ಮಂಗಳವಾರ, ಸೆಪ್ಟೆಂಬರ್ 28, 2010

ನಿಮ್ಮದೇ ಸ್ವಂತ ವೆಬ್ ಸೈಟ್ ರೂಪಿಸಿಕೊಳ್ಳಿ

ಯುವ ಪೀಳಿಗೆಯನ್ನು ಬಹುವಾಗಿ ಆಕರ್ಷಿಸುತ್ತಿರುವ ಇಂಟರ್ನೆಟ್ [^] ಈ-ಯುಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕೆಲ ವರ್ಷಗಳ ಹಿಂದೆ ಕೇವಲ ಸಂಪರ್ಕ ಸಾಧನೆಗಾಗಿ ಬಳಸಲಾಗುತ್ತಿದ್ದ ಇಂಟರ್ನೆಟ್ ಇಂದು ಬ್ಲಾಗ್ ಮತ್ತು ಸೋಷಿಯಲ್ ವೆಬ್ ಸೈಟ್ ಗಳ ಮುಖಾಂತರ ಪ್ರತಿಯೊಬ್ಬರ ವೈಯಕ್ತಿಕ, ಸಾರ್ವಜನಿಕ, ಸಾಮಾಜಿಕ, ಆರ್ಥಿಕ ಜೀವನದ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ.

ಬಹುಶಃ ಇಂಟರ್ನೆಟ್ ಮಾಧ್ಯಮವೊಂದೇ ಪ್ರತಿಯೋರ್ವನನ್ನು ಅನೇಕ ಹಂತಗಳಲ್ಲಿ ಬಂಧಿಸಿಟ್ಟಿದೆ. ನಮಗೆ ಸಂಬಂಧಿಸಿದ ಮಾಹಿತಿಯನ್ನು ಅಂತರ್ಜಾಲ [^]ಕ್ಕೆ ಹರಿಯಬಿಡಲು ಇತರ ವೆಬ್ ಸೈಟುಗಳನ್ನು ಅವಲಂಬಿಸುವುದಕ್ಕಿಂತ ನಮ್ಮದೇ ಆದ ವೆಬ್ ಸೈಟ್ ರೂಪಿಸಿಕೊಂಡರೆ ಹೇಗೆ? ವೆಬ್ ಸೈಟನ್ನು ಈ-ಮೇಲ್ ಅಥವಾ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟಲ್ಲಿ ಖಾತೆ ತೆರೆದಷ್ಟೇ ಸುಲಭವಾಗಿ ತಯಾರಿಸಬಹುದು.

ನಾವೇ ಏಕೆ ವೆಬ್ ಸೈಟ್ ರೂಪಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿ ಏಳು ಕಾರಣಗಳನ್ನು ನೀಡಲಾಗಿದೆ.

1) ಭಾವಚಿತ್ರ ಸಂಗ್ರಹ : ನಿಮ್ಮ ಫೋಟೋ ಗ್ಯಾಲರಿ [^]ಯನ್ನು ಜಗತ್ತಿಗೆ ತೋರ್ಪಡಲು ಫೇಸ್ ಬುಕ್ ಅಥವಾ ಟ್ವಿಟ್ಟರ್ [^] ನಂಥ ತಾಣಗಳನ್ನು ಅವಲಂಬಿಸಬೇಕಿಲ್ಲ. ನಿಮ್ಮದೇ ಆದ ವೆಬ್ ಸೈಟ್ ರೂಪಿಸಿ ಆನ್ ಲೈನ್ ಡೈರಿ ಅಥವಾ ಫೋಟೋ ಗ್ಯಾಲರಿ ಮುಖಾಂತರ ನಿಮ್ಮಿಷ್ಟದಂತೆ ಗ್ಯಾಲರಿ ತಯಾರಿಸಬಹುದು.

2) ನಿಮ್ಮ ದನಿಯನ್ನು ಜಗತ್ತೂ ಕೇಳಲಿ : ನಿಮ್ಮ ಜ್ಞಾನದ, ಅನುಭವಗಳ ಮೂಟೆಯನ್ನು ನಿಮ್ಮಂತೆಯೇ ಯೋಚಿಸುವ ಜಾಗತಿಕ ಸ್ನೇಹಿತರ ಮುಂದೆ ಬಿಚ್ಚಿಡಲು ನಿಮ್ಮ ಅಂತರ್ಜಾಲ ತಾಣಕ್ಕಿಂತ ಪ್ರಶಸ್ತ ಸ್ಥಳ ಸಿಗಲಾರದು. ಚರ್ಚಾ ವೇದಿಕೆ, ಫೋರಂಗಳಲ್ಲಿ ಯಾವುದೇ ವಿಷಯ ಕುರಿತಂತೆ ಮುಕ್ತ ಚರ್ಚೆ ನಡೆಸಬಹುದು. ನಿಮ್ಮ ದನಿಯನ್ನು ಆಲಿಸಿದವರೂ ಗೆಸ್ಟ್ ಬುಕ್ ನಲ್ಲಿ ತಮ್ಮ ಅನಿಸಿಕೆ ಪ್ರಕಟಿಸಬಹುದು.

3) ಕಡಿಮೆ ಬಂಡವಾಳ ಹೂಡಿಕೆ ಅಧಿಕ ಲಾಭ : ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಣ ಮಾಡಲು ಇಲ್ಲಿ ಸಾಧ್ಯ. ವೆಬ್ ಸೈಟ್ ಸಂದರ್ಶಕರು ಕೆಲ ಉತ್ಪನ್ನಗಳ ಮೇಲೆ ಅಥವಾ ಜಾಹೀರಾತುಗಳ ಮೇಲೆ ಅಥವಾ ಗೂಗಲ್ ಆಡ್ ಸೆನ್ಸ್, ಆಡ್ ವರ್ಡ್ಸ್ ಗಳಂಥ ಕೊಂಡಿಗಳ ಮೇಲೆ ಕ್ಲಿಕ್ಕಿಸುವಂತೆ ಮಾಡಿ ಸುಲಭವಾಗಿ ನಿಮ್ಮ ಜೇಬು ತುಂಬಿಸಿಕೊಳ್ಳಬಹುದು.

4) ಸಂಪೂರ್ಣ ಸ್ವಾತಂತ್ರ್ಯ ನಿಮ್ಮದು : ಸೋಷಿಯಲ್ ವೆಬ್ ಸೈಟುಗಳು ಇಂಟರ್ನೆಟ್ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನೀಡುವ ಸಕಲ ಸವಲತ್ತುಗಳನ್ನು ನೀಡಿದ್ದರೂ, ಅಲ್ಲಿ ನಿಮ್ಮಿಷ್ಟದ ಡಿಸೈನಿನಂತೆ ಪ್ರಕಟಿಸುವುದು ಸಾಧ್ಯವಿಲ್ಲ. ಸ್ವಂತ ವೆಬ್ ಸೈಟಿನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿಮ್ಮಿಷ್ಟದ ಡಿಸೈನ್ ಬಳಸಿ ಮಾಹಿತಿ ನೀಡುವ ಸಂಪೂರ್ಣ ಸ್ವಾತಂತ್ರ್ಯ ನಿಮ್ಮದು.

