ಕಚೇರಿಯಿಂದ ಯಾವುದೋ ಕಾರಣಕ್ಕೆ ಹೊರಬಂದು ಮಳೆಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಚೇರಿಗೆ ಹೋಗಲಾಗುತ್ತಿಲ್ಲವೇ?ಕಚೇರಿಯ ಕಂಪ್ಯೂಟರನ್ನು ಬಂದು ಮಾಡಿಲ್ಲವೇ? ಕಚೇರಿಗೆ ಕರೆ ಮಾಡಿದರೆ,ನಿಮ್ಮ ಅಕ್ಕಪಕ್ಕ ಕುಳಿತುಕೊಳ್ಳುವವರೂ ಕಚೇರಿ ಬಿಟ್ಟಿದ್ದಾರೆಯೇ? ನಿಮ್ಮ ಕಂಪ್ಯೂಟರನ್ನು ಎಸೆಮ್ಮೆಸ್ ಅಥವ ಮಿಂಚಂಚೆ ಕಳುಹಿಸಿ ಬಂದು ಮಾಡಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇದು ಸಾಧ್ಯ. ಅದರೆ ಅದಕ್ಕೆ tweetmyPC ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡಿರಬೇಕಾಗುತ್ತದೆ.http://tweetmypc.codeplex.com/ ತಾಣದಲ್ಲದು ಲಭ್ಯವಿದೆ.ನೀವು ಜಿಮೇಲ್ ಮಿಂಚಂಚೆ ಮತ್ತು ಟ್ವಿಟರ್ ಖಾತೆಯನ್ನೂ ಹೊಂದಿರಬೇಕಾಗುತ್ತದೆ.ಟ್ವೀಟ್ಮೈಪಿಸಿ ತಂತ್ರಾಂಶವನ್ನು ಅನುಸ್ಥಾಪಿಸಿದ ಬಳಿಕ, ನಿಮ್ಮ ಟ್ವಿಟರ್ ಮತ್ತು ಜಿಮೇಲ್ ಖಾತೆಗಳ ವಿವರಗಳನ್ನೂ ಕೇಳುತ್ತದೆ.ನಿಮಗೆ ಕಂಪ್ಯೂಟರನ್ನು ಬಂದು ಮಾಡಬೇಕಿದ್ದರೆ twitter@posterous.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ. ನಿಮ್ಮ ಟ್ವಿಟರ್ ಖಾತೆಯ ಮೂಲಕ ಸಂದೇಶ ಕಂಪ್ಯೂಟರನ್ನು ತಲುಪಿ,ಕಂಪ್ಯೂಟರನ್ನು ಬಂದು ಮಾಡುತ್ತದೆ. ನಿಮ್ಮ ಟ್ವಿಟರ್ ಖಾತೆಗೆ ಶಟ್ಡೌನ್,ಲಾಗಾಫ್,ಲಾಕ್ ಮುಂತಾದ ಸಂದೇಶ ಕಳುಹಿಸಿದರೂ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದ ತಂತ್ರಾಂಶ,ಟ್ವಿಟರ್ ಸಂದೇಶದ ಮೇಲೆ ಅನವರತ ಕಣ್ಣಿರಿಸುವ ಮೂಲಕ ಸಂದೇಶ ಬಂದೊಡನೆ ಅದರನುಸಾರ ನೀವು ನೀಡಿದ ಸಂದೇಶದಂತೆ ಕೆಲಸ ಮಾಡುತ್ತದೆ.ಎಸೆಮೆಸ್ ಮೂಲಕವೂ ಟ್ವಿಟರ್ ಸಂದೇಶ ಕಳುಹಿಸುವ ಅನುಕೂಲ ಇರುವ ಕಾರಣ ಎಸೆಮೆಸ್ ಮೂಲಕವೂ ಕಂಪ್ಯೂಟರನ್ನು ನಿಯಂತ್ರಿಸಬಹುದು.ಅಂದ ಹಾಗೆ ಕಂಪ್ಯೂಟರಿನ ಸ್ಥಿತಿಯ ಬಗ್ಗೆ ನಿಮಗೆ ಮಿಚಂಚೆಯನ್ನೂ ಟ್ವೀಟ್ಮೈಪಿಸಿ ತಂತ್ರಾಂಶ ಕಳುಹಿಸುತ್ತದೆ.
ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
ಗುರುವಾರ, ಏಪ್ರಿಲ್ 15, 2010
ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!
ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!

ಅಂತರ್ಜಾಲಕ್ಕೆ ನಲುವತ್ತು
ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ
ಬಿಂಗ್ ಮತ್ತು ಪಿಂಗ್
ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!
ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ
ಇ-ರೀಡರಿನಲ್ಲಿ ಪತ್ರಿಕೆಗಳು
1969ರ ಸೆಪ್ಟೆಂಬರ್ ಎರಡರಂದು ಎರಡು ಕಂಪ್ಯೂಟರುಗಳ ನಡುವೆ ಸಂಪರ್ಕ ಸಾಧಿಸುವ ಮೂಲಕ ಮೊದಲ ಕಂಪ್ಯೂಟರ್ ಜಾಲ ಏರ್ಪಟ್ಟಿತು. ಆ ಘಟನೆಯೇ ಅಂತರ್ಜಾಲವೆಂಬ ಮಹಾಜಾಲದ ನಿರ್ಮಾಣಕ್ಕೆ ಹೇತುವಾಯಿತು ಎನ್ನುವುದನ್ನು ನಂಬುವುದು ಕಷ್ಟ.ಆರಂಭದಲ್ಲಿ ಅಂತರ್ಜಾಲ ಲಿಪಿಮಯವಾಗಿತ್ತು.ಬರುಬರುತ್ತಾ ಅದು ಚಿತ್ರಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೂರು ಆಯಾಮಗಳ ಅನುಭವ ಸಿಗಬೇಕು ಎನ್ನುವುದು ಸಂಶೋಧಕರ ಹಂಬಲ.ಅಲ್ಲದೆ ಜಗತ್ತಿನ ಪ್ರತಿ ಸಾಧನವನ್ನೂ ಬೇಕೆಂದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿ,ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಬೇಕೆನ್ನುವುದು ಅವರ ಆಸೆ.ಅದು ಸಾಧ್ಯವಾಗಲು ಅಂತರ್ಜಾಲವನ್ನು ಸದ್ಯದ ಐಪಿ4ರಿಂದ ಐಪಿ6 ಶಿಷ್ಟಾಚಾರಕ್ಕೇರಿಸುವ ಅಗತ್ಯ ಇದೆ.
ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.
---------------------------------------------------------------ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.
ಬಿಂಗ್ ಮತ್ತು ಪಿಂಗ್
ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಶೋಧ ಸೇವೆ. ಯಾವುದೇ ಪದವನ್ನು ನೀಡಿ ಶೋಧ ನಡೆಸಿದಾಗ ಸಿಗುವ ಫಲಿತಾಂಶವನ್ನು ಟ್ವಿಟರ್ ಅಥವಾ ಫೇಸ್ಬುಕ್ ಅಂತಹ ತಮ್ಮ ಖಾತೆಗಳಲ್ಲಿ ನೀಡಿ,ತಮ್ಮ ಗೆಳೆಯರಿಗೆ ತಮ್ಮ ಶೋಧದ ಫಲಿತಾಂಶವನ್ನು ಸುಲಭವಾಗಿ ಒದಗಿಸುವುದಲ್ಲದೆ,ತಮ್ಮ ಇಷ್ಟಾನಿಷ್ಟಗಳ ಬಗೆಗೆ ಅವರಿಗೆ ತಿಳಿಸುವುದನ್ನು ಸಾಧ್ಯವಾಗಿಸುವುದು "ಬಿಂಗ್ ಮತ್ತು ಪಿಂಗ್" ಸೇವೆಯ ವೈಖರಿ. ಈಗಿನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಸೇವೆಯು ತಡವಿಲ್ಲದೆ ಜನರಿಗೆ ಸಿಗಲಿದೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.
-------------------------------------------------------------ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!
