| ಸಾಮಾಜಿಕ ಭದ್ರತೆಯ ಸಂಕ್ಷಿಪ್ತ ಇತಿಹಾಸ 1880ನೇ ಇಸವಿಯಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ, ಜರ್ಮನಿಯ ದುರ್ಬಲ ಹಾಗೂ ಅಸಹಾಯಕ ಜನತೆಗಾಗಿ ಸಾಮಾಜಿಕ ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬೇರೆ ಯೂರೋಪಿಯನ್ ದೇಶಗಳು ತಮ್ಮ ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ತದನಂತರ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್, ಸಾಮಾಜಿಕ ಭದ್ರತಾ ಕಾನೂನನ್ನು 1935ನೇ ಇಸವಿಯಲ್ಲಿ , ದೇಶವನ್ನು ಅತ್ಯಂತ ವಿಷಮ ಆರ್ಥಿಕ ಸಂಕಷ್ಟದಿಂದ (ದಿಗ್ರೇಟ್ ಡಿಪ್ರೆಷನ್) ಮಾಡಲು ಜಾರಿಗೆ ತಂದರು. ಕರ್ನಾಟಕ ರಾಜ್ಯ ಸರ್ಕಾರವು ಅಶಕ್ತ ವೃದ್ಧರ ರಕ್ಷಣೆಗಾಗಿ 1965 ನೇ ಇಸವಿಯಲ್ಲಿ ರೂ. 40/- ರಂತೆ ಮಾಸಿಕ ಪಿಂಚಣಿಯನ್ನು ನೀಡುತ್ತಾ ಬಂದಿದೆ. ಅಲ್ಲದೆ ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ 1979ರಲ್ಲಿ ಹಾಗೂ ನಿರ್ಗತಿಕ ವಿಧವೆಯರ ರಕ್ಷಣೆಗಾಗಿ 1984ರಲ್ಲಿ ರೂ.40/-ರಂತೆ ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು (ಎನ್ ಎಸ್ ಎ ಪಿ) ಅನುಷ್ಠಾನಗೊಳಿಸಿದೆ. ಈ ಮಹತ್ವದ ಯೋಜನೆಯಡಿ ನಾಲ್ಕು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಿವೆ. 1. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ 2. ರಾಷ್ಟ್ರೀಯ ಕುಟುಂಬ ನೆರವು ಯೋಜನೆ 3. ಅನ್ನಪೂರ್ಣ ಯೋಜನೆ 4. ಜನನಿ ಶಿಶು ಸುರಕ್ಷಾ ಯೋಜನೆ ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರವು ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 1. ಅಂತ್ಯ ಸಂಸ್ಕಾರ ಯೋಜನೆ 2. ಆದರ್ಶ ವಿವಾಹ ಯೋಜನೆ 3. ದೇವದಾಸಿ ಪಿಂಚಣಿ 4. ಸಂಧ್ಯಾ ಸುರಕ್ಷಾ ಯೋಜನೆ http://dssp.kar.nic.in/ |
ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
ಭಾನುವಾರ, ಅಕ್ಟೋಬರ್ 24, 2010
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ
ಸ್ವದೇಶೀ ತಂತ್ರಜ್ಞರ ಸಮಾವೇಶ
ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು, ರೈತರಿಗೆ ಸುಲಭ, ಅಗ್ಗ, ಪರಿಸರಸ್ನೇಹೀ ಮತ್ತು ಸಣ್ಣ ಯಂತ್ರಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಪಣತೊಟ್ಟ ಸ್ವದೇಶೀ ತಂತ್ರಜ್ಞರ ಸಮಾವೇಶವೇ ಸ್ವತಂಸಮ್.ಇದರ ಅಂತರ್ಜಾಲ ತಾಣ http://swatamsam.in.
ಶನಿವಾರ, ಅಕ್ಟೋಬರ್ 23, 2010
ಸುಪ್ರಸಿದ್ಧ ಉಧೃತಗಳು :: ವ್ಯಕ್ತಿಗಳಾದಿಯಾಗಿ :: Sorted By People
- ಸ್ವಾಮಿ ವಿವೇಕಾನಂದ
- ಶ್ರೀ ರಾಮಕೃಷ್ಣ ಪರಮಹಂಸರು
- ಗೌತಮ ಬುದ್ಧ
- ಮಹಾವೀರ ಜೈನ
- ಮಹಾತಾಯಿ ತೆರೇಸಾ
- ಗಾಂಧೀಜಿ
- ಸುಭಾಷ ಚಂದ್ರ ಬೋಸ್
- ಜವಾಹರಲಾಲ್ ನೆಹರು
- ಲಾಲ್ ಬಹಾದ್ದೂರ್ ಶಾಸ್ತ್ರಿ
- ಬಿಲ್ ಗೇಟ್ಸ್
- ಇಂದಿರಾ ಗಾಂಧಿ
- ಅಟಲ್ ಬಿಹಾರಿ ವಾಜಪೇಯಿ
ಪರೀಕ್ಷೆಯನುಸಾರ ಪ್ರಶ್ನೆಪತ್ರಿಕೆಗಳು - ಪ್ರಶ್ನೋತ್ತರ
ನಮಸ್ತೆ... ಕನ್ನಡದಲ್ಲಿ Online ಪ್ರಶ್ನೋತ್ತರಗಳನ್ನ ಒದಗಿಸುವ ಪುಟ್ಟ ಪ್ರಯತ್ನವಿದು ..
ಹವ್ಯಾಸಿ ಇತಿಹಾಸಕಾರನ ಇತ್ಯೋಪರಿಗಳು e - ದಿನವಹಿ
e - ದಿನವಹಿ
ಇಡೀ ವರ್ಷದ ದಿನ ದಿನದ ಇತಿಹಾಸ e ಒಂದೇ ಪುಟದಲ್ಲಿ ... http://edinavahi.blogspot.com/
ಸ್ಪರ್ಧಾಪರೀಕ್ಷೆಗಳಿಗೆ ಸ್ಪರ್ಧಾರ್ಥಿ
http://spardharthi.blogspot.com/ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಸಹಾಯ ಮಾಡುವ ಮೊದಲ ಇ-ಪತ್ರಿಕೆಯಂತೆ. ರವಿ, ಪರಶುರಾಮ್, ಲಾವಣ್ಯ, ನಿಹಾರಿಕಾ, ಗೌರಿ, ಪವನ್, ಸ್ಪಂದನಾ ಇವರೆಲ್ಲಾ ಈ ಬ್ಲಾಗಿಗೆ ವಿಷಯ ಒದಗಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳ ಒಳನೋಟವೂ ಇಲ್ಲಿ ಲಭ್ಯ...... ವಿವಿಧ ಸ್ಥಾನಮಾನಗಳನ್ನು ಹೊಂದಿದವರ ವಿವರಗಳೂ ಇಲ್ಲಿವೆ.ಇಲ್ಲಿಯ ಬರಹಗಳನ್ನು ಫೇಸ್‌ಬುಕ್ ಮೂಲಕ ಪಡೆಯುವ ಸವಲತ್ತೂ ಕೂಡಾ ಇದೆ.ಸುಮಾರು ಎಂಟುನೂರು ಜನ ಫೇಸ್‌ಬುಕ್ ಮೂಲಕ ಸ್ಪರ್ಧಾರ್ಥಿಯನ್ನು ಪಡೆಯುತ್ತಾರೆ.ಈ ಬ್ಲಾಗಿಗೆ ನೂರು ಜನಕ್ಕಿಂತ ಹೆಚ್ಚು ಜನ ಹಿಂಬಾಲಕರಿದ್ದಾರೆ.
