ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾವು ಎರಡು ಕೋಟಿ ಅನುದಾನವನ್ನು ನೀಡಿದೆ.ಕನ್ನಡ ವಿಕಿಪೀಡಿಯಾದ ತಾಣವನ್ನು ಹೋಲದೆ,ಈ ತಾಣ ಪ್ರತ್ಯೇಕ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ.ಯುನಿಕೋಡಿನಲ್ಲಿ ಬರಹಗಳು ಲಭ್ಯವಿರುವುದು ಪ್ಲಸ್ ಪಾಯಿಂಟ್.ಅಂತರ್ಜಾಲ ಶೋಧ ಸಾಧ್ಯವಾಗಲು, ಈ ಅಂಶ ನೆರವಾಗಲಿದೆ.ಈ ಜ್ಞಾನಕೋಶವನ್ನು ಸಮೃದ್ಧಗೊಳಿಸಲು,ಕನ್ನಡಿಗರೆಲ್ಲಾ ಕೈಗೂಡಿಸಿಬೇಕಿದೆ.ತಮ್ಮ ಬರಹಗಳನ್ನು ಈ ವಿಶ್ವಕೋಶಕ್ಕೆ ಸೇರಿಸಿ,ಇದನ್ನು ಜ್ಞಾನದ ಕಣಜವಾಗಿಸುವುದು ಅವಶ್ಯಕ.ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಕೋಶಕ್ಕೆ ಬರಹವನ್ನು ಸೇರಿಸುವಂತಹ ಕೆಲಸಗಳನ್ನು ನೀಡಿ,ಆ ಮೂಲಕ ವಿದ್ಯಾರ್ಥಿ ಸಮುದಾಯದ ಸಹಭಾಗಿತ್ವವನ್ನು ಪಡೆಯಲು ಪ್ರಯತ್ನಿಸಬೇಕು.ಜ್ಞಾನ ಎಂಬುವುದು ಎಲ್ಲರಲ್ಲೂ ಇದೆ,ಮತ್ತು ಜ್ಞಾನ ಎಲ್ಲರಿಗಾಗಿ ಎನ್ನುವ ಧ್ಯೇಯ ವಾಕ್ಯವನ್ನು ಹೊಂದಿದ ಕಣಜ,ಸರಕಾರದ ಬೊಕ್ಕಸವನ್ನು ಮಾತ್ರಾ ಬರಿದಾಗಿಸದೆ,ಕನ್ನಡಿಗರ ಪ್ರಯೋಜನಕ್ಕೆ ಸಿಗಲಿ. ಅತ್ತ ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾ ಮುಕ್ತ ವಿಶ್ವಕೋಶ, http://kn.wikipedia.org/wiki ಈಗಾಗಲೇ ಏಳೂವರೆ ಸಾವಿರ ಬರಹಗಳನ್ನು ಕಲೆ ಹಾಕಿ ದಾಪುಗಾಲು ಹಾಕುತ್ತಿದೆ.ವಿಕಿಪೀಡಿಯಾಕ್ಕೆ ಯಾರು ಬೇಕಾದರೂ ಬರಹಗಳನ್ನು ಸೇರಿಸಲು ಅವಕಾಶವಿದೆ.ಆನ್ಲೈನ್ನಲ್ಲಿ ಇರುವಾಗ ಈ ಬರಹಗಳನ್ನು ಸೇರಿಸಬಹುದು,ಇತರರ ಬರಹಗಳನ್ನು ತಿದ್ದಬಹುದು.ಸರ್ಕಾರಿ ವಿಶ್ವಕೋಶವಾದರೋ,ಜನರಲ್ಲಿ ಬರಹಗಳನ್ನು ಬರೆದು ಕಳುಹಿಸಿ ಎಂದು ವಿನಂತಿಸುತ್ತಿದೆ! ಆನ್ಲೈನಿನಲ್ಲಿದ್ದು ಬರಹ ಸೇರಿಸುವ ಅವಕಾಶವನ್ನು ಸದ್ಯಕ್ಕಂತೂ ಕೊಟ್ಟಿಲ್ಲ.
ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
ಗುರುವಾರ, ಏಪ್ರಿಲ್ 15, 2010
ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ
ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ
ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ್ನು ತಿಳಿದುಕೊಂಡು,ಆತನ ಮರಣಾನಂತರ,ಆತನ ಅಂತಿಮ ಅಭಿಲಾಷೆಯನ್ನು ನೆರವೇರಿಸಿಕೊಡಲು ಸಹಾಯ ಮಾಡುತ್ತವೆ.ಡಿಜಿಟಲ್ ಉಯಿಲು ಮುಖ್ಯವಾಗಿ,ವ್ಯಕ್ತಿಯ ಅಂತರ್ಜಾಲದ ಬದುಕಿನ ಬಗ್ಗೆ ಇರುತ್ತದೆ.ಆತನ ಮಿಂಚಂಚೆ ಖಾತೆಗಳು,ಫೇಸ್ಬುಕ್,ಟ್ವಿಟರ್ ಅಂತಹ ಖಾತೆಗಳು,ಆತನ ಬ್ಲಾಗುಗಳು ಇವನ್ನು ಮರಣಾನಂತರ ಹೇಗೆ ನಿರ್ವಹಿಸಬೇಕೆನ್ನುವುದು ವ್ಯಕ್ತಿಯ ಅಂತಿಮ ಆಸೆ ಎನ್ನುವುದನ್ನು ತಿಳಿದುಕೊಂಡು,ಆ ಪ್ರಕಾರ ಕ್ರಮ ತೆಗೆದುಕೊಳ್ಳಲು ಈ ಅಂತರ್ಜಾಲ ತಾಣಗಳು ಸಹಾಯ ಮಾಡುತ್ತವೆ.ಸತ್ತ ನಂತರವೂ ಖಾತೆಗಳು ಚಾಲೂ ಇರುವುದು,ಆಭಾಸಕ್ಕೆ ದಾರಿ ಮಾಡಿಕೊಡುವುದನ್ನು ತಡೆಯಲು ಈ ಕ್ರಮ ಸಹಾಯ ಮಾಡುತ್ತದೆ.ವ್ಯಕ್ತಿ ಬಯಸಿದರೆ,ಆತನ ಮಿಂಚಂಚೆ ಸಂಪರ್ಕಗಳಿಗೆ,ಆತನ ಮರಣದ ಬಗ್ಗೆ ತಿಳಿಸುವುದು,ಬ್ಲಾಗ್-ಸಾಮಾಜಿಕ ಜಾಲತಾಣಗಳ ಆತನ ಸ್ನೇಹಿತರಿಗೆ ವ್ಯಕ್ತಿಯ ಅಂತ್ಯದ ಬಗ್ಗೆ ತಿಳಿಸುವುದೇ ಮುಂತಾದ ಅಗತ್ಯ ಕ್ರಮಗಳನ್ನು ಈ ತಾಣಗಳು ತೆಗೆದುಕೊಳ್ಳುತ್ತವೆ.ಬಯಸಿದರೆ,ಖಾತೆಗಳನ್ನು ಅಮಾನತುಗೊಳಿಸಲೂ ಸಾಧ್ಯ.ಈ ಸೇವೆಯು ಉಚಿತವಾಗಿ ಲಭ್ಯವಿದೆ.ಈ ಸೇವೆಯಲ್ಲಿ ಹತ್ತು ಖಾತೆಗಳನ್ನು ಅಮಾನತು ಮಾಡುವ ಸೇವೆಯಷ್ಟೇ ಸಿಗುತ್ತದೆ.ಆದರೆ ಮುನ್ನೂರು ಡಾಲರು ತೆತ್ತರೆ,ಬಯಸಿದ ಸೇವೆಯನ್ನು ನೀಡಲಾಗುತ್ತದೆ.
ಗೂಗಲ್:ಕನ್ನಡ ಟೈಪಿಂಗ್ಗೆ ಸೌಲಭ್ಯ
ಗೂಗಲ್:ಕನ್ನಡ ಟೈಪಿಂಗ್ಗೆ ಸೌಲಭ್ಯ


ಮಿಂಚಂಚೆ,ಅಂತರ್ಜಾಲ ಪುಟ,ಬ್ಲಾಗ್ ಹೀಗೆ ಬೇಕೆಂದಲ್ಲಿ ಕನ್ನಡದಲ್ಲಿ ಟೈಪಿಂಗ್ ಮಾಡಲು ಅನುವು ಮಾಡುವ ಗೂಗಲ್ ಐಎಂಇ(input method) ತಂತ್ರಾಂಶವೀಗ ಲಭ್ಯವಿದೆ.ಇದನ್ನು ಅನುಸ್ಥಾಪಿಸಿದಲ್ಲಿ ಕನ್ನಡ ಟೈಪಿಂಗ್ ಅನ್ನು ಲಿಪ್ಯಂತರಣ ವಿಧಾನದಲ್ಲಿ ಮಾಡಬಹುದು.ಇಂಗ್ಲೀಷಿನಲ್ಲಿ ಕನ್ನಡ ಬರೆದಂತೆ ಟೈಪಿಸಿದರೆ,ಅಕ್ಷರಗಳು ಮೂಡುವುದು ಲಿಪ್ಯಂತರಣ ವಿಧಾನದ ವೈಶಿಷ್ಟ್ಯ.google IME ಎಂದು ಶೋಧಿಸಿದರೆ,ಡೌನ್ಲೋಡ್ ಪುಟ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ.
ಯಕ್ಷಮಾತು
ಯಕ್ಷಮಾತು


http://www.yakshamatu.blogspot.com/ ಎನ್ನುವುದು ಯಕ್ಷಗಾನದ ಬಗ್ಗೆ ಮೀಸಲಾಗಿಸಿದ ಕನ್ನಡ ಬ್ಲಾಗ್.ನಾ.ಕಾರಂತ ಪೆರಾಜೆಯವರ ಈ ಬ್ಲಾಗು,ಯಕ್ಷಗಾನ ಕಲಾವಿದರ ಬಗ್ಗೆ,ಯಕ್ಷಗಾನ ಕಲೆಯ ಬಗ್ಗೆ ಬರಹಗಳನ್ನು ಹೊಂದಿದೆ.ಸುಮಾರು ಐದುವರ್ಷಗಳ ಕಾಲ ನಾ ಕಾರಂತ ಪೆರಾಜೆಯವರು ಯಕ್ಷಗಾನದ ನಂಟನ್ನು ಸ್ವತ: ಹೊಂದಿದ್ದವರು.ಸದ್ಯ "ಅಡಿಕೆ ಪತ್ರಿಕೆ"ಯ ಸಹಾಯಕ ಸಂಪಾದಕ.http://hasirumatu.blogspot.com/ ಇವರ ಇನ್ನೊಂದು ಬ್ಲಾಗ್.ಇದು ಕೃಷಿ ಮತ್ತು ಪರಿಸರದ ಬಗೆಗಿನ ಬ್ಲಾಗ್ ಎನ್ನುವುದು ಹೆಸರೇ ಸೂಚಿಸುತ್ತದೆ ಅಲ್ಲವೇ?
