ಭಾನುವಾರ, ಅಕ್ಟೋಬರ್ 17, 2010

400 ವರ್ಷಗಳ ದಸರಾ ಇತಿಹಾಸ ಹೇಳುವ ಕಥೆ ಇದು… !

 
ಮೈಸೂರು: ಇಂದಿನ ಮೈಸೂರು ‘ಮಹಿಷೂರು’ ಆಗಿದ್ದಾಗ ಹದಿನಾಡು ಗ್ರಾಮದಿಂದ ಬಂದ ಅರಸು ಜನಾಂಗದ ಮನೆತನವೊಂದು ಇತ್ತು. ದೂರದಿಂದ ಬಂದ ಯದುರಾಯನಿಗೆ ಸದ್ಗುಣ ಸಂರಕ್ಷಕನೆಂದು ತಿಳಿದು ಇದೇ ಕುಟುಂಬ ನಂಟು ಬೆಳೆಸಿತು. ಆಗ ಯದುರಾಯ ಈ ಸಣ್ಣ ಊರೊಂದರ ನೇತೃತ್ವ ವಹಿಸಿದ. ರಾಜನೆಂದು ಕರೆದರು. ಮುಂದಿನ ಉತ್ತರಾಧಿಕಾರಿಗಳಿಗೆಲ್ಲ ಹೆಸರಿನ ಮುಂದೆ ‘ಒಡೆಯರ್’ ಎಂದು ಸೇರಿಸಿಕೊಂಡು, ಕದಂಬ, ಗಂಗ, ಚಾಲುಕ್ಯರಂತೆ ಈ ಮನೆತನವೂ ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಈ ಒಡೆಯರ್ ಎಂಬ ರಾಜಮನೆತನದಲ್ಲಿ ಪ್ರಜಾಪ್ರಭುತ್ವ ಬರುವವರೆಗೆ ‘ರಾಜತ್ವ’ ನೀಡಿದವರು 25 ಮಂದಿ. ಈ ಪೈಕಿ ಯದುರಾಯ, ಒಬ್ಬ ರಣಧೀರ ಕಂಠೀರವ, ಇನ್ನೊಬ್ಬ ತಿಮ್ಮರಾಜ, ಮತ್ತಿಬ್ಬರು ರಾಜ ಒಡೆಯರ್, ಹತ್ತು ಮಂದಿ ಚಾಮರಾಜರು, ನಾಲ್ವರು ಕೃಷ್ಣರಾಜರು, ಕೊನೆಯದಾಗಿ ಜಯಚಾಮರಾಜೇಂದ್ರ ಆಗಿ ಹೋದವರು.
ಈ ಒಡೆಯರ ಹೆಸರಿನ ರಾಜರು ಗಂಡಭೇರುಂಡ ಲಾಂಛನ ಹೊತ್ತು ಎರಡು ಕಡೆ ಆಳ್ವಿಕೆ ನಡೆಸಿದ್ದಾರೆ. ಒಂದು ಮೈಸೂರು ಮತ್ತೊಂದು ಶ್ರೀರಂಗಪಟ್ಟಣ, ಮೊದಲಿಂದ ಐವರು ಮೈಸೂರನ್ನು ಕೇಂದ್ರವಾಗಿರಿಸಿಕೊಂಡರೆ 6 ರಿಂದ 21ರವರೆಗಿನ ರಾಜರು ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ನಂತರದ ನಾಲ್ವರು ಮತ್ತೆ ಮೈಸೂರಿಗೆ ಸ್ಥಳಾಂತರವಾಗಿ ಅಧಿಕಾರ ನಡೆಸಿದ್ದಾರೆ. ಹಲವರು ಯುದ್ಧ ಮಾಡಿದ್ದರೆ ಮತ್ತೆ ಕೆಲವರು ಇಂಗ್ಲಿಷರೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಪ್ರಜಾಪ್ರಭುತ್ವ ಪದ್ಧತಿಯೊಂದಿಗೆ ಅಪ್ಪಿಕೊಂಡು ರಾಜತ್ವ ಸಾಧಿಸಿದವರಿದ್ದಾರೆ.
ಈ ಹಿನ್ನೆಲೆಯಲ್ಲಿ ಎಂದೋ ವಿಜಯನಗರದಲ್ಲಿ ನಡೆದಿದ್ದ ಮಹಾನವಮಿ ಆಚರಣೆಯನ್ನು ಪುನರ್ ಜಾರಿಗೊಳಿಸಿ ವೈಭವೀಕರಿಸಬೇಕೆಂದು ರಾಜ ಒಡೆಯರ್ ಇಂದಿಗೆ 400 ವರ್ಷಗಳ ಹಿಂದೆ 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಈ ದಸರೆಯ ದಿಬ್ಬಣವನ್ನು ಗೌರಿ ಕಡುವೆ ಎಂಬ ಸ್ಥಳದಲ್ಲಿ ಪುನಾರಂಭಿಸಿದರು.
ಈತ ದಸರೆ ಪದ್ಧತಿಗೊಂದು ಕಟ್ಟಳೆ ರೂಪಿಸಿದ. ಇದೇ ಸಂದರ್ಭದಲ್ಲಿ ಸಿಂಹಾಸನವನ್ನೇರಿದ. ಕೆಲ ಊರುಗಳನ್ನೂ ಗೆದ್ದ. ದಳವಾಯಿ ಹುದ್ದೆಯನ್ನು ಸೃಷ್ಟಿಸಿದ. ದಸರೆಯನ್ನು ಈತ ರಾಜನ ವಾರ್ಷಿಕ ವರದಿ, ಆಡಳಿತದ ಪ್ರತಿಬಿಂಬ ಜನಮುಖಿ ಕಾರ್ಯಕ್ರಮವೆಂದುಕೊಂಡು ಆಳಿದವನು. ಇದೇ ಮಾದರಿಯಲ್ಲಿ ಮುಂದಿನ ಎಲ್ಲಾ ದಸರೆಗಳೂ ನಡೆದಿವೆ. ಆ ವೈಭವವನ್ನು ಮುಂದೆ ಬಂದ ರಾಜರು ತರಲಾಗದಿದ್ದರೂ ಯಾವ ಮಾರ್ಪಾಡನ್ನೂ ಮಾಡಿಲ್ಲ.ಕೆಲವು ಬಿಟ್ಟು ಹೋಗಿವೆ. ಹಲವು ಆಧುನಿಕ ಸ್ಪರ್ಶಕ್ಕೆ ಸಿಕ್ಕಿವೆ. ಇದೊಂದು ಪರಂಪರೆಯಾಗಿ ಶ್ರೀರಂಗಪಟ್ಟಣದಿಂದ ಮೈಸೂರಿನ ಬನ್ನಿಮಂಟಪದವರೆಗೆ ಬಂದು ನಿಂತಿದೆ. ಮೈಸೂರಿನ ದಸರೆ ಪ್ರಾರಂಭವಾಗಿ (ಮುಮ್ಮಡಿ ಕೃಷ್ಣರಾಜ ಒಡೆಯರ್) 205ನೇ ವರ್ಷ ತುಂಬುತ್ತಿದೆ.
ಬದಲಾದ ಕಾಲಘಟ್ಟದಲ್ಲಿ ಮೆರವಣಿಗೆಯಲ್ಲಿ ಹೊಸದು ತುಂಬಿಕೊಂಡಿದೆ. ಆಡಳಿತ, ಹಣಬಲದ ಅನುಕೂಲ ನೋಡಿಕೊಂಡು ಜಂಬೂಸವಾರಿಯಂತೂ ಸಾಗಿದೆ. ಆದರೆ ಅರಮನೆಯ ಅಂತರಂಗದಲ್ಲಿ ನಡೆಯುವ ದಸರೆ ಹಬ್ಬ ಪೂಜೆ-ಪುನಸ್ಕಾರ, ಕಲಾಪಗಳು ಒಂದಿಷ್ಟೂ ಬದಲಾಗಿಲ್ಲ. ಅದೇ ಕಂಕಣ, ಅದೇ ದೇವಪೂಜೆ, ಅದೇ ದರ್ಬಾರ್, ಅದೇ ವ್ಯವಸ್ಥೆ ಶಿಸ್ತುಗಳು ಇಂದೂ ಖಾಸಗಿ ದರ್ಬಾರ್ನಲ್ಲೂ ಸಾಕ್ಷೀಭೂತವಾಗಿದೆ. ಎಲ್ಲರಿಗೂ, ರಾಜ್ಯಕ್ಕೂ ಅದೇ ಅಧಿದೇವತೆ ಚಾಮುಂಡೇಶ್ವರಿ. ಈ ಹಿನ್ನೆಲೆಯಲ್ಲಿ ಈ ರಾಜ ಮಹಾರಾಜರು ಮಾಡಿದುದನ್ನೂ ಸೂಕ್ಷ್ಮವಾಗಿ ಗುರುತಿಸುವುದು ಈಗ ಸೂಕ್ತ. ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಚಾಮುಂಡಿಬೆಟ್ಟದಲ್ಲಿ ಹಿರೀಕೆರೆ ಕಟ್ಟಿಸಿದರು. ಬಿರುದಂತೆಂಬರ ಗಂಡ ಬಿರುದನ್ನು ತಿಮ್ಮರಾಜ ಹೊತ್ತ, ಸುಗುಣ ಗಂಭೀರನೆಂದು ಬೋಳ ಚಾಮರಾಜ ಕರೆಸಿಕೊಂಡ. ರಣಧೀರ ಕಂಠೀರವ ನರಸಿಂಹರಾಜ ತಿರುಚಿನಾಪಳ್ಳಿ ಜಟ್ಟಿಯನ್ನುಹೊಡೆದ. ಆಯುಧ ಶಾಲೆ ಕಟ್ಟಿಸಿದ. ಮೈಸೂರಿನಲ್ಲಿ ಕೋಟೆಯನ್ನು ಬಲಪಡಿಸಿ ಫಿರಂಗಿಗಳನ್ನಿಟ್ಟು, ಚಿಕ್ಕದೇವರಾಜ ಒಡೆಯರ್ 18 ಇಲಾಖೆಗಳನ್ನೂ ಅಂಚೆ ಪದ್ಧತಿಯನ್ನು ಜಾರಿಗೊಳಿಸಿದ. ಅರಸು ಮನೆತನದ ಗಣತಿ ಕಾರ್ಯ ನಡೆಸಿದ. ಬೆಟ್ಟದ ಭೀಮರಾಜರಿದ್ದಾಗ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ರಥಕ್ಕೂ ಮದ್ದಿನಮನೆಗಳಿಗೂ ಬೆಂಕಿ ಬಿತ್ತು. ಖಾಸಾ ಭೀಮರಾಜರಿದ್ದಾಗಲೇ ಹೈದರ್- ಟಿಪ್ಪು ಅಧಿಕಾರಕ್ಕೆ . ಮುಮ್ಮಡಿ ಕಾಲದಲ್ಲಿ ಇಂಗ್ಲಿಷರ ಪ್ರಾಬಲ್ಯ. ಆದರೂ ಸಾಹಿತ್ಯ-ಸಂಗೀತಕ್ಕೆ ಪೋಷಣೆ. ಒಡೆಯರ್ ಕಾಲದಲ್ಲಿ ಆಧುನಿಕ ಶಿಕ್ಷಣ, ಪ್ರಜಾಸತ್ತೆಯ ಕಲ್ಪನೆ ರೂಪ ಪಡೆದುಕೊಂಡಿತು. ನಾಲ್ವಡಿಯವರಿಂದ ಸಾಮಾಜಿಕ -ಕೈಗಾರಿಕೆ ಅಭಿವೃದ್ಧಿ ಜಯಚಾಮರಾಜೇಂದ್ರರ ಕಾಲದಲ್ಲಿ ರಾಜತ್ವ ಹಿಂದೆ ಸರಿದು ಪ್ರಜಾಪ್ರಭುತ್ವ ಪ್ರತ್ಯಕ್ಷವಾಯಿತು.
ಈ ಎಲ್ಲಾ ರಾಜರೂ ಹತ್ತಿತರದ ಸಂಬಂಧಿಗಳಾದ ಹಳ್ಳಿಯ ಹುಡುಗಿಯರನ್ನು ರಾಣಿಯರನ್ನಾಗಿ ಮಾಡಿಕೊಂಡಿದ್ದಾರೆ. ಇಬ್ಬರಿಂದ ಹತ್ತು ಮಂದಿವರೆಗೆ ಹಾಗೂ ಒಂದಿಬ್ಬರು ದೂರದ ರಾಜಸ್ಥಾನದವರನ್ನು ಮದುವೆಯಾದವರಿದ್ದಾರೆ.
ಆದಷ್ಟೂ ಜನಮುಖಿಯಾಗಿ ನಡೆದುಕೊಂಡು ಜನರಲ್ಲಿ ವಿಶ್ವಾಸ, ಭಕ್ತಿ ರೂಢಿಸಿಕೊಂಡ ರಾಜಮನೆತನ ಇದಾಗಿದೆ. ದಾನ, ಧರ್ಮ, ಧರ್ಮಕಾರಣ, ಜನೋಪಯೋಗಿ, ಲೋಕೋಪಯೋಗಿ ಕೆಲಸ ಮಾಡಿದವರೇ ಹೆಚ್ಚು. ಮೈಸೂರು ಒಡೆಯರ್ ಮನೆತನದಲ್ಲಿ ವರ್ಣರಂಜಿತ ಮತ್ತು ವಿವೇಕತನದಲ್ಲಿ ಬಾಳಿದವರೂ ಇದ್ದಾರೆ. ಇವರನ್ನು ನಂಬಿದವರಿಗೆಲ್ಲ ಇವರೊಂದಿಗೆ ಕಷ್ಟ ನಷ್ಟ ಹೇಳಿಕೊಂಡವರಿಗೆಲ್ಲ ಫಲ ಸಿಕ್ಕಿದೆ. ಆ ಮೂಲಕ ರಾಜ್ಯಕ್ಕೂ ಒಳ್ಳೆಯದೇ ಆಗಿದೆ.