ಶುಕ್ರವಾರ, ಅಕ್ಟೋಬರ್ 22, 2010
ಹಬ್ಬ ಸೈಟ್
ಇತ್ತೀಚೆಗಷ್ಟೆ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇವೆ. ಇದರ ಹಿನ್ನೆಲೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಜತೆಗೆ ಅನೇಕ ಧರ್ಮಗಳ ಬೀಡಾದ ಭಾರತದಲ್ಲಿ ಸದಾ ಹಬ್ಬಗಳು ಜರುಗುತ್ತಲೇ ಇರುತ್ತವೆ. ಹಾಂಗತ ಎಲ್ಲರಿಗೂ, ಎಲ್ಲಾ ಧರ್ಮಗಳ ಹಬ್ಬಗಳ ಬಗೆಗೂ ಗೊತ್ತಿರುತ್ತದೆ ಅಂತೇನಿಲ್ಲ. ನಿಮಗೇನಾದರೂ ಬೇರೆ ಬೇರೆ ಧರ್ಮಗಳ, ಮಹತ್ವದ ಹಬ್ಬಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸುವುದೇ? ಹಾಗಿದ್ದರೆ ಈ ವೆಬ್ ಸೈಟ್ ಗೆ ಬರಲೇಬೇಕು. ಯಾವ್ಯಾವ ಹಬ್ಬಗಳನ್ನು ಯಾವ್ಯಾವಾಗ, ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ಮಹತ್ವ ಏನು? ಎನ್ನುವಂತಹ ವಿವರಗಳಿವೆ. ಅಲ್ಲದೆ ಯಾವ ವಿವರ ನಿಮಗೆ ಬೇಕೋ ಅದು ತಕ್ಷಣ ಕೈಗೆಟಕುವಂತೆ ಆಕಾರಾದಿಯಾಗಿ, ತಿಂಗಳುಗಳ ಪ್ರಕಾರ, ಧರ್ಮಗಳ ವಿಭಾಗದ ಮೂಲಕ ಹೀಗೆ ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇಲ್ಲಿಗೊಮ್ಮೆ ನಿಮ್ಮ ಬೇಟಿ ಜರುಗಲಿ. ಲಿಂಕ್- http://www.festivalsofindia.in/
ಬುಧವಾರ, ಅಕ್ಟೋಬರ್ 20, 2010
ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ವಿಶ್ವೇಶ್ವರಯ್ಯ
ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15.
1860 ರಲ್ಲಿ ಮೈಸೂರು ಪ್ರಾಂತ್ಯ (ಈಗಿನ ಕರ್ನಾಟಕ ರಾಜ್ಯ)ಚಿಕ್ಕಬಳ್ಳಪುರದ ಮುದ್ದೇನ ಹಳ್ಳಿ ಯಲ್ಲಿ ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಚಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರ ಜನ್ಮದಿನವನ್ನು ಭಾರತ ದೇಶ "ಇಂಜಿನಿಯರುಗಳ ದಿನ" ವನ್ನಾಗಿ ಆಚರಿಸುತ್ತಿದೆ. ಇತಿ ಹಾಸದ ಪುಟಗಳಲ್ಲಿ ದಾಖಲೆಯಾಗಿರುವ ಸಾಧನೆಗಳನ್ನು ಒಮ್ಮೆ ನೋಡಿ ಭಾರತ ಮಾತೆಯ ವರಪುತ್ರ, ಅಪ್ಪಟ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರದ ಪ್ರೌಢ ಶಾಲಾ ಹಂತವನ್ನು ಬೆಂಗಳೂರಿನಲ್ಲಿ, 1881 ರಲ್ಲಿ ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಉನ್ನತ ವ್ಯಾಸಂಗ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರ್ ಪದವಿಯನ್ನು 1883 ರಲ್ಲಿ ರ್ಯ್ಯಾಂಕ್ ಪಡೆ ಯುವುದರ ಮೂಲಕ ಸಾಧನೆಯ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದರು. ಬಾಂಬೆ ಸರ್ಕಾರದ ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭ ವಾಯಿತು.
ಬಾಂಬೆಯ ಆಡಳಿತದಲ್ಲಿದ ಸಿಂಧ್ ಪ್ರಾಂತ್ಯದ ಜಲವಿತರಣೆ ಕಾಮಗಾರಿಕೆಯಲ್ಲಿ ಸಿಂಧೂ ನದಿ ಯಿಂದ ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ. ವಿ. ಯವರಿಗೆ ದೊರೆತು ತಮ್ಮ ತಂತ್ರಜ್ಞಾನ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯಿತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಪೂರ್ಣ ಗೊಳಿಸಿದರು. ನೂರು ವರ್ಷಗಳ ನಂತರ ಆ ಭಾಗಗಳಲ್ಲಿ ಭಾರೀ ಭೂಕಂಪವಾದರೂ ಯಾವುದೇ ಹಾನಿಯಾಗದೆ ಸರ್ ಎಂ. ವಿ. ಯವರ ಕಾಮಗಾರಿ ಭದ್ರವಾಗಿದೆ.
1903 ರಲ್ಲಿ ಪುಣೆಯ ಬಳಿ ಖಡಕ್ ವಾಸ್ಲಾ ಜಲಾಶಯದಲ್ಲಿ ತಮ್ಮ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರ ಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ.
1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣಗೊಳಿಸಿದರು.
ಜನಕೋಟಿಯನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು
1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದದು ಎಂದು ಹೆಗ್ಗಳಿಕೆಗೆ ಪಾತ್ರವಾದ ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿ ದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ. ಆರ್. ಎಸ್. ಆಣೆಕಟ್ಟು ಸರ್ ಎಂ. ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣ ದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪ ವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದು ಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲೇ ಆಳವಾದ ನಾಲೆ ಯ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆ ಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ.
ಬೃಂದಾವನ ಉಧ್ಯಾನ ವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿ ಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.
ಕರ್ನಾಟಕದ ಕನ್ನಡಿಗರ ಭಾಗ್ಯೋದಯ....
1912 ರಲ್ಲಿ ಮೈಸೂರು ಪ್ರಾಂತ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು. ’ಕರ್ನಾಟಕದ ಭಗಿರಥ’ ಎಂದೇ ಕರೆಯಲ್ಪಡುವ ಸರ್ ಎಂ. ವಿ. ಯವರಿಂದ 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಯಾದ ರೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಕನ್ನಡ ಭಾಷೆಗೆ ಶತಮಾನದ ಪ್ರಾರಂಭ ದಲ್ಲೆ ಭದ್ರ ಬುನಾದಿ ದೊರೆಯಿತು. ಮೈಸೂರು ಪ್ರಾಂತ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. 1916 ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿ, ನಂತರ ಹುಡುಗಿಯರಿಗಾಗಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಸ್ಥಾಪಿಸಿ ಜ್ಞಾನದ ದೀಪ ಬೆಳಗಿದರು. 1912 ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 4,500 ಶಾಲೆಗಳಿದ್ದು, ಆರು ವರ್ಷದ ಅವಧಿಯಲ್ಲಿ ಒಟ್ಟು 6,500 ಶಾಲೆಗಳಾಗುವಂತೆ ಮಾಡಿ 1,40,000 ವಿದ್ಯಾರ್ಥಿಗಳಿದ್ದದು 1918 ರಲ್ಲಿ ನಿವೃತಿ ಪಡೆಯುವಾಗ 3,66,000 ವಿದ್ಯಾರ್ಥಿಗಳು ವಿದ್ಯಾಭಾಸ ಪಡೆಯುವಂತಾಯಿತು. ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ಮತ್ತು ಹೆಣ್ಣು ಮಕ್ಕಳು ಶಾಲೆಗೆ ತೆರಳಿ ವಿದ್ಯಭಾಸ ಪಡೆಯುವಂತೆ ಪ್ರೋತ್ಸಾಹಿಸಿ ಸಾಕ್ಷರತೆಗೆ ಅಡಿಪಾಯ ಹಾಕಿದವರು ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ ಮಾಡಿದ ಪ್ರಥಮ ಕನ್ನಡಿಗನಾಗಿ ದ್ದಾರೆ.