ಗೆರೆ-ಬರೆ
ಗೆರೆ-ಬರೆ


ಜಗಜೀವನ್ ಶೆಟ್ಟಿಯವರು ವ್ಯಂಗ್ಯಚಿತ್ರ ಕಲಾವಿದರು,ಜತೆಗೆ "ಉದಯವಾಣಿ", "ತರಂಗ"ವೂ ಸೇರಿದಂತೆ ಹಲವು ಪತ್ರಿಕೆಗಳಿಗೆ ಚಿತ್ರರಚನೆಯನ್ನೂ ಮಾಡಿ ಹೆಸರು ಮಾಡಿದ ಕಲಾವಿದ ಕೂಡಾ.ಇವರ ಮಕ್ಕಳ ಕಲಾಶಾಲೆ "ಗೆರೆ-ಬರೆ" ಉಡುಪಿಯ ಹೊರವಲಯ ಅಂಬಾಗಿಲಿನಲ್ಲಿದೆ.ಈ ಕಲಾಶಾಲೆಯ ಬ್ಲಾಗ್ www.gerebare.blogspot.comನಲ್ಲಿ ಆರಂಭವಾಗಿದೆ.ಈ ಕಲಾಶಾಲೆಯ ಐದನೆ ವರ್ಷಾಚರಣೆಯ ಸ್ಮರಣಾರ್ಥವಾಗಿ,ಕಾರ್ಟೂನ್ ಮತ್ತು ಮಕ್ಕಳು ರಚಿಸಿದ ಪೋಸ್ಟರುಗಳ ಪ್ರದರ್ಶನ ರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯಲಿದೆ.ವಿವರಗಳು ಬ್ಲಾಗ್ನಲ್ಲಿವೆ.
ವ್ಯಂಗ್ಯಚಿತ್ರಕಾರ "ಹರಿಣಿ"ಯವರ ಅಂತರ್ಜಾಲ ತಾಣ http://harinigallery.blogspot.comನಲ್ಲಿದೆ. ತರಂಗದಲ್ಲಿ "ಹರಿಣಿ"ಯೆಂಬ ಹೆಸರಿನಲ್ಲಿ ವ್ಯಂಗ್ಯಚಿತ್ರ ರಚಿಸಿ,ಪ್ರಸಿದ್ಧಿಗೆ ಬಂದ ಕಲಾವಿದ ಹರಿಶ್ಚಂದ್ರ ಶೆಟ್ಟಿಯವರು ಮಹಿಳೆಯೆಂದೇ ಜನರು ಭಾವಿಸಿದ್ದರು. ವ್ಯಂಗ್ಯಭಾವಚಿತ್ರ ರಚನೆಯಲ್ಲೂ ಅವರದು ಎತ್ತಿದ ಕೈ.ಅವರ ಇತ್ತೀಚಿನ ವ್ಯಂಗ್ಯಚಿತ್ರಗಳು, ವ್ಯಂಗ್ಯ ಭಾವಚಿತ್ರಗಳು ಮತ್ತು ಇ-ಪೈಂಟಿಂಗಗಳನ್ನು ಬ್ಲಾಗಿನಲ್ಲಿ ನೋಡಬಹುದು.
ವ್ಯಂಗ್ಯಚಿತ್ರಕಾರ "ಹರಿಣಿ"ಯವರ ಅಂತರ್ಜಾಲ ತಾಣ http://harinigallery.blogspot.comನಲ್ಲಿದೆ. ತರಂಗದಲ್ಲಿ "ಹರಿಣಿ"ಯೆಂಬ ಹೆಸರಿನಲ್ಲಿ ವ್ಯಂಗ್ಯಚಿತ್ರ ರಚಿಸಿ,ಪ್ರಸಿದ್ಧಿಗೆ ಬಂದ ಕಲಾವಿದ ಹರಿಶ್ಚಂದ್ರ ಶೆಟ್ಟಿಯವರು ಮಹಿಳೆಯೆಂದೇ ಜನರು ಭಾವಿಸಿದ್ದರು. ವ್ಯಂಗ್ಯಭಾವಚಿತ್ರ ರಚನೆಯಲ್ಲೂ ಅವರದು ಎತ್ತಿದ ಕೈ.ಅವರ ಇತ್ತೀಚಿನ ವ್ಯಂಗ್ಯಚಿತ್ರಗಳು, ವ್ಯಂಗ್ಯ ಭಾವಚಿತ್ರಗಳು ಮತ್ತು ಇ-ಪೈಂಟಿಂಗಗಳನ್ನು ಬ್ಲಾಗಿನಲ್ಲಿ ನೋಡಬಹುದು.
ಬ್ಲಾಗನ್ನು ಮುದ್ರಿಸಿ
ಬ್ಲಾಗನ್ನು ಮುದ್ರಿಸಿ
ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್ಪ್ಯಾಡ್,ವರ್ಡ್ಪ್ರೆಸ್ ಅಥವಾ ಬ್ಲಾಗರ್ ಸೇವೆಯ ಮೂಲಕ ಬರೆಯುವವರು ಈ ಸೇವೆಯನ್ನು ಪಡೆಯಬಹುದು.ನಿಮ್ಮ ಬ್ಲಾಗಿನ ವಿಳಾಸವನ್ನು ನೀಡಿ,ಮುಖಪುಟ ಮತ್ತು ಹಿಂಬದಿ ರಕ್ಷಾಪುಟವನ್ನು ಅಪ್ಲೋಡ್ ಮಾಡುವ ಮೂಲಕ ಕೆಲವೇ ನಿಮಿಷದಲ್ಲಿ ಬ್ಲಾಗ್ ಪುಸ್ತಕವನ್ನು ರಚಿಸಬಹುದು.ರಕ್ಷಾಪುಟವನ್ನು ನೀವು ನೀಡದಿದ್ದರೆ,ತಾನಾಗಿ ಅದನ್ನು ವಿನ್ಯಾಸ ಮಾಡಲೂ ಸೇವೆ ಶಕ್ತವಿದೆ.ಯಾವ ತಾರೀಕುಗಳ ನಡುವಣ ಬ್ಲಾಗ್ ಪುಸ್ತಕ ಬೇಕು ಎನ್ನುವುದನ್ನು ನಮೂದಿಸಲೂ ಸಾಧ್ಯವಿದೆ.ಸಂಪೂರ್ಣ ಬ್ಲಾಗನ್ನು ಒಂದೇ ಪುಸ್ತಕ ಮಾಡಬೇಕೆಂದೇನೂ ಇಲ್ಲ.ಪುಸ್ತಕದ ಮುನ್ನೋಟವನ್ನು ಪಡೆಯಲೂ ಬಹುದು.ಬ್ಲಾಗ್ ಪುಸ್ತಕವನ್ನು ಮುದ್ರಿಸಿ,ನಿಮಗೆ ಕೊರಿಯರ್ ಮೂಲಕ ಕಳುಹಿಸುವ ಸೇವೆಗೆ ಹದಿನೈದು ಡಾಲರಿನಿಂದ ಆರಂಭಿಸಿ,ಪುಟಗಳ ಸಂಖ್ಯೆಯ ಮೇಲೆ ದರ ವಿಧಿಸಲಾಗುತ್ತದೆ.ಪುಸ್ತಕದ ಇ-ಪ್ರತಿಗಾದರೆ ಬೆಲೆ ಕಡಿಮೆ.
ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್ಪ್ಯಾಡ್,ವರ್ಡ್ಪ್ರೆಸ್ ಅಥವಾ ಬ್ಲಾಗರ್ ಸೇವೆಯ ಮೂಲಕ ಬರೆಯುವವರು ಈ ಸೇವೆಯನ್ನು ಪಡೆಯಬಹುದು.ನಿಮ್ಮ ಬ್ಲಾಗಿನ ವಿಳಾಸವನ್ನು ನೀಡಿ,ಮುಖಪುಟ ಮತ್ತು ಹಿಂಬದಿ ರಕ್ಷಾಪುಟವನ್ನು ಅಪ್ಲೋಡ್ ಮಾಡುವ ಮೂಲಕ ಕೆಲವೇ ನಿಮಿಷದಲ್ಲಿ ಬ್ಲಾಗ್ ಪುಸ್ತಕವನ್ನು ರಚಿಸಬಹುದು.ರಕ್ಷಾಪುಟವನ್ನು ನೀವು ನೀಡದಿದ್ದರೆ,ತಾನಾಗಿ ಅದನ್ನು ವಿನ್ಯಾಸ ಮಾಡಲೂ ಸೇವೆ ಶಕ್ತವಿದೆ.ಯಾವ ತಾರೀಕುಗಳ ನಡುವಣ ಬ್ಲಾಗ್ ಪುಸ್ತಕ ಬೇಕು ಎನ್ನುವುದನ್ನು ನಮೂದಿಸಲೂ ಸಾಧ್ಯವಿದೆ.ಸಂಪೂರ್ಣ ಬ್ಲಾಗನ್ನು ಒಂದೇ ಪುಸ್ತಕ ಮಾಡಬೇಕೆಂದೇನೂ ಇಲ್ಲ.ಪುಸ್ತಕದ ಮುನ್ನೋಟವನ್ನು ಪಡೆಯಲೂ ಬಹುದು.ಬ್ಲಾಗ್ ಪುಸ್ತಕವನ್ನು ಮುದ್ರಿಸಿ,ನಿಮಗೆ ಕೊರಿಯರ್ ಮೂಲಕ ಕಳುಹಿಸುವ ಸೇವೆಗೆ ಹದಿನೈದು ಡಾಲರಿನಿಂದ ಆರಂಭಿಸಿ,ಪುಟಗಳ ಸಂಖ್ಯೆಯ ಮೇಲೆ ದರ ವಿಧಿಸಲಾಗುತ್ತದೆ.ಪುಸ್ತಕದ ಇ-ಪ್ರತಿಗಾದರೆ ಬೆಲೆ ಕಡಿಮೆ.ಇಸ್ರೋದ ಭುವನ್ಗೆ ಹೊಳಪು
ಇಸ್ರೋದ ಭುವನ್ಗೆ ಹೊಳಪು
ಇಸ್ರೋವೂ ಗೂಗಲ್ ಅರ್ಥ್ ಅನ್ನು ಅನುಕರಿಸಿ,ತನ್ನ ಉಪಗ್ರಹಗಳ ಚಿತ್ರಗಳನ್ನು "ಭುವನ್" ಮೂಲಕ ಅಂತರ್ಜಾಲದಲ್ಲಿ ಲಭ್ಯವಾಗಿಸಿದ್ದು ಹಳೆಯ ಸುದ್ದಿ.ಈ ಸೇವೆಯು ನೋಂದಾಯಿತ ಬಳಕೆದಾರರಿಗಷ್ಟೇ ಲಭ್ಯವಿತ್ತು.ಅದನ್ನೀಗ ಮುಕ್ತವಾಗಿ ಬಳಸಬಹುದು. www.bhuvan.nrsc.gov.in ಅಂತರ್ಜಾಲ ವಿಳಾಸದಲ್ಲಿ ತಾಣವಿದೆ.IRS P6(Resourcesat-1) ಮೂಲಕ ಲಭ್ಯವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲು ಇಸ್ರೋ ಬಯಸಿದೆ. ಫೈರ್ಪಾಕ್ಸ್ ಬ್ರೌಸರ್ ಬಳಸಿಯೂ ಭುವನ್ ಚಿತ್ರಗಳನ್ನು ವೀಕ್ಷಿಸಬಹುದು.ಇಲ್ಲಿ ಸಿಗುವ ಚಿತ್ರಗಳಲ್ಲಿ 5.8ಮೀ ಸ್ಪಷ್ಟತೆಯವೂ ಸೇರಿವೆ.ವಿದೇಶೀ ನೆಲವನ್ನು 56ಮೀ ಸ್ಪಷ್ಟತೆಯಲ್ಲಿ ತೋರಿಸಲಾಗಿದೆ. ದೇಶದೊಳಗೆ, ರಾಜ್ಯ,ಜಿಲ್ಲೆ,ತಾಲೂಕು ಮತ್ತು ಹಳ್ಳಿಗಳ ಗಡಿಯನ್ನೂ ಗುರುತಿಸಲಾದ ಮೂರು ಆಯಾಮದ ಚಿತ್ರ ವೀಕ್ಷಣೆಯನ್ನು ಲಭ್ಯವಾಗಿಸಿದೆ.ಸದ್ಯವೇ ಭುವನ್ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುವುದಾಗಿ ಇಸ್ರೋ ಬಳಕೆದಾರರಿಗೆ ಬರೆದ
ಮಿಂಚಂಚೆಯಲ್ಲಿ ತಿಳಿಸಿದೆ.
ಮಿಂಚಂಚೆಯಲ್ಲಿ ತಿಳಿಸಿದೆ.
ವಿದ್ಯಾರ್ಥಿಗಳ ಬ್ಲಾಗುಗಳು
ಬ್ಲಾಗು ಬರೆಯುವಲ್ಲಿ ಯುವಜನತೆ ಅತ್ಯುತ್ಸಾಹ ತೋರುತ್ತಿದೆ.ಕಂಪ್ಯೂಟರ್ ಬಳಸುವವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿರುವುದರಿಂದ ಇದು ನಿರೀಕ್ಷಿತವೇ ಹೌದು.ಅದರಲ್ಲೂ ವಿದ್ಯಾರ್ಥಿಗಳಂತೂ ಬ್ಲಾಗ್ ಬರವಣಿಗೆಯನ್ನು ಗಂಭೀರವಾಗಿಯೇ ಮಾಡುತ್ತಾರೆ.ಬ್ಲಾಗು ಬರೆದು,ದುಡ್ಡು ಮಾಡಲೂ ಸಾಧ್ಯ ಎನ್ನುವ ಕೆಲವು ಉದಾಹರಣೆಗಳು ಇಂತವರಿಗೆ ಹೆಚ್ಚಿನ ಉಮೇದು
ನೀಡಲೂ ಬಹುದು.ರಾಕೇಶ್ರ "ಮನಕ್ಕಾಗಿ http://manakkagi.blogspot.com/, ನರೇಂದ್ರ ಪೈ ಅವರ http://frozenwell.wordpress.com, ಕಾರ್ತಿಕ್ ಕಸ್ತೂರಿಯವರ http://dailyapps.net/,ಸುಶ್ರುತ್ ತೆಂಡೂಲ್ಕರ್ ಅವರ
http://www.sushtend.blogspot.com,ಆದಿತ್ಯರ http://www.opensourcecollection.blogspot.com, ಕೆನೆತ್ರ
http://aninosaintlife.wordpress.com, ಪ್ರಿಯಾಂಕಾ ಪ್ರಭು ಅವರ http://vpriyankaprab... ಬ್ಲಾಗುಗಳನ್ನು ಗಮನಿಸಬಹುದು. ಕನ್ನಡದಲ್ಲಿ ಬ್ಲಾಗ್ ಬರವಣಿಗೆ ಪ್ರಯತ್ನಿಸುವವರ ಸಂಖ್ಯೆ ಕಡಿಮೆ,ತಂತ್ರಜ್ಞಾನ ಸಂಬಂಧೀ ಬ್ಲಾಗುಗಳೇ ಅಧಿಕ ಎನ್ನುವುದನ್ನೂ ಗಮನಕ್ಕೆ ಬರದಿರದು.
ಮೈಕ್ರೋಸಾಫ್ಟ್ ಡ್ರೀಮ್ಸ್ಪಾರ್ಕ್ ಯಾತ್ರಾ
ಮೈಕ್ರೋಸಾಫ್ಟ್ ಡ್ರೀಮ್ಸ್ಪಾರ್ಕ್ ಯಾತ್ರಾ
ಕಂಪ್ಯೂಟರ್ ಬಳಸುವವರಿಗೆ ಮೈಕ್ರೋಸಾಫ್ಟ್ ಕಂಪೆನಿಯ ಬಗ್ಗೆ ಗೊತ್ತೇ ಇರುತ್ತದೆ.ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ವಿಂಡೋಸ್ 7,ಇಂಟರ್ನೆಟ್ ಎಕ್ಸ್ಪ್ಲೋರರ್ ಬ್ರೌಸರ್ ತಂತ್ರಾಂಶಗಳು ಸದ್ಯ ಸುದ್ದಿಯಲ್ಲಿವೆ. ಈ ಕಂಪೆನಿಯು ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು. ವಿದ್ಯಾರ್ಥಿ ಸಹಭಾಗಿಗಳನ್ನು ನೇಮಿಸಿಕೊಳ್ಳುವ ವಿನೂತನ ತಂತ್ರ ಬಳಸುತ್ತಿದೆ.ವಿದ್ಯಾರ್ಥಿ ಸಹಭಾಗಿಗಳು ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಕೊಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಡ್ರೀಮ್ಸ್ಪಾರ್ಕ್ ಯಾತ್ರಾ ಎನ್ನುವ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಹಮ್ಮಿಕೊಂಡಿದ್ದು, ಎಪ್ರಿಲ್ ಐದರಂದು ಒಂದು ದಿನದ ಕಾರ್ಯಕ್ರಮವು ನಿಟ್ಟೆಯ ಎನ್ ಎಂ ಎ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರಗಲಿದೆ.ರಸಪ್ರಶ್ನೆ,ಹೆಚ್ಚು ಮಂದಿ ನೋಂದಾಯಿಸುವ ಕಾಲೇಜುಗಳಿಗೆ ಪ್ರಶಸ್ತಿಯಂತಹ ಕೊಡುಗೆಗಳಿವೆ.ವಿವರಗಳಿಗೆ
http://www.nittedreamsparkyatra.in/ ಅಂತರ್ಜಾಲತಾಣವನ್ನು ನೋಡಬಹುದು.
http://www.nittedreamsparkyatra.in/ ಅಂತರ್ಜಾಲತಾಣವನ್ನು ನೋಡಬಹುದು.
ರಕ್ತದಾನಿಗಳು ಬೇಕೇ?
ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ.ಹೆಸರು,ವಿಳಾಸ,ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಕ್ತದ ಗುಂಪನ್ನೂ ನೀಡಬೇಕಾಗುತ್ತದೆ.ರಕ್ತ ಬೇಕಾದವರು ತಮ್ಮ ಊರು, ರಕ್ತದ ಗುಂಪು ನೀಡಿ, ದಾನಿಗಳ ವಿವರಗಳನ್ನು ಪಡೆದುಕೊಳ್ಳಬಹುದು. ನಂತರ ದಾನಿಯನ್ನು ನೇರವಾಗಿ ಸಂಪರ್ಕಿಸಿ, ರಕ್ತದಾನದ ವ್ಯವಸ್ಥೆ ಮಾಡಿಕೊಳ್ಳಬಹುದು. ಸಂಪರ್ಕ ವಿಳಾಸಗಳು ತಪ್ಪಿದ್ದರೆ, ಅದನ್ನು ಅಂತರ್ಜಾಲ ತಾಣಕ್ಕೆ ತಿಳಿಸಿದರೆ, ಅಂತಹ ವ್ಯಕ್ತಿಗಳ ವಿವರಗಳನ್ನು ಕಿತ್ತು ಹಾಕಬಹುದು.
