ಬುಧವಾರ, ಜೂನ್ 23, 2010

ದಿನಾಲೂ ಇಡ್ಲಿ-ಸಾಂಬಾರ್ ಯಾಕೆ ಎನ್ನುವ ವಿಪ್ರೋ

ಐಟಿ ದಿಗ್ಗಜ ವಿಪ್ರೋ ಟೆಕ್ನಾಲಜಿಯ ಮಿಶನ್10ಎಕ್ಸ್ ಎನ್ನುವ ಕಾರ್ಯಕ್ರಮವು ದೇಶದ ತಾಂತ್ರಿಕ ಕಾಲೇಜುಗಳ ಶಿಕ್ಷಕರಿಗೆ ತರಗತಿಗಳಲ್ಲಿ ಹೊಸತನ ತುಂಬುವುದು ಹೇಗೆಂದು ತರಬೇತಿ ನೀಡುವ ಕಾರ್ಯಕ್ರಮ.ಮೂರು ವರ್ಷದ ಹಿಂದೆ ಶಿಕ್ಷಕರ ದಿನ ಸೆಪ್ಟೆಂಬರ್ ಐದರಂದುಆರಂಭವಾದ ಕಾರ್ಯಕ್ರಮ, ಶಿಕ್ಷಕರು ಬರೇ ಮಾತಿನ ಮೂಲಕ ತರಗತಿಗಳಲ್ಲಿ ಏಕತಾನತೆಹುಟ್ಟಿಸದೆ, ನಾವೀನ್ಯತೆ ತರಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ.ಈಗಾಗಲೇ ಸುಮಾರು ಒಂಭತ್ತು ಸಾವಿರ ಶಿಕ್ಷಕರತರಬೇತಿಯನ್ನು ಮುಗಿಸಿರುವ ಕಂಪೆನಿಯು, ಬರುವ ಶಿಕ್ಷಕರ ದಿನದೊಳಗೆ ಹತ್ತು ಸಾವಿರ ಜನರಿಗೆತರಬೇತಿ ನೀಡಿ ತಯಾರು ಮಾಡುವ ಪಣ ತೊಟ್ಟಿದೆ.ಅತ್ಯುತ್ತಮ ಇಡ್ಲಿ-ಸಾಂಬಾರ್ ಅನ್ನ ಯಾರಿಗಾದರೂ ದಿನಕ್ಕೆ ಮೂರು ಬಾರಿ ಬಡಿಸಿದರೆ,ಅದು ಕೆಲವೇ ದಿನದಲ್ಲಿ ಬೋರು ಹುಟ್ಟಿಸುವಂತೆ, ಬೋಧನೆಯಲ್ಲಿ ಏಕತಾನತೆ ಇದ್ದರೆ, ಅದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸದಿರಬಹುದು ಎಂಬಂತಹ ಉಪಮಾನಗಳ ಮೂಲಕ, ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿ, ಕಲಿಸುವ ಪ್ರಯತ್ನ ನಡೆಸಲು ಶಿಕ್ಷಕರನ್ನು ಪ್ರಚೋದಿಸುತ್ತಿದೆ. ವಿವಿಧ ವಿಷಯಗಳ ಬಗ್ಗೆ ಪ್ರಯೋಗಗಳನ್ನು ನಡೆಸಲು, ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ನೀಡುವ ಶೈಕ್ಷಣಿಕ ಕಲಿಕಾ ಕಿಟ್ ಒಂದರ ಮಾದರಿಯನ್ನೂ ಮಿಷನ್10ಎಕ್ಸ್ ಅಡಿ ಸಿದ್ಧ ಪಡಿಸಲಾಗಿದೆ. ಯೋಜನೆಯ ವಿವರಗಳಿಗೆ http://www.mission10... ನೋಡಿ.

ಶುಕ್ರವಾರ, ಜೂನ್ 18, 2010

ಯಾವ ಆಸ್ಪತ್ರೆ ಅಗ್ಗ?

ಆರೋಗ್ಯ ವಿಮೆ ಹೊಂದಿರುವ ಅಮೆರಿಕನ್ನರು ಆಸ್ಪತ್ರೆ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.ಆದರೀಗ ನಿಧಾನವಾಗಿ ಆ ಪರಿಪಾಠ ಬದಲಾಗುತ್ತಿದೆ.ಉದ್ಯೋಗದಾತರು ತಮ್ಮ ನೌಕರರ ಆರೋಗ್ಯ ವಿಮಾ ಸೌಲಭ್ಯವನ್ನು ಹಿಂದೆಗೆದು ಕೊಳ್ಳುತ್ತಿರುವುದರೊಂದಿಗೆ,  ನೌಕರರು ಸ್ವತ: ವಿಮೆ ಮಾಡಿಸಬೇಕಿದೆ.ಆದುದರಿಂದ ಹಣ ನೀಡದೇ, ಆಸ್ಪತ್ರೆವಾಸ ಅನುಭವಿಸುವ ದಿನಗಳು ಇನ್ನು ಮುಂದೆಯೂ ಸಿಗದಿರಬಹುದು.ಕಿಸೆಯಿಂದ ತೆತ್ತು ಚಿಕಿತ್ಸೆ ಪಡೆಯುವಾಗ,ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ ಅಥವಾ ವೈದ್ಯರ ಹುಡುಕಾಟ ಅಗತ್ಯವಿದೆ.http://www.castlighthealth.com/ ಅಂತಹ ಅಂತರ್ಜಾಲ ತಾಣಗಳು ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಶ್ರಮಿಸುತ್ತಿವೆ. ಶಸ್ತ್ರಕ್ರಿಯೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿಧಿಸಲಾಗುವ ದರವನ್ನು ಹೋಲಿಸಿ,ರೋಗಿಗೆ ಅನುಕೂಲ ಕಲ್ಪಿಸುವುದು ಇವರ ಕಾರ್ಯತಂತ್ರ.ವಿಮಾ ಕಂಪೆನಿಗಳು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಚಿಕಿತ್ಸೆಗಳಿಗೆ ತಮ್ಮದೇ ದರ ನಿಗದಿ ಪಡಿಸುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ.ಹಾಗಾಗಿ ಚಿಕಿತ್ಸೆಯ ನಿಜವಾದ ದರ ಎಷ್ಟು ಎನ್ನುವುದು ಗುಪ್ತವಾಗಿರುವುದು ಸದ್ಯದ ರೂಢಿ.ನೌಕರರಿಗೆ
ಚಿಕಿತ್ಸೆ ಬೇಕಾದಾಗ, ದರ ಪಟ್ಟಿ ಆಧರಿಸಿದ ಪರಿಹಾರವನ್ನು ಉದ್ಯೋಗದಾತರು ನೀಡುತ್ತಾರೆ.ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಯಸುವವರು ಹೆಚ್ಚಿನ ಹಣವನ್ನು ಸ್ವಂತವಾಗಿ ಭರಿಸುವುದು ಅನಿವಾರ್ಯ.