1917 ರಲ್ಲಿ ಬೆಂಗಳೂರು ವಿ. ವಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಭಾರತದಲ್ಲೇ ಪ್ರಾರಂಭ ವಾದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಕನ್ನಡಿಗನ ಕೊಡುಗೆಯಾಗಿದೆ. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕಾ ಕಾರ್ಖಾನೆ ಸ್ಥಾಪಿಸಿದ ಮಹಾನುಭಾವ ಸರ್ ಎಂ. ವಿ. ಯವರು ಸ್ಥಾಪಿಸಿದ ಹಲವಾರು ಸಂಸ್ಥೆ ಗಳಲ್ಲಿ ಕೋಟ್ಯಾಂತರ ಮಂದಿಗೆ ಉದ್ಯೋಗ ಅವಕಾಶ ದೊರೆತು, ಅನ್ನದಾತರಾಗಿರುವುದನ್ನು ಇಂದಿಗೂ ಸ್ಮರಿಸಿಕೊಳ್ಳುವಂತಾಗಿದೆ.
ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆಗೆ ಬ್ರಿಟಿಷರ ಅಡ್ಡಗಾಲು....
ಸರ್ ಎಂ. ವಿ. ಯವರಿಗೆ ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆ ಸ್ಥಾಪಿಸಬೇಕೆಂದು ಮಹದಾಸೆ ಇತ್ತು. ಅದಕ್ಕಾಗಿ ಅವರು ತಿಂಗಳುಗಟ್ಟಲೆ ಯುರೋಪು, ಅಮೇರಿಕಾ ಸುತ್ತಿ ಬಂದರು. ಸರ್ ಎಂ. ವಿ. ಯವರ ಮನದಾಕಾಂಕ್ಷೆಯ ಯೋಜನೆಗೆ ಮೈಸೂರು ಮಹಾರಾಜರು ಸೂಕ್ತವಾದ ಸ್ಥಳವನ್ನು ನೀಡಿದರು. ಆದರೆ ಆಗಿನ ಆಡಳಿತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಇವರ ಯೋಜನೆಗೆ ಅಡ್ಡಕಾಲಿಟ್ಟರು. ಆದರೆ ಎದೆಗುಂದದ ಸರ್. ಎಂ.ವಿ. ಯವರು ಹಿಂದುಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಸರ್. ಎಂ. ವಿ. ಯವರು ಟಾಟಾ ಇನ್ಸ್ಟಿಟ್ಯೂಟ್ ಮುಖ್ಯಸ್ಥರಿಗೆ ಏರೋನಾ ಟಿಕ್ಸ್ ಪ್ರಾರಂಭಿಸುವಂತೆ ಮಾಡಿದರು ನಂತರ ಇದರ ಫಲವಾಗಿ ಬೆಂಗಳೂರಿನಲ್ಲಿಯೂ ಬಾಹ್ಯ ಕಾಶ ಸಂಶೋಧನಾ ಕೇಂದ್ರ, ವಾಯುಪಡೆ ನೆಲೆಯೂ ಪ್ರಾರಂಭವಾಯಿತು. ಇಂದು ಬೆಂಗಳೂರು ಹಂತ ಹಂತವಾಗಿ ಏರೊನಾಟಿಕ್ಸ್ ಸಂಶೋಧನಾ ಕೇಂದ್ರ, ಉಪಗ್ರಹ ಸಂಪರ್ಕ ಜಾಲ, ಮಾಹಿತಿ ತಂತ್ರ ಜ್ಞಾನ, ಮೆಟ್ರೋ ರೈಲಿನವರೆಗೆ ತಲುಪಿದೆ.
ಸರ್ ಎಂ. ವಿ. ಅಂದಿನ ಅವರ ಕನಸಿನ ತಂತ್ರಜ್ಞಾನ ಭದ್ರ ಭುನಾದಿಯೇ ಇಂದಿನ ವಿಶ್ವ ನಿಬ್ಬೆರ ಗಾಗಿ ನೋಡುವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಿಶ್ವದರ್ಜೆಯ ಮಟ್ಟದಲ್ಲಿ ಬೆಳೆದು ನಿಂತಿದೆ. ಜೋಗದ ಜಲ ವಿದ್ಯುತ್ ಯೋಜನೆ, ಮೈಸೂರು ಸಕ್ಕರೆ ಕಾರ್ಖಾನೆ, ಪ್ರಿಂಟಿಂಗ್ ಪ್ರೆಸ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು ಇವರ ಕೊಡುಗೆ. ಭದ್ರಾವತಿ ಕಾರ್ಖಾನೆಯ ಚೇರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಸರ್ಕಾರ ವೇತನ ನಿಗಧಿ ಪಡಿಸಿರಲಿಲ್ಲ. ಕೆಲವು ವರ್ಷಗಳ ನಂತರ ಲಕ್ಷಕಿಂತಲೂ ಹೆಚ್ಚು ಹಣವನ್ನು ಪಾವತಿಸಲು ಬಂದಾಗ ಅವರು ಒಂದು ರೂಪಾಯಿ ಸಹ ಮುಟ್ಟಲಿಲ್ಲ, ಆ ಹಣದಿಂದ ಹುಡುಗರ ಪಾಲಿಟೆಕ್ನಿಕ್ ಪ್ರಾರಂಭಿಸಲು ಸಲಹೆ ನೀಡಿದರು!. ಅವರ ಇಚ್ಚೆಯಂತೆ ನೂತನ ಪಾಲಿಟೆಕ್ನಿಕ್ ಪ್ರಾರಂಭಿಸಿ ಸರ್ ಎಂ. ವಿ. ಯವರ ಹೆಸರನ್ನು ಇಡಲು ಕೇಳಿಕೊಂಡಾಗ ಅವರು ಮೈಸೂರಿನ ಮಹಾರಾಜರ ಹೆಸರನನ್ನು ಇಡುವಂತೆ ಸೂಚಿಸಿದ ನಂತರ, ಶ್ರೀ ಜಯ ಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಬೆಂಗಳೂರು ಸ್ಥಾಪನೆಯಾಯಿತು. ನಂತರ ಭಾರತದ ಬೆನ್ನೆಲುಬು ಅನ್ನ ದಾತ ರೈತರ ಅಭಿವೃದ್ದಿಗಾಗಿ ಬೆಂಗ ಳೂರು ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದರು.
ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ...
ಸರ್ ಎಂ. ವಿಶ್ವೇಶ್ವರಯ್ಯ ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಅವತಾರ ಪುರುಷ ನಂತೆ ನಮ್ಮ ಕಣ್ಣಿನ ಮುಂದೆ ಬರುತ್ತಾರೆ. ಅಪ್ಪಟ ಕನ್ನಡಿಗ ಭಾರತದ ಭಾಗ್ಯ ಶಿಲ್ಪಿ, ಕಟ್ಟಾ ಶಿಸ್ತಿನ ಸಿಪಾಯಿ, ದೇಶಭಕ್ತ ಈ ಮಾಹಾ ತಪಸ್ವಿಯನ್ನು ಕಂಡಾಗ ಭಕ್ತಿ ಭಾವ, ಗೌರವ ತುಂಬಿ ಬರುತ್ತದೆ.
ಸರ್ಕಾರಿ ಕೆಲಸ ದೇವರ ಕೆಲಸ...!
