ಸೋಮವಾರ, ಅಕ್ಟೋಬರ್ 4, 2010

`ಇ’-ದೆಂಥಾ ಲೋಕವಯ್ಯ…!


 `ಇ’-ದು ಕಂಪ್ಯೂಟರ್ ಏಜ್. ಸ್ಲೇಟು ಬಳಪ ಹಿಡಿಬೇಕಾದ ಪುಟಾಣಿ ಕೈಗಳೇ ಕೀಲಿಮಣೆ ಹಿಡ್ಕೊಂಡು ಅಕ್ಷರಾಭ್ಯಾಸ ಮಾಡ್ತಿವೆ. ಅಂದ ಮೇಲೆ ಇದನ್ನೆಲ್ಲಾ ಅರೆದು ಕುಡಿದಿರೋ ಸೀನಿಯರ್ಸ್ ಹೊಸ್ ಹೊಸ್ದಾಗಿ ಏನಾನ್ನಾದರು ಕಂಡು ಹಿಡ್ದೀರ್ಲೇ ಬೇಕು ಅಲ್ವ.
ಇಂಥದ್ದೇ ಕುತೂಹಲದಿಂದ ಅಂರ್ಜಾಲ ತಡಕಾಡಿದಾಗ ಊಹೆ ನಿಜವಾಯಿತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಕಂಪ್ಯೂಟರ್ ಬಳಕೆಯ ಈ ಪರಿ ಅಚ್ಚರಿ ಮೂಡಿಸುವಂತಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರೇ `ಟಾಪ್ ಮೋಸ್ಟ್’ ಅಂದ್ಕೊಂಡ್ರು ಇಲ್ಲಿನ ಪ್ರತಿಭೆಗಳೆಲ್ಲಾ ಪಲಾಯನಗೊಂಡಿರುವ ಪರಿಣಾಮ ಅವರ ಸಂಶೋಧನೆ ವಿದೇಶಿ ನೆಲದಲ್ಲಿ ಫಲ ನೀಡುತ್ತಿದೆ ಎನ್ನುವುದು ಕಹಿ ವಾಸ್ತವ.

* ಕಂಪ್ಯೂಟರ್ ಇತಿಹಾಸ

ಆರಂಭದ ದಿನಗಳಲ್ಲಿ ಬಳಸುತ್ತಿದ್ದ ಕಂಪ್ಯೂಟರ್ಗೆ ಇಡೀ ಕೋಣೆಯನ್ನೇ ಮೀಸಲಿಡಬೇಕಿತ್ತು. ಏಕೆಂದರೆ ಅವು ಅಷ್ಟು ಬೃಹತ್ ಗಾತ್ರದಲ್ಲಿದ್ದವು. ಇವನ್ನು ಫಸ್ಟ್ ಜನರೇಷನ್ ಕಂಪ್ಯೂಟರ್ ಎನ್ನುತ್ತಾರೆ. (ಇಂಥ ಕಂಪ್ಯೂಟರ್ಗಳನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಈಗಲೂ ನೋಡಬಹುದು)
ಬಳಿಕ ಬಂದದ್ದೇ ಟಾಪ್ ಟೇಬಲ್ ಕಂಪ್ಯೂಟರ್ಸ್. ಇವುಗಲನ್ನು ಹವಾನಿಯಂತ್ರಿತ ಕೋಣೆಗಳಲ್ಲಿ ಬಳಸಬೇಕು ಎಂಬ ಅಲಿಖಿತ ನಿಯಮ ಪಾಲಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಕೊಂಡೊಯ್ಯಬಹುದಾದ ಲ್ಯಾಪ್ಟಾಪ್ ಕಂಪ್ಯೂಟರ್ಸ್ ಬಂದವು. ಇದಾದ ಮೇಲೆ ಅಂಗೈಯಲ್ಲಿರಿಸಿಕೊಳ್ಳುವ ಪಾಮ್ಟ್ಯಾಪ್ ಬಳಕೆಗೆ ಬಂದಿತು. ಬಳಿಕ ಅಗೋಚರ ಕಂಪ್ಯೂಟರ್ ಹಾಗೂ ಇದೀಗ ಬಂದಿರುವುದೇ ಧರಿಸಿಕೊಳ್ಳಬಹುದಾದ ತಂತ್ರಜ್ಞಾನ. ಕಂಪ್ಯೂಟರ್ಸ್ ದಟ್ ವಿ ಕ್ಯಾನ್ ವೇರ್…!
ಆಶ್ಚರ್ಯ ಆಗುತ್ತೆ ಅಲ್ವ…!, ಬಟ್ಟೆ ಹಾಕ್ಕೊಳೋದು ಗೊತ್ತು. ಆದ್ರೆ ಇದೇನಿದು ಧರಿಸಿಕೊಳ್ಳುವ ಕಂಪ್ಯೂಟರ್. ಇದು ತಂತ್ರಜ್ಞಾನದ ಉತ್ಕೃಷ್ಟ ಹಂತ. ಟಿ-ಶರ್ಟ್ ಮಾದರಿಯಲ್ಲೇ ಇಂಥ ಕಂಪ್ಯೂಟರ್ ಶರ್ಟ್ಗಳನ್ನು ಮನುಷ್ಯರು ಧರಿಸಿಕೊಳ್ಳಬಹುದಾಗಿದೆ.