ಶುಕ್ರವಾರ, ಅಕ್ಟೋಬರ್ 15, 2010

ಮುಖೇಶ್ ಅಂಬಾನಿ ಶತಕೋಟಿ ರು.ಗಳ ಅರಮನೆ!

ಜಗತ್ತಿನ ನಾಲ್ಕನೆ ಅತಿ ಶ್ರೀಮಂತ ಮುಖೇಶ್ ಅಂಬಾನಿ ಜಗತ್ತಿನ ಪ್ರಪ್ರಥಮ ಶತಕೋಟಿ (2 ಶತಕೋಟಿ ಡಾಲರ್) ವೆಚ್ಚದ ಮನೆಯೊಂದನ್ನು ಮುಂಬೈಯಲ್ಲಿ ನಿರ್ಮಿಸಿದ್ದಾರೆ. 27 ಮಹಡಿಗಳ ಈ ಮನೆ 173 ಮೀಟರ್ ಎತ್ತರವಿದೆ. ಸುಮಾರು 630 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ಇಷ್ಟು ವೆಚ್ಚದ ಮನೆ ಜಗತ್ತಿನಲ್ಲೇ ಪ್ರಥಮ ಎನ್ನಲಾಗಿದೆ.

ಈ ಅರಮನೆಯಲ್ಲಿ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ವಾಸಿಸಲಿದ್ದಾರೆ. ಮನೆಯಲ್ಲಿ ವಿಶಾಲವಾದ ಜಿಮ್ ಮತ್ತು ನೃತ್ಯ ಸ್ಟುಡಿಯೊವನ್ನು ಹೊಂದಿರುವ ಆರೋಗ್ಯ ಕ್ಲಬ್ ಇದೆ. ಒಂದು ಈಜು ಕೊಳ, ಅತಿಥಿ ಕೋಣೆ, ವಿವಿಧ ರೀತಿಯ ಅಂಗಣಗಳು, 50 ಮಂದಿ ಕುಳಿತುಕೊಳ್ಳಬಹುದಾದ ಸಿನೆಮಾ ಮಂದಿರ ಮನೆಯೊಳಗೇ ಇದೆ ಎಂದು ವರದಿಯೊಂದು ಹೇಳಿದೆ.
ಮನೆಯ ಛಾವಣಿಯಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಕೆಳಗಿನ ಅಂತಸ್ತಿನಲ್ಲಿ ಸುಮಾರು 160 ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಸ್ಥಳಾವಕಾಶವಿದೆ. ಅತಿಥಿಗಳನ್ನು ಪ್ರಾಂಗಣದಿಂದ ಕಾರ್ಯಕ್ರಮಗಳು ನಡೆಯುವ ವಿವಿಧ ಮಹಡಿಗಳಿಗೆ ತಲುಪಿಸಲು ಕಟ್ಟಡದಲ್ಲಿ 9 ಲಿಫ್ಟ್‌ಗಳಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ 53ರ ಹರೆಯದ ಉದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಗರ ಮತ್ತು ಸಮುದ್ರದ ಸವಿಯನ್ನು ವೀಕ್ಷಿಸಲು ಅನುಕೂಲವಿದೆ.
ಕಟ್ಟಡವು 37,000 ಚದರ ಮೀಟರ್ ವಿಸ್ತಾರವಿದ್ದು, ಇದು ವೆರ್ಸಲಿಸ್ ಅರಮನೆಗೂ ದೊಡ್ಡದಾಗಿದೆ. ಇಷ್ಟು ದೊಡ್ಡ ಮನೆಯನ್ನು ಸರಿಯಾಗಿ ನಿರ್ವಹಿಸಲು ಸುಮಾರು 600 ಸಿಬ್ಬಂದಿ ಸೇವೆಗಿದ್ದಾರೆ. ಈ ಮನೆಯನ್ನು ನಿರ್ಮಿಸಲು 44 ಮಿಲಿಯನ್ ಪೌಂಡ್‌ನಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಮುಂಬೈಯ ಪ್ರಮುಖ ಕೇಂದ್ರದಲ್ಲಿ ಭೂಮಿ ಮತ್ತು ಆಸ್ತಿ ವೌಲ್ಯ ಆ ಅಂದಾಜಿನಿಂದ 15 ಪಟ್ಟು ಅಧಿಕ ವೌಲ್ಯವನ್ನು ಈ ಮನೆಗೆ ನೀಡಿದೆ. ಹೀಗಾಗಿ ಈ ಮನೆಯ ನಿರ್ಮಾಣ ವೆಚ್ಚ 630 ಮಿಲಿಯನ್ ಪೌಂಡ್ ಆಗಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ, ಅಕ್ಟೋಬರ್ 13, 2010

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

ಮೊಬೈಲ್ ಬಳಕೆದಾರರಿಗೆ ಕನ್ನಡ ಸುದ್ದಿಗಳನ್ನು ಎಸ್ಎಮ್ಎಸ್ ಮುಖಾಂತರ ದಟ್ಸ್ ಕನ್ನಡ [^] [^] ತಲುಪಿಸುತ್ತಿರುವುದು ನಮ್ಮ ಓದುಗರಿಗೆ ತಿಳಿದ ವಿಚಾರ. ಈ ನಮ್ಮ ಸೇವೆಯನ್ನು ಬಳಕೆದಾರರು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಆದರೆ, ಅನೇಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಕನ್ನಡ ಅಕ್ಷರಗಳಿಗೆ ಬೆಂಬಲ ನೀಡದ ಕಾರಣ ಸಾವಿರಾರು ಓದುಗರು ಮೋಬೈಲಲ್ಲಿ ಕನ್ನಡ ಓದುವ ಅವಕಾಶದಿಂದ ವಂಚಿತರಾಗಿದ್ದಾರೆ.