ಅಟೋಗಳಿಗೆ ಕೈಯಡ್ಡ ಹಿಡಿದು, ತಮಗೆ ಹೋಗ ಬೇಕಾಗಿರುವೆಡೆ ಬರಲಾತ ನಿರಾಕರಿಸುವ ಅನುಭವ ನಗರಗಳಲ್ಲಿ ಎಲ್ಲರಿಗೂ ಆಗಿಯೇ ಇರುತ್ತದೆ. ಇದನ್ನು ತಡೆಯಲು ಸಾಧ್ಯವಾಗುವ ತಂತ್ರಜ್ಞಾನ ಜರ್ಮನಿಯಲ್ಲಿ ಪ್ರಯೋಗವಾಗುತ್ತಿದೆ. ಅಲ್ಲಿ ಅದು ಟ್ಯಾಕ್ಸಿಗಳಲ್ಲಿ ಪ್ರಯೋಗವಾಗುತ್ತಿದೆ.ಖಾಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಚಾಲಕ,ತಾನು ಹೋಗುತ್ತಿರುವ ಸ್ಥಳವನ್ನು ಕಂಪ್ಯೂಟರ್ ಕೇಂದ್ರಕ್ಕೆ ಎಸೆಮ್ಮೆಸ್ ಮಾಡಿ ತಿಳಿಸುತ್ತಾನೆ. ಗ್ರಾಹಕರೂ ತಾವು ಹೋಗಬೇಕಿರುವ ಸ್ಥಳವನ್ನು ಇಲ್ಲಿ ದಾಖಲಿಸುತ್ತಾರೆ.ಇದಕ್ಕೆ ಮೊಬೈಲ್ ಬಳಕೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ. ಅಂತಹ ಗ್ರಾಹಕರ ಮೊಬೈಲ್ ಕರೆಯ ಮೂಲಕ ಅವರ ಸ್ಥಾನ ತಿಳಿದು,ಅಂತಹ ಸ್ಥಳಕ್ಕೆ ಸಮೀಪವಿರುವ ಟ್ಯಾಕ್ಸಿ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಚಾಲಕ ಬಯಸಿದಲ್ಲಿ ಗ್ರಾಹಕನನ್ನು ಹತ್ತಿಸಿಕೊಳ್ಳಬಹುದು. ಬೇಡದಿದ್ದರೆ,ನಿಲ್ಲಿಸುವ ಅಗತ್ಯವೇ ಇಲ್ಲ.ಈ ಸೇವೆಗೆ ಓಪನ್ ರೈಡ್ ಎಂದು ಹೆಸರಿಸಲಾಗಿದೆ.
---------------------------------------------------ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ
ಇದುವರೆಗೆ ತನ್ನದೇ ಆದ ಪ್ರತ್ಯೇಕ ಅಕ್ಷರ ವಿನ್ಯಾಸ ಹೊಂದಿ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದ "ಪ್ರಜಾವಾಣಿ" ಪತ್ರಿಕೆಯಿದೀಗ ತನ್ನ ತಾಣವನ್ನು ಯುನಿಕೋಡಿನಲ್ಲಿ ನೀಡಲಾರಂಭಿಸಿದೆ. ಇದರಿಂದ ಯುನಿಕೋಡ್ ಬೆಂಬಲವಿರುವ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಿದ್ದಲ್ಲಿ ತಾಣವು ಸಮಸ್ಯೆಯಿಲ್ಲದೆ ಸ್ಪಷ್ಟವಾಗಿ ಕನ್ನಡ ಅಕ್ಷರಗಳು ಗೋಚರಿಸುತ್ತವೆ. "ಉದಯವಾಣಿ"ಯ ಸಹಿತ ಹೆಚ್ಚಿನ ಪತ್ರಿಕೆಗಳು ತಮ್ಮ ಇ-ಪೇಪರನ್ನು ಒದಗಿಸಿ, ಈ ಫಾಂಟ್ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿವೆ. ಆದರೆ ಹಾಗೆ ಮಾಡಿದರೆ,ಪತ್ರಿಕೆಯ ಬರಹಗಳನ್ನು ಶೋಧಿಸಲು ಸಾಧ್ಯವಾಗದು. ಆದರೆ ಯುನಿಕೋಡಿನಲ್ಲಿ ಲಭ್ಯವಿರುವ ಬರಹ,ಸುದ್ದಿಗಳನ್ನು ಗೂಗಲ್ ಅಂತಹ ಸೇವೆಗಳನ್ನು ಬಳಸಿ ಶೋಧಿಸುವುದು ಸಾಧ್ಯವೆನ್ನುವುದು ಧನಾತ್ಮಕ ಅಂಶ. ಪ್ರಜಾವಾಣಿಯ ಪುಟ ನೋಡಲು www.prajaavaani.net ವಿಳಾಸ ಬಳಸಿ.
---------------------------------------------------------ಇ-ರೀಡರಿನಲ್ಲಿ ಪತ್ರಿಕೆಗಳು
ಹಾರ್ಸ್ಟ್ ಎನ್ನುವುದು ಪತ್ರಿಕೆಗಳ ಸಮೂಹ ಸಂಸ್ಥೆ.ಈ ಸಂಸ್ಥೆಯು ಹದಿನಾರು ದೈನಿಕಗಳನ್ನು ಮತ್ತು ನಲುವತ್ತೊಂಭತ್ತು ವಾರಪತ್ರಿಕೆಗಳನ್ನು ನಡೆಸುತ್ತಿದೆ. ಈಗ ಅದು ತನ್ನ ಪತ್ರಿಕೆಗಳನ್ನು ಓದಲು ಇ-ರೀಡರನ್ನು ಹೊರತರಲು ಯೋಚಿಸಿದೆ. ಇ-ರೀಡರ್ ಪತ್ರಿಕೆಗಳನ್ನು ಓದುವ ಸಾಧನ. ಈ ಸಾಧನವು ಪತ್ರಿಕೆಯ ಆಕಾರವನ್ನು ಹೋಲುತ್ತದೆ. ಮಡಚಲು ಸಾಧ್ಯವಾಗುವಂತೆ ಅದನ್ನು ಪ್ಲಾಸ್ಟಿಕ್ ತರದ ಉತ್ಪನ್ನದಿಂದ ತಯಾರಿಸಲಾಗಿದೆ.ಸದ್ಯ ಕಪ್ಪು-ಬಿಳುಪಿನಲ್ಲಿ ಲಭ್ಯವಿದ್ದರೂ ಮುಂದೆ ವರ್ಣದಲ್ಲೂ ಲಭ್ಯವಾಗಲಿದೆ.ಅಂತರ್ಜಾಲದಿಂದ ಪತ್ರಿಕೆಗಳನ್ನು ಇದಕ್ಕೆ ಡೌನ್ಲೋಡ್ ಮಾಡಿಕೊಂಡು ಓದಬಹುದು.ಮುದ್ರಿತ ಪ್ರತಿಗಳನ್ನು ಮೂಲೆಗುಂಪಾಗಿಸುವ ಇ-ರೀಡರ್ಗಳ ಬಳಕೆ ಪತ್ರಿಕೆಗಳ ಹೊಸ ತಂತ್ರವಾಗುವ ಲಕ್ಷಣಗಳಿವೆ.
ಟ್ವಿಟರಿನಲ್ಲಿ ಮಹಾಭಾರತ
ಸರಕಾರಿ ಕನ್ನಡ "ವಿಕಿಪೀಡಿಯಾ"
ಅಂತರ್ಜಾಲದ ಕಡತ ಖಜಾನೆ
ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ
ಬಿಂಗ್ v/s ಗೂಗಲ್
ಪ್ರೇಮ್ ಪಣಿಕ್ಕರ್ ಅವರ "ಭೀಮಸೇನ್",ಭೀಮಸೇನನ ದೃಷ್ಟಿಕೋನದಿಂದ ಕಂಡ ಮಹಾಭಾರತದ ಒಂದು ಬ್ಲಾಗ್. ಈ ಬ್ಲಾಗನ್ನೇ ಆಧಾರವಾಗಿಟ್ಟುಕೊಂಡು,ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟರಿನಲ್ಲಿ http://twitter.com/epicretold ವಿಳಾಸದಲ್ಲಿ ಮಹಾಭಾರತದ ಕತೆ ಮೂಡಿಬರುತ್ತಿದೆ.ಹಸ್ತಿನಾಪುರಕ್ಕೆ ಪಾಂಡವರು ಮೊದಲಬಾರಿಗೆ ಬಂದಾಗ,ಗಾಂಧಾರಿಯನ್ನು ನೋಡಿದ ಭೀಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಟ್ವಿಟರ್ ಕತೆ ಪ್ರಾರಂಭವಾಗುತ್ತದೆ.ಈ ಬರಹಗಳನ್ನು ನಿಯತವಾಗಿ ಪ್ರಕಟಿಸುತ್ತಿರುವುದು ಚಿಂದು ಶ್ರೀಧರನ್ ಎಂಬ ಪತ್ರಿಕೋದ್ಯಮಿ.ಸದ್ಯ ಇವರು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ಅಂದಹಾಗೆ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೇಲೆ ಗುರುವಾರ ಸೇವೆಯನ್ನು ನಿರಾಕರಿಸುವ ದಾಳಿ ನಡೆಯಿತು. ಇದರಿಂದ ಅದರ ಸೇವೆಯು ಎರಡು ಗಂಟೆ ಕಾಲ ಬಾಧಿತವಾಯಿತು. ಜತೆಗೇ ಫೇಸ್ಬುಕ್ನಂತಹ ಸಾಮಾಜಿಕ ನೆಟ್ವರ್ಕಿಂಗ್ ತಾಣಗಳೂ ಬಾಧಿತವಾದುವು. ಈ ದಾಳಿಯನ್ನು ಆಯೋಜಿಸಿದವರು ಯಾರೆನ್ನುವುದು ಸ್ಪಷ್ಟವಾಗಿಲ್ಲ. ಪ್ರಸಿದ್ಧ ತಾಣಗಳಿಗೆ ಹುಸಿ ಬಳಕೆದಾರ ಕೇಳಿಕೆಗಳ ಪ್ರವಾಹ ಹರಿಸಿ,ನೈಜ ಬಳಕೆದಾರರಿಗೆ ಸೇವೆ ನಿರಾಕರಿಸುವ ದಾಳಿಗಳು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.ಜೂನ್ ಒಂದೇ ತಿಂಗಳಲ್ಲಿ ಟ್ವಿಟರ್ ಸೇರಿದ ಹೊಸ ಬಳಕೆದಾರರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇಷ್ಟು ಜನಪ್ರಿಯ ತಾಣವಾದ ಟ್ವಿಟರ್ ಕೈಕೊಟ್ಟಾಗ, ಅಂತರ್ಜಾಲ ಬಳಕೆದಾರರು ಕಂಗಾಲಾಗಿಬಿಟ್ಟರು. ನಂತರ ಸೇವೆ ಆರಂಭವಾದಾಗ, ಟ್ವಿಟರ್ ಇಲ್ಲದಾಗ ಏನು ಮಾಡಿದೆ ಎನ್ನುವ ಕುರಿತೇ ಬಳಕೆದಾರರು ಹೆಚ್ಚು ಸಂದೇಶ ಬರೆದರು.ಇತರ ತಾಣಗಳು ಕೈಕೊಟ್ಟಾಗ,ಅದರ ಕುರಿತು ಟ್ವಿಟರಿನಲ್ಲಿ ದೂರುವ ಜನರು, ಟ್ವಿಟರ್ ಸ್ವತ: ಕೈಕೊಟ್ಟಾಗ ಬರೆಯುವುದೆಲ್ಲಿ ಎಂದು ಅಣಕವಾಡಿದ್ದೂ ಇದೆ.
