ಶನಿವಾರ, ಮೇ 29, 2010

ಕರ್ನಾಟಕ ಪ್ರವಾಸೋದ್ಯಮ ಇಲಾಖೆ


ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಮರ್ಪಕ ಹೊಟೇಲ್, ವಸತಿ ಗೃಹ ಹಾಗೂ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಒದಗಿಸುತ್ತಿದೆ. ಮಾಹಿತಿಗಾಗಿ ಇಲ್ಲಿಗೆ ಬೇಟಿ ಕೊಡಿ.
http://www.karnatakatourism.org/ 

ಸೋಮವಾರ, ಮೇ 24, 2010

ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಇಳಿಕೆ

ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಇಳಿಕೆ


ಹಣದುಬ್ಬರದಿಂದಾಗಿ ಮತ್ತು ಆರ್ಥಿಕ ಮುಗ್ಗಟ್ಟಿನ ಹೊಡೆತದಿಂದ ದೇಶದ ಜನತೆ ಜಾಣರಾಗುತ್ತಿದ್ದಾರೆ. ಮಧ್ಯಮ ವರ್ಗದ ಜನರು ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಸಿದ್ಧಾಂತಕ್ಕೆ ಮೊರೆಹೋಗಿದ್ದು ಕೊಳ್ಳುಬಾಕ ಸಂಸ್ಕೃತಿಗೆ ಗುಡ್ ಬೈ ಹೇಳುತ್ತಿದ್ದಾರೆ.

ಇದರ ಪರಿಣಾಮವೇ, ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಕುಸಿದಿರುವುದು. ಜೋಬಲ್ಲಿ ದುಡ್ಡಿದ್ದೆ ಮಾತ್ರ ಕೊಳ್ಳುವುದು, ಇಲ್ಲದಿದ್ದರೆ ಸುಮ್ಮನಿದ್ದುಬಿಡೋಣ ಎಂಬ ಮಂತ್ರ ಜಪಿಸುತ್ತಿದ್ದಾರೆ. ಅನಗತ್ಯವಾಗಿ ಕ್ರೆಡಿಟ್ ಕಾರ್ಡ್ ಬಳಸಿ ಸಾಲ ತಲೆಯ ಮೇಲೆ ಎಳೆದುಕೊಳ್ಳುವುದಕ್ಕೆ ಜನ ಹಿಂಜರಿಯುತ್ತಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಏಪ್ರಿಲ್ 2008ರಲ್ಲಿ 28.9 ಮಿಲಿಯನ್ ತಲುಪಿದ್ದ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಇದೀಗ ಕುಸಿದಿದೆ. ಕಳೆದ ಮಾರ್ಚ್ ತಿಂಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ 20 ಮಿಲಿಯನ್ ಗಿಂತ ಕೆಳಗಿದೆ.

ಕಳೆದೆರಡು ವರ್ಷಗಳಿಂದ ಸುಮಾರು 10 ಮಿಲಿಯನ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. 2006ರ ಆಗಸ್ಟ್ ನಿಂದ ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ 20 ಮಿಲಿಯನ್ ಗಿಂತ ಕೆಳಗೆ ಕುಸಿದಿದೆ.

ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ಸಾಲ ಕಾರ್ಡು ಮತ್ತು ವೈಯಕ್ತಿಕ ಸಾಲಗಳ ಮಾರುಕಟ್ಟೆ ತೀವ್ರವಾಗಿ ಕುಸಿದಿದ್ದು, ಬಳಸದ ಕ್ರೆಡಿಟ್ ಕಾರ್ಡುಗಳನ್ನು ಬ್ಯಾಂಕುಗಳು ರದ್ದುಪಡಿಸಿವೆ. ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡು ಬಳಕೆದಾರರ ಸಂಖ್ಯೆ 8 ಮಿಲಿಯನ್ ನಿಂದ 5 ಮಿಲಿಯನ್ ಗೆ ಕುಸಿದಿದೆ. ದೇಶದ ಎರಡನೇ ದೊಡ್ಡ ಕ್ರೆಡಿಟ್ ಕಾರ್ಡುದಾರರನ್ನು ಹೊಂದಿರುವ ಬ್ಯಾಂಕ್ ಆಗಿರುವ ಎಚ್ ಡಿ ಎಫ್ ಸಿ ಬ್ಯಾಂಕು ಪ್ರಸ್ತುತ 4.3 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಪ್ರತೀ ತಿಂಗಳೂ 70ರಿಂದ 80 ಸಾವಿರ ನೂತನ ಕಾರ್ಡುಗಳನ್ನು ವಿತರಿಸುತ್ತಿದೆ ಎನ್ನಲಾಗಿದೆ.

