ಸೋಮವಾರ, ಅಕ್ಟೋಬರ್ 4, 2010

ಎಟಿಎಂ ಕೆಲಸ ಮಾಡೋದು ಹೀಗೆ !

ಇಂಡಿಯಾ ‘ಹಳ್ಳಿಗಳ ದೇಶ’ವೇ ಇರಬಹುದು; ಆದರೆ ಇಲ್ಲೂ ಎಟಿಎಂಗಳಿವೆ; ಅದೇ ಹೆಗ್ಗಳಿಕೆ!
                             ATM
ಇವತ್ತು ಎಲ್ಲ ನಗರಗಳಲ್ಲೂ ಎಟಿಎಂ ಹಬ್ಬಿರುವ ಪರಿ ನೋಡಿದರೆ, ಇಂಥದ್ದೊಂದು ಬೆಳವಣಿಗೆಯನ್ನು ಹತ್ತೇ ಹತ್ತು ವರ್ಷದ ಹಿಂದೆ ನಾವು ಕಲ್ಪಿಸಿಕೊಳ್ಳಲಿಕ್ಕಾದರೂ ಸಾಧ್ಯವಿತ್ತಾ ಅನ್ನುವುದು ಅನುಮಾನ.
ಮಧ್ಯಾಹ್ನ ಎರಡು-ಎರಡೂವರೆಯ ಹೊತ್ತಿಗೆ ಬ್ಯಾಂಕನ ಟೈಮು ಮುಗಿದುಬಿಟ್ಟರೆ, ಆಮೇಲೆ ಬೇಕಾಗಬಹುದಾದ ತುರ್ತು ಹಣಕ್ಕೆ `ದೊಡ್ಡ’ ಗೆಳೆಯರ ಮರ್ಜಿಯೇ ಗತಿ ಅನ್ನುವಂತಿತ್ತು (ಆಗ `ದೊಡ್ಡ’ ಗೆಳೆಯರು ಅಂದರೆ, ಪರ್ಸಿನಲ್ಲಿ ನಮಗಿಂತ ಹೆಚ್ಚು ದುಡ್ಡಿಟ್ಟುಕೊಂಡಿರುವವರು!) ಈಗ ಹಾಗಿಲ್ಲ; ಎಟಿಎಂ ಎಂಬುದು `ಆಲ್ ಟೈಮ್ ಮನಿ’ ಅಂತಲೇ ಆಗಿ ಹೋಗಿದೆ. ವಾಸ್ತವವಾಗಿ ಎ.ಟಿ.ಎಂ. ಅಂದ್ರೆ ಅಟೋಮೆಟಿಕ್ ಟೆಲ್ಲರ್ ಮೆಶಿನ್.