ಮಂಗಳವಾರ, ಏಪ್ರಿಲ್ 13, 2010
ಉಪಯುಕ್ತ ಕೊಂಡಿಗಳು
About Government
Governor
Chief Minister
Cabinet Ministers
State Legislature
Names of PS / Secretaries
Directory of Officers
Important Links
e-Procurement
HRMS
KSWAN
Bangalore One
Karnataka One
Nemmadhi
Bhoomi
| |
Chief Minister
Cabinet Ministers
State Legislature
Names of PS / Secretaries
Directory of Officers
Important Links
- Core Committee Meeting
- Flexitime
- Status of Files
- Land Guidance Value(Blr)
- Transport
- Taluka Re-Organisation
- Gazetteer
- Khajane II EOI
- NRI Karnataka
- Public Prosecutor’s Results 2010
- NGO-Partnership Progress
e-Procurement
HRMS
KSWAN
Bangalore One
Karnataka One
Nemmadhi
Bhoomi
ಮಂಗಳವಾರ, ಏಪ್ರಿಲ್ 6, 2010
Kannada Kootas and Sanghas
United States and Canada
- Brindavana (Karnataka Cultural Organization of New Jersey)
- Kannada Association of Kansas City
- Sangama from St. Louis metro area
- Nrupathunga Kannada Koota of Atlanta
- Karnataka Cultural Association of Southern California in Los Angeles
- Kannada Koota of Northern California (KKNC)
- Kannada Sangha of Austin
- Kannada Vrinda - Houston
- Pampa Kannada Koota of Michigan
- Mallige Kannada Sangha of Dallas
- Tennesse Kannada Sangha, Memphis
- Sahyadri Kannada Sangha, Seattle
- Kaveri Kannada Association, Washington D.C. Metro
- Srigandha Kannada Koota of Florida
- Triveni Kannada Association, Delaware
- Vidyaranya Kannada Koota, Illinois
- Sangama of Pittsburgh, PA
- Kannada Organization in Denver (Really old)
- Kannada Koota Of Capital District Albany, NY
- Sampige Triangle Kannada Association for RTP, Raleigh, Durham in North Carolina
- Kasturi Kannada Cultural Association of N.E Ohio
- Kannada Koota, New England (NEKK)
- Kannada Koota, NY
- Kannada Koota, Minneapois
- Kannada Sangha of Arizona
- Portland Kannada Koota, Oregon
- Association of Kannada Kootas of America
- Montreal Kannada Koota
- Kannada Sangha of Toronto
- Ottawa Kannada Sangha
- Brunei Kannadiga
- Tokyo Kannada Koota
- Karnataka Sangha, Dubai
- Karnataka Sangha Dubai, UAE (Old Link)
- Kannada Sangha, Singapore
- Kannada Okkoota of Chennai (Madras)
- Kannada Balaga of Chennai (Madras)
- Malaysian Kannada Koota
- Indian Associations in Kuwait
- Kuwait Kannada Koota
- Kodava Samaja, UAE
Europe
ಟೀವಿ ಚಾನೆಲ್ಗಳ ಲಿಂಕ್ಕುಗಳು
ಕನ್ನಡ ಟೀವಿ ಚಾನೆಲ್ಗಳು
೧ ಉದಯ ಟೀವಿ
೨.ಯು-೨ ಮತ್ತು ಈ ಟಿವಿ ಕನ್ನಡ
ವಾರ್ತ ವಾಹಿನಿಗಳು (ನ್ಯೂಸ್ ಚಾನೆಲ್ಗಳು)
೧. ಟೀವಿ ೯ ಕನ್ನಡ
೨. CNN-IBN
೩. ಡಿಡಿ ನ್ಯೂಸ್
೪. Headlines Today
5. ಆಜ್ ತಕ್ - ಹಿಂದಿ
ಹಿಂದಿ ಭಾಷೆ ಚಾನೆಲ್ಗಳು
೧. ಸ್ಟಾರ್ ಪ್ಲಸ್
೨. ಜೀ ಟಿವಿ
೩. ಸ್ಟಾರ್ ಒನೆ
೪. ಸೋನಿ ಟೀವಿ ಲಿಂಕ್-೧೫. ಸೋನಿ ಟೀವಿ ಲಿಂಕ್-೨
ಹಿಂದಿ ಭಾಷೆ ಸಿನಿಮ ಚಾನೆಲ್ಗಳು
೧. ಜೀ ಸಿನಿಮ
೨. ಬಿ4ಯು ಮುವೀಸ್
೩. ಸೆಟ್ ಮ್ಯಕ್ಸ್ ಲಿಂಕ್ -೧
೪.ಸೆಟ್ ಮ್ಯಕ್ಸ್ ಲಿಂಕ್ -೨
ಲಭ್ಯವಿರುವ ಎಲ್ಲ ಟೀವಿ ಚಾನೆಲ್ಗಳನು ವಿಕ್ಷಿಸಲು ಉಪಯೊಗಗಕ್ಕೆ ಬರುವ ಕೆಲವು ಮಾಹಿತಿಗಳು ಇಲ್ಲಿವೆ
೧ ಉದಯ ಟೀವಿ
೨.ಯು-೨ ಮತ್ತು ಈ ಟಿವಿ ಕನ್ನಡ
ವಾರ್ತ ವಾಹಿನಿಗಳು (ನ್ಯೂಸ್ ಚಾನೆಲ್ಗಳು)
೧. ಟೀವಿ ೯ ಕನ್ನಡ
೨. CNN-IBN
೩. ಡಿಡಿ ನ್ಯೂಸ್
೪. Headlines Today
5. ಆಜ್ ತಕ್ - ಹಿಂದಿ
ಹಿಂದಿ ಭಾಷೆ ಚಾನೆಲ್ಗಳು
೧. ಸ್ಟಾರ್ ಪ್ಲಸ್
೨. ಜೀ ಟಿವಿ
೩. ಸ್ಟಾರ್ ಒನೆ
೪. ಸೋನಿ ಟೀವಿ ಲಿಂಕ್-೧೫. ಸೋನಿ ಟೀವಿ ಲಿಂಕ್-೨
ಹಿಂದಿ ಭಾಷೆ ಸಿನಿಮ ಚಾನೆಲ್ಗಳು
೧. ಜೀ ಸಿನಿಮ
೨. ಬಿ4ಯು ಮುವೀಸ್
೩. ಸೆಟ್ ಮ್ಯಕ್ಸ್ ಲಿಂಕ್ -೧
೪.ಸೆಟ್ ಮ್ಯಕ್ಸ್ ಲಿಂಕ್ -೨
ಲಭ್ಯವಿರುವ ಎಲ್ಲ ಟೀವಿ ಚಾನೆಲ್ಗಳನು ವಿಕ್ಷಿಸಲು ಉಪಯೊಗಗಕ್ಕೆ ಬರುವ ಕೆಲವು ಮಾಹಿತಿಗಳು ಇಲ್ಲಿವೆ
ಭಾನುವಾರ, ಏಪ್ರಿಲ್ 4, 2010
ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ
ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ
- ಡಾ. ಯು. ಬಿ. ಪವನಜ
ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ “ಬ್ಲಾಗ್”. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.
ಬ್ಲಾಗ್ ಎನ್ನುವುದು ವೆಬ್ಲಾಗ್ (weblog) ಎನ್ನುವ ಪದದಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಮೊತ್ತಮೊದಲು ಜಾನ್ ಬಾರ್ಗರ್ ಎಂದವರು ೧೯೯೭ರಲ್ಲಿ ಬಳಸಿದರು. ಪೀಟರ್ ಮರ್ಹೋಲ್ಝ್ ಅವರು ೧೯೯೯ರಲ್ಲಿ ಇದನ್ನು ವಿ ಬ್ಲಾಗ್ (we blog) ಎಂಬುದಾಗಿ ವಿಭಜಿಸಿದರು. ಎಂದರೆ ನಾವು ಬ್ಲಾಗ್ ಮಾಡುತ್ತಿದ್ದೇವೆ ಎಂಬ ಅರ್ಥ. ತದನಂತರ ಬ್ಲಾಗ್ ಎನ್ನುವುದು ನಾಮಪದ ಮತ್ತು ಕ್ರಿಯಾಪದವಾಗಿ ಬಳಕೆಯಾಗತೊಡಗಿತು. ೨೦೦೧ರ ನಂತರ ಬ್ಲಾಗ್ ಜನಪ್ರಿಯವಾಗತೊಡಗಿತಾದರೂ ೨೦೦೩ರಲ್ಲಿ ಹಲವು ಉಚಿತ ಬ್ಲಾಗಿಂಗ್ ತಾಣಗಳು ಅವತರಿಸಿ ಬ್ಲಾಗಿಂಗ್ ಮನೆಮಾತಾಗುವಂತಾಯಿತು. ಇದಿಷ್ಟು ಬ್ಲಾಗಿಂಗ್ನ ಇತಿಹಾಸದ ಬಗ್ಗೆ ಚುಟುಕಾದ ಮಾಹಿತಿ.