ಭಾನುವಾರ, ಮೇ 16, 2010

ಕನ್ನಡ ಉಪಶೀರ್ಷಿಕೆಗಳ ಶೈಕ್ಷಣಿಕ ಡಿವಿಡಿಯ ಪ್ರಕಾಶನ

Release of DVD - "Eyes on the Sky" with Kannada subtitles


ಯುನಿಕೋಡ್ ಎಂದರೇನು?

ಯುನಿಕೋಡ್ ಎಂದರೇನು?

ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ,
ಕ್ರಮವಿಧಿ ಯಾವುದಾದರೂ ಪರವಾಗಿಲ್ಲ,
ಭಾಷೆ ಯಾವುದಾದರೂ ಪರವಾಗಿಲ್ಲ,

ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ.
ಗಣಕಗಳು ಮೂಲತಃ ಅಂಕಿಗಳೊಡನೆ ಮಾತ್ರ ವ್ಯವಹರಿಸುತ್ತವೆ. ಗಣಕಗಳಲ್ಲಿ ಅಕ್ಷರಗಳು ಹಾಗೂ ಇನ್ನಿತರ ಸಂಕೇತಗಳನ್ನು ಶೇಖರಿಸಿಡುವಾಗ ಅವುಗಳಿಗೆ ತಲಾ ಒಂದೊಂದು ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಯುನಿಕೋಡ್ ಬಳಕೆಗೆ ಬರುವ ಮುನ್ನ ಹೀಗೆ ಸಂಖ್ಯೆಗಳನ್ನು ನಿಗದಿಪಡಿಸುವ ನೂರಾರು ಎನ್‌ಕೋಡಿಂಗ್ ವ್ಯವಸ್ಥೆಗಳು ಉಪಯೋಗದಲ್ಲಿದ್ದವು. ಆದರೆ ಇಂತಹ ಯಾವ ವ್ಯವಸ್ಥೆಯೂ ಬಳಕೆಯಲ್ಲಿರುವ ಎಲ್ಲ ಅಕ್ಷರಗಳನ್ನೂ ಪ್ರತಿನಿಧಿಸುವಷ್ಟು ಶಕ್ತವಾಗಿರಲಿಲ್ಲ: ಉದಾಹರಣೆಗೆ ಯುರೋಪಿಯನ್ ಒಕ್ಕೂಟದಲ್ಲಿ ಬಳಕೆಯಲ್ಲಿರುವ ಭಾಷೆಗಳನ್ನಷ್ಟೆ ಪ್ರತಿನಿಧಿಸಲು ಅನೇಕ ಎನ್‌ಕೋಡಿಂಗ್ ವ್ಯವಸ್ಥೆಗಳು ಬೇಕಾಗುತ್ತವೆ. ಅಷ್ಟೇ ಏಕೆ, ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಎಲ್ಲ ಅಕ್ಷರಗಳು, ಲೇಖನ ಚಿಹ್ನೆಗಳು ಹಾಗೂ ತಾಂತ್ರಿಕ ಸಂಕೇತಗಳನ್ನು ಪ್ರತಿನಿಧಿಸಲು ಕೂಡ ಯಾವ ಎನ್‌ಕೋಡಿಂಗ್ ವ್ಯವಸ್ಥೆಯೂ ಪರಿಣಾಮಕಾರಿಯಾಗಿರಲಿಲ್ಲ.
ಈ ಎನ್‌ಕೋಡಿಂಗ್ ವ್ಯವಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ, ಎರಡು ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳು ಒಂದೇ ಅಕ್ಷರವನ್ನು ಪ್ರತಿನಿಧಿಸಲು ಬೇರೆಬೇರೆ ಸಂಖ್ಯೆಗಳನ್ನು ಉಪಯೋಗಿಸುವುದು ಅಥವಾ ಬೇರೆಬೇರೆ ಅಕ್ಷರಗಳನ್ನು ಪ್ರತಿನಿಧಿಸಲು ಒಂದೇ ಸಂಖ್ಯೆಯನ್ನು ಬಳಸುವುದು ಸಾಮಾನ್ಯ. ಗಣಕಗಳು (ಅದರಲ್ಲೂ ವಿಶೇಷವಾಗಿ ಸರ್ವರ್‌ಗಳು) ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳ ಬಳಕೆಗೆ ಅನುವುಮಾಡಿಕೊಡಬೇಕಾಗುತ್ತದೆ; ಆದರೆ ಅವುಗಳ ನಡುವಿನ ವೈರುದ್ಧ್ಯದಿಂದಾಗಿ ಒಂದು ವ್ಯವಸ್ಥೆಯಲ್ಲಿ ದಾಖಲಾಗಿರುವ ಪಠ್ಯ ಇನ್ನೊಂದು ವ್ಯವಸ್ಥೆಗೆ ಅಥವಾ ಪ್ಲಾಟ್‌ಫಾರ್ಮ್‌ಗೆ ಬದಲಾಗುವಾಗ ತಪ್ಪುಗಳಾಗುವ ಸಾಧ್ಯತೆ ಸದಾ ಇರುತ್ತದೆ.