ಕನ್ನಡ ಓದಬಯಸುವ ಪ್ರತಿ ಮೊಬೈಲ್ ಬಳಕೆದಾರರಿಗೆ ತಾಜಾ ಕನ್ನಡ ಸುದ್ದಿ [^]ಗಳನ್ನು ತಲುಪಿಸಬೇಕೆಂಬ ಒತ್ತಾಸೆ ನಮ್ಮದು. ಈ ಕಾರಣದಿಂದಾಗಿ ಆಂಗ್ಲ ಲಿಪಿಯಲ್ಲಿಯೇ ದಟ್ಸ್ ಕನ್ನಡ ಸುದ್ದಿ ಸಂದೇಶಗಳನ್ನು ನೀಡುವ ಉದ್ದೇಶದಿಂದ ಹೊಸ ಪದ್ಧತಿಯನ್ನು ಮೈಟುಡೆ.ಕಾಂ ಪ್ರಾರಂಭಿಸಿದೆ. ಕನ್ನಡ ಲಿಪಿ ಸಪೋರ್ಟ್ ಮಾಡ ಮೊಬೈಲ್ ಬಳಕೆದಾರರ ಆಗ್ರಹದ ಮೇರೆಗೆ ಈ ಹೆಚ್ಚುವರಿ ಸೇವೆಯನ್ನು ಪ್ರಾರಂಭಿಸಲಾಗಿದೆ.

ಮೊಬೈಲನ್ನು ಲಕ್ಷಾನುಲಕ್ಷ ಕನ್ನಡ ಭಾಷಿಗರು ಉಪಯೋಗಿಸುತ್ತಿದ್ದಾರೆ. ಮಾತೃಭಾಷೆಯಲ್ಲಿಯೇ ಸುದ್ದಿಗಳನ್ನು ಓದಬೇಕೆಂಬ ಆಸೆ ಅವರದು. ಸುದ್ದಿ ಸಂದೇಶಗಳು ಕನ್ನಡದಲ್ಲಿ ಬಂದರೂ ಹ್ಯಾಂಡ್ ಸೆಟ್ ನಲ್ಲಿ ಸೆಟ್ ಇರದ ಕಾರಣ ಇದರಿಂದ ವಂಚಿತರಾಗುತ್ತಿದ್ದಾರೆ. ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರಹ [^]) ಸುದ್ದಿ ಸಂದೇಶಗಳು ಈ ಕೊರತೆಯನ್ನು ನಿವಾರಣೆ ಮಾಡಲಿದೆ. ಈ ಸದವಕಾಶವನ್ನು ಕನ್ನಡ ಓದುಗರು ಬಳಸಿಕೊಳ್ಳುತ್ತಾರೆಂಬ ಸದಾಶಯ ನಮ್ಮದು.

ಈ ಸೇವೆಯ ಶುಲ್ಕ ಕೂಡ ರು.5, ಅದೂ ತಿಂಗಳಿಗೆ. ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಈ ಕೊಂಡಿಯನ್ನು ಕ್ಲಿಕ್ ಮಾಡಿ.

ಚಂದಾದಾರರಾಗುವುದು ಸುಲಭ

ಮೊಬೈಲ್ ಮೂಲಕ ONE-KNNEWSENG ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ  ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.

ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.

ಮೊಬೈಲಲ್ಲಿ ಕನ್ನಡ ಇಲ್ಲವೆ? ಚಿಂತಿಸಬೇಡಿ. ಇಂಗ್ಲಿಷ್ ನಲ್ಲಿ ಕನ್ನಡ ಸುದ್ದಿಗೆ ಚಂದಾದಾರರಾಗಿ.

ಮಂಗಳವಾರ, ಅಕ್ಟೋಬರ್ 12, 2010

ಅವಿರತ - ಸಂಸ್ಥೆ

ನಾಡಿಗಾಗಿ ನಿರಂತರ ತಾಯಿನಾಡು ಹಾಗು ಮಾನವೀಯತೆಗಾಗಿ ನಿರಂತರವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವ ಪಡೆ.

ಕ್ವಿಲ್ ಪ್ಯಾಡ್

ಕನ್ನಡದಲ್ಲಿ ಬರೆಯಲು, ಹುಡುಕಲು ಇದಕ್ಕಿಂತ ಉತ್ತಮ ತಾಣ ಇನ್ನೊಂದು ಇರಲಿಕ್ಕಿಲ್ಲ. ಇಲ್ಲಿ ಧೀರ್ಘಾಕ್ಷರಗಳನ್ನು ನಾವು ಕೀಲಿಸಬೇಕಿಲ್ಲ. ತನ್ನಲ್ಲಿರುವ ನಿಘಂಟನ್ನು ಬಳಸಿ ಅಕ್ಷರಗಳನ್ನು ಸರಿಯಾಗಿ ಜೋಡಿಸಿಕೊಳ್ಳುತ್ತದೆ. ಮೊಬೈಲ್ ಫೋನಿನಲ್ಲಿರುವ ಡಿಕ್ಷ್ನರಿ ಮೋಡ್ ತರಹ ಕೆಲಸ ಮಾಡುತ್ತದೆ.

ಕನ್ನಡ ಮಿತ್ರ

ಉದ್ಯೋಗಾಂಕ್ಷಿಗಳಿಗಾಗಿ ನಿರ್ಮಿಸಿರುವ ತಾಣ. ಕನ್ನಡಿಗರನ್ನುಮುಂದೆ ತರುವ ಮಹದಾಕಾಂಕ್ಷೆ ಇಲ್ಲಿದೆ.

ಭಕ್ತಿಗೀತ.ಬ್ಲಾಗ್ ಸ್ಪಾಟ್.ಕಾಂ

ಭಕ್ತಿಗೀತೆಗಳನ್ನು ಓದಿ ಮತ್ತು ಕೇಳಿ

ಅಂತರ್ಜಾಲ ವಾಚನಾಲಯ

ಈ ತಾಣದಲ್ಲಿ 21,007 ಕನ್ನಡದ ಪುಸ್ತಕಗಳು ಇದ್ದು ಒಟ್ಟು 3299698 ಪುಟಗಳು ಇವೆ ಎಂದು ತಾಣ ಹೇಳಿಕೊಳ್ಳುತ್ತದೆ. ಕೆಲವು ಪುಸ್ತಕಗಳನ್ನು ತೆರೆದು ನೋಡಿದ್ದೇನೆ. ಕೆಲವು ಅಸ್ಪಷ್ಟವಾಗಿ, ಇನ್ನು ಕೆಲವು ಸ್ಪಷ್ಟವಾಗಿ ಸ್ಕ್ಯಾನ್ ಆಗಿದೆ.

ವಿಚಾರ ಮಂಟಪ

ದೇಶ, ಸಾಹಿತ್ಯ ಮತ್ತು ಇನ್ನೂ ಹಲವಾರು ವಿಷಯಗಳು ಇಲ್ಲಿವೆ.

ಅಂತರ್ಜಾಲ

ಅಂತರ ಜಾಲ ಎಂಬುದು ಸಹಸ್ರಾರು ಗಣಕಯಂತ್ರಗಳ ಜಾಲಗಳ ನಡುವೆ ಸಂಪರ್ಕವನ್ನು ಏರ್ಪಡಿಸಿ ನಿರ್ಮಿಸಲಾದ ಬೃಹತ್ ಜಾಲ. ಇದು ಸಾರ್ವಜನಿಕವಾಗಿ ಲಭ್ಯವಾಗಿದ್ದು ಇಂಟರ್ನೆಟ್ ಪ್ರೋಟೋಕೋಲ್ ಮೊದಲಾದ ವ್ಯವಸ್ಥೆಗಳ ಮುಖಾಂತರ ಮಾಹಿತಿ ಸಂವಹನ ನಡೆಸುತ್ತದೆ.
ಸರ್ಕಾರಿ, ಶೈಕ್ಷಣಿಕ ಮತ್ತು ವಾಣಿಜ್ಯ ಸಂಸ್ಥೆಗಳ ಅನೇಕ ಜಾಲಗಳಿದ್ದು ಅವನ್ನು ಒಂದಕ್ಕೊಂದು ಕೂಡಿಸಿ ಸೃಷ್ಟಿಸಿದ ಬೃಹತ್ ಜಾಲವೇ ಅಂತರ ಜಾಲ ಅಥವಾ ಇಂಟರ್ನೆಟ್. ಅನೇಕ ರೀತಿಯ ಮಾಹಿತಿಯನ್ನು ಸಾಗಿಸುವ ಈ ಜಾಲ, ವಿ-ಅಂಚೆ, ಅಂತರ ಜಾಲ ಹರಟೆ (ಚ್ಯಾಟಿಂಗ್), ಅಂತರ ಜಾಲ ತಾಣಗಳು ಮೊದಲಾದ ಸೇವೆಗಳನ್ನು ಒದಗಿಸುತ್ತದೆ.

1. ಅಂತರ ಜಾಲದ (ಅಂತರ್ಜಾಲದ) ಉಗಮ

೧೯೬೯ ರಲ್ಲಿ ಅಮೆರಿಕ ಸರ್ಕಾರದ ರಕ್ಷಣಾ ವಿಭಾಗ ತನ್ನ ಕೆಲಸಗಳಿಗಾಗಿ ಗಣಕಯಂತ್ರಗಳ ಒಂದು ಜಾಲವನ್ನು ನಿರ್ಮಿಸಿತು. ಇದಕ್ಕೆ ಅರ್ಪಾನೆಟ್ (ARPANET) ಎಂದು ಹೆಸರಿಡಲಾಗಿತ್ತು. ವಿಕೇಂದ್ರೀಕೃತ ಜಾಲಗಳು ಮತ್ತು ಮಾಹಿತಿ ಸಂವಹನ ವ್ಯವಸ್ಥೆಗಳ ಮೇಲಿನ ಸಂಶೋಧನೆಯ ಫಲಿತಾಂಶ ಈ ಜಾಲ. ಜನವರಿ ೧, ೧೯೮೩ ರಂದು ಅರ್ಪಾನೆಟ್ ನ ಕೆಲವು ಮೂಲಭೂತ ವ್ಯವಸ್ಥೆಗಳನ್ನು ಅಧುನಿಕೀಕರಣಗೊಳಿಸಲಾಯಿತು. ಇಂದಿನ ಅಂತರ ಜಾಲದ ಹಿರಿಯಜ್ಜ ಈ ಆಧುನಿಕೀಕೃತವಾದ ಅರ್ಪಾನೆಟ್.

