ಸೋಮವಾರ, ಏಪ್ರಿಲ್ 26, 2010

ಕಂಪ್ಯೂಟರ್ ಮತ್ತು ಕನ್ನಡ ಅನುವಾದ ಹಾಗೂ ಅಧ್ವಾನಗಳು

    ಇಂಗ್ಲೀಷ್ ನಮ್ಮ ಭಾಷೆಯಲ್ಲ. ಆದರೂ ಇಂಗ್ಲೀಷ್ ಪದಗಳನ್ನು ನಮ್ಮ ಆಡುಭಾಷೆಯಲ್ಲಿ ಬಳಸುವುದು ತೀರಾ ಸಹಜವಾಗಿದೆ; ಸರ್ವಮಾನ್ಯವೇ ಆಗಿಬಿಟ್ಟಿದೆ. ಅಷ್ಟೇ ಅನಿವಾರ್ಯವಾಗಿ ಹೊಸ ಹೊಸ ಇಂಗ್ಲೀ಼ಷ್ ಪದಗಳು ನಮ್ಮ ಕನ್ನಡಕ್ಕೆ ಸೇರ್ಪಡೆಯಾಗುತ್ತಲೇ ಇರುವುದನ್ನೂ ನಾವು ಕಾಣುತ್ತಿದ್ದೇವೆ; ಅದೇನೂ ಅಸಹಜವಲ್ಲವೆಂಬತೆ ಅವುಗಳನ್ನು ಒಪ್ಪಿಕೊಳ್ಳುತ್ತಿದ್ದೇವೆ.
        ಇನ್ನೂ ಇಂಗ್ಲೀಷ್ ಚೆನ್ನಾಗಿ ಮಾತನಾಡಲು ಬಾರದೇ ಇರುವವರೇ ಕನ್ನಡ ಮಾತನಾಡುವಾಗ ಹೆಚ್ಚು ಇಂಗ್ಲೀಷ್ ಪದಗಳನ್ನು "ಮಿಕ್ಸ್" ಮಾಡುತ್ತಾರೆ. ಕಂಪ್ಯೂಟರ‍್ ಬಂದಮೇಲಂತು ಅದರ ಪರಿಭಾಷೆಯ ಬಹಳಷ್ಟು ತಾಂತ್ರಿಕ ಶಬ್ದಗಳು, ಕಂಪ್ಯೂಟರ‍್ ಕಲಿಯುವ ಕಲಿತಿರುವವರೆಲ್ಲರ ಹಾಗೂ ಕಂಪ್ಯೂಟರ‍್ ಬಗ್ಗೆ ಮಾತನಾಡುವ ಜನಸಾಮಾನ್ಯರ ಬಾಯಲ್ಲಿ ಇನ್ನಿಲ್ಲವೆಂಬಂತೆ ಹೊರಬರತೊಡಗಿವೆ; ಬಳಕೆಯಲ್ಲಿವೆ. ಮೊಬೈಲ್ ಮತ್ತು ಟಿ.ವಿ.ಚಾನೆಲ್ಸ್‌ ಷೋಗಳ ವಿಷಯದಲ್ಲಂತು ಇದು ತೀರಾ ಸರ್ವೇಸಾಮಾನ್ಯವೆನಿಸಿದೆ.
          ಇನ್ನು ಸ್ಪೋಕನ್‌ ಇಂಗ್ಲೀಷ್ ಇಲ್ಲದೇ ತಮ್ಮ ಮಕ್ಕಳು ಈ ಪ್ರಪಂಚದಲ್ಲಿ ಉತ್ತಮ ಸಂಪಾದನೆ ಮಾಡಲು ಸಾಧ್ಯವೇ ಇಲ್ಲವೆಂಬ ಭಾವನೆ ಹೆತ್ತವರಲ್ಲಿ ಮೂಡುತ್ತಿರುವದಂತೂ ಖೇದಕರ ಸಂಗತಿಯೇ ಆಗಿದೆ. ರೂಢಿಯಲ್ಲಿ ಇಂಗ್ಲೀಷ್ ಪದಗಳು ನಮ್ಮ ಮಾತೃಭಾಷೆಯೊಂದಿಗೆ ಬೆರೆಯುವುದು ಅನಿವಾರ್ಯವಾದರೆ ಪರವಾಯಿಲ್ಲ.
         ವಿಜ್ಞಾನ- ತಂತ್ರಜ್ಞಾನದಲ್ಲಿರುವ ಒಂದು ಇಂಗ್ಲೀಷ್ ಪದಕ್ಕೆ ಸಮಾನವಾದ ಅಥವಾ ಸಮಾನ ರೂಪದ ಇನ್ನೊಂದು ಪದ ಸಿಗದೇ ಇದ್ದಾಗ, ಸಿಕ್ಕರೂ ಅದು ಇಂಗ್ಲೀಷ್ ಪದಕೊಡುವಷ್ಟು ತೃಪ್ತಿಕೊಡದಿದ್ದಾಗ, ಆ ಇಂಗ್ಲೀಷ್ ಪದದಮೋಹವೇ ನಮ್ಮನ್ನು ಕಾಡುವುದುಂಟು. ಆಗ ಆ ಪದವನ್ನೇ ಕನ್ನಡದೊಂದಿಗೆ ಬಳಸಿಕೊಳ್ಳುವುದೂ ಅದರ ಅರ್ಥವಿವರಣೆಯನ್ನೂ ಜೊತೆಗೆ ಹೇಳುವುದೂ ಸೂಕ್ತವೆನಿಸುತ್ತದೆ. ಅದೇನೂ ಅಸಹಜವೆನಿಸುವುದಿಲ್ಲ; ಬರವಣಿಗೆಯಲ್ಲಿ ಸೋಪಜ್ಞತೆಗೂ ಬಾಧಕವಾಗುವುದಿಲ್ಲ. ಆದರೆ, ಇಂಗ್ಲೀಷ್ ಪದವೊಂದರ ಮೋಹಕ್ಕಿಂತ ಇಂಗ್ಲೀಷ್ ವ್ಯಾಮೋಹವೇ ಮೇಲುಗೈಯಾದರೆ, ಅದು ಅತಿಯಾಗುತ್ತದೆ; ಅತಿರೇಕದ ಪರಮಾವಧಿಯೂ ಆಗಿಬಿಡುವುದಿದೆ.
            ಈ ಮಾತು ಬಂದಾಗ ಹೀಗೂ ಅನಿಸತ್ತದೆ, ನಮ್ಮ ಕನ್ನಡಿಗರು ಅಭಿಮಾನಶೂನ್ಯರು ಇಂಗ್ಲೀಷ್ ವ್ಯಾಮೋಹವೇ ಅವರಿಗೆ ಇತರ ಭಾಷೆಯವರಿಗಿಂತಲೂ ಅಧಿಕ. ನಗರದ ಕೆಲವು ವಿದ್ಯಾವಂತ ಕುಟುಂಬಗಳಲ್ಲಿ ಅದೆಷ್ಟು ಹುಚ್ಚು ವ್ಯಾಮೋಹವಾಗಿಯೂ ಆವರಿಸಿಕೊಂಡಿದೆಯೆಂದರೆ, ಅವರ ೨-೩ ವರ್ಷದ ಎಳೆಯ ಮಕ್ಕಳನ್ನೂ ತಮ್ಮ ಮನೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಅಷ್ಟೇಕೆ ದೇವಸ್ಥಾನಗಳಲ್ಲಿಯೂ ಸಹ ಇಂಗ್ಲೀಷ್ ನ ತುಣಕು ಪದಗಳಿಂದಲೇ ಮಾತನಾಡಿಸುತ್ತಾರೆ. ಹಾಗೆ ಚಿಕ್ಕವರಿರುವಾಗಲೆ ಅವರಿಗೆ ಇಂಗ್ಲೀಷ್ ಕಲಿಸಿದರೇನೆ ಮಾತ್ರ ಅವರ ಬದುಕು ಭವಿಷ್ಯ ಉಜ್ವಲವಾಗುತ್ತದೆಂಬ ಭ್ರಮೆ! ತಮ್ಮ ಮಾತೃಭಾಷೆಯಾದ ಕನ್ನಡ ಓದಲು ಬರೆಯಲೂ ಬಾರದಿದ್ದರೂ ಚಿಂತೆಯಿಲ್ಲ ಒಟ್ಟಿನಲ್ಲಿ ಅವರು ಇಂಗ್ಲೀಷ್ ಪಾರಂಗತರಾಗಬೇಕಷ್ಟೇ ಎಂಬ ಧೋರಣೆ! ಅದರಿಂದ ತಮ್ಮಮಕ್ಕಳು ಮಾತೃಭಾಷೆಯ ಅಮೂಲ್ಯವಾದ ಪರಿಜ್ಞಾನದಿಂದ ವಂಚಿತರಾಗುತ್ತಿದ್ದಾರೆ, ಮಕ್ಕಳಿಗೆ ತಾವು ಎಂತಹ ದ್ರೋಹವೆಸಗುತ್ತಿದ್ದೇವೆಂಬುದನ್ನೂ ಅವರು ಯೋಚಿಸಲಾರರು.
           ಇಷ್ಟೆಲ್ಲ ಹೇಳಿದ ಮೇಲೂ ಒಂದು ಮುಖ್ಯವಾದ ಅಂಶವನ್ನು ನಾವುಗಳು ಅಲ್ಲಗೆಳೆಯುವುದು ಸಾಧ್ಯವಿಲ್ಲ. ಆಯಾ ಭಾಷೆಗೆ ಅದರದೇ ಆದ ಪದಭಾಗ್ಯವೆಂಬುದಿದೆ. ಅಂತಹ ಪದ ಒಂದರ ಉಚ್ಛಾರಣಾ ಸ್ವರದಲ್ಲೇ ಅದೇನೋ ಮೋಡಿಯಿದೆ, ಅದರದೇ ಅರ್ಥವಂತಿಕೆಯ ಜೀವಧ್ವನಿಯಿದೆ. ಆದ್ದರಿಂದ, ಆ ಭಾಷೆಯ ಪದವನ್ನೇ ನಾವು ಹಾಗೆ ನಮ್ಮ ಭಾಷೆಯೊಂದಿಗೇ ಬಳಸಿಕೊಳ್ಳುವುದೂ ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯವೇ ಆಗಿಬಿಡುತ್ತದೆ;ನಮಗೇ ಅರಿವಿಲ್ಲದೇ. ಅಂತಹ ಪದಗಳು ನಮ್ಮ ನುಡಿಗೆ ಬಂದ ಭಾಗ್ಯವೂ ಆಗಿರುತ್ತದೆ.
         ಅದಕ್ಕೆ ಉದಾಹರಣೆಯಾಗಿ ಇಂಗ್ಲೀಷ್ ನ ಹಲವಾರು ಪದಗಳನ್ನೂ ಉಲ್ಲೇಖಿಸಬಹುದಾಗಿದೆ. ಮೊದಲನೆಯದಾಗಿ "ಕಂಪ್ಯೂಟರ‍್" ಎಂಬ ಪದವನ್ನೇ ತೆಗೆದುಕೊಳ್ಳಿ, ಅದು ಕೊಡುವ ಜೀವಧ್ವನಿ ಮತ್ತು ಅರ್ಥವ್ಯಾಪ್ತಿ ಕನ್ನಡದ ಗಣಕ ಪದ ಕೊಡಲು ಸಾಧ್ಯವಿಲ್ಲ. (ಕಂಪ್ಯೂರ‍್ ಎಂತಹ ಉನ್ನತ ಮಟ್ಟದ ಸಂಸ್ಕರಣೆಯನ್ನೂ ಗಣಿತ ಮತ್ತು ತಾರ್ಕಿಕ ಘಟಕದಲ್ಲೇ ಮಾಡುತ್ತದೆಯಾದರೂ) ನಮ್ಮ ಜನ "ಕಂಪ್ಯೂಟರ‍್" ಎಂದು ಹೇಳಲು ಇಷ್ಟಪಡುತ್ತಾರೆಯೇ ಹೊರತು "ಗಣಕ" ಎಂದು ಹೇಳುವುದಿಲ್ಲ. ಟಿ.ವಿ. ಎನ್ನುತ್ತಾರೆ ದೂರದರ್ಶನ ಎನ್ನುವುದಿಲ್ಲ. ಮೊಬೈಲ್- ಸೆಲ್ ಫೋನ್‌, ಹ್ಯಾಂಡ್ ಸೆಟ್ ಎಂಬ ಪದಗಳು ಇವುಗಳಿಗೆ ಕನ್ನಡದಲ್ಲಿ ಸಮಾನ ಪದವೊಂದಿರುವುದೇ ಎಂದೇನೂ ತಲೆಕೆಡಿಸಿಕೊಳ್ಳುವುದೇ ಇಲ್ಲ.
          ಇದೆಲ್ಲವೂ ನಮ್ಮ ದಿನಬಳಕೆಯ ರೂಢಿಗತ ಅಭ್ಯಾಸವೂ ಹೌದೆನ್ನಬಹುದಾಗಿದೆ. ಯಾಕೆಂದರೆ, ಈಗಾಗಲೇ ರೂಢಿಯಲ್ಲಿರುವ ಆಯಾ ಪದವನ್ನು ಹಾಗೆಯೆ ಬಳಸಿಕೊಳ್ಳವುದು ನಮಗೆ ಅತ್ಯಂತ ಆಪ್ಯಾಯಮಾನವೆನಿಸಿಬಿಟ್ಟಿರುತ್ತದೆ. ಇದು ಒಂದು ರೀತಿ ಆ ಭಾಷೆಗೆ ಅದರದೇ ಸೋಗಡಿರುವಂತ ಪದಮೋಹವಲ್ಲದೇ ಇನ್ನೇನು!
                ಹಾಗೆಯೇ ನಮ್ಮ ಕನ್ನಡವೂ ತನ್ನದೇ ಪದಭಾಗ್ಯವನ್ನು ಹೊಂದಿದೆ. ಅಂತಹ ಪದ-ಸಂಪದಗಳಿಗೆ ಸಮಾನವಾದ ಇಂಗ್ಲೀಷ್ ಪದಗಳು ದೊರೆತರೂ ಕನ್ನಡದ ಆ ಪದಗಳ ಅರ್ಥವಂತಿಕೆಯನ್ನು ಅವುಗಳಿಗೆ ಸಮಾನವೆನಿಸುವ ಇಂಗ್ಲೀಷ್ ಪದಗಳು ಕೊಡಲಾರವೆಂದೇ ಎಷ್ಟೋ ಸಂದರ್ಭಗಳಲ್ಲಿ ಅನ್ನಿಸಿಬಿಡುತ್ತದೆ. ಉದಾಹರಣೆಗೆ ಕನ್ನಡದ ಪರಾಂಬರಿಕೆ, ಪರಿಗ್ರಹಿಸು, ಕ್ರಿಯಾಶೀಲ, ಜೀವಧ್ವನಿ, ವಿದ್ಯುಕ್ತ, ಅಭಿಜ್ಞಾನ, ಅಪೂರ್ವ, ಅನಿರ್ವಚನೀಯ, ಕರ್ಮ, ಅಪರಕರ್ಮ, ಅನುಸಂಧಾನ.... ಇನ್ನೂ ಬಹಳ ಸಿಗುತ್ತವೆ.. ಆದ್ದರಿಂದ, ಭಾಷಾಂತರ ಮಾಡುವಾಗ ಇಂಗ್ಲೀಷ್‌ ಪದಗಳಿಗೆ ಸಮಾನ ಪದಗಳು ತೃಪ್ತಿಕೊಡದಿದ್ದಾಗ ಅವುಗಳಿಗೆ ಸಮಾನರೂಪದ ಕನ್ನಡ ಪದಗಳ ಜೋಡಣೆ ಮಾಡುವುದು ರೂಢಿಯಲ್ಲಿದೆ; ಅದು ಅನಿವಾರ್ಯವೂ ಆಗುತ್ತದೆಯಷ್ಟೇ; ಭಾಷೆಯ ಓಘಕ್ಕೆ ತಡೆಯೊಡ್ಡದ ರೀತಿಯಲ್ಲಿ ಅವಶ್ಯವೂ ಆಗಿಬಿಡುತ್ತದೆ.
           ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ "ಪದಭಾಗ್ಯ ಹಾಗೂ ನುಡಿಭಾಗ್ಯ" ಎಂಬ ಲೇಖನ ಬಂದಿದೆ. ವಿದ್ವಾಂಸರಾದ ಕೆ.ವಿ.ತಿರುಮಲೇಶ್ ಅವರು, ಪದಭಾಗ್ಯವೆಂದರೇನು ಮತ್ತು ನುಡಿಭಾಗ್ಯವೆಂದರೇನೆಂದು ಬರೆಯುತ್ತಾರೆ. ಭಾಷೆ-ಭಾಷಾಂತರದಲ್ಲಿ ಒಂದು ಸೂಕ್ತ ಪದ ಸಿಗದಿದ್ದಾಗ, ಸಿಗುವ ಪದಗಳು ಕೊಡುವ ಅರ್ಥ ತೃಪ್ತಿಕೊಡದಿರುವಾಗ ಅದಕ್ಕಾಗಿ ಅವರು ಪಟ್ಟ ಪ್ರಾಮಾಣಿಕ ಪರಿಶ್ರಮವನ್ನೂ ಚೆನ್ನಾಗಿ ವಿವರಿಸಿದ್ದಾರೆ. ಭಾಷಾಂತರಕಾರರೆಲ್ಲರೂ ಓದಲೇ ಬೇಕಾದ ಲೇಖನವಿದು.
          ಹೇಳಬೇಕೆಂದರೆ, ಕನ್ನಡದಲ್ಲಿ ಕಂಪ್ಯೂಟರ‍್ ಕಲಿಕೆಗೆಂದೇ ಬಂದಿರುವ ಒಂದೊಂದೂ ಕನ್ನಡ ಪುಸ್ತಕಗಳೂ ಒಂದೊಂದು ರೀತಿಯಲ್ಲಿ ಕಂಪ್ಯೂಟರ‍್ ಪರಿಭಾಷೆಯ ತಾಂತ್ರಿಕ ಪದಗಳಿಗೆ ಕನ್ನಡ ಅನುವಾದವನ್ನು ಕಂಡುಕೊಂಡಿವೆ. ಅವುಗಳಲ್ಲಿ ಕೆಲವಂತೂ ಕನ್ನಡದಲ್ಲಿ ತಾಂತ್ರಿಕ ಶಬ್ದಗಳಿಗೆ ಸಮಾನ ಅಥವಾ ಸಮಾನ ರೂಪದ ಅರ್ಥಕೊಡುವಂಥ ಪದಗಳೇ ಇಲ್ಲವೆಂಬಂತೆ ಕನ್ನಡವನ್ನೇ ಬಡವಾಗಿಸಿವೆ. ಅಯ್ಯೋ, ಕನ್ನಡದಲ್ಲಿ ಕಂಪ್ಯೂಟರ‍್ ಕಲಿಕೆ ಎಂದರೆ ಹೀಗೇಯೆ ಎಂಬಂತೆ ನಗೆಪಾಟಲಿಗೆಡೆಮಾಡಿಕೊಟ್ಟಿವೆ! ಅದಕ್ಕೇ ಕಂಪ್ಯೂಟರ‍್ ನ್ನು ಕಲಿತರೆ ಇಂಗ್ಲೀಷ್ ನಲ್ಲೇ ಎಂದು ಗೊಣಗುವವರಿಗೆ ಇನ್ನಷ್ಟು ಅವಕಾಶಮಾಡಿಕೊಟ್ಟಿವೆ. ಅವುಗಳಿಗೆ ಇನ್ನೂ ಕೆಲವು ಉದಾಹರಣೆಗಳೆದಂದರೆ,
     "ಪ್ರಾಸೆಸಿಂಗ್" ಗೆ ಸಮಾನ ಪದ "ಪ್ರಕ್ರಿಯೆ" ಎಂದರೆ ಅದ್ಹೇಗೆ ಸರಿ?
-ಕ್ರಿಯೆಗೊಂದು ಪ್ರತಿಕ್ರಿಯೆ, ಅಥವಾ ಕ್ರಿಯೆ ಪ್ರಕ್ರಿಯೆಗಳು ಸೇರಿ ಉಂಟಾಗುವುದಿದೆಯಲ್ಲ ಅದೇ "ಪ್ರಾಸೆಸಿಂಗ್"
ಅಂದರೆ "ಸಂಸ್ಕರಣೆ" ಎಂಬುದೇ ಸರಿಯಾದ ಸೂಕ್ತವಾದ ಕನ್ನಡ ಪದ.
      ಇನ್ ಪುಟ್ ಮತ್ತು ಔಟ್ ಪುಟ್ ಗೆ ಸಮಾನ ಪದ ಆಗಮನ ಮತ್ತು ನಿರ್ಗಮನ ಎಂಬ ಪದಗಳು ಸಮಾನವಾಗುವುದಿಲ್ಲ.
      -ಅದಾನ ಮತ್ತು ಪ್ರದಾನ ವೆಂಬುದೇ ಸರಿಯಾದ ಅರ್ಥ ಕೊಡುತ್ತದೆ. ಯಾಕೆಂದರೆ, "ಆಗಮನ" ಕೊಡುವ ಅರ್ಥವನ್ನು
"ಅದಾನ" ಕೊಡುವ ಅರ್ಥದೊಂದಿಗೆ ತೂಗಿ ನೋಡಿದರೆ ನಮಗೇ ತಿಳಿಯುತ್ತದೆ.
-ಆಗಮನ ಎಂದರೆ ಯಾರೊ ಒಬ್ಬರು ಆಗಮಿಸಿದರು ಎಂಬ ಅರ್ಥ. "ಅದಾನ" ಎಂದರೆ ಯಾರೇ ಆಗಲಿ ತನ್ನೊಳಗೇ ತಾನು ಸ್ವೀಕಾರ ಮಾಡುವುದು. ನಿರ್ಗಮನವೂ ಅಷ್ಟೇ. ಯಾರೋ ಒಬ್ಬರು ಹೋದರು ಎಂಬ ಅರ್ಥ.
ಆದರೆ, ಪ್ರದಾನ ಎಂಬುದು ತಾನು ಸ್ವ ಇಚ್ಚೆಯಿಂದ ಕೊಡುವಂತಹದ್ದು ಎಂದಾಗುತ್ತದೆ.