5) ಏಕತೆಯಲ್ಲಿ ಅನೇಕತೆ : ಏಕತೆಯಲ್ಲಿ ಅನೇಕತೆಗಳನ್ನು ಸಾಧಿಸುವುದು ವೆಬ್ ಸೈಟ್ ನಿಮ್ಮದೇ ಒಡೆತನದಲ್ಲಿ ಇದ್ದಾಗ ಮಾತ್ರ. ಒಂದೇ ಡೊಮೇನ್ ಅಡಿಯಲ್ಲಿ ವಿಭಿನ್ನ ಹಂತಗಳಲ್ಲಿ ವೈವಿಧ್ಯಮಯ ಹವ್ಯಾಸ, ಆಸಕ್ತಿ, ರುಚಿಗೆ ತಕ್ಕಂತೆ ವಿಶಿಷ್ಟಬಗೆಯ ಪುಟಗಳನ್ನು ತಯಾರಿಕೆ ಇಲ್ಲಿ ಸಾಧ್ಯವಿದೆ.
 
 
6) ಬ್ಲಾಗ್ ಮಂಡಲ : ಇಂಟರ್ನೆಟ್ ನಲ್ಲಿ ಬ್ಲಾಗುಗಳು ಇನ್ನಿಲ್ಲದಂತೆ ಜನಪ್ರಿಯವಾಗುತ್ತಿವೆ. ಸರ್ಚ್ ಇಂಜಿನ್ ಗಳಿಗೆ ಕೂಡ ಬ್ಲಾಗ್ ಗಳೆಂದರೆ ವಿಶೇಷ ಮಮತೆ. ಓದುಗರ ಸೃಜನಾತ್ಮಕತೆಯನ್ನು ಬಡಿದೆಬ್ಬಿಸಲು ಬ್ಲಾಗುಗಳು ಬಹಳ ಸಹಕಾರಿಯಾಗುತ್ತಿವೆ. ನೆಟ್ಟಿಗರನ್ನು ಹೆಚ್ಚು ಹೆಚ್ಚಾಗಿ ಸೆಳೆಯಲು ಬ್ಲಾಗ್ ಗಳಿಗೆ ಕೂಡ ಇಲ್ಲಿ ಅವಕಾಶ ನೀಡಲು ಸಾಧ್ಯ.

7) ಜೇಬಿಗೆ ಭಾರವಲ್ಲ : ಹಣ ಹೂಡಿಕೆ ಗಾಬರಿ ಬೀಳುವಂಥ ವಿಷಯವೇ ಅಲ್ಲ. ವೈಯಕ್ತಿಕ ಬಳಕೆಗಾಗಿಯೇ ಇರಲಿ ವ್ಯಾಪರಕ್ಕಾಗಿಯೇ ಇರಲಿ ನಿಮ್ಮ ಕೈಗೆಟಕುವ ದರದಲ್ಲಿ ವೆಬ್ ಸೈಟ್ ರೂಪಿಸುವುದು ಜೇಬಿಗೇನು ಭಾರವಾಗಲಾರದು. ವಾರಕ್ಕೆರಡು ಸಿನೆಮಾ ನೋಡುವವರು ದರ ನೋಡಿ ಬೇಸ್ತು ಬಿದ್ದರೂ ಆಶ್ಚರ್ಯವಿಲ್ಲ. ಡೊಮೇನ್ ಹೆಸರು ಪಡೆಯಲು ವರ್ಷಕ್ಕೆ ಕೇವಲ 185 ರು.! ಹೋಸ್ಟಿಂಗ್ ಪ್ಲಾನ್, ಸಾಕಷ್ಟು ಸ್ಥಳ, ಒಂದು ಉಚಿತ ಈ-ಮೇಲ್ ಖಾತೆ, ಮಾಹಿತಿ ವರ್ಗಾವಣೆ ಮುಂತಾದ ಸೌಲಭ್ಯಗಳು ಈ ದರಕ್ಕೇ ಸಿಗಲಿವೆ.

ರವಿ ಬೆಳಗೆರೆ “ಫಸ್ಟ್ ಹಾಫ್…”

ಇಂತಿಪ್ಪ “ಫಸ್ಟ್ ಹಾಫ್…” ಕೃತಿಯ ಕೆಲಪುಟಗಳನ್ನು ಆ ಮೂಲಕ ಬೆಳಗೆರೆಯವರ ಅನುಭವದ ನುಡಿಗಳನ್ನು ಜೊತೆ ಜೊತೆಗೇ ಹಲವು ಅಮೂಲ್ಯ ಭಾವಚಿತ್ರಗಳನ್ನೂ ಸಹಾ ಈ ಬ್ಲಾಗಿನಲ್ಲಿ ಪ್ರಕಟಿಸಲಾಗುತ್ತಿದೆ. ಒಮ್ಮೆ ಭೇಟಿ ಮಾಡಿ ತಮ್ಮ ಅನಿಸಿಕೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿ.

ಇಂಟರ್ ನೆಟ್ ಇದ್ದರಷ್ಟೇ ವ್ಯಾಪಾರಕ್ಕೆ ವ್ಯಾಪಕ ಲಾಭ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ತಂತ್ರಜ್ಞಾನದೊಡನೆ ನಿಮ್ಮ ವ್ಯಾಪಾರ, ವಹಿವಾಟನ್ನು ಹೊಂದಿಸಿಕೊಳ್ಳದಿದ್ದರೆ. ಮಾರುಕಟ್ಟೆಯಲ್ಲಿ ನಿಮ್ಮ ಸಂಸ್ಥೆ ಹಳೆ ಗುಜರಿ ಅಂಗಡಿಯಂತೆ ಕಾಣುವುದಂತೂ ಖಂಡಿತ. ಆದ್ದರಿಂದ ಅನುಭವದ ಜೊತೆಗೆ ಹೊಸ ತಂತ್ರಜ್ಞಾನವನ್ನು ಸಮವಾಗಿ ಬೆರೆಸಿ ಸಂಸ್ಥೆಯನ್ನು ಮುನ್ನೆಡೆಸುವ ಅಗತ್ಯವಿದೆ.

ಸಣ್ಣ ಪ್ರಮಾಣದ ಉದ್ದಿಮೆಯಿಂದ ಹಿಡಿದು, ಮಧ್ಯಮ, ಭಾರಿ ಗಾತ್ರದ ಕೈಗಾರಿಕೆಗಳಿಗೂ ಕೂಡಾ ಇಂಟರ್ ನೆಟ್ ಸಹಾಯಕವಾಗಬಲ್ಲದು. 'ಇಂಟರ್ ನೆಟ್ ಎಂಬುದು ಸಾಫ್ಟ್ ವೇರ್ [^] ಕಂಪೆನಿಗಳ ಅಗತ್ಯತೆ, ಇತರೆ ಕಂಪೆನಿಗಳಿಗೆ ಅದರ ಅವಶ್ಯಕತೆ ಇಲ್ಲ' ಎಂಬ ಅಘೋಷಿತ ಮಾತು ಉದ್ದಿಮೆ ರಂಗಗಳಲ್ಲಿ ಚಾಲ್ತಿಯಲ್ಲಿದೆ. ಇದು ಸತ್ಯಕ್ಕೆ ದೂರವಾದ ಮಾತು.