ಮೈಸೂರು ಪೇಟಾ ಧರಿಸಿ ಶುಭ್ರ ಉಡುಪನ್ನುಟ್ಟು, ಬೆಳಿಗೆ 7.00 ಗಂಟೆಯಿಂದ ಸೇವಾ ದಿನಚರಿ ಯನ್ನು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾರಂಭಿಸುತ್ತಿದ್ದರು. ಸರ್ ಎಂ. ವಿ. ಯವರು ತಮ್ಮ ಬಂಧುಬಳಗದವರಿಗೆ ತಮ್ಮ ಬಳಿಗೆ ಶಿಪಾರಸು ಉಪಯೋಗಿಸಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಡಲು ಬರದಂತೆ ಸೂಚನೆ ನೀಡಿ, ಅದರಂತೆ ಅಧಿಕಾರ ದುರುಪಯೋಗ ಪಡಿಸದೆ ಪಾಲಿಸಿ ತೋರಿಸಿದ್ದಾರೆ. ಮನೆಯಲ್ಲಿ ರಾತ್ರಿಯ ವೇಳೆ ಕಛೇರಿಯ ಕೆಲಸವನ್ನು ಮಾಡು ವಾಗ ಸರ್ಕಾರ ನೀಡಿದ ದೀಪವನ್ನು ಉರಿಸಿಕೊಂಡು, ಪೆನ್ ಬಳಸುತಿದ್ದರು. ನಂತರ ಸ್ವಂತ ಕೆಲಸಕ್ಕೆ ಸ್ವಂತ ದೀಪ ಪೆನ್ನನ್ನು ಬಳಸುತಿದ್ದರು. ಅದೇ ರೀತಿ ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಸ್ವಂತ ಕೆಲಸಕ್ಕೆ ಸ್ವಂತ ಕಾರು ಬಳಸುತ್ತಿದ್ದ ಅಪ್ಪಟ ದೇಶಪ್ರೇಮಿ.
ಭಾರತದ ರಾಜದಾನಿ ದೆಹಲಿ ಮತ್ತು ದೇಶದ ಪ್ರಮುಖ ನಗರಗಳ ಸೌಂದರ್ಯದ ರೂವಾರಿ ಯಾಗಿರುವ ಸರ್ ಎಂ. ವಿ. ಯವರು ಒರಿಸ್ಸಾ ರಾಜ್ಯದ ಹಿರಾಕುಡ್ ಆಣೆಕಟ್ಟು, ಯಮೆನ್ ರಾಷ್ಟ್ರದ ನಿರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ, ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಮುಖ್ಯವಾದ ಒಂದು ಕಲ್ಲಿನಲ್ಲಿ " ಮೇಡ್ ಇನ್ ಇಂಡಿಯಾ" ಕೆತ್ತಿಸಿ ಇಟ್ಟಿದ್ದಾರೆ. ಯಾರದಾರೂ ಭಾರತ ದೇಶದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸು ಶಿಲ್ಪ ಕುಸಿದು ಬೀಳುವ ರೀತಿಯಲ್ಲಿ ಭಾರತೀಯ ತಂತ್ರ ಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ತೋರಿಸಿಕೊಟ್ಟಿದಾರೆ.
~ ಸಹಾಯಕ ಇಂಜಿನಿಯರ್, ಬಾಂಬೆ ಸರ್ಕಾರಿ ಸೇವೆ (1884)
~ ಚೀಫ್ ಇಂಜಿನಿಯರ್, ಹೈದರಬಾದ್ ರಾಜ್ಯ (1909)
~ ಚೀಫ್ ಇಂಜಿನಿಯರ್ ಮೈಸೂರು ರಾಜ್ಯ (1909) ಕಾರ್ಯದರ್ಶಿ - ರೈಲ್ವೆಸ್.
~ ಅಧ್ಯಕ್ಷರು, ಎಜುಕೇಶನ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಮಿಟೀಸ್ ಇನ್ ಮೈಸೂರು ರಾಜ್ಯ
~ ದಿವಾನ್ ಆಫ್ ಮೈಸೂರು 1912- 18
~ ಚೇರ್ಮನ್, ಭದ್ರಾವತಿ ಉಕ್ಕಿನ ಕಾರ್ಖಾನೆ.
~ ಸದಸ್ಯರು, ಆಡಳಿತ ಮಂಡಳಿ- ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ಬೆಂಗಳೂರು.
~ ಸದಸ್ಯರು, ಆಡಳಿತ ಮಂಡಳಿ ಟಾಟಾ ಕಬ್ಬಿಣ ಮತ್ತು ಉಕ್ಕಿನ ಸಂಸ್ಥೆ
~ ಸದಸ್ಯರು, ಬ್ಯಾಕ್ ಬೇ ಎನ್ಕೈರಿ ಕಮಿಟಿ, ಲಂಡನ್
~ ಸದಸ್ಯರು, ಭವಿಷ್ಯ ಭಾರತದ ರಾಜ್ಯಗಳ ಸಂವಿಧಾನಾತ್ಮಕ ಸಲಹಾ ಸಮಿತಿ (1917): ಭಾರತದ ಸಂವಿಧಾನದಲ್ಲಿ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಸಲಹೆ ನೀಡಿಕೆ.
ಸರ್ ಎಂ .ವಿ. ಯವರ ಹೆಸರಿನ ಮೂಲಕ ಗೌರವ ನೀಡಿ ಸೇವೆ ಸಲ್ಲಿಸುತ್ತಿ ರುವ ಸಂಸ್ಥೆಗಳು
* ವಿಶ್ವೇಶ್ವರಯ್ಯ ಟೆಕ್ನಾಲಜಿ ಯೂನಿವರ್ಸಿಟಿ ಬೆಳಗಾಂ.
* ವಿಶ್ವೇಶ್ವರಯ್ಯ ಇನ್ಸ್ಟ್ಯೂಟ್ ಅಫ್ ಅಡ್ವಾನ್ಸ್ಡ್ ಟೆಕ್ನಾಲಜಿ - ಮುದ್ದೇನ ಹಳ್ಳಿ ಕಣಿವೆನಾರಾಯಣ ಪುರ
* ಇಂಡಿಯನ್ ಇನ್ಸ್ಟ್ಯೂಟ್ ಅಫ್ ಟೆಕ್ನಾಲಜಿ ಮುದ್ದೇನ ಹಳ್ಳಿ - ಸರ್ ಎಂ. ವಿ. ಯವರ ಜನ್ಮಸ್ಥಳ
* ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್ - ಬೆಂಗಳೂರು.
* ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್
* ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ- ಬೆಂಗಳೂರು.
* ವಿಶ್ವೇಶ್ವರಯ್ಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ನಾಗಪುರ
* ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ - ಬೆಂಗಳೂರು.
* ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭದ್ರಾವತಿ.
* ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ - ಕಾಲೇಜ್ ಅಫ್ ಇಂಜಿನಿಯರಿಂಗ್ - ಪುಣೆ
* ಸರ್ ಎಂ. ವಿಶ್ವೇಶ್ವರಯ್ಯ ಹಾಸ್ಟೆಲ್ - ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ - ಬನಾರಸ್ ಹಿಂದೂ ಯೂನಿವರ್ಸಿಟಿ (ಏಶ್ಯಾದಲ್ಲೇ ಅತಿ ದೊಡ್ದ ರೆಶಿಡೆನ್ಸಿಯಲ್ ಯೂನಿವರ್ಸಿಟಿ)
* ಕರ್ನಾಟಕ ಇಂಡಸ್ಟ್ರಿಯಲ್ ಕೋಪರೇಟಿವ್ ಬ್ಯಾಂಕ್ ಲಿಮಿಟೆಡ್.
* ಎನ್. ಐ. ಟಿ. ರೂರ್ಕೆಲಾ - ವಿಶ್ವೇಶ್ವರಯ್ಯ ಸಭಾಂಗಣ
ಸರ್ ಎಂ. ವಿ.ಯವರ ಪುಸ್ತಕಗಳು :
’ರಿ ಕನ್ಸ್ಟ್ರಕ್ಷನ್ ಇಂಡಿಯಾ - ( 1934 ), ’ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ.
ತಮ್ಮ 94 ರ ಇಳಿ ವಯಸ್ಸಿನಲ್ಲಿಯೂ ’ಪ್ಲಾನಿಂಗ್’ ನ ಬಗ್ಗೆ ಪುಸ್ತಕ ಬರೆಯುತಿದ್ದರು.