* ಎಲ್ಲಿದೆ ಇದು?

ಅಮೆರಿಕಾದ `ಜಾರ್ಜಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಸಂಶೋಧಕರು ಇಂಥ ಇ-ಶರ್ಟ್ ಕಂಡು ಹಿಡಿದಿದ್ದಾರೆ. ಭಾರತೀಯ ಮೂಲದ ಸಾಫ್ಟ್ವೇರ್ ವಿಜ್ಞಾನಿಯೊಬ್ಬರು ಇ-ಶರ್ಟಿನ ಜನಕ. ಗಾಜಿನೆಳೆ (ಫೈಬರ್ ಆಪ್ಟಿಕ್ಸ್) ನೇಯ್ದ ಬಟ್ಟೆಯಂತೆ ಧರಿಸುವ ಕಂಪ್ಯೂಟರ್ ಮದರ್ ಬೋಡರ್್ ಈ `ಇ-ಶರ್ಟ್’.
ಇದು ಕಂಪ್ಯೂಟರ್ ಮತ್ತು ಜವಳಿ ಕಲೆಗಳ ಸಂಗಮ. ಸಂವೇದಕ (ಸೆನ್ಸಾರ್)ಗಳನ್ನು ಅಳವಡಿಸುವ ಮೂಲಕ ಇದನ್ನು ಧರಿಸಿದ ವ್ಯಕ್ತಿಯ ಹೃದಯ ಬಡಿತ, ದೇಹದ ಉಷ್ಣತೆ ಇತರೆ ವಿವರಗಳನ್ನು ತಿಳಿಯಬಹುದು. ಸೊಂಟದಲ್ಲಿ ಧರಿಸಿದ ವಿನಿ ಕಂಪ್ಯೂಟರ್ ಮೂಲಕ ಅವುಗಳ ವಿಶ್ಲೇಷಣೆ ನಡೆಸಿ ಮಾಹಿತಿ ಸಂಗ್ರಹಿಸಬಹುದು. ಅಮೆರಿಕಾದ ಮಿಲಿಟರಿಯಲ್ಲಿ ಇ-ಶಟರ್್ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಆಯ್ದ ಸೈನಿಕರಿಗೆ ಇದನ್ನು ಧರಿಸಿಕೊಳ್ಳುವ ಅನುಮತಿ ನೀಡಲಾಗಿದೆ. ಆ ಮೂಲಕ ಇದರ ಪ್ರಯೋಜನಗಳ ಅಧ್ಯಯನ ನಡೆಸಲಾಗುತ್ತಿದೆ. ಸೈನಿಕ ಇಂಥ ಜಾಕೆಟ್ ಧರಿಸಿಕೊಂಡು ಯುದ್ಧ ಭೂಮಿಗೆ ತೆರಳಿ ಅಲ್ಲಿ ಅನಾಹುತ ಸಂಭವಿಸಿ ಗಾಯಗೊಂಡರೆ ಆಗ ಆತನ ದೇಹ ಸ್ಥಿತಿಯನ್ನು ಮಿಲಿಟರಿ ಕ್ಯಾಂಪಿನಲ್ಲಿರುವ ವೈದ್ಯರು ತಿಳಿದುಕೊಳ್ಳಬಹುದು. ಜತೆಗೆ ಆತನ ದೇಹ ತರುವಷ್ಟರಲ್ಲಿ ಚಿಕಿತ್ಸೆಗೆ ಪೂರ್ವ ಸಿದ್ಧತೆ ನಡೆಸಬಹುದು. ಚಿಕಿತ್ಸೆ ನೀಡಲು ಇ-ಶಟರ್್ನಲ್ಲಿರುವ ಸೂಕ್ಷ್ಮ ತಂತು ಹಾಗೂ ಮಿನಿ ಆಂಟನಾ ಇದಕ್ಕೆ ಸಹಕಾರಿ. ಇದರಿಂದ ಸೈನಿಕನ ಪ್ರಾಣ ಉಳಿಸುವ ಅವಕಾಶ ದುಪ್ಪಟುಗೊಳ್ಳುತ್ತದೆ ಎನ್ನುವುದು ವಿಜ್ಞಾನಿಗಳ ಹಂಬಲ.