ಅಂತರ ಜಾಲದ ಒಂದು ಭಾಗಶಃ ರೇಖಾಚಿತ್ರ
ಅಂತರ ಜಾಲದ ಅಭಿವೃದ್ಧಿಯಲ್ಲಿ ಇನ್ನೊಂದು ಮುಖ್ಯ ಹೆಜ್ಜೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ (National Science Foundation) ೧೯೮೬ ರಲ್ಲಿ ನಿರ್ಮಿಸಿದ ಇನ್ನೊಂದು ಕಂಪ್ಯೂಟರ್ ಜಾಲ - ಇದಕ್ಕೆ ಎನ್ಎಸ್ಎಫ್ನೆಟ್ (NSFNet) ಎಂದು ಹೆಸರಿಡಲಾಗಿತ್ತು. ನಂತರದ ವರ್ಷಗಳಲ್ಲಿ ಇನ್ನೂ ಅನೇಕ ಜಾಲಗಳು ಚಿಗುರಿಕೊಂಡವು. ಆದರೆ ಆಗ ಇನ್ನೂ ಈ ಜಾಲಗಳು ಬಿಡಿಬಿಡಿಯಾಗಿ ಹಂಚಿಹೋಗಿದ್ದವೇ ಹೊರತು ಒಂದಕ್ಕೊಂದು ಸಂಪರ್ಕವನ್ನು ಹೊಂದಿರಲಿಲ್ಲ.
೯೦ ರ ದಶಕದಲ್ಲಿ ಈ ವಿವಿಧ ಜಾಲಗಳ ನಡುವೆ ಸಂಪರ್ಕ ಏರ್ಪಡಿಸಿ ಅವುಗಳನ್ನು ಒಗ್ಗೂಡಿಸಲಾಯಿತು. ಇತರ ದೇಶಗಳಲ್ಲಿ ಜನ್ಮ ತಾಳಿದ್ದ ಕಂಪ್ಯೂಟರ್ ಜಾಲಗಳೂ ಈ ಪ್ರಯತ್ನದಲ್ಲಿ ಸೇರಿಕೊಂಡು ಅನೇಕ ಸಣ್ಣ ಸಣ್ಣ ಕಂಪ್ಯೂಟರ್ ಜಾಲಗಳನ್ನು ಒಳಗೊಂಡ ಬೃಹತ್ ಜಾಲ ರೂಪುಗೊಳ್ಳಲಾರಂಭಿಸಿತು. ಇದೇ ಈಗಿನ ಅಂತರ ಜಾಲ.

2. ಇಂದಿನ ಅಂತರ ಜಾಲ


ಅಂತರ ಜಾಲದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸೌಲಭ್ಯಗಳು - ಬ್ರೌಸರ್, ಎಫ್‍ಟಿಪಿ ಇತ್ಯಾದಿ
ಅಂತರ ಜಾಲದಲ್ಲಿ ಎಲ್ಲ ಗಣಕಯಂತ್ರಗಳನ್ನು ಸಂಪರ್ಕಿಸಲು ಅತಿ ಸಂಕೀರ್ಣವಾದ ಸಂಪರ್ಕ ಸಾಧನಗಳು ಮತ್ತು ಮಾಧ್ಯಮಗಳು ಉಪಯೋಗವಾಗಿವೆ. ಇದಲ್ಲದೆ, ಮಾಹಿತಿ ಸಂವಹನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಮಾಡಿಕೊಂಡಿರುವ ಅನೇಕ ಒಪ್ಪಂದಗಳುಂಟು - ಇವುಗಳಿಗೆ ಪ್ರೋಟೋಕೋಲ್ ಗಳೆಂದು ಹೆಸರು. ಈ ಪ್ರೋಟೋಕೋಲ್ ಗಳು ಮಾಹಿತಿಯನ್ನು ಸರಿಯಾಗಿ ಯಾವ ರೀತಿಯಲ್ಲಿ ಕಳುಹಿಸಬೇಕೆಂಬುದನ್ನು ನಿರ್ದೇಶಿಸುತ್ತವೆ.
ಹಾಗೆಯೇ ಮಾಹಿತಿಯನ್ನು ಸಂಚಯಿಸುವ ಮಾಧ್ಯಮ ಯಾವುದು ಬೇಕಾದರೂ ಆಗಿರಬಹುದು - ತಾಮ್ರದ ತಂತಿ, ಕೋ-ಆಕ್ಸಲ್ ಕೇಬಲ್, ಯಾವ ಕೇಬಲ್ ಗಳೂ ಇಲ್ಲದೆ ವಯರ್ಲೆಸ್ ಜಾಲ - ಹೀಗೆ ವಿವಿಧ ರೀತಿಗಳಲ್ಲಿ ಮಾಹಿತಿ ಅಂತರ ಜಾಲದ ಮೂಲಕ ಸಾಗುತ್ತದೆ.
ಅಂತರ ಜಾಲದ ಪ್ರೋಟೋಕೋಲ್ ಗಳನ್ನು ಪ್ರತಿಪಾದಿಸುವ ಸಂಸ್ಥೆ ಅಂತರ ಜಾಲ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ (IETF), ಮತ್ತು ಅದರ ಸಂಬಂಧಿ ಕಾರ್ಯ ನಡೆಸುವ ಗುಂಪುಗಳ ಸಮಿತಿ. ಈ ಪ್ರತಿಪಾದನೆಗಳು ಸಾರ್ವಜನಿಕವಾಗಿ ಲಭ್ಯವಿದ್ದು ಸಾರ್ವಜನಿಕರು ಇವುಗಳ ಬಗೆಗಿನ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಈ ಸಮಿತಿ ಪ್ರತಿಪಾದನೆಗಳನ್ನು Request for Comments (RFCs) ಎಂಬ ಹೆಸರಿನಲ್ಲಿ ಪ್ರಕಟಿಸುತ್ತದೆ. ಯಾವ ಪ್ರತಿಪಾದನೆಗಳನ್ನು ಪಾಸು ಮಾಡಿ ಅಂತರ ಜಾಲದಲ್ಲಿ ಅಳವಡಿಸಿಕೊಳ್ಳಬಹುದೆಂಬುದನ್ನು Internet Architecture Board (IAB) ಸೂಚಿಸುತ್ತದೆ.
ಅಂತರ ಜಾಲದಲ್ಲಿ ಬಹಳವಾಗಿ ಉಪಯೋಗದಲ್ಲಿರುವ ಪ್ರೋಟೋಕೋಲ್ ಗಳೆಂದರೆ (ಕೆಳಗೆ ಇಂಗ್ಲಿಷ್ ಲೇಖನಗಳಿಗೆ ಸಂಪರ್ಕ ಕಲ್ಪಿಸಲಾಗಿದೆ):
IP, TCP, UDP, DNS, PPP, SLIP, en:ICMP, POP3, IMAP, SMTP, HTTP, HTTPS, SSH, Telnet, FTP, LDAP, ಮತ್ತು SSL.
ಅಂತರ ಜಾಲದಲ್ಲಿ ಉಪಯೋಗದಲ್ಲಿರುವ ಅತಿ ಜನಪ್ರಿಯ ಸೌಲಭ್ಯಗಳಲ್ಲಿ ವಿ-ಅಂಚೆ, ಅಂತರ ಜಾಲ ತಾಣಗಳು, ಹರಟೆ ಮೊದಲಾದವುಗಳು ಸೇರಿವೆ. ವಿ-ಅಂಚೆ ಮತ್ತು ಅಂತರ ಜಾಲ ತಾಣಗಳು ಅತಿ ಹೆಚ್ಚು ಉಪಯೋಗ ಕಂಡಿವೆ. ಇವನ್ನು ಆಧರಿಸಿ ಕೆಲಸ ಮಾಡುವ ವಿ-ಗುಂಪುಗಳು, ಬ್ಲಾಗ್ ಗಳು ಮೊದಲಾದ ಸೌಲಭ್ಯಗಳು ಸಹ ಜನಪ್ರಿಯವಾಗಿವೆ. ಹಾಗೆಯೇ ಅಂತರ ಜಾಲ ರೇಡಿಯೊ, ವೆಬ್‍ಕಾಸ್ಟ್ ಮೊದಲಾದವು ಸಹ ಬೆಳಕಿಗೆ ಬಂದಿವೆ.

3. ಅಂತರ ಜಾಲ ಸಂಸ್ಕೃತಿ

ಅಂತರ ಜಾಲ ಜನರು ಕೆಲಸ ನಡೆಸುವ ರೀತಿ, ಮಾಹಿತಿ ಶೋಧನೆ ಮತ್ತು ಅಭಿಪ್ರಾಯಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತಿದೆ.

3. 1. ಮಾಹಿತಿ ಸಂಗ್ರಹಣೆ

ಗೂಗ್ಲ್ ನಂತಹ ಶೋಧ ಯಂತ್ರಗಳ ಉಪಯೋಗದಿಂದ ಯಾವ ವಿಷಯದ ಬಗ್ಗೆಯೇ ಆಗಲಿ, ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಹುಡುಕಬಹುದಾಗಿದೆ. ಹಿಂದಿನ ಕಾಲದ ಮುದ್ರಿತ ವಿಶ್ವಕೋಶಗಳು ಅಥವಾ ಗ್ರಂಥಾಲಯಗಲಿಗೆ ಹೋಲಿಸಿದರೆ ಮಾಹಿತಿ ಮತ್ತು ಜ್ಞಾನದ ತೀವ್ರ ವಿಕೇಂದ್ರೀಕರಣಕ್ಕೆ ಇದು ದಾರಿ ಮಾಡಿಕೊಟ್ಟಿದೆ.