ಯುನಿಕೋಡ್ ಅದನ್ನೆಲ್ಲ ಬದಲಿಸುತ್ತಿದೆ!

ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ, ಕ್ರಮವಿಧಿ ಯಾವುದಾದರೂ ಪರವಾಗಿಲ್ಲ, ಭಾಷೆ ಯಾವುದಾದರೂ ಪರವಾಗಿಲ್ಲ, ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ. ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಆಪಲ್, ಹೆಚ್‌ಪಿ, ಐಬಿಎಂ, ಜಸ್ಟ್‌ಸಿಸ್ಟಮ್ಸ್, ಮೈಕ್ರೋಸಾಫ್ಟ್, ಅರೇಕಲ್, ಎಸ್‌ಎ‌ಪಿ, ಸನ್, ಸೈಬೇಸ್, ಯುನಿಸಿಸ್ ಮತ್ತು ಇನ್ನೂ ಹಲವಾರು ಸಂಸ್ಥೆಗಳು ಯುನಿಕೋಡ್ ಮಾನಕವನ್ನು ಒಪ್ಪಿ ಅಳವಡಿಸಿಕೊಂಡಿವೆ. ಎಕ್ಸ್‌ಎಂ‌ಎಲ್, ಜಾವಾ, ಇಸಿಎಂಎಸ್ಕ್ರಿಪ್ಟ್ (ಜಾವಾಸ್ಕ್ರಿಪ್ಟ್), ಎಲ್‍ಡಿಎಪಿ, ಕೋರ್ಬಾ ೩.೦, ಡಬ್ಲ್ಯೂ‌ಎಂಎಲ್ ಮುಂತಾದ ಹಲವಾರು ಆಧುನಿಕ ಮಾನಕಗಳಿಗೆ ಅಗತ್ಯವಾದ ಯುನಿಕೋಡ್, ಐಎಸ್‌ಒ/ಐಇಸಿ ೧೦೬೪೬ ಅನ್ನು ಅಳವಡಿಸುವ ಅಧಿಕೃತ ಮಾರ್ಗವೂ ಆಗಿದೆ. ಹಲವಾರು ಕಾರ್ಯಾಚರಣ ವ್ಯವಸ್ಥೆಗಳು, ಎಲ್ಲ ಆಧುನಿಕ ಬ್ರೌಸರ್‌ಗಳು ಹಾಗೂ ಇನ್ನೂ ಅನೇಕ ಉತ್ಪನ್ನಗಳು ಯುನಿಕೋಡ್ ಬಳಕೆಯನ್ನು ಬೆಂಬಲಿಸುತ್ತವೆ. ಯುನಿಕೋಡ್ ಮಾನಕದ ಉಗಮ ಹಾಗೂ ಅದನ್ನು ಬೆಂಬಲಿಸುವ ತಂತ್ರಾಂಶ ಸಲಕರಣೆಗಳ ಲಭ್ಯತೆ, ಜಾಗತಿಕ ತಂತ್ರಾಂಶ ತಂತ್ರಜ್ಞಾನ ಕ್ಷೇತ್ರದ ಹೊಸ ಒಲವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಹಳೆಯ ವಿಧಾನಗಳಿಗೆ ಹೋಲಿಸಿದಾಗ, ಕ್ಲೈಂಟ್ - ಸರ್ವರ್ ಅಥವಾ ಬಹುಶ್ರೇಣಿಯ ಆನ್ವಯಿಕ ತಂತ್ರಾಂಶಗಳು ಹಾಗೂ ಜಾಲತಾಣಗಳಲ್ಲಿ ಯುನಿಕೋಡ್ ಬಳಸುವುದರಿಂದ ವೆಚ್ಚದಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವನ್ನು ಸಾಧಿಸಬಹುದು. ವಿನ್ಯಾಸದಲ್ಲಿ ಬದಲಾವಣೆಯಿಲ್ಲದೆ ಯಾವುದೇ ತಂತ್ರಾಂಶ ಉತ್ಪನ್ನ ಅಥವಾ ಜಾಲತಾಣವನ್ನು ಹಲವಾರು ಪ್ಲಾಟ್‌ಫಾರ್ಮ್‌ಗಳು, ಭಾಷೆಗಳು ಹಾಗೂ ದೇಶಗಳಲ್ಲಿ ಬಳಸಲು ಯುನಿಕೋಡ್ ಅನುವುಮಾಡಿಕೊಡುತ್ತದೆ. ಹಲವಾರು ವಿಭಿನ್ನ ವ್ಯವಸ್ಥೆಗಳ ನಡುವೆ ತಪ್ಪುಗಳಿಗೆ ಅವಕಾಶವಿಲ್ಲದಂತೆ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಅದು ಅನುವುಮಾಡಿಕೊಡುತ್ತದೆ.

ಯುನಿಕೋಡ್ ಕನ್ಸಾರ್ಷಿಯಂ ಬಗ್ಗೆ

ಆಧುನಿಕ ತಂತ್ರಾಂಶ ಉತ್ಪನ್ನಗಳು ಹಾಗೂ ಮಾನಕಗಳಲ್ಲಿ ಪಠ್ಯದ ಪ್ರತಿನಿಧಿತ್ವವನ್ನು ನಿರೂಪಿಸುವ ಯುನಿಕೋಡ್ ಮಾನಕದ ಅಭಿವೃದ್ಧಿ, ವಿಸ್ತರಣೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವುದು ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾದ ಯುನಿಕೋಡ್ ಕನ್ಸಾರ್ಷಿಯಂನ ಉದ್ದೇಶ. ಗಣಕ ಹಾಗು ಮಾಹಿತಿ ಸಂಸ್ಕರಣಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಅಪಾರ ಸಂಖ್ಯೆಯ ನಿಗಮಗಳು ಹಾಗೂ ಸಂಸ್ಥೆಗಳು ಈ ಕನ್ಸಾರ್ಷಿಯಂನ ಸದಸ್ಯತ್ವ ಪಡೆದುಕೊಂಡಿವೆ. ಸದಸ್ಯತ್ವ ಶುಲ್ಕದಿಂದ ಬರುವ ಆದಾಯವಷ್ಟರಿಂದಲೇ ಈ ಕನ್ಸಾರ್ಷಿಯಂಗೆ ಆರ್ಥಿಕ ನೆರವು ಒದಗುತ್ತಿದೆ. ಯುನಿಕೋಡ್ ಮಾನಕವನ್ನು ಬೆಂಬಲಿಸುವ ಹಾಗೂ ಅದರ ವಿಸ್ತರಣೆ ಮತ್ತು ಅಳವಡಿಸುವಿಕೆಯಲ್ಲಿ ನೆರವುನೀಡಲು ಇಚ್ಛಿಸುವ ಪ್ರಪಂಚದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಯುನಿಕೋಡ್ ಕನ್ಸಾರ್ಷಿಯಂ ಸದಸ್ಯತ್ವ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಶಬ್ದ ಪರಿಭಾಷೆ, ತಾಂತ್ರಿಕ ಪರಿಚಯ ಹಾಗೂ ಉಪಯುಕ್ತ ಸಂಪನ್ಮೂಲಗಳನ್ನು ನೋಡಿ.
Kannada translation by T. G. Srinidhi