ಸರ್ ಎಂ. ವಿ. ಯವರಿಗೆ ದೊರೆತ ಗೌರವ, ಪ್ರಶಸ್ತಿಗಳು
* 1906 - ಕೈಸರ್ - ಇ - ಹಿಂದ್
* 1911 - ಸಿ. ಐ. ಇ. (ಕಾಂಪನಿಯನ್ ಅಫ್ ದಿ ಇಂಡಿಯನ್ ಏಂಪೈರ್) ದೆಹಲಿ ದರ್ಬಾರ್ ನಲ್ಲಿ
* 1915 - ಕೆ.ಸಿ. ಐ. ಇ. (ನೈಟ್ ಕಮಾಂಡರ್ ಅಫ್ ದಿ ಆರ್ಡರ್ ಅಫ್ ದಿ ಇಂಡಿಯನ್ ಏಂಪೈರ್)
* 1921 - ಡಿ. ಎಸ್ ಸಿ - ಕಲ್ಕತಾ ಯೂನಿವರ್ಸಿಟಿ
* 1931 - ಎಲ್ ಎಲ್ ಡಿ - ಬಾಂಬೆ ಯೂನಿವರ್ಸಿಟಿ
* 1937 - ಡಿ. ಲಿಟ್. - ಬನಾರಸ್ ಯೂನಿವರ್ಸಿಟಿ
* 1943 - ಅಜೀವ ಸದಸ್ಯತ್ವ - ಇನಿಸ್ಟಿಟ್ಯೂಶನ್ ಅಫ್ ಇಂಜಿನೀಯರ್ಸ್ - ಭಾರತ
* 1944 - ಡಿ. ಎಸ್ ಸಿ. - ಅಲಹಾಬಾದ್ ಯೂನಿವರ್ಸಿಟಿ
* 1948 - ಡಾಕ್ಟರೇಟ್ - ಎಲ್ ಎಲ್ ಡಿ., ಮೈಸೂರು ಯೂನಿವರ್ಸಿಟಿ
* 1953 - ಡಿ. ಲಿಟ್. - ಆಂದ್ರ ಯೂನಿವರ್ಸಿಟಿ
* 1955 - ಭಾರತ ರತ್ನ (ಭಾರತದ ಅತ್ಯುನ್ನತ ಗೌರವದ ಪ್ರಶಸ್ತಿ)
* 1958 - ದುರ್ಗಾ ಪ್ರಸಾದ್ ಕೈತಾನ್ ಮೆಮೊರಿಯಲ್ ಗೋಲ್ಡ್ ಮೆಡಲ್ -ರಾಯಲ್ ಏಶಿಯಾಟಿಕ್ ಸೊಸೈಟಿ ಕೌನ್ಸಿಲ್, ಬಂಗಾಳ* 1959 - ಫೆಲೋಶಿಫ್ - ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ - ಬೆಂಗಳೂರು
ಸರ್ ಎಂ. ವಿ ಯವರ ಶತವರ್ಷ ಜನ್ಮದಿನಾಚರಣೆ - 1960
ಸರ್ ಎಂ. ವಿ ಯವರು ದಿವಂಗತರಾಗಿದ್ದು ಏಪ್ರಿಲ್ 12, 1962
ದೇಶ ಕಂಡ ಮಾಹಾನ್ ಚೇತನ 102 ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆಯನ್ನು ಮಾಡಿ ಶಿಸ್ತಿನ ಜೀವನ ನಡೆಸಿ ತಮ್ಮ ಕೊನೆಯುಸಿರು ಎಳೆದರು. ಅವರ ಜನ್ಮ ಸ್ಥಳವಾದ ಮುದ್ದೆನ ಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸ ಲಾಯಿತು, ಆ ಸ್ಥಳದಲ್ಲಿ ಸರ್ ಎಂ. ವಿ. ಯವರ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ.
ಭಾರತದ ಇತಿಹಾಸದ ಪುಟಗಳಲ್ಲಿ ಹಲವಾರು ಮಹಾತ್ಮರ ಹೆಜ್ಜೆ ಗುರುತುಗಳು ಮುಚ್ಚಿಹೋಗಿ ವೆ. ಸರ್ ಎಂ. ವಿ. ಯವರ ಜನ್ಮ ದಿನದ ಈ ಸುಸಂದರ್ಭದಲ್ಲಿ ಅವರನ್ನು ನೆನಪು ಮಾಡಿ ಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಅದರ್ಶಗಳಲ್ಲಿ ಕೆಲವನ್ನಾದರೂ ಪಾಲಿಸಿದರೆ ಭಾರತ ದಲ್ಲಿ ಜನ್ಮ ಪಡೆದುದಕ್ಕೆ ಸಾರ್ಥಕವಾದೀತು.
ಭಾನುವಾರ, ಅಕ್ಟೋಬರ್ 17, 2010
400 ವರ್ಷಗಳ ದಸರಾ ಇತಿಹಾಸ ಹೇಳುವ ಕಥೆ ಇದು… !
ಮೈಸೂರು: ಇಂದಿನ ಮೈಸೂರು ‘ಮಹಿಷೂರು’ ಆಗಿದ್ದಾಗ ಹದಿನಾಡು ಗ್ರಾಮದಿಂದ ಬಂದ ಅರಸು ಜನಾಂಗದ ಮನೆತನವೊಂದು ಇತ್ತು. ದೂರದಿಂದ ಬಂದ ಯದುರಾಯನಿಗೆ ಸದ್ಗುಣ ಸಂರಕ್ಷಕನೆಂದು ತಿಳಿದು ಇದೇ ಕುಟುಂಬ ನಂಟು ಬೆಳೆಸಿತು. ಆಗ ಯದುರಾಯ ಈ ಸಣ್ಣ ಊರೊಂದರ ನೇತೃತ್ವ ವಹಿಸಿದ. ರಾಜನೆಂದು ಕರೆದರು. ಮುಂದಿನ ಉತ್ತರಾಧಿಕಾರಿಗಳಿಗೆಲ್ಲ ಹೆಸರಿನ ಮುಂದೆ ‘ಒಡೆಯರ್’ ಎಂದು ಸೇರಿಸಿಕೊಂಡು, ಕದಂಬ, ಗಂಗ, ಚಾಲುಕ್ಯರಂತೆ ಈ ಮನೆತನವೂ ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಈ ಒಡೆಯರ್ ಎಂಬ ರಾಜಮನೆತನದಲ್ಲಿ ಪ್ರಜಾಪ್ರಭುತ್ವ ಬರುವವರೆಗೆ ‘ರಾಜತ್ವ’ ನೀಡಿದವರು 25 ಮಂದಿ. ಈ ಪೈಕಿ ಯದುರಾಯ, ಒಬ್ಬ ರಣಧೀರ ಕಂಠೀರವ, ಇನ್ನೊಬ್ಬ ತಿಮ್ಮರಾಜ, ಮತ್ತಿಬ್ಬರು ರಾಜ ಒಡೆಯರ್, ಹತ್ತು ಮಂದಿ ಚಾಮರಾಜರು, ನಾಲ್ವರು ಕೃಷ್ಣರಾಜರು, ಕೊನೆಯದಾಗಿ ಜಯಚಾಮರಾಜೇಂದ್ರ ಆಗಿ ಹೋದವರು.