ನಿಮ್ಮ ವ್ಯಾಪಾರ ವಹಿವಾಟು ವರ್ಲ್ಡ್ ವೈಡ್ ವೆಬ್ ಗೆ ಒಮ್ಮೆ ಸೇರಿದರೆ ಸಾಕು ಹಲವಾರು ಅವಕಾಶಗಳು ನಿಮ್ಮ ಕಂಪೆನಿ ಬಾಗಿಲು ತಟ್ಟಲಾರಂಭಿಸುತ್ತದೆ. ಮಾರ್ಕೆಟಿಂಗ್, ಜಾಹೀರಾತು, ಕಂಪೆನಿಯ ವರ್ಚಸ್ಸು ಹೆಚ್ಚಿಸುವುದಕ್ಕೆ, ಸಂವಹನ ಸಂಪರ್ಕ ಸಾಧಿಸುವುದಕ್ಕೆ, ಗ್ರಾಹಕರೊಡನೆ ಸದಾ ನೇರ ಸಂಪರ್ಕ ಹೊಂದುವುದಕ್ಕೆ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಉತ್ಪನ್ನಗಳನ್ನು ಹೊರ ತರುವುದಕ್ಕೆ ಇಂಟರ್ ನೆಟ್ ಸಹಕಾರಿಯಾಗಲಿದೆ.

ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬ್ಲಾಗ್ [^] ಗಳನ್ನು ಹೊಂದಿದರೆ, ವೆಬ್ ಪ್ರಪಂಚದಲ್ಲಿ ಕಾಲಿರಿಸಿದಂತೆ ಎಂಬ ಭ್ರಮೆ ಇದ್ದರೆ ಈಗಲೇ ಬದಲಾಯಿಸಿಕೊಳ್ಳಿ. ಬ್ಲಾಗ್ ಗಳು ಸರಳವಾಗಿ ಆಕರ್ಷಕವಾಗಿ ಕಂಡರೂ ಅದು ಬಾಡಿಗೆ ಮನೆ ಇದ್ದಂತೆ, ಸ್ವಂತ ವೆಬ್ ತಾಣ ಹೊಂದಿ, ಸ್ವಂತ ಮನೆಯಲ್ಲಿ ಇರುವ ಸುಖ ಪಡೆಯುವ ಹಂಬಲ ನಿಮ್ಮದಾಗಬೇಕು.

ಬ್ಲಾಗ್ ನಲ್ಲಿರುವ ವಿಷಯಗಳು ನಿಮ್ಮದಾದರೂ ಅದರ ಒಡೆತನ ಗೂಗಲ್  ಅಥವಾ ಇನ್ಯಾವುದೋ ಸಂಸ್ಥೆಗೆ ಸೇರಿರುತ್ತದೆ. ಗೂಗಲ್ ನ ನಿಯಮಾವಳಿಗೆ ತಕ್ಕಂತೆ ನಿಮ್ಮ ಲೇಖನಗಳು, ಚಿತ್ರಗಳು ಹಾಗೂ ಪೂರ್ತಿ ಬ್ಲಾಗ್ ಕುಣಿಯಬೇಕಾಗುತ್ತದೆ. ಅಲ್ಲದೆ, ನಿಯಮ ಮುರಿದರೆ ಇದ್ದಕ್ಕಿದ್ದಂತೆ ನಿಮ್ಮ ಬ್ಲಾಗ್ ಅನ್ನು ಶಾಶ್ವತವಾಗಿ ಕಳೆದುಕೊಳ್ಳುವ ಭಯ ಕೂಡ ಇರುತ್ತದೆ. ಇದಲ್ಲದೆ, ನಿಮ್ಮ ಅಗತ್ಯಕ್ಕೆ ಬ್ಲಾಗ್ ಅನ್ನು ವಿನ್ಯಾಸಗೊಳಿಸಿಕೊಳ್ಳಬೇಕಾದರೆ ಕೊಂಚ ಪರಿಣತಿ ಕೂಡಾ ಬೇಕು. ಇಲ್ಲದಿದ್ದರೆ ಒಂದು ಮಾಡಲು ಹೋಗಿ ಮತ್ತೊಂದು ಮಾಡಿದ ಹಾಗೆ ಆದರೆ ಕಷ್ಟ.

ಆನ್ ಲೈನ್ ನಲ್ಲಿ ನಿಮ್ಮ ಕಂಪೆನಿಗೆ ಆದ ಒಂದು ಪ್ರತ್ಯೇಕ ಸ್ಥಾನ ಸಿಗಬೇಕಾದರೆ ವಿಶಿಷ್ಟವಾದ ವೆಬ್ ತಾಣವನ್ನು ಹೊಂದುವುದು ಮುಖ್ಯ. ನಿಮ್ಮ ಸಂಸ್ಥೆಯ ಉತ್ಪನ್ನ ಹಾಗೂ ಸೇವೆಗಳ ಬಗ್ಗೆ ವೆಬ್ ಮೂಲಕ ನಿಮ್ಮ ಗ್ರಾಹಕರು, ಸ್ನೇಹಿತರು, ಕುಟುಂಬ ವರ್ಗ ಹಾಗೂ ಇನ್ನಿತರ ಸಾರ್ವಜನಿಕರು ಸುಲಭವಾಗಿ ತಿಳಿದುಕೊಳ್ಳಬಹುದು.

ವೆಬ್ ತಾಣಕ್ಕೊಂದು ಸೂಕ್ತ ಹೆಸರು:ಮೊದಲೇ ಹೇಳಿದಂತೆ ಬ್ಲಾಗ್ ನಲ್ಲಿ ಈ ಸೌಲಭ್ಯಗಳು ಸಿಗುವುದಿಲ್ಲ. ಪರಿಣತಿ ಇಲ್ಲದಿದ್ದರೆ ನಿಮ್ಮ ಬ್ಲಾಗ್ ಅನ್ನು ಉಪಯೋಗಿಸಿ ಪರಿಪೂರ್ಣ ಲಾಭ [^] ಗಳಿಸಲು ಸಾಧ್ಯವಿಲ್ಲ. ವೆಬ್ ತಾಣಗಳಲ್ಲಿ .in, .edu, .org, .net ಹೀಗೆ ಆಯ್ಕೆಗಳಿದ್ದರೂ ಉದ್ದಿಮೆಗಳಿಗೆ .com ಬಳಸುವುದು ಉತ್ತಮ.

ವೆಬ್ ತಾಣ ರೂಪಿಸುವ ಮೊದಲು ವೆಬ್ ತಾಣಕ್ಕೊಂದು ಸೂಕ್ತ ಹೆಸರು ಪಡೆಯಬೇಕು. ನಿಮ್ಮ ಸಂಸ್ಥೆ ಅಥವಾ ಬ್ರ್ಯಾಂಡ್ ನೇಮ್ ಹೆಸರನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು.