3. 2. ದೂರ ಸಂಪರ್ಕ

ಅಂತರ ಜಾಲದ ಮುಖಾಂತರ ಒಂದು ಕಂಪ್ಯೂಟರ್ ನ ಬಳಕೆದಾರರು ಪ್ರಪಂಚದ ಇನ್ನಾವುದೇ ಭಾಗದಲ್ಲಿರುವ ಇನ್ನಾವುದೇ ಕಂಪ್ಯೂಟರ್ ಗೆ ಸಂಪರ್ಕ ಏರ್ಪಡಿಸಿಕೊಳ್ಳಬಹುದಾಗಿದೆ. ಕೆಲವು ಕಂಪ್ಯೂಟರ್ ಗಳಿಗೆ ಸಂಪರ್ಕ ಕೊಡುವ ಮೊದಲು ಸುರಕ್ಷತೆ ಮತ್ತು ಸರಿಯಾದ ಪ್ರವೇಶಪದಗಳನ್ನು ಏರ್ಪಡಿಸಿಕೊಳ್ಳುವುದು ಸಾಮಾನ್ಯ.
ಇದರಿಂದಾಗಿ ನೀವು ಪ್ರಯಾಣ ಮಾಡುತ್ತಿರುವಾಗಲೂ ನಿಮ್ಮ ಕಛೇರಿಯಲ್ಲಿರುವ ಕಂಪ್ಯೂಟರ್ ಗೆ ಸಂಪರ್ಕವನ್ನೇರ್ಪಡಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಬಹುದಾಗಿದೆ. ಮನೆಯಿಂದಲೇ ಕೆಲಸ ಮಾಡಬಯಸುವವರಿಗೆ ಹೊಸ ಹೊಸ ದಾರಿಗಳು ಸೃಷ್ಟಿಯಾಗಿವೆ. ಉದಾಹರಣೆಗೆ, ಅಕೌಂಟೆಂಟ್ ಒಬ್ಬರು ಮನೆಯಲ್ಲಿ ಕುಳಿತು ಬೇರಾವುದೋ ದೇಶದಲ್ಲಿರುವ ಕಂಪೆನಿಯ ಲೆಕ್ಕಪತ್ರಗಳ ಆಡಿಟ್ ಕೆಲಸವನ್ನು ಮಾಡಬಹುದಾಗಿದೆ.ಬಹಲ ಅನುಕುಲ ವಾಗಿದೆ.

3. 3. ಸಹಕಾರ

ಸುಲಭವಾಗಿ ಯೋಚನೆಗಳು, ಜ್ಞಾನ, ಮಾಹಿತಿ ಮೊದಲಾದವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಯುವಂತೆ ಅಂತರ ಜಾಲ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಅನೇಕ ಜನರು ಒಟ್ಟಾಗಿ ಮಾಡುವ ಸಹಕಾರಿ ಕೆಲಸಗಳನ್ನು ನಡೆಸಲು ಬಹಳ ಸುಲಭವಾಗಿದೆ. ಉದಾಹರಣೆಗೆ ವಿಕಿಪೀಡಿಯ ವಿಶ್ವಕೋಶ - ಹತ್ತಾರು ದೇಶಗಳಲ್ಲಿನ ಜನರು ಸಹಕರಿಸಿ ಉಂಟಾದ ವಿಶ್ವಕೋಶ ಇದು.
ಸಹಕಾರಿ ವ್ಯವಸ್ಥೆಯಲ್ಲಿ ವೃದ್ಧಿಪಡಿಸಿದ ತಂತ್ರಾಂಶಗಳಲ್ಲಿ ಅತಿ ಪ್ರಸಿದ್ಧ ತಂತ್ರಾಂಶಗಳಲ್ಲಿ ಒಂದು ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ. ಹಾಗೆಯೇ ವಿ-ಆರೋಗ್ಯ ಮೊದಲಾದ ಯೋಚನೆಗಳು ಸೃಷ್ಟಿಯಾಗಿವೆ - ಒಂದು ಆಸ್ಪತ್ರೆಯಲ್ಲಿ ಇರುವ ರೋಗಿಯೊಬ್ಬರಿಗೆ ಸ್ಕ್ಯಾನಿಂಗ್ ನಡೆಸುತ್ತಿದ್ದರೆ ಆ ಚಿತ್ರಗಳನ್ನು ತತ್-ಕ್ಷಣ ಅದನ್ನು ಬೇರೊಂದು ದೇಶದ ವೈದ್ಯರಿಗೆ ಕಳಿಸಿ ಅವರ ಅಭಿಪ್ರಾಯ ಪಡೆಯುವುದು ಕ್ಷಣಮಾತ್ರದ ಕೆಲಸ.

3. 4. ಫೈಲ್ ಶೇರಿಂಗ್

ಗಣಕಯಂತ್ರದಲ್ಲಿ ಇಡುವ ಫೈಲ್ ಗಳನ್ನು ಹಂಚಿಕೊಳ್ಳಲು ಅಂತರ ಜಾಲ ಅನೇಕ ವಿಧಾನಗಳನ್ನು ಕಲ್ಪಿಸಿಕೊಟ್ಟಿದೆ. ವಿ-ಅಂಚೆ, ಅಂತರ ಜಾಲ ತಾಣಗಲಲ್ಲಿ ಅಪ್ಲೋಡ್ ಮತ್ತು ಡೌನ್‍ಲೋಡ್, ಫೈಲ್ ಸರ್ವರ್ ಗಳ ಉಪಯೋಗ ಇತ್ಯಾದಿ ವಿಧಾನಗಳು. ಈ ಎಲ್ಲ ವಿಧಾನಗಳಲ್ಲಿಯೂ ಯಾರು ನಿಮ್ಮ ಫೈಲ್ ಗಳನ್ನು ನೋಡಬಹುದು/ಬಾರದು ಇತ್ಯಾದಿ ವಿಷಯಗಳ ಬಗ್ಗೆ ನಿಯಂತ್ರಣವನ್ನು ಏರ್ಪಡಿಸಬಹುದಾಗಿದೆ. ಕೆಲವೊಮ್ಮೆ ಈ ಅನುಕೂಲಕ್ಕಾಗಿ ಹಣದ ಪಾವತಿ ಅಗತ್ಯವಿದ್ದಲ್ಲಿ ಅದನ್ನು ಸಹ ಅಂತರ ಜಾಲದ ಮೂಲಕವೇ ಮಾಡಬಹುದು.
ಈ ರೀತಿಯ ಅನುಕೂಲಗಳು ಜನಜೀವನವನ್ನು ಆಳವಾಗಿ ಪ್ರಭಾವಿಸಿವೆ. ಯಾವುದೇ ಸಂಸ್ಥೆಯ ಉತ್ಪನ್ನಗಳ ಅಭಿವೃದ್ಧಿ, ಅವುಗಳ ಮಾರಾಟ/ಕೊಳ್ಳುವಿಕೆ, ಹಂಚುವಿಕೆ/ವಿತರಣೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿಯೂ ಅಂತರ ಜಾಲದ ಅಚ್ಚನ್ನು ಕಾಣಬಹುದಾಗಿದೆ.

3. 5. ಭಾಷೆ

ಅಂತರ ಜಾಲದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಬಳಸಲ್ಪಟ್ಟಿರುವ ಭಾಷೆ ಇಂಗ್ಲಿಷ್. ಅಂತರ ಜಾಲ ಇಂಗ್ಲಿಷ್ ಮಾತನಾಡಲ್ಪಡುವ ರಾಷ್ಟ್ರಗಳಲ್ಲಿ ಮೊದಲು ಉಗಮವಾದ್ದರಿಂದ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳಲ್ಲಿ ಇಂಗ್ಲಿಷ್ ಭಾಷೆಗೆ ಪ್ರಾಧಾನ್ಯ ಇರುವುದರಿಂದ ಸ್ವಾಭಾವಿಕವಾಗಿ ಅಂತರ ಜಾಲದಲ್ಲಿ ಇಂಗ್ಲಿಷಿನ ಅಸ್ತಿತ್ವ ಹೆಚ್ಚು. ಇನ್ನೊಂದು ಕಾರಣವೆಂದರೆ ಸ್ವಲ್ಪ ವರ್ಷಗಳ ಹಿಂದೆ ಕಂಪ್ಯೂಟರ್ ಗಳು ಇಂಗ್ಲಿಷ್ ನ ಅಕ್ಷರಗಳನ್ನು ಮಾತ್ರ ಪ್ರತಿನಿಧಿಸಬಲ್ಲವಾಗಿದ್ದವು.
ಇತ್ತೀಚಿನ ವರ್ಷಗಳಲ್ಲಿ, ಅಂತರ ಜಾಲದ ಜನಪ್ರಿಯತೆ ಮತ್ತು ಉಪಯುಕ್ತತೆ ಹೆಚ್ಚಾದಂತೆ ಹಾಗೂ ಇತರ ಭಾಷೆಗಳಲ್ಲಿ ಕಂಪ್ಯೂಟರ್ ಗಳನ್ನು ಉಪಯೋಗಿಸುವ ಸೌಲಭ್ಯ ಬೆಳೆದಂತೆ ಅನೇಕ ಭಾಷೆಗಳು ಅಂತರ ಜಾಲದಲ್ಲಿ ಬೆಳೆಯುತ್ತಿವೆ.

4. ಪ್ರಸಕ್ತ ಮತ್ತು ಭವಿಷ್ಯದ ತೊಂದರೆಗಳು

ಅಂತರ ಜಾಲದಲ್ಲಿ ಹೀಗೆ ಅನೇಕ ಅನುಕೂಲಗಳಿದ್ದರೂ ನಕಾರಾತ್ಮಕವಾದ ಕೆಲವು ಗುಣಗಳು ಬೆಳಕಿಗೆ ಬಂದಿರುವುದೂ ಉಂಟು.