-----------------------------------------------------------------------ಸರಕಾರಿ ಕನ್ನಡ "ವಿಕಿಪೀಡಿಯಾ"
ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಎರಡುಕೋಟಿ ರುಪಾಯಿಗಳನ್ನು ತೆಗೆದಿರಿಸುವ ನಿರ್ಧಾರ ಮಾಡಿತ್ತು.ಕನ್ನಡ ಜ್ಞಾನ ಆಯೋಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಐಐಐಟಿ-ಬೆಂಗಳೂರು ಅವರುಗಳು ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ.ರಾಜ್ಯೋತ್ಸವದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಈ ತಾಣಕ್ಕೆ ಕನ್ನಡ ಜ್ಞಾನಭಂಡಾರ,ಕನ್ನಡ ಮಾಹಿತಿ ಭಂಡಾರ,ಕನ್ನಡ ಖಜಾನೆ,ಕನ್ನಡ ಸೇತುವೆ ಮುಂತಾದ ಹೆಸರುಗಳು ಪರಿಶೀಲನೆಯಲ್ಲಿವೆ.ಜನರ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶ ವಿಕಿಪೀಡಿಯಾವು ಈಗಾಗಲೇ http://kn.wikipedia.org/ನಲ್ಲಿ ಲಭ್ಯವಿದ್ದು ಇದರಲ್ಲಿ ಸುಮಾರು ಏಳುಸಾವಿರ ಬರಹಗಳೀಗಾಗಲೆ ಸಂಗ್ರಹವಾಗಿದೆ.ಸರಕಾರಿ ವಿಶ್ವಕೋಶ ಇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ,ಇರುವ ವಿಶ್ವಕೋಶವನ್ನು ಬಲಪಡಿಸುವುದನ್ನು ಬಿಟ್ಟು ಹೊಸತನ್ನು ಸರಕಾರಿ ಖರ್ಚಿನಲ್ಲಿ ಮಾಡುವ ಅಗತ್ಯ ಏನಿದೆ ಎಂಬ ವಿಚಾರಗಳ ಬಗ್ಗೆ ಅಂತರ್ಜಾಲದಲ್ಲೀಗ ಚರ್ಚೆ ನಡೆದಿದೆ.ಕನ್ನಡದ ಹೆಸರಿನಲ್ಲಿ ಸರಕಾರದ ನಿಧಿಯನ್ನು ಮುಕ್ಕಲು ವಿಶ್ವಕೋಶ ಒಂದು ನೆಪವಾಗದಿರಲಿ ಎನ್ನುವುದು ಕನ್ನಡಿಗರ ಹಾರೈಕೆ.
----------------------------------------------------------ಅಂತರ್ಜಾಲದ ಕಡತ ಖಜಾನೆ
ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ.ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ www.scribd.com. ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ.ಪುಸ್ತಕಗಳ ಇ-ಪ್ರತಿಗಳು,ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಇಲ್ಲಿ ಸಿಗುತ್ತವೆ.ಹೆಚ್ಚು ಜನರು ಡೌನ್ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ,ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಸುಲಭ.ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ.
--------------------------------------------ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ
ಆರುನೂರು ಮೆಗಾಬಿಟ್ ವೇಗದ ನಿಸ್ತಂತು ಜಾಲವನ್ನು ನಿಜವಾಗಿಸುವ ಮಾನಕ 802.11n ಮಾನಕ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ವರ್ಷಗಳ ಕಾಲ ಅದರ ಕರಡು ಪ್ರತಿ ಲಭ್ಯವಿದ್ದು, ಯಂತ್ರಾಂಶ ತಯಾರಕರು ಅದರ ಪ್ರಕಾರ ಯಂತ್ರಾಂಶಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.ಕ್ವಾಲಕೋಮ್ ಎನ್ನುವ ಕಂಪೆನಿ ವಯರ್ಲೆಸ್ ಎನ್ ಮಾನಕದ ಪ್ರಕಾರ ಚಿಪ್ ಅನ್ನು ಸಿದ್ಧ ಪಡಿಸಿದ್ದು, ಒಂದೇ ಸಲಕ್ಕೆ ಧ್ವನಿ,ವಿಡಿಯೋ ಮತ್ತು ದತ್ತಾಂಶಗಳ ಪ್ರವಾಹವನ್ನು ಸಂಭಾಳಿಸಲು ಸಾಧ್ಯವಾಗುವಷ್ಟು ವೇಗ ನಿಸ್ತಂತು ಜಾಲಕ್ಕೆ ಲಭ್ಯವಾಗುತ್ತದೆ. ಹಲವು ಚಾನೆಲ್ಗಳಲ್ಲಿ ಸೇವೆ ಒದಗಿಸಲು ಅವಕಾಶ ಸಿಗುವುದು ಮಾನಕದ ವೈಶಿಷ್ಟ್ಯ.ಸದ್ಯ ಚಾಲ್ತಿಯಲ್ಲಿರುವ 802.11g ಪ್ರಕಾರ ಸುಮಾರು ಐವತ್ತು ಮೆಗಾಬಿಟ್ ವೇಗದ ನಿಸ್ತಂತು ಜಾಲ ಸೇವೆ ಮಾತ್ರಾ ಸಿಗುತ್ತದೆ. ಅದರ ಹತ್ತು ಪಟ್ಟು ವೇಗವನ್ನು ಸಾಧ್ಯವಾಗಿಸುವ ವಯರ್ಲೆಸ್ ಎನ್ ಮಾನಕ,ಅತ್ಯಂತ ಸ್ಪಷ್ಟ ವಿಡಿಯೋ ಪ್ರದರ್ಶಿಸುವ ಹೈಡೆಫಿನಿಶನ್ ಟಿವಿಯಂತಹ ಸೇವೆಯನ್ನು ಒದಗಿಸಲು ಬಳಕೆಯಾಗಬಹುದು.
---------------------------------------ಬಿಂಗ್ v/s ಗೂಗಲ್
ಮೈಕ್ರೋಸಾಫ್ಟ್ ಕಂಪೆನಿಯ ಬಿಂಗ್ ಮತ್ತು ಗೂಗಲ್ ಕಂಪೆನಿಯ ಶೋಧ ಸೇವೆಯನ್ನು ಹೋಲಿಸಬೇಕೇ? ಇದನ್ನು ಮಾಡಲು ಬಹಳ ಸುಲಭವಾಗಿಸಲು http://bingandgoogle.com ತಾಣವನ್ನು ಬಳಸಬಹುದು. ಒಂದೇ ಪದವನ್ನು ಎರಡು ತಾಣದಲ್ಲೂ ನೀಡಿ,ಎರಡರ ಫಲಿತಾಂಶಗಳನ್ನು ಜತೆಗೆ ಪ್ರದರ್ಶಿಸುವ ಸೌಕರ್ಯವನ್ನೀ ತಾಣ ನೀಡಿದೆ."ಉಡುಪಿ" ಪದವನ್ನು ಹುಡುಕಲು ನೋಡಿ,ಗೂಗಲ್ ಮೇಲುಗೈ ನಿಚ್ಚಳವಾಗುತ್ತದೆ. ಯಾಕೆಂದು ತಟ್ ಅಂತ ಹೇಳಿ!