ಬುಧವಾರ, ಮೇ 12, 2010

ಕನ್ನಡ ಟೈಪಿಸಲು ಗೂಗಲ್ ಹೊಸ ತಂತ್ರ - ಕನ್ನಡ Bookmarklet

ಎಲ್ಲಾದರೂ ಇರಿ. ಎಂತಾದರೂ ಇರಿ. ಆನ್ ಲೈನಲ್ಲಿ ಕನ್ನಡ ಟೈಪ್ ಮಾಡುತ್ತಿರಿ.

ವೆಬ್ ಸೈಟುಗಳಲ್ಲಿ ಕನ್ನಡ ಟೈಪ್ ಮಾಡಲು ಅನೇಕ ವಿಧಾನಗಳಿವೆ ಅಂತ ನನ್ನ ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಈಗ ಅದೆಲ್ಲಕ್ಕಿಂತ ಇನ್ನೂ ಸುಲಭದ ವಿದ್ಯೆಯನ್ನು ಕಲಿಸಿಕೊಡುತ್ತೇನೆ. Thanks to Google's Newest Bookmarklet!

ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಮೂರು ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ? ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಜೂನ್ 4ರಂದು, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ.

ಅಂದಹಾಗೆ, ಬುಕ್ಮಾರ್ಕ್-ಲೆಟ್ ಅಂದರೆ ಏನು ಅಂತ ನೀವು ಕೇಳಬಹುದು. Bookmark + Applet ಸೇರಿ Bookmarklet ಆಗಿದೆ. ಇದೊಂದು ಅತ್ಯಂತ ಪುಟಾಣಿ ತಂತ್ರಾಂಶ. ಕೆಲವಾರು ಸಾಲುಗಳ ಜಾವಾಸ್ಕ್ರಿಪ್ಟ್ ಅಷ್ಟೇ. ನಿಮ್ಮ ಬ್ರೌಸರಿನಲ್ಲಿ ಇದನ್ನು ಫೇವರೆಟ್ ಲಿಂಕ್ ಆಗಿ ಸೇರಿಸಿಕೊಂಡರೆ ಸಾಕು.ಕನ್ನಡ ಟೈಪ್ ಮಾಡಬೇಕು ಅನ್ನಿಸಿದಾಗ ಈ ಲಿಂಕ್ ಒತ್ತಬೇಕು. ಕನ್ನಡ ಲಿಪ್ಯಂತರ ಕ್ರಿಯೆ ಚಾಲೂ ಆಗುತ್ತದೆ. ಕನ್ನಡ ಟೈಪಿಂಗ್ ಬೇಡ ಅನ್ನಿಸಿದಾಗ ಮತ್ತೆ ಈ ಲಿಂಕ್ ಒತ್ತಿದರೆ ಲಿಪ್ಯಂತಕ ಕ್ರಿಯೆ ಸ್ಥಗಿತಗೊಳ್ಳುತ್ತದೆ.ಇದು ಸಹ "ಫೊನೆಟಿಕ್ ಕೀಬೋರ್ಡ ವಿನ್ಯಾಸ" ಆಧಾರಿತ ಟೂಲ್. ಅಂದರೆ, "Baruttane ಅಂತ ಟೈಪ್ ಮಾಡಿ ಒಂದು ಸ್ಪೇಸ್ ನೀಡಿದರೆ "ಬರುತ್ತಾನೆ" ಅಂತ ತಂತಾನೆ ಲಿಪ್ಯಂತರವಾಗುತ್ತದೆ.