4. 1. ಮಕ್ಕಳ ಶೋಷಣೆ

ಮಕ್ಕಳ ಹಿತರಕ್ಷಣೆಗಾಗಿ ಇರುವ ಅನೇಕ ಸಂಸ್ಥೆಗಳ ಹೇಳಿಕೆಯಂತೆ, ಅಂತರ ಜಾಲ ಸಾರ್ವಜನಿಕರ ಉಪಯೋಗಕ್ಕೆ ಬಂದ ನಂತರ ಮಕ್ಕಳ ನಗ್ನಚಿತ್ರಗಳ ಹರಡಿಕೆ ಹತ್ತರಷ್ಟಾದರೂ ಹೆಚ್ಚಾಗಿದೆ. ಹಾಗೆಯೇ ಅಂತರ ಜಾಲ ಹರಟೆ ಮೊದಲಾದ ಸೌಲಭ್ಯಗಳು ಇರುವಲ್ಲಿ ಅನೇಕರು ಮಕ್ಕಳೊಂದಿಗೆ ಅಂತರ ಜಾಲದಲ್ಲಿ ಹರಟುತ್ತಾ ಅವರನ್ನು ನಂಬಿಸಿ ಭೇಟಿಗಾಗಿ ಏರ್ಪಾಟು ಮಾಡಿ ಆ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದವರೂ ಇದ್ದಾರೆ.

4. 2. ಕೃತಿಸ್ವಾಮ್ಯ

ಫೈಲ್ ಗಳ ಹಂಚಿಕೆಗಾಗಿ ಅನೇಕ ತಂತ್ರಾಂಶಗಳು ಸೃಷ್ಟಿಯಾಗಿವೆ. ಇವುಗಳನ್ನು ಉಪಯೋಗಿಸಿ ತಮ್ಮ ಬಳಿ ಕೃತಿಸ್ವಾಮ್ಯತೆಯ ಹಕ್ಕುಗಳಿಲ್ಲದಿದ್ದರೂ ತಮ್ಮಲ್ಲಿರುವ ಫೈಲ್ ಗಳನ್ನು ಇತರರಿಗೆ ಹಂಚುವ ಹಾವಳಿ ಉಂಟಾಗಿದೆ. ಇದು ಆ ಫೈಲ್ ಗಳ ಕೃತಿಸ್ವಾಮ್ಯಗಳ ಬಾಧ್ಯತೆಗಳನ್ನು ಮೀರುತ್ತದೆ. ಕಾನೂನಿನ ಪ್ರಕಾರ ಇದು ಅಪರಾಧವಾಗಿದ್ದರೂ ಇದನ್ನು ಪತ್ತೆಹಚ್ಚುವುದು ಕಷ್ಟವಾಗಿರುವುದರಿಂದ ಈ ಹಾವಳಿ ಮುಂದೆ ಸಾಗುತ್ತಿದೆ.

4. 3. ವೈರಸ್

ಅಂತರ ಜಾಲದಲ್ಲಿ ಸಹಸ್ರಾರು ಗಣಕಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಒಂದು ಕಂಪ್ಯೂಟರ್ ನಲ್ಲಿರುವ ವೈರಸ್ ಇತರ ಕಂಪ್ಯೂಟರ್ ಗಳಿಗೆ ಹರಡುವುದು ಅತಿ ಸುಲಭ. ಇದರಿಂದ ಕೆಲವೊಮ್ಮೆ ಅನೇಕ ಕಂಪ್ಯೂಟರ್ ಗಳಿಗೆ ಏಕಕಾಲದಲ್ಲಿ ತೊಂದರೆಯಾಗುವುದುಂಟು.

4. 4. ಮಾಹಿತಿ ಸುರಕ್ಷತೆ

ಅಂತರ ಜಾಲಕ್ಕೆ ಸಂಪರ್ಕಿತವಾಗಿರುವ ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಕದಿಯುವುದು ಸಹ ನಡೆಯುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಮೊದಲಾದ ಅತಿ ಮುಖ್ಯ ಮಾಹಿತಿಯನ್ನು ಇತರರು ಕದಿಯುವ ಅಪಾಯ ಉಂಟಾಗಿದೆ. ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಅನೇಕ ತಂತ್ರಾಂಶಗಳಿದ್ದಾಗ್ಯೂ ಅವುಗಳು ಅನುಸ್ಥಾಪಿತವಾಗಿಲ್ಲದ ಕಂಪ್ಯೂಟರ್ ಗಳಲ್ಲಿನ ಮಾಹಿತಿಯ ಚೌರ್ಯ ಸುಲಭವಾಗಿ ನಡೆಸಬಹುದು.

4. 5. ಸಾಂಸ್ಕೃತಿಕ ತೊಂದರೆಗಳು

ಅಂತರ ಜಾಲದಲ್ಲಿ ಮಾಹಿತಿಯ ಹರಡುವಿಕೆ ಸುಲಭವಾದ್ದರಿಂದ ಸಮಾಜಕ್ಕೆ ಹಾನಿಕಾರಕ ಎಂದು ಪರಿಗಣಿತವಾಗಬಹುದಾದ ಸಂಸ್ಕಾರಗಳು ಸಹ ಸುಲಭವಾಗಿ ಹರಡಬಲ್ಲವು. ವಾಕ್-ಸ್ವಾತಂತ್ರ್ಯದ ದೃಷ್ಟಿಯಿಂದ ಇದನ್ನು ಸಮರ್ಥಿಸಬಹುದಾದರೂ ಕೆಲವೊಮ್ಮೆ ಹಿಂಸಾಚಾರದ, ಇನ್ನೂ ಅಪಾಯಕಾರಿಯಾದ ಆತ್ಮಹತ್ಯಾ ಮನೋಭಾವದ ಜನರು ಸಹ ಒಬ್ಬರನ್ನೊಬ್ಬರು ಸಂಪರ್ಕಿಸಿ, ಪ್ರೋತ್ಸಾಹಿಸಿ ಈ ಮನೋಭಾವಗಳು ಇನ್ನೂ ವೇಗವಾಗಿ ಹರಡುವುದೂ ಸಾಧ್ಯ (ಉದಾಹರಣೆಯಾಗಿ ಅನೇಕ ಭಯೋತ್ಪಾದಕ ಅಂತರ ಜಾಲ ತಾಣಗಳು).



ಕನ್ನಡ ಶುಭಾಶಯಕ್ಕೊಂದು ಅಂತರ್ಜಾಲ ತಾಣ

ಅಂತರ್ಜಾಲದ ಶುಭಾಶಯಗಳು ಕೈಯಿಂದ ಬರೆದ ಸಾಂಪ್ರದಾಯಿಕ ಶುಭಾಶಯಗಳಂತಹ ಭಾವನೆಯನ್ನು ಕೊಡದೇ ಇರಬಹುದು ಆದರೆ ತಾಂತ್ರಿಕ ಮುನ್ನಡೆಯಿಂದ ಆಪ್ತವೆನ್ನಿಸುವ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಆನ್‌ಲೈನ್ ಗ್ರೀಟಿಂಗ್ಸ್ ಮೂಲಕ ಉಚಿತ ಶುಭಾಶಯ ಪತ್ರಗಳನ್ನು, ಕೆಲವೇ ಕ್ಷಣದಲ್ಲಿ ನಿಮ್ಮ ಆತ್ಮೀಯರಿಗೆ ತಲುಪಿಸಬಹುದು. ಇವು ಕಾಗದ ಉಪಯೋಗಿಸದಿರುವುದರಿಂದ (ವಿದ್ಯುನ್ಮಾನ ತಂತ್ರಜ್ಞಾನದಿಂದ ರವಾನಿಸಲಾಗುತ್ತದೆ) ಪರಿಸರ ಪ್ರೇಮಿಗಳಾಗಿವೆ.

ಕನ್ನಡ ಗ್ರೀಟಿಂಗ್ಸ್ ತಾಣ ಕಟ್ಟಿದ ಉವಾಚ :

ಕನ್ನಡದಲ್ಲಿ ಇದು ನನ್ನ ಮೊದಲನೆಯ ಪ್ರಯತ್ನವಾಗಿದೆ. ಕನ್ನಡಿಗನಾಗಿದ್ದು, ಕನ್ನಡಿಗರೊಂದಿಗೆ ಸದಾ ಒಡನಾಟವಿರುವುದರಿಂದ ನನ್ನ ಮಾತೃಭಾಷೆಗಾಗಿ ಏನಾದರೂ ಮಾಡಬೇಕೆಂಬ ಹಲವು ವರ್ಷಗಳ ಕನಸಿತ್ತು. ಕಳೆದ ವರ್ಷ ಹೊಸ ವರ್ಷಕ್ಕಾಗಿ ನನ್ನ ಸ್ನೇಹಿತರೆಲ್ಲರಿಗೂ ಕನ್ನಡದಲ್ಲಿ ಶುಭಾಶಯ ಕಳುಹಿಸಬೆಕೆಂದು ಅಂತರ್ಜಾಲ ಜಾಲಾಡಿದಾಗ ಕೈಗೆ ಸಿಕ್ಕಿದ್ದು ಆಂಗ್ಲ ಭಾಷೆಯ ಶುಭಾಶಯಗಳು ಹಾಗು ಕೆಲವೇ 'ಸಾಮಾನ್ಯ'ವೆನ್ನಬಹುದಾದ ಕನ್ನಡದ ಶುಭಾಶಯಗಳು. ಕೊನೆಗೆ ಒಂದು ಶುಭಾಶಯ ನಾನೇ ತಯಾರಿಸಿಬಿಟ್ಟೆ. ಅಂದಿನಿಂದ ನಾನೆ ಯಾಕೆ ಶುಭಾಶಯಗಳನ್ನು ಮಾಡಿ ಇತರ ಕನ್ನಡಿಗರಿಗರೊಂದಿಗೆ ಹಂಚಿಕೊಳ್ಳಬಾರದು ಎಂಬ ಅಲೋಚನೆ ಬರತೊಡಗಿತು.