ಬುಧವಾರ, ಜೂನ್ 16, 2010

ಓದುಗರ ಆಯ್ಕೆ:ಸುದ್ದಿಗಾಗಿ ಬೇಟೆಯಾಡುವವರಿಗೆ ತಾಣ


ಮೊಬೈಲಿನಲ್ಲಿ ಪ್ರಾದೇಶಿಕ ಭಾಷೆಗಳ ಪತ್ರಿಕೆಗಳನ್ನು ಮೊಬೈಲಿನಲ್ಲಿ ನೋಡುವ ಸೇವೆ ಒದಗಿಸುವ ತಾಣ http://www.newshunt.com ಆಗಿದೆ.ಒಂಭತ್ತು ವಿವಿಧ ಭಾಷೆಗಳ,ಇಪ್ಪತ್ತರಷ್ಟು ಪತ್ರಿಕೆಗಳು ಸದ್ಯಕ್ಕೆ ಲಭ್ಯವಿವೆ. ವಿಶೇಷವೆಂದರೆ ವಿವಿಧ ಕಂಪೆನಿಗಳ ಐನೂರು ವಿವಿಧ ಹ್ಯಾಂಡ್‌ಸೆಟ್‌ಗಳಲ್ಲಿ ಈ ಸೇವೆ ಲಭ್ಯವಿರುವಂತೆ ಮಾಡಲಾಗಿದೆ. ಹೆಚ್ಚಿನೆಲ್ಲಾ ಸೆಲ್‌ಫೋನ್ ಆಪರೇಟರ್‌ಗಳೂ ಕೂಡಾ ಈ ಸೇವೆ ಒದಗಿಸುತ್ತಿದ್ದಾರೆ.ಇದರ ಸೇವೆ ಪಡೆಯಲು ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಎಸ್ ಎಂ ಎಸ್ ಸಂದೇಶವನ್ನು 57333ಗೆ hunt ಎಂಬ ವಿಷಯದೊಂದಿಗೆ ಕಳುಹಿಸಬೇಕು. ತಂತ್ರಾಂಶವನ್ನು ಅನುಸ್ಥಾಪಿಸಿದ ನಂತರ, ನಿಮಗೆ ಬೇಕಾದ ಪತ್ರಿಕೆಯನ್ನು ಆಯ್ದು, ಬೇಕಾದ ತೆರನ ಸುದ್ದಿಗಳನ್ನು ಆಯ್ದರೆ ಸರಿ.ನಿಮ್ಮ ಸೆಲ್‌ಪೋನ್‌ನಲ್ಲಿ ಜಿಪಿಆರೆಸ್ ಸೌಕರ್ಯವಿರಬೇಕಾಗಿರುವುದು ಮುಖ್ಯ. ಮಂಗಳೂರಿನ "ಉದಯವಾಣಿ" ಓದುಗ ಕಾರ್ತಿಕ್ ಪೈಯವರು ಈ ತಾಣದ ಸೇವೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಟಿವಿ-ಅಂತರ್ಜಾಲ ಬೆಸೆಯಲಿರುವ ಗೂಗಲ್

ಜಗತ್ತಿನಲ್ಲಿ ನಾಲ್ಕುನೂರು ಕೋಟಿ ಜನರು ಟಿವಿ ವೀಕ್ಷಣೆಯಲ್ಲಿ ತೊಡಗುತ್ತಾರೆ.ಅಮೆರಿಕಾದ ಜನರು ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಸಾಮಾನ್ಯ.ಆದರೆ ನೂರಾರು ಚಾನೆಲ್‌ಗಳ ಕಾರ್ಯಕ್ರಮ ಪಟ್ಟಿಯನ್ನು
ಜಾಲಾಡಿ,ನಮಗಿಷ್ಟವಾದ ಕಾರ್ಯಕ್ರಮದ ವೇಳೆಯನ್ನು ಪತ್ತೆ ಹಚ್ಚಿ,ಆ ವೇಳೆಗೆ ಸರಿಯಾಗಿ ಟಿವಿಯ ಮುಂದೆ ಕುಳಿತು ಟಿವಿ ವೀಕ್ಷಿಸುವುದು,ಈಗಿನ ಜನರಿಗೆ ಕಷ್ಟವೆನಿಸತೊಡಗಿದೆ.ಅಂತರ್ಜಾಲವು ಸುಲಭ ಶೋಧ ಸೌಕರ್ಯವನ್ನು ಕೊಡುವುದು,ನೇರ ಟಿವಿಪ್ರಸಾರವನ್ನೂ ಒದಗಿಸುತ್ತಿರುವ ಕಾರಣ,ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರಿನಲ್ಲಿ ನೋಡುವವರೂ ಹೆಚ್ಚುತ್ತಿದ್ದಾರೆ. ಇದನ್ನು ಮನಗಂಡು ಗೂಗಲ್ ಇನ್ನು "ಗೂಗಲ್ ಟಿವಿ"ಯನ್ನು ಒದಗಿಸಲು ಯೋಜಿಸಿದೆ.ಇದರ ಮೂಲಕ ಟಿವಿಯ ಮೂಲಕವೇ ಅಂತರ್ಜಾಲವನ್ನೂ ನೋಡಬಹುದು.ಗೂಗಲ್ ಕ್ರೋಮಿನ ಮೂಲಕ ಶೋಧ ನಡೆಸಿ,ಟಿವಿ ಕಾರ್ಯಕ್ರಮಗಳನ್ನು ನೋಡಬಹುದು. ಆಟಗಳನ್ನೂ ಆಡಬಹುದು.ಇಲ್ಲವೇ ಅಂತರ್ಜಾಲದಲ್ಲಿರುವ ಬಂಧು ಮಿತ್ರರ ಚಿತ್ರಗಳನ್ನೂ ಟಿವಿಯಲ್ಲಿಯೇ
ನೋಡಬಹುದು. ಶೋಧ ಕಾರ್ಯವನ್ನೂ ನಡೆಸಬಹುದು. ಸೆಟ್‌ಟಾಪ್ ಪೆಟ್ಟಿಗೆ,ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಗಳೂ ಲಭ್ಯವಾಗಲಿವೆ. ಜತೆಗೆ ಅಂತರ್ಜಾಲ ತಾಣಗಳು ಗೂಗಲ್ ಟಿವಿಗೆ ತಮ್ಮನ್ನು ಅಣಿಗೊಳಿಸಲು ಸಹಾಯವನ್ನೂ ಗೂಗಲ್ ಒದಗಿಸಲಿದೆ.ತಂತ್ರಾಂಶ ಅಭಿವೃದ್ಧಿ ಪಡಿಸುವವರು,ಗೂಗಲ್ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನು ಬಳಸಿ,ಹೊಸ ಸೇವೆಗಳಿಗೆ ಗೂಗಲ್ ಟಿವಿಯನ್ನು ಸಜ್ಜುಗೊಳಿಸಬಹುದು.ವಿವರಗಳಿಗೆ http://www.google.co... ನೋಡಬಹುದು.ಯುಟ್ಯೂಬ್ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ನೋಡುವುದು,ಅಂತರ್ಜಾಲದಲ್ಲಿ ಲಭ್ಯವಿರುವ ಹಳೆಯ ಟಿವಿ ಶೋಗಳನ್ನು ನೋಡುವುದಾಗಲಿ, ಹಾಡುಗಳನ್ನು ಕೇಳುವುದಾಗಲಿ ಇವನ್ನು ಟಿವಿಯ ಮೂಲಕವೇ ಮಾಡಬಹುದು.ಒಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹುಡುಕುವ ಸಮಯ ಕಡಿಮೆ ಮಾಡಿ,ಸುಲಭವಾಗಿ ಮನಸ್ಸಿಗೆ ಇಷ್ಟವಾದ ಕಾರ್ಯಕ್ರಮಗಳನ್ನು ನೋಡಲು ಗೂಗಲ್ ಟಿವಿ ಅವಕಾಶ ಕಲ್ಪಿಸಲಿದೆ.

ಆನ್‌ಲೈನಿನಲ್ಲಿ ದಿನಬಳಕೆ ವಸ್ತು ಖರೀದಿ ಮಾಡಿ

ದಿನಬಳಕೆಯ ಸಾಬೂನಿನಂತಹ ಖರೀದಿಯನ್ನು ಅಂತರ್ಜಾಲದ ಇ-ವ್ಯವಹಾರದ ಮೂಲಕ ಮಾಡುವವರು ಹೆಚ್ಚಿಲ್ಲ.ಆದರೆ ಜನರಲ್ಲಿ ಅಂತಹ ಪ್ರವೃತ್ತಿಯನ್ನು ಹುಟ್ಟುಹಾಕಲು ಬಯಸಿರುವ ತಾಣ www.soap.com ಈಗ ಆರಂಭವಾಗಿದೆ.ಸಾಬೂನಿನಂತಹ ವಸ್ತುಗಳು ವಿಶೇಷ ಮುತುವರ್ಜಿವಹಿಸಿ ಖರೀದಿಸ ಬೇಕಾದ ವಸ್ತುವಲ್ಲ. ಟೂತ್‌ಪೇಸ್ಟ್, ಬ್ರಶ್,ಶಾಂಪೂ, ಡಿಟರ್ಜಂಟ್ ಮುಂತಾದ ಹಲವು ಸಾಮಗ್ರಿಗಳನ್ನು ನಾವು ನಿಗದಿತ ಬ್ರಾಂಡ್ ಹೆಸರಿನ ಮೂಲಕ ಖರೀದಿಸುವುದೇ ಹೆಚ್ಚು.ಹಾಗಾಗಿ ಇವುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ,ಕೊರಿಯರ್ ಮೂಲಕ ತಕ್ಷಣ ಪಡೆಯಲು ಅವಕಾಶ ನೀಡುವ ಸೇವೆಯನ್ನು ಅಂತರ್ಜಾಲ ತಾಣವು ಒದಗಿಸುತ್ತದೆ.http://www.diapers.com/ ಅಂತರ್ಜಾಲ ತಾಣದ ಯಶಸ್ಸಿನಿಂದ ಉತ್ತೇಜಿತರಾದವರು ಸೋಪ್.ಕಾಂ ತಾಣವನ್ನು ಆರಂಬಿಸಿದ್ದಾರೆ.ಡಯಾಪರ್.ಕಾಂ ತಾಣವು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.