ಅಪ್ಲಿಕೇಷನ್ ಸಾಫ್ಟ್ ವೇರ‍್ ಅಂದರೆ ಅಳವಡಿಕೆಯ ತಂತ್ರಾಂಶ ಸರಿಯೋ ಅನ್ವಯಿಕ ತಂತ್ರಾಂಶ ಸರಿಯೋ ಎಂಬುದನ್ನು ನೋಡೋಣ.
ಅಪ್ಲಿಕೇಷನ್ ಸಾಫ್ಟ್ ವೇರ‍್ ಎಂದರೆ ಯಾವುದೇ ಒಂದು ಆಪರೇಟಿಂಗ್ ಸಿಸ್ಟಂ ವಿಂಡೋಸ್ ,ಲಿನಕ್ಸ್ ಇದ್ದೀತು ಅದಕ್ಕೆಂದೇ ಪ್ರತ್ಯೇಕವಾಗಿ ಅಭಿವೃದ್ದಿಪಡಿಸಿ, ಆ ಆಪರೇಟಿಂಗ್ ಸಿಸ್ಟಂಗೆ ಅಧೀನವಾಗಿದ್ದುಕೊಂಡು ಕೆಲಸಮಾಡುವಂತೆ ಅಳವಡಿಸುವುದಲ್ಲವೇ? ಆದ್ದರಿಂದಲೇ ಅದು ಅಳವಡಿಕೆಯ ತಂತ್ರಾಂಶ.

ಹಾಗಾದರೆ, ಅನ್ವಯಿಕ ತಂತ್ರಾಂಶ ಏಕೆ ಸರಿಯಲ್ಲ? ಯಾವೊಂದು ತಂತ್ರಾಂಶವನ್ನು ಪ್ರತ್ಯೇಕವಾಗಿ ಒಂದು ವೈಯಕ್ತಿಕ ಉಪಯೋಗಕ್ಕೋ ಅಥವಾ ವ್ಯವಹಾರೀಕವಾಗಿ ಬಳಕೆಗೋ ಅವರವರ ಸ್ವಂತ ಅಗತ್ಯಗಳಿಗೆ ಅಥವಾ ಔದ್ಯೋಗಿಕ ಇಲ್ಲವೇ ವ್ಯವಹಾರಿಕ ವಿಷಯಗಳಿಗೆ "ಅನ್ವಯಿಕ" ವಾಗುವಂತೆ ಒಂದು "ಅಳವಡಿಕೆ"ಯ ತಂತ್ರಾಂಶವನ್ನು ಅಭಿವೃದ್ಧಿಪಡಿಸುವು ದೆಂದಾಗುತ್ತದೆ.

ಯಾಕೆಂದರೆ, ಅಂತಹದೊಂದು ತಂತ್ರಾಂಶವು ಸಿದ್ಧವಾದಾಗ ಅದನ್ನು ಯಾವ ಆಪರೇಟಿಂಗ್ ಸಿಸ್ಟಂಗೆಂದೇ ತಯಾರಿಸಲಾಗಿರುತ್ತದೋ ಆ ಆಪರೇಟಿಂಗ್ ಸಿಸ್ಟಂಗೆ ಅಳವಡಿಸುವುದಾಗತ್ತದೆಯಲ್ಲವೇ? ಆದ್ದರಿಂದಲೇ ಅದನ್ನು ಅಳವಡಿಕೆಯ ತಂತ್ರಾಂಶ ಎನ್ನುವುದೇ ಸರಿ, ಆನಂತರವೇ. ಅದು ಯಾವುದಕ್ಕೆ ಅನ್ವಯವಾಗುವಂತ ಅಳವಡಿಕೆಯ ತಂತ್ರಾಂಶ ಎಂದು ಹೇಳುವುದಲ್ಲವೇ..? ಹೀಗೆ ಅರ್ಥವಂತಿಕೆಗೆ ಒತ್ತುಕೊಡುವುದೇ ಪ್ರಾಮುಖ್ಯವೆನಿಸುತ್ತದೆ.
ಈ ಕೆಳಗಿನ ಕೆಲ ಪದಗಳ ಪಟ್ಟಿ ನೋಡಿ-

Application Software= ಅನ್ವಯ ತಂತ್ರಾಂಶ-. ಅಳವಡಿಕೆಯ ತಂತ್ರಾಂಶ
Operating System= ಕಾರ್ಯಾಚರಣೆ ವ್ಯವಸ್ಥೆ- ಸಮಗ್ರ ಕಾರ್ಯಾಚರಣೆಯ ತಂತ್ರಾಂಶ
RAM=ಯಾದೃಚ್ಛಿಕ ಸ್ಮೃತಿ- ಒಟ್ಟಾರೆ ಪರಿಗ್ರಹಿಸಿ ಸಂಗ್ರಹಿಸುವ ಸ್ಮೃತಿ
ALU=ಅಂಕಗಣಿತೀಯ ತಾರ್ಕಿಕ ಘಟಕ ಗಣಿತ ಮತ್ತು ತಾರ್ಕಿಕ ಘಟಕ
Bit=ದ್ವಿಮಾನಕ. ಒಂದನ್ನು ಎರಡಾಗಿ ಮಾಡುವುದೋ ಎಂಬ ಅರ್ಥಕೊಡುವಂತಿದೆ. ಸಂಗ್ರಾಹ್ಯ ಸಾಧನಗಳ ಮೇಲೆ ಗುರುತಿಸಿ ದಾಖಲಿಸುವಂತ ಅತ್ಯಂತ ಕಿರಿದಾದ ಸ್ಥಾನ. ಅಂದರೆ ಒಂದು ಸ್ಥಾನ digit ಎಂಬ ಪದವನ್ನೇ ಉಳಿಸಿಕೊಳ್ಳವುದು ಲೇಸಲ್ಲವೇ?.
Programing language= ಕ್ರಮ ವಿಧಿ ಭಾಷೆ - ಅನುಕ್ರಮ ಸೂಚನಾ ವಿಧಿ ವಿಧಾನಗಳು ಎಂಬ ಪದಗಳು ಕೊಡುವ ಅರ್ಥವಂತಿಕೆಯನ್ನು ನೋಡಿ.

ಕೆಲವೊಮ್ಮೆ ಒಂದು ತಾಂತ್ರಿಕ ಪದ ಏನೆಲ್ಲ ಅರ್ಥಕೊಡುತ್ತದೋ ಅದನ್ನೆಲ್ಲ ಕನ್ನಡದ ಒಂದೇ ಒಂದು ಪದ ಕೊಡುವುದು ಸಾಧ್ಯವಿಲ್ಲದಿರುವ ಸಂದರ್ಭಗಳೇ ಹೆಚ್ಚು ಇರುತ್ತದೆಯಲ್ಲವೇ..? "ಕಂಪ್ಯೂಟರ್" ಎಂಬ ಪದವನ್ನೇ ತೆಗೆದುಕೊಳ್ಳಿ, ಅದು ಕೊಡುವ ಅರ್ಥವ್ಯಾಪ್ತಿ ಕನ್ನಡದ "ಗಣಕ" ಎಂಬ ಪದಕ್ಕಿಂತ ದೊಡ್ಡದಿದೆ. ನಾವು "ಕಂಪ್ಯೂಟರ್" ಎಂದು ಹೇಳುವಾಗ ಅದು ಧ್ವನಿಸುವ ಜೀವಂತಿಕೆ ಅರ್ಥವಿದೆಯಲ್ಲ ಆ ಅರ್ಥವನ್ನು "ಗಣಕ" ಪದ ಕೊಡಲು ಸಾಧ್ಯವಿಲ್ಲವೆನಿಸುತ್ತದೆ; ಅದನ್ನೀಗ ಬಹುಮಂದಿ ಒಪ್ಪಿಕೊಳ್ಳಲು ತಯಾರಿಲ್ಲವೆಂದರೆ ಉತ್ಪ್ರೇಕ್ಷೇಯೇನಿಲ್ಲ!

ನಮಗೆ ತಿಳಿದಿರುವಂತೆ ಕಂಪ್ಯೂಟರ್ ಎಂಬುದು ಉನ್ನತ ಮಟ್ಟದ ತಂತ್ರಜ್ಞಾನ ಆಗಿರುವುದರಿಂದ ಅದಕ್ಕೆ ಸಂಬಂಧಿಸಿದಂತೆ ಮಾಡುವ ಕನ್ನಡ ಮತ್ತು ಇತರ ಭಾಷೆಯೆ ಅನುವಾದವಿರಲಿ ಇನ್ನೂ ಕ್ಲಿಷ್ಟಕರವಾಗಿಯೆ ಉಳಿದಿದೆ. ಆದ್ದರಿಂದ, ಕಂಪ್ಯೂಟರ್ ಆವಿಷ್ಕಾರದಲ್ಲಿ ಹೊರಬಂದ ಅದರ ಕಂಪ್ಯೂಟರ‍್ ಎಂಬ ಹೆಸರೂ ಸೇರಿದಂತೆ ಅದರ ಪರಿಭಾಷೆಯ ಅನೇಕ ಪದಗಳನ್ನೂ ಇದ್ದಹಾಗೆಯೆ ಕನ್ನಡಕ್ಕೆ ಬರಮಾಡಿಕೊಳ್ಳುವುದೂ ಕಂಡು ಬರುತ್ತಿದೆ. ಪ್ರತಿಯೊಂದು ತಾಂತ್ರಿಕ ಪದ ಪದಗಳಿಗೆ ಸಮಾನವಾದ ಕನ್ನಡಪದಗಳನ್ನು ಸೂಚಿಸುವ ಪ್ರಯತ್ನದಲ್ಲಿ, ಅರ್ಥವ್ಯಾಪ್ತಿಯೆ ಪ್ರಾಮುಖ್ಯವೆನಿಸಿದಾಗ ಸಮಾನ ರೂಪದ ಪದಗಳಿಗೆ ಒತ್ತುಕೊಡಲಾಗುತ್ತದೆ.

RAM=ಯಾದೃಚ್ಛಿಕ - ಇಲ್ಲಿ ಸಂಸೃತ ಪದವನ್ನೂ ಬಳಸಿದ್ದಾರೆ. ನಮ್ಮ ಹೊಸಗನ್ನಡದ ವಿಶಿಷ್ಟ ಪದಗಳೇ ಅರ್ಥವಾಗದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿರುವಾಗ ಇಂತಹ ಪದಗಳಿಂದೇನು ಪ್ರಯೋಜನ? ಇವೆಲ್ಲವೂ ಇನ್ನಷ್ಟು ಗೊಂದಲಕ್ಕೀಡು ಮಾಡುತ್ತವೆಯಷ್ಟೇ.. ಹೀಗೆ ಅನುವಾದದಲ್ಲಿ ಉಂಟಾಗುವ ಅಪಭ್ರಂಶ ಪದಗಳ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಸಿಗುತ್ತವೆ.

ಪಿ.ಯು.ಸಿ.ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ "ಕಂಪ್ಯೂಟರ‍್ ವಿದ್ಯಾ" ಎಂಬ ಪುಸ್ತಕವನ್ನು ನೋಡಬೇಕು. ಅದರ ತುಂಬಾ ತಪ್ಪುಗಳೇ ಸಿಗುತ್ತವೆ. ಕಂಪ್ಯೂಟರ‍್ ತಂತ್ರಜ್ಞಾನ ಅರ್ಥವಾಗುವುದರ ಬದಲು ಗೊಂದಲಗಳೇ ಸೃಷ್ಟಿಯಾಗುತ್ತವೆ!
ಈ ಕೆಳಗಿನ ವಾಕ್ಯವನ್ನೇ ನೋಡಿ-

೧) ನಿಮ್ಮ ಕಂಪ್ಯೂಟರ‍್ "ಆನ್" ಮಾಡಲು, ಸಿಪಿಯು ಹಿಂದಿರುವ "ಪವರ್‌ ಸಪ್ಲೈ" ಸ್ವಿಚ್ ಗೆ ಮೊದಲು ಕೇಬಲ್ ಸಂಪರ್ಕಿಸಬೇಕು, ನಂತರ ವಿದ್ಯುತ್ ಆನ್ ಆಗಿರಬೇಕು.

-ಇದನ್ನೇ ಈ ವಾಕ್ಯವನ್ನೇ ಕೆಳಗಿನಂತೆ ಬರೆದರೆ ಹೇಗೆ ನೀವೇ ನೋಡಿ-
ನಿಮ್ಮ ಕಂಪ್ಯೂಟರ‍್ ನ್ನು ವಿದ್ಯಕ್ತವಾಗಿ ಚಾಲನೆಗೊಳಿಸುವುದಕ್ಕಾಗಿ, ಮೊದಲು ಸಿಪಿಯು ಹಿಂಬದಿಗಿರುವ ಪವರ‍್ ಪೋರ್ಟ್ ಗೆ ಪವರ‍್ ಕೇಬಲ್ ನ್ನು ಸೇರಿಸಿರಬೇಕು. ಆನಂತರ, ವಿದ್ಯುತ್ ಸಂಪರ್ಕವೇರ್ಪಡಿಸಲು ಪವರ‍್ ಸಪ್ಲೈ ಸ್ವಿಚ್ ಆನ್ ಮಾಡಬೇಕು.
ಇಲ್ಲಿ ಭಾಷಾಂತರವಷ್ಟೇ ಅಲ್ಲ ತಾಂತ್ರಿಕ ದೋಷವು ಇದೆ ನೋಡಿ-
ಪವರ ಸಪ್ಲೈ ಸ್ವಿಚ್ ಗೆ ಕೇಬಲ್ ಸಂಪರ್ಕಿಸುವುದೆಂದರೇನರ್ಥ ?! ಸ್ವಿಚ್ ಗೂ ಮತ್ತು ಪೋರ್ಟ ಅಥಾವ ಸಾಕೆಟ್ ಗೂ ಇರುವ ವ್ಯತ್ಯಾಸವೇ ಇವರಿಗೆ ತಿಳಿದಿಲ್ಲವಲ್ಲ!

೨) ಕಂಪ್ಯೂಟರ‍್ ಗಳ ಬಳಕೆಯೊಂದಿಗೆ, ನಾವು ಆಶ್ಚರ್ಯಕರವಾದ ವೇಗದಲ್ಲಿ ನಂಬಲಸಾಧ್ಯವಾದ ಪ್ರಮಾಣದ ಲೆಕ್ಕಾಚಾರಗಳನ್ನು ಮಾಡಬಹುದಾಗಿದೆ. ಇದನ್ನು "ಮಾಹಿತಿ ಶೇಖರಣೆಗೆ ಮತ್ತು ಸಂಸ್ಕರಣೆಗೆ" ಒಂದು ಎಲೆಕ್ಟ್ರಾನಿಕ್ ಸಾಧನವೆಂಬಂತೆ ಕಾಣಬಹುದಾಗಿದೆ. ಇದನ್ನೇ ಕೆಳಗಿನಂತೆ ಬರೆದರೆ ಹೇಗೆ ನೀವೇ ನೋಡಿ-
ಕಂಪ್ಯೂಟರ‍್ ಗಳನ್ನು ಬಳಸಿಕೊಂಡು, ನಾವು ನಮಗೆ ಅಸಾಧ್ಯವೆನಿಸುವಂತ ದೊಡ್ಡ ಪ್ರಮಾಣದ ಲೇಕ್ಕಾಚಾರಗಳನ್ನು ಸಹ ಆಶ್ಚರ್ಯಕರವಾದ ವೇಗದಲ್ಲಿ ಮಾಡಬಹುದಾಗಿದೆ.
ಕಂಪ್ಯೂಟರ‍್ ನ್ನು ದತ್ತಾಂಶ ಸಂಸ್ಕರಣೆಗೆ ಮತ್ತು ಮಾಹಿತಿ ಶೇಖರಣೆಗೆ ಒಂದು ಎಲೆಕ್ಟ್ರಾನಿಕ್ ಉಪಕರಣವಾಗಿ ಪರಿಗಣಿಸಲಾಗಿದೆ.
(ಮಾಹಿತಿ ಶೇಖರಣೆಗೆ ಮತ್ತು ಸಂಸ್ಕರಣೆಗೆ ಎಂದಾಗ, ಮಾಹಿತಿಯನ್ನೇ ಸಂಸ್ಕರಿಸುವುದು ಶೇಖರಿಸುವುದೆಂದಾಗುತ್ತದೆಯಲ್ಲವೇ...? ದತ್ತಾಂಶವನ್ನು ಸಂಸ್ಕರಿಸಿದ ಮೇಲೇ ಅದು ಮಾಹಿತಿಯಾಗಿ ಶೇಖರಿಸಲ್ಪಡುವುದಲ್ಲವೇ... ಸಾಧನಕ್ಕೂ ಉಪಕರಣಕ್ಕೂ ಇರುವ ವ್ಯತ್ಸಾಸವೆ ಅನುವಾದಕರಿಗೆ ತಿಳಿದಿಲ್ಲ.

೩) ಸೆಂಟ್ರಲ್ ಪ್ರಾಸೆಸಿಂಗ್ ಯೂನಿಟ್
ಶೇಖರಣಾ ಯೂನಿಟ್ (ಮೆಮೊರಿ)
ಈ ಬಗ್ಗೆ ಈ ವಾಕ್ಯವನ್ನೇ ನೋಡಿ-
"ಮಾಹಿತಿಯನ್ನು ಮತ್ತು ಸೂಚನೆಗಳನ್ನು ಶಾಶ್ವತವಾಗಿ ಉಳಿಸುವ ಪ್ರಕ್ರಿಯೆಯನ್ನು ಶೇಖರಣೆ ಎನ್ನುತ್ತಾರೆ" ಪ್ರಕ್ರಿಯೆಯು ಆರಂಭವಾಗುವ ಮುನ್ನ ಮಾಹಿತಿಯು ಸಿಸ್ಟಮ್ ನೊಳಗೆ ಹಾಕಲ್ಪಟ್ಟಿರಬೇಕು. ಸೆಂಟ್ರಲ್ ಪ್ರಾಸೆಸಿಂಗ್ ಯೂನಿಟ್ ನ್ನು (ಸಿಪಿಯು) ಪ್ರಕ್ರಿಯೆಗೊಳಿಸುವ ವೇಗವು ತೀರಾ ವೇಗವಾಗಿರುವುದರಿಂದ, ಅದೇ ವೇಗದಲ್ಲಿ ಮಾಹಿತಿಯನ್ನು ಸಿಪಿಯು-ಗೆ ಒದಗಿಸಬೇಕು. ವೇಗವಾದ ಉಪಯೋಗಕ್ಕಾಗಿ ಮತ್ತು ಪ್ರಕ್ರಿಯೆಗಾಗಿ, ಮಾಹಿತಿಯು ಮೊದಲು ಶೇಖರಣಾ ಯೂನಿಟ್ ನಲ್ಲಿ ಶೇಖರಿಸಲ್ಪಡುತ್ತದೆ. ಇದು ಮಾಹಿತಿ ಮತ್ತು ಸೂಚನೆಗಳನ್ನು ಶೇಖರಿಸಲು ಸ್ಥಳವನ್ನು ಒದಗಿಸುತ್ತದೆ.
ಇಲ್ಲಿ ನೋಡಿ, "ಪ್ರಕ್ರಿಯೆ" ಎಂಬ ಪದದ ಅರ್ಥವೇ ಭಾಷಾಂತರಕಾರರಿಗೆ ತಿಳಿದಿಲ್ಲ. "ಮಾಹಿತಿ"ಯನ್ನು ಸಿಸ್ಟಮ್ ನೊಳಗೆ ಹಾಕುವುದೆಂದರೇನು?
ಅವರು ಹೇಳಿದ ಮೇಲಿನ ಪ್ಯಾರಾವನ್ನೇ ಹೀಗೆ ಬರೆದರೆ ನೀವೇ ಓದಿ ನೋಡಿ,
ಸಿಸ್ಟಮ್ ಯೂನಿಟ್ ಗೆ ಫೀಡ್ ಮಾಡಿ ದತ್ತಾಂಶವು ಸಿಪಿಯು ವಿನಿಂದ ಪ್ರಕ್ರಿಯೆಗೊಳಪಡುತ್ತದೆ ಮತ್ತು ಸಂಸ್ಕರಿಸಲ್ಪಟ್ಟು ಮಾಹಿತಿಯಾಗುತ್ತದೆ. ಅದೇ ಮಾಹಿತಿಯು ಪ್ರಧಾನ ಸಂಗ್ರಾಹ್ಯ ಸಾಧನವಾದ ಹಾರ್ಡ ಡಿಸ್ಕ್ ಮೇಲೆ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ನಾವು ನೀಡುವ ಸೂಚನೆ ಮತ್ತು ಆದೇಶಗಳಿಂದ ಈಗಾಗಲೇ ಫೀಡ್ ಮಾಡಿದ ದತ್ತಾಂಶವು ಪ್ರಾಸೆಸಿಂಗ್ ನಲ್ಲಿ ಪ್ರಕ್ರಿಯೆಗೊಳಪಡಲು ಅವುಗಳಿಗೆ ಸಂಬಂಧಿಸಿದ ಪ್ರೋಗ್ರಾಮ್ ಕಂಪ್ಯೂಟರ‍್ ಹಾರ್ಡ ಡಿಸ್ಕ್ ಮೇಲೇ ಅನುಸ್ಥಾಪಿಸಲ್ಪಟ್ಟಿರಬೇಕು..