ಆನ್ಲೈನ್ ಬ್ಯಾಂಕಿಂಗ್:ದರ ವೈಚಿತ್ರ್ಯ
ನಿಮ್ಮ ಬ್ಯಾಂಕ್ ಖಾತೆಯಿಂದ ಆನ್ಲೈನ್ನಲ್ಲಿ ಹಣವನ್ನು ಇನ್ನೊಂದು ಖಾತೆಗೆ ವರ್ಗಾಯಿಸಲು National Electronic Funds Transfer(NEFT) ಮತ್ತು Real Time Gross Settlement(RTGS) ಎನ್ನುವ ಎರಡು ವ್ಯವಸ್ಥೆಗಳು ಲಭ್ಯವಿವೆ.ಇದರಲ್ಲಿ ಎರಡನೆಯದ್ದು ತಕ್ಷಣ ಹಣವರ್ಗಾವಣೆ ಮಾಡುವ ವ್ಯವಸ್ಥೆ.ಕ್ಕೆ ಹೋಲಿಸಿದರೆ ಎನ್ಇಎಫ್ಟಿ ನಿಧಾನ ಸೇವೆ. ಆದರೂ ಒಂದು ದಿನದಲ್ಲಿ ಹಣ ವರ್ಗಾವಣೆ ಸಾಧ್ಯ. ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆಗೆ ಕನಿಷ್ಠ ಆರು ರುಪಾಯಿ ಸೇವಾದರವಾದರೆ,ಆರ್ಟಿಜಿಎಸ್ ರೀತಿಯ ವರ್ಗಾವಣೆಗೆ ಕನಿಷ್ಠ ದರ ಇಪ್ಪತ್ತೈದು ರುಪಾಯಿ.ಬ್ಯಾಂಕುಗಳವರು ಒಂದು ಬ್ಯಾಂಕ್ನ ಖಾತೆಯಿಂದ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆ ಮಾಡಲು ಎನ್ಇಎಫ್ಟಿಯನ್ನು,ತಮ್ಮದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹಣ ವರ್ಗಾಯಿಸಲು ಆರ್ಟಿಜಿಎಸ್ನ್ನು ಶಿಫಾರಸು ಮಾಡುವ ಕಾರಣ, ಎರಡನೆಯ ರೀತಿಯ ವರ್ಗಾವಣೆ ದುಬಾರಿ ಆಗಿ ಪರಿಣಮಿಸುತ್ತದೆ. ಒಂದೇ ಬ್ಯಾಂಕಿನ ಬೇರೆ ಬೇರೆ ಸ್ಥಳದಲ್ಲಿರುವ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡುವುದಕ್ಕಿಂತ ಬೇರೆ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸುವುದೇ ಹೆಚ್ಚು ಉಳಿತಾಯಕ್ಕೆ ಕಾರಣವಾಗುತ್ತದೆ.
ವೈದ್ಯ ಸಲಹೆಗೆ ಆನ್ಲೈನ್ ಸಹಾಯ
ವೈದ್ಯ ಸಲಹೆಗೆ ಆನ್ಲೈನ್ ಸಹಾಯ

ಹೋಮಿಯೋಪತಿ ಪದ್ಧತಿಯಲ್ಲಿ ವೈದ್ಯ ಸಲಹೆಗೆ ಬಹಳ ಸಮಯ ಹಿಡಿಸುತ್ತದೆ.ರೋಗಿಯ ವ್ಯಕ್ತಿತ್ವವನ್ನು ಅರಿತು,ಆತನಿಗೆ ಸರಿಹೊಂದುವ ಚಿಕಿತ್ಸೆಯನ್ನು ನೀಡಬೇಕಾಗುವುದರಿಂದ,ಮೊದಲ ಭೇಟಿಯಲ್ಲಿ ವೈದ್ಯರು ಬಹಳಷ್ಟು ಪ್ರಶ್ನೆಗಳನ್ನು ರೋಗಿಗೆ ಕೇಳುತ್ತಾರೆ.ಆದರೆ ವೈದ್ಯ ಭೇಟಿಗೆ ಹಲವರು ಕಾದಿರುವಾಗ,ವಿಸ್ತೃತ ಮಾತುಕತೆ ನಡೆಸಲೂ ಕಷ್ಟವಾಗುತ್ತದೆ.ಇದನ್ನು ತಪ್ಪಿಸಲು ಆನ್ಲೈನ್ ಸಹಾಯ ಪಡೆಯುವುದು ಈಗಿನ ಶೈಲಿ.ವೈದ್ಯರು ತಮ್ಮ ಅಂತರ್ಜಾಲತಾಣದಲ್ಲಿ ವೈದ್ಯ ಸಲಹೆ ಪುಟವನ್ನು ಒದಗಿಸಿ,ರೋಗಿಯು ತನ್ನ ವಿವರವನ್ನು ಲಿಖಿತವಾಗಿ ನೀಡಲು ಅನುಕೂಲ ಕಲ್ಪಿಸುವುದಿದೆ.ವೈದ್ಯರ ಭೇಟಿಗೆ ವೇಳೆ ಗೊತ್ತು ಪಡಿಸಿ ಭೇಟಿ ನೀಡಿದಾಗ,ರೋಗಿಯ ಲಿಖಿತ ವಿವರಗಳನ್ನು ನೋಡಿ,ಸಲಹೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ.ಮಂಗಳೂರಿನ ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನಕುಮಾರ್ http://doctorprasanna.com/ಅವರ ಅಂತರ್ಜಾಲತಾಣದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ.ಇಲ್ಲಿ ವ್ಯಕ್ತಿಯ ನಿದ್ದೆ,ಹಸಿವು,ಶೌಚ ಅಭ್ಯಾಸ,ಬೆವರುವಿಕೆ ಇಂತವುಗಳ ಬಗ್ಗೆ ತಿಳಿದುಕೊಳ್ಳಲು ವಿವರವಾದ ಪ್ರಶ್ನೆಗಳನ್ನು ನೀಡಲಾಗಿದೆ.ಆನ್ಲೈನಿನಲ್ಲಿ ಉತ್ತರಿಸುವಾಗ,ವ್ಯಕ್ತಿಯು ತನ್ನ ಅರಿವಿಗೆ ಬಾರದ ವಿಷಯಗಳನ್ನು ಗಮನಿಸಿಕೊಂಡು ಉತ್ತರಿಸಲು ಸಾಧ್ಯವಾಗುತ್ತದೆ.ಅದೇ ರೀತಿ ವೈದ್ಯರಿಗೂ,ಅದನ್ನು ಸರಿಯಾಗಿ ತಿಳಿದು,ನಿರ್ಧಾರಕ್ಕೆ ಬರಲು ಸಮಯ ಸಿಗುತ್ತದೆ.ವಿವಿಧ ವಿಷಯಗಳ ಬಗ್ಗೆ ತಮ್ಮ ಬರಹಗಳನ್ನು ಒದಗಿಸಿ,ಜನರಲ್ಲಿ ಅರಿವು ಮೂಡಿಸಲೂ ಸಾಧ್ಯವಾಗುತ್ತದೆ.
ಲಿನಕ್ಸಾಯಣ
ಲಿನಕ್ಸಾಯಣ

ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಂಶವು ಮುಕ್ತ ಮತ್ತು ಉಚಿತವಾಗಿ ಸಿಗುತ್ತದೆ.ಉಬುಂಟು,ಫೆಡೋರಾ,ಸೂಸಿ,ಮ್ಯಾಂಡ್ರಿವಾ,ಮಿಂಟ್ ಹೀಗೆ ಹಲವು ಲಿನಕ್ಸ್ ತಂತ್ರಾಂಶದ ಹಲವು ಪ್ರಭೇದಗಳು ಲಭ್ಯವಿವೆ.ಆದರೆ ಇವನ್ನು ಬಳಸಲು ಕಂಪ್ಯೂಟರ್ಗೆ ಹೊಸಬರಾದವರಿಗೆ ತುಸು ಹಿಂಜರಿಕೆ ಇರುವುದು ಸ್ವಾಭಾವಿಕ.ಅಂತವರಿಗೆ ಸಹಾಯ ಮಾಡಲು,ಅವರ ಅನುಮಾನಗಳನ್ನು ನೀಗಿಸಲು ಇರುವ ತಾಣವೇ ಲಿನಕ್ಸಾಯಣ.ನೆಟ್(http://linuxaayana.net ಇಲ್ಲಿ ಲಿನಕ್ಸಿನಲ್ಲಿ ಕನ್ನಡ ಬಳಕೆ ಹೇಗೆ,ಅಂತರ್ಜಾಲ ಜಾಲಾಟ,ನಿಸ್ತಂತು ಜಾಲದ ಬಳಕೆಗೆ ಕಂಪ್ಯೂಟರನ್ನು ಸಿದ್ಧಗೊಳಿಸುವುದು ಹೇಗೆ ಮುಂತಾದ ವಿಷಯಗಳ ಬಗೆಗೆ ಬರಹಗಳಿವೆ.ಬರಹಗಳನ್ನು ಸೇರಿಸಲು ಮತ್ತು ತಿದ್ದಲೂ ಅವಕಾಶವಿದೆ.ಓಂಶಿವಪ್ರಕಾಶ್ ಬರೆದಿರುವ ಲಿನಕ್ಸಾಯಣ ಸರಣಿ ಬರಹಗಳು ಇಲ್ಲಿ ಲಭ್ಯವಿರುತ್ತವೆ.ಟ್ವಿಟರಿನಲ್ಲಿಯೂ ಲಿನಕ್ಸಾಯಣದ ಬಗೆಗೆ ಸಂದೇಶಗಳು ಬೇಕಿದ್ದರೆ,twitter.com/linuxaayana ಪುಟವನ್ನು ನೋಡಿ.
