ಕಾರ್ಟೂನ್ ಇಲ್ಲದ ಪತ್ರಿಕೆಗಳೇ ಇಲ್ಲ ಎನ್ನಬಹುದು. ನಿಮಗೂ ಕಾರ್ಟೂನ್ ರಚಿಸಲು ಆಸಕ್ತಿಯೇ? ಆದರೆ ರಚಿಸಲು ಬೇಕಾದ ಸವಲತ್ತುಗಳಿಲ್ಲವೇ? ಹಾಗಿದ್ದರೆ ನೀವು www.toondoo.com ಜಾಲತಾಣಕ್ಕೆ ಭೇಟಿ ನೀಡಬೇಕು. ಇದು ಮುಖ್ಯವಾಗಿ ಮಕ್ಕಳಿಗೋಸ್ಕರ ಇರುವುದು. ಈ ಜಾಲತಾಣದಲ್ಲಿ ಖಾತೆ ಸೃಷ್ಠಿಸಿ ನಂತರ ಕಾರ್ಟೂನ್ ಬಿಡಿಸಬಹುದು. ಅದಕ್ಕಾಗಿ ಅಗತ್ಯ ಸವಲತ್ತುಗಳು ಈ ಜಾಲತಾಣದಲ್ಲೇ ಇವೆ. ಬೇರೆ ಯಾವ ತಂತ್ರಾಂಶದ ಅಗತ್ಯ ಇಲ್ಲ. ನೀವು ತಯಾರಿಸಿದ ಕಾರ್ಟೂನ್‌ಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು. ಅದನ್ನು ಮುಂದುವರಿಸಲು ಅವರಿಗೂ ಅವಕಾಶ ನೀಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