ಬ್ಲಾಗ್ ಬಗ್ಗೆ ಈಗ ಇನ್ನಷ್ಟು ವಿವರಗಳನ್ನು ನೋಡೋಣ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ (ವೆಬ್ಸೈಟ್). ಈ ತಾಣಗಳಿಗೂ ಬ್ಲಾಗ್ಗಳಿಗೂ ಇರುವ ವ್ಯತ್ಯಾಸವೇನು? ನಿಜವಾಗಿ ನೋಡಿದರೆ ಬ್ಲಾಗ್ ಕೂಡ ಒಂದು ಅಂತರಜಾಲ ತಾಣವೇ. ಆದರೆ ಒಂದು ವಿಧದ ತಾಣಗಳನ್ನು ಮಾತ್ರ ಬ್ಲಾಗ್ ಎಂದು ಕರೆಯಲಾಗುತ್ತದೆ. ಬ್ಲಾಗ್ನ ಲಕ್ಷಣಗಳು -ನಿಯಮಿತವಾಗಿ ಹೊಸ ಬರೆವಣಿಗೆಗಳನ್ನು ಸೇರಿಸುತ್ತಿರಬೇಕು, ಅವುಗಳನ್ನು ಸೇರಿಸಿದ ದಿನಾಂಕ ಪ್ರಕಾರ ಅಳವಡಿಸಿರಬೇಕು, ಕೊನೆಯ ಬರೆವಣಿಗೆ ಮೊದಲು ಲಭ್ಯವಾಗಿರುವಂತಿರುತ್ತದೆ, ಇತ್ಯಾದಿ. ಬ್ಲಾಗ್ನಲ್ಲಿ ಸೇರಿಸಲ್ಪಡುವ ಲೇಖನಕ್ಕೆ ಪೋಸ್ಟ್ ಅಥವಾ ಪೋಸ್ಟಿಂಗ್ ಎನ್ನುತ್ತಾರೆ. ಈ ಪೋಸ್ಟಿಂಗ್ಗೆ ಒಂದು ಶೀರ್ಷಿಕೆ, ಸೇರಿಸಿದ ದಿನಾಂಕ, ಮುಖ್ಯ ಬರಹ ಅಥವಾ ಲೇಖನ, ವಿಷಯ, ಇತ್ಯಾದಿ ಲಕ್ಷಣಗಳಿರುತ್ತವೆ. ಈ ಪೋಸ್ಟಿಂಗ್ನ ಕೆಳಗೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯವಿದೆ. ಇಷ್ಟಲ್ಲದೆ ಈ ಬ್ಲಾಗ್ಗಳಿಗೆ ಆರ್ಎಸ್ಎಸ್ ಸೌಲಭ್ಯವಿದೆ. ಆರ್ಎಸ್ಎಸ್ ಎಂದರೆ ರಿಯಲಿ ಸಿಂಪಲ್ ಸಿಂಡಿಕೇಶನ್ ಎನ್ನುವುದರ ಸಂಕ್ಷಿಪ್ತ ರೂಪ. ಆರ್ಎಸ್ಎಸ್ ರೀಡರ್ ಎಂಬ ಹೆಸರಿನ ತಂತ್ರಾಂಶವನ್ನು (ಸಾಫ್ಟ್ವೇರ್) ಗಣಕಗಳಲ್ಲಿ (ಕಂಪ್ಯೂಟರ್) ಅಳವಡಿಸಿಕೊಂಡರೆ ಈ ಬ್ಲಾಗ್ಗಳನ್ನು ಗಣಕಕ್ಕೆ ಇ-ಮೈಲ್ಗಳನ್ನು ಇಳಿಸಿಕೊಂಡಂತೆ ಇಳಿಸಿಕೊಂಡು ಅಂತರಜಾಲ ಸಂಪರ್ಕ ಕಡಿದ ಮೇಲೂ ಓದಬಹುದು. ಬ್ಲಾಗ್ ಸುಲಭವಾಗಿ ಹೊಸ ಪುಟವನ್ನು ಸೇರಿಸುವ ಸೌಲಭ್ಯ ಹೊಂದಿದೆ. ಮಾಮೂಲಿ ಅಂತರಜಾಲ ತಾಣಗಳಿಗೆ ಈ ಸೌಲಭ್ಯವಿರುವುದಿಲ್ಲ. ಹೊಸ ಪೋಸ್ಟಿಂಗ್ ಸಾಮಾನ್ಯವಾಗಿ ಪುಟದ ಮೇಲೆ ತೋರುತ್ತದೆ. ಇನ್ನೊಂದು ಹೊಸ ಪೋಸ್ಟಿಂಗ್ ಬಂದಾಗ ಹಳೆಯ ಪೋಸ್ಟಿಂಗ್ ತಂತಾನೆ ಕೆಳಗೆ ತಳ್ಳಲ್ಪಡುತ್ತದೆ. ಟೀಕೆಯ ಕೆಳಗೆ ಇತರೆ ಓದುಗರು ಟೀಕೆಗೆ ಟೀಕೆ ಸೇರಿಸಬಹುದು. ಕೆಲವೊಮ್ಮೆ ಈ ಸರಪಣಿ ದೊಡ್ಡ ಚರ್ಚೆ ಅಥವಾ ವಾಗ್ವಾದವಾಗುವುದೂ ಇದೆ. ಎಲ್ಲ ಅಂತರಜಾಲ ತಾಣಗಳಿಗಿರುವಂತೆ ಬ್ಲಾಗ್ಗಳಿಗೂ ಇತರೆ ತಾಣ ಯಾ ಬ್ಲಾಗ್ಗಳಿಗೆ ಕೊಂಡಿ ನೀಡುವ ಸೌಲಭ್ಯವಿದೆ. ಸರಳವಾಗಿ ಹೇಳುಬೇಕೆಂದರೆ ಬ್ಲಾಗ್ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಜಗತ್ತಿಗೆಲ್ಲ ತಿಳಿಯುವಂತೆ ಸಾರ್ವಜನಿಕವಾಗಿ ಬರೆಯುವ ವ್ಯವಸ್ಥೆ.
ಯಾವ ಯಾವ ರೀತಿಯ ಬ್ಲಾಗ್ಗಳಿವೆ ಎಂಬುದನ್ನು ವೀಕ್ಷಿಸಿ ನೋಡಿದರೆ ನಮಗೆ ಅಂತರಜಾಲದಲ್ಲಿ ಎಷ್ಟು ವೈವಿಧ್ಯದ ತಾಣಗಳಿವೆಯೋ ಅಷ್ಟೂ ವೈವಿಧ್ಯ ಬ್ಲಾಗ್ಗಳಲ್ಲೂ ಇರುವುದು ಗೋಚರವಾಗುತ್ತದೆ. ಬ್ಲಾಗಿಗರಲ್ಲಿ ಬಹುಪಾಲು ಮಂದಿ ತಮ್ಮ ಹೊತ್ತು ಕಳೆಯಲು ಅಥವಾ ಏನಾದರೂ ಹೇಳಬೇಕು ಎನ್ನುವ ತುಡಿತ ತೀರಿಸಿಕೊಳ್ಳಲು ಬ್ಲಾಗಿಂಗ್ ಮಾಡುತ್ತಿದ್ದಾರೆ. ಹಾಗಿದ್ದರೂ ಇವರ ಬ್ಲಾಗ್ಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ. ಬ್ಲಾಗ್ ಮಾಡುತ್ತಿರುವವರು ಕಥೆಗಾರ ಅಥವಾ ಸಾಹಿತಿಯಾಗಿದ್ದರಂತೂ ಓದುಗರಿಗೆ ಬೋನಸ್ ಎನ್ನಬಹುದು. ಪರಿಣತರಾದ ತಂತ್ರಜ್ಞರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳ ಬಗ್ಗೆ ಪೂರ್ವಭಾವಿಯಾಗಿ ಬ್ಲಾಗ್ ಬರೆಯುವ ಮೂಲಕ ಈ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಬೇಗನೆ ಮಾಹಿತಿ ಸಿಗುವಂತಾಗುತ್ತದೆ. ಉದಾಹರಣೆಗೆ ಮೈಕ್ರೋಸಾಫ್ಟ್ ಕಂಪೆನಿಯ ಹಲವು ಉದ್ಯೋಗಿಗಳು ಮುಂಬರುವ ತಂತ್ರಾಂಶಗಳ ಬಗ್ಗೆ ಬ್ಲಾಗಿಂಗ್ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ಈಗಿರುವ ತಂತ್ರಾಂಶಗಳ ಬಗ್ಗೆ ಸಲಹೆ ನೀಡುತ್ತಾರೆ. ಕೆಲವೊಮ್ಮೆ ಯಾವುದೇ ಗ್ರಾಹಕ ಕೈಪಿಡಿಯಲ್ಲೂ ಸಿಗದ ಮಾಹಿತಿ ಇಂತಹ ಬ್ಲಾಗ್ಗಳಲ್ಲಿ ದೊರೆಯುತ್ತವೆ. ಕೆಲವು ತಂತ್ರಜ್ಞರು ತಮ್ಮ ಕ್ಷೇತ್ರದಲ್ಲಿಯ ಕೆಲವು ಉಪಯುಕ್ತ ಸಲಹೆ ಕಿವಿಮಾತುಗಳನ್ನೂ ತಮ್ಮ ಬ್ಲಾಗ್ಗಳಲ್ಲಿ ನೀಡುತ್ತಿರುತ್ತಾರೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡ ಮತ್ತು ಗಣಕ ಸಂಬಂಧಿ ಸಲಹೆ ಸೂಚನೆಗಳನ್ನು ನಾನು ಆಗಾಗ ನನ್ನ ಬ್ಲಾಗ್ನಲ್ಲಿ ನೀಡುತ್ತಿರುತ್ತೇನೆ. ಆದುದರಿಂದ ಎಲ್ಲ ಬ್ಲಾಗ್ಗಳನ್ನು ಕೆಲಸವಿಲ್ಲದವರ ಗಳಹುವಿಕೆ ಎಂದು ತುಚ್ಛೀಕರಿಸುವಂತಿಲ್ಲ.
ಬ್ಲಾಗ್ಗಳು ಸಾಮಾಜಿಕ ಆಲೋಚನೆ ಮತ್ತು ಒತ್ತಡ ರೂಪಿಸುವ ಸಾಧನವಾಗಿಯೂ ರೂಪುಗೊಳ್ಳತೊಡಗಿದ್ದು ಸುಮಾರು ಎರಡು ಮೂರು ವರ್ಷಗಳ ಹಿಂದೆ. ಜನರು ಬ್ಲಾಗಿಂಗ್ ಮೂಲಕವೇ ಅಮೇರಿಕದ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸಿ ಕಣದಲ್ಲಿದ್ದ ಉಮೇದುವಾರರೊಬ್ಬರು ಹಿಂದೆ ಸರಿಯುವಂತೆ ಮಾಡಿದಲ್ಲಿಂದ ಬ್ಲಾಗ್ ಒಂದು ಪ್ರಮುಖ ಅಸ್ತ್ರವಾಗತೊಡಗಿತು. ಇದು ಸಾಧ್ಯವಾಗಿದ್ದು ಬ್ಲಾಗಿಗರು ಹೆಚ್ಚು ಹೆಚ್ಚು ಸುದ್ದಿಗಳನ್ನು ಯಾವುದೇ ಸಂಪಾದಕರ ಕತ್ತರಿಗೆ ಸಿಗದಂತೆ ತಮ್ಮ ಬ್ಲಾಗ್ಗಳಲ್ಲಿ ದಾಖಲಿಸತೊಡಗಿದುದರಿಂದ. ಆಗ ಈ ಬ್ಲಾಗ್ ಎನ್ನುವುದು ಒಂದು ಪರ್ಯಾಯ ಪತ್ರಿಕಾ ಮಾಧ್ಯಮವೇ ಆಗಿ ಹೊರಹೊಮ್ಮುವ ಸಾಧ್ಯತೆ ಜನರಿಗೆ ವೇದ್ಯವಾಯಿತು.
