ಗುರುವಾರ, ಏಪ್ರಿಲ್ 15, 2010

ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು

ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು
ಕೆ ಪಿ ರಾವ್ ಎಂಬ ಹೆಸರು ಕಂಪ್ಯೂಟರಿನ ಕನ್ನಡ ಕೀಲಿ ಮಣೆ ಬಗ್ಗೆ ಬಂದಾಗಲೆಲ್ಲಾ ಕೇಳಿ ಬರುವ ಹೆಸರು.ಮೊದಲಾಗಿ ಕಂಪ್ಯೂಟರಿಗಾಗಿ ಕನ್ನಡ ಅಕ್ಷರ ವಿನ್ಯಾಸಗಳನ್ನು ರೂಪಿಸಿದವರವರು. ತುಳು ತೆಲುಗು ಅಕ್ಷರ ವಿನ್ಯಾಸಗಳನ್ನು ಕಂಪ್ಯೂಟರಿಗಾಗಿ ಮಾಡಿದ ಸಾಧನೆ ಇವರದು. ಐವತ್ತು ವರ್ಷಗಳಿಂದ ಕಂಪ್ಯೂಟರುಗಳ ಜತೆ ಎಡತಾಕಿದ ಅನುಭವ ಇವರಿಗಿದೆ.ಕನ್ನಡಕ್ಕೆ ತರ್ಕಬದ್ಧ ಕೀಲಿ ಮಣೆ ವಿನ್ಯಾಸ ರೂಪಿಸಿದ ಇವರ ಸಾಧನೆ ಸರಕಾರವೂ ಗುರುತಿಸಿದೆ.ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳಲ್ಲಿ ಕನ್ನಡ ಲಿಪಿ ಮೂಡಿಬರುವಂತೆ ಮಾಡುವುದರಲ್ಲಿಯೂ ಕೆ ಪಿ ರಾವ್ ಕೆಲಸ ಮಾಡಿದ್ದಾರೆ.ಟಾಟಾ ಪ್ರೆಸ್‌ನಲ್ಲಿ ಕೆಲಸ ಮಾಡಿದ್ದ ಕೆಪಿ ರಾವ್ ಈಗ ಮಣಿಪಾಲದ ಎಂ ಐ ಟಿಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರು.ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನದ ಗೌರವ ದೊರಕಿದ ಬೆನ್ನಲ್ಲೇ ನಿಟ್ಟೆಯ ವಿದ್ಯಾರ್ಥಿವೃಂದವೂ ಇವರಿಗೆ ಗೌರವ ಸಲ್ಲಿಸಿತು.ಮಾನವ ಮತ್ತು ಕಂಪ್ಯೂಟರ್ ನಡುವಣ ಸಂವಹನ ಈಗ ಅವರ ಸಂಶೋಧನಾ ಕ್ಷೇತ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