ನಾಲ್ಕು ತಿಂಗಳ ನಂತರ ಕೆನಡಾಗೆ ಸ್ಥಳಾಂತರವಾದ ನಂತರ ನನಗೆ ಸಾಕಷ್ಟು ಸಮಯ ಸಿಗತೊಡಗಿತು. ಆನಂತರ ಮಾಡಿದ ಪ್ರಯೋಗಾತ್ಮಕ ಶುಭಾಶಯಗಳು ಹಲವು ಸ್ನೇಹಿತರಿಗೆ ಮೆಚ್ಚುಗೆಯಾದವು. ಸ್ವಲ್ಪ ದಿನಗಳಲ್ಲೇ ಈ ಶುಭಾಶಯ ತಾಣ ಹುಟ್ಟಿಕೊಂಡಿತು. ಸ್ನೇಹಿತ ಸೋಮು(ನವಿಲುಗರಿ) ಈ ಶುಭಾಶಯಗಳಿಗೆ ಹೃದಯ ತಟ್ಟುವ ಕವನ/ಚುಟುಕುಗಳನ್ನು ಬರೆದಿದ್ದಾನೆ. ಸೇರಿದಂತೆ ಸಾಕಷ್ಟು ಬ್ಲಾಗಿಗಳು, ಇನ್ನಿತರ ಸಹೃದಯ ಕನ್ನಡಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಈ ತಾಣವನ್ನು ಉತ್ತಮ ಪಡಿಸುವಲ್ಲಿ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾವು ಚಿರಋಣಿ.

ಉದ್ದೇಶ ಹಾಗೂ ಆಶಯ:

ಕನ್ನಡಿಗರಿಗೆ ಅಂತರ್ಜಾಲದಲ್ಲಿ ಕನ್ನಡದಲ್ಲಿ ಶುಭಾಶಯಗಳನ್ನು ಕಳಿಸುವ ಹಾಗೂ ಶುಭಾಶಯ ಕೋರುವ ಎಲ್ಲಾ ವಿಧಾನಗಳ ಸಮ್ಮಿಳನ. ಇದರ ಮುಖ್ಯ ಉದ್ದೇಶ ಕನ್ನಡದಲ್ಲೇ ಕುಶಲ ಶುಭಾಶಯಗಳನ್ನು ಮಾಡಿ ಕನ್ನಡಿಗರೊಂದಿಗೆ ಹಂಚಿಕೊಳ್ಳುವದು. ಉತ್ತಮ ಶುಭಾಶಯಗಳಿಗಾಗಿ ಕನ್ನಡಿಗರು ಆಂಗ್ಲ ಭಾಷೆಯ ತಾಣಗಳ ಮೊರೆ ಹೊಗುವುದನ್ನು ತಡೆಯುವದು ನಮ್ಮ ಒಂದು ಗುರಿಯಾಗಿದೆ. ಈ ಶುಭಾಶಯಗಳನ್ನು ಕೇವಲ ಬೆರೆಯವರಿಗೆ ಕಳಿಸುವದಲ್ಲದೇ ನೀವು ಇತರೆ ಆರ್ಕುಟ್‌ನಂತಹ ಸಾಮಾಜಿಕ ಸಂಪರ್ಕ ತಾಣಗಳಲ್ಲೂ ಉಪಯೋಗಿಸಬಹುದು. ಚರ್ಚಾ ವೇದಿಕೆಯೂ ಕನ್ನಡದ ಶುಭಾಶಯಗಳಿಗೆ ಸಂಬಂಧಿಸಿದ ಚರ್ಚೆಗೆ ಮೀಸಲಾಗಿದೆ.

ನಿಮ್ಮ ಪ್ರೀತಿ ವ್ಯಕ್ತಪಡಿಸುವುದಿರಲಿ, ಜನನ, ಹುಟ್ಟು ಹಬ್ಬ, ಮದುವೆ, ಹಬ್ಬಗಳಿಗಾಗಿ, ರಾಜ್ಯೋತ್ಸವ ಅಥವಾ ಇತರ ಯಾವುದೇ ಸಂದರ್ಭಕ್ಕೆ ನಮ್ಮ ತಾಣದ ಹಲವು ವಿಭಾಗಗಳಿಂದ ಶುಭಾಶಯಗಳನ್ನು ಆರಿಸಿಕೊಳ್ಳಿ. ಪ್ರತಿ ವಾರ ಹಲವಾರು ಹೊಸ ಶುಭಾಶಯಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಆಗಾಗ ನಮ್ಮ ತಾಣದಲ್ಲಿ ಸೇರ್ಪಡೆಯಾದ ಹೊಸ ಶುಭಾಶಯಗಳನ್ನು ನೊಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಶುಭಾಶಯಗಳನ್ನು ಆಯ್ದು ಕಳಿಸಿ.

ಈ ತಾಣದ ಕೆಲವು ವೈಶಿಷ್ಟ್ಯಗಳು

* ನಮ್ಮ ಹಲವಾರು ವಿಭಾಗಗಳಿಂದ ಸ್ಥಿರಚಿತ್ರ ಹಾಗೂ ಫ್ಲಾಶ್ ಶುಭಾಶಯಗಳನ್ನು ಆರಿಸಿಕೊಳ್ಳಿ.
* ನೀವು ಕನ್ನಡದಲ್ಲಿ ಸಂದೇಶ ಬರೆದು ಈ ಶುಭಾಶಯಗಳೊಂದಿಗೆ ಲಗತ್ತಿಸಬಹುದು.
* ಈ ಶುಭಾಶಯಗಳನ್ನು ನೀವು ಆರ್ಕುಟ್ ಸ್ಕ್ರ್ಯಾಪ್‌ಗಳಲ್ಲಿ ಉಪಯೋಗಿಸಬಹುದು.
* ಶುಭಾಶಯಕ್ಕನುಗುಣವಾಗಿ ಹಿನ್ನೆಲೆ ಚಿತ್ರವನ್ನು ಆಯ್ದುಕೊಳ್ಳಬಹುದು.
* ನೀವು ಕಳಿಸಿದ ಶುಭಾಶಯವನ್ನು ನಿಮ್ಮವರು ತೆಗೆದು ನೋಡಿದಾಗ ನಿಮಗೆ ಆ ಬಗ್ಗೆ ಇ-ಮೈಲ್ ಮುಖಾಂತರ ತಿಳಿಸಲಾಗುವದು.
* ಶುಭಾಶಯಗಳನ್ನು ಮುಂಚಿತವಾಗಿ ರಚಿಸಿ ಪೂರ್ವ ನಿರ್ಧಾರಿತ ದಿನದಂದು ಕಳುಹಿಸಬಹುದು.
* ಗೂಗಲ್-ಗ್ಯಾಜೆಟ್‌ನಿಂದ ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಸೇರಿಸಲ್ಪಟ್ಟ ಹೊಸ ಶುಭಾಶಯಗಳನ್ನು ನೋಡಬಹುದು.
* ಚರ್ಚಾ ವೇದಿಕೆಯಿಂದ ಲೇಖಕರೊಂದಿಗೆ ಹಾಗೂ ಈ ತಾಣದ ಇತರ ಭೇಟಿಕಾರರೊಂದಿಗೆ ವಿಚಾರ ವಿನಿಮಯ ಮಾಡಬಹುದು.
* ಶುಭಾಶಯಗಳನ್ನು ಮುಂಚಿತವಾಗಿ ರಚಿಸಿ ಪೂರ್ವ ನಿರ್ಧಾರಿತ ದಿನದಂದು ಕಳುಹಿಸಬಹುದು.
* ತಾಣದಲ್ಲಿ ಸರಿಯಾದ ಶುಭಾಶಯ ಸಿಕ್ಕದಿದ್ದಲ್ಲಿ ನಮಗೆ ತಿಳಿಸಿ, ನಿಮಗಾಗಿ ನಾವು ಹೊಸದೊಂದು ಶುಭಾಶಯ ತಯಾರಿಸುವೆವು.

ಕುವೆಂಪು.com

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ. ಕುವೆಂಪು.com ಅಂತರ್ಜಾಲ ತಾಣ.

"ಕನ್ನಡ ಕವಿ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿ


ಕನ್ನಡನಾಡು ನುಡಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಕನ್ನಡ ಭಾಷೆ ಹಾಗು ಸಂಸ್ಕೃತಿಯ ಬಗ್ಗೆ ಎಲ್ಲರಲ್ಲಿ ಅಭಿಮಾನ ಉಂಟಾಗಲಿ ಎಂಬ ಉದ್ದೇಶದಿಂದ ನಮ್ಮ ತಂಡ "ಕನ್ನಡ ಕವಿ ಬಳಗ" ಕನ್ನಡ ಸಾಹಿತ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸಲುವಾಗಿ "ಕನ್ನಡ ಕವಿ" (www.kannadakavi.com)ಎಂಬ ಅಂತರ್ಜಾಲ ತಾಣವೊಂದನ್ನು ನಿರ್ಮಿಸಿ ಈಗಾಗಲೇ ವರ್ಷ ಕಳೆದಿದೆ. ಈಗ ಹೊಸ ವಿನ್ಯಾಸದಲ್ಲಿ ಯುನಿಕೋಡ್ ಆವೃತ್ತಿಯಲ್ಲಿ ಓದುಗರ ಸಮಕ್ಷಮಕ್ಕೆ ಇಡಲಾಗುತ್ತಿದೆ. ಬಾನುಲಿ ಡಿಸೈನ್ ಸ್ಟುಡಿಯೋಸ್(ಈ ಮುಂಚೆ ಐಡಿ ಟಕ್ನಾಲಜಿ)ಸಂಸ್ಥೆಯ ಶ್ರೀ ಪ್ರಶಾಂತ್ ಕಲ್ಲೂರ್ ಹಾಗೂ ತಂಡದವರು ಈ ಹೊಸ ವಿನ್ಯಾಸದ ರುವಾರಿಗಳಾಗಿದ್ದಾರೆ.