ನೀವು ನೋಂದಣಿ ಮಾಡಿಕೊಳ್ಳುವ ಹೆಸರು ಸರ್ಚ್ ಇಂಜಿನ್ ಗೆ ಸಿಗುವ ರೀತಿಯಲ್ಲಿದ್ದರೆ ಸೂಕ್ತ. ಹಾಗೂ ಡೊಮೈನ್ ನೇಮ್ ಆನ್ನು ಎಷ್ಟು ಕಾಲಕ್ಕಾಗಿ ಖರೀದಿಸಿದ್ದೀರಾ ಎಂಬುದು ಮುಖ್ಯ. ಕಡಿಮೆ ಅವಧಿಯ ತಾತ್ಕಾಲಿಕ ಡೊಮೆನ್ ನೇಮ್ ಪಡೆದು ಆಮೇಲೆ ಕಷ್ಟ ಪಡುವ ಬದಲು ದೀರ್ಘಾವಧಿ ಅವಧಿಗೆ ಡೊಮೈನ್ ಪಡೆಯುವುದು ಜಾಣತನ.

ಡೊಮೈ ನ್ ನೇಮ್ ನೋಂದಣಿ ಆದ ಮೇಲೆ, ಅಗತ್ಯಕ್ಕೆ ತಕ್ಕ ಹಾಗೆ ಇಮೇಲ್ ವಿಳಾಸಗಳನ್ನು ರೂಪಿಸುವುದು ಮುಖ್ಯ. ಏಕೆಂದರೆ, ನಿಮ್ಮ ಗ್ರಾಹಕರೊಡನೆ ಸಂಪರ್ಕ ವಿಳಾಸ ಇದೇ ಇ ಮೇಲ್ ಗಳ ಮೂಲಕ ಆಗುವುದು ಜಾಸ್ತಿ.

ಇದಲ್ಲದೆ, ಸ್ವಂತದ ವೆಬ್ ತಾಣದ ಹೆಸರು ಹೊಂದಿದ ಮೇಲೆ ನಿಮಗೆ ಅಗತ್ಯ ವಿರುವಷ್ಟು ಡೊಮೈನ್ ಸ್ಪೇಸ್ ಖರೀದಿಸಬೇಕು. ನಂತರ ಸುಲಭ ರೀತಿಯಲ್ಲಿ ಅದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಪಳಗಿಸಿಕೊಳ್ಳಬೇಕು. ಸರಳವಾದ HTML ಪೇಜುಗಳಿಂದ ಹಿಡಿದು, ವರ್ಲ್ಡ್ ಪ್ರೆಸ್ ಮಾದರಿ CMS ಬಳಕೆಗೆ ಕೂಡಾ ಅವಕಾಶವಿರಬೇಕು. 
              ಒಟ್ಟಿನಲ್ಲಿ ಡೊಮೈನ್ ಹೋಸ್ಟಿಂಗ್ ಮೂಲಕ ನಿಮ್ಮ ಸಂಸ್ಥೆಯ ಪ್ರಭೆಯನ್ನು ಎಲ್ಲೆಡೆ ಹರಡಬಹುದು. ಆಗಿದ್ದ್ದರೆ ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ನಿಮ್ಮ ವ್ಯಾಪಾರ ವೃದ್ಧಿಸುವ ಹೊಸ ವಿಧಾನವನ್ನು ಕಂಡುಕೊಳ್ಳಿ

ನಿಮ್ಮದೇ ಆದ ವೆಬ್ ತಾಣ ಹೊಂದಬೇಕೆ ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ
 

ಶುಕ್ರವಾರ, ಸೆಪ್ಟೆಂಬರ್ 24, 2010

ಇಂಟರ್ನೆಟ್ಟಲ್ಲಿ ಕನ್ನಡ ಟೈಪ್ ಮಾಡುವುದು ಹೇಗಯ್ಯಾ?


ದೊಂದು ದೊಡ್ಡ ಸಮಸ್ಯೆ ಅಂತ ಈಗ ಗೊತ್ತಾಯಿತು. ತುಂಬ ಜನರಿಗೆ ಕನ್ನಡದಲ್ಲಿ ಬರೆಯಲು ಬರುತ್ತೆ. ಆದರೆ ಕಂಪ್ಯೂಟರಿನಲ್ಲಿ ಟೈಪ್ ಮಾಡಲು ಕಷ್ಟವಾಗುತ್ತಿದೆ. ಅನೇಕರು ಈ-ಮೇಲಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಅಂಥವರಿಗೆ ಕೆಲ ಸರಳ ಮಾಹಿತಿ ಇಲ್ಲಿದೆ.

A. ಯೂನಿಕೋಡ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಅಕ್ಷರ ಕುರಿತ ಮೂಲಜ್ಞಾನ.
B. ಕನ್ನಡ ಟೈಪಿಸುವ 6 ವಿಧಾನಗಳು. ಸುಲಭವಾದದ್ದನ್ನು ಆರಿಸಿಕೊಳ್ಳಬಹುದು.
C. ಕನ್ನಡ ಟೈಪಿಸುವ 4 ಕೀಬೋರ್ಡ್ ವಿನ್ಯಾಸಗಳ ಪುಟ್ಟ ಮಾಹಿತಿ.

A. ಯೂನಿಕೋಡ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಅಕ್ಷರ ಕುರಿತ ಮೂಲಜ್ಞಾನ.
ಕನ್ನಡ ಯೂನಿಕೋಡ್: ತೀರಾ ಟೆಕ್ನಾಲಜಿ ಕೊರೆತ ಬೇಡ. ಕೇವಲ ಎರಡು-ಮೂರು ವಾಕ್ಯಗಳಲ್ಲಿ ಯೂನಿಕೋಡಿನ ಸ್ಥೂಲ ಪರಿಚಯ ಇದ್ದರೆ ಸಾಕು. ಯುನಿಕೋಡ್ ಅಂದರೆ, ಇಂಟರ್ನೆಟ್ಟಿನಲ್ಲಿ ಬಳಸುವ ಅಕ್ಷರಗಳ ಒಂದು ಶಿಷ್ಟಪದ್ಧತಿ. ಜಗತ್ತಿನ ನೂರಾರು ಭಾಷೆಯ ಅಕ್ಷರಗಳನ್ನು ಇದೊಂದೇ ನಮೂನಿಯಲ್ಲಿ ಬರೆಯಬಹುದು ಹಾಗೂ ಓದಬಹುದು. ಇದರಿಂದಾಗಿ, ಬೇರೆ ಬೇರೆ ಭಾಷೆಯವರು ಬೇರೆ ಬೇರೆ ಭಾಷೆಯ ಫಾಂಟುಗಳನ್ನು ಸಿಕ್ಕ ಸಿಕ್ಕ ಕಂಪ್ಯೂಟರಿನಲ್ಲೆಲ್ಲಾ Install ಮಾಡಿಕೊಳ್ಳಬೇಕೆಂಬ ತಾಪತ್ರಯವಿಲ್ಲ. ಕಂಪ್ಯೂಟರಿನಲ್ಲಿ ಯೂನಿಕೋಡ್ ಹಾಗೂ ಸ್ಥಳೀಯ ಭಾಷೆಯನ್ನು Enable ಮಾಡಿದರೆ ಸಾಕು. UTF ಅಥವಾ UTF8 ಮಾದರಿಯಲ್ಲಿ ಯೂನಿಕೋಡ್ ಬರಹಗಳನ್ನು ಸೇವ್ ಮಾಡಲಾಗಿರುತ್ತದೆ. ಈಗ ಇಂಟರ್ನೆಟ್ಟಿನಲ್ಲಿ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳ ಬ್ಲಾಗುಗಳು ಹಾಗೂ ವೆಬ್ ಸೈಟುಗಳು ಬಳಸುವುದು ಯೂನಿಕೋಡ್ ಮಾದರಿಯ ಅಕ್ಷರಗಳನ್ನು. (ಯೂನಿಕೋಡ್ ಕುರಿತು ಹೆಚ್ಚು ತಿಳಿಯಲು ಇಲ್ಲಿ ನೋಡಿ.)

B. ಕನ್ನಡ ಟೈಪಿಸುವ 6ವಿಧಾನಗಳು.

ಯೂನಿಕೋಡ್ ಆಧರಿಸಿ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಆದರೆ, ಮೊದಲು, ನಿಮ್ಮ ಕಂಪ್ಯೂಟರ್ ಹಾಗೂ ಬ್ರೌಸರ್, ಕನ್ನಡ ಯೂನಿಕೋಡನ್ನು ಅರ್ಥ ಮಾಡಿಕೊಳ್ಳುತ್ತಿದೆಯೇ - ಎಂದು ಮೊದಲು ಅರಿತುಕೊಳ್ಳಿ. ನಿಮ್ಮ ಕಂಪ್ಯೂಟರಿನಲ್ಲಿ Windows 2003 ಅಥವಾ XP ಇದ್ದರೆ, ಸಾಮಾನ್ಯವಾಗಿ ಕನ್ನಡ ಯೂನಿಕೋಡ್ ಅಕ್ಷರಗಳು ಕಾಣಿಸುತ್ತವೆ. ಆದರೆ, ಎಲ್ಲ ಬ್ರೌಸರುಗಳಲ್ಲಿ ಹಾಗೂ ಸಾಫ್ಟ್ ವೇರುಗಳಲ್ಲಿ ಯೂನಿಕೋಡ್ ಅಕ್ಷರ ಕಾಣಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಕ್ಷರಗಳಿದ್ದ ಜಾಗದಲ್ಲಿ ಅಥವಾ ಕಾಣಿಸಿದರೆ, ಆ ಸಾಫ್ಟ್ ವೇರ್ ಅಥವಾ ಬ್ರೌಸರ್ ಯೂನಿಕೋಡ್ ಅಕ್ಷರಗಳನ್ನು ಬೆಂಬಲಿಸುತ್ತಿಲ್ಲ ಎಂದು ಅರ್ಥ. Windows 95 ಹಾಗೂ 98, ಕನ್ನಡ ಯೂನಿಕೋಡನ್ನು ಬೆಂಬಲಿಸುವುದಿಲ್ಲ.

ಕನ್ನಡ ಯೂನಿಕೋಡ್ ಅಕ್ಷರಗಳನ್ನು ಬರೆಯಲು ಬೇಕಾದ ಟೂಲ್.
ಈ ಕೆಳಗಿನ ಆರು ಟೂಲ್ ಬಳಸಿ ಸುಲಭವಾಗಿ ಕನ್ನಡ ಅಕ್ಷರಗಳನ್ನು ಟೈಪ್ ಮಾಡಬಹುದು.
1. ಬರಹ IME
2. ಬರಹ ಪ್ಯಾಡ್
3. ಗೂಗಲ್ ಇಂಡಿಕ್ ಟ್ರಾನ್ಲ್ ಲಿಟರೇಶನ್ ಟೂಲ್
4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್
5. ವಿಂಡೋಸ್ XP ಲಾಂಗ್ವೇಜ್ ಟೂಲ್ / ವಿಂಡೋಸ್ ಕನ್ನಡ IME
6. ಗೂಗಲ್ಲಿನ ಸರಳ ಕನ್ನಡ Bookmarklet

1. ಬರಹ IME : ಬರಹ - ಕನ್ನಡದ ಒಂದು ಅದ್ಭುತ, ಉಚಿತ ಸಾಫ್ಟ್ ವೇರ್. ಕಂಪ್ಯೂಟರ್ ಹಾಗೂ ಇಂಟರ್ನೆಟ್ಟಿನಲ್ಲಿ ಕನ್ನಡ ಬಳಸಲು ಬೇಕಾದ ಬಹುತೇಕ ಎಲ್ಲ Toolಗಳನ್ನೂ "ಬರಹ" ಒಳಗೊಂಡಿದೆ. ಹವ್ಯಾಸಿ ಕನ್ನಡ ಬರಹಗಾರರಿಗೆ, ಅಂತರ್ಜಾಲದಲ್ಲಿ ಕನ್ನಡ ಟೈಪಿಸಲು "ಬರಹ-IME" ಉತ್ತಮ ಟೂಲ್. IME ಅಂದರೆ Input Method Editor. ಇದೊಂದು ಒಂದು ಚಿಕ್ಕ ಪ್ರೋಗ್ರಾಂ.




BarahaIME is a transliteration based software, which can be used to type Indian language Unicode text directly into applications such as Internet Explorer, MS Word, Notepad, e.t.c. It also provides functions for sorting/converting Indian language text. When BarahaIME program is started, it shows as an icon in the system tray at the bottom-right portion of the screen. BarahaIME Supports Kannada, Hindi, Marathi, Sanskrit, Tamil, Telugu, Malayalam, Gujarati, Gurumukhi, Bengali, Assamese, Manipuri and Oriya languages.

ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

2. ಬರಹ ಪ್ಯಾಡ್: ಇತ್ತೀಚೆಗೆ ಬರಹ 8.0 ಹೊಸ ವರ್ಷನ್ ಬಿಡುಗಡೆಯಾಗಿದೆ. ಇದರೊಂದಿಗೆ ಬರಹ ಪ್ಯಾಡ್ ಎಂಬ ಟೂಲ್ ಕೂಡ ಇದೆ. ಇದು ವಿಂಡೋಸ್ ನೋಟ್ ಪ್ಯಾಡಿನಂಥ ಒಂದು ಟೂಲ್. ಇದರಲ್ಲಿ ಕನ್ನಡ ಅಕ್ಷರಗಳನ್ನು ಸುಲಭವಾಗಿ ಟೈಪ್ ಮಾಡಬಹುದು. ಅದನ್ನು ಯೂನಿಕೋಡ್ ನೂಮೂನೆಯಲ್ಲೇ ಸೇವ್ ಮಾಡಬಹುದು ಅಥವಾ ಅದರಲ್ಲಿ ಟೈಪ್ ಮಾಡಿದ ಅಕ್ಷರಗಳನ್ನು ಕಾಪಿ ಮಾಡಿ, ಬ್ಲಾಗುಗಳಲ್ಲಿ ಅಥವಾ ಈಮೇಲುಗಳಲ್ಲಿ ಅಥವಾ ಇನ್ನೆಲ್ಲಾದರೂ ಪೇಸ್ಟ್ ಮಾಡಬಹುದು.