ಬ್ಲಾಗಿಂಗ್ ಒಂದು ಪರ್ಯಾಯ ಪತ್ರಿಕೋದ್ಯಮವೇ? ಅಥವಾ ಬ್ಲಾಗಿಂಗ್ನ್ನು ಪರ್ಯಾಯ ಪತ್ರಿಕೋದ್ಯಮವಾಗಿ ನಡೆಸಿಕೊಂಡು ಬರಬಹುದೇ? ಹೌದು ಎಂದು ಹೇಳಬಹುದು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ಪತ್ರಿಕೋದ್ಯಮ ಎಂದರೇನು ಎಂದು ತಿಳಿಯೋಣ. ಪತ್ರಿಕೋದ್ಯಮ ಎನ್ನುವುದು ಜರ್ನಲಿಸಂ ಎನ್ನುವ ಇಂಗ್ಲಿಶ್ ಪದಕ್ಕೆ ಪಾರಿಭಾಷಿಕ ಪದವಾಗಿ ಬಳಕೆಯಲ್ಲಿದೆ. ಜರ್ನಲಿಸಂ ಪದವು ಜರ್ನಲ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ದಿನಚರಿ ಎಂಬುದು ಜರ್ನಲ್ ಪದದ ಅರ್ಥ. ದಿನಚರಿ ಇಟ್ಟುಕೊಳ್ಳುವುದು ಎಂಬುದೇ ಜರ್ನಲಿಸಂ ಪದದ ಮೂಲ ಅರ್ಥ. ಬ್ಲಾಗಿಂಗ್ ಕೂಡ ಒಂದು ರೀತಿಯಲ್ಲಿ ದಿನಚರಿಯೇ. ಹೀಗೆ ಸೈದ್ಧಾಂತಿಕವಾಗಿ ವಾದಿಸಿದರೂ ಬ್ಲಾಗಿಂಗ್ ಅನ್ನು ಪತ್ರಿಕೋದ್ಯಮ ಎನ್ನಬಹುದು.
ಬ್ಲಾಗಿಂಗ್ ಪತ್ರಿಕೋದ್ಯಮ ಯಾಕೆ ಎಂದು ವಿಚಾರಿಸುವ ಮೊದಲು ಮುಖ್ಯವಾಹಿನಿಯ ಪತ್ರಿಕೆಗಳ ತೊಂದರೆಗಳನ್ನು ವಿಶ್ಲೇಷಿಸೋಣ. ಒಳಿತುಗಳ ಬಗ್ಗೆ ಹಲವು ಕಡೆ ಹಲವು ಬಾರಿ ಪುನರುಚ್ಚರಿಸಿರುವುದರಿಂದ ಅವುಗಳನ್ನು ಇಲ್ಲಿ ಇನ್ನೊಮ್ಮೆ ದಾಖಲಿಸುವ ಅಗತ್ಯವಿಲ್ಲ. ಪತ್ರಿಕೆಗಳು ಬದುಕುವುದೇ ಜಾಹೀರಾತುಗಳಿಂದ. ಜಾಹೀರಾತು ನೀಡುವವರ ವಿರುದ್ಧ ಯಾವುದೇ ಲೇಖನ ಬರೆಯಬೇಕಾದರೆ ಪತ್ರಿಕೆಗಳು ಹಿಂಜರಿಯುತ್ತವೆ. ಅದೇ ರೀತಿ ಸರಕಾರದ ವಿರುದ್ಧವೂ ಪತ್ರಿಕೆಗಳು ಬರೆಯುವಾಗ ತಮ್ಮ ಲೇಖನಿಯ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಯಾವ ರಾಜಿಗೂ ಒಪ್ಪದ, ಯಾವ ಒತ್ತಡಕ್ಕೂ ಮಣಿಯದ ಪತ್ರಿಕೆಗಳು ಇಲ್ಲವೇ ಇಲ್ಲವೆಂದಲ್ಲ. ಪತ್ರಿಕೆಗಳಲ್ಲಿ ಜಾಗದ ಮಿತಿಯಿರುತ್ತದೆ. ಇದರಿಂದಾಗಿ ಹಲವು ಬಾರಿ ಪ್ರಾಮುಖ್ಯವಾದ ವಿಷಯಗಳೇ ಬಿಟ್ಟುಹೋಗುವುದು ಲೇಖನಗಳಲ್ಲಿ ಸರ್ವೇಸಾಮಾನ್ಯ. ದಿನಪತ್ರಿಕೆಯೇ ಆದರೂ ಲೇಖನ ತಯಾರಿಸಿ ಅದನ್ನು ಕಳುಹಿಸಿ ಸಂಪಾದಕರು ಅದನ್ನು ಅಂಗೀಕರಿಸಿ ಅದು ಮುದ್ರಣವಾಗಿ ಹೊರಬರುವಾಗ ಕೆಲವೊಮ್ಮೆ ತಿಂಗಳುಗಳೇ ಕಳೆದಿರುತ್ತವೆ. ಏತನ್ಮಧ್ಯೆ ಅದೇ ವಿಷಯದ ಬಗ್ಗೆ ಇನ್ನೊಂದು ಪತ್ರಿಕೆಯಲ್ಲಿ ಬೇರೊಬ್ಬ ಲೇಖಕರ ಲೇಖನ ಪ್ರಕಟವಾದರಂತೂ ಮುಗಿದೇ ಹೋಯಿತು. ಲೇಖನ ನೇರವಾಗಿ ಕಸದಬುಟ್ಟಿಗೇ ಸೇರಿದಂತೆ. ಬರೆದ ಲೇಖನದ ಪ್ರತಿಯೊಂದು ವಾಕ್ಯವೂ ಸಂಪಾದಕರ ಕತ್ತರಿಯಿಂದ ಪಾರಾಗಿ ಬರುತ್ತದೆ ಎಂಬ ಧೈರ್ಯವೂ ಇಲ್ಲ.
ಇತ್ತೀಚೆಗಂತೂ ಪತ್ರಿಕೆಗಳ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು -ಇವೆಲ್ಲ ಇತ್ತೀಚೆಗೆ ಸರ್ವೇಸಾಮಾನ್ಯವಾಗುತ್ತಿವೆ. ಪತ್ರಿಕೋದ್ಯೋಗಿಗಳ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದೆ.
ಪತ್ರಿಕಾ ಸಂಪಾದಕರ ಜ್ಞಾನದ ಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಒಂದು ಉದಾಹರಣೆಯನ್ನು ಇಲ್ಲಿ ನೀಡಿದರೆ ಅಪ್ರಸ್ತುತವಾಗಲಾರದು. ಸುನಾಮಿ ಭಾರತಕ್ಕೆ ಅಪ್ಪಳಿಸಿ ಸಾವಿರಾರು ಜನರ ಪ್ರಾಣಹಾನಿ ಮಾಡಿದುದು ಎಲ್ಲರಿಗೂ ತಿಳಿದೇ ಇದೆ. ಸುನಾಮಿ ಸಂಭವಿಸಿ ಒಂದೆರಡು ವಾರಗಳಲ್ಲಿ ಯಾರೊ ಒಬ್ಬ ಕಿಡಿಗೇಡಿ ಒಂದು ಕುಚೋದ್ಯ ನಡೆಸಿದ. ಆತ ಅಮೇರಿಕಾದ ನಾಸಾ ಸಂಸ್ಥೆಯ ಜಾಲತಾಣದಿಂದ ಒಂದು ಚಂಡಮಾರುತದ ಉಪಗ್ರಹಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು ಅದನ್ನೇ ಸುನಾಮಿಯ ಉಪಗ್ರಹಚಿತ್ರ ಎಂದು ಕೆಲವರಿಗೆ ಇಮೈಲ್ ಮೂಲಕ ಕಳುಹಿಸಿದ. ಇದು ಇಮೈಲ್ ಮೂಲಕ ಜನರಿಂದ ಜನರಿಗೆ ದಾಟಿ ಕೊನೆಗೆ ಕೆಲವು ಪತ್ರಿಕೆಗಳ ಸಂಪಾದಕರುಗಳಿಗೂ ತಲುಪಿತು. ಕನ್ನಡದ ಪತ್ರಿಕೆಯೊಂದು ಅದನ್ನು ತನ್ನ ಮುಖಪುಟದಲ್ಲೇ ಪ್ರಕಟಿಸಿತು. ಸುನಾಮಿ ಸಮುದ್ರದ ತಳದಲ್ಲಿ ನಡೆಯುವ ಪ್ರಕ್ರಿಯೆ. ಅದನ್ನು ಉಪಗ್ರಹದ ಮೂಲಕ ಚಿತ್ರಿಸಲು ಅಸಾಧ್ಯ. ಈ ಪ್ರಾಥಮಿಕ ಜ್ಞಾನ ಪತ್ರಿಕೆಯ ಸಂಪಾದಕರಿಗೆ ಇರಲಿಲ್ಲ ಎಂದರೆ ಎಷ್ಟು ಶೋಚನೀಯ ಅಲ್ಲವೇ? ಪತ್ರಿಕೆಗಳಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ಪತ್ರ ಬರೆದರೆ ಸಂಪಾದಕರು ಅದನ್ನು ಪ್ರಕಟಿಸುವುದೇ ಇಲ್ಲ!
ಬ್ಲಾಗಿಂಗ್ಗೆ ಈ ಯಾವ ಸಮಸ್ಯೆಗಳೂ ಇಲ್ಲ. ಬ್ಲಾಗಿಂಗ್ ನಡೆಸುವುದು ಈಗಾಗಲೇ ತಿಳಿಸಿರುವಂತೆ ಅಂತರಜಾಲದಲ್ಲಿ. ಹೆಚ್ಚಿನ ಮಂದಿಯ ಬ್ಲಾಗ್ಗಳು ಇರುವುದು ಉಚಿತ ತಾಣಗಳಲ್ಲಿ. ಅಲ್ಲಿ ಜಾಗದ ಕೊರತೆ ಇಲ್ಲ. ಲೇಖನವೊಂದಕ್ಕೆ ಇಂತಿಷ್ಟೇ ಪದಗಳಿರಬೇಕೆಂಬ ಮಿತಿಯೂ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ಇಲ್ಲಿ ಎಲ್ಲವೂ ಫಾಸ್ಟ್ಫುಡ್ಗಳಂತೆ. ಕ್ಷಣಕ್ಷಣದ ವ್ಯವಹಾರ. ಲೇಖನಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ನೇರವಾಗಿ ಘಟನೆ ನಡೆಯುತ್ತಿರುವ ಸ್ಥಳದಿಂದಲೇ ಲೇಖನವನ್ನು ಅಂತರಜಾಲಕ್ಕೆ ಸೇರಿಸಬಹುದು. ಲ್ಯಾಪ್ಟಾಪ್ ಮತ್ತು ಅಂತರಜಾಲ ಸಂಪರ್ಕ ಇದ್ದರೆ ಸಾಕು. ಈಗೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಕೆಲವು ಅತ್ಯಾಧುನಿಕ ಮೊಬೈಲ್ ಫೋನುಗಳಿಂದ ಕೂಡ ನೇರವಾಗಿ ಈ ಎಲ್ಲ ಕೆಲಸ ನಡೆಸಬಹುದು.