ಭಾನುವಾರ, ಅಕ್ಟೋಬರ್ 10, 2010

ಪ್ರೊ.ಎಸ್.ಎಲ್.ಭೈರಪ್ಪನವರ ವೆಬ್ಸೈಟ್


ಖ್ಯಾತ ಸಾಹಿತಿ, ಚಿಂತಕ ಪ್ರೊ.ಎಸ್.ಎಲ್.ಭೈರಪ್ಪ ಅವರು ತಮ್ಮ ನೂತನ ವೆಬ್ಸೈಟ್ನ್ನು ಉದ್ಘಾಟಿಸಿ ಹೈಟೆಕ್ ಆಗಿದ್ದಾರೆ.
ಇಂಗ್ಲಿಷ್ನಲ್ಲಿರುವ ಈ ವೆಬ್ಸೈಟ್ (www.slbhyrappa.com) ಅನ್ನು ನಂತರ ಕನ್ನಡದಲ್ಲೂ ಹೊರತರಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮುಂದೆ ಪ್ರೊ.ಅವರ ಅಭಿಮಾನಿಗಳು ಅವರನ್ನು ಸಂಪರ್ಕಿಸಲಾಗುತ್ತಿಲ್ಲ ಎಂಬ ನೋವು ಕಾಡಿಸದು. ಏಕೆಂದರೆ ವೆಬ್ಸೈಟ್ನಲ್ಲಿ ನಿತ್ಯವೂ ಅವರ ಚಟುವಟಿಕೆ, ಇನ್ನಿತರ ವಿಷಯಗಳ ಕುರಿತು ನೋಡಬಹುದಾಗಿದೆ.
ವೆಬ್ ನಲ್ಲೇನಿದೆ?
ಭೈರಪ್ಪನವರ ಸ್ವ ವಿವರ, ರಚಿಸಿದ ಕೃತಿಗಳು, ಲಭಿಸಿದ ಪ್ರಶಸ್ತಿ, ಅವರ ಹವ್ಯಾಸ ಮತ್ತಿತರ ವಿಷಯಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲಾಗಿದೆ. ಇದಲ್ಲದೇ ಎಸ್ಎಲ್ಬಿ ಅವರು ಮೊದಲಿನಿಂದಲೂ ಇಲ್ಲಿಯವರೆಗೆ ರಚಿಸಿದ ಪ್ರತಿ ಪುಸ್ತಕ ಕುರಿತು ವಿವರ ಒದಗಿಸಲಾಗಿದೆ. ಇದರ ಜತೆಗೆ ದಿನಪತ್ರಿಕೆ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಇವರ ಬರಹಗಳು ಪ್ರಕಟವಾದುದ್ದನ್ನು ಇಲ್ಲಿ ನೋಡಬಹುದು.
ಅಪರೂಪದ ಚಿತ್ರಗಳು
ವೆಬ್ಸೈಟ್ನಲ್ಲಿ ಭೈರಪ್ಪ ಅವರ ಅಪರೂಪದ ಚಿತ್ರಗಳನ್ನು ವೀಕ್ಷಿಸಬಹುದು. ಅವರ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಪ್ರತಿಯೊಂದು ಇಲ್ಲಿ ಲಭ್ಯ.

ಶನಿವಾರ, ಅಕ್ಟೋಬರ್ 9, 2010

ಆಸ್ಪತ್ರೆ ಅವ್ಯವಸ್ಥೆ: ‘ಇ-ವ್ಯವಸ್ಥೆ’ಗೆ ದೂರು ನೀಡಿ


ನಿಮ್ಮೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲವೇ? ಆ ವೈದ್ಯರ ಸೇವೆ ತೃಪ್ತಿಕರವಾಗಿಲ್ಲವೆ? ಆಸ್ಪತ್ರೆಯಲ್ಲಿ ಯಾರಾದರೂ ಲಂಚ ಕೇಳಿದರೆ? ಶೌಚಾಲಯ ಸರಿಯಾಗಿಲ್ಲವೆ? ಕುಡಿಯುವ ನೀರು ದೊರೆಯುತ್ತಲ್ಲವೆ? ಈ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು?
‘ದೊರೆ’ಯ ಬಳಿ ದೂರು ಹೇಳುವುದು, ಅದಕ್ಕೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೆ? ಈ ಯಾವ ಪ್ರಶ್ನೆಗಳಿಗೂ ಜನಸಾಮಾನ್ಯರು ಇನ್ನು ಚಿಂತೆ ಮಾಡಬೇಕಿಲ್ಲ !
ಹೌದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ದೂರು, ಕುಂದುಕೊರತೆಗಳನ್ನು ನೇರವಾಗಿ ಇಲಾಖೆಗೆ ಮಂತ್ರಿಗಳ ಗಮನಕ್ಕೆ ತರಲು ‘ ಇ-ವ್ಯವಸ್ಥಾ’ ಯೋಜನೆ ಜಾರಿಗೆ ತಂದಿದೆ !.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ’ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ’ ಘೋಷವಾಕ್ಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಬರೀ ದೂರು ಹೇಳುವುದಕ್ಕಷ್ಟೇ ಈ ಪತ್ರ ಸೀಮಿತವಾಗಿಲ್ಲ. ನಿಮ್ಮೂರು ಆಸ್ಪತ್ರೆಯ ಅಭಿವೃದ್ಧಿಗೆ ನೀವು ಸಲಹೆಗಳನ್ನೂ ನೀಡಬಹುದು.
ಅಂದರೆ ಈ ಪತ್ರ ಬರೆಯುವುದು ಹೇಗೆ? ಆ ಪತ್ರ ಎಲ್ಲಿ ಸಿಗುತ್ತದೆ? ಅದಕ್ಕೆ ತಗುಲುವ ಅಂಚೆ ವೆಚ್ಚ ಭರಿಸುವವರು ಯಾರು? ಉತ್ತರ ನಿರೀಕ್ಷಿಸುವುದು ಹೇಗೆ? ಎಂಬ ಆಲೋಚನೆಯೇ?
ಅದಕ್ಕೆ ನೀವೇನು ಚಿಂತಿಸಬೇಕಾದ್ದಿಲ್ಲ… ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲೂ ಪ್ರಿಪೇಡ್ ಪತ್ರಗಳು ಉಚಿತವಾಗಿ ನಿಮಗೆ ಸಿಗುತ್ತವೆ. ಈ ಪತ್ರ ಭರ್ತಿ ಮಾಡಿ ನೀವು ಆಸ್ಪತ್ರೆ ಮುಖ್ಯಸ್ಥರ ಕೈಗೂ ಕೊಡಬೇಕಿಲ್ಲ. ಅಲ್ಲಿರುವ ದೂರು ಪೆಟ್ಟಿಗೆಯಲ್ಲಿ ಹಾಕಬೇಕಾಗಿಯೂ ಇಲ್ಲ. ನೇರವಾಗಿ ಅಂಚೆ ಪೆಟ್ಟಿಗೆಗೆ ಹಾಕಿದರೆ ನಿಮ್ಮ ಕೆಲಸ ಅಲ್ಲಿಗೆ ಮುಗಿಯಿತು.
ನಿಮ್ಮ ಪತ್ರ ವಿಧಾನಸೌಧದ ಆರೋಗ್ಯ ಸಚಿವರ ಕಚೇರಿ ತಲುಪುತ್ತದೆ. ಆ ಕಚೇರಿಯಿಂದ ನಿಮ್ಮ ದೂರು ನೋಂದಣಿಯಾಗಿರುವ ಕುರಿತು ನಿರ್ದಿಷ್ಟ ಕೋಡ್ ನಂಬರ್ ಹೊಂದಿರುವ ‘ಮೇಘಧೂತ’ ಅಂಚೆ ಕಾರ್ಡ್ ತಕ್ಷಣ ನಿಮಗೆ ಬರುತ್ತದೆ. ಆಗಿಂದ ನಿಮ್ಮ ವ್ಯವಹಾರವೇನಿದ್ದರೂ ಆ ಕೋಡ್ ನಂಬರ್ ಮೂಲಕವೇ ನಡೆಯಬೇಕು.
ಕೇವಲ ಕೋಡ್ ನಂಬರ್ ನೀಡಿ ಇಲಾಖೆ ಕೈತೊಳೆದುಕೊಳ್ಳುವುದಿಲ್ಲ. ನಿಮ್ಮ ದೂರು ಯಾವ ಜಿಲ್ಲೆಗೆ ಸಂಬಂಧಿಸಿರುತ್ತದೆ, ಆ ಜಿಲ್ಲೆಯ ಆರೋಗ್ಯ ಮತುತ ಕುಟುಂಬ ಕಲ್ಯಾಣಾಧಿಕಾರಿಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗುತ್ತದೆ.
ಆರೋಗ್ಯ ಇಲಾಖೆ ಇಂತಹ ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಮುದ್ರಿಸಿ ಈಗಾಗಲೇ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿದೆ. ವೈದ್ಯರು ಅಥವಾ ಮುಖ್ಯಸ್ಥರ ಬಳಿ ‘ವ್ಯವಹಾರಿಕ ಮರು ಉತ್ತರ ಪತ್ರ’ ಕೊಡಿ ಎಂದು ಕೇಳಿ ಪಡೆದು ಅದನ್ನು ಭರ್ತಿ ಮಾಡಿ ಕಳುಹಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆರೋಗ್ಯ ಇಲಾಖೆ ಈ ವಿನೂತನ ‘ಇ -ವ್ಯವಸ್ಥಾ’ ಯೋಜನೆ ಜಾರಿಗೊಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ದೊರೆಯುವ ಪ್ರತಿಕ್ರಿಯೆ ನೋಡಿಕೊಂಡು ಪತ್ರಗಳನ್ನು ವೆಬ್ಸೈಟ್ಗೆ ಹಾಕುವ ಪ್ರಯತ್ನವನ್ನೂ ಮಾಡಲು ಇಲಾಖೆ ಚಿಂತನೆ ನಡೆಸಿದೆ.