ಈ ಒಡೆಯರ ಹೆಸರಿನ ರಾಜರು ಗಂಡಭೇರುಂಡ ಲಾಂಛನ ಹೊತ್ತು ಎರಡು ಕಡೆ ಆಳ್ವಿಕೆ ನಡೆಸಿದ್ದಾರೆ. ಒಂದು ಮೈಸೂರು ಮತ್ತೊಂದು ಶ್ರೀರಂಗಪಟ್ಟಣ, ಮೊದಲಿಂದ ಐವರು ಮೈಸೂರನ್ನು ಕೇಂದ್ರವಾಗಿರಿಸಿಕೊಂಡರೆ 6 ರಿಂದ 21ರವರೆಗಿನ ರಾಜರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ನಂತರದ ನಾಲ್ವರು ಮತ್ತೆ ಮೈಸೂರಿಗೆ ಸ್ಥಳಾಂತರವಾಗಿ ಅಧಿಕಾರ ನಡೆಸಿದ್ದಾರೆ. ಹಲವರು ಯುದ್ಧ ಮಾಡಿದ್ದರೆ ಮತ್ತೆ ಕೆಲವರು ಇಂಗ್ಲಿಷರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿಯೊಂದಿಗೆ ಅಪ್ಪಿಕೊಂಡು ರಾಜತ್ವ ಸಾಧಿಸಿದವರಿದ್ದಾರೆ.
ಈ ಹಿನ್ನೆಲೆಯಲ್ಲಿ ಎಂದೋ ವಿಜಯನಗರದಲ್ಲಿ ನಡೆದಿದ್ದ ಮಹಾನವಮಿ ಆಚರಣೆಯನ್ನು ಪುನರ್ ಜಾರಿಗೊಳಿಸಿ ವೈಭವೀಕರಿಸಬೇಕೆಂದು ರಾಜ ಒಡೆಯರ್ ಇಂದಿಗೆ 400 ವರ್ಷಗಳ ಹಿಂದೆ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಈ ದಸರೆಯ ದಿಬ್ಬಣವನ್ನು ಗೌರಿ ಕಡುವೆ ಎಂಬ ಸ್ಥಳದಲ್ಲಿ ಪುನಾರಂಭಿಸಿದರು.
ಈತ ದಸರೆ ಪದ್ಧತಿಗೊಂದು ಕಟ್ಟಳೆ ರೂಪಿಸಿದ. ಇದೇ ಸಂದರ್ಭದಲ್ಲಿ ಸಿಂಹಾಸನವನ್ನೇರಿದ. ಕೆಲ ಊರುಗಳನ್ನೂ ಗೆದ್ದ. ದಳವಾಯಿ ಹುದ್ದೆಯನ್ನು ಸೃಷ್ಟಿಸಿದ. ದಸರೆಯನ್ನು ಈತ ರಾಜನ ವಾರ್ಷಿಕ ವರದಿ, ಆಡಳಿತದ ಪ್ರತಿಬಿಂಬ ಜನಮುಖಿ ಕಾರ್ಯಕ್ರಮವೆಂದುಕೊಂಡು ಆಳಿದವನು. ಇದೇ ಮಾದರಿಯಲ್ಲಿ ಮುಂದಿನ ಎಲ್ಲಾ ದಸರೆಗಳೂ ನಡೆದಿವೆ. ಆ ವೈಭವವನ್ನು ಮುಂದೆ ಬಂದ ರಾಜರು ತರಲಾಗದಿದ್ದರೂ ಯಾವ ಮಾರ್ಪಾಡನ್ನೂ ಮಾಡಿಲ್ಲ.ಕೆಲವು ಬಿಟ್ಟು ಹೋಗಿವೆ. ಹಲವು ಆಧುನಿಕ ಸ್ಪರ್ಶಕ್ಕೆ ಸಿಕ್ಕಿವೆ. ಇದೊಂದು ಪರಂಪರೆಯಾಗಿ ಶ್ರೀರಂಗಪಟ್ಟಣದಿಂದ ಮೈಸೂರಿನ ಬನ್ನಿಮಂಟಪದವರೆಗೆ ಬಂದು ನಿಂತಿದೆ. ಮೈಸೂರಿನ ದಸರೆ ಪ್ರಾರಂಭವಾಗಿ (ಮುಮ್ಮಡಿ ಕೃಷ್ಣರಾಜ ಒಡೆಯರ್) 205ನೇ ವರ್ಷ ತುಂಬುತ್ತಿದೆ.
ಬದಲಾದ ಕಾಲಘಟ್ಟದಲ್ಲಿ ಮೆರವಣಿಗೆಯಲ್ಲಿ ಹೊಸದು ತುಂಬಿಕೊಂಡಿದೆ. ಆಡಳಿತ, ಹಣಬಲದ ಅನುಕೂಲ ನೋಡಿಕೊಂಡು ಜಂಬೂಸವಾರಿಯಂತೂ ಸಾಗಿದೆ. ಆದರೆ ಅರಮನೆಯ ಅಂತರಂಗದಲ್ಲಿ ನಡೆಯುವ ದಸರೆ ಹಬ್ಬ ಪೂಜೆ-ಪುನಸ್ಕಾರ, ಕಲಾಪಗಳು ಒಂದಿಷ್ಟೂ ಬದಲಾಗಿಲ್ಲ. ಅದೇ ಕಂಕಣ, ಅದೇ ದೇವಪೂಜೆ, ಅದೇ ದರ್ಬಾರ್, ಅದೇ ವ್ಯವಸ್ಥೆ ಶಿಸ್ತುಗಳು ಇಂದೂ ಖಾಸಗಿ ದರ್ಬಾರ್ನಲ್ಲೂ ಸಾಕ್ಷೀಭೂತವಾಗಿದೆ. ಎಲ್ಲರಿಗೂ, ರಾಜ್ಯಕ್ಕೂ ಅದೇ ಅಧಿದೇವತೆ ಚಾಮುಂಡೇಶ್ವರಿ. ಈ ಹಿನ್ನೆಲೆಯಲ್ಲಿ ಈ ರಾಜ ಮಹಾರಾಜರು ಮಾಡಿದುದನ್ನೂ ಸೂಕ್ಷ್ಮವಾಗಿ ಗುರುತಿಸುವುದು ಈಗ ಸೂಕ್ತ. ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಚಾಮುಂಡಿಬೆಟ್ಟದಲ್ಲಿ ಹಿರೀಕೆರೆ ಕಟ್ಟಿಸಿದರು. ಬಿರುದಂತೆಂಬರ ಗಂಡ ಬಿರುದನ್ನು ತಿಮ್ಮರಾಜ ಹೊತ್ತ, ಸುಗುಣ ಗಂಭೀರನೆಂದು ಬೋಳ ಚಾಮರಾಜ ಕರೆಸಿಕೊಂಡ. ರಣಧೀರ ಕಂಠೀರವ ನರಸಿಂಹರಾಜ ತಿರುಚಿನಾಪಳ್ಳಿ ಜಟ್ಟಿಯನ್ನುಹೊಡೆದ. ಆಯುಧ ಶಾಲೆ ಕಟ್ಟಿಸಿದ. ಮೈಸೂರಿನಲ್ಲಿ ಕೋಟೆಯನ್ನು ಬಲಪಡಿಸಿ ಫಿರಂಗಿಗಳನ್ನಿಟ್ಟು, ಚಿಕ್ಕದೇವರಾಜ ಒಡೆಯರ್ 18 ಇಲಾಖೆಗಳನ್ನೂ ಅಂಚೆ ಪದ್ಧತಿಯನ್ನು ಜಾರಿಗೊಳಿಸಿದ. ಅರಸು ಮನೆತನದ ಗಣತಿ ಕಾರ್ಯ ನಡೆಸಿದ. ಬೆಟ್ಟದ ಭೀಮರಾಜರಿದ್ದಾಗ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ರಥಕ್ಕೂ ಮದ್ದಿನಮನೆಗಳಿಗೂ ಬೆಂಕಿ ಬಿತ್ತು. ಖಾಸಾ ಭೀಮರಾಜರಿದ್ದಾಗಲೇ ಹೈದರ್- ಟಿಪ್ಪು ಅಧಿಕಾರಕ್ಕೆ . ಮುಮ್ಮಡಿ ಕಾಲದಲ್ಲಿ ಇಂಗ್ಲಿಷರ ಪ್ರಾಬಲ್ಯ. ಆದರೂ ಸಾಹಿತ್ಯ-ಸಂಗೀತಕ್ಕೆ ಪೋಷಣೆ. ಒಡೆಯರ್ ಕಾಲದಲ್ಲಿ ಆಧುನಿಕ ಶಿಕ್ಷಣ, ಪ್ರಜಾಸತ್ತೆಯ ಕಲ್ಪನೆ ರೂಪ ಪಡೆದುಕೊಂಡಿತು. ನಾಲ್ವಡಿಯವರಿಂದ ಸಾಮಾಜಿಕ -ಕೈಗಾರಿಕೆ ಅಭಿವೃದ್ಧಿ ಜಯಚಾಮರಾಜೇಂದ್ರರ ಕಾಲದಲ್ಲಿ ರಾಜತ್ವ ಹಿಂದೆ ಸರಿದು ಪ್ರಜಾಪ್ರಭುತ್ವ ಪ್ರತ್ಯಕ್ಷವಾಯಿತು.
