ಬುಧವಾರ, ಜೂನ್ 16, 2010

ಟಿವಿ-ಅಂತರ್ಜಾಲ ಬೆಸೆಯಲಿರುವ ಗೂಗಲ್

ಜಗತ್ತಿನಲ್ಲಿ ನಾಲ್ಕುನೂರು ಕೋಟಿ ಜನರು ಟಿವಿ ವೀಕ್ಷಣೆಯಲ್ಲಿ ತೊಡಗುತ್ತಾರೆ.ಅಮೆರಿಕಾದ ಜನರು ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಸಾಮಾನ್ಯ.ಆದರೆ ನೂರಾರು ಚಾನೆಲ್‌ಗಳ ಕಾರ್ಯಕ್ರಮ ಪಟ್ಟಿಯನ್ನು
ಜಾಲಾಡಿ,ನಮಗಿಷ್ಟವಾದ ಕಾರ್ಯಕ್ರಮದ ವೇಳೆಯನ್ನು ಪತ್ತೆ ಹಚ್ಚಿ,ಆ ವೇಳೆಗೆ ಸರಿಯಾಗಿ ಟಿವಿಯ ಮುಂದೆ ಕುಳಿತು ಟಿವಿ ವೀಕ್ಷಿಸುವುದು,ಈಗಿನ ಜನರಿಗೆ ಕಷ್ಟವೆನಿಸತೊಡಗಿದೆ.ಅಂತರ್ಜಾಲವು ಸುಲಭ ಶೋಧ ಸೌಕರ್ಯವನ್ನು ಕೊಡುವುದು,ನೇರ ಟಿವಿಪ್ರಸಾರವನ್ನೂ ಒದಗಿಸುತ್ತಿರುವ ಕಾರಣ,ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರಿನಲ್ಲಿ ನೋಡುವವರೂ ಹೆಚ್ಚುತ್ತಿದ್ದಾರೆ. ಇದನ್ನು ಮನಗಂಡು ಗೂಗಲ್ ಇನ್ನು "ಗೂಗಲ್ ಟಿವಿ"ಯನ್ನು ಒದಗಿಸಲು ಯೋಜಿಸಿದೆ.ಇದರ ಮೂಲಕ ಟಿವಿಯ ಮೂಲಕವೇ ಅಂತರ್ಜಾಲವನ್ನೂ ನೋಡಬಹುದು.ಗೂಗಲ್ ಕ್ರೋಮಿನ ಮೂಲಕ ಶೋಧ ನಡೆಸಿ,ಟಿವಿ ಕಾರ್ಯಕ್ರಮಗಳನ್ನು ನೋಡಬಹುದು. ಆಟಗಳನ್ನೂ ಆಡಬಹುದು.ಇಲ್ಲವೇ ಅಂತರ್ಜಾಲದಲ್ಲಿರುವ ಬಂಧು ಮಿತ್ರರ ಚಿತ್ರಗಳನ್ನೂ ಟಿವಿಯಲ್ಲಿಯೇ
ನೋಡಬಹುದು. ಶೋಧ ಕಾರ್ಯವನ್ನೂ ನಡೆಸಬಹುದು. ಸೆಟ್‌ಟಾಪ್ ಪೆಟ್ಟಿಗೆ,ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಗಳೂ ಲಭ್ಯವಾಗಲಿವೆ. ಜತೆಗೆ ಅಂತರ್ಜಾಲ ತಾಣಗಳು ಗೂಗಲ್ ಟಿವಿಗೆ ತಮ್ಮನ್ನು ಅಣಿಗೊಳಿಸಲು ಸಹಾಯವನ್ನೂ ಗೂಗಲ್ ಒದಗಿಸಲಿದೆ.ತಂತ್ರಾಂಶ ಅಭಿವೃದ್ಧಿ ಪಡಿಸುವವರು,ಗೂಗಲ್ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನು ಬಳಸಿ,ಹೊಸ ಸೇವೆಗಳಿಗೆ ಗೂಗಲ್ ಟಿವಿಯನ್ನು ಸಜ್ಜುಗೊಳಿಸಬಹುದು.ವಿವರಗಳಿಗೆ http://www.google.co... ನೋಡಬಹುದು.ಯುಟ್ಯೂಬ್ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ನೋಡುವುದು,ಅಂತರ್ಜಾಲದಲ್ಲಿ ಲಭ್ಯವಿರುವ ಹಳೆಯ ಟಿವಿ ಶೋಗಳನ್ನು ನೋಡುವುದಾಗಲಿ, ಹಾಡುಗಳನ್ನು ಕೇಳುವುದಾಗಲಿ ಇವನ್ನು ಟಿವಿಯ ಮೂಲಕವೇ ಮಾಡಬಹುದು.ಒಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹುಡುಕುವ ಸಮಯ ಕಡಿಮೆ ಮಾಡಿ,ಸುಲಭವಾಗಿ ಮನಸ್ಸಿಗೆ ಇಷ್ಟವಾದ ಕಾರ್ಯಕ್ರಮಗಳನ್ನು ನೋಡಲು ಗೂಗಲ್ ಟಿವಿ ಅವಕಾಶ ಕಲ್ಪಿಸಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