* ಇ-ಇಂಕ್:

ಈ ಎಲೆಕ್ಟ್ರಾನಿಕ್ ಶಾಹಿ ಸೂಕ್ಷ್ಮಾತಿಸೂಕ್ಷ್ಮ ಗೋಲಗಳನ್ನು (ಕೂದಲೆಗಳೆಗಳಿಗಿಂತಲು ಸಾವಿರ ಪಟ್ಟು ಚಿಕ್ಕದಾದ ಗೋಲಗಳು) ಒಳಗೊಂಡಿದೆ. ಪ್ರತಿಯೊಂದು ಗೋಲವು ಅರ್ದ ಬಿಳಿ, ಅರ್ದ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಇಂಥ ಪ್ರತಿ ಗೋಲವನ್ನು ವಿದ್ಯುತ್ ಬಳಸಿ ಚಳಿ ಅಥವಾ ಕಪ್ಪು ಬಣ್ಣಕ್ಕೆ ಬದಲಿಸಬಹುದು. ಈ ಬಹು ಸೂಕ್ಷ್ಮ ಗೋಲ ರೂಪದ ಪುಡಿಯನ್ನು ವಿಶಿಷ್ಟವಾದ ಇ – ಪೇಪರ್ (ಎಲೆಕ್ಟ್ರಾನಿಕ್ ಕಾಗದ) ಮೇಲೆ ಲೇಪಿಸಬಹುದು. ಈ ಕಾಗದ ಉದ್ದ ಹಾಗೂ ಅಡ್ಡಲಾಗಿ ಸಾವಿರಾರು ಸೂಕ್ಷ್ಮ ತಂತಿಗಳನ್ನು ಹೊಂದಿರುತ್ತದೆ. ಇವುಗಳ ಮೇಲೆ ಇ-ಇಂಕ್ ಸವರಿ ವಿದ್ಯುಚ್ಛಕ್ತಿಯನ್ನು  ನಿರ್ದಿಷ್ಟ ತಂತಿಗಳಿಗೆ ಹರಿಸಿದಾಗ ಇ – ಪೇಪರ್ನಲ್ಲಿ ಅಕ್ಷರಗಳು ಮತ್ತು ಚಿತ್ರಗಳು ಮೂಡುತ್ತವೆ.

* ಇ-ಪುಸ್ತಕ

ಅಮೆರಿಕಾದ ಮೇಸಾಚ್ಯೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ `ಮೀಡಿಯಾ ಲ್ಯಾಬ್’ನಲ್ಲಿ `ದ ಲಾಸ್ಟ್ ಬುಕ್’ ಎಂಬ ಸಂಶೋಧನೆ ನಡೆಸಲಾಗುತ್ತಿದೆ.
ಅದರಲ್ಲೇನು ವಿಶೇಷ ಎಂದು ಮೂಗು ಮುರಿಯಬೇಡಿ. ಕಾರಣ ಇಲ್ಲಿ ನಡೆಯುತ್ತಿರುವ ಸಂಶೋಧನೆ ಫಲವಾಗಿ ಮುಂದಿನ ದಿನಗಳಲ್ಲಿ ಬದಲಾವಣೆಯ ಕ್ರಾಂತಿಯೇ ಸಂಭವಿಸಲಿದೆ.
ಇದು ಸಂಪೂರ್ಣಗೊಂಡ ಬಳಿಕ ಭವಿಷ್ಯದಲ್ಲಿನ ಎಲ್ಲ ಪುಸ್ತಕಗಳನ್ನು (ಬೇಕಾದರೆ ಪುಸ್ತಕಾಲಯಗಳನ್ನು) ಸಂಗ್ರಹಿಸಿ ಸಿಡಿ ರೂಪದಲ್ಲಿ ಇಡಬಹುದು. ಕಾರ್ಡಲೆಸ್ ರೂಪದಲ್ಲಿಯೂ ಬೇಕಾದರೆ ಒಂದೆಡೆಯಿಂದ ಮತ್ತೊಂದಡೆ ಕೊಂಡೊಯ್ಯಬಹುದು. ದೀಪ ಇಲ್ಲದೆ ಓದಬಹುದು. ಓದುವವರು ಮಂಪುರ ಬಂದು ನಿದ್ರಿಸಿದರೆ ಅದೇ ತನ್ನಿಂತಾನೇ ಮುಚ್ಚಿಕೊಳ್ಳುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