ಪಟ್ಟಿ ಮಾಡುತ್ತಲೇ ಹೋದರೆ ಹೇರಳವಾದ ತಪ್ಪುಗಳು "ಕಂಪ್ಯೂಟರ‍್ ವಿದ್ಯಾ" ಪುಸ್ತಕದ ಪುಟ ಪುಟಗಳಲ್ಲೂ ಸಿಗುತ್ತವೆ; ಗಾಬರಿ ಹುಟ್ಟಿಸುತ್ತವೆ!

Educomp ನಂತ ಹೆಸರಾಂತ ಪ್ರತಿಷ್ಠಿತ ಸಂಸ್ಥೆಯು "ಕಂಪ್ಯೂಟರ‍್ ವಿದ್ಯಾ" ಎಂಬ ಈ ಪುಸ್ತಕವನ್ನು(ಮ್ಯಾಗಸಿನ್ ಸೈಜ್ ನ 120 ಪುಟಗಳ "ಬಣ್ಣದ ಹೊದಿಕೆಯ ಅಂದವಾದ ಪುಸ್ತಕ") ಪದವಿ ಪೂರ್ವ ಶಿಕ್ಷಣಕ್ಕಾಗಿ ಸಿದ್ಧಪಡಿಸಿದೆಯೆಂದರೆ ಏನು ಹೇಳುಬೇಕೋ...ನಮ್ಮ ಕರ್ನಾಟಕ ಗಣಕ ಪರಿಷತ್ ಕೂಡ ಈ ವಿಷಯದಲ್ಲಿ ಮೌನವಾಗಿರುವುದೇಕೋ ತಿಳಿಯದಂತಾಗಿದೆಯಲ್ಲ..! ದಯವಿಟ್ಟು ಪ್ರಾಜ್ಞರು ಶಿಕ್ಷಣ ತಜ್ಞರೂ ಇತ್ತ ಗಮನ ಹರಿಸಬೇಕು.

ತಂತ್ರಜ್ಞಾನದ ತಿಳುವಳಿಕೆಯೊಂದಿಗೆ ಭಾಷಾ ಪ್ರಯೋಗದಲ್ಲಿರುವ ಅನುಭವದ ಕೊರತೆಯೂ ಇಲ್ಲಿ ಪುಸ್ತಕದ ಉದ್ದಕ್ಕೂ ಎದ್ದು ಕಾಣುತ್ತಾ ಹೋಗುತ್ತದೆ.
ಇದನ್ನು ಪಠ್ಯಪುಸ್ತಕವನ್ನಾಗಿ ಓದುತ್ತಿರುವುದು ನಮ್ಮ ಕನ್ನಡ ವಿದ್ಯಾರ್ಥಿಗಳ ದೌರ್ಭಾಗ್ಯವೇ ಸರಿ. ಅಯ್ಯೋ ದೇವರೇ, ನಮ್ಮ ಕನ್ನಡವನ್ನೂ ನಮ್ಮ ವಿದ್ಯಾರ್ಥಿಗಳನ್ನೂ ನೀನೇ ಕಾಪಾಡಬೇಕು!

ಲೇಖಕನಾದಾತನಿಗೆ ಭಾಷೆಯಾವುದಾದರೇನು? ಪದಸಂಪದ ಮತ್ತು ಪದಭಾಗ್ಯಗಳಿರಬೇಕು. ರೂಢಿಯಲ್ಲಿರುವ ನುಡಿಭಾಗ್ಯಗಳ ಪರಿಜ್ಞಾನವೂ ಬೇಕು. ಬರವಣಿಗೆಯಲ್ಲಿ ಅವುಗಳು ಸಹಜವಾಗಿ ಹಾಸುಹೊಕ್ಕಾಗಿ ಬರುತ್ತಿರಬೇಕು. ಅವುಗಳ ಹೊಂದಾಣಿಕೆಯಲ್ಲಿ ಅರ್ಥವಂತಿಕೆಯೇ ಅವನ ಮೂಲ ಮಂತ್ರವಾಗಬೇಕು,ಸಾಮಾನ್ಯರನ್ನೂ ತಲುಪಲು ಸರಳತೆಯಲ್ಲಿ ಗಹನತೆಗಾಗಿಯೆ ಕಠಿಣ ಪರಿಶ್ರಮವಿರಬೇಕು. ಸುಮ್ಮನೆ ಪದಗಳಿಗೆ ಪದಗಳೆಂದು, ಪದಗಳನ್ನಷ್ಟೇ ಹಿಡಿದು ಜಗ್ಗಾಡುವುದಲ್ಲವಲ್ಲ.

ಕನ್ನಡದಲ್ಲಿ ಕಂಪ್ಯೂಟರ‍್ ಪುಸ್ತಕಗಳನ್ನು ಬರೆದಿರುವ ನನ್ನ ಅನುಭವವೂ ಇದೇ ಆಗಿದೆ. ನನ್ನ ಬರಹಗಳಲ್ಲಿ ಅರ್ಥವ್ಯಾಪ್ತಿ ಅರ್ಥವಂತಿಕೆಗಷ್ಟೇ ಪ್ರಾಧಾನ್ಯತೆ ಕೊಟ್ಟಿದ್ದೇನೆ. ಅವು ಉತ್ಕೃಷ್ಠವಾಗಿವೆ ಎಂದೇನೂ ಹೇಳಲಾರೆ. ಆದರೆ, ಕಂಗ್ಲೀಷ್ ಬಳಸಿರುವೆನಾದರೂ ಅರ್ಥವಂತಿಕೆಯ ವಿಷಯದಲ್ಲಿ ನಾನು ಎಲ್ಲೂ ರಾಜಿಮಾಡಿಕೊಂಡಿಲ್ಲವೆಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಅಂತೆಯೆ, ನನ್ನ ಕಂಪ್ಯೂಟರ‍್ ಬೇಸಿಕ್ ಪುಸ್ತಕದ ಲೋಕಾರ್ಪಣೆಯಲ್ಲಿ ಹೀಗೆ ಹೇಳಿದ್ದೇನೆ-
"ನಾಡು ನುಡಿಗೆ ಮೀಸಲಾದ ದೇಶ ಭಾಷೆಗೆ ಮಿಗಿಲಾದ ಜ್ಞಾನದಾಹಿಗಳಿಗೆ-"
ಯಾಕೆಂದರೆ, ನಾವು ನಾಡು ನುಡಿಗೆ ಮೀಸಲಾದವರು. ನಿಜ. ದೇಶ ಯಾವುದಾದರೇನು? ಭಾಷೆ ಯಾವುದಾದರೇನು? ನಮಗೆ ಬೇಕಾಗಿರುವುದೇ ಅದೆಲ್ಲಕ್ಕೂ ಮಿಗಿಲಾದ ಜ್ಞಾನ; ನಾವು ಜ್ಞಾನದಾಹಿಗಳಾಗಬೇಕಷ್ಟೇ.

ಭಾನುವಾರ, ಏಪ್ರಿಲ್ 25, 2010

ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು!!!

ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು!!!

             ಮುಂಗಾರುಮಳೆ ಹಾಡು ಕೇಳದೆ ತುಂಬಾ ದಿನ ಆಗಿದೆ.- ಹೀಗೆಂದು ಅನ್ನಿಸುತ್ತಿದ್ದಂತೆ ಕರ್ಸರ್ Music ಮೇಲೆ ಹೋಗುತ್ತದೆ. ಅಲ್ಲಿ Mungaaru male ಫೈಲ್ ಕ್ಲಿಕ್ ಮಾಡುತ್ತೀರಿ. "ಅನಿಸುತಿದೆ ಯಾಕೋ ಇಂದು " ಹಾಡು ಕೇಳಬೇಕೆನ್ನಿಸುತ್ತದೆ. Anisutide yaako indu ಎಂಬ ಫೈಲ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ ಆಲಿಸುತ್ತೀರಿ.

ಅದೇ ರೀತಿ ಫೋಟೋ ಫೈಲ್ ಗಳಿಗೂ ನಾವು ಸಾದಾರಣವಾಗಿ ಇಂಗ್ಲಿಷ್ನಲ್ಲೇ ಹೆಸರು ಕೊಟ್ಟಿರುತ್ತೇವೆ.- Bayakemane photos, flowers, kids at home, falls ಇತ್ಯಾದಿ, ಇತ್ಯಾದಿ.

              ಈಗ ನೀವು ಸೇವ್ ಮಾಡುವ ಫೈಲ್ ಗಳಿಗೂ ಕನ್ನಡದಲ್ಲೇ ಹೆಸರು ಕೊಡಬಹುದು!!! ಆಶ್ಚರ್ಯವಾಯಿತೇ?. ಇದು ನಿಜ.(ಹಾಗೂ ತುಂಬಾ ಸುಲಭ).ಮೊದಲು ಅಂತರ್ಜಾಲದಿಂದ Google Transliteration IME
ಎಂಬ ಇನ್ ಪುಟ್ ಮೆಥಡ್
ಇಳಿಸಿಕೊಳ್ಳಬೇಕು. ಆ ಜಾಲತಾಣದ ಲಿಂಕ್ ಇಂತಿದೆ- http://www.google.com/ime/transliteration/ .ಈ ಪುಟದಲ್ಲಿ Choose your IME language ನಲ್ಲಿ Kannada ಆಯ್ಕೆ ಮಾಡಿಕೊಂಡು Download Google IME ಕ್ಲಿಕ್ ಮಾಡಿ ಡೌನ್ಲೋಡ್ ಆದ ಫೈಲನ್ನು ರನ್ ಮಾಡಿದರೆ ಮುಗಿಯಿತು. Taskbar ನ notification area ದಲ್ಲಿ (ಬಲಬದಿಯ ಕೆಳ ಮೂಲೆಯಲ್ಲಿ) EN ಎಂದು ಕೂತಿರುತ್ತದೆ. ನಾವು ಯಾವುದಾದರೊಂದು ಕಡೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡಬೇಕೆಂದಾಗ ಈ EN ಮೇಲೆ ಕ್ಲಿಕ್ ಮಾಡಿ KD Kannada ಆಯ್ಕೆ ಮಾಡಿಕೊಂಡು ಟೈಪಿಸಿದರೆ ಕನ್ನಡ ಅಕ್ಷರ ಮೂಡಿಸಬಹುದು. ಇಲ್ಲಿ ಯಾವುದಾದರೂ ಕಡೆ ಎಂದರೆ ಚಾಟ್ ಬಾಕ್ಸ್ ಇರಬಹುದು, ಹೊಸ ಮೇಲ್ ಇರಬಹುದು, ಅಥವಾ ಎಂ.ಎಸ್. ಆಫೀಸ್ ಇರಬಹುದು.

 
                ಈಗ ಮತ್ತೆ Mungaaru male ಗೆ ಹೋಗೋಣ. Mungaaru male ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ Rename ಆಪ್ಶನ್ ಕ್ಲಿಕ್ ಮಾಡಿ. ಈಗ ಬಲಬದಿಯ ಕೆಳ ಮೂಲೆಯಲ್ಲಿರುವ EN ಮೇಲೆ ಕ್ಲಿಕ್ ಮಾಡಿ KD Kannada ಆರಿಸಿಕೊಂಡು ಕನ್ನಡದಲ್ಲೇ "ಮುಂಗಾರು ಮಳೆ" ಎಂದು ಫೈಲ್ ಗೆ ಹೆಸರು ಕೊಡಬಹುದು.!!! ಹೀಗೆ ಯಾವ ಫೈಲ್ ಗೂ ಬೇಕಾದರೂ ಕನ್ನಡದಲ್ಲೇ ಹೆಸರು ಕೊಡಬಹುದು.

                   ನಾನು ಆದಷ್ಟು ಮಟ್ಟಿಗೆ ಸರಳವಾಗಿ ಹೇಳಲು ಪ್ರಯತ್ನಪಟ್ಟು ಬರೆದಿದ್ದೇನೆ. ಮಾಡಿ ನೋಡಿ. ಏನಾಯಿತು ಹೇಳಿ. ನಿಮಗೆ ಈ ವಿಷಯ ಮೊದಲೇ ಗೊತ್ತಿತ್ತಾ? (ಅಥವಾ ನನಗೆ ಗೊತ್ತಾಗಿದ್ದು ಇತ್ತೀಚೆಗಾ?)

ಶನಿವಾರ, ಏಪ್ರಿಲ್ 24, 2010

ಓ ಮನಸೇ

 
ಓ ಮನಸೆಯ ಸಮಾಧಾನ ಅಂಕಣ ನನಗೆ ಬಹು ಪ್ರಿಯವಾದ ಅಂಕಣ. ನಾವು ಕಷ್ಟದಲ್ಲಿದ್ದಾಗ ನಮಗಿಂತಾ ಕಷ್ಟದಲ್ಲಿರುವವರನ್ನು ನೆನೆಸಿದರೆ ನಮ್ಮ ಕಷ್ಟಗಳು ದೊಡ್ಡದಲ್ಲ ಎನಿಸಿಬಿಡುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆ ಕಾರಣಕಾಗಿಯೇನೋ ಅಂಕಣಕ್ಕೆ ಬರೆಯುವ ಓದುಗರ ಸಮಸ್ಯೆಗಳನ್ನು ಓದುತ್ತಿದ್ದರೆ ನಮ್ಮ ಸಮಸ್ಯೆಗಳು ಎಷ್ಟು ಚಿಕ್ಕವು ಸ್ವಲ್ಪ ಮನಸ್ಸು ಮಾಡಿದರೆ ನಾವೇ ಸುಲಭವಾಗಿ ಪರಿಹರಿಕೊಳ್ಳಬಹುದು ಎನಿಸುತ್ತದೆ. ಆ ಕಾರಣದಿಂದಾಗಿಯೇ ನಾನು ತುಂಬಾ ದುಃಖದಲ್ಲಿದ್ದಾಗ, ಖಿನ್ನನಾಗಿದ್ದಾಗ, ಬೇಜಾರಾದಾಗ ಸಮಾಧಾನ ಅಂಕಣ ಓದಲು ಬಯಸುತ್ತೇನೆ. ಓದುಗರು ಕಲಿಸುವ ಪ್ರಶ್ನೆ ಏನೇ ಇರಲಿ, ಅವರ ಸಮಸ್ಯೆಗಳು ಏನೇ ಇರಲಿ ಅದಕ್ಕೆ ಸಿಗುವ ಉತ್ತರದಲ್ಲಿ ಎಲ್ಲರಿಗೂ ಬೇಕಾದ ಒಂದು ಸಮಾಧಾನದ ಮಾತು, ಸಮಸ್ಯೆಗೆ ಪರಿಹಾರ ಗೋಚರವಾಗುತ್ತದೆ.
ಓ ಮನಸೇಯಲ್ಲಿ ಪ್ರಕಟವಾಗುವ ಅನೇಕ ಅಂಕಣಗಳೆಲ್ಲ ಚೆನ್ನಾಗಿದ್ದು, ಇಷ್ಟವಾದರೂ ಯಾವುದಾದರು ಒಂದು ಅಂಕಣ, ಬರಹ ಕಥೆ ನಮ್ಮ ಮನಸಿಗೆ ತುಂಬ ಹತ್ತಿರವಾಗುತ್ತವೆ. ಓ ಮನಸೇಯಲ್ಲಿ ನಿಮಗೆ ಇಷ್ಟವಾದ ಬರಹ, ಅಂಕಣ ಯಾವುದು ಮತ್ತು ಏಕೆ ಎಂಬುದನ್ನು ನಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಿ.

ಶುಕ್ರವಾರ, ಏಪ್ರಿಲ್ 23, 2010

ಅಂತರ್ಜಾಲದಲ್ಲಿ ಕನ್ನಡ ಬಳಕೆಗೆ ಸಹಾಯಕ ಲಿಂಕುಗಳು

ಇದನ್ನು ಬಳಸಿ. ಬರಹದಂತೆ ಸುಲಭವಾಗಿ ಬರೀಬೋದು. transliteration ಕಿರಿಕಿರಿ ಇರಲ್ಲ.
http://type.yanthram.com/kn/

ಹಾಗೆ
ನುಡಿ ತಂತ್ರಾಂಶ ಬಳಕೆ ಯೂನಿಕೋಡ್ ನಲ್ಲಿ
http://www.kagapa.org/

ಮತ್ತು
ಬರಹ ತಂತ್ರಾಂಶ ಬಳಕೆಗೆ ಸಹಾಯ
http://www.baraha.com/

http://www.baraha.com/help/kb/enabling_indian_languages.htm

ನಾನು ಸದ್ಯಕ್ಕೆ Pramukh TypePad ನ ಬಳಸ್ತಿದೀನಿ. ಇದಕ್ಕೆ firefox add-in ಕೂಡ ಇದೆ. ಸುಮ್ನೆ F12 ಒತ್ತಿದ್ರೆ ಕನ್ನಡ ಮತ್ತು ಇಂಗ್ಲಿಷ್ ಮಧ್ಯೆ switch ಆಗ್ತಾ ಇರುತ್ತೆ...in any firefox compose window...ಸಾಧ್ಯ ಆದ್ರೆ ಗೂಗಲ್ ಕೊಟ್ಟು download ಮಾಡ್ಕೊಳಿ. ಸದ್ಯದ version ನಲ್ಲಿ 'ಳ್ಳ' type ಮಾಡಲು ಸ್ವಲ್ಪ ಪ್ರಾಬ್ಲಂ ಇದೆ...ಕಂಪ್ಲೇಂಟ್ ಮಾಡಿದೀನಿ...ಯಾವಾಗ ತಿದ್ತಾರೋ ಗೊತ್ತಿಲ್ಲ.
http://service.vishalon.net/pramukhtypepad.htm

Firefox add-on Pramukh TypePad - Write Gujarati or Hindi or any of 9 Indian Scripts

Attached jpg shows firefox add-on that can be used to write Gujarati / Hinid or other 9 Indian scripts.
I found it very useful.
ಸದ್ಯಕ್ಕೆ ಇವಿಷ್ಟನ್ನು ಬಳಸಿ.