ಬ್ಲಾಗಿಂಗ್ಗೆ ಮುಖ್ಯವಾಹಿನಿಯ ಪತ್ರಿಕೆಗಳಿಗಿರುವ ಯಾವ ತೊಡಕುಗಳೂ ಇಲ್ಲ ಎಂದು ಹೇಳಿಯಾಗಿದೆಯಷ್ಟೆ? ಬ್ಲಾಗಿಂಗ್ಗಿರುವ ಇನ್ನೊಂದು ಅತಿ ಮುಖ್ಯವಾದ ಸವಲತ್ತೆಂದರೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯ. ಇದು ಪ್ರತಿಸ್ಪಂದನಾತ್ಮಕ ಅಂತರಜಾಲದಲ್ಲಿ ಮಾತ್ರ ಸಾಧ್ಯ. ಮುದ್ರಿತ ಪತ್ರಿಕೆಗಳಲ್ಲಿ ಇದು ಅಸಾಧ್ಯ. ಒಬ್ಬ ತನಗಿಷ್ಟ ಬಂದಂತೆ ಬ್ಲಾಗ್ ಬರೆಯುತ್ತಾನೆಂದಿಟ್ಟುಕೊಳ್ಳಿ. ಈಗಾಗಲೇ ಹೇಳಿರುವಂತೆ ಬ್ಲಾಗ್ಗೆ ಯಾವ ಸಂಪಾದಕರಿಲ್ಲ. ಹಾಗಾಗಿ ಯಾರು ಏನು ಬೇಕಾದರೂ ಬರೆಯಬಹುದು ತಾನೆ? ಸುಳ್ಳು ಸುಳ್ಳೇ ಬರೆದರೆ? ಆಗ ಓದುಗರು ಸುಮ್ಮನೆ ಬಿಡುವುದಿಲ್ಲ. ಬ್ಲಾಗಿನ ಕೆಳಗೆಯೇ ತಮ್ಮ ಟಿಪ್ಪಣಿ ಸೇರಿಸುತ್ತಾರೆ. ನೀನು ಬರೆದುದು ಸುಳ್ಳೆಂದು ಎಲ್ಲರೂ ಝಾಡಿಸುತ್ತಾರೆ. ಓದುಗರ ಪ್ರತಿಕ್ರಿಯೆಯನ್ನು ದಾಖಲಿಸದಂತೆ ಮಾಡುವ ಸೌಲಭ್ಯವೂ ಬ್ಲಾಗ್ನಲ್ಲಿದೆ. ಹಾಗೆ ಯಾರಾದರು ಬ್ಲಾಗಿಗರು ಆಯ್ಕೆ ಮಾಡಿಟ್ಟರೆ ಅಂತಹ ಬ್ಲಾಗಿಗೆ ಯಾರೂ ಮೂರು ಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಅದನ್ನು ಓದುವುದೂ ಇಲ್ಲ. ಆದುದರಿಂದ ಅಂತಹ ಬ್ಲಾಗ್ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಗಳು ಮತ್ತು ಓದುಗರು ಎರಡು ಧ್ರುವಗಳಲ್ಲಿರುತ್ತಾರೆ. ಪತ್ರಿಕೆಯವರು ನೀಡಿದ್ದನ್ನು ಓದುಗರು ಆಯ್ಕೆಯಿಲ್ಲದೆ ಓದಬೇಕಾಗುತ್ತದೆ. ಓದುಗರು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನು ನೀಡುವುದು, ಅದನ್ನು ಪತ್ರಿಕೆಯವರು ಪ್ರಕಟಿಸುವುದು ಬಹು ವಿರಳ. ಬ್ಲಾಗ್ಗಳಲ್ಲಿ ಹಾಗಲ್ಲ. ಓದುಗರೂ ಭಾಗವಹಿಸುತ್ತಾರೆ. ಸುನಾಮಿಯಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲೆಂದು ಒಬ್ಬರು ಬ್ಲಾಗ್ ತಾಣವನ್ನು ಪ್ರಾರಂಭಿಸಿದ್ದರು. ಕಳೆದುಹೋದವರ ಫೋಟೋಗಳನ್ನು ಅಲ್ಲಿ ಹಾಕಿ ಎಲ್ಲ ಓದುಗರಿಗೆ ಕಾಣುವಂತೆ ಮಾಡಿ ಹಲವು ಮಂದಿ ತಮ್ಮ ಕಳೆದುಹೋದ ಬಾಂಧವರನ್ನು ವಾಪಾಸು ಪಡೆಯುವಂತೆ ಮಾಡಿದ್ದರು. ಅವರ ಬ್ಲಾಗ್ ತಾಣಕ್ಕೆ ಹಲವು ಮಂದಿ ಮಾಹಿತಿ ಸೇರಿಸುವ ಮೂಲಕ ಸಹಾಯಹಸ್ತ ನೀಡಿದ್ದರು.
ಹಾಗಾದರೆ ಎಲ್ಲ ಬ್ಲಾಗ್ಗಳೂ ಪತ್ರಿಕೋದ್ಯಮವೇ? ಖಂಡಿತ ಅಲ್ಲ. ಕೆಲವು ಬ್ಲಾಗ್ಗಳನ್ನು ಮಾತ್ರ ಹೊಸ ರೀತಿಯ ಪತ್ರಿಕೋದ್ಯಮ ಎಂದುಕೊಳ್ಳಬಹುದು. ಅವು ಯಾವುವು? ವೃತ್ತಿನಿರತ ಪತ್ರಿಕೋದ್ಯೋಗಿಗಳು ಬರೆದವು, ಪರಿಣತ ವೃತ್ತಿನಿರತರು ತಮ್ಮ ತಮ್ಮ ವೃತ್ತಿ ಬಗ್ಗೆ ಬರೆದವು, ಯಾವುದಾದರೊಂದು ಪ್ರಮುಖ ಘಟನೆ ಬಗ್ಗೆ ಆ ಘಟನೆ ಜರುಗಿದ ಸ್ಥಳದಿಂದ ಯಾರದರೊಬ್ಬರು ನೇರವಾಗಿ ವರದಿ ರೂಪದಲ್ಲಿ ಬರೆದವು, ಅಂತರಜಾಲದಲ್ಲಿರುವ ಇತರೆ ಸುದ್ದಿಗಳಿಗೆ ಕೊಂಡಿ ನೀಡುವಂತವು -ಇವನ್ನೆಲ್ಲ ಬ್ಲಾಗ್ ಪತ್ರಿಕೋದ್ಯಮ ಎನ್ನಬಹುದು.
ಬ್ಲಾಗ್ ಬಗ್ಗೆ ಇನ್ನೊಂದು ಪ್ರಚಲಿತ ಪದ ಎಂದರೆ ಪಾರ್ಟಿಸಿಪೇಟರಿ ಜರ್ನಲಿಸಂ ಅರ್ಥಾತ್ ಭಾಗೇದಾರಿ ಪತ್ರಿಕೋದ್ಯಮ ಎಂದು ಕರೆಯಬಹುದು. ಏನು ಹಾಗೆಂದರೆ? ವಿಕಿಪೀಡಿಯಾ ನೀಡುವ ವಿವರಣೆ ಪ್ರಕಾರ ಭಾಗೇದಾರಿ ಪತ್ರಿಕೋದ್ಯಮ ಎಂದರೆ “ಸುದ್ದಿ ಮತ್ತು ಸಂಬಂಧಿತ ಮಾಹಿತಿಯ ಸಂಗ್ರಹಣೆ, ವರದಿ, ವಿಶ್ಲೇಷಣೆ ಮತ್ತು ಹಂಚುವಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು”. ಇವನ್ನೆಲ್ಲ ಮಾಡುವ ವೃತ್ತಿನಿರತ ಪತ್ರಿಕೋದ್ಯೋಗಿಯಲ್ಲದವರನ್ನು ಭಾಗೇದಾರಿ ಪತ್ರಿಕಾಕರ್ತ ಎನ್ನಬಹುದು. ಬ್ಲಾಗಿಂಗ್ ಬಾಗೇದಾರಿ ಪತ್ರಿಕೋದ್ಯೋಮದ ಪ್ರಮುಖ ಅಂಗ. ಸಾರ್ವಜನಿಕರೇ ವರದಿಗಾರರಾಗಿರುವ ತುಂಬ ಪ್ರಖ್ಯಾತವಾಗಿರುವ ಅಂತರಜಾಲ ತಾಣ ದಕ್ಷಿಣ ಕೊರಿಯಾದ ಓಹ್ ಮೈ ನ್ಯೂಸ್. ಸಿಟಿಝನ್ ಜರ್ನಲಿಸಂ ಎನ್ನುವ ಪದ ಈ ತಾಣದಿಂದ ಖ್ಯಾತಿಯನ್ನು ಪಡೆಯಿತು. ಭಾಗೇದಾರಿ ಪತ್ರಿಕಾಕರ್ತರಿಂದಲೇ ನಡೆಸಲ್ಪಡುವ ಸುದ್ದಿ ಮತ್ತು ವಿಶ್ಲೇಷಣೆಗಳ ಅಂತರಜಾಲ ತಾಣ ಇದಾಗಿದೆ.
