ಶುಕ್ರವಾರ, ಸೆಪ್ಟೆಂಬರ್ 24, 2010

ಉಚಿತ ಕನ್ನಡ ತಂತ್ರಾಂಶಗಳು


ಕಂಪ್ಯು ಕ್ವಿಜ್ (ಕನ್ನಡದಲ್ಲಿ ಕ್ವಿಜ್ ಕಾರ್ಯಕ್ರಮ)
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಕಂಪ್ಯು-ಕ್ವಿಜ್ ಕಾರ್ಯಕ್ರಮದಲ್ಲಿ ನಿಮಗೆ ಗಣಕ ಕ್ಷೇತ್ರಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ೪ ಆಯ್ಕೆಗಳನ್ನು ಕೊಡಲಾಗುತ್ತದೆ, ಸರಿಯಾದ ಆಯ್ಕೆಯನ್ನು ಆಯ್ದಲ್ಲಿ ನಿಮಗೆ ೧೦ ಅಂಕಗಳು ಲಭಿಸುತ್ತವೆ. ಈ ಕಾರ್ಯಕ್ರಮದಿಂದ ನಿಮ್ಮ ಗಣಕ ಕ್ಷೇತ್ರದ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ
ಗಣಕ ಉದ್ಘಾಟನಾ ತಂತ್ರಾಂಶ
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಮತ್ತು ವಿವಿಧ ಕಾರ್ಯಕ್ರಮದಲ್ಲಿ ಗಣ್ಯರಿಂದ ಗಣಕ ಯಂತ್ರಗಳನ್ನು ಉದ್ಘಾಟಿಸುತ್ತಾರೆ ಆಗ ಕೇವಲ ರಿಬ್ಬನ್ ಅನ್ನು ಕತ್ತರಿಸುವ ಮೂಲಕ ಈ ಉದ್ಘಾಟಿಸಲಾಗುತ್ತದೆ. ಇದರ ಜೊತೆಗೆ ಕಾರ್ಯಕ್ರಮಕ್ಕೆ ಬಂದ ಗಣ್ಯರಿಗೆ ಗಣಕ ಪರದೆಯ ಮೇಲೆ ಜ್ಯೋತಿ ಬೆಳಗಿಸುವ ಅವಕಾಶ ನೀಡಿದರೆ ಆ ಕಾರ್ಯಕ್ರಮಕ್ಕೆ ಮತ್ತಷ್ಟೂ ಮೆರಗು ಬರುತ್ತದೆ. ಎಂದರೆ "ಗಣಕವನ್ನು ಉದ್ಘಾಟಿಸುವಾಗ ಗಣಕ ಯಂತ್ರದ ಪರದೆಯ ಮೇಲೆ ಜ್ಯೋತಿಯನ್ನು ಬೆಳಗಿಸುವುದೇ ಈ ತಂತ್ರಾಂಶದ ಮುಖ್ಯ ಉದ್ದೇಶ".
ಕನ್ನಡ ಹಾರ್ಡ್‌ಡಿಸ್ಕ್ ವಿಜೆಟ್ ೧.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಕನ್ನಡ ಹಾರ್ಡ್ ಡಿಸ್ಕ್ ವಿಜೆಟ್‌ ಒಂದು ಉಚಿತ ತಂತ್ರಾಂಶವಾಗಿದ್ದು ಇದರಿಂದ ನೀವು ಸುಲಭವಾಗಿ ಹಾರ್ಡ್ ಡಿಸ್ಕ್‌ಗಳನ್ನು ತೆಗೆಯಬಹುದು. ಇದು ಚಿಕ್ಕ ತಂತ್ರಾಂಶವಾಗಿದ್ದು ಉಪಯುಕ್ತವಾಗಿದೆ.
ದಿನ ಮಾಹಿತಿ ೩.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ದಿನ ಮಾಹಿತಿ ತಂತ್ರಾಂಶದಿಂದ ನೀವು ಸಮಯ, ದಿನಾಂಕ ಮತ್ತು ವಾರ ಇವುಗಳನ್ನು ಕನ್ನಡದಲ್ಲಿ ನೋಡಬಹುದು ಮತ್ತು ಆ ದಿನದ ವಿಶೇಷತೆಯನ್ನು ನೋಡಬಹುದು (ಉದಾ: "ಇಂದು ಕ್ರೀಡಾ ದಿನ"). ಪ್ರತೀ ಗಂಟೆಗೊಮ್ಮೆ ಇದು ಸಮಯವನ್ನು ತೋರಿಸಿ ಶುಭಾಶಯವನ್ನು ಸೂಚಿಸುತ್ತದೆ.
Dina Maahiti Screenshot
ಕನ್ನಡ ಜಾಲತಾಣ ನಿರ್ವಾಹಕ ೨.೦.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಕನ್ನಡ ಜಾಲತಾಣ ನಿರ್ವಾಹಕ ತಂತ್ರಾಂಶದಲ್ಲಿ ತಾವು ಜಾಲತಾಣ ವಿಳಾಸ (Website URLs) ಗಳನ್ನು ಉಳಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಇದರಲ್ಲಿ ತಾವು ಆ ಜಾಲತಾಣದ ವಿ-ಅಂಚೆ ಮತ್ತು ರೇಟಿಂಗ್ ಅನ್ನೂ ಸಹ ಉಳಿಸಿಕೊಳ್ಳಬಹುದು
Kannada Jaalataana Nirvahahaka
ಗಣಕ ನಿಘಂಟು ೨.೦.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಗಣಕ ನಿಘಂಟು ಈ ತಂತ್ರಾಂಶವು ಗಣಕ ಯಂತ್ರಕ್ಕೆ ಸಂಬಂಧಿಸಿದ ಆಂಗ್ಲ ಪದಗಳ ಕನ್ನಡದ ಅನುವಾದವನ್ನು ನೀಡುತ್ತದೆ. ಈ ಆವೃತ್ತಿಯಲ್ಲಿ ಸುಮಾರು ೧೦೨೯ ಪದಗಳಿದ್ದು ನೀವು ಬಯಸಿದ ಆಂಗ್ಲ ಶಬ್ದಕ್ಕೆ ೧ ರಿಂದ ೨ ಕನ್ನಡ ಅನುವಾದಿತ ಪದಗಳನ್ನು ಸೂಚಿಸುತ್ತದೆ.
Ganaka Nighantu

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