3. ಗೂಗಲ್ ಇಂಡಿಕ್ ಟ್ರಾನ್ಲ್ ಲಿಟರೇಶನ್ ಟೂಲ್ : ಇಂಗ್ಲಿಷ್ ಟೈಪಿಂಗ್ ಮೂಲಕ, ಭಾರತೀಯ ಭಾಷಾ ಅಕ್ಷರಗಳು ಇಂಟರ್ನೆಟ್ಟಿನಲ್ಲಿ ಸುಲಭವಾಗಿ ಕಾಣುವಂತೆ ಮಾಡಲು ಗೂಗಲ್ - ಆನ್ ಲೈನ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿದೆ. "ಫೊನೆಟಿಕ್ ವಿನ್ಯಾಸ" ಆಧಾರಿತ ಈ ಟೂಲ್ ಕನ್ನಡದ ಹವ್ಯಾಸಿ ಬಳಕೆದಾರರಿಗೆ ಯೋಗ್ಯ. ಜಿಮೇಲ್, ಬ್ಲಾಗರ್ ಮುಂತಾದ ಗೂಗಲ್ ಸೇವೆಗಳಲ್ಲಿ ಈ ಟೂಲನ್ನು ನೇರವಾಗಿ ಬಳಸಬಹುದು ಅಥವಾ ಈ ಟೂಲ್ ಬಳಸಿ ಕನ್ನಡಲ್ಲಿ ಟೈಪ್ ಮಾಡಿ ಅದನ್ನು ಕಟ್ ಮಾಡಿ ಬೇಕಾದಲ್ಲಿ ಪೇಸ್ಟ್ ಮಾಡಬಹುದು.

Google Indic Transliteration offers an option for converting Roman characters to the Indian Language characters used in Hindi, Kannada, Tamil etc.. This lets you type Indian Language words phonetically in English script and still have them appear in their correct alphabet. Note that this is not the same as translation -- it is the sound of the words that are converted from one alphabet to the other, not their meaning. For example, typing "Baruttane" transliterates into kannada as: ಬರುತ್ತಾನೆ.

Transliteration is now available in Bengali, Gujarati, Hindi, Kannada, Malayalam, Marathi, Nepali, Tamil, and Telugu. The transliteration feature is available in GMail, Knol, Orkut scraps, Blogger, as part of the Google Language API, and as an iGoogle gadget.

ಈ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ. ಅಥವಾ ವಿವರಗಳು ಬೇಕಾದರೆ ಇಲ್ಲಿ ನೋಡಿ.

ಇದೇ ಟೂಲ್ ಆದಾರಿತ ಹೊಸ ಸರಳ ಕನ್ನಡ Bookmarklet ಎಂಬ ಇನ್ನೊಂದು ಟೂಲ್ ಇದೆ. ಆ ಕುರಿತ ಮಾಹಿತಿ ಇಲ್ಲಿದೆ.

4. ಕ್ವಿಲ್ ಪ್ಯಾಡ್ ಆನ್ ಲೈನ್ ಕನ್ನಡ ಟೂಲ್ : ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ಬಿಡುಗಡೆ ಆಗುವುದಕ್ಕೂ ಮೊದಲೇ ಬೆಂಗಳೂರಿನ Tachyon Technologies ಕಂಪನಿ ಕ್ವಿಲ್ ಪ್ಯಾಡ್ ಎಂಬ ಆನ್ ಲೈನ್ ಕನ್ನಡ ಟ್ರಾನ್ಲ್ ಲಿಟರೇಶನ್ ಟೂಲ್ ಬಿಡುಗಡೆ ಮಾಡಿತ್ತು. ಈ ಟೂಲನ್ನು ಕೆಲವು ಮೊಬೈಲ್ ಫೋನ್ ಕಂಪನಿಗಳೂ ಹ್ಯಾಂಡ್ ಸೆಟ್ಟಿನಲ್ಲಿ ಅಳವಡಿಸಿವೆ. ಇದನ್ನು ಕೂಡ ಗೂಗಲ್ ಇಂಡಿಕ್ ಟ್ರಾನ್ಸ್ ಲಿಟರೇಶನ್ ಟೂಲ್ ರೀತಿಯೇ ಬಳಸಬಹುದು.

ಹೆಚ್ಚಿನ ಮಾಹಿತಿಗೆ ಹಾಗೂ ಟೂಲ್ ಬಳಸಲು ಇಲ್ಲಿ ಕ್ಲಿಕ್ ಮಾಡಿ.


5. ವಿಂಡೋಸ್ XP ಲಾಂಗ್ವೇಜ್ ಟೂಲ್: ಇದು ವಿಂಡೋಸ್ ಬಳಕೆದಾರರಿಗೆ ವರದಾನ. ವಿಂಡೋಸ್ XP ಹಾಗೂ ಆನಂತರದ ವಿಂಡೋಸ್ ಸಾಫ್ಟ್ ವೇರ್ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ನೇರವಾಗಿ ಟೈಪ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ನಾಲ್ಕು ರೀತಿಯ ಕಿಬೋರ್ಡ್ ವಿನ್ಯಾಸವನ್ನು ಹೊಂದಿದೆ. ಫೊನೆಟಿಕ್ ಟ್ರಾನ್ಸ್ ಲಿಟರೇಷನ್ ಕೀಬೋರ್ಡ್, ಬಳಕೆದಾರರ ಸ್ನೇಹಿ ಕಗಪ ಕೀಬೋರ್ಡ್, ವೇಗದ ಬಳಕೆದಾರರಿಗೆ ಬೇಕಾದ ಇನ್ ಸ್ಕ್ರಿಪ್ಟ್ ಕೀಬೋರ್ಡ್, ಕನ್ನಡ ಟೈಪ್ ರೈಟಿಂಗ್ ಗೊತ್ತಿರುವವರಿಗೆ ಟೈಪ್ ರೈಟರ್ ಕೀಬೋರ್ಡ್. ಅದರಲ್ಲಿ ಕನ್ನಡ (ತುಂಗಾ) ಫಾಂಟ್ ಡಿಫಾಲ್ಟ್ ಆಗಿ ಲಭ್ಯವಿದೆ. ಭಾರತೀಯ ಭಾಷೆ ಟೈಪ್ ಮಾಡುವ ಮೊದಲು ಆ ಸೇವೆಯನ್ನು Enable ಮಾಡಬೇಕು ಅಷ್ಟೇ. ಅದಕ್ಕೆ ಈ ಕೆಳಗಿನಂತೆ ಮಾಡಿ.

1. ನಿಮ್ಮ ಬಳಿ XP ಸೀಡಿ ಇದ್ದರೆ, ಅದನ್ನು ಸೀಡಿ ಡ್ರೈವ್ ಗೆ ಹಾಕಿ ಅಥವಾ ಇಲ್ಲಿಂದ ಕನ್ನಡ ಭಾಷಾ IMEಯನ್ನು ಡೌನ್ ಲೋಡ್ ಮಾಡಿಕೊಳ್ಳಿ.

2. Start button ಕ್ಲಿಕ್ ಮಾಡಿ, Control panel ತೆರೆಯಿರಿ.

3. ಅದರಲ್ಲಿ Regional and language options ಎಂಬ ಐಕಾನ್ ಸಿಗುತ್ತದೆ. ಅದನ್ನು ಡಬಲ್ ಕ್ಲಿಕ್ ಮಾಡಿ.

4. ಆಗ ತೆರೆಯುವ ಪಾಪ್ ಅಪ್ ಬಾಕ್ಸ್ ನಲ್ಲಿ Languages ಎಂಬ ಟ್ಯಾಬ್ ಇದೆ. ಅದನ್ನು ಕ್ಲಿಕ್ ಮಾಡಿ.

5. ಅದರಲ್ಲಿ Install files for complex script and right-to-left languages (including Thai) ಎಂಬ ಆಯ್ಕೆಯನ್ನು select ಮಾಡಿ.