ಗುರುವಾರ, ಏಪ್ರಿಲ್ 22, 2010

ಬೆತ್ತಲೆ ಜಗತ್ತು

 ಬೆತ್ತಲೆ ಜಗತ್ತು ಖ್ಯಾತಿಯ ಪ್ರತಾಪ್ ಸಿಂಹ
ನನ್ನ ಅಚ್ಚು ಮೆಚ್ಚಿನ ಪ್ರತಾಪ್ ಸಿಂಹ ಸಕಲೇಶಪುರ ಸಮೀಪದ ಬಿರಡಹಳ್ಳಿಯವರು. ಹುಟ್ಟಿದ್ದು ಬೇಲೂರು, ಓದಿದ್ದು ಮಂಗಳೂರು, ಇರುವುದು ಬೆಂಗಳೂರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಜೆಸಿ) ಪಡೆದಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅಂಕಣಕಾರ ಹಾಗೂ ಮುಖ್ಯ ುಪಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.
ಪುಸ್ತಕಗಳು:
1. ನರೇಂದ್ರ ಮೋದಿ, ಯಾರೂ ತುಳಿದ ಹಾದಿ
2. ಮಹಮದ್ ಅಲಿ ಜಿನ್ನಾ
3. ಇವಯ್ರಾರು ಗೊತ್ತೇನು, ಇವರ ಕಥೆ ಹೇಳಲೇನು?
4. ಬೆತ್ತಲೆ ಜಗತ್ತು ಅಂಕಣ ಬರಹಗಳ ಒಟ್ಟು ಸಂಪುಟಗಳು 10
ಇವಿಷ್ಟು ಇವರ ಬಹರಗಳು ನನ್ನ ಬಳಿ ಸಂಗ್ರವಿದೆ. ನೀವು ಸಹ ಇವರ ಎಲ್ಲಾ ಕೃತಿಗಳನ್ನು ಕೊಂಡು ಓದಿ. ಇವರ ಅಂತರ್ಜಾಲ ವಿಳಾಸ ಮತ್ತು ಇವರ ಕೆಲವು ಇ-ಸಂಕಲನಗಳು ಪಿ.ಡಿ.ಎಫ್ ನಲ್ಲಿ 

Pop & Remix Kannada Songs

 ಕನ್ನಡ ಪಾಶ್ಚಾತ್ಯ ಸಂಗೀತ
Antarangini – Raghu Dixit
Chin Chinna – An Album by Adi (Emotional Extravaganza from UK) Songmagic new
Love – An album by Suri Songmagic new
Mast Coffee – Raghu Dixit
Neene Bari Neene
One Love – A R Rehaman
Sanihaa – A Warm Love 

ಕನ್ನಡ ರೀಮಿಕ್ಸ್ ಗೀತೆಗಳು
Binkada Singari – The Hi Fi Mix by Giridhar Divan Songmagic new
Current Mix by BJ Bharath & DJ Anoop
Kannada Remix Songs Vol 1- D J Lohi 

ಕನ್ನಡ ಭಾವಗೀತೆಗಳು

ಸೋಮವಾರ, ಏಪ್ರಿಲ್ 19, 2010

ಗುರುವಾರ, ಏಪ್ರಿಲ್ 15, 2010

ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ

www.pressdisplay.com  ನಲ್ಲಿ ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ ಲಭ್ಯವಿದೆ.ಇಲ್ಲಿ ನೋಂದಾಯಿಸಿಕೊಂಡರೆ, ಸೀಮಿತ ಅವಧಿಗೆ ಉಚಿತ ಪ್ರಯೋಗಾರ್ಥ ಸೇವೆ ಲಭ್ಯವಿದೆ. ನಂತರ ಹಣ ಪಾವತಿಸಿ ಚಂದಾದಾರರಾಗಬಹುದು.ಸದ್ಯ ಕನ್ನಡಪತ್ರಿಕೆಗಳ ಪೈಕಿ "ಉದಯವಾಣಿ" ಮಾತ್ರಾ ಲಭ್ಯವಿದೆ.ವಿದೇಶಗಳ ಪತ್ರಿಕೆಗಳೂ ಇಲ್ಲಿ ಲಭ್ಯವಿದೆ.ದೇಶಾವಾರು ರೀತ್ಯ ಪತ್ರಿಕೆಗಳನ್ನು ವಿಭಾಗಿಸಿಟ್ಟಿರುವುದರಿಂದ ಪತ್ರಿಕೆಗಳನ್ನು ಹುಡುಕುವುದು ಸುಲಭ.
 
ಚಿತ್ರ ಬ್ಲಾಗ್‌ಗಳು
ಚಿತ್ರಗಳನ್ನೇ ಪ್ರಧಾನವಾಗಿ ಅಳವಡಿಸಲಾದ ಕನ್ನಡಿಗರ ಬ್ಲಾಗುಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ.ಉದಯವಾಣಿ ಓದುಗರಿಗೆ ಚಿರಪರಿಚಿತರಾದ ಆಸ್ಟ್ರೋ ಮೋಹನ್ ಅವರ ಚಿತ್ರ ಬ್ಲಾಗು ವಿಳಾಸದಲ್ಲಿ ಲಭ್ಯವಿದೆ. ಕಾಸರಗೋಡಿನ www.astromohan.blogspot.com ವೃತ್ತಿಪರ ಛಾಯಾಗ್ರಾಹಕ ಹರೀಶ್ ಹಳೆಮನೆ ಅವರ ಬ್ಲಾಗ್ ವಿಳಾಸ http://www.drishyaphotos.blogspot.com ವಾದರೆ ತಂತ್ರಜ್ಞ ಪಾಲಚಂದ್ರರ ಬ್ಲಾಗ್ http://palachandra.blogspot.com/ ನಲ್ಲಿದೆ. ಪಾಲಚಂದ್ರರ ಅನುಭವ ಮಂಟಪದಲ್ಲಿ ಛಾಯಾಚಿತ್ರಗಳನ್ನು ತೆಗೆಯುವುದು ಹೇಗೆ ಎಂಬ ತಂತ್ರಗಳನ್ನು ಚರ್ಚಿಸಿ, ಸೋದಾಹರಣ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. 

ವಿದ್ಯುತ್ ಸಂಪರ್ಕದ ಮೂಲಕವೂ ಕಂಪ್ಯೂಟರ್ ಮಾಹಿತಿ ಕದಿಯಬಹುದು

ಬ್ಯಾಂಕ್ ಮತ್ತಿತರ ಖಾತೆಗಳನ್ನು ಆನ್‌ಲೈನಿನಲ್ಲಿ ಸಂಪರ್ಕಿಸಿದಾಗ,ಪಾಸ್‌ವರ್ಡ್ ಕೇಳುವ ಮೂಲಕ,ಭದ್ರತೆ ನೀಡುವುದು ಸಾಮಾನ್ಯ. ಆದರೆ ಬಳಕೆದಾರ ಯಾವ ಕೀಲಿಗಳನ್ನು ಕುಟ್ಟಿದ್ದ ಎಂಬುದನ್ನು ದಾಖಲಿಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲೆ ಹಾಕಿಡುವ ಮೂಲಕ,ಅಂತಹ ಮಾಹಿತಿಯನ್ನು ಕದಿಯುವವರಿದ್ದಾರೆ. ಮಾಹಿತಿ ಕದಿಯಲು ಕಂಪ್ಯೂಟರ್‌ನ ವಿದ್ಯುತ್ ಸಂಪರ್ಕವನ್ನು ಬಳಸಬಹುದೇ ಎಂಬುದನ್ನು ಸಂಶೋಧಕರು ಪ್ರಯತ್ನಿಸಿ,ಯಶ ಕಂಡಿದ್ದಾರೆ.ಕಂಪ್ಯೂಟರಿನ ಕೀಲಿ ಮಣೆಯನ್ನು ಕಂಪ್ಯೂಟರಿಗೆ ಸಂಪರ್ಕಿಸಲು PS/2 ಕೇಬಲ್ ಬಳಸುವುದಿದೆ.ಇದರಲ್ಲಿ ಆರು ತಂತಿಗಳು ಇರುತ್ತವೆ. ಈ ತಂತಿಗಳಿಗೆ ಹೆಚ್ಚು ಸುರಕ್ಷಾ ಕವಚವೂ ಇಲ್ಲ. ಹೀಗಾಗಿ ಒಂದು ತಂತಿಯಲ್ಲಿ ಹರಿಯುವ ವಿದ್ಯುತ್ ಏರುಪೇರಾದರೆ, ಉಳಿದವಲ್ಲೂ ಅದು ಪರಿಣಾಮ ಬೀರುತ್ತದೆ. ಇದರಲ್ಲಿರುವ ಒಂದು ತಂತಿ ಭೂಮಿಗೆ ಸಂಪರ್ಕಿಸುವ ಅರ್ಥ್ ತಂತಿ. ಹೀಗಾಗಿ ಕಂಪ್ಯೂಟರಿನ ವಿದ್ಯುತ್ ಸಾಕೆಟಿನ ತಂತಿಗೆ ಸಂಪರ್ಕ ಹೊಂದುತ್ತದೆ.ಕೀಲಿ ಮಣೆಯನ್ನು ಕುಟ್ಟಿದಾಗ ಉಂಟಾಗುವ ವಿದ್ಯುತ್ ಪ್ರವಾಹದಲ್ಲಿನ ವ್ಯತ್ಯಾಸ, ಅರ್ಥ್ ತಂತಿಯಲ್ಲೂ ಪರಿಣಾಮ ಬೀರುತ್ತದೆ.ಇದನ್ನು ಓಸಿಲೋಸ್ಕೋಪ್ ಸಾಧನದ ಸಹಾಯದಿಂದ ಪರಿಶೀಲಿಸಿ,ಯಾವ ಕೀಲಿಯನ್ನು ಒತ್ತಲಾಯಿತು ಎಂದು ಊಹಿಸಲು ಸಂಶೋಧಕರಿಗೆ ಸಾಧ್ಯವಾಯಿತು. ಇದನ್ನು ಕಂಪ್ಯೂಟರಿನಿಂದ ಹತ್ತು-ಹದಿನೈದು ಮೀಟರ್ ದೂರದಿಂದಲೂ ಮಾಡಬಹುದು. ಖದೀಮರು ಮನಸ್ಸು ಮಾಡಿದರೆ,ಮಾಹಿತಿ ಕದಿಯಲು ಹಲವು ದಾರಿಗಳಿವೆ ಎನ್ನುವುದನ್ನು ಬಳಕೆದಾರರು ಗಮನದಲ್ಲಿಡಬೇಕು.
 
ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ
ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು.ಆದರೆ http://www.arvindguptatoys.com ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.
ವಿದ್ಯುತ್,ಮೋಟಾರು-ಜನರೇಟರುಗಳು,ಖಗೋಳ ಶಾಸ್ತ್ರ,ಜೀವಶಾಸ್ತ್ರ,ಗಣಿತ,ಗಾಳಿ ಮತ್ತು ನೀರು,ತಿರುಗುವ ಆಟಿಕೆಗಳು,ಹಾರುವ ಆಟಿಕೆಗಳು,ಕಸದಿಂದ ಆಟಿಕೆಗಳು ಹೀಗೆ ಹಲವಾರು ಗುಂಪಿಗೆ ಸೇರಿದ ಆಟಿಕೆಗಳನ್ನು ಅದು ಹೇಗೆ ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಬಹುದು ಎನ್ನುವ ವಿವರಗಳನ್ನಿಲ್ಲಿ ಚಿತ್ರ ಸಹಿತವಾಗಿ ನೀಡಲಾಗಿದೆ.ವಿವರಣೆಯೂ ಇದೆ. ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲು ಸುಲಭವಾಗಿಸುವ ತಂತ್ರಗಳು ಇಲ್ಲಿವೆ.ಹಿರಿ-ಕಿರಿಯರಿಗೆ ಆಸಕ್ತಿ ಹುಟ್ಟಿಸುವ ಪ್ರಯೋಗಗಳನ್ನು ಮಾಡುವ ಸುಲಭ ವಿಧಾನ ಅರವಿಂದ ಗುಪ್ತರ ತಾಣದಲ್ಲಿ ಲಭ್ಯ.
ಐಐಟಿ ಖರಗ್‌ಪುರದಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅರವಿಂದ್‌ಗುಪ್ತಾರು ಪುಣೆಯ ಟೆಲ್ಕೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.ಜಯಂತ್ ನಾರ್ಳೀಕರ್ ಅವರ ಪ್ರೋತ್ಸಾಹದೊಂದಿಗೆ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಆಟಿಕೆ ತಯಾರಿಸುವುದು ಹೇಗೆನ್ನುವುದರತ್ತ ಚಿಂತಿಸಲು ತೊಡಗಿದ ಅರವಿಂದ್,ಈಗ ಅಂತಹ ನೂರಾರು ಆಟಿಕೆಗಳನ್ನು ಮಾಡುವುದು ಹೇಗೆನ್ನುವುದನ್ನು ಕಂದುಕೊಂಡಿದ್ದಾರೆ.ಹಲವಾರು ಪುಸ್ತಕಗಳನ್ನೂ ಬರೆದಿರುವ ಗುಪ್ತ,ತಮ್ಮ ತಾಣದಲ್ಲಿ ನೂರಾರು ಪುಸ್ತಕಗಳ ಕೊಂಡಿಗಳನ್ನೂ ಹಂಚಿಕೊಂಡಿದ್ದಾರೆ.ಅಗ್ಗದ ಮನೆ ನಿರ್ಮಾಣ ಮಾಡುವ ವಿಧಾನಗಳ ಬಗ್ಗೆ ಲಾರೀ ಬೇಕರ್ ಅವರು ಬರೆದಿರುವ ಪುಸ್ತಕಗಳೂ ಇಲ್ಲಿವೆ.ಇಂಗ್ಲಿಷ್ ಮಾತ್ರವಲ್ಲದೆ,ಮರಾಠಿ ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊಂಡಿಗಳೂ ಇಲ್ಲಿವೆ. ಪುಸ್ತಕಗಳು ಡೌನ್‌ಲೋಡಿಗೂ ಲಭ್ಯ.ಬೇಕೆಂದರೆ ಮನಿ ಆರ್ಡರ್ ಕಳಿಸಿ,ಪುಸ್ತಕಗಳನ್ನು ತರಿಸಿಕೊಳ್ಳಬಹುದು.ಪುಣೆಯಲ್ಲಿ ಆಟಿಕೆ ತಯಾರಿಕಾ ಘಟಕವನ್ನೂ ಗುಪ್ತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ಈ ತಾಣದಲ್ಲಿ ಹಲವಾರು ವೀಡಿಯೋಗಳ ಕೊಂಡಿಗಳೂ ಇರುವುದು ಇನ್ನೊಂದು ವಿಶೇಷ.ಆಟಿಕೆಗಳನ್ನು ತಯಾರಿಸುವ ವಿಧಾನವನ್ನು ತೋರಿಸುವ ವಿಡಿಯೋ ಕ್ಲಿಪ್ಪಿಂಗ್‌ಗಳಿಲ್ಲಿ ಧಾರಾಳ ಇವೆ. ಜತೆಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪ್ರಸಿದ್ಧ ವ್ಯಕ್ತಿಗಳ ಅನಿಸಿಕೆ,ಸಾಕ್ಷ್ಯಚಿತ್ರಗಳೂ ಇಲ್ಲಿವೆ.
-------------------------------------
ಅನಾವರಣಗೊಂಡಿರುವ ಸ್ಪೆಸಿಫೈ
ಅಂತರ್ಜಾಲವನ್ನು ಬಳಸಿಕೊಳ್ಳುವುದನ್ನು ಸುಲಭವಾಗಿಸುವ ಶೋಧ ಸೇವೆಯಲ್ಲಿ ಬಿಂಗ್ ಹೊಸ ಮಜಲನ್ನು ತೆರೆದು,ಗೂಗಲ್‍ಗೆ ಸ್ಪರ್ಧೆ ನೀಡುತ್ತಿದೆ. ಈಗ ಸ್ಪೆಸಿಫೈ ಎನ್ನುವ ತಾಣದ ಸರದಿ. ಹುಡುಕು ಪದಕ್ಕೆ ಅನ್ವಯಿಸುವ ತಾಣಗಳ ದೃಶ್ಯ ಮುನ್ನೋಟವನ್ನು ನೀಡುವುದು ಈ ಶೋಧ ಸೇವೆಯ ಹೊಸತನ. ವಿವಿಧ ತಾಣಗಳ ಪಕ್ಷಿನೋಟ ನೀಡಿ, ಪ್ರತಿ ನೋಟವನ್ನೂ ಕ್ಲಿಕ್ಕಿಸಿದರೆ ಬೇರೆ ಬೇರೆ ತಾಣಗಳಿಗೆ ಸಾಗುವ ಅನುಕೂಲತೆ ಇಲ್ಲಿದೆ.
-----------------------------------------------
ಮನರಂಜನೆಯ ಜತೆ ಮಾರ್ಕೆಟಿಂಗ್
ಸೆಕೆಂಡ್‌ಲೈಫ್,ಸಿಮ್ಸಿಟಿ ಮೊದಲಾದ ಅಂತರ್ಜಾಲ ತಾಣಗಳು ಮಿಥ್ಯಾಪ್ರಪಂಚದ ಅನುಭವ ನೀಡುವ ಮೂಲಕ ವಿಶಿಷ್ಟವಾಗಿವೆ.ಈ ತಾಣಗಳು ಮನರಂಜನೆಗೆಂದೇ ಬಳಸಲ್ಪಡುವುದು ಹೆಚ್ಚು.ಈ ಮೂಲಕವೇ ಜನಪ್ರಿಯವಾಗಿರುವ ಕಾರಣ, ಈ ತಾಣಗಳು ದೊಡ್ದ ದೊಡ್ಡ ಕಂಪೆನಿಗಳನ್ನೂ ಆಕರ್ಷಿಸುತ್ತವೆ. ಮೂರು ಆಯಾಮದಲ್ಲೂ ಅಂತರ್ಜಾಲ ತಾಣವನ್ನು ರಚಿಸಲು ತಂತ್ರಾಂಶ ತಜ್ಞರ ಅವಶ್ಯಕತೆ ಇದೆ. ಹಾಗಾಗಿ ಸೆಕೆಂಡ್‌ಲೈಫ್ ಅಂತಹ ತಾಣಗಳಿಗೆ ಸೂಕ್ತವಾದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವ ಸೇವೆ ನೀಡುವ ಕಂಪೆನಿಗಳೂ ಹುಟ್ಟಿಕೊಂಡಿವೆ. ಸೆಕೆಂಡ್‌ಲೈಫ್ ತಾಣದ ಮೂಲಕ ಸಮಾವೇಶ,ಕಾನ್ಫರೆನ್ಸ್,ತರಗತಿಗಳನ್ನು ನಡೆಸುವುದು ಸಾಧ್ಯ.ಐಬಿಎಂ,ವಿಪ್ರೋ,ಇಂಟೆಲ್ ಅಂತಹ ಕಂಪೆನಿಗಳು ಮಾತ್ರವಲ್ಲದೆ ಪಾರ್ಚೂನ್ ಪಟ್ಟಿಯಲ್ಲಿ ಸೇರಿರುವ ಒಂದು ಸಾವಿರ ಪ್ರತಿಷ್ಠಿತ ಕಂಪೆನಿಗಳೂ ಇಲ್ಲಿ ಕಾಣಿಸಿಕೊಂಡಿವೆ.ಅರ್ಕುಟ್,ಫೇಸ್‌ಬುಕ್‌ಗಳಂತೆ ಸೆಕೆಂಡ್‌ಲೈಫಿನಲ್ಲೂ ಜನ ಸಮುದಾಯಗಳು ಇವೆ.
----------------------------------
ಸತ್ತ ಸುದ್ದಿ ನೀಡಿ ಜನಪ್ರಿಯವಾದ ಟಿಎಂಜೆಡ್
ಪಾಪ್ ಸಂಗೀತದ ಮೇರು ವ್ಯಕ್ತಿಯಾದ ಮೈಕೆಲ್ ಜಾಕ್ಸನ್ ಅವರ ನಿಧನದ ಸುದ್ದಿ ನೀಡಿ ಸುದ್ದಿ ಮಾಡಿದ ಟಿಎಮ್‌ಜೆಡ್ www.TMZ.com ಅಂತರ್ಜಾಲ ತಾಣ ಬಹುಪ್ರಚಾರ ಪಡೆದುಕೊಂಡಿತು.ಟೈಮ್-ವಾರ್ನರ್ ಗುಂಪಿನ ಈ ತಾಣವೇ ಮೈಕೆಲ್ ಜಾನ್ಸನ್ ಅವರು ಆಸ್ಪತ್ರೆ ಸೇರಿದ ಮತ್ತು ಬಳಿಕ ನಿಧನರಾದ ಸುದ್ದಿಯನ್ನು ಮೊದಲಿಗೆ ನೀಡಿತು. ಉಳಿದ ತಾಣಗಳು ಮತ್ತು ಮಾಧ್ಯಮಗಳು ಟಿಎಂಜೆಡ್ ನೀಡಿದ ಸುದ್ದಿಯ ಆಧಾರದಲ್ಲೇ ತಮ್ಮ ಸುದ್ದಿಯನ್ನು ಬಿತ್ತರಿಸಿದುವು.ಅದೇ ರೀತಿ ಮೈಕೆಲ್ ಜಾಕ್ಸನ್ ಸುದ್ದಿಯ ಚರ್ಚೆ ಮಾಡಲು ಜನರು ಬಳಸಿಕೊಂಡ ಮಾಧ್ಯಮಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ಗಳೂ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸಿದುವು. ಯಾಹೂ ತಾಣವು ಹದಿನಾರು ದಶಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಪಡೆದು ದಾಖಲೆ ನಿರ್ಮಿಸಿತು.ಯುಟ್ಯೂಬ್ ತಾಣವು ಮೈಕೆಲ್ ಜಾಕ್ಸನ್ ಅವರ ಹಾಡಿನ ವಿಡಿಯೋ ಕ್ಲಿಪ್ಪಿಂಗ್‍ಗಳನ್ನು ವೀಕ್ಷಿಸಲು ಬಯಸುವ ಜನರಿಂದಲೆ ಅತ್ಯಂತ ಹೆಚ್ಚು ಹಿಟ್‌ಗಳನ್ನು ಪಡೆಯಿತು.ಗೂಗಲ್ ಶೋಧ ಸೇವೆಯೂ ಮೈಕೆಲ್ ಜಾಕ್ಸನ್ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಲು ಬಯಸುವವರ ಅಂತರ್ಜಾಲಿಗರಿಂದ ತುಂಬಿತು.
-----------------------------------------------
ಒಂದೇ ದೂರವಾಣಿ ಸಂಖ್ಯೆ ನೀಡುವ ಗೂಗಲ್ವಾಯಿಸ್
ನಿಮ್ಮ ಲ್ಯಾಂಡ್‌ಲೈನ್,ಸೆಲ್‌ಫೋನ್,ಎಸೆಮ್ಮೆಸ್ ಹೀಗೆ ಎಲ್ಲಾ ದೂರವಾಣಿ ಯಂತ್ರಗಳ ಸೇವೆಯನ್ನು 415-555-1212 ಅಂತಹ ಒಂದೇ ಸಂಖ್ಯೆಯ ಮೂಲಕ ಪಡೆಯಬೇಕೇ? ಗೂಗಲ್ ವಾಯಿಸ್ ಇಂತಹ ವಿನೂತನ ಸೇವೆ ನೀಡುತ್ತಿದೆ. ನಿಮಗೆ ಕರೆಗಳನ್ನು ಬೇಕಾದಲ್ಲಿ ಪಡೆಯುವ,ಮುದ್ರಿಸಿಕೊಳ್ಳುವ,ಅವುಗಳ ಬಗ್ಗೆ ಎಸೆಮ್ಮೆಸ್ ಮೂಲಕ ಸೂಚನೆ ಪಡೆಯುವ,ಲಭ್ಯವಿಲ್ಲದಾಗ ಕರೆ ಮಾಡಿದವರಿಗೆ ಈ ಬಗ್ಗೆ ತಿಳಿಸುವ ಹಲವರು ವೈವಿಧ್ಯಮಯ ಸೇವೆಯನ್ನು ಗೂಗಲ್ ವಾಯಿಸ್ ಮೂಲಕ ಪಡೆಯಬಹುದು. ಸದ್ಯ ಆಹ್ವಾನಿತರಿಗೆ ಮಾತ್ರಾ ಸೇವೆ ಲಭ್ಯವಿದ್ದು,ಸೇವೆಗೆ ಶುಲ್ಕವಿಲ್ಲ. http://www.google.com/googlevoice/about.htmlನಲ್ಲಿ ಇಚ್ಛಿಸಿದವರು ನೋಂದಾಯಿಸಿಕೊಂಡರೆ, ಸೇವೆಯ ಬಗ್ಗೆ ಆಹ್ವಾನ ದೊರೆಯುತ್ತದೆ.
 