ಭಾಷೆ ಕಲಿಯಿರಿ,ಕಲಿಸಿರಿ!!
ಭಾಷೆ ಕಲಿಯಿರಿ,ಕಲಿಸಿರಿ!!

ಭಾಷೆ ಕಲಿಕೆಗೆ ಅಂತರ್ಜಾಲದ ಸಮುದಾಯದ ನೆರವು ಸಿಗುತ್ತದೆ.ಯಾವುದೇ ಭಾಷೆಯನ್ನು ಕಲಿಯಲು ಅದರ ಅಪರಿಮಿತ ಬಳಕೆಯೇ ಸುಲಭದ ಹಾದಿ ಎನ್ನುವುದನ್ನು ಒಪ್ಪುತ್ತೀರಾ? ಎಷ್ಟೋ ವೇಳೆ ನಮಗೆ ಭಾಷೆ ಕಲಿಯಲು ಕಲಿಸುವವರಿಲ್ಲದಿರುವುದೂ ಕಾರಣವಾಗಿರುತ್ತದೆ. ಮಾತಾನಾಡುವಾಗ, ಬರೆಯುವಾಗ ತಪ್ಪುಗಳು ಆಗುತ್ತವೆ ಎನ್ನುವ ಹಿಂಜರಿಕೆಯಿಂದಲೂ ನಮಗೆ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. www.livemocha.com ಅಂತಹ ತಾಣಗಳು ಉಚಿತವಾಗಿ ಭಾಷೆ ಕಲಿಕೆಗೆ ನೆರವಾಗುತ್ತವೆ.ಕನ್ನಡವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಭಾಷೆಗಳ ಕಲಿಕೆಗೆ ಇಲ್ಲಿ ನೆರವು ಸಿಗುತ್ತದೆ. ನಿಮಗೆ ಯಾವ ಭಾಷೆ ಕಲಿಯಬೇಕು ಮತ್ತು ಯಾವ ಭಾಷೆಯನ್ನು ಬಲ್ಲಿರಿ ಎಂದು ನೋಂದಾಯಿಸಿಕೊಳ್ಳುವ ವೇಳೆ ತಿಳಿಸಿದರೆ, ನಿಮಗೆ ಬಲ್ಲ ಭಾಷೆಯಲ್ಲಿ ಕಲಿಯಬೇಕಾದ ಭಾಷೆಯಲ್ಲಿ ತಿಳಿಸಬಲ್ಲ ಜನರ ಸಮುದಾಯಕ್ಕೆ ನಿಮ್ಮನ್ನು ಸಂಪಕಿಸಲಾಗುತ್ತದೆ. ನಿಮ್ಮ ಉಚ್ಛಾರವನ್ನು ಈ ಸಮುದಾಯದ ಆನ್ಲೈನ್ ಇರುವ ಸದಸ್ಯರು ಆಲಿಸಿ, ಸಲಹೆ ನೀಡುವರು. ನಿಮ್ಮ ಬರವಣಿಗೆಯೂ ಹೀಗೆ ಪ್ರತಿಕ್ರಿಯೆಗಿಟ್ಟಿಸಿಕೊಂಡು,ನಿಮ್ಮ ತಪ್ಪು-ಒಪ್ಪುಗಳು ನಿಮಗೆ ತಿಳಿಯುತ್ತವೆ. ಅದೇ ವೇಳೆ ನೀವೂ ನಿಮಗೆ ತಿಳಿದಿರುವ ಭಾಷೆಯಲ್ಲಿ ಇತರರಿಗೆ ನೆರವಾಗುತ್ತೀರಿ.
ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು
ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು
ಕೆ ಪಿ ರಾವ್ ಎಂಬ ಹೆಸರು ಕಂಪ್ಯೂಟರಿನ ಕನ್ನಡ ಕೀಲಿ ಮಣೆ ಬಗ್ಗೆ ಬಂದಾಗಲೆಲ್ಲಾ ಕೇಳಿ ಬರುವ ಹೆಸರು.ಮೊದಲಾಗಿ ಕಂಪ್ಯೂಟರಿಗಾಗಿ ಕನ್ನಡ ಅಕ್ಷರ ವಿನ್ಯಾಸಗಳನ್ನು ರೂಪಿಸಿದವರವರು. ತುಳು ತೆಲುಗು ಅಕ್ಷರ ವಿನ್ಯಾಸಗಳನ್ನು ಕಂಪ್ಯೂಟರಿಗಾಗಿ ಮಾಡಿದ ಸಾಧನೆ ಇವರದು. ಐವತ್ತು ವರ್ಷಗಳಿಂದ ಕಂಪ್ಯೂಟರುಗಳ ಜತೆ ಎಡತಾಕಿದ ಅನುಭವ ಇವರಿಗಿದೆ.ಕನ್ನಡಕ್ಕೆ ತರ್ಕಬದ್ಧ ಕೀಲಿ ಮಣೆ ವಿನ್ಯಾಸ ರೂಪಿಸಿದ ಇವರ ಸಾಧನೆ ಸರಕಾರವೂ ಗುರುತಿಸಿದೆ.ಡಾಟ್ಮ್ಯಾಟ್ರಿಕ್ಸ್ ಮುದ್ರಕಗಳಲ್ಲಿ ಕನ್ನಡ ಲಿಪಿ ಮೂಡಿಬರುವಂತೆ ಮಾಡುವುದರಲ್ಲಿಯೂ ಕೆ ಪಿ ರಾವ್ ಕೆಲಸ ಮಾಡಿದ್ದಾರೆ.ಟಾಟಾ ಪ್ರೆಸ್ನಲ್ಲಿ ಕೆಲಸ ಮಾಡಿದ್ದ ಕೆಪಿ ರಾವ್ ಈಗ ಮಣಿಪಾಲದ ಎಂ ಐ ಟಿಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರು.ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನದ ಗೌರವ ದೊರಕಿದ ಬೆನ್ನಲ್ಲೇ ನಿಟ್ಟೆಯ ವಿದ್ಯಾರ್ಥಿವೃಂದವೂ ಇವರಿಗೆ ಗೌರವ ಸಲ್ಲಿಸಿತು.ಮಾನವ ಮತ್ತು ಕಂಪ್ಯೂಟರ್ ನಡುವಣ ಸಂವಹನ ಈಗ ಅವರ ಸಂಶೋಧನಾ ಕ್ಷೇತ್ರ.
ಬ್ಲಾಗಿನಿಂದ ಪುಸ್ತಕಕ್ಕೆ
ಬ್ಲಾಗಿನಿಂದ ಪುಸ್ತಕಕ್ಕೆ


http://www.ittigecement.blogspot.com ಎನ್ನುವ ಬ್ಲಾಗ್ ಮೂಲಕ ಬರವಣಿಗೆ ಆರಂಭಿಸಿ,ತಮ್ಮ ಬರವಣಿಗೆ ದಾಟಿಯಿಂದ ಬ್ಲಾಗ್ಲೋಕದಲ್ಲಿ ಮಿಂಚುತ್ತಿರುವ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗ್ ಬರವಣಿಗೆಯನ್ನು ಪುಸ್ತಕವಾಗಿ ಹೊರತರುತ್ತಿದ್ದಾರೆ."ಹೆಸರೇ ಬೇಡ" ಎನ್ನುವ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿ ತಮ್ಮ ವೃತ್ತಿಯಾದ ಕಟ್ಟಡ ನಿರ್ಮಾಣ ಗುತ್ತಿಗೆಯಲ್ಲಿ ಆಗಿರುವ ಅನುಭವಗಳು,ಜೀವನದ ರಸಪ್ರಸಂಗಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ",ಪತ್ರಿಕಾ ವಿತರಕ ಮತ್ತು ಛಾಯಾಗ್ರಾಹಕ ಶಿವೂ ಅವರ"ವೆಂಡರ್ ಕಣ್ಣು" ಕೂಡಾ ಬಿಡುಗಡೆಯಾಗಿವೆ.ಪತ್ರಿಕೆ ಹಂಚುವ ವಿತರಕರ,ಹುಡುಗರ ಅನುಭವ,ಕಷ್ಟ-ಸುಖಗಳ ಬಗ್ಗೆ ಹೊಸ ನೋಟ ಇಲ್ಲಿದೆ.
ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ
ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ

ದೂರವಾಣಿ ಸಂಖ್ಯೆಯನ್ನು ನೆನಪಿಡುವುದು ತ್ರಾಸದಾಯಕ.ಆದರೀಗ ಸೆಲ್ಪೋನ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕೆಲಸ ಮಾಡುವುದರಿಂದ,ನಮ್ಮ ಕೆಲಸ ಸಲೀಸಾಗಿದೆ.ಆದರೂ ತುರ್ತಿನ ಸಂದರ್ಭದಲ್ಲಿ ಕೆಲವು ಸಂಖ್ಯೆಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವುದು ಕ್ಷೇಮ.ಸೆಲ್ಫೋನ್ ಕಳೆದುಹೋದಾಗ ಅಥವಾ ಕೈಕೊಟ್ಟಾಗ ತುರ್ತಾಗಿ ಕರೆ ಮಾಡಲು ಕೆಲವು ಸಂಖ್ಯೆಗಳಾದರೂ ನೆನಪಿನಲ್ಲಿದ್ದರೆ ಒಳ್ಳೆಯದು.ದೂರವಾಣಿ ಸಂಖ್ಯೆಗಳನ್ನು ಶಬ್ದಗಳಿಗೆ ಬದಲಿಸಿ,ನೆನಪಿನಲ್ಲಿಡುವ ಕ್ರಮವನ್ನು ಬಳಸುವುದು ಒಂದು ಪರಿಹಾರ. ಈ ರೀತಿ ನೀವು ನೀಡುವ ಸಂಖ್ಯೆಯನ್ನು ಶಬ್ದವಾಗಿ ಬದಲಿಸಿಕೊಡುವ ಕೆಲಸವನ್ನು ಮಾಡುವ ಅಂತರ್ಜಾಲ ತಾಣಗಳಿವೆ.www.dialabc.com, www.phonetic.com, www.phonespell.com ಇವೆಲ್ಲಾ ಅಂತಹ ಸೇವೆ ಒದಗಿಸುವ ತಾಣಗಳು.ಹಾಗೆಯೇ ನಿಮಗೆ ದೂರವಾಣಿ ಸಂಖ್ಯೆಯನ್ನು ಆರಿಸಿಕೊಳ್ಳುವಾಗ,ನಿಮ್ಮ ಹೆಸರಿನ ಅಥವಾ ಇನ್ಯಾವುದೇ ಶಬ್ದಕ್ಕೆ ನಿಕಟವಾದ ಸಂಖ್ಯೆಯನ್ನು ಕಂಡುಹಿಡಿಯಲು ಈ ಸೇವೆಗಳನ್ನು ಬಳಸಬಹುದು.ಈ ವಿಧಾನ ಬಳಸಿದಾಗ,ಉದಯವಾಣಿಯ ಸಂಪಾದಕೀಯ ವಿಭಾಗದ ದೂರವಾಣಿ ಸಂಖ್ಯೆಯಾದ 2570841 belroti,akroti ಇತ್ಯಾದಿಯಾಗಿ ಬದಲಾಗಿ ಬಿಡುತ್ತದೆ!
ನಿಫ್ಟಿ ಟ್ವಿಟರಿನಲ್ಲಿ
ನಿಫ್ಟಿ ಟ್ವಿಟರಿನಲ್ಲಿ

ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿವೆ.ಈಗ ಶೇರು ಮಾರುಕಟ್ಟೆಯ ಸರದಿ.ಭಾರತದ ಪ್ರಮುಖ ಶೇರು ಮಾರುಕಟ್ಟೆಯಾದ ಎನ್.ಎಸ್.ಇ.ಯು ತನ್ನ ಶೇರು ಸಂವೇದನಾ ಸೂಚ್ಯಂಕವಾದ,ನಿಫ್ಟಿಯ ಏರಿಳಿತವನ್ನು ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೂಲಕ ನೀಡುತ್ತಿದೆ.ಅದನ್ನು ಹಿಂಬಾಲಿಸಲು http://twitter.com/NSE_NIFTY ಈ ಖಾತೆಗೆ ಹೋಗಬೇಕಾಗುತ್ತದೆ.ಒಂದೇವಾರದಲ್ಲಿ ಹತ್ತಿರ ಸಾವಿರ ಜನ ಈ ಟ್ವಿಟರ್ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೊಮ್ಮೆ ನಿಫ್ಟಿಯ ಮಟ್ಟವನ್ನು ತಿಳಿಸುವ ವ್ಯವಸ್ಥೆಯಿದೆ.ಟ್ವಿಟರ್ ಖಾತೆಯನ್ನು ಮೊಬೈಲ್ ಸೇವೆಯ ಮೂಲಕ ಪಡೆಯುವವರಿಗೆ,ವಿವರಗಳು ಮೊಬೈಲಿನಲ್ಲಿಯೇ ಸಿಗುತ್ತದೆ.ಜಗತ್ತಿನ ಪ್ರಮುಖ ಶೇರು ಮಾರುಕಟ್ಟೆಯ ವಿವರಗಳು ಇದೀಗಾಗಲೇ ಟ್ವಿಟರಿನ ಮೂಲಕ ಲಭ್ಯವಿತ್ತು.ಈಗ ಎನ್.ಎಸ್.ಇ.ಯೂ ಅದನ್ನು ನೀಡುವುದರ ಮೂಲಕ,ಭಾರತದ ಮಟ್ಟಿಗೆ ನಾವೀನ್ಯತೆ ನೀಡುವುದರಲ್ಲಿ ತಾನು ಮುಂದೆ ಎಂದು ತೋರಿಸಿಕೊಟ್ಟಂತಾಗಿದೆ.
ಅಂದಹಾಗೆ ಇದುವರೆಗೆ,ಟ್ವಿಟರಿನಲ್ಲಿ ಈಗ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಸಲು ಆಹ್ವಾನವಿದ್ದರೆ,ಈಗದು ಈಗೇನಾಗುತ್ತಿದೆ ಎಂದು ತಿಳಿಸುವಂತೆ ಬದಲಾಗಿದೆ.ಮೊದಲಿಗೆ ಇದ್ದದ್ದಕ್ಕಿಂತ ಈಗಿನ ಪ್ರಶ್ನೆ ಹೆಚ್ಚು ವಿಸ್ತಾರದ ನೆಲೆಗಟ್ಟನ್ನು ಮೈಕ್ರೋಬ್ಲಾಗಿಗರಿಗೆ ನೀಡುತ್ತಿದೆ.
ಅಂದಹಾಗೆ ಇದುವರೆಗೆ,ಟ್ವಿಟರಿನಲ್ಲಿ ಈಗ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಸಲು ಆಹ್ವಾನವಿದ್ದರೆ,ಈಗದು ಈಗೇನಾಗುತ್ತಿದೆ ಎಂದು ತಿಳಿಸುವಂತೆ ಬದಲಾಗಿದೆ.ಮೊದಲಿಗೆ ಇದ್ದದ್ದಕ್ಕಿಂತ ಈಗಿನ ಪ್ರಶ್ನೆ ಹೆಚ್ಚು ವಿಸ್ತಾರದ ನೆಲೆಗಟ್ಟನ್ನು ಮೈಕ್ರೋಬ್ಲಾಗಿಗರಿಗೆ ನೀಡುತ್ತಿದೆ.
ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ
ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ

ಕನ್ನಡದ ಟ್ವಿಟರ್ ತಾಣವಾಗಿ,ಇಂಚರ inchara.net ಅಂತರ್ಜಾಲದಲ್ಲಿ ಲಭ್ಯವಾಗಿದೆ.ಈ ತಾಣವನ್ನು ಕಂಪ್ಯೂಟರ್ ಇಂಜಿನಿಯರ್ ವಸಂತ್ ಕಜೆ ಅವರು ಆರಂಭಿಸಿದ್ದಾರೆ.ಈ ತಾಣದಲ್ಲಿ ಕನ್ನಡಿಗರು ನೂರನಲುವತ್ತು ಅಕ್ಷರಗಳ ಮಿತಿಯಲ್ಲಿ ಸಂದೇಶಗಳನ್ನು ಪ್ರಕಟಿಸಿ,ಚಿಲಿಪಿಲಿಗುಟ್ಟಬಹುದು.ಜನಪ್ರಿಯ ತಾಣ ಟ್ವಿಟರಿನ ತಾಣ,ಈ ತಾಣಕ್ಕೆ ಪ್ರೇರಣೆ.ಸಂದೇಶದ ಜತೆಗೆ ಸೂಕ್ತ ಐಕಾನ್(ಕಿರುಚಿತ್ರ) ಸೇರಿಸಲು ಅವಕಾಶ ಇರುವುದು,ಇಲ್ಲಿನ ವಿಶೇಷ.ಸಂದೇಶ ಟೈಪಿಸುವಾಗ.ಅಕ್ಷರಗಳು ಕನ್ನಡದಲ್ಲೇ ಮೂಡುವಂತೆ ರೂಪಿಸಿರುವುದು,ಸಂದೇಶವನ್ನು ಕನ್ನಡದಲ್ಲಿ ರಚಿಸುವುದನ್ನು ಸುಲಭವಾಗಿಸಿದೆ.ನಿಮ್ಮ ಜತೆ ಸಂಪರ್ಕವಿರುವ ಮಂದಿಯ ಪಟ್ಟಿಯ ಜತೆಗೆ,ನಿಮ್ಮ ಹಿಂಬಾಲಕರ ಪಟ್ಟಿಯನ್ನು ತಾಣ ಪ್ರತ್ಯೇಕವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.ಎಸೆಮ್ಮೆಸ್ ಮೂಲಕವೂ ಸಂದೇಶಗಳನ್ನು ಸೇರಿಸುವ ಸೌಲಭ್ಯವಿದೆ.ಜುಕಿಎಂಜಿನ್ ಎಂಬ ಮುಕ್ತ ತಂತ್ರಾಂಶವನ್ನು ಬಳಸಿ,ಈ ಸೇವೆಯನ್ನು ನೀಡಲಾಗುತ್ತಿದೆ.