6. ಇಷ್ಟಾದ ಮೇಲೆ ಅದೇ ಟ್ಯಾಬ್ ನಲ್ಲಿರುವ Details ಎಂಬ ಬಟನ್ ಕ್ಲಿಕ್ ಮಾಡಿ. Text services and input languages ಎಂಬ ಪಾಪ್ ಅಪ್ ತೆರೆದುಕೊಳ್ಳುತ್ತದೆ.

7. ಅಲ್ಲಿ Add ಬಟನ್ ಕ್ಲಿಕ್ ಮಾಡಿ. Add input language ಎಂಬ ಪಾಪ್ ಅಪ್ ತೆರೆದುಕೊಳ್ಳುತ್ತದೆ. ಅದರಲ್ಲಿ Input language ಎಂಬ ಆಯ್ಕೆಯಿದ್ದು, ಅದನ್ನು ಕ್ಲಿಕ್ ಮಾಡಿದರೆ, ಕನ್ನಡ ಎಂಬ option ಸಿಗುತ್ತದೆ. ಸೆಲೆಕ್ಟ್ ಮಾಡಿ.

8. ಕಡೆಯದಾಗಿ, ಎಲ್ಲಾ ಪಾಪ್ ಅಪ್ ಗಳಿಗೂ ok ಆದೇಶ ನೀಡುತ್ತಾ ಬನ್ನಿ. ಒಂದು ಹಂತದಲ್ಲಿ ನಿಮ್ಮ ಎಕ್ಸ್ ಪಿ ಸೀಡಿಯಿಂದ ಅಥವಾ ನೀವು ಡೌನ್ ಲೋಡ್ ಮಾಡಿಕೊಂಡ ವಿಂಡೋಸ್ ಕನ್ನಡ IME ಫೈಲಿಂದ ಕಂಪ್ಯೂಟರ್ ತನಗೆ ಅಗತ್ಯವಿರುವ ಫೈಲ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುತ್ತದೆ. ಇನ್ನು ನೀವು ಟೈಪ್ ಮಾಡುವುದಷ್ಟೇ ಬಾಕಿ.

9. ಇಷ್ಟಾದ ಮೇಲೆ ಬ್ರೌಸರ್ ಅಥವಾ ನೋಟ್ ಪ್ಯಾಡ್ ಅಥವಾ ವರ್ಡ್ ಪ್ಯಾಡ್ ತೆರೆಯಿರಿ.

10. ಅಲ್ಲಿ Alt ಕೀ ಒತ್ತಿ ಹಿಡಿದು Shift ಕೀ ಒತ್ತಿದರೆ, ಕನ್ನಡ ಟೈಪ್ ಮಾಡಬಹುದು. ಮತ್ತೊಮ್ಮೆ ಇದೇ ರೀತಿ ಮಾಡಿದರೆ english ಟೈಪ್ ಮಾಡಬಹುದು. ಇದು toggle option. ನಿಮ್ಮ ಕಪ್ಯೂಟರ್ ವಿಂಡೋದ ಕೆಳ-ಬಲ-ತುದಿಯ ಸಿಸ್ಟಂ ಟ್ರೇ ಪಕ್ಕ EN ಅಥವಾ KN ಎಂಬ ಲಾಂಗ್ವೇಜ್ ಬಾರ್ ಕಾಣಿಸುತ್ತದೆ. EN ಟಾಗಲ್ ಆದಾಗ ಇಂಗ್ಲೀಷ್ ಅಕ್ಷರವೂ, KN ಟಾಗಲ್ ಆದಾಗ ಕನ್ನಡ ಅಕ್ಷರವೂ ಮೂಡುತ್ತದೆ.

11. ಈ ಪದ್ಧತಿ ಬಳಸಿ ನೀವು ಯಾವುದೇ ವೆಬ್ ಪುಟದಲ್ಲಿ, ಬ್ಲಾಗಿನಲ್ಲಿ, ಪ್ರತಿಕ್ರಿಯೆ ನೀಡುವಲ್ಲಿ ಅಥವಾ ಬಹುತೇಕ ವಿಂಡೋಸ್ ಸಾಫ್ಟ್ ವೇರುಗಳಲ್ಲಿ ನೇರವಾಗಿ ಕನ್ನಡ ಟೈಪ್ ಮಾಡಬಹುದು. ಅಥವಾ ನೀವು ಟೈಪ್ ಮಾಡಿದ್ದನ್ನು ಬೇಕಾದಲ್ಲಿಗೆ ಕಾಪಿ-ಪೇಸ್ಟ್ ಮಾಡಬಹುದು.

ಒಮ್ಮೆ ವಿಂಡೋಸ್ XPಯಲ್ಲಿ ಯುನಿಕೋಡ್ ಇನ್ಸ್ಟಾಲ್ ಮಾಡಿದರೆ, ನೀವು toggle ಮಾಡುವುದಷ್ಟೇ ಕೆಲಸ.

ಸಚಿತ್ರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

6. ಗೂಗಲ್ಲಿನ ಸರಳ ಕನ್ನಡ Bookmarklet : ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಕೆಲ ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ? ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ. ಮಾಹಿತಿ ಇಲ್ಲಿದೆ.
C. ಕನ್ನಡ ಟೈಪಿಸುವ 4 ಕೀಬೋರ್ಡ್ ವಿನ್ಯಾಸಗಳ ಪುಟ್ಟ ಮಾಹಿತಿ.

ಕನ್ನಡ ಟೈಪಿಸಲು ಹಲವಾರು ರೀತಿಯ ಕೀಬೋರ್ಡ್ ವಿನ್ಯಾಸಗಳಿವೆ. ನಿಮ್ಮ ಮಟ್ಟಕ್ಕೆ ಸರಿಯಾಗಿ ಯಾವುದನ್ನು ಬೇಕಾದರೂ ಬಳಸಬಹುದು. ಈ ಕೆಳಗಿನ 4 ಕೀಬೋರ್ಡ್ ವಿನ್ಯಾಸದಲ್ಲಿ ಒಂದು ನಿಮಗೆ ಸೂಕ್ತ ಎನಿಸಬಹುದು. ಆಯ್ದುಕೊಳ್ಳಿ.

ಬರಹ ಕೀಬೋರ್ಡ್ ವಿನ್ಯಾಸ:
ಬಹಳ ಜನರಿಗೆ ಗೊತ್ತಿರುವ ಸುಲಭದ ಕೀಬೋರ್ಡ್ ವಿನ್ಯಾಸ ಇದು. ಇದನ್ನು ಬರಹ IME ಹಾಗೂ ಬರಹಪ್ಯಾಡ್ ಟೂಲಲ್ಲಿ ಬಳಸಬಹುದು.

ಕಗಪ ಕೀಬೋರ್ಡ್:
ಇದು ನುಡಿ ಸಾಫ್ಟ್ ವೇರಿನ ಕೀಬೋರ್ಡ್. "ನುಡಿ" ಬಳಸುವವರಿಗೆ ಇದು ಅನುಕೂಲ.