ಕಂಪ್ಯೂಟರ್ ಚಾಲೂ ಆಗಲು ಕಾಯಬೇಕಿಲ್ಲ!

ಕೋಣೆಯ ವಿದ್ಯುದ್ದೀಪದ ಸ್ವಿಚ್ ಹಾಕೊದೊಡನೆ ಬೆಳಗುತ್ತದೆ. ಟಿವಿಯ ರಿಮೋಟ್ ಅದುಮಿದ ಕೆಲ ಕ್ಷಣಗಳಲ್ಲೇ, ಟಿವಿ ಶುರು. ಆದರೆ ಕಂಪ್ಯೂಟರ್ ಮಾತ್ರಾ ಆಮೆಗತಿಯಲ್ಲೇ ಚಾಲೂ ಆಗುತ್ತದೆ. ಹೊಸದರಲ್ಲದು ಸ್ವಲ್ಪ ಚುರುಕಾಗಿದ್ದರೂ,ನೀವು ಹೆಚ್ಚು ಹೆಚ್ಚು ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದರೆ,ಅದು ನಿಧಾನವಾಗುತ್ತಾ ಹೋಗುತ್ತದೆ.ಇದಕ್ಕೆ ಪರಿಹಾರವೇನು? ಸ್ಪ್ಲಾಶ್-ಟಾಪ್ ಎಂಬ ಕಂಪೆನಿಯು ಕಂಪ್ಯೂಟರನ್ನು ದಿಡೀರ್ ಆಗಿ ಚಾಲೂ ಆಗಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಕಂಪ್ಯೂಟರ್ ತಯಾರಕ ಕಂಪೆನಿಗಳಾದ ಏಸರ್,ಲೆನೊವೋ,ಎಚ್‌ಪಿ,ಎಲ್‌ಜಿಇವರುಗಳ ಜತೆ ಸಹಭಾಗಿತ್ವದಲ್ಲಿ ಅವರುಗಳ ನೆಟ್‌ಬುಕ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಿ ಈ ತಂತ್ರಜ್ಞಾನವನ್ನು ನೀಡಲಾಗುತ್ತಿದೆ.ಸದ್ಯ ದಶಲಕ್ಷ ಕಂಪ್ಯೂಟಿಂಗ್ ಸಾಧನಗಳಲ್ಲಿ ಬಳಕೆದಾರರು ಸ್ಪ್ಲಾಶ್‌ಟಾಪನ್ನು ಬಳಸಿ,ಲಾಭ ಪಡೆಯುತ್ತಿದ್ದಾರೆ.ಏಸರ್ ಮತ್ತು A.S.U.S. ಡೆಸ್ಕ್‌ಟಾಪ್‌ಗಳಲ್ಲೂ ತಕ್ಷಣ ಚಾಲೂ ಸೌಲಭ್ಯ ಸಿಗುತ್ತದೆ.

ಸ್ಪ್ಲಾಶ್‌ಟಾಪ್ ಒಂದು ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಂತೆಯೇ ರೂಪಿಸಲಾದ ತಂತ್ರಾಂಶ.ಈ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಯೇ ಕೊಟ್ಟಿದ್ದರೆ ಅದನ್ನು ಬಳಸಲು ಬರುತ್ತದೆ.ನಿಗದಿತ ಬಟನ್ ಒತ್ತಿದೊಡನೆ,ಬಯೋಸಿನಿಂದ ಈ ತಂತ್ರಾಂಶ ಲೋಡ್ ಆಗಿ,ತೆರೆಯನ್ನು ತೋರಿಸುತ್ತದೆ.ಸ್ಪ್ಲಾಶ್‌ಟಾಪ್ ಬ್ರೌಸರ್ ತಂತ್ರಾಂಶವು ಒಡನೆಯೇ ಲಭ್ಯವಾಗುವುದರಿಂದ ಅಂತರ್ಜಾಲ ಸಂಪರ್ಕ ತಕ್ಷಣ ಲಭ್ಯವಾಗುತ್ತದೆ.ಹಾಗಿಲ್ಲದೆ ವಿಂಡೋಸ್,ಲಿನಕ್ಸ್ ವ್ಯವಸ್ಥೆ ಬೇಕಿದ್ದರೆ, ಮೊದಲ ಸ್ಕ್ರೀನಿನಲ್ಲಿಯೇ ಅವುಗಳನ್ನು ಆಯ್ದುಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.ನಾವು ಅನುಸ್ಥಾಪಿಸುವ ತಂತ್ರಾಂಶಗಳು ವಿಂಡೋಸ್,ಲಿನಕ್ಸ್ ವ್ಯವಸ್ಥೆಯಲ್ಲಿ ಸಿಗುವುದರಿಂದ,ಸ್ಪ್ಲಾಶ್‌ಟಾಪ್ ನಿಧಾನವಾಗುತ್ತಾ ಹೋಗುವುದಿಲ್ಲ.ಇನ್ನು ಮುಂದೆ,ಮೊದಲ ಪುಟದಲ್ಲೇ ಶೋಧಪುಟವನ್ನು ಪ್ರದರ್ಶಿಸಿ,ಬಳಕೆದಾರರು ಜಾಲಾಡಲು ಅನುಕೂಲ ಕಲ್ಪಿಸಲು ಕಂಪೆನಿ ಯೋಜಿಸುತ್ತಿದೆ. ಇದಕಾಗಿ ಯಾಹೂವಿನಂತಹ ಶೋಧ ಸೇವೆಗಳ ಜತೆ ಒಪ್ಪಂದ ಮಾಡಿಕೊಂಡು,ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪೆನಿ ನಿರ್ಧರಿಸಿದೆ. ಈಗೀಗ ಬಳಕೆದಾರರು ಶೋಧ ಪುಟದಲ್ಲಿ ತಮಗೆ ಬೇಕಾದ ಶಬ್ದವನ್ನು ಟೈಪಿಸಿ,ಅಲ್ಲಿ ಬರುವ ಕೊಂಡಿಗಳನ್ನು ಕ್ಲಿಕ್ಕಿಸಿ,ಮುಂದುವರಿಯುವ ಹವ್ಯಾಸವನ್ನು ಹೊಂದಿರುವುದರಿಂದ ಈ ಅನುಕೂಲ ಕಲ್ಪಿಸಲು ಕಂಪೆನಿ ಚಿಂತಿಸಬೇಕಾಗಿದೆ.

ಯುಟ್ಯೂಬಿನ ಶೈಕ್ಷಣಿಕ ಚಾನೆಲ್

ಯುಟ್ಯೂಬ್ ವಿಡಿಯೋ ತುಣುಕುಗಳನ್ನು ಒದಗಿಸಿ,ಅಂತರ್ಜಾಲ ಬಳಕೆದಾರರ ಮನಗೆದ್ದ ಗೂಗಲ್ ತಾಣ. ಈಗದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಚಾನೆಲನ್ನು ಆರಂಭಿಸಿದೆ.ಇದರಲ್ಲಿ ವಿಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳ ಉಪನ್ಯಾಸಗಳ ವಿಡಿಯೋ ತುಣುಕುಗಳು ಲಭ್ಯವಿವೆ. ಇವನ್ನು www.youtube.com/eduನಲ್ಲಿ ಪಡೆಯಬಹುದು. ಎಂಐಟಿ,  ಸ್ಟಾನ್‌ಫರ್ಡ್, ಕೊಲಂಬಿಯಾ, ಕಾರ್ನೆಲ್, ಡ್ಯೂಕ್, ಹಾವರ್ಡ್,ಯಾಲೆ, ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರುಗಳ ಉಪನ್ಯಾಸಗಳು ವಿವಿಧ ವಿಷಯಗಳ ಮೇಲೆ ಲಭ್ಯವಿವೆ. ದಂತವೈದ್ಯಕೀಯದ ಬಗ್ಗೆ ಮಿಚಿಗನ್ ವಿವಿಯ 426 ವಿಡಿಯೋಗಳಿವೆ. ಅಮೆರಿಕಾದ ವಿದ್ಯಾರ್ಥಿಗಳು ತಮ್ಮ ಕೋರ್ಸಿನ ಕೆಲವು ವಿಷಯಗಳನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ಪಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಶೈಕ್ಷಣಿಕ ವೆಚ್ಚ ತಗ್ಗಿಸಲು ಈ ರೀತಿ ಕಲಿಯುವುದು ಸಹಾಯಕವಾಗುತ್ತದೆ.ಇಲ್ಲವಾದರೆ ತರಗತಿಗೆ ಹಾಜರಾಗಲು ದೂರದಿಂದ ಪ್ರಯಾಣಿಸಿ,ಸಮಯ-ಪ್ರಯತ್ನ ಮತ್ತು ಹಣ ಇವನ್ನು ವ್ಯಯಿಸಬೇಕಾಗುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.

ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!

ಎಸೆಮೆಸ್ ಸಂದೇಶ,ಮಿಂಚಂಚೆ ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!
ಕಚೇರಿಯಿಂದ ಯಾವುದೋ ಕಾರಣಕ್ಕೆ ಹೊರಬಂದು ಮಳೆಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಚೇರಿಗೆ ಹೋಗಲಾಗುತ್ತಿಲ್ಲವೇ?ಕಚೇರಿಯ ಕಂಪ್ಯೂಟರನ್ನು ಬಂದು ಮಾಡಿಲ್ಲವೇ? ಕಚೇರಿಗೆ ಕರೆ ಮಾಡಿದರೆ,ನಿಮ್ಮ ಅಕ್ಕಪಕ್ಕ ಕುಳಿತುಕೊಳ್ಳುವವರೂ ಕಚೇರಿ ಬಿಟ್ಟಿದ್ದಾರೆಯೇ? ನಿಮ್ಮ ಕಂಪ್ಯೂಟರನ್ನು ಎಸೆಮ್ಮೆಸ್ ಅಥವ ಮಿಂಚಂಚೆ ಕಳುಹಿಸಿ ಬಂದು ಮಾಡಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇದು ಸಾಧ್ಯ. ಅದರೆ ಅದಕ್ಕೆ tweetmyPC ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡಿರಬೇಕಾಗುತ್ತದೆ.http://tweetmypc.codeplex.com/ ತಾಣದಲ್ಲದು ಲಭ್ಯವಿದೆ.ನೀವು ಜಿಮೇಲ್ ಮಿಂಚಂಚೆ ಮತ್ತು ಟ್ವಿಟರ್ ಖಾತೆಯನ್ನೂ ಹೊಂದಿರಬೇಕಾಗುತ್ತದೆ.ಟ್ವೀಟ್‌ಮೈಪಿಸಿ ತಂತ್ರಾಂಶವನ್ನು ಅನುಸ್ಥಾಪಿಸಿದ ಬಳಿಕ, ನಿಮ್ಮ ಟ್ವಿಟರ್ ಮತ್ತು ಜಿಮೇಲ್ ಖಾತೆಗಳ ವಿವರಗಳನ್ನೂ ಕೇಳುತ್ತದೆ.ನಿಮಗೆ ಕಂಪ್ಯೂಟರನ್ನು ಬಂದು ಮಾಡಬೇಕಿದ್ದರೆ twitter@posterous.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ. ನಿಮ್ಮ ಟ್ವಿಟರ್ ಖಾತೆಯ ಮೂಲಕ ಸಂದೇಶ ಕಂಪ್ಯೂಟರನ್ನು ತಲುಪಿ,ಕಂಪ್ಯೂಟರನ್ನು ಬಂದು ಮಾಡುತ್ತದೆ. ನಿಮ್ಮ ಟ್ವಿಟರ್ ಖಾತೆಗೆ ಶಟ್‌ಡೌನ್,ಲಾಗಾಫ್,ಲಾಕ್ ಮುಂತಾದ ಸಂದೇಶ ಕಳುಹಿಸಿದರೂ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದ ತಂತ್ರಾಂಶ,ಟ್ವಿಟರ್ ಸಂದೇಶದ ಮೇಲೆ ಅನವರತ ಕಣ್ಣಿರಿಸುವ ಮೂಲಕ ಸಂದೇಶ ಬಂದೊಡನೆ ಅದರನುಸಾರ ನೀವು ನೀಡಿದ ಸಂದೇಶದಂತೆ ಕೆಲಸ ಮಾಡುತ್ತದೆ.ಎಸೆಮೆಸ್ ಮೂಲಕವೂ ಟ್ವಿಟರ್ ಸಂದೇಶ ಕಳುಹಿಸುವ ಅನುಕೂಲ ಇರುವ ಕಾರಣ ಎಸೆಮೆಸ್ ಮೂಲಕವೂ ಕಂಪ್ಯೂಟರನ್ನು ನಿಯಂತ್ರಿಸಬಹುದು.ಅಂದ ಹಾಗೆ ಕಂಪ್ಯೂಟರಿನ ಸ್ಥಿತಿಯ ಬಗ್ಗೆ ನಿಮಗೆ ಮಿಚಂಚೆಯನ್ನೂ ಟ್ವೀಟ್‌ಮೈಪಿಸಿ ತಂತ್ರಾಂಶ ಕಳುಹಿಸುತ್ತದೆ.