ಈ ಟೂಲನ್ನು ಫೇವರಿಟ್ ಲಿಂಕ್ ಆಗಿ ನಿಮ್ಮ ಬ್ರೌಸರಿಗೆ ಸೇರಿಸಿಕೊಳ್ಳುವುದು ಹೇಗೆ?

1. ಮೊದಲು ಈ ಲಿಂಕಿನ ಮೇಲೆ ರೈಟ್ ಕ್ಲಿಕ್ ಮಾಡಿ. [ಅ Type in Kannada]

2. ಈಗ "Add to Favorites" ಕ್ಲಿಕ್ ಮಾಡಿ.3. ಈಗ ಈ ಕೆಳಗಿನ ಎಚ್ಚರಿಕೆಯ ಸಂದೇಶ ಮೂಡುತ್ತದೆ. ಹೆದರ ಬೇಡಿ. Yes ಬಟನ ಒತ್ತಿ. ಏಕೆಂದರೆ, ಈ ಲಿಂಕ್ ಏನೇನೂ ಅಪಾಯಕಾರಿಯಲ್ಲ.4. ಈಗ Links ಡೈರಕ್ಟರಿಯಲ್ಲಿ ಈ ಲಿಂಕನ್ನು ಸೇರಿಸಲು Add ಬಟನ್ ಒತ್ತಿ. ಅಷ್ಟೇ.5. ನಿಮ್ಮ ಕನ್ನಡ ಲಿಪ್ಯಂತರ ಲಿಂಕ್ ಸಿದ್ಧ.6. ಬ್ರೌಸರಿನ ಮೇಲಿರುವ [ಅ Type in Kannada] ಬಟನ್ ಒತ್ತಿ. ಕನ್ನಡ ಲಿಪ್ಯಂತರ ಕ್ರಿಯೆ ಆರಂಭವಾಗುತ್ತದೆ. ಈಗ ವೈಬ್ ಪೇಜಿನಲ್ಲಿ ಎಲ್ಲಿ ಕನ್ನಡ ಟೈಪ್ ಮಾಡಬೇಕೋ ಅಲ್ಲಿ ನಿಮ್ಮ ಮೌಸಿನ ಕರ್ಸರ್ ಇಟ್ಟು ಟೈಪಿಂಗ್ ಆರಂಭಿಸಿ. ಉದಾಹರಣೆಗೆ Sedina Hakki ಅಂತ ಟೈಪ್ ಮಾಡಿ. ಅದು ಸೇಡಿನ ಹಕ್ಕಿ ಅಂತ ಬದಲಾಗುತ್ತದೆ.

ಈ ರೀತಿ ನೀವು ಸುಲಭವಾಗಿ ಯಾವುದೇ ವೆಬ್ ಪೇಜಿನಲ್ಲೂ ಕನ್ನಡ ಟೈಪ್ ಮಾಡಬಹುದು.

ಈ ಟೂಲ್ Internet Explorer, Fifox, Chrome ಹಾಗೂ Safari ಬ್ರೌಸರಿಗೆ ಲಭ್ಯ. ವಿವರಗಳಿಗೆ ಇಲ್ಲಿ ನೋಡಿ
 ಇನ್ನೂ ಹೆಚ್ಚೆಚ್ಚು ಮಾಹಿತಿ  ಪಡೆಯಲು ರವಿ ಹೆಗ್ಡೆಯವರ ಬ್ಲಾಗಿಗೊಮ್ಮೆ ಬೇಟಿಕೊಡಿ.