ಕನ್ನಡದಲ್ಲಿ ಪಾಡ್ಕಾಸ್ಟು
ಕನ್ನಡದಲ್ಲಿ ಪಾಡ್ಕಾಸ್ಟು

ಬ್ರಾಡ್ಬ್ಯಾಂಡ್ ಸೌಲಭ್ಯ ಈಗ ದೇಶದ ಮೂಲೆ ಮೂಲೆಗೂ ಹಬ್ಬಿದ್ದು,ಧ್ವನಿ,ವಿಡಿಯೋ,ಚಿತ್ರಗಳನ್ನು ಅಂತರ್ಜಾಲ ತಾಣಗಳಲ್ಲಿ ಸಮರ್ಥವಾಗಿ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ.ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದು ತಿಳಿಸುವ ಬ್ಲಾಗ್ ಮಾಧ್ಯಮ ಬಹು ಜನಪ್ರಿಯ.ಜತೆಗೆ ಸಂಭಾಷಣೆ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನಗಳು ಇಂಗ್ಲೀಷಿನಲ್ಲಿ ಹೆಚ್ಚೆಚ್ಚು ನಡೆದಿವೆ.ಈಗ ಕನ್ನಡದಲ್ಲೂ ಅಂತಹ ಪಾಡ್ಕಾಸ್ಟ್ ಲಭ್ಯವಿದೆ.ಅನಿವಾಸಿ ಕನ್ನಡಿಗ ಸುದರ್ಶನ್ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಕನ್ನಡದ ಬರಹಗಾರ ಮತ್ತು ಸಿನೆಮಾ ನಿರ್ಮಾಪಕ.ಇವರು ವಾರವಾರ ಪಾಡ್ಕಾಸ್ಟನ್ನು ಅಂತರ್ಜಾಲ ತಾಣ http://paaducastu.wordpress.comದ ಮೂಲಕ ಲಭ್ಯವಾಗಿಸುವ ಹುರುಪಿನಲ್ಲಿದ್ದಾರೆ.ಮೊದಲ ಸಂಚಿಕೆಯಿದೀಗಲೇ ಲಭ್ಯವಿದೆ.ಚಿತ್ರಗೀತೆಗಳಿಂದ ತೊಡಗಿ,ಆಯೋಗದ ವರದಿಗಳ ಬಗೆಗಿನ ವಿವಿಧ ಸುದ್ದಿಗಳ ಬಗ್ಗೆ ಹರಟೆ ನಸುನಗೆ ಮೂಡಿಸಲು ಯಶಸ್ವಿಯಾಗಿದೆ.ಆಕಾಶವಾಣಿಯ ಕಾರ್ಯಕ್ರಮಗಳನ್ನು ನೆನಪಿಸುವ ಈ ಧ್ವನಿಕಡತವನ್ನು ಆಲಿಸಲು ಕಂಪ್ಯೂಟರಿನಲ್ಲಿರುವ ಮೀಡಿಯಾಪ್ಲೇಯರ್ ಅಂತಹ ತಂತ್ರಾಂಶ ಬೇಕಾಗುತ್ತದೆ.ಸುದರ್ಶನ ಅವರ ಬ್ಲಾಗ್ ಬರಹಗಳ ಕೊಂಡಿ http://anivaasi.wordpress.com/ನಲ್ಲಿ ಲಭ್ಯವಿದೆ.
ತುಳು ಲಿಪಿ
ತುಳು ಲಿಪಿಗೆ ಯುನಿಕೋಡ್ ಲಭಿಸಲಿ
ಯಾವುದೇ ಭಾಷೆಯನ್ನು ಕಂಪ್ಯೂಟರಿನಲ್ಲಿ ರಗಳೆಯಿಲ್ಲದೆ ಬಳಸಲು ಭಾಷೆಯ ಲಿಪಿಯ ಅಕ್ಷರಗಳಿಗೆ ಯುನಿಕೋಡ್ ಶಿಷ್ಟಾಚಾರ ಪ್ರಕಾರ,ಸಂಕೇತಗಳನ್ನು ನೀಡಬೇಕು.ತುಳುವಿಗೆ ಅಧಿಕೃತ ಭಾಷೆಯ ಮನ್ನಣೆ ಸಿಕ್ಕಿದರೆ ಮಾತ್ರಾ ಈ ಸಂಕೇತಗಳನ್ನು ಪಡೆಯಲು ಸಾಧ್ಯವಾಗಬಹುದಾದ್ದರಿಂದ,ತುಳುವಿಗೆ ಅಧಿಕೃತ ಭಾಷೆಯ ಅಂಗೀಕಾರ ಪಡೆದ ನಂತರವೇ ಇದು ಸಾಧ್ಯವಾದೀತು.ಅದು ವರೆವಿಗೂ,ತುಳು ಲಿಪಿಯ ಫಾಂಟುಗಳನ್ನು ಅನುಷ್ಟಾಪಿಸಿದ ನಂತರವೇ ಕಂಪ್ಯೂಟರಿನಲ್ಲಿ ತುಳು ಲಿಪಿಯನ್ನು ಮೂಡಿಸಲು ಸಾಧ್ಯ.ಸದ್ಯಕ್ಕಂತೂ ತುಳುವರು ಕನ್ನಡದ ಲಿಪಿ ಬಳಸಿಯೇ ತುಳುವನ್ನು ಬ್ಲಾಗು ಬರಹಗಳಲ್ಲಿ ಬಳಸಬಹುದಷ್ಟೆ.
-----------------------------------------------------------------------------------------
ತುಳು ಲಿಪ್ಯಂತರ ನಿಘಂಟು
ತುಳು ಶಬ್ದಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಅರ್ಥ ಹೇಳುವ ಲಿಪ್ಯಂತರ ಆಧಾರಿತ ನಿಘಂಟು ಅಂತರ್ಜಾಲದಲ್ಲಿದೆ.ಇದರಲ್ಲಿ ತುಳು ಶಬ್ದಗಳನ್ನು ಇಂಗ್ಲೀಷ್ ಅಕ್ಷರಗಳಲ್ಲೇ ಬರೆಯಲಾಗಿದ್ದು,http://www.websters-online-dictionary.org/translation/Tulu ಅಂತರ್ಜಾಲ ವಿಳಾಸದಲ್ಲಿ ಲಭ್ಯವಿದೆ.ಇಲ್ಲಿ ತುಳು ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು,ಶೋಧ ಸೇವೆಯೂ ಲಭ್ಯವಿದೆ.ದೈನಂದಿನ ವ್ಯವಹಾರದಲ್ಲಿ ಬಳಸುವ ವಾಕ್ಯಗಳನ್ನೂ ಇಲ್ಲಿ ಪಟ್ಟಿ ಮಾಡಲಾಗುವುದರಿಂದ,ಭಾಷೆಯನ್ನು ಕಲಿಯಲೂ ಸಹಾಯಕವಾಗಬಹುದು.
ಪದಗಳ ಮೂಲವನ್ನು ಹೇಳುವ ಕೋಶವೊಂದು ಅಂತರ್ಜಾಲದಲ್ಲಿ ಲಭ್ಯವಿದೆ.ಇದರಲ್ಲಿ ವಿವಿಧ ಶಬ್ದಗಳ ವ್ಯುತ್ಪತ್ತಿಯಾದ ಬಗೆಯನ್ನು ಹೇಳಲಾಗಿದೆ.ಇದರಲ್ಲಿ ತುಳು ಶಬ್ದಗಳನ್ನೂ ಉಲ್ಲೇಖಿಸಲಾಗಿದೆ.ದ್ರಾವಿಡ ಭಾಷೆಗಳ ಮೂಲವನ್ನು ಹೇಳುವ ಈ ನಿಘಂಟು http://dsal.uchicago.edu ಈ ಅಂತರ್ಜಾಲ ತಾಣದಲ್ಲಿ ಲಭ್ಯ.ಕನ್ನಡ,ತಮಿಳು,ಮಲೆಯಾಳಮ್,ಕೊಂಕಣಿ ಪದಗಳೂ ಇದರಲ್ಲಿ ಸಿಗುವುದು ವಿಶೇಷ.