ಅಂತರ್ಜಾಲಕ್ಕೆ ನಲುವತ್ತು

ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ
1969ರ ಸೆಪ್ಟೆಂಬರ್ ಎರಡರಂದು ಎರಡು ಕಂಪ್ಯೂಟರುಗಳ ನಡುವೆ ಸಂಪರ್ಕ ಸಾಧಿಸುವ ಮೂಲಕ ಮೊದಲ ಕಂಪ್ಯೂಟರ್ ಜಾಲ ಏರ್ಪಟ್ಟಿತು. ಆ ಘಟನೆಯೇ ಅಂತರ್ಜಾಲವೆಂಬ ಮಹಾಜಾಲದ ನಿರ್ಮಾಣಕ್ಕೆ ಹೇತುವಾಯಿತು ಎನ್ನುವುದನ್ನು ನಂಬುವುದು ಕಷ್ಟ.ಆರಂಭದಲ್ಲಿ ಅಂತರ್ಜಾಲ ಲಿಪಿಮಯವಾಗಿತ್ತು.ಬರುಬರುತ್ತಾ ಅದು ಚಿತ್ರಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೂರು ಆಯಾಮಗಳ ಅನುಭವ ಸಿಗಬೇಕು ಎನ್ನುವುದು ಸಂಶೋಧಕರ ಹಂಬಲ.ಅಲ್ಲದೆ ಜಗತ್ತಿನ ಪ್ರತಿ ಸಾಧನವನ್ನೂ ಬೇಕೆಂದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿ,ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಬೇಕೆನ್ನುವುದು ಅವರ ಆಸೆ.ಅದು ಸಾಧ್ಯವಾಗಲು ಅಂತರ್ಜಾಲವನ್ನು ಸದ್ಯದ ಐಪಿ4ರಿಂದ ಐಪಿ6 ಶಿಷ್ಟಾಚಾರಕ್ಕೇರಿಸುವ ಅಗತ್ಯ ಇದೆ.
ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.
---------------------------------------------------------------
ಬಿಂಗ್ ಮತ್ತು ಪಿಂಗ್
ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಶೋಧ ಸೇವೆ. ಯಾವುದೇ ಪದವನ್ನು ನೀಡಿ ಶೋಧ ನಡೆಸಿದಾಗ ಸಿಗುವ ಫಲಿತಾಂಶವನ್ನು ಟ್ವಿಟರ್ ಅಥವಾ ಫೇಸ್‌ಬುಕ್ ಅಂತಹ ತಮ್ಮ ಖಾತೆಗಳಲ್ಲಿ ನೀಡಿ,ತಮ್ಮ ಗೆಳೆಯರಿಗೆ ತಮ್ಮ ಶೋಧದ ಫಲಿತಾಂಶವನ್ನು ಸುಲಭವಾಗಿ ಒದಗಿಸುವುದಲ್ಲದೆ,ತಮ್ಮ ಇಷ್ಟಾನಿಷ್ಟಗಳ ಬಗೆಗೆ ಅವರಿಗೆ ತಿಳಿಸುವುದನ್ನು ಸಾಧ್ಯವಾಗಿಸುವುದು "ಬಿಂಗ್ ಮತ್ತು ಪಿಂಗ್" ಸೇವೆಯ ವೈಖರಿ. ಈಗಿನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಸೇವೆಯು ತಡವಿಲ್ಲದೆ ಜನರಿಗೆ ಸಿಗಲಿದೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.
-------------------------------------------------------------
ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!
ಅಟೋಗಳಿಗೆ ಕೈಯಡ್ಡ ಹಿಡಿದು, ತಮಗೆ ಹೋಗ ಬೇಕಾಗಿರುವೆಡೆ ಬರಲಾತ ನಿರಾಕರಿಸುವ ಅನುಭವ ನಗರಗಳಲ್ಲಿ ಎಲ್ಲರಿಗೂ ಆಗಿಯೇ ಇರುತ್ತದೆ. ಇದನ್ನು ತಡೆಯಲು ಸಾಧ್ಯವಾಗುವ ತಂತ್ರಜ್ಞಾನ ಜರ್ಮನಿಯಲ್ಲಿ ಪ್ರಯೋಗವಾಗುತ್ತಿದೆ. ಅಲ್ಲಿ ಅದು ಟ್ಯಾಕ್ಸಿಗಳಲ್ಲಿ ಪ್ರಯೋಗವಾಗುತ್ತಿದೆ.ಖಾಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಚಾಲಕ,ತಾನು ಹೋಗುತ್ತಿರುವ ಸ್ಥಳವನ್ನು ಕಂಪ್ಯೂಟರ್ ಕೇಂದ್ರಕ್ಕೆ ಎಸೆಮ್ಮೆಸ್ ಮಾಡಿ ತಿಳಿಸುತ್ತಾನೆ. ಗ್ರಾಹಕರೂ ತಾವು ಹೋಗಬೇಕಿರುವ ಸ್ಥಳವನ್ನು ಇಲ್ಲಿ ದಾಖಲಿಸುತ್ತಾರೆ.ಇದಕ್ಕೆ ಮೊಬೈಲ್ ಬಳಕೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ. ಅಂತಹ ಗ್ರಾಹಕರ ಮೊಬೈಲ್ ಕರೆಯ ಮೂಲಕ ಅವರ ಸ್ಥಾನ ತಿಳಿದು,ಅಂತಹ ಸ್ಥಳಕ್ಕೆ ಸಮೀಪವಿರುವ ಟ್ಯಾಕ್ಸಿ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಚಾಲಕ ಬಯಸಿದಲ್ಲಿ ಗ್ರಾಹಕನನ್ನು ಹತ್ತಿಸಿಕೊಳ್ಳಬಹುದು. ಬೇಡದಿದ್ದರೆ,ನಿಲ್ಲಿಸುವ ಅಗತ್ಯವೇ ಇಲ್ಲ.ಈ ಸೇವೆಗೆ ಓಪನ್ ರೈಡ್ ಎಂದು ಹೆಸರಿಸಲಾಗಿದೆ.
---------------------------------------------------
ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ
ಇದುವರೆಗೆ ತನ್ನದೇ ಆದ ಪ್ರತ್ಯೇಕ ಅಕ್ಷರ ವಿನ್ಯಾಸ ಹೊಂದಿ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದ "ಪ್ರಜಾವಾಣಿ" ಪತ್ರಿಕೆಯಿದೀಗ ತನ್ನ ತಾಣವನ್ನು ಯುನಿಕೋಡಿನಲ್ಲಿ ನೀಡಲಾರಂಭಿಸಿದೆ. ಇದರಿಂದ ಯುನಿಕೋಡ್ ಬೆಂಬಲವಿರುವ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಿದ್ದಲ್ಲಿ ತಾಣವು ಸಮಸ್ಯೆಯಿಲ್ಲದೆ ಸ್ಪಷ್ಟವಾಗಿ ಕನ್ನಡ ಅಕ್ಷರಗಳು ಗೋಚರಿಸುತ್ತವೆ. "ಉದಯವಾಣಿ"ಯ ಸಹಿತ ಹೆಚ್ಚಿನ ಪತ್ರಿಕೆಗಳು ತಮ್ಮ ಇ-ಪೇಪರನ್ನು ಒದಗಿಸಿ, ಈ ಫಾಂಟ್ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿವೆ. ಆದರೆ ಹಾಗೆ ಮಾಡಿದರೆ,ಪತ್ರಿಕೆಯ ಬರಹಗಳನ್ನು ಶೋಧಿಸಲು ಸಾಧ್ಯವಾಗದು. ಆದರೆ ಯುನಿಕೋಡಿನಲ್ಲಿ ಲಭ್ಯವಿರುವ ಬರಹ,ಸುದ್ದಿಗಳನ್ನು ಗೂಗಲ್ ಅಂತಹ ಸೇವೆಗಳನ್ನು ಬಳಸಿ ಶೋಧಿಸುವುದು ಸಾಧ್ಯವೆನ್ನುವುದು ಧನಾತ್ಮಕ ಅಂಶ. ಪ್ರಜಾವಾಣಿಯ ಪುಟ ನೋಡಲು www.prajaavaani.net ವಿಳಾಸ ಬಳಸಿ.
---------------------------------------------------------
ಇ-ರೀಡರಿನಲ್ಲಿ ಪತ್ರಿಕೆಗಳು
ಹಾರ್ಸ್ಟ್ ಎನ್ನುವುದು ಪತ್ರಿಕೆಗಳ ಸಮೂಹ ಸಂಸ್ಥೆ.ಈ ಸಂಸ್ಥೆಯು ಹದಿನಾರು ದೈನಿಕಗಳನ್ನು ಮತ್ತು ನಲುವತ್ತೊಂಭತ್ತು ವಾರಪತ್ರಿಕೆಗಳನ್ನು ನಡೆಸುತ್ತಿದೆ. ಈಗ ಅದು ತನ್ನ ಪತ್ರಿಕೆಗಳನ್ನು ಓದಲು ಇ-ರೀಡರನ್ನು ಹೊರತರಲು ಯೋಚಿಸಿದೆ. ಇ-ರೀಡರ್ ಪತ್ರಿಕೆಗಳನ್ನು ಓದುವ ಸಾಧನ. ಈ ಸಾಧನವು ಪತ್ರಿಕೆಯ ಆಕಾರವನ್ನು ಹೋಲುತ್ತದೆ. ಮಡಚಲು ಸಾಧ್ಯವಾಗುವಂತೆ ಅದನ್ನು ಪ್ಲಾಸ್ಟಿಕ್ ತರದ ಉತ್ಪನ್ನದಿಂದ ತಯಾರಿಸಲಾಗಿದೆ.ಸದ್ಯ ಕಪ್ಪು-ಬಿಳುಪಿನಲ್ಲಿ ಲಭ್ಯವಿದ್ದರೂ ಮುಂದೆ ವರ್ಣದಲ್ಲೂ ಲಭ್ಯವಾಗಲಿದೆ.ಅಂತರ್ಜಾಲದಿಂದ ಪತ್ರಿಕೆಗಳನ್ನು ಇದಕ್ಕೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು.ಮುದ್ರಿತ ಪ್ರತಿಗಳನ್ನು ಮೂಲೆಗುಂಪಾಗಿಸುವ ಇ-ರೀಡರ್‌ಗಳ ಬಳಕೆ ಪತ್ರಿಕೆಗಳ ಹೊಸ ತಂತ್ರವಾಗುವ ಲಕ್ಷಣಗಳಿವೆ.
ಟ್ವಿಟರಿನಲ್ಲಿ ಮಹಾಭಾರತ

ಪ್ರೇಮ್ ಪಣಿಕ್ಕರ್ ಅವರ "ಭೀಮಸೇನ್",ಭೀಮಸೇನನ ದೃಷ್ಟಿಕೋನದಿಂದ ಕಂಡ ಮಹಾಭಾರತದ ಒಂದು ಬ್ಲಾಗ್. ಈ ಬ್ಲಾಗನ್ನೇ ಆಧಾರವಾಗಿಟ್ಟುಕೊಂಡು,ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟರಿನಲ್ಲಿ http://twitter.com/epicretold ವಿಳಾಸದಲ್ಲಿ ಮಹಾಭಾರತದ ಕತೆ ಮೂಡಿಬರುತ್ತಿದೆ.ಹಸ್ತಿನಾಪುರಕ್ಕೆ ಪಾಂಡವರು ಮೊದಲಬಾರಿಗೆ ಬಂದಾಗ,ಗಾಂಧಾರಿಯನ್ನು ನೋಡಿದ ಭೀಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಟ್ವಿಟರ್ ಕತೆ ಪ್ರಾರಂಭವಾಗುತ್ತದೆ.ಈ ಬರಹಗಳನ್ನು ನಿಯತವಾಗಿ ಪ್ರಕಟಿಸುತ್ತಿರುವುದು ಚಿಂದು ಶ್ರೀಧರನ್ ಎಂಬ ಪತ್ರಿಕೋದ್ಯಮಿ.ಸದ್ಯ ಇವರು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ಅಂದಹಾಗೆ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೇಲೆ ಗುರುವಾರ ಸೇವೆಯನ್ನು ನಿರಾಕರಿಸುವ ದಾಳಿ ನಡೆಯಿತು. ಇದರಿಂದ ಅದರ ಸೇವೆಯು ಎರಡು ಗಂಟೆ ಕಾಲ ಬಾಧಿತವಾಯಿತು. ಜತೆಗೇ ಫೇಸ್‌ಬುಕ್‌ನಂತಹ ಸಾಮಾಜಿಕ ನೆಟ್ವರ್ಕಿಂಗ್ ತಾಣಗಳೂ ಬಾಧಿತವಾದುವು. ಈ ದಾಳಿಯನ್ನು ಆಯೋಜಿಸಿದವರು ಯಾರೆನ್ನುವುದು ಸ್ಪಷ್ಟವಾಗಿಲ್ಲ. ಪ್ರಸಿದ್ಧ ತಾಣಗಳಿಗೆ ಹುಸಿ ಬಳಕೆದಾರ ಕೇಳಿಕೆಗಳ ಪ್ರವಾಹ ಹರಿಸಿ,ನೈಜ ಬಳಕೆದಾರರಿಗೆ ಸೇವೆ ನಿರಾಕರಿಸುವ ದಾಳಿಗಳು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.ಜೂನ್ ಒಂದೇ ತಿಂಗಳಲ್ಲಿ ಟ್ವಿಟರ್ ಸೇರಿದ ಹೊಸ ಬಳಕೆದಾರರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇಷ್ಟು ಜನಪ್ರಿಯ ತಾಣವಾದ ಟ್ವಿಟರ್ ಕೈಕೊಟ್ಟಾಗ, ಅಂತರ್ಜಾಲ ಬಳಕೆದಾರರು ಕಂಗಾಲಾಗಿಬಿಟ್ಟರು. ನಂತರ ಸೇವೆ ಆರಂಭವಾದಾಗ, ಟ್ವಿಟರ್ ಇಲ್ಲದಾಗ ಏನು ಮಾಡಿದೆ ಎನ್ನುವ ಕುರಿತೇ ಬಳಕೆದಾರರು ಹೆಚ್ಚು ಸಂದೇಶ ಬರೆದರು.ಇತರ ತಾಣಗಳು ಕೈಕೊಟ್ಟಾಗ,ಅದರ ಕುರಿತು ಟ್ವಿಟರಿನಲ್ಲಿ ದೂರುವ ಜನರು, ಟ್ವಿಟರ್ ಸ್ವತ: ಕೈಕೊಟ್ಟಾಗ ಬರೆಯುವುದೆಲ್ಲಿ ಎಂದು ಅಣಕವಾಡಿದ್ದೂ ಇದೆ.
-----------------------------------------------------------------------
ಸರಕಾರಿ ಕನ್ನಡ "ವಿಕಿಪೀಡಿಯಾ"

ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಎರಡುಕೋಟಿ ರುಪಾಯಿಗಳನ್ನು ತೆಗೆದಿರಿಸುವ ನಿರ್ಧಾರ ಮಾಡಿತ್ತು.ಕನ್ನಡ ಜ್ಞಾನ ಆಯೋಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಐಐಐಟಿ-ಬೆಂಗಳೂರು ಅವರುಗಳು ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ.ರಾಜ್ಯೋತ್ಸವದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಈ ತಾಣಕ್ಕೆ ಕನ್ನಡ ಜ್ಞಾನಭಂಡಾರ,ಕನ್ನಡ ಮಾಹಿತಿ ಭಂಡಾರ,ಕನ್ನಡ ಖಜಾನೆ,ಕನ್ನಡ ಸೇತುವೆ ಮುಂತಾದ ಹೆಸರುಗಳು ಪರಿಶೀಲನೆಯಲ್ಲಿವೆ.ಜನರ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶ ವಿಕಿಪೀಡಿಯಾವು ಈಗಾಗಲೇ http://kn.wikipedia.org/ನಲ್ಲಿ ಲಭ್ಯವಿದ್ದು ಇದರಲ್ಲಿ ಸುಮಾರು ಏಳುಸಾವಿರ ಬರಹಗಳೀಗಾಗಲೆ ಸಂಗ್ರಹವಾಗಿದೆ.ಸರಕಾರಿ ವಿಶ್ವಕೋಶ ಇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ,ಇರುವ ವಿಶ್ವಕೋಶವನ್ನು ಬಲಪಡಿಸುವುದನ್ನು ಬಿಟ್ಟು ಹೊಸತನ್ನು ಸರಕಾರಿ ಖರ್ಚಿನಲ್ಲಿ ಮಾಡುವ ಅಗತ್ಯ ಏನಿದೆ ಎಂಬ ವಿಚಾರಗಳ ಬಗ್ಗೆ ಅಂತರ್ಜಾಲದಲ್ಲೀಗ ಚರ್ಚೆ ನಡೆದಿದೆ.ಕನ್ನಡದ ಹೆಸರಿನಲ್ಲಿ ಸರಕಾರದ ನಿಧಿಯನ್ನು ಮುಕ್ಕಲು ವಿಶ್ವಕೋಶ ಒಂದು ನೆಪವಾಗದಿರಲಿ ಎನ್ನುವುದು ಕನ್ನಡಿಗರ ಹಾರೈಕೆ.
----------------------------------------------------------
ಅಂತರ್ಜಾಲದ ಕಡತ ಖಜಾನೆ
ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ.ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ www.scribd.com. ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ.ಪುಸ್ತಕಗಳ ಇ-ಪ್ರತಿಗಳು,ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಇಲ್ಲಿ ಸಿಗುತ್ತವೆ.ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ,ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಸುಲಭ.ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ.
--------------------------------------------
ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ
ಆರುನೂರು ಮೆಗಾಬಿಟ್ ವೇಗದ ನಿಸ್ತಂತು ಜಾಲವನ್ನು ನಿಜವಾಗಿಸುವ ಮಾನಕ 802.11n ಮಾನಕ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ವರ್ಷಗಳ ಕಾಲ ಅದರ ಕರಡು ಪ್ರತಿ ಲಭ್ಯವಿದ್ದು, ಯಂತ್ರಾಂಶ ತಯಾರಕರು ಅದರ ಪ್ರಕಾರ ಯಂತ್ರಾಂಶಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.ಕ್ವಾಲಕೋಮ್ ಎನ್ನುವ ಕಂಪೆನಿ ವಯರ್ಲೆಸ್ ಎನ್ ಮಾನಕದ ಪ್ರಕಾರ ಚಿಪ್ ಅನ್ನು ಸಿದ್ಧ ಪಡಿಸಿದ್ದು, ಒಂದೇ ಸಲಕ್ಕೆ ಧ್ವನಿ,ವಿಡಿಯೋ ಮತ್ತು ದತ್ತಾಂಶಗಳ ಪ್ರವಾಹವನ್ನು ಸಂಭಾಳಿಸಲು ಸಾಧ್ಯವಾಗುವಷ್ಟು ವೇಗ ನಿಸ್ತಂತು ಜಾಲಕ್ಕೆ ಲಭ್ಯವಾಗುತ್ತದೆ. ಹಲವು ಚಾನೆಲ್‌ಗಳಲ್ಲಿ ಸೇವೆ ಒದಗಿಸಲು ಅವಕಾಶ ಸಿಗುವುದು ಮಾನಕದ ವೈಶಿಷ್ಟ್ಯ.ಸದ್ಯ ಚಾಲ್ತಿಯಲ್ಲಿರುವ 802.11g ಪ್ರಕಾರ ಸುಮಾರು ಐವತ್ತು ಮೆಗಾಬಿಟ್ ವೇಗದ ನಿಸ್ತಂತು ಜಾಲ ಸೇವೆ ಮಾತ್ರಾ ಸಿಗುತ್ತದೆ. ಅದರ ಹತ್ತು ಪಟ್ಟು ವೇಗವನ್ನು ಸಾಧ್ಯವಾಗಿಸುವ ವಯರ್ಲೆಸ್ ಎನ್ ಮಾನಕ,ಅತ್ಯಂತ ಸ್ಪಷ್ಟ ವಿಡಿಯೋ ಪ್ರದರ್ಶಿಸುವ ಹೈಡೆಫಿನಿಶನ್ ಟಿವಿಯಂತಹ ಸೇವೆಯನ್ನು ಒದಗಿಸಲು ಬಳಕೆಯಾಗಬಹುದು.
---------------------------------------
ಬಿಂಗ್ v/s ಗೂಗಲ್
ಮೈಕ್ರೋಸಾಫ್ಟ್ ಕಂಪೆನಿಯ ಬಿಂಗ್ ಮತ್ತು ಗೂಗಲ್ ಕಂಪೆನಿಯ ಶೋಧ ಸೇವೆಯನ್ನು ಹೋಲಿಸಬೇಕೇ? ಇದನ್ನು ಮಾಡಲು ಬಹಳ ಸುಲಭವಾಗಿಸಲು http://bingandgoogle.com ತಾಣವನ್ನು ಬಳಸಬಹುದು. ಒಂದೇ ಪದವನ್ನು ಎರಡು ತಾಣದಲ್ಲೂ ನೀಡಿ,ಎರಡರ ಫಲಿತಾಂಶಗಳನ್ನು ಜತೆಗೆ ಪ್ರದರ್ಶಿಸುವ ಸೌಕರ್ಯವನ್ನೀ ತಾಣ ನೀಡಿದೆ."ಉಡುಪಿ" ಪದವನ್ನು ಹುಡುಕಲು ನೋಡಿ,ಗೂಗಲ್ ಮೇಲುಗೈ ನಿಚ್ಚಳವಾಗುತ್ತದೆ. ಯಾಕೆಂದು ತಟ್ ಅಂತ ಹೇಳಿ!

ಆನ್‌ಲೈನ್ ಬ್ಯಾಂಕಿಂಗ್:ದರ ವೈಚಿತ್ರ್ಯ

ನಿಮ್ಮ ಬ್ಯಾಂಕ್ ಖಾತೆಯಿಂದ ಆನ್‌ಲೈನ್‌ನಲ್ಲಿ ಹಣವನ್ನು ಇನ್ನೊಂದು ಖಾತೆಗೆ ವರ್ಗಾಯಿಸಲು National Electronic Funds Transfer(NEFT) ಮತ್ತು Real Time Gross Settlement(RTGS) ಎನ್ನುವ ಎರಡು ವ್ಯವಸ್ಥೆಗಳು ಲಭ್ಯವಿವೆ.ಇದರಲ್ಲಿ ಎರಡನೆಯದ್ದು ತಕ್ಷಣ ಹಣವರ್ಗಾವಣೆ ಮಾಡುವ ವ್ಯವಸ್ಥೆ.ಕ್ಕೆ ಹೋಲಿಸಿದರೆ ಎನ್‌ಇ‌ಎಫ್‌ಟಿ ನಿಧಾನ ಸೇವೆ. ಆದರೂ ಒಂದು ದಿನದಲ್ಲಿ ಹಣ ವರ್ಗಾವಣೆ ಸಾಧ್ಯ. ಎನ್‌ಇ‌ಎಫ್‌ಟಿ ಮೂಲಕ ಹಣ ವರ್ಗಾವಣೆಗೆ ಕನಿಷ್ಠ ಆರು ರುಪಾಯಿ ಸೇವಾದರವಾದರೆ,ಆರ್‌ಟಿಜಿ‍ಎಸ್ ರೀತಿಯ ವರ್ಗಾವಣೆಗೆ ಕನಿಷ್ಠ ದರ ಇಪ್ಪತ್ತೈದು ರುಪಾಯಿ.ಬ್ಯಾಂಕುಗಳವರು ಒಂದು ಬ್ಯಾಂಕ್‌ನ ಖಾತೆಯಿಂದ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆ ಮಾಡಲು ಎನ್‌ಇ‌ಎಫ್‌ಟಿಯನ್ನು,ತಮ್ಮದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹಣ ವರ್ಗಾಯಿಸಲು ಆರ್‌ಟಿ‌ಜಿ‌ಎಸ್‌ನ್ನು ಶಿಫಾರಸು ಮಾಡುವ ಕಾರಣ, ಎರಡನೆಯ ರೀತಿಯ ವರ್ಗಾವಣೆ ದುಬಾರಿ ಆಗಿ ಪರಿಣಮಿಸುತ್ತದೆ. ಒಂದೇ ಬ್ಯಾಂಕಿನ ಬೇರೆ ಬೇರೆ ಸ್ಥಳದಲ್ಲಿರುವ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡುವುದಕ್ಕಿಂತ ಬೇರೆ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸುವುದೇ ಹೆಚ್ಚು ಉಳಿತಾಯಕ್ಕೆ ಕಾರಣವಾಗುತ್ತದೆ.