ಭಾರತದಲ್ಲೂ ಬಾಗೇದಾರಿ ಪತ್ರಿಕಾಕರ್ತರಿದ್ದಾರೆ. ಇವರಲ್ಲಿ ಒಂದು ಪ್ರಮುಖ ವಿಭಾಗ ಎಂದರೆ ಮುಖ್ಯವಾಹಿನಿಯ ಪತ್ರಿಕೆಗಳ ಮೇಲೆ ಕಾವಲುನಾಯಿಯಂತೆ ಕೆಲಸ ಮಾಡುವವರು. ಕನ್ನಡ ಭಾಷೆಯ “ನೂರೆಂಟುಸುಳ್ಳು” ಇದಕ್ಕೆ ಒಂದು ಉದಾಹರಣೆ. ಈ ಬ್ಲಾಗ್ನಲ್ಲಿ ಮುಖ್ಯವಾಗಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುವ ತಪ್ಪುಗಳನ್ನು ಆಗಾಗ ಎತ್ತಿ ತೋರಿಸಲಾಗುತ್ತಿದೆ. ಕನ್ನಡ ಪತ್ರಿಕೆಗಳಲ್ಲಿ ಎಂದು ಹೇಳಿದರೂ, ಈ ಬ್ಲಾಗ್ ನಡೆಸುವವರೇ ಹೇಳಿಕೊಂಡಂತೆ, ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ “ನೂರೆಂಟುಮಾತು” ಅಂಕಣವನ್ನು ವಿಶ್ಲೇಷಿಸಲೆಂದೇ ಈ ಬ್ಲಾಗ್ ಹುಟ್ಟಿಕೊಂಡದ್ದು. “ನೂರೆಂಟುಮಾತು” ಅಂಕಣಕಾರರೇನೋ ಈ ಬ್ಲಾಗನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡದ್ದು ಮಾತ್ರವಲ್ಲ ತಮ್ಮ ಪತ್ರಿಕೆಯಲ್ಲಿ ಒಂದು ಹುದ್ದೆಯನ್ನೇ ಈ ಬ್ಲಾಗಿಗರಿಗಾಗಿ ಹುಟ್ಟು ಹಾಕಿ ಅವರನ್ನು ಆ ಹುದ್ದೆಯನ್ನು ಸ್ವೀಕರಿಸಲು ಆಹ್ವಾನಿಸಿದ್ದರು. ಅವರು ಅದನ್ನು ಸ್ವೀಕರಿಸಲಿಲ್ಲ ಎಂಬುದು ಬೇರೆ ವಿಷಯ.
ಆದರೆ ಭಾರತದ ಇಂಗ್ಲಿಶ್ ಪತ್ರಿಕೋದ್ಯಮದ ದೈತ್ಯ ಟೈಂಸ್ ಆಫ್ ಇಂಡಿಯಾ ಮಾತ್ರ ತಾನು ಯಾರನ್ನು ಬೇಕಾದರೂ ಟೀಕಿಸಬಹುದು ಅದರೆ ತನ್ನನ್ನು ಯಾರೂ ಟೀಕಿಸಬಾರದು ಎಂಬ ನಿಲುವನ್ನು ತಾಳಿದೆ. ಮೀಡಿಯಾಹ್ ಎಂಬ ಹೆಸರಿನಲ್ಲಿ ಪ್ರದ್ಯುಮ್ನ ಮಹೇಶ್ವರಿ ಎಂಬವರು ಒಂದು ಬ್ಲಾಗ್ ನಡೆಸುತ್ತಿದ್ದರು. ಅದರಲ್ಲಿ ಅವರು ತಮ್ಮನ್ನು ಟೀಕಿಸಿದ್ದಕ್ಕೆ ಟೈಂಸ್ ಆಫ್ ಇಂಡಿಯಾದವರು ವಕೀಲರ ಮೂಲಕ ನೋಟೀಸು ಜಾರಿ ಮಾಡಿದ್ದರು. ಟೈಂಸ್ ಆಫ್ ಇಂಡಿಯಾದಂತಹ ದೈತ್ಯನ ವಿರುದ್ಧ ಏಕಾಕಿಯಾಗಿ ಹೋರಾಡಲು ನನ್ನಿಂದ ಅಸಾಧ್ಯ ಎಂದು ಘೋಷಿಸಿದ ಪ್ರದ್ಯುಮ್ನರು ತಮ್ಮ ಬ್ಲಾಗನ್ನೇ ತೆಗೆದುಬಿಟ್ಟರು. ಆದರೆ ಭಾರತದ ಬ್ಲಾಗ್ ಮಂಡಲವನ್ನೇ ಈಸುದ್ದಿ ಅಲ್ಲಾಡಿಸಿಬಿಟ್ಟಿತು. ಪ್ರದ್ಯುಮ್ನರ ಪರವಾಗಿ ಎಲ್ಲ ಬ್ಲಾಗಿಗರು ಒಂದಾದರು. ಒಬ್ಬರು ಪ್ರದ್ಯುಮ್ನರ ಬ್ಲಾಗನ್ನು ನಕಲು ಮಾಡಿ ತಮ್ಮ ಬ್ಲಾಗಿನಲ್ಲಿ ಹಾಕಿದರು. ಮತ್ತೊಬ್ಬರು ಅಂತರಜಾಲದಲ್ಲೇ ಟೈಂಸ್ನವರಿಗೆ ತಮ್ಮ ನೋಟೀಸು ವಾಪಾಸು ತೆಗೆದುಕೊಳ್ಳುವಂತೆ ಒಂದು ಮನವಿ ನಿರ್ಮಿಸಿದರು. ಈ ಮನವಿಗೆ ೫೦೦ಕ್ಕೂ ಹೆಚ್ಚು ಬ್ಲಾಗಿಗರು ಸಹಿ ಹಾಕಿದರು. ಭಾರತೀಯ ಬ್ಲಾಗ್ ಮಂಡಲದಲ್ಲೇ ಇದೊಂದು ತುಂಬ ಪ್ರಚಾರವನ್ನು ಪಡೆದ ಘಟನೆ.
ಒಟ್ಟಿನಲ್ಲಿ ಹೇಳುವುದಾದರೆ ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಒಂದು ರೀತಿಯಲ್ಲಿ ಪರ್ಯಾಯವಾಗಿ ಬ್ಲಾಗಿಂಗ್ ಬೆಳೆಯುತ್ತಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸತೊಡಗಿವೆ.
(೨೦೦೬ನೆ ಇಸವಿಯ ನವಂಬರ್ ೧೯ ರಂದು ಬರೆದದ್ದು)
(ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ “ವಿದ್ಯುನ್ಮಾನ ಮಾಧ್ಯಮದಲ್ಲಿ ಹೊಸ ಆಯಾಮಗಳು” ಪುಸ್ತಕದಲ್ಲಿ ಪ್ರಕಟವಾದ ಲೇಖನ)
Karnataka (kannada)
Karnataka Tourism
Karnataka Newspapers and Magazines
Kannada Portals
Kannada Language, Literature and Fonts
Kannada Songs
Kannada Films & Stars
Karnataka Recipes
Miscellaneous
Bangalore - The Garden City
Important Cities
- Karnataka Information
- Karnataka State Tourism Development Corporation
- Karnataka Home Page
- Karnataka Tourism Page
- Destination Karnatka - By Lonely Plannet
- karnataka.com
- Prajavani- Kannada Daily
- Udayavani - Kannada Daily
- Sanjevani- Evening Kannada Daily
- Kannada Prabha ( Express Group )
- Deccan Herald - English Daily Newspaper
- Taranga - Kannada Weekly magazine
- Vishwa kannada - First Online magazine in Kannada
- Srujana - Online magazine in Kannada
- Karnataka Patra - Kannada Monthly Online magazine
- SANGAMA - Kannada Online Magazine
- Kaamanabillu - On-line monthly in Kannada
- Aparanji - Haasya Patrike
- kannada ratna
- Satyam Online - Kannada portal from Satyam
- indiainfo - Kannada edition of indiainfo.com
- Samparka - All news at one place
- Net Jaal
- Kannada Sahitya
- Chaarana - a web journal for literature
- Kannada Sahitya puta - Kulki�s literary Page
- Ambikatanayadatta - D.R.Bendre
- AlemAriKanasugaLu - Kannada Poetry collection
- BARAHA-Windows Software - Convert English To Kannada
- Kannada Forum Download Kannada fonts and read articles in Kannada
- Type in English, see Kannada - Web Interface to ITRANS
- Kaleya Bale - Kannada Lipi
- Kannada Software Digest - kannada database and communication software
- Vighnesh's Home Page - Films News, Reviews and Songs
- Music India Online - film songs
- Heaven India
- Sumadhura Gaana Old & New Kannada Songs
- Hiremath's Desi Songs Page
- Kannada Music World
- New Kannada Songs - From Chirag-Entertainers
- Harry's Favorite Kannada Songs
- New & Old Kannada Songs
- Madhuralaya , Kannada Songs
- Kannada Songs - Chitrageete, Bhaktigeete, Bhavgeete, & Navyageete
- Home page for Vishnuvardhan
- Dr.Rajakumar home Page
- Chitralok - Kannada film news, interviews and reviews, etc...
- Kannada Movies - Kannada film news, interviews and reviews, etc...
- Dr.Rajakumar home Page - The Living Legend of Kannada films
- Ambarish & Sumalatha - Web page developed and maintained by Sumalatha
- Suhasini, the Cyberjunkie! - Web page developed and maintained by Suhasini
- Sudharani - Home Page Of Kannada Movie Star
- Joke Falls - Movie By Ashok Patil Starring Ramesh
- Shaapa - Movie By Ashok Patil
- Shanti! Shanti! Shanti! - Kannada Movie Webpage
- Ekangi - Ravichandran Movie
- Kala Ranga - Photo Gallery of Kannada film stars
- Jyoti's Kitchen - kannada receipes from Samparka
- Karnatakada khadya - Express Group site in kannada fonts
- What's cooking : Check out at Saramsh
- Karnataka recipes
- ANUJA HALYAL - My daughter's home page
- National Informatics Centre - Karnataka State Unit
- BABLOO - Website for Children in Multi-lingual ( includes Kannada ) -
- Karnataka Telephone Directory
- Live TV Programs - Watch Udaya and other south indian TV Channels live here
- Our Karnataka - Celebration of Kannada, Karnataka
- Basaweshwara - The founder of Veershaivam
- Veershaiva Samaja of North America
- Karnataka Cricket - The official website of the KSCA
- HubliCity - Join The Hubli - Dharwar Internet Users Club
- Kamat's Potpourri
- Kannada Horata
- Kannada University
- Kannada.Com
- Kannada Ganaka Parishat
- Kannada Club - Yahoo Club for kannadigas
- CLICK HUBLI - e-shopping for Hubli - Dharwar and surrounding areas -
- EDUCATION Bangalore - Everything about education in Bangalore
- My Bangalore
- Bangalore - History of Bangalore
- Facts - about Bangalore
- Megha - Bangalore's digital Netway
- Bangalore Online - ...the pulse of Bangalore
- Bangalore Essentials
- Bangalore Walla - namskAra, visit Bangalore
- Virtual Bangalore - Bangalore on the net
- IISc, Bangalore - Official Home Page
- STP - Software Technology Parks of India - Bangalore
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
