ಗುರುವಾರ, ಏಪ್ರಿಲ್ 15, 2010

ಗೆರೆ-ಬರೆ

ಗೆರೆ-ಬರೆ


ಜಗಜೀವನ್ ಶೆಟ್ಟಿಯವರು ವ್ಯಂಗ್ಯಚಿತ್ರ ಕಲಾವಿದರು,ಜತೆಗೆ "ಉದಯವಾಣಿ", "ತರಂಗ"ವೂ ಸೇರಿದಂತೆ ಹಲವು ಪತ್ರಿಕೆಗಳಿಗೆ ಚಿತ್ರರಚನೆಯನ್ನೂ ಮಾಡಿ ಹೆಸರು ಮಾಡಿದ ಕಲಾವಿದ ಕೂಡಾ.ಇವರ ಮಕ್ಕಳ ಕಲಾಶಾಲೆ "ಗೆರೆ-ಬರೆ" ಉಡುಪಿಯ ಹೊರವಲಯ ಅಂಬಾಗಿಲಿನಲ್ಲಿದೆ.ಈ ಕಲಾಶಾಲೆಯ ಬ್ಲಾಗ್ www.gerebare.blogspot.comನಲ್ಲಿ ಆರಂಭವಾಗಿದೆ.ಈ ಕಲಾಶಾಲೆಯ ಐದನೆ ವರ್ಷಾಚರಣೆಯ ಸ್ಮರಣಾರ್ಥವಾಗಿ,ಕಾರ್ಟೂನ್ ಮತ್ತು ಮಕ್ಕಳು ರಚಿಸಿದ ಪೋಸ್ಟರುಗಳ ಪ್ರದರ್ಶನ ರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯಲಿದೆ.ವಿವರಗಳು ಬ್ಲಾಗ್‌ನಲ್ಲಿವೆ.
ವ್ಯಂಗ್ಯಚಿತ್ರಕಾರ "ಹರಿಣಿ"ಯವರ ಅಂತರ್ಜಾಲ ತಾಣ http://harinigallery.blogspot.comನಲ್ಲಿದೆ. ತರಂಗದಲ್ಲಿ "ಹರಿಣಿ"ಯೆಂಬ ಹೆಸರಿನಲ್ಲಿ ವ್ಯಂಗ್ಯಚಿತ್ರ ರಚಿಸಿ,ಪ್ರಸಿದ್ಧಿಗೆ ಬಂದ ಕಲಾವಿದ ಹರಿಶ್ಚಂದ್ರ ಶೆಟ್ಟಿಯವರು ಮಹಿಳೆಯೆಂದೇ ಜನರು ಭಾವಿಸಿದ್ದರು. ವ್ಯಂಗ್ಯಭಾವಚಿತ್ರ ರಚನೆಯಲ್ಲೂ ಅವರದು ಎತ್ತಿದ ಕೈ.ಅವರ ಇತ್ತೀಚಿನ ವ್ಯಂಗ್ಯಚಿತ್ರಗಳು, ವ್ಯಂಗ್ಯ ಭಾವಚಿತ್ರಗಳು ಮತ್ತು ಇ-ಪೈಂಟಿಂಗಗಳನ್ನು ಬ್ಲಾಗಿನಲ್ಲಿ ನೋಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