ಶುಭ ಸಮಾರಂಭಗಳಿಗೊಂದು ಅರ್ತಾಜಾಲ ತಾಣ

ನಿಮ್ಮ ಯಾವುದೇ ರೀತಿಯ ಶುಭ ಸಮಾರಂಭಗಳು ಹಾಗೂ ಇನ್ಯಾವುದೇ ರೀತಿಯ ಆಹ್ವಾನ ಪತ್ರಿಕೆಗಳನ್ನು ನಿಮ್ಮದೇ ರೀತಿಯ ವರ್ಣರಂಜಿತ ಉಚಿತ ಅರ್ತಾಜಾಲ ತಾಣವನ್ನು ರಚಿಸಿ ನಿಮ್ಮ ಸ್ನೇಹಿತರು, ಬಂಧು-ಬಳಗಕ್ಕೆ ನಿಮ್ಮ ಮಿಂಚಂಚೆ ಮುಖಾಂತರ  ಕಳುಹಿಸಲು ಈ ತಾಣಕ್ಕೆ ಬೇಟಿಕೊಡಬಹುದು.

http://www.mywedding.com

ಭಾನುವಾರ, ಮೇ 9, 2010

ಬಹುಪಯೋಗಿ ರಾಷ್ಟ್ರೀಯ ಗುರುತಿನ ಚೀಟಿ (MNIC)

ಗುರುತು ಚೀಟಿ ಯೋಜನೆಯಿನ್ನು 'ಆಧಾರ್'; ಹೊಸ ಲಾಂಛನ


2010-2011ರೊಳಗೆ ದೇಶದ 110 ಕೋಟಿ ಜನತೆ ಗುರುತಿನ ಚೀಟಿಯನ್ನು ಹೊಂದಲಿದ್ದಾರೆ.

ಯಾವುದೇ ಸರಕಾರಿ ದಾಖಲೆಗೆ ಅಥವಾ ಬ್ಯಾಂಕ್ ಖಾತೆ ತೆರೆಯಲು ಅಥವಾ ದೂರವಾಣಿ ಸಂಪರ್ಕ ಮುಂತಾದ ವೈಯಕ್ತಿಕ ಮಾಹಿತಿ ದಾಖಲೆಗಾಗಿ ನಾಗರಿಕರು ಬಳಸಬಹುದಾದ ಬಹುಪಯೋಗಿ ಗುರುತಿನ ಚೀಟಿಯನ್ನು ನಾಗರಿಕರಿಗೆ ವಿತರಿಸಲು ಕೇಂದ್ರ ಸರಕಾರವು ರಾಷ್ಟ್ರೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವನ್ನು ಸ್ಥಾಪಿಸಿದೆ. 
ದೇಶದ ಪ್ರತಿ ನಾಗರಿಕರಿಗೂ 16 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ನೀಡುವ ಯುಪಿಎ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ  'ಆಧಾರ್' ಎಂದು ಮರು ನಾಮಕರಣ ಮಾಡಲಾಗಿದ್ದು, ಹೊಸ ಲಾಂಛನವನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಅಧ್ಯಕ್ಷರಾಗಿರುವ ಐಟಿ ದಿಗ್ಗಜ ನಂದನ್ ನಿಲೇಕಣಿಯವರು 'ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆ'ಯು (ಯುಐಡಿ) ಜನಸಾಮಾನ್ಯರನ್ನು ಸುಲಭವಾಗಿ ತಲುಪುವಂತಾಗುವ ನಿಟ್ಟಿನಲ್ಲಿ 'ಆಧಾರ್' ಎಂದು ಮರು ನಾಮಕರಣಗೊಳಿಸಿದ್ದಾರೆ.
ಯುಐಡಿ ಎನ್ನುವುದು ತುಂಬಾ ಗೊಂದಲ ಹುಟ್ಟಿಸುತ್ತಿದೆ. ಕೆಲವು ಇದನ್ನು ಡಿಯುಐ ಎಂದು, ಇನ್ನು ಕೆಲವರು ಐಯುಡಿ ಎಂದು ಕರೆಯುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯ ಹೆಸರನ್ನು ಯೋಜನೆಗೆ ಇಡುವ ನಿರ್ಧಾರಕ್ಕೆ ಬರಲಾಯಿತು.
ಅದೇ ರೀತಿ ಉತ್ಕೃಷ್ಟ ಗುಣಮಟ್ಟದ ಲಾಂಛನವನ್ನು ಕೂಡ ಸಿದ್ಧಪಡಿಸಲಾಗಿದೆ. ಈ ನೂತನ ಲಾಂಛನದಲ್ಲಿ ಸೂರ್ಯ ಹಳದಿ ಬಣ್ಣದಿಂದ ಹೊರಗಡೆ ಕಂಗೊಳಿಸುತ್ತಿದ್ದರೆ, ಮಧ್ಯದಲ್ಲಿ ಹೆಬ್ಬೆಟ್ಟಿನ ಚಿಹ್ನೆ ಕೆಂಪು ಬಣ್ಣದಲ್ಲಿದೆ. ಇದನ್ನು ಸಾರ್ವಜನಿಕರು ಕಳುಹಿಸಿದ ಲಾಂಛನದಿಂದ ಆರಿಸಲಾಗಿದೆ.
ಆಧಾರ್ ಲಾಂಛನಕ್ಕಾಗಿ ದೇಶದಾದ್ಯಂತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊನೆಗೆ ಮುಂಬೈ ನಿವಾಸಿ ಅತುಲ್ ಸುಧಾಕರ ರಾವ್ ಪಾಂಡೆ ಎಂಬ ಜನಸಾಮಾನ್ಯ ರಚಿಸಿದ ಲಾಂಛನವನ್ನು ಯೋಜನೆಗೆ ಬಳಸಿಕೊಳ್ಳಲಾಗಿದೆ.
ಈ ಲಾಂಛನವನ್ನು ಅನಾವರಣಗೊಳಿಸಿದ್ದು ಕೂಡ ಜನಸಾಮಾನ್ಯನಾದ ಉತ್ತರ ಪ್ರದೇಶದ ಅಜಂಗಢದ ನಿವಾಸಿ ಧನೇಶ್ವರ್ ರಾಮ್.
ಪ್ರಯೋಜನಗಳು:
MNIC