ಈ ಎಲ್ಲಾ ರಾಜರೂ ಹತ್ತಿತರದ ಸಂಬಂಧಿಗಳಾದ ಹಳ್ಳಿಯ ಹುಡುಗಿಯರನ್ನು ರಾಣಿಯರನ್ನಾಗಿ ಮಾಡಿಕೊಂಡಿದ್ದಾರೆ. ಇಬ್ಬರಿಂದ ಹತ್ತು ಮಂದಿವರೆಗೆ ಹಾಗೂ ಒಂದಿಬ್ಬರು ದೂರದ ರಾಜಸ್ಥಾನದವರನ್ನು ಮದುವೆಯಾದವರಿದ್ದಾರೆ.
ಆದಷ್ಟೂ ಜನಮುಖಿಯಾಗಿ ನಡೆದುಕೊಂಡು ಜನರಲ್ಲಿ ವಿಶ್ವಾಸ, ಭಕ್ತಿ ರೂಢಿಸಿಕೊಂಡ ರಾಜಮನೆತನ ಇದಾಗಿದೆ. ದಾನ, ಧರ್ಮ, ಧರ್ಮಕಾರಣ, ಜನೋಪಯೋಗಿ, ಲೋಕೋಪಯೋಗಿ ಕೆಲಸ ಮಾಡಿದವರೇ ಹೆಚ್ಚು. ಮೈಸೂರು ಒಡೆಯರ್ ಮನೆತನದಲ್ಲಿ ವರ್ಣರಂಜಿತ ಮತ್ತು ವಿವೇಕತನದಲ್ಲಿ ಬಾಳಿದವರೂ ಇದ್ದಾರೆ. ಇವರನ್ನು ನಂಬಿದವರಿಗೆಲ್ಲ ಇವರೊಂದಿಗೆ ಕಷ್ಟ ನಷ್ಟ ಹೇಳಿಕೊಂಡವರಿಗೆಲ್ಲ ಫಲ ಸಿಕ್ಕಿದೆ. ಆ ಮೂಲಕ ರಾಜ್ಯಕ್ಕೂ ಒಳ್ಳೆಯದೇ ಆಗಿದೆ.

ಶುಕ್ರವಾರ, ಅಕ್ಟೋಬರ್ 15, 2010
ಮುಖೇಶ್ ಅಂಬಾನಿ ಶತಕೋಟಿ ರು.ಗಳ ಅರಮನೆ!
ಜಗತ್ತಿನ ನಾಲ್ಕನೆ ಅತಿ ಶ್ರೀಮಂತ ಮುಖೇಶ್ ಅಂಬಾನಿ ಜಗತ್ತಿನ ಪ್ರಪ್ರಥಮ ಶತಕೋಟಿ (2 ಶತಕೋಟಿ ಡಾಲರ್) ವೆಚ್ಚದ ಮನೆಯೊಂದನ್ನು ಮುಂಬೈಯಲ್ಲಿ ನಿರ್ಮಿಸಿದ್ದಾರೆ. 27 ಮಹಡಿಗಳ ಈ ಮನೆ 173 ಮೀಟರ್ ಎತ್ತರವಿದೆ. ಸುಮಾರು 630 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ಇಷ್ಟು ವೆಚ್ಚದ ಮನೆ ಜಗತ್ತಿನಲ್ಲೇ ಪ್ರಥಮ ಎನ್ನಲಾಗಿದೆ.
ಈ ಅರಮನೆಯಲ್ಲಿ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ವಾಸಿಸಲಿದ್ದಾರೆ. ಮನೆಯಲ್ಲಿ ವಿಶಾಲವಾದ ಜಿಮ್ ಮತ್ತು ನೃತ್ಯ ಸ್ಟುಡಿಯೊವನ್ನು ಹೊಂದಿರುವ ಆರೋಗ್ಯ ಕ್ಲಬ್ ಇದೆ. ಒಂದು ಈಜು ಕೊಳ, ಅತಿಥಿ ಕೋಣೆ, ವಿವಿಧ ರೀತಿಯ ಅಂಗಣಗಳು, 50 ಮಂದಿ ಕುಳಿತುಕೊಳ್ಳಬಹುದಾದ ಸಿನೆಮಾ ಮಂದಿರ ಮನೆಯೊಳಗೇ ಇದೆ ಎಂದು ವರದಿಯೊಂದು ಹೇಳಿದೆ.

ಮನೆಯ ಛಾವಣಿಯಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಕೆಳಗಿನ ಅಂತಸ್ತಿನಲ್ಲಿ ಸುಮಾರು 160 ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಸ್ಥಳಾವಕಾಶವಿದೆ. ಅತಿಥಿಗಳನ್ನು ಪ್ರಾಂಗಣದಿಂದ ಕಾರ್ಯಕ್ರಮಗಳು ನಡೆಯುವ ವಿವಿಧ ಮಹಡಿಗಳಿಗೆ ತಲುಪಿಸಲು ಕಟ್ಟಡದಲ್ಲಿ 9 ಲಿಫ್ಟ್‌ಗಳಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ 53ರ ಹರೆಯದ ಉದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಗರ ಮತ್ತು ಸಮುದ್ರದ ಸವಿಯನ್ನು ವೀಕ್ಷಿಸಲು ಅನುಕೂಲವಿದೆ.
ಕಟ್ಟಡವು 37,000 ಚದರ ಮೀಟರ್ ವಿಸ್ತಾರವಿದ್ದು, ಇದು ವೆರ್ಸಲಿಸ್ ಅರಮನೆಗೂ ದೊಡ್ಡದಾಗಿದೆ. ಇಷ್ಟು ದೊಡ್ಡ ಮನೆಯನ್ನು ಸರಿಯಾಗಿ ನಿರ್ವಹಿಸಲು ಸುಮಾರು 600 ಸಿಬ್ಬಂದಿ ಸೇವೆಗಿದ್ದಾರೆ. ಈ ಮನೆಯನ್ನು ನಿರ್ಮಿಸಲು 44 ಮಿಲಿಯನ್ ಪೌಂಡ್‌ನಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಮುಂಬೈಯ ಪ್ರಮುಖ ಕೇಂದ್ರದಲ್ಲಿ ಭೂಮಿ ಮತ್ತು ಆಸ್ತಿ ವೌಲ್ಯ ಆ ಅಂದಾಜಿನಿಂದ 15 ಪಟ್ಟು ಅಧಿಕ ವೌಲ್ಯವನ್ನು ಈ ಮನೆಗೆ ನೀಡಿದೆ. ಹೀಗಾಗಿ ಈ ಮನೆಯ ನಿರ್ಮಾಣ ವೆಚ್ಚ 630 ಮಿಲಿಯನ್ ಪೌಂಡ್ ಆಗಿದೆ ಎಂದು ಅಂದಾಜಿಸಲಾಗಿದೆ.
