನಿಗೆ ಡ್ಯಾನ್ಸ್ ಮಾಡುವುದು, ಮರ್ಸಿಡೆಸ್ ಕಾರಿನ ಒಡೆಯನಾಗುವುದು ಹಾಗೂ ಇಡೀ ವಿಶ್ವವನ್ನು ಸಂಚರಿಸುವುದು ಈತನ ಕನಸುಗಳಾಗಿವೆ. ಆದರೆ ಈತನ ವಿಶೇಷತೆ ಏನಪ್ಪಾ ಅಂದರೆ, ಈತ ಕೇವಲ 27 ಇಂಚು ಎತ್ತರವಿರುವುದು!

ಎಡ್ವರ್ಡ್ ನಿನೋ ಈಗ ವಿಶ್ವದಲ್ಲಿರುವ ಅತ್ಯಂತ ಕುಳ್ಳ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಈತನ ಹೆಸರು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಈ ಮೊದಲು 1.5 ಇಂಚು ಎತ್ತರವಿದ್ದ ಚೀನಾದ ಹೆ ಪಿಂಗ್‌ಪಿಂಗ್ ಕಳೆದ ಮಾರ್ಚ್‌ನಲ್ಲಿ ಸಾವನ್ನಪ್ಪಿದ್ದ.
ನಿನೋ ಎತ್ತರದಲ್ಲಿ ಮಾತ್ರ ಕುಳ್ಳನಾಗಿರಬಹುದು ಆದರೆ ಈತನ ಆಸೆಗಳೇನೂ ಕಡಿಮೆ ಇಲ್ಲ, ಪ್ರತಿಷ್ಠಿತ ವ್ಯಕ್ತಿಗಳಾದ ಜಾಕಿ ಚಾನ್, ಸಿಲ್ವೆಸ್ಟರ್ ಸ್ಟಾಲ್ಲೊನ್ ಹಾಗೂ ಕೊಲಂಬಿಯಾ ಅಧ್ಯಕ್ಷ ಅಲ್ವಾರೋ ಉರಿಬೆ ಅವರನ್ನು ಭೇಟಿಯಾಗಬೇಕೆಂಬ ಕನಸನ್ನು ಹೊತ್ತಿದ್ದಾನೆ.
27 ಇಂಚು ಎತ್ತರವಿರುವ ಕುಳ್ಳ ನಿನೋ ಕೇವಲ ಹತ್ತು ಕಿಲೋ ಗ್ರಾಂ ಭಾರವನ್ನು ಮಾತ್ರ ಹೊತ್ತೊಯ್ಯಬಲ್ಲ. ನಿನೋನನ್ನು ವಿಶ್ವದ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನೆಸ್ ದಾಖಲೆ ಈಗಾಗಲೇ ಅಧಿಕೃತವಾಗಿ ಘೋಷಿಸಿದೆ.
ಆದರೆ ನಿನೋ ಅತ್ಯಂತ ಕುಬ್ಜನಾಗಿರುವುದಕ್ಕೆ ಕಾರಣ ಏನು ಎಂದು ವೈದ್ಯರು ಈವರೆಗೂ ಯಾವುದೇ ವಿಷಯವನ್ನು ವಿವರಿಸಿಲ್ಲವಂತೆ, ಅಷ್ಟೇ ಅಲ್ಲ ನಿನೋಗೆ ಯಾವ ಖಾಯಿಲೆಯೂ ಬಂದಿಲ್ಲ ಎಂದು ಆತನ ತಾಯಿ ನೋಯಿಮಿ ಹೆರ್ನಾಡೆಜ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನೋಯಿಮಿ ಹೆರ್ನಾಡೆಜ್‌ ದಂಪತಿಗಳಿಗೆ ಒಟ್ಟು ಐದು ಮಂದಿ ಮಕ್ಕಳು ಅವರಲ್ಲಿ 11ರ ಹರೆಯದ ಮಿಗ್ಯುಯೆಲ್ ಆಂಗೆಲ್ ಕೂಡ 37 ಇಂಚು ಎತ್ತರವಿದ್ದು, ಸುಮಾರಾಗಿ ನಿನೋನನ್ನೇ ಹೋಲುತ್ತಾನಂತೆ, ಉಳಿದ ಮೂವರು ಗಂಡು ಮಕ್ಕಳ ಎತ್ತರ ಕೂಡ ಸಾಧಾರಣವಾಗಿಯೇ ಇದೆ. ಹಿರಿಯ ನಿನೋ 27 ಇಂಚು ಎತ್ತರದ ಮೂಲಕ ವಿಶ್ವದ ಕುಳ್ಳ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