                                      ATM
ಯಾವ ಹೊತ್ತಿನಲ್ಲಿ ಬೇಕಿದ್ದರೂ, ಯಾವ ನಗರದಲ್ಲಿ ಬೇಕಿದ್ದರೂ, ನಮ್ಮ ಅಕೌಂಟಿನಿಂದ ದುಡ್ಡು ತೆಗೆಯುವ ವ್ಯವಸ್ಥೆಯೇ, ಎಟಿಎಂನ ಜಾಲ. ಇದು, ಅಂತರ್ಜಾಲ ಯುಗದ ಅತಿಮುಖ್ಯವಾದ ಆವಿಷ್ಕಾರಗಳಲ್ಲೊಂದು.
ನಮ್ಮ ಬ್ಯಾಂಕಿನವರು ನಮಗೊಂದು `ಎಟಿಎಂ ಕಾರ್ಡ್’ ಅಥವಾ `ಕ್ರೆಡಿಟ್ ಕಾರ್ಡ್’ ಕೊಟ್ಟಿರುತ್ತಾರಲ್ಲಾ, ಅದರ ಹಿಂಬದಿಯಲ್ಲಿ ದಟ್ಟ ಕಂದುಬಣ್ಣದ ಒಂದು ಮೆಟಾಲಿಕ್ ಪಟ್ಟಿಯಿರುತ್ತದೆ. ಅದರ ಹೆಸರು, `ಮ್ಯಾಗ್ನೆಟಿಕ್ ಸ್ಟ್ರಿಪ್’. ನಮ್ಮ ಅಕೌಂಟಿನ ಸವ
ಸ್ತ ಮಾಹಿತಿಯನ್ನೂ ಹೊಂದಿರುವ ಜಾತಕ ಅದು. ನಾವು ಒಂದು ಎಟಿಎಂ ಬೂತಿನ ಒಳಹೊಕ್ಕು, ಮಷೀನಿನೊಳಗೆ ನಮ್ಮ ಕಾರ್ಡನ್ನು ತೂರಿಸಿದ ತಕ್ಷಣ, ಈ ಮಷೀನಿನಲ್ಲಿರುವ ಕಂಪ್ಯೂಟರಿನಿಂದ ಈ ಮಾಹಿತಿಗಳೆಲ್ಲವೂinternet ಮೂಲಕ ತನ್ನ ಅಕೌಂಟುಗಳ ನಿರ್ವಹಣೆಗೆಂದೇ ನಮ್ಮ ಬ್ಯಾಂಕು ತೆರೆದಿಟ್ಟಿರುವ ಇನ್ನೊಂದು ಕಂಪ್ಯೂಟರನ್ನು ತಲುಪುತ್ತದೆ. ನಾವು ನಮ್ಮ `ಪರ್ಸನಲ್ ಐಡೆಂಟಿಫಿಕೇಷನ್ ನಂಬರ್’ (PIN) ಅಂದರೆ ಸೀಕ್ರೆಟ್ ಕೋಡನ್ನು ಒತ್ತಿದ ಮೇಲೆ, ಬ್ಯಾಂಕಿನ ಕಂಪ್ಯೂಟರು ಆ ಕೋಡನ್ನು ತನ್ನ ಹತ್ತಿರವಿರುವ ಮಾಹಿತಿ ಹೊಂದಿಸಿ ನೋಡಿ, ಅದು ತಾಳೆಯಾದರೆ ಮಾತ್ರ ಮುಂದಿನ ವಹಿವಾಟಗೆ ಒಪ್ಪಿಗೆ ಕೊಡುತ್ತದೆ. ಇಲ್ಲವಾದರೆ ಇಲ್ಲ.
ಇದು, ಎಟಿಎಂ ಕೆಲಸ ಮಾಡುವ ವಿಧಾನ. ಇಲ್ಲಿ, ಎಟಿಎಂನ ಕಂಪ್ಯೂಟರು ಅಂತರ್ಜಾಲದ ಮೂಲಕ ಬ್ಯಾಂಕಿನ ಕಂಪ್ಯೂಟರ್ ಜೊತೆ ಸಂಪರ್ಕ ಪಡೆಯುವುದಕ್ಕೆ ಅನೇಕ ಕಡೆಗಳಲ್ಲಿ ಹೈಸ್ಪೀಡ್ ಕೇಬಲ್ಗಳನ್ನು ಜೋಡಿಸಲಾಗಿರುತ್ತದೆ. ಕೆಲವು ಎಟಿಎಂಗಳಲ್ಲಿ ನೇರವಾಗಿ ಸೆಟಲೈಟ್ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳುವ ವಿಸ್ಯಾಟ್ ಡಿಷ್ಗಳನ್ನೂ ಹಾಕಲಾಗಿರುತ್ತದೆ.
ಇದೆಲ್ಲಾ ಸರಿ, ಆದರೆ ದುಡ್ಡನ್ನು ಎಣಿಸಿಕೊಡುವ `ಬುದ್ಧಿ’ ಎಟಿಎಂಗೆಲ್ಲಿಂದ ಬರುತ್ತದೆ? ಈ ಕೆಲಸ ಮಾಡುವುದು `ಬುದ್ಧಿ’ಯಲ್ಲ; `ಎಲೆಕ್ಟ್ರಿಕ್ ಐ’ ಅನ್ನುವ ಒಂದು ಮಾಯಾಕಣ್ಣು ಮತ್ತು `ಸೆನ್ಸರ್’ ಅನ್ನುವ ಒಂದು ಎಣಿಕಾ ಯಂತ್ರ! ಇವೆರಡೂ ಸೇರಿ, ನೋಟಗಳ ಬೆಲೆ ಹಾಗೂ ಅವುಗಳ  `ದಪ್ಪ’ವನ್ನಾಧರಿಸಿ ಲೆಕ್ಕ ಮಾಡುತ್ತವೆ. ನೋಟಗಳು ಬಿಡಿ-ಬಿಡಿಯಾಗಿರದೆ, ಒಂದರೊಡನೊಂದು ಸೇರಿ ಕೊಂಡಿದ್ದರೆ, ಅಂಥ ನೋಟುಗಳೆಲ್ಲಾ `ರಿಜೆಕ್ಟ ಬಿನ್’ಗೆ ಬೀಳುತ್ತವೆ. ಅಂದಹಾಗೆ, ಎಟಿಎಂ ನಮಗೆ ಕೊಡುವ ದುಡ್ಡೆಲ್ಲವೂ, ಅದರೆ ಬುಡದಲ್ಲಿರುವ ತಿಜೋರಿಯೊಂದರೊಳಗೆ ಇರುತ್ತದೆ.
ಇಲ್ಲಿ, ಮಷೀನಿನಿಂದ ಹೊರಬಿದ್ದ ಪ್ರತಿಯೊಂದು ನೋಟೂ ಎಟಿಎಂ ಸೆಂಟರಿನ ಅಕೌಂಟನಿಂದ ನಮಗೆ ಸಿಗುವಂಥದ್ದು. ಮಷೀನಿನೊಳಗೆ ನಾವು ಕಾರ್ಡು ತೂರಿಸಿ ಕೀಗಳನ್ನು ಒತ್ತಿದ ತಕ್ಷಣ, ನಮ್ಮ ಬ್ಯಾಂಕಿನ ನಮ್ಮ ಅಕೌಂಟಿನಿಂದ ಅಂತಜರ್ಾಲದ ಮೂಲಕವೇ ಎಟಿಎಂ ಸೆಂಟರಿನ ಅಕೌಂಟಿನ ದುಡ್ಡು ‘ಟ್ರಾನ್ಸಫರ್’ ಆಗಿಬಿಡುತ್ತದೆ. ಎರಡು ಕಡೆಯೂ ಲೆಕ್ಕ ದಾಖಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