----------------------------------------------------------------------------------
ತುಳು ತಂತ್ರಾಂಶ ತೌಳವ
ತೌಳವ 2.0 ಎನ್ನುವ ತುಳು ಲಿಪಿಯಲ್ಲಿ ಟೈಪ್ ಮಾಡಲು ಅನುವು ಮಾಡುವ ತಂತ್ರಾಂಶವೀಗ ಸಿದ್ಧವಾಗಿದೆ.ತುಳು ಲಿಪಿಯಲ್ಲಿ ಐವತ್ತು ಅಕ್ಷರಗಳಿದ್ದು,ಮಲಯಾಳವನ್ನು ಹೋಲುತ್ತದೆ.ಈ ಲಿಪಿಯನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.ನುಡಿ ತಂತ್ರಾಂಶದ ಕೀಲಿ ಮಣೆವಿನ್ಯಾಸವನ್ನು ಬಳಸಿ ಟೈಪ್ ಮಾಡಲು ಸಾಧ್ಯ.ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರ ಸಮಿತಿಯು ತಂತ್ರಾಂಶದ ಅಭಿವೃದ್ಧಿ ಮಾಡುತ್ತಲಿದೆ.ಉಜಿರೆಯಲ್ಲಿ ನಡೆದ ತುಳು ವಿಶ್ವಸಮ್ಮೇಳನದಲ್ಲಿ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಪ್ರದರ್ಶಿಸಿದಾಗ, ತಂತ್ರಾಂಶ ಪ್ರವೀಣ ಸತ್ಯಶಂಕರ ಮತ್ತು ಹರಿಕೃಷ್ಣ ಅವರು ಹಾಜರಿದ್ದರೆ,ನಿರ್ದೇಶಕರಾದಪ್ರವೀಣರಾಜ್ ರಾವ್,ತುಳು ಭಾಷಾ ಪ್ರವೀಣರಾದ ಪಿ.ವೆಂಕಟರಾಜ ಪುಣಿಂಚಿತಾಯ,ವಿಘ್ನರಾಜ್ ಧರ್ಮಸ್ಥಳ ಮತ್ತು ಪದ್ಮನಾಭ ಕೇಕುಣ್ಣಾಯ ಮುಂತಾದವರೂ ಭಾಗವಹಿಸಿದ್ದರು.
----------------------------------------------------
ಕನ್ನಡ ಅಂತರ್ಜಾಲ ತಾಣಗಳು
ಕನ್ನಡ ಬ್ಲಾಗ್ಸ್ http://kannadablogs.ning.com/ ಕನ್ನಡದ ಹೊಸ ಅಂತರ್ಜಾಲ ತಾಣವಾಗಿ ಮೂಡಿಬಂತು.ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವುದು ಮತ್ತು ಪುಸ್ತಕ ಬಿಡುಗಡೆ, ಚರ್ಚೆಗಳಂತಹ ಚಟುವಟಿಕೆಗಳನ್ನು ಅವರ ಗಮನಕ್ಕೆ ತರುವ ಕಾರ್ಯದಲ್ಲಿ ಕನ್ನಡಬ್ಲಾಗ್ಸ್ ತಾಣ ಅಪೂರ್ವ ಯಶಸ್ಸು ಕಂಡಿದೆ. ವರ್ಷಾಂತ್ಯಕ್ಕೆ ಎರಡೂಕಾಲು ಸಾವಿರ ಸದಸ್ಯರನ್ನು ನೋಂದಾಯಿಸಿ,ಇನ್ನೂ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣವಿದು.ಮೇ ಫ್ಲವರ್ ಮೀಡಿಯಾ ಹೌಸ್ ಈ ತಾಣವನ್ನು ನಿರ್ವಹಿಸುತ್ತಿದೆ. "ಕೆಂಡಸಂಪಿಗೆ" ಹಿನ್ನೆಲೆಗೆ ಸರಿದುದು ಅನಿರೀಕ್ಷಿತ ಬೆಳವಣಿಗೆ.ಅನಿವಾಸಿ ಭಾರತೀಯರನ್ನು ಬಹುವಾಗಿ ಆಕರ್ಷಿಸುವಲ್ಲಿ ಸಫಲವಾಗಿರುವ ದಟ್ಸ್ಕನ್ನಡ.ಕಾಮ್ thatskannada.com ಕನ್ನಡದ ಜನಪ್ರಿಯ ತಾಣ. ಸುದ್ದಿಯನ್ನೂ ಪ್ರಕಟಿಸುವ ಈ ತಾಣ, ಎಲ್ಲಾ ತರದ ಮಸಾಲೆಯನ್ನೂ ಹೊಂದಿರುವುದೇ ಇದರ ಜನಪ್ರಿಯತೆಯ ಗುಟ್ಟು. ಬರಹಗಾರರಿಗೆ ತಮ್ಮ ಬರಹವನ್ನು ಯಾವುದೇ ಸಂಪಾದಕರ ಕತ್ತರಿಗೊಳಗಾಗದೆ ದಿಡೀರ್ ಆಗಿ ಪ್ರಕಟಿಸಿ, ಓದುಗರಿಂದ ಮತ್ತು ಸದಸ್ಯರಿಂದ ಪ್ರತಿಕ್ರಿಯೆ ಪಡೆಯಲು ಅನುವು ಮಾಡುವ ಸಂಪದ.ನೆಟ್(sampada.net ) ನಂಬರ್ 2 ಸ್ಥಾನದಲ್ಲಿರುವ ಕನ್ನಡ ತಾಣ.ಜಾಹೀರಾತಿನ ಕಾಟವಿಲ್ಲದೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ ಹೊಂದಿದ ಸಂಪದಕ್ಕೆ ಹರಿಪ್ರಸಾದ್ ನಾಡಿಗ್ ಸಾರಥ್ಯವಿದೆ. ಸದಸ್ಯರ ಸಂಖ್ಯೆ ಆರೂವರೆ ಸಾವಿರಕ್ಕೂ ಹೆಚ್ಚು.ನೀರ ನಿಶ್ಚಿಂತೆ ಸಾಧಿಸುವ ಗುರಿ ಹೊತ್ತ ಕನ್ನಡ ವಾಟರ್ ಪೋರ್ಟಲ್, ಆರೋಗ್ಯ ಸಂಪದ, ಕೃಷಿ ಸಂಪದಗಳೂ ಸಂಪದದ ಛತ್ರದಡಿ ಬರುತ್ತವೆ.ಈ ವರ್ಷ ಈ ತಾಣವೂ ನಿರ್ವಹಣೆಗಾಗಿ ಎರಡು ತಿಂಗಳ ಕಾಲ ನಿಲುಗಡೆಯಾಯಿತು.ಸಂಪನ್ಮೂಲಗಳಿಗಾಗಿ ಕನ್ನಡಿಗರತ್ತ ನೋಡುತ್ತಿರುವ ಸಂಪದವನ್ನು ಕನ್ನಡಿಗರು ಪ್ರೋತ್ಸಾಹಿಸಲು ಮನ ಮಾಡಬೇಕಿದೆ.ಕನ್ನಡದಲ್ಲೂ ಟ್ವಿಟರನ್ನು ಹೋಲುವ ಇಂಚರ ಎನ್ನುವ ತಾಣ ಆರಂಭವಾಯಿತು.ವಸಂತ್ ಕಜೆ ಎನ್ನುವ ತಂತ್ರಜ್ಞ ಇದನ್ನು ನಿರ್ವಹಿಸುತ್ತಿದ್ದಾರೆ.ನೀರಿನ ಬಗ್ಗೆ ಮಾಹಿತಿಯನ್ನೊಳಗೊಂಡ http://kannada.indiawaterportal.org/ ಕೂಡಾ ಸಾಕಷ್ಟು ಜನಪ್ರಿಯವಾಯಿತು.
ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ
ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ


ವಿಜಯನಗರ ಸಾಮ್ರಾಜ್ಯದ ಶ್ರೀಕ್ರಷ್ಣದೇವರಾಯ ಮಹಾರಾಜ.ತುಳುವ ವಂಶದ ಈ ದೊರೆಯ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ.ಈತನ ಪಟ್ಟಾಭಿಷೇಕದ ಐನೂರನೇ ವರ್ಷಾಚರಣೆ ಈಚೆಗೆ ಹಂಪಿಯಲ್ಲಿ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. http://krishnadevaraya.in ಅಂತರ್ಜಾಲ ತಾಣವು ಈ ಸಂದರ್ಭದಲ್ಲಿ ಆಸ್ತಿತ್ವಕ್ಕೆ ಬಂದಿದೆ.ಇಲ್ಲಿ ಮಹಾರಾಜನ ಆಡಳಿತದ,ಕಾರ್ಯಕ್ರಮಗಳ ವಿವರಗಳಿವೆ.ಅಂತರ್ಜಾಲತಾಣ ತಾಣವಿನ್ನೂ ಸಂಪೂರ್ಣವಾದ ಹಾಗಿಲ್ಲ.ಹೆಚ್ಚಿನ ಕೊಂಡಿಗಳು ಒಂದು ವಾಕ್ಯಕ್ಕೇ ಸೀಮಿತವಾಗಿದೆ,ವಿವರಗಳನ್ನು ಹೊಂದಿಲ್ಲ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)