ಮಾದರಿ ಗುರುತಿನ ಚೀಟಿ
!st card

NEw one

ಈ ಗುರುತಿನ ಚೀಟಿಯಿಂದ ಜನಸಾಮನ್ಯರಿಗೆ ಅನುಕೂಲವಾಗುವುದೆಂಬ ನಂಬಿಕೆ.
ಹೆಚ್ಚಿನ ಮಾಹಿತಿಗೆ 
http://www.mnic.in/ 
http://mnic.nic.in/ 

ಗುರುವಾರ, ಮೇ 6, 2010

Kannada Sangha's across the world


 Toronto Kannada sangha

 Gulf Varte

 Kaveri Kannada Sangha


Singapore Kannada Sangha


 Pampa Kannada Koota of Michigan


 New England Kannada Koota


 Arizona Kannada Sangha


 Sydney Kannada Sangha


AKKA


 Kannada koota of Northern California


 Kannada sangha of Southern California


 Nrupathunga Kannada koota of Atlanta


 Kannada koota of Newyork


 Austin Kannada Sangha


 Mallige Kannada Sangha of Texas


 Kannada Association of Indianapolis


 Kannada sangha of Richmond, Virginia

 Vidyaranaya Kannada Koota, Illinois

 St. Louis, MO Kannada sangha


 Portland Kannada Koota


 Chandana Kannada Sangha, Kansas city


 Srigandha kannada koota of Florida


 Kannada Balaga, Tokyo

 Kannada Sangha, Bahrain


 Colorado Kannada Sangha


 Sangeeta kannada koota

 Sangama of Pittsburgh


 Kasturi kannada cultural Association of N.E. Ohio


 Malaysia Kannada Koota


Kannada Koota of Montreal


Kannada Koota formed in Louisville, Kentucky 
 http://www.bhoomikaa.org/  Kannada Sangha of Washigton D.C.
 http://www.triveniusa.org/ Kannada Association of Delaware Valley
 http://www.brindavana.org/ Kannada Sangha of New Jersey
 http://www.sharavati.com.au.tt/ Karnataka Sangha in Delhi
 http://www.kuwaitkannadakoota.org/Kuwait kannada Koota
 http://www.delhikarnatakasangha.com/  Delhi Karnataka Sangha