Filed under: ರಾಷ್ಟ್ರೀಯ ಸುದ್ಧಿಗಳು
ಬುಧವಾರ, ಅಕ್ಟೋಬರ್ 13, 2010
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್
ಮೊಬೈಲ್ ಬಳಕೆದಾರರಿಗೆ ಕನ್ನಡ ಸುದ್ದಿಗಳನ್ನು ಎಸ್ಎಮ್ಎಸ್ ಮುಖಾಂತರ ದಟ್ಸ್ ಕನ್ನಡ
ತಲುಪಿಸುತ್ತಿರುವುದು ನಮ್ಮ ಓದುಗರಿಗೆ ತಿಳಿದ ವಿಚಾರ. ಈ ನಮ್ಮ ಸೇವೆಯನ್ನು ಬಳಕೆದಾರರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಆದರೆ, ಅನೇಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಕನ್ನಡ ಅಕ್ಷರಗಳಿಗೆ ಬೆಂಬಲ ನೀಡದ ಕಾರಣ ಸಾವಿರಾರು ಓದುಗರು ಮೋಬೈಲಲ್ಲಿ ಕನ್ನಡ ಓದುವ ಅವಕಾಶದಿಂದ ವಂಚಿತರಾಗಿದ್ದಾರೆ.
ಕನ್ನಡ ಓದಬಯಸುವ ಪ್ರತಿ ಮೊಬೈಲ್ ಬಳಕೆದಾರರಿಗೆ ತಾಜಾ ಕನ್ನಡ ಸುದ್ದಿ
ಗಳನ್ನು ತಲುಪಿಸಬೇಕೆಂಬ ಒತ್ತಾಸೆ ನಮ್ಮದು. ಈ ಕಾರಣದಿಂದಾಗಿ ಆಂಗ್ಲ ಲಿಪಿಯಲ್ಲಿಯೇ ದಟ್ಸ್ ಕನ್ನಡ ಸುದ್ದಿ ಸಂದೇಶಗಳನ್ನು ನೀಡುವ ಉದ್ದೇಶದಿಂದ ಹೊಸ ಪದ್ಧತಿಯನ್ನು ಮೈಟುಡೆ.ಕಾಂ ಪ್ರಾರಂಭಿಸಿದೆ. ಕನ್ನಡ ಲಿಪಿ ಸಪೋರ್ಟ್ ಮಾಡ ಮೊಬೈಲ್ ಬಳಕೆದಾರರ ಆಗ್ರಹದ ಮೇರೆಗೆ ಈ ಹೆಚ್ಚುವರಿ ಸೇವೆಯನ್ನು ಪ್ರಾರಂಭಿಸಲಾಗಿದೆ.
ಮೊಬೈಲನ್ನು ಲಕ್ಷಾನುಲಕ್ಷ ಕನ್ನಡ ಭಾಷಿಗರು ಉಪಯೋಗಿಸುತ್ತಿದ್ದಾರೆ. ಮಾತೃಭಾಷೆಯಲ್ಲಿಯೇ ಸುದ್ದಿಗಳನ್ನು ಓದಬೇಕೆಂಬ ಆಸೆ ಅವರದು. ಸುದ್ದಿ ಸಂದೇಶಗಳು ಕನ್ನಡದಲ್ಲಿ ಬಂದರೂ ಹ್ಯಾಂಡ್ ಸೆಟ್ ನಲ್ಲಿ ಸೆಟ್ ಇರದ ಕಾರಣ ಇದರಿಂದ ವಂಚಿತರಾಗುತ್ತಿದ್ದಾರೆ. ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರಹ
) ಸುದ್ದಿ ಸಂದೇಶಗಳು ಈ ಕೊರತೆಯನ್ನು ನಿವಾರಣೆ ಮಾಡಲಿದೆ. ಈ ಸದವಕಾಶವನ್ನು ಕನ್ನಡ ಓದುಗರು ಬಳಸಿಕೊಳ್ಳುತ್ತಾರೆಂಬ ಸದಾಶಯ ನಮ್ಮದು.
ಈ ಸೇವೆಯ ಶುಲ್ಕ ಕೂಡ ರು.5, ಅದೂ ತಿಂಗಳಿಗೆ. ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಈ ಕೊಂಡಿಯನ್ನು ಕ್ಲಿಕ್ ಮಾಡಿ.
ಚಂದಾದಾರರಾಗುವುದು ಸುಲಭ
ಮೊಬೈಲ್ ಮೂಲಕ ONE-KNNEWSENG ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.
ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.
ಮೊಬೈಲಲ್ಲಿ ಕನ್ನಡ ಇಲ್ಲವೆ? ಚಿಂತಿಸಬೇಡಿ. ಇಂಗ್ಲಿಷ್ ನಲ್ಲಿ ಕನ್ನಡ ಸುದ್ದಿಗೆ ಚಂದಾದಾರರಾಗಿ.
ಕನ್ನಡ ಓದಬಯಸುವ ಪ್ರತಿ ಮೊಬೈಲ್ ಬಳಕೆದಾರರಿಗೆ ತಾಜಾ ಕನ್ನಡ ಸುದ್ದಿ
ಮೊಬೈಲನ್ನು ಲಕ್ಷಾನುಲಕ್ಷ ಕನ್ನಡ ಭಾಷಿಗರು ಉಪಯೋಗಿಸುತ್ತಿದ್ದಾರೆ. ಮಾತೃಭಾಷೆಯಲ್ಲಿಯೇ ಸುದ್ದಿಗಳನ್ನು ಓದಬೇಕೆಂಬ ಆಸೆ ಅವರದು. ಸುದ್ದಿ ಸಂದೇಶಗಳು ಕನ್ನಡದಲ್ಲಿ ಬಂದರೂ ಹ್ಯಾಂಡ್ ಸೆಟ್ ನಲ್ಲಿ ಸೆಟ್ ಇರದ ಕಾರಣ ಇದರಿಂದ ವಂಚಿತರಾಗುತ್ತಿದ್ದಾರೆ. ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರಹ
ಈ ಸೇವೆಯ ಶುಲ್ಕ ಕೂಡ ರು.5, ಅದೂ ತಿಂಗಳಿಗೆ. ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಈ ಕೊಂಡಿಯನ್ನು ಕ್ಲಿಕ್ ಮಾಡಿ.
ಚಂದಾದಾರರಾಗುವುದು ಸುಲಭ
ಮೊಬೈಲ್ ಮೂಲಕ ONE-KNNEWSENG ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.
ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.
ಮೊಬೈಲಲ್ಲಿ ಕನ್ನಡ ಇಲ್ಲವೆ? ಚಿಂತಿಸಬೇಡಿ. ಇಂಗ್ಲಿಷ್ ನಲ್ಲಿ ಕನ್ನಡ ಸುದ್ದಿಗೆ ಚಂದಾದಾರರಾಗಿ.
ಮಂಗಳವಾರ, ಅಕ್ಟೋಬರ್ 12, 2010
ಕ್ವಿಲ್ ಪ್ಯಾಡ್
ಕನ್ನಡದಲ್ಲಿ ಬರೆಯಲು, ಹುಡುಕಲು ಇದಕ್ಕಿಂತ ಉತ್ತಮ ತಾಣ ಇನ್ನೊಂದು ಇರಲಿಕ್ಕಿಲ್ಲ. ಇಲ್ಲಿ ಧೀರ್ಘಾಕ್ಷರಗಳನ್ನು ನಾವು ಕೀಲಿಸಬೇಕಿಲ್ಲ. ತನ್ನಲ್ಲಿರುವ ನಿಘಂಟನ್ನು ಬಳಸಿ ಅಕ್ಷರಗಳನ್ನು ಸರಿಯಾಗಿ ಜೋಡಿಸಿಕೊಳ್ಳುತ್ತದೆ. ಮೊಬೈಲ್ ಫೋನಿನಲ್ಲಿರುವ ಡಿಕ್ಷ್ನರಿ ಮೋಡ್ ತರಹ ಕೆಲಸ ಮಾಡುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)