ಬುಧವಾರ, ಜೂನ್ 23, 2010

ದಿನಾಲೂ ಇಡ್ಲಿ-ಸಾಂಬಾರ್ ಯಾಕೆ ಎನ್ನುವ ವಿಪ್ರೋ

ಐಟಿ ದಿಗ್ಗಜ ವಿಪ್ರೋ ಟೆಕ್ನಾಲಜಿಯ ಮಿಶನ್10ಎಕ್ಸ್ ಎನ್ನುವ ಕಾರ್ಯಕ್ರಮವು ದೇಶದ ತಾಂತ್ರಿಕ ಕಾಲೇಜುಗಳ ಶಿಕ್ಷಕರಿಗೆ ತರಗತಿಗಳಲ್ಲಿ ಹೊಸತನ ತುಂಬುವುದು ಹೇಗೆಂದು ತರಬೇತಿ ನೀಡುವ ಕಾರ್ಯಕ್ರಮ.ಮೂರು ವರ್ಷದ ಹಿಂದೆ ಶಿಕ್ಷಕರ ದಿನ ಸೆಪ್ಟೆಂಬರ್ ಐದರಂದುಆರಂಭವಾದ ಕಾರ್ಯಕ್ರಮ, ಶಿಕ್ಷಕರು ಬರೇ ಮಾತಿನ ಮೂಲಕ ತರಗತಿಗಳಲ್ಲಿ ಏಕತಾನತೆಹುಟ್ಟಿಸದೆ, ನಾವೀನ್ಯತೆ ತರಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ.ಈಗಾಗಲೇ ಸುಮಾರು ಒಂಭತ್ತು ಸಾವಿರ ಶಿಕ್ಷಕರತರಬೇತಿಯನ್ನು ಮುಗಿಸಿರುವ ಕಂಪೆನಿಯು, ಬರುವ ಶಿಕ್ಷಕರ ದಿನದೊಳಗೆ ಹತ್ತು ಸಾವಿರ ಜನರಿಗೆತರಬೇತಿ ನೀಡಿ ತಯಾರು ಮಾಡುವ ಪಣ ತೊಟ್ಟಿದೆ.ಅತ್ಯುತ್ತಮ ಇಡ್ಲಿ-ಸಾಂಬಾರ್ ಅನ್ನ ಯಾರಿಗಾದರೂ ದಿನಕ್ಕೆ ಮೂರು ಬಾರಿ ಬಡಿಸಿದರೆ,ಅದು ಕೆಲವೇ ದಿನದಲ್ಲಿ ಬೋರು ಹುಟ್ಟಿಸುವಂತೆ, ಬೋಧನೆಯಲ್ಲಿ ಏಕತಾನತೆ ಇದ್ದರೆ, ಅದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸದಿರಬಹುದು ಎಂಬಂತಹ ಉಪಮಾನಗಳ ಮೂಲಕ, ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿ, ಕಲಿಸುವ ಪ್ರಯತ್ನ ನಡೆಸಲು ಶಿಕ್ಷಕರನ್ನು ಪ್ರಚೋದಿಸುತ್ತಿದೆ. ವಿವಿಧ ವಿಷಯಗಳ ಬಗ್ಗೆ ಪ್ರಯೋಗಗಳನ್ನು ನಡೆಸಲು, ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ನೀಡುವ ಶೈಕ್ಷಣಿಕ ಕಲಿಕಾ ಕಿಟ್ ಒಂದರ ಮಾದರಿಯನ್ನೂ ಮಿಷನ್10ಎಕ್ಸ್ ಅಡಿ ಸಿದ್ಧ ಪಡಿಸಲಾಗಿದೆ. ಯೋಜನೆಯ ವಿವರಗಳಿಗೆ http://www.mission10... ನೋಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