ವೈದ್ಯ ಸಲಹೆಗೆ ಆನ್‌ಲೈನ್ ಸಹಾಯ

ವೈದ್ಯ ಸಲಹೆಗೆ ಆನ್‌ಲೈನ್ ಸಹಾಯ

ಹೋಮಿಯೋಪತಿ ಪದ್ಧತಿಯಲ್ಲಿ ವೈದ್ಯ ಸಲಹೆಗೆ ಬಹಳ ಸಮಯ ಹಿಡಿಸುತ್ತದೆ.ರೋಗಿಯ ವ್ಯಕ್ತಿತ್ವವನ್ನು ಅರಿತು,ಆತನಿಗೆ ಸರಿಹೊಂದುವ ಚಿಕಿತ್ಸೆಯನ್ನು ನೀಡಬೇಕಾಗುವುದರಿಂದ,ಮೊದಲ ಭೇಟಿಯಲ್ಲಿ ವೈದ್ಯರು ಬಹಳಷ್ಟು ಪ್ರಶ್ನೆಗಳನ್ನು ರೋಗಿಗೆ ಕೇಳುತ್ತಾರೆ.ಆದರೆ ವೈದ್ಯ ಭೇಟಿಗೆ ಹಲವರು ಕಾದಿರುವಾಗ,ವಿಸ್ತೃತ ಮಾತುಕತೆ ನಡೆಸಲೂ ಕಷ್ಟವಾಗುತ್ತದೆ.ಇದನ್ನು ತಪ್ಪಿಸಲು ಆನ್‌ಲೈನ್ ಸಹಾಯ ಪಡೆಯುವುದು ಈಗಿನ ಶೈಲಿ.ವೈದ್ಯರು ತಮ್ಮ ಅಂತರ್ಜಾಲತಾಣದಲ್ಲಿ ವೈದ್ಯ ಸಲಹೆ ಪುಟವನ್ನು ಒದಗಿಸಿ,ರೋಗಿಯು ತನ್ನ ವಿವರವನ್ನು ಲಿಖಿತವಾಗಿ ನೀಡಲು ಅನುಕೂಲ ಕಲ್ಪಿಸುವುದಿದೆ.ವೈದ್ಯರ ಭೇಟಿಗೆ ವೇಳೆ ಗೊತ್ತು ಪಡಿಸಿ ಭೇಟಿ ನೀಡಿದಾಗ,ರೋಗಿಯ ಲಿಖಿತ ವಿವರಗಳನ್ನು ನೋಡಿ,ಸಲಹೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ.ಮಂಗಳೂರಿನ ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನಕುಮಾರ್ http://doctorprasanna.com/ಅವರ ಅಂತರ್ಜಾಲತಾಣದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ.ಇಲ್ಲಿ ವ್ಯಕ್ತಿಯ ನಿದ್ದೆ,ಹಸಿವು,ಶೌಚ ಅಭ್ಯಾಸ,ಬೆವರುವಿಕೆ ಇಂತವುಗಳ ಬಗ್ಗೆ ತಿಳಿದುಕೊಳ್ಳಲು ವಿವರವಾದ ಪ್ರಶ್ನೆಗಳನ್ನು ನೀಡಲಾಗಿದೆ.ಆನ್‌ಲೈನಿನಲ್ಲಿ ಉತ್ತರಿಸುವಾಗ,ವ್ಯಕ್ತಿಯು ತನ್ನ ಅರಿವಿಗೆ ಬಾರದ ವಿಷಯಗಳನ್ನು ಗಮನಿಸಿಕೊಂಡು ಉತ್ತರಿಸಲು ಸಾಧ್ಯವಾಗುತ್ತದೆ.ಅದೇ ರೀತಿ ವೈದ್ಯರಿಗೂ,ಅದನ್ನು ಸರಿಯಾಗಿ ತಿಳಿದು,ನಿರ್ಧಾರಕ್ಕೆ ಬರಲು ಸಮಯ ಸಿಗುತ್ತದೆ.ವಿವಿಧ ವಿಷಯಗಳ ಬಗ್ಗೆ ತಮ್ಮ ಬರಹಗಳನ್ನು ಒದಗಿಸಿ,ಜನರಲ್ಲಿ ಅರಿವು ಮೂಡಿಸಲೂ ಸಾಧ್ಯವಾಗುತ್ತದೆ.

ಲಿನಕ್ಸಾಯಣ

ಲಿನಕ್ಸಾಯಣ
ಲಿನಕ್ಸ್ ಕಂಪ್ಯೂಟರ್ ಕಾರ್ಯನಿರ್ವಹಣ ತಂತ್ರಾಂಶವು ಮುಕ್ತ ಮತ್ತು ಉಚಿತವಾಗಿ ಸಿಗುತ್ತದೆ.ಉಬುಂಟು,ಫೆಡೋರಾ,ಸೂಸಿ,ಮ್ಯಾಂಡ್ರಿವಾ,ಮಿಂಟ್ ಹೀಗೆ ಹಲವು ಲಿನಕ್ಸ್ ತಂತ್ರಾಂಶದ ಹಲವು ಪ್ರಭೇದಗಳು ಲಭ್ಯವಿವೆ.ಆದರೆ ಇವನ್ನು ಬಳಸಲು ಕಂಪ್ಯೂಟರ್‌ಗೆ ಹೊಸಬರಾದವರಿಗೆ ತುಸು ಹಿಂಜರಿಕೆ ಇರುವುದು ಸ್ವಾಭಾವಿಕ.ಅಂತವರಿಗೆ ಸಹಾಯ ಮಾಡಲು,ಅವರ ಅನುಮಾನಗಳನ್ನು ನೀಗಿಸಲು ಇರುವ ತಾಣವೇ ಲಿನಕ್ಸಾಯಣ.ನೆಟ್(http://linuxaayana.net ಇಲ್ಲಿ ಲಿನಕ್ಸಿನಲ್ಲಿ ಕನ್ನಡ ಬಳಕೆ ಹೇಗೆ,ಅಂತರ್ಜಾಲ ಜಾಲಾಟ,ನಿಸ್ತಂತು ಜಾಲದ ಬಳಕೆಗೆ ಕಂಪ್ಯೂಟರನ್ನು ಸಿದ್ಧಗೊಳಿಸುವುದು ಹೇಗೆ ಮುಂತಾದ ವಿಷಯಗಳ ಬಗೆಗೆ ಬರಹಗಳಿವೆ.ಬರಹಗಳನ್ನು ಸೇರಿಸಲು ಮತ್ತು ತಿದ್ದಲೂ ಅವಕಾಶವಿದೆ.ಓಂಶಿವಪ್ರಕಾಶ್ ಬರೆದಿರುವ ಲಿನಕ್ಸಾಯಣ ಸರಣಿ ಬರಹಗಳು ಇಲ್ಲಿ ಲಭ್ಯವಿರುತ್ತವೆ.ಟ್ವಿಟರಿನಲ್ಲಿಯೂ ಲಿನಕ್ಸಾಯಣದ ಬಗೆಗೆ ಸಂದೇಶಗಳು ಬೇಕಿದ್ದರೆ,twitter.com/linuxaayana ಪುಟವನ್ನು ನೋಡಿ.

ಭಾಷೆ ಕಲಿಯಿರಿ,ಕಲಿಸಿರಿ!!

ಭಾಷೆ ಕಲಿಯಿರಿ,ಕಲಿಸಿರಿ!!
ಭಾಷೆ ಕಲಿಕೆಗೆ ಅಂತರ್ಜಾಲದ ಸಮುದಾಯದ ನೆರವು ಸಿಗುತ್ತದೆ.ಯಾವುದೇ ಭಾಷೆಯನ್ನು ಕಲಿಯಲು ಅದರ ಅಪರಿಮಿತ ಬಳಕೆಯೇ ಸುಲಭದ ಹಾದಿ ಎನ್ನುವುದನ್ನು ಒಪ್ಪುತ್ತೀರಾ? ಎಷ್ಟೋ ವೇಳೆ ನಮಗೆ ಭಾಷೆ ಕಲಿಯಲು ಕಲಿಸುವವರಿಲ್ಲದಿರುವುದೂ ಕಾರಣವಾಗಿರುತ್ತದೆ. ಮಾತಾನಾಡುವಾಗ, ಬರೆಯುವಾಗ ತಪ್ಪುಗಳು ಆಗುತ್ತವೆ ಎನ್ನುವ ಹಿಂಜರಿಕೆಯಿಂದಲೂ ನಮಗೆ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. www.livemocha.com ಅಂತಹ ತಾಣಗಳು ಉಚಿತವಾಗಿ ಭಾಷೆ ಕಲಿಕೆಗೆ ನೆರವಾಗುತ್ತವೆ.ಕನ್ನಡವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಭಾಷೆಗಳ ಕಲಿಕೆಗೆ ಇಲ್ಲಿ ನೆರವು ಸಿಗುತ್ತದೆ. ನಿಮಗೆ ಯಾವ ಭಾಷೆ ಕಲಿಯಬೇಕು ಮತ್ತು ಯಾವ ಭಾಷೆಯನ್ನು ಬಲ್ಲಿರಿ ಎಂದು ನೋಂದಾಯಿಸಿಕೊಳ್ಳುವ ವೇಳೆ ತಿಳಿಸಿದರೆ, ನಿಮಗೆ ಬಲ್ಲ ಭಾಷೆಯಲ್ಲಿ ಕಲಿಯಬೇಕಾದ ಭಾಷೆಯಲ್ಲಿ ತಿಳಿಸಬಲ್ಲ ಜನರ ಸಮುದಾಯಕ್ಕೆ ನಿಮ್ಮನ್ನು ಸಂಪಕಿಸಲಾಗುತ್ತದೆ. ನಿಮ್ಮ ಉಚ್ಛಾರವನ್ನು ಈ ಸಮುದಾಯದ ಆನ್‌ಲೈನ್ ಇರುವ ಸದಸ್ಯರು ಆಲಿಸಿ, ಸಲಹೆ ನೀಡುವರು. ನಿಮ್ಮ ಬರವಣಿಗೆಯೂ ಹೀಗೆ ಪ್ರತಿಕ್ರಿಯೆಗಿಟ್ಟಿಸಿಕೊಂಡು,ನಿಮ್ಮ ತಪ್ಪು-ಒಪ್ಪುಗಳು ನಿಮಗೆ ತಿಳಿಯುತ್ತವೆ. ಅದೇ ವೇಳೆ ನೀವೂ ನಿಮಗೆ ತಿಳಿದಿರುವ ಭಾಷೆಯಲ್ಲಿ ಇತರರಿಗೆ ನೆರವಾಗುತ್ತೀರಿ.

ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು

ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು
ಕೆ ಪಿ ರಾವ್ ಎಂಬ ಹೆಸರು ಕಂಪ್ಯೂಟರಿನ ಕನ್ನಡ ಕೀಲಿ ಮಣೆ ಬಗ್ಗೆ ಬಂದಾಗಲೆಲ್ಲಾ ಕೇಳಿ ಬರುವ ಹೆಸರು.ಮೊದಲಾಗಿ ಕಂಪ್ಯೂಟರಿಗಾಗಿ ಕನ್ನಡ ಅಕ್ಷರ ವಿನ್ಯಾಸಗಳನ್ನು ರೂಪಿಸಿದವರವರು. ತುಳು ತೆಲುಗು ಅಕ್ಷರ ವಿನ್ಯಾಸಗಳನ್ನು ಕಂಪ್ಯೂಟರಿಗಾಗಿ ಮಾಡಿದ ಸಾಧನೆ ಇವರದು. ಐವತ್ತು ವರ್ಷಗಳಿಂದ ಕಂಪ್ಯೂಟರುಗಳ ಜತೆ ಎಡತಾಕಿದ ಅನುಭವ ಇವರಿಗಿದೆ.ಕನ್ನಡಕ್ಕೆ ತರ್ಕಬದ್ಧ ಕೀಲಿ ಮಣೆ ವಿನ್ಯಾಸ ರೂಪಿಸಿದ ಇವರ ಸಾಧನೆ ಸರಕಾರವೂ ಗುರುತಿಸಿದೆ.ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳಲ್ಲಿ ಕನ್ನಡ ಲಿಪಿ ಮೂಡಿಬರುವಂತೆ ಮಾಡುವುದರಲ್ಲಿಯೂ ಕೆ ಪಿ ರಾವ್ ಕೆಲಸ ಮಾಡಿದ್ದಾರೆ.ಟಾಟಾ ಪ್ರೆಸ್‌ನಲ್ಲಿ ಕೆಲಸ ಮಾಡಿದ್ದ ಕೆಪಿ ರಾವ್ ಈಗ ಮಣಿಪಾಲದ ಎಂ ಐ ಟಿಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರು.ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನದ ಗೌರವ ದೊರಕಿದ ಬೆನ್ನಲ್ಲೇ ನಿಟ್ಟೆಯ ವಿದ್ಯಾರ್ಥಿವೃಂದವೂ ಇವರಿಗೆ ಗೌರವ ಸಲ್ಲಿಸಿತು.ಮಾನವ ಮತ್ತು ಕಂಪ್ಯೂಟರ್ ನಡುವಣ ಸಂವಹನ ಈಗ ಅವರ ಸಂಶೋಧನಾ ಕ್ಷೇತ್ರ.

ಬ್ಲಾಗಿನಿಂದ ಪುಸ್ತಕಕ್ಕೆ

ಬ್ಲಾಗಿನಿಂದ ಪುಸ್ತಕಕ್ಕೆ

http://www.ittigecement.blogspot.com ಎನ್ನುವ ಬ್ಲಾಗ್ ಮೂಲಕ ಬರವಣಿಗೆ ಆರಂಭಿಸಿ,ತಮ್ಮ ಬರವಣಿಗೆ ದಾಟಿಯಿಂದ ಬ್ಲಾಗ್‌ಲೋಕದಲ್ಲಿ ಮಿಂಚುತ್ತಿರುವ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗ್ ಬರವಣಿಗೆಯನ್ನು ಪುಸ್ತಕವಾಗಿ ಹೊರತರುತ್ತಿದ್ದಾರೆ."ಹೆಸರೇ ಬೇಡ" ಎನ್ನುವ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿ ತಮ್ಮ ವೃತ್ತಿಯಾದ ಕಟ್ಟಡ ನಿರ್ಮಾಣ ಗುತ್ತಿಗೆಯಲ್ಲಿ ಆಗಿರುವ ಅನುಭವಗಳು,ಜೀವನದ ರಸಪ್ರಸಂಗಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ",ಪತ್ರಿಕಾ ವಿತರಕ ಮತ್ತು ಛಾಯಾಗ್ರಾಹಕ ಶಿವೂ ಅವರ"ವೆಂಡರ್ ಕಣ್ಣು" ಕೂಡಾ ಬಿಡುಗಡೆಯಾಗಿವೆ.ಪತ್ರಿಕೆ ಹಂಚುವ ವಿತರಕರ,ಹುಡುಗರ ಅನುಭವ,ಕಷ್ಟ-ಸುಖಗಳ ಬಗ್ಗೆ ಹೊಸ ನೋಟ ಇಲ್ಲಿದೆ.

ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ

ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ

ದೂರವಾಣಿ ಸಂಖ್ಯೆಯನ್ನು ನೆನಪಿಡುವುದು ತ್ರಾಸದಾಯಕ.ಆದರೀಗ ಸೆಲ್‌ಪೋನ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕೆಲಸ ಮಾಡುವುದರಿಂದ,ನಮ್ಮ ಕೆಲಸ ಸಲೀಸಾಗಿದೆ.ಆದರೂ ತುರ್ತಿನ ಸಂದರ್ಭದಲ್ಲಿ ಕೆಲವು ಸಂಖ್ಯೆಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವುದು ಕ್ಷೇಮ.ಸೆಲ್‌ಫೋನ್ ಕಳೆದುಹೋದಾಗ ಅಥವಾ ಕೈಕೊಟ್ಟಾಗ ತುರ್ತಾಗಿ ಕರೆ ಮಾಡಲು ಕೆಲವು ಸಂಖ್ಯೆಗಳಾದರೂ ನೆನಪಿನಲ್ಲಿದ್ದರೆ ಒಳ್ಳೆಯದು.ದೂರವಾಣಿ ಸಂಖ್ಯೆಗಳನ್ನು ಶಬ್ದಗಳಿಗೆ ಬದಲಿಸಿ,ನೆನಪಿನಲ್ಲಿಡುವ ಕ್ರಮವನ್ನು ಬಳಸುವುದು ಒಂದು ಪರಿಹಾರ. ಈ ರೀತಿ ನೀವು ನೀಡುವ ಸಂಖ್ಯೆಯನ್ನು ಶಬ್ದವಾಗಿ ಬದಲಿಸಿಕೊಡುವ ಕೆಲಸವನ್ನು ಮಾಡುವ ಅಂತರ್ಜಾಲ ತಾಣಗಳಿವೆ.www.dialabc.com, www.phonetic.com, www.phonespell.com ಇವೆಲ್ಲಾ ಅಂತಹ ಸೇವೆ ಒದಗಿಸುವ ತಾಣಗಳು.ಹಾಗೆಯೇ ನಿಮಗೆ ದೂರವಾಣಿ ಸಂಖ್ಯೆಯನ್ನು ಆರಿಸಿಕೊಳ್ಳುವಾಗ,ನಿಮ್ಮ ಹೆಸರಿನ ಅಥವಾ ಇನ್ಯಾವುದೇ ಶಬ್ದಕ್ಕೆ ನಿಕಟವಾದ ಸಂಖ್ಯೆಯನ್ನು ಕಂಡುಹಿಡಿಯಲು ಈ ಸೇವೆಗಳನ್ನು ಬಳಸಬಹುದು.ಈ ವಿಧಾನ ಬಳಸಿದಾಗ,ಉದಯವಾಣಿಯ ಸಂಪಾದಕೀಯ ವಿಭಾಗದ ದೂರವಾಣಿ ಸಂಖ್ಯೆಯಾದ 2570841 belroti,akroti ಇತ್ಯಾದಿಯಾಗಿ ಬದಲಾಗಿ ಬಿಡುತ್ತದೆ!

ನಿಫ್ಟಿ ಟ್ವಿಟರಿನಲ್ಲಿ

ನಿಫ್ಟಿ ಟ್ವಿಟರಿನಲ್ಲಿ


ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾತೆ ತೆರೆದು,ಜನರ ಜತೆ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿವೆ.ಈಗ ಶೇರು ಮಾರುಕಟ್ಟೆಯ ಸರದಿ.ಭಾರತದ ಪ್ರಮುಖ ಶೇರು ಮಾರುಕಟ್ಟೆಯಾದ ಎನ್.ಎಸ್.ಇ.ಯು ತನ್ನ ಶೇರು ಸಂವೇದನಾ ಸೂಚ್ಯಂಕವಾದ,ನಿಫ್ಟಿಯ ಏರಿಳಿತವನ್ನು ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೂಲಕ ನೀಡುತ್ತಿದೆ.ಅದನ್ನು ಹಿಂಬಾಲಿಸಲು http://twitter.com/NSE_NIFTY ಈ ಖಾತೆಗೆ ಹೋಗಬೇಕಾಗುತ್ತದೆ.ಒಂದೇವಾರದಲ್ಲಿ ಹತ್ತಿರ ಸಾವಿರ ಜನ ಈ ಟ್ವಿಟರ್ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ.ಪ್ರತಿ ಹತ್ತು ನಿಮಿಷಕ್ಕೊಮ್ಮೆ ನಿಫ್ಟಿಯ ಮಟ್ಟವನ್ನು ತಿಳಿಸುವ ವ್ಯವಸ್ಥೆಯಿದೆ.ಟ್ವಿಟರ್ ಖಾತೆಯನ್ನು ಮೊಬೈಲ್ ಸೇವೆಯ ಮೂಲಕ ಪಡೆಯುವವರಿಗೆ,ವಿವರಗಳು ಮೊಬೈಲಿನಲ್ಲಿಯೇ ಸಿಗುತ್ತದೆ.ಜಗತ್ತಿನ ಪ್ರಮುಖ ಶೇರು ಮಾರುಕಟ್ಟೆಯ ವಿವರಗಳು ಇದೀಗಾಗಲೇ ಟ್ವಿಟರಿನ ಮೂಲಕ ಲಭ್ಯವಿತ್ತು.ಈಗ ಎನ್.ಎಸ್.ಇ.ಯೂ ಅದನ್ನು ನೀಡುವುದರ ಮೂಲಕ,ಭಾರತದ ಮಟ್ಟಿಗೆ ನಾವೀನ್ಯತೆ ನೀಡುವುದರಲ್ಲಿ ತಾನು ಮುಂದೆ ಎಂದು ತೋರಿಸಿಕೊಟ್ಟಂತಾಗಿದೆ.
ಅಂದಹಾಗೆ ಇದುವರೆಗೆ,ಟ್ವಿಟರಿನಲ್ಲಿ ಈಗ ನೀವೇನು ಮಾಡುತ್ತಿದ್ದೀರಿ ಎಂದು ತಿಳಿಸಲು ಆಹ್ವಾನವಿದ್ದರೆ,ಈಗದು ಈಗೇನಾಗುತ್ತಿದೆ ಎಂದು ತಿಳಿಸುವಂತೆ ಬದಲಾಗಿದೆ.ಮೊದಲಿಗೆ ಇದ್ದದ್ದಕ್ಕಿಂತ ಈಗಿನ ಪ್ರಶ್ನೆ ಹೆಚ್ಚು ವಿಸ್ತಾರದ ನೆಲೆಗಟ್ಟನ್ನು ಮೈಕ್ರೋಬ್ಲಾಗಿಗರಿಗೆ ನೀಡುತ್ತಿದೆ.

ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ

ಇಂಚರದ ಮೂಲಕ ಕನ್ನಡದಲ್ಲಿ ಚಿಲಿಪಿಲಿಗುಡಿ

ಕನ್ನಡದ ಟ್ವಿಟರ್ ತಾಣವಾಗಿ,ಇಂಚರ inchara.net ಅಂತರ್ಜಾಲದಲ್ಲಿ ಲಭ್ಯವಾಗಿದೆ.ಈ ತಾಣವನ್ನು ಕಂಪ್ಯೂಟರ್ ಇಂಜಿನಿಯರ್ ವಸಂತ್ ಕಜೆ ಅವರು ಆರಂಭಿಸಿದ್ದಾರೆ.ಈ ತಾಣದಲ್ಲಿ ಕನ್ನಡಿಗರು ನೂರನಲುವತ್ತು ಅಕ್ಷರಗಳ ಮಿತಿಯಲ್ಲಿ ಸಂದೇಶಗಳನ್ನು ಪ್ರಕಟಿಸಿ,ಚಿಲಿಪಿಲಿಗುಟ್ಟಬಹುದು.ಜನಪ್ರಿಯ ತಾಣ ಟ್ವಿಟರಿನ ತಾಣ,ಈ ತಾಣಕ್ಕೆ ಪ್ರೇರಣೆ.ಸಂದೇಶದ ಜತೆಗೆ ಸೂಕ್ತ ಐಕಾನ್(ಕಿರುಚಿತ್ರ) ಸೇರಿಸಲು ಅವಕಾಶ ಇರುವುದು,ಇಲ್ಲಿನ ವಿಶೇಷ.ಸಂದೇಶ ಟೈಪಿಸುವಾಗ.ಅಕ್ಷರಗಳು ಕನ್ನಡದಲ್ಲೇ ಮೂಡುವಂತೆ ರೂಪಿಸಿರುವುದು,ಸಂದೇಶವನ್ನು ಕನ್ನಡದಲ್ಲಿ ರಚಿಸುವುದನ್ನು ಸುಲಭವಾಗಿಸಿದೆ.ನಿಮ್ಮ ಜತೆ ಸಂಪರ್ಕವಿರುವ ಮಂದಿಯ ಪಟ್ಟಿಯ ಜತೆಗೆ,ನಿಮ್ಮ ಹಿಂಬಾಲಕರ ಪಟ್ಟಿಯನ್ನು ತಾಣ ಪ್ರತ್ಯೇಕವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.ಎಸೆಮ್ಮೆಸ್ ಮೂಲಕವೂ ಸಂದೇಶಗಳನ್ನು ಸೇರಿಸುವ ಸೌಲಭ್ಯವಿದೆ.ಜುಕಿಎಂಜಿನ್ ಎಂಬ ಮುಕ್ತ ತಂತ್ರಾಂಶವನ್ನು ಬಳಸಿ,ಈ ಸೇವೆಯನ್ನು ನೀಡಲಾಗುತ್ತಿದೆ.

ಕನ್ನಡದಲ್ಲಿ ಪಾಡ್‌ಕಾಸ್ಟು

ಕನ್ನಡದಲ್ಲಿ ಪಾಡ್‌ಕಾಸ್ಟು


ಬ್ರಾಡ್‌ಬ್ಯಾಂಡ್ ಸೌಲಭ್ಯ ಈಗ ದೇಶದ ಮೂಲೆ ಮೂಲೆಗೂ ಹಬ್ಬಿದ್ದು,ಧ್ವನಿ,ವಿಡಿಯೋ,ಚಿತ್ರಗಳನ್ನು ಅಂತರ್ಜಾಲ ತಾಣಗಳಲ್ಲಿ ಸಮರ್ಥವಾಗಿ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ.ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದು ತಿಳಿಸುವ ಬ್ಲಾಗ್ ಮಾಧ್ಯಮ ಬಹು ಜನಪ್ರಿಯ.ಜತೆಗೆ ಸಂಭಾಷಣೆ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನಗಳು ಇಂಗ್ಲೀಷಿನಲ್ಲಿ ಹೆಚ್ಚೆಚ್ಚು ನಡೆದಿವೆ.ಈಗ ಕನ್ನಡದಲ್ಲೂ ಅಂತಹ ಪಾಡ್‌ಕಾಸ್ಟ್ ಲಭ್ಯವಿದೆ.ಅನಿವಾಸಿ ಕನ್ನಡಿಗ ಸುದರ್ಶನ್ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಕನ್ನಡದ ಬರಹಗಾರ ಮತ್ತು ಸಿನೆಮಾ ನಿರ್ಮಾಪಕ.ಇವರು ವಾರವಾರ ಪಾಡ್‌ಕಾಸ್ಟನ್ನು ಅಂತರ್ಜಾಲ ತಾಣ http://paaducastu.wordpress.comದ ಮೂಲಕ ಲಭ್ಯವಾಗಿಸುವ ಹುರುಪಿನಲ್ಲಿದ್ದಾರೆ.ಮೊದಲ ಸಂಚಿಕೆಯಿದೀಗಲೇ ಲಭ್ಯವಿದೆ.ಚಿತ್ರಗೀತೆಗಳಿಂದ ತೊಡಗಿ,ಆಯೋಗದ ವರದಿಗಳ ಬಗೆಗಿನ ವಿವಿಧ ಸುದ್ದಿಗಳ ಬಗ್ಗೆ ಹರಟೆ ನಸುನಗೆ ಮೂಡಿಸಲು ಯಶಸ್ವಿಯಾಗಿದೆ.ಆಕಾಶವಾಣಿಯ ಕಾರ್ಯಕ್ರಮಗಳನ್ನು ನೆನಪಿಸುವ ಈ ಧ್ವನಿಕಡತವನ್ನು ಆಲಿಸಲು ಕಂಪ್ಯೂಟರಿನಲ್ಲಿರುವ ಮೀಡಿಯಾಪ್ಲೇಯರ್ ಅಂತಹ ತಂತ್ರಾಂಶ ಬೇಕಾಗುತ್ತದೆ.ಸುದರ್ಶನ ಅವರ ಬ್ಲಾಗ್ ಬರಹಗಳ ಕೊಂಡಿ http://anivaasi.wordpress.com/ನಲ್ಲಿ ಲಭ್ಯವಿದೆ.

ತುಳು ಲಿಪಿ


ತುಳು ಲಿಪಿಗೆ ಯುನಿಕೋಡ್ ಲಭಿಸಲಿ

ಯಾವುದೇ ಭಾಷೆಯನ್ನು ಕಂಪ್ಯೂಟರಿನಲ್ಲಿ ರಗಳೆಯಿಲ್ಲದೆ ಬಳಸಲು ಭಾಷೆಯ ಲಿಪಿಯ ಅಕ್ಷರಗಳಿಗೆ ಯುನಿಕೋಡ್ ಶಿಷ್ಟಾಚಾರ ಪ್ರಕಾರ,ಸಂಕೇತಗಳನ್ನು ನೀಡಬೇಕು.ತುಳುವಿಗೆ ಅಧಿಕೃತ ಭಾಷೆಯ ಮನ್ನಣೆ ಸಿಕ್ಕಿದರೆ ಮಾತ್ರಾ ಈ ಸಂಕೇತಗಳನ್ನು ಪಡೆಯಲು ಸಾಧ್ಯವಾಗಬಹುದಾದ್ದರಿಂದ,ತುಳುವಿಗೆ ಅಧಿಕೃತ ಭಾಷೆಯ ಅಂಗೀಕಾರ ಪಡೆದ ನಂತರವೇ ಇದು ಸಾಧ್ಯವಾದೀತು.ಅದು ವರೆವಿಗೂ,ತುಳು ಲಿಪಿಯ ಫಾಂಟುಗಳನ್ನು ಅನುಷ್ಟಾಪಿಸಿದ ನಂತರವೇ ಕಂಪ್ಯೂಟರಿನಲ್ಲಿ ತುಳು ಲಿಪಿಯನ್ನು ಮೂಡಿಸಲು ಸಾಧ್ಯ.ಸದ್ಯಕ್ಕಂತೂ ತುಳುವರು ಕನ್ನಡದ ಲಿಪಿ ಬಳಸಿಯೇ ತುಳುವನ್ನು ಬ್ಲಾಗು ಬರಹಗಳಲ್ಲಿ ಬಳಸಬಹುದಷ್ಟೆ.
-----------------------------------------------------------------------------------------
ತುಳು ಲಿಪ್ಯಂತರ ನಿಘಂಟು
ತುಳು ಶಬ್ದಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಅರ್ಥ ಹೇಳುವ ಲಿಪ್ಯಂತರ ಆಧಾರಿತ ನಿಘಂಟು ಅಂತರ್ಜಾಲದಲ್ಲಿದೆ.ಇದರಲ್ಲಿ ತುಳು ಶಬ್ದಗಳನ್ನು ಇಂಗ್ಲೀಷ್ ಅಕ್ಷರಗಳಲ್ಲೇ ಬರೆಯಲಾಗಿದ್ದು,http://www.websters-online-dictionary.org/translation/Tulu ಅಂತರ್ಜಾಲ ವಿಳಾಸದಲ್ಲಿ ಲಭ್ಯವಿದೆ.ಇಲ್ಲಿ ತುಳು ಶಬ್ದಗಳನ್ನು ಪಟ್ಟಿ ಮಾಡಲಾಗಿದ್ದು,ಶೋಧ ಸೇವೆಯೂ ಲಭ್ಯವಿದೆ.ದೈನಂದಿನ ವ್ಯವಹಾರದಲ್ಲಿ ಬಳಸುವ ವಾಕ್ಯಗಳನ್ನೂ ಇಲ್ಲಿ ಪಟ್ಟಿ ಮಾಡಲಾಗುವುದರಿಂದ,ಭಾಷೆಯನ್ನು ಕಲಿಯಲೂ ಸಹಾಯಕವಾಗಬಹುದು.
ಪದಗಳ ಮೂಲವನ್ನು ಹೇಳುವ ಕೋಶವೊಂದು ಅಂತರ್ಜಾಲದಲ್ಲಿ ಲಭ್ಯವಿದೆ.ಇದರಲ್ಲಿ ವಿವಿಧ ಶಬ್ದಗಳ ವ್ಯುತ್ಪತ್ತಿಯಾದ ಬಗೆಯನ್ನು ಹೇಳಲಾಗಿದೆ.ಇದರಲ್ಲಿ ತುಳು ಶಬ್ದಗಳನ್ನೂ ಉಲ್ಲೇಖಿಸಲಾಗಿದೆ.ದ್ರಾವಿಡ ಭಾಷೆಗಳ ಮೂಲವನ್ನು ಹೇಳುವ ಈ ನಿಘಂಟು http://dsal.uchicago.edu ಈ ಅಂತರ್ಜಾಲ ತಾಣದಲ್ಲಿ ಲಭ್ಯ.ಕನ್ನಡ,ತಮಿಳು,ಮಲೆಯಾಳಮ್,ಕೊಂಕಣಿ ಪದಗಳೂ ಇದರಲ್ಲಿ ಸಿಗುವುದು ವಿಶೇಷ.
----------------------------------------------------------------------------------
ತುಳು ತಂತ್ರಾಂಶ ತೌಳವ
ತೌಳವ 2.0 ಎನ್ನುವ ತುಳು ಲಿಪಿಯಲ್ಲಿ ಟೈಪ್ ಮಾಡಲು ಅನುವು ಮಾಡುವ ತಂತ್ರಾಂಶವೀಗ ಸಿದ್ಧವಾಗಿದೆ.ತುಳು ಲಿಪಿಯಲ್ಲಿ ಐವತ್ತು ಅಕ್ಷರಗಳಿದ್ದು,ಮಲಯಾಳವನ್ನು ಹೋಲುತ್ತದೆ.ಈ ಲಿಪಿಯನ್ನು ಕಂಪ್ಯೂಟರಿನಲ್ಲಿ ಅಳವಡಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.ನುಡಿ ತಂತ್ರಾಂಶದ ಕೀಲಿ ಮಣೆವಿನ್ಯಾಸವನ್ನು ಬಳಸಿ ಟೈಪ್ ಮಾಡಲು ಸಾಧ್ಯ.ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರ ಸಮಿತಿಯು ತಂತ್ರಾಂಶದ ಅಭಿವೃದ್ಧಿ ಮಾಡುತ್ತಲಿದೆ.ಉಜಿರೆಯಲ್ಲಿ ನಡೆದ ತುಳು ವಿಶ್ವಸಮ್ಮೇಳನದಲ್ಲಿ ತಂತ್ರಾಂಶದ ಪ್ರಾಯೋಗಿಕ ಆವೃತ್ತಿಯನ್ನು ಪ್ರದರ್ಶಿಸಿದಾಗ, ತಂತ್ರಾಂಶ ಪ್ರವೀಣ ಸತ್ಯಶಂಕರ ಮತ್ತು ಹರಿಕೃಷ್ಣ ಅವರು ಹಾಜರಿದ್ದರೆ,ನಿರ್ದೇಶಕರಾದಪ್ರವೀಣರಾಜ್ ರಾವ್,ತುಳು ಭಾಷಾ ಪ್ರವೀಣರಾದ ಪಿ.ವೆಂಕಟರಾಜ ಪುಣಿಂಚಿತಾಯ,ವಿಘ್ನರಾಜ್ ಧರ್ಮಸ್ಥಳ ಮತ್ತು ಪದ್ಮನಾಭ ಕೇಕುಣ್ಣಾಯ ಮುಂತಾದವರೂ ಭಾಗವಹಿಸಿದ್ದರು.
----------------------------------------------------

ಕನ್ನಡ ಅಂತರ್ಜಾಲ ತಾಣಗಳು

 ಕನ್ನಡ ಬ್ಲಾಗ್ಸ್ http://kannadablogs.ning.com/ ಕನ್ನಡದ ಹೊಸ ಅಂತರ್ಜಾಲ ತಾಣವಾಗಿ ಮೂಡಿಬಂತು.ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವುದು ಮತ್ತು ಪುಸ್ತಕ ಬಿಡುಗಡೆ, ಚರ್ಚೆಗಳಂತಹ ಚಟುವಟಿಕೆಗಳನ್ನು ಅವರ ಗಮನಕ್ಕೆ ತರುವ ಕಾರ್ಯದಲ್ಲಿ ಕನ್ನಡಬ್ಲಾಗ್ಸ್ ತಾಣ ಅಪೂರ್ವ ಯಶಸ್ಸು ಕಂಡಿದೆ. ವರ್ಷಾಂತ್ಯಕ್ಕೆ ಎರಡೂಕಾಲು ಸಾವಿರ ಸದಸ್ಯರನ್ನು ನೋಂದಾಯಿಸಿ,ಇನ್ನೂ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ತಾಣವಿದು.ಮೇ ಫ್ಲವರ್ ಮೀಡಿಯಾ ಹೌಸ್ ಈ ತಾಣವನ್ನು ನಿರ್ವಹಿಸುತ್ತಿದೆ. "ಕೆಂಡಸಂಪಿಗೆ" ಹಿನ್ನೆಲೆಗೆ ಸರಿದುದು ಅನಿರೀಕ್ಷಿತ ಬೆಳವಣಿಗೆ.ಅನಿವಾಸಿ ಭಾರತೀಯರನ್ನು ಬಹುವಾಗಿ ಆಕರ್ಷಿಸುವಲ್ಲಿ ಸಫಲವಾಗಿರುವ ದಟ್ಸ್‌ಕನ್ನಡ.ಕಾಮ್ thatskannada.com ಕನ್ನಡದ ಜನಪ್ರಿಯ ತಾಣ. ಸುದ್ದಿಯನ್ನೂ ಪ್ರಕಟಿಸುವ ಈ ತಾಣ, ಎಲ್ಲಾ ತರದ ಮಸಾಲೆಯನ್ನೂ ಹೊಂದಿರುವುದೇ ಇದರ ಜನಪ್ರಿಯತೆಯ ಗುಟ್ಟು. ಬರಹಗಾರರಿಗೆ ತಮ್ಮ ಬರಹವನ್ನು ಯಾವುದೇ ಸಂಪಾದಕರ ಕತ್ತರಿಗೊಳಗಾಗದೆ ದಿಡೀರ‍್ ಆಗಿ ಪ್ರಕಟಿಸಿ, ಓದುಗರಿಂದ ಮತ್ತು ಸದಸ್ಯರಿಂದ ಪ್ರತಿಕ್ರಿಯೆ ಪಡೆಯಲು ಅನುವು ಮಾಡುವ ಸಂಪದ.ನೆಟ್(sampada.net ) ನಂಬರ್ 2 ಸ್ಥಾನದಲ್ಲಿರುವ ಕನ್ನಡ ತಾಣ.ಜಾಹೀರಾತಿನ ಕಾಟವಿಲ್ಲದೆ,ಅತ್ಯುತ್ತಮ ಬಳಕೆದಾರ ಸ್ನೇಹಿ ಪುಟ ವಿನ್ಯಾಸ ಹೊಂದಿದ ಸಂಪದಕ್ಕೆ ಹರಿಪ್ರಸಾದ್ ನಾಡಿಗ್ ಸಾರಥ್ಯವಿದೆ. ಸದಸ್ಯರ ಸಂಖ್ಯೆ ಆರೂವರೆ ಸಾವಿರಕ್ಕೂ ಹೆಚ್ಚು.ನೀರ ನಿಶ್ಚಿಂತೆ ಸಾಧಿಸುವ ಗುರಿ ಹೊತ್ತ ಕನ್ನಡ ವಾಟರ್ ಪೋರ್ಟಲ್, ಆರೋಗ್ಯ ಸಂಪದ, ಕೃಷಿ ಸಂಪದಗಳೂ ಸಂಪದದ ಛತ್ರದಡಿ ಬರುತ್ತವೆ.ಈ ವರ್ಷ ಈ ತಾಣವೂ ನಿರ್ವಹಣೆಗಾಗಿ ಎರಡು ತಿಂಗಳ ಕಾಲ ನಿಲುಗಡೆಯಾಯಿತು.ಸಂಪನ್ಮೂಲಗಳಿಗಾಗಿ ಕನ್ನಡಿಗರತ್ತ ನೋಡುತ್ತಿರುವ ಸಂಪದವನ್ನು ಕನ್ನಡಿಗರು ಪ್ರೋತ್ಸಾಹಿಸಲು ಮನ ಮಾಡಬೇಕಿದೆ.ಕನ್ನಡದಲ್ಲೂ ಟ್ವಿಟರನ್ನು ಹೋಲುವ ಇಂಚರ ಎನ್ನುವ ತಾಣ ಆರಂಭವಾಯಿತು.ವಸಂತ್ ಕಜೆ ಎನ್ನುವ ತಂತ್ರಜ್ಞ ಇದನ್ನು ನಿರ್ವಹಿಸುತ್ತಿದ್ದಾರೆ.ನೀರಿನ ಬಗ್ಗೆ ಮಾಹಿತಿಯನ್ನೊಳಗೊಂಡ http://kannada.indiawaterportal.org/ ಕೂಡಾ ಸಾಕಷ್ಟು ಜನಪ್ರಿಯವಾಯಿತು.

ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ

ಕೃಷ್ಣದೇವರಾಯ ಅಂತರ್ಜಾಲ ತಾಣಕ್ಕೆ


ವಿಜಯನಗರ ಸಾಮ್ರಾಜ್ಯದ ಶ್ರೀಕ್ರಷ್ಣದೇವರಾಯ ಮಹಾರಾಜ.ತುಳುವ ವಂಶದ ಈ ದೊರೆಯ ಕಾಲವನ್ನು ಸುವರ್ಣಯುಗವೆಂದು ಕರೆಯಲಾಗುತ್ತದೆ.ಈತನ ಪಟ್ಟಾಭಿಷೇಕದ ಐನೂರನೇ ವರ್ಷಾಚರಣೆ ಈಚೆಗೆ ಹಂಪಿಯಲ್ಲಿ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. http://krishnadevaraya.in ಅಂತರ್ಜಾಲ ತಾಣವು ಈ ಸಂದರ್ಭದಲ್ಲಿ ಆಸ್ತಿತ್ವಕ್ಕೆ ಬಂದಿದೆ.ಇಲ್ಲಿ ಮಹಾರಾಜನ ಆಡಳಿತದ,ಕಾರ್ಯಕ್ರಮಗಳ ವಿವರಗಳಿವೆ.ಅಂತರ್ಜಾಲತಾಣ ತಾಣವಿನ್ನೂ ಸಂಪೂರ್ಣವಾದ ಹಾಗಿಲ್ಲ.ಹೆಚ್ಚಿನ ಕೊಂಡಿಗಳು ಒಂದು ವಾಕ್ಯಕ್ಕೇ ಸೀಮಿತವಾಗಿದೆ,ವಿವರಗಳನ್ನು ಹೊಂದಿಲ್ಲ!