ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
ಗುರುವಾರ, ಏಪ್ರಿಲ್ 15, 2010
ತುಳು ಲಿಪಿ
ತುಳು ಲಿಪಿಗೆ ಯುನಿಕೋಡ್ ಲಭಿಸಲಿ
ಯಾವುದೇ ಭಾಷೆಯನ್ನು ಕಂಪ್ಯೂಟರಿನಲ್ಲಿ ರಗಳೆಯಿಲ್ಲದೆ ಬಳಸಲು ಭಾಷೆಯ ಲಿಪಿಯ ಅಕ್ಷರಗಳಿಗೆ ಯುನಿಕೋಡ್ ಶಿಷ್ಟಾಚಾರ ಪ್ರಕಾರ,ಸಂಕೇತಗಳನ್ನು ನೀಡಬೇಕು.ತುಳುವಿಗೆ ಅಧಿಕೃತ ಭಾಷೆಯ ಮನ್ನಣೆ ಸಿಕ್ಕಿದರೆ ಮಾತ್ರಾ ಈ ಸಂಕೇತಗಳನ್ನು ಪಡೆಯಲು ಸಾಧ್ಯವಾಗಬಹುದಾದ್ದರಿಂದ,ತುಳುವಿಗೆ ಅಧಿಕೃತ ಭಾಷೆಯ ಅಂಗೀಕಾರ ಪಡೆದ ನಂತರವೇ ಇದು ಸಾಧ್ಯವಾದೀತು.ಅದು ವರೆವಿಗೂ,ತುಳು ಲಿಪಿಯ ಫಾಂಟುಗಳನ್ನು ಅನುಷ್ಟಾಪಿಸಿದ ನಂತರವೇ ಕಂಪ್ಯೂಟರಿನಲ್ಲಿ ತುಳು ಲಿಪಿಯನ್ನು ಮೂಡಿಸಲು ಸಾಧ್ಯ.ಸದ್ಯಕ್ಕಂತೂ ತುಳುವರು ಕನ್ನಡದ ಲಿಪಿ ಬಳಸಿಯೇ ತುಳುವನ್ನು ಬ್ಲಾಗು ಬರಹಗಳಲ್ಲಿ ಬಳಸಬಹುದಷ್ಟೆ.
-----------------------------------------------------------------------------------------
ತುಳು ಲಿಪ್ಯಂತರ ನಿಘಂಟು
ತುಳು ಶಬ್ದಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಅರ್ಥ ಹೇಳುವ ಲಿಪ್ಯಂತರ ಆಧಾರಿತ ನಿಘಂಟು ಅಂತರ್ಜಾಲದಲ್ಲಿದೆ.ಇದರಲ್ಲಿ ತುಳು ಶಬ್ದಗಳನ್ನು ಇಂಗ್ಲೀಷ್ ಅಕ್ಷರಗಳಲ್ಲೇ ಬರೆಯಲಾಗಿದ್ದು,http://www.websters-online-dictionary.org/translation/Tulu ಅಂತರ್ಜಾಲ ವಿಳಾಸದಲ್ಲಿ ಲಭ್ಯವಿದೆ.ಇಲ್ಲಿ ತುಳು ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು,ಶೋಧ ಸೇವೆಯೂ ಲಭ್ಯವಿದೆ.ದೈನಂದಿನ ವ್ಯವಹಾರದಲ್ಲಿ ಬಳಸುವ ವಾಕ್ಯಗಳನ್ನೂ ಇಲ್ಲಿ ಪಟ್ಟಿ ಮಾಡಲಾಗುವುದರಿಂದ,ಭಾಷೆಯನ್ನು ಕಲಿಯಲೂ ಸಹಾಯಕವಾಗಬಹುದು.
ಪದಗಳ ಮೂಲವನ್ನು ಹೇಳುವ ಕೋಶವೊಂದು ಅಂತರ್ಜಾಲದಲ್ಲಿ ಲಭ್ಯವಿದೆ.ಇದರಲ್ಲಿ ವಿವಿಧ ಶಬ್ದಗಳ ವ್ಯುತ್ಪತ್ತಿಯಾದ ಬಗೆಯನ್ನು ಹೇಳಲಾಗಿದೆ.ಇದರಲ್ಲಿ ತುಳು ಶಬ್ದಗಳನ್ನೂ ಉಲ್ಲೇಖಿಸಲಾಗಿದೆ.ದ್ರಾವಿಡ ಭಾಷೆಗಳ ಮೂಲವನ್ನು ಹೇಳುವ ಈ ನಿಘಂಟು http://dsal.uchicago.edu ಈ ಅಂತರ್ಜಾಲ ತಾಣದಲ್ಲಿ ಲಭ್ಯ.ಕನ್ನಡ,ತಮಿಳು,ಮಲೆಯಾಳಮ್,ಕೊಂಕಣಿ ಪದಗಳೂ ಇದರಲ್ಲಿ ಸಿಗುವುದು ವಿಶೇಷ.
----------------------------------------------------------------------------------
ತುಳು ತಂತ್ರಾಂಶ ತೌಳವ
ತೌಳವ 2.0 ಎನ್ನುವ ತುಳು ಲಿಪಿಯಲ್ಲಿ ಟೈಪ್ ಮಾಡಲು ಅನುವು ಮಾಡುವ ತಂತ್ರಾಂಶವೀಗ ಸಿದ್ಧವಾಗಿದೆ.ತುಳು ಲಿಪಿಯಲ್ಲಿ ಐವತ್ತು ಅಕ್ಷರಗಳಿದ್ದು,ಮಲಯಾಳವನ್ನು ಹೋಲುತ್ತದೆ.ಈ ಲಿಪಿಯನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.ನುಡಿ ತಂತ್ರಾಂಶದ ಕೀಲಿ ಮಣೆವಿನ್ಯಾಸವನ್ನು ಬಳಸಿ ಟೈಪ್ ಮಾಡಲು ಸಾಧ್ಯ.ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರ ಸಮಿತಿಯು ತಂತ್ರಾಂಶದ ಅಭಿವೃದ್ಧಿ ಮಾಡುತ್ತಲಿದೆ.ಉಜಿರೆಯಲ್ಲಿ ನಡೆದ ತುಳು ವಿಶ್ವಸಮ್ಮೇಳನದಲ್ಲಿ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಪ್ರದರ್ಶಿಸಿದಾಗ, ತಂತ್ರಾಂಶ ಪ್ರವೀಣ ಸತ್ಯಶಂಕರ ಮತ್ತು ಹರಿಕೃಷ್ಣ ಅವರು ಹಾಜರಿದ್ದರೆ,ನಿರ್ದೇಶಕರಾದಪ್ರವೀಣರಾಜ್ ರಾವ್,ತುಳು ಭಾಷಾ ಪ್ರವೀಣರಾದ ಪಿ.ವೆಂಕಟರಾಜ ಪುಣಿಂಚಿತಾಯ,ವಿಘ್ನರಾಜ್ ಧರ್ಮಸ್ಥಳ ಮತ್ತು ಪದ್ಮನಾಭ ಕೇಕುಣ್ಣಾಯ ಮುಂತಾದವರೂ ಭಾಗವಹಿಸಿದ್ದರು.
----------------------------------------------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