ಗೂಗಲ್ ಟ್ರಾನ್ಸ್ ಲಿಟರೇಶನ್ ಕೀಬೋರ್ಡ್ ವಿನ್ಯಾಸ
Using phonetic typing, the user can type his message in Roman using the Standard English keyboard, which is transliterated on-the-fly to Kannada. It works on the logic of phonetics and is most effective when you spell the word the way it is spoken. ಗೂಗಲ್ ಈಮೇಲ್, ಬ್ಲಾಗರ್ ಮುಂತಾದ ಗೂಗಲ್ ಸೇವೆಯಲ್ಲಿ, ಗೂಗಲ್ ಟ್ರಾನ್ಸ್ ಲಿಟರೇಶನ್ ಟೂಲ್ ಹಾಗೂ ಕ್ವಿಲ್ ಪ್ಯಾಡ್-ನಲ್ಲಿ ಇದನ್ನು ಬಳಸಬಹುದು.

ಇನ್ ಸ್ಕ್ರಿಪ್ಟ್ ಕೀಬೋರ್ಡ ಲೇ ಔಟ್ :
ಭಾರತೀಯ ಭಾಷೆಯ ಸಾಫ್ಟ್ ವೇರುಗಳನ್ನು ಅಭಿವೃದ್ಧಿ ಪಡಿಸಿದ ಸಿಡಾಕ್ ಸರ್ಕಾರಿ ಸಂಸ್ಥೆ ಅಭಿವೃದ್ಧಿ ಪಡಿಸಿದ ಕೀಬೋರ್ಡ ಇದು. A Kannada Keyboard where the user types the basic characters in sequence and an underlying logic determines that which of these characters have to be combined and substituted to form a glyph. ಕೀಬೋರ್ಡ್ ವಿನ್ಯಾಸ ಹೀಗಿದೆ ನೋಡಿ. ಇದನ್ನು ಒಂದೆರಡು ದಿನ ಪ್ರಾಕ್ಟಿಸ್ ಮಾಡಿದರೆ, ವೇಗವಾಗಿ ಟೈಪ್ ಮಾಡಬಹುದು.

ಟೈಪ್ ರೈಟರ್ ಕೀಬೋರ್ಡ್ ಲೇಔಟ್:
ಕನ್ನಡ ಟೈಪ್ ರೈಟಿಂಗ್ ಯಂತ್ರದ ಕೀಬೋರ್ಡ್ ಲೇ ಔಟ್ ಇದು. ಟೈಪ್ ಟೈರಿಂಗ್ ಶಾಲೆಯಲ್ಲಿ ಕಲಿತ ಬೆರಳಚ್ಚು ವಿಧಾನಕ್ಕೆ ಇದು ಸೂಕ್ತ.
ಹೆಚ್ಚಿನ ಮಾಹಿತಿಗೆ:
http://glocalfunda.blogspot.com

ಐಐಟಿಯ ಪಾಠಗಳು ಯುಟ್ಯೂಬ್‌ನಲ್ಲಿ

ಐಐಟಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಸಂಸ್ಥೆಗಳು ತಮ್ಮ ಪ್ರೊಫೆಸರುಗಳ ಉಪನ್ಯಾಸಗಳ ಮಾಲಿಕೆ ಸಿದ್ಧಪಡಿಸಿ,ಯುಟ್ಯೂಬಿನ youtube.com/iit ವಿಳಾಸ ಮೂಲಕ ಜನರಿಗೆ ಒದಗಿಸುತ್ತಿವೆ.ಯಾರೂ ಬೇಕಾದರೂ ಆನ್‌ಲೈನಿನಲ್ಲಿ ಇವನ್ನು ನೋಡಬಹುದು.ದೇಶದ ಅತ್ಯುತ್ತಮ ಶಿಕ್ಷಕರ ಉಪನ್ಯಾಸಗಳು,ಕಂಪ್ಯೂಟರ್ ತೆರೆಯ ಮೇಲೆ ಮೂಡಿಬರುವ ಅನುಕೂಲ ಅಂತರ್ಜಾಲವಲ್ಲದಿದ್ದರೆ ಸಿಗುತ್ತಿತ್ತೇ?ಇಂತಹ ವಿಡಿಯೋಗಳ ಸಂಖ್ಯೆ ಐದು ಸಾವಿರವನ್ನು ಸಮೀಪಿಸಿದೆ.ಸದ್ಯಕ್ಕೆ ಇವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆಗದು.ಆದರೆ ಮುಂಬರುವ ದಿನಗಳಲ್ಲಿ ಅದಕ್ಕೂ ಅನುವು ಸಿಗಬಹುದು.ಈ ವಿಡಿಯೋ ಪಾಠಗಳು ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತಿವೆ.ಕಾಲೇಜಿನಲ್ಲಿ ಪಾಠಗಳು ಚೆನ್ನಾಗಿ ನಡೆಯದಿದ್ದರೇನಾಯಿತು-ಅಂತರ್ಜಾಲ ಸಂಪರ್ಕ ಇದ್ದರೂ ಸಾಕು ಎನ್ನುವ ಕಾಲ ಬಂತು ನೋಡಿ.

ಇಲ್ಲಿರೋದು ಬರೀ ಇನ್ವಿಟೇಶನ್ಸ್, ಪ್ರೋಗ್ರಾಮ್ಸ್ ಇಷ್ಟೇನೆ, ಪಂಚರಂಗಿ ಪಾಂ..ಪಾಂ..


ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಪುಸ್ತಕ ಬಿಡುಗಡೆ ಜೊತೆಗೆ ಉಪ್ಪಿಟ್ಟು, ಕಾಫಿ..ಡ್ಯಾನ್ಸ್ ಷೋ ಜೊತೆಗೆ ಒಂದಿಷ್ಟು ಕೇಸರಿಬಾತ್, ಆರ್ಟ್ ಎಗ್ಸಿಬಿಶನ್ ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ  ಅಂದ್ರೆ ಹರಟೆ ಹೊಡೆಯಲು ಸಾಕಷ್ಟು ಗೆಳೆಯರು..
ಏನೆಲ್ಲಾ…
ಜೆ ಪಿ ನಗರದ ರಂಗ ಶಂಕರ ರಾಜಾಜಿನಗರಕ್ಕೆ ದೂರ, ಮಲ್ಲೇಶ್ವರಂ ಸೇವಾ ಸದನ ಗಾಂಧೀ ಬಜಾರ್ ಗೆ ದೂರ, ಚೌಡಯ್ಯ ಹಾಲ್ ಹೋಗೋದೇ ಬೇಡ.. ಎನ್ನುವಷ್ಟು ದೂರಗಳು ಟ್ರಾಫಿಕ್ ನಿಂದ ಹುಟ್ಟಿಕೊಂಡಿದೆ
ಹಾಗಾಗಿ ‘ನಿಮ್ಮ ಏರಿಯಾಲ್ ಒಂದಿನ’ ಏನೇನಾಗುತ್ತೆ ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ಏರಿಯಾಗೂ ಬನ್ನಿ ಅಂತ ಕರೆಯೋ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೆಂಗಳೂರು ಬಿಟ್ಟು ಎಲ್ಲೆಲ್ಲೋ ನಡೆಯೋ ಎಲ್ಲಾ ಕಾರ್ಯಕ್ರಮವೂ ಇಲ್ಲಿರುತ್ತೆ.
ಹಾಗಾಗಿ ,
ದಯವಿಟ್ಟು ತಪ್ಪದೇ ಹೋಗಿ ