ಗುರುತು ಚೀಟಿ ಯೋಜನೆಯಿನ್ನು 'ಆಧಾರ್'; ಹೊಸ ಲಾಂಛನ
2010-2011ರೊಳಗೆ ದೇಶದ 110 ಕೋಟಿ ಜನತೆ ಗುರುತಿನ ಚೀಟಿಯನ್ನು ಹೊಂದಲಿದ್ದಾರೆ.
ಯಾವುದೇ ಸರಕಾರಿ ದಾಖಲೆಗೆ ಅಥವಾ ಬ್ಯಾಂಕ್ ಖಾತೆ ತೆರೆಯಲು ಅಥವಾ ದೂರವಾಣಿ ಸಂಪರ್ಕ ಮುಂತಾದ ವೈಯಕ್ತಿಕ ಮಾಹಿತಿ ದಾಖಲೆಗಾಗಿ ನಾಗರಿಕರು ಬಳಸಬಹುದಾದ ಬಹುಪಯೋಗಿ ಗುರುತಿನ ಚೀಟಿಯನ್ನು ನಾಗರಿಕರಿಗೆ ವಿತರಿಸಲು ಕೇಂದ್ರ ಸರಕಾರವು ರಾಷ್ಟ್ರೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವನ್ನು ಸ್ಥಾಪಿಸಿದೆ.
ದೇಶದ ಪ್ರತಿ ನಾಗರಿಕರಿಗೂ 16 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ನೀಡುವ ಯುಪಿಎ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ 'ಆಧಾರ್' ಎಂದು ಮರು ನಾಮಕರಣ ಮಾಡಲಾಗಿದ್ದು, ಹೊಸ ಲಾಂಛನವನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಅಧ್ಯಕ್ಷರಾಗಿರುವ ಐಟಿ ದಿಗ್ಗಜ ನಂದನ್ ನಿಲೇಕಣಿಯವರು 'ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆ'ಯು (ಯುಐಡಿ) ಜನಸಾಮಾನ್ಯರನ್ನು ಸುಲಭವಾಗಿ ತಲುಪುವಂತಾಗುವ ನಿಟ್ಟಿನಲ್ಲಿ 'ಆಧಾರ್' ಎಂದು ಮರು ನಾಮಕರಣಗೊಳಿಸಿದ್ದಾರೆ.
ಯುಐಡಿ ಎನ್ನುವುದು ತುಂಬಾ ಗೊಂದಲ ಹುಟ್ಟಿಸುತ್ತಿದೆ. ಕೆಲವು ಇದನ್ನು ಡಿಯುಐ ಎಂದು, ಇನ್ನು ಕೆಲವರು ಐಯುಡಿ ಎಂದು ಕರೆಯುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯ ಹೆಸರನ್ನು ಯೋಜನೆಗೆ ಇಡುವ ನಿರ್ಧಾರಕ್ಕೆ ಬರಲಾಯಿತು.

ಅದೇ ರೀತಿ ಉತ್ಕೃಷ್ಟ ಗುಣಮಟ್ಟದ ಲಾಂಛನವನ್ನು ಕೂಡ ಸಿದ್ಧಪಡಿಸಲಾಗಿದೆ. ಈ ನೂತನ ಲಾಂಛನದಲ್ಲಿ ಸೂರ್ಯ ಹಳದಿ ಬಣ್ಣದಿಂದ ಹೊರಗಡೆ ಕಂಗೊಳಿಸುತ್ತಿದ್ದರೆ, ಮಧ್ಯದಲ್ಲಿ ಹೆಬ್ಬೆಟ್ಟಿನ ಚಿಹ್ನೆ ಕೆಂಪು ಬಣ್ಣದಲ್ಲಿದೆ. ಇದನ್ನು ಸಾರ್ವಜನಿಕರು ಕಳುಹಿಸಿದ ಲಾಂಛನದಿಂದ ಆರಿಸಲಾಗಿದೆ.
ಆಧಾರ್ ಲಾಂಛನಕ್ಕಾಗಿ ದೇಶದಾದ್ಯಂತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊನೆಗೆ ಮುಂಬೈ ನಿವಾಸಿ ಅತುಲ್ ಸುಧಾಕರ ರಾವ್ ಪಾಂಡೆ ಎಂಬ ಜನಸಾಮಾನ್ಯ ರಚಿಸಿದ ಲಾಂಛನವನ್ನು ಯೋಜನೆಗೆ ಬಳಸಿಕೊಳ್ಳಲಾಗಿದೆ.
ಆಧಾರ್ ಲಾಂಛನಕ್ಕಾಗಿ ದೇಶದಾದ್ಯಂತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕೊನೆಗೆ ಮುಂಬೈ ನಿವಾಸಿ ಅತುಲ್ ಸುಧಾಕರ ರಾವ್ ಪಾಂಡೆ ಎಂಬ ಜನಸಾಮಾನ್ಯ ರಚಿಸಿದ ಲಾಂಛನವನ್ನು ಯೋಜನೆಗೆ ಬಳಸಿಕೊಳ್ಳಲಾಗಿದೆ.
ಈ ಲಾಂಛನವನ್ನು ಅನಾವರಣಗೊಳಿಸಿದ್ದು ಕೂಡ ಜನಸಾಮಾನ್ಯನಾದ ಉತ್ತರ ಪ್ರದೇಶದ ಅಜಂಗಢದ ನಿವಾಸಿ ಧನೇಶ್ವರ್ ರಾಮ್.
ಪ್ರಯೋಜನಗಳು:
ಮಾದರಿ ಗುರುತಿನ ಚೀಟಿ
ಈ ಗುರುತಿನ ಚೀಟಿಯಿಂದ ಜನಸಾಮನ್ಯರಿಗೆ ಅನುಕೂಲವಾಗುವುದೆಂಬ ನಂಬಿಕೆ.
ಹೆಚ್ಚಿನ ಮಾಹಿತಿಗೆ
http://www.mnic.in/
http://mnic.nic.in/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