ಭಾನುವಾರ, ಜೂನ್ 13, 2010

ವಿಶ್ವಪ್ರಸಿದ್ಧ ಹಂಪಿ ಕಲ್ಲಿನ ರಥಕ್ಕೆ ಗೋಪುರವಿತ್ತು!


ವಿಶ್ವಪ್ರಸಿದ್ಧ ಹಂಪಿ ಕಲ್ಲಿನ ರಥಕ್ಕೆ ಗೋಪುರವಿತ್ತು!

ಹೌದು ಇದು ಆಶ್ಚರ್ಯವೆನಿಸಿದರೂ ನಿಜ. ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲ ಸುಮಾರು 1520. ಇವನ ಆಳ್ವಿಕೆಯಲ್ಲಿಯೇ ವಿಜಯನಗರ ಉತ್ತುಂಗ ಸ್ಥಿತಿ ತಲುಪಿ, ಸುಂದರವಾದ ವಾಸ್ತು-ಶಿಲ್ಪಗಳು, ದೇಗುಲಗಳ ಕೆತ್ತನೆ ನಡೆದದ್ದು. ಆ ಸಂದರ್ಭದಲ್ಲೇ ಬೆಣಚುಕಲ್ಲಿನಿಂದ ನಿರ್ಮಾಣವಾದ ಈ ರಥಕ್ಕೆ ಚೆಂದಾದ ಗೋಪುರವೊಂದಿತ್ತು. ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಜನಜೀವನದ ಬಗ್ಗೆ ಇತಿಹಾಸ ಸಂಶೋಧಕ ರಾಬರ್ಟ್ ಸೆವೆಲ್ ಬರೆದ 'ಎ ಫರ್ ಗಾಟನ್ ಎಂಪೈರ್' ಪುಸ್ತಕದಲ್ಲಿ ಹಂಪಿ ಕಲ್ಲಿನ ರಥದ ಬಗ್ಗೆ ವಿಸ್ತಾರವಾಗಿ ಬರೆದಿದ್ದು ಅದರ ಮೂಲಚಿತ್ರವನ್ನು ಕಣ್ಣೆದುರಿಗೆ ತೆರೆದಿಟ್ಟಿದ್ದಾರೆ.

ಈ ಚಿತ್ರವನ್ನು ನೋಡಿದರೆ ಇತಿಹಾಸದ ಗ್ರಹಿಕೆ ಮತ್ತು ನಮಗಿರುವ ಜ್ಞಾನದ ಬಗ್ಗೆ ಯೋಚನೆಗೆ ಅಚ್ಚುತ್ತದೆ. ರಾಬರ್ಟ್ ಸೆವೆಲ್ ಪುಸ್ತಕ ಪ್ರಕಟವಾದದ್ದು 1900ರಲ್ಲಿ. ಈ ಚಿತ್ರವನ್ನು ಸುಮಾರು ಒಂದು ಶತಮಾನದ ಹಿಂದೆ ತೆಗೆದದ್ದು. ಈ ನಡುವೆ 1986ರವರೆಗೆ ಅಂದರೆ ಯುನೆಸ್ಕೋ ವರ್ಲ್ಡ್ ಹೆರಿಟೆಜ್ ಸೈಟ್ ಎಂದು ಘೋಷಿಸುವವರೆಗೂ ಈ ಹಂಪಿಯಗತಿ ಹೇಗಿತ್ತು ಎಂಬುದನ್ನು ಊಹಿಸಬಹುದು. ಗೋಪುರವಿಲ್ಲದ ರಥದಂತೆ ಕಳೆದ ಐದುನೂರು ವರ್ಷಗಳಲ್ಲಿ ಅಲ್ಲಿ ಏನೇನಾಯಿತು ಎಂಬುದು ಅವರವರ ಊಹೆಗೆ ಬಿಟ್ಟದ್ದು. 
ಕೃಪೆ:
http://hallikannada.blogspot.com/search?updated-max=2008-11-08T18%3A50%3A00%2B05%3A30&max-results=7