ಗುರುವಾರ, ಅಕ್ಟೋಬರ್ 7, 2010

ಕೊನೆಗೂ ಬಂತು ಕೃತಕ ರಕ್ತ

ಬ್ರಿಟಿಷ್ ವಿಜ್ಞಾನಿಗಳು ಭ್ರೂಣದ ಕಾಂಡಕೋಶಗಳಿಂದ ಮಾನವ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು, ರಕ್ತ ವರ್ಗಾವಣೆ ಸಮಯದಲ್ಲಿ  ಅಗತ್ಯವಿರುವ ಕೃತಕ  `ಒ’  ನೆಗೆಟಿವ್ ರಕ್ತವನ್ನು ತಯಾರಿಸಲು ಅನುವು ಮಾಡಿಕೊಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪರ್ಯಾಯ ರಕ್ತವನ್ನು ತಯಾರಿಸುವ ಸಲುವಾಗಿ ಆರಂಭಿಸಲಾದ 300 ಲಕ್ಷ ಪೌಂಡ್ ವೆಚ್ಚದ ಸಂಶೋಧನಾ ಯೋಜನೆಯಡಿ ಈ ಮಹತ್ವದ ಯಶಸ್ಸನ್ನು ಸಾಧಿಸಲಾಗಿದೆ. ಭ್ರೂಣದ ಹೆಚ್ಚುವರಿ ಕಾಂಡಕೋಶಗಳ ನೆರವಿನಿಂದ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ಸನ್ನು ಸಾಧಿಸಲಾಗಿದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಕೃತಕ ಗರ್ಬಧಾರಣೆ ಕ್ಲಿನಿಕ್ಗಳಲ್ಲಿ ಬಳಸಿದ ನಂತರ ಉಳಿದಿದ್ದ ಸುಮಾರು 100ಕ್ಕೂ ಹೆಚ್ಚು ಭ್ರೂಣಗಳ ನೆರವಿನಿಂದ ಈ ಪ್ರಯೋಗವನ್ನು ನಡೆಸಲಾಗಿದೆ. ಈ ಭ್ರೂಣಗಳಿಂದ ಹಲವಾರು ಲೈನ್ಸ್ ಎಂಬ ಕಾಂಡಕೋಶಗಳನ್ನು ನಿರ್ಮಿಸಲಾಗಿದೆ. ಆರ್ಸಿ-7 ಎಂಬ ಲೈನನ್ನು, ಆಮ್ಲಜನಕವನ್ನು ಸಾಗಿಸುವ ಗುಣವುಳ್ಳ ಹಿಮೊಗ್ಲೋಬಿನ್ ಹೊಂದಿರುವ ಕೆಂಪು ರಕ್ತ ಕಣಗಳನ್ನಾಗಿ ಪರಿವರ್ತಿಸುವ ಮೊದಲು, ರಕ್ತದ ಕಾಂಡಕೋಶದೊಳಕ್ಕೆ ವರ್ಗಾವಣೆ ಮಾಡಲಾಗಿತ್ತು.
ಎಡಿನ್ಬರ್ಗ್ ನಲ್ಲಿನ ಸ್ಕಾಟಿಶ್ ನ್ಯಾಷನಲ್ ಬ್ಲಡ್ ಟ್ರಾನ್ಸ್ ಫ್ಯೂಷನ್ ಸರ್ವಿಸ್  ಸಂಸ್ಥೆಯ ನಿರ್ದೇಶಕ ಹಾಗೂ ಈ ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ. ಮಾರ್ಕ್  ಟರ್ನರ್ ಹೇಳಿದ್ದಾರೆ. ಭಾರಿ ಪ್ರಮಾಣದಲ್ಲಿ ಕೃತಕ ರಕ್ತ ನಿರ್ಮಾಣದಿಂದ ರಕ್ತದ ಕೊರತೆಯನ್ನು ನಿವಾರಿಸಬಹುದಾಗಿದೆ ಮತ್ತು ರಕ್ತ ವರ್ಗಾವಣೆ ಸಮಯದಲ್ಲಿ ರಕ್ತದ ದಾನಿಗಳು ಮತ್ತು ರಕ್ತವನ್ನು ಪಡೆಯುವವರಲ್ಲಿ ಯಾವುದೇ ರೀತಿಯ ಸೋಂಕನ್ನು ತಡೆಗಟ್ಟಲು ಸಹ ಇದು ಸಹಕಾರಿ ಎಂದು ಅವರು ಹೇಳಿದ್ದಾರೆ. ಭ್ರೂಣದ ಕಾಂಡಕೋಶಗಳ ಲೈನ್ಗಳಿಂದ ಕೆಂಪು ರಕ್ತ ಕಣಗಳನ್ನು ತಯಾರಿಸಬಹುದು ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಮೂರು ವರ್ಷಗಳ ಅಂತ್ಯದಲ್ಲಿ ನಾವು ಒಂದು ಪಿಂಟ್  ಉನ್ನತ ಮಟ್ಟದ, ಮಾನವ ರಕ್ತ ಸ್ವಭಾವದ ಎಲ್ಲ ಬಗೆಯ ಗುಣಲಕ್ಷಣಗಳನ್ನು ಹೊಂದಿರುವ ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ಪ್ರೊ.ಟರ್ನರ್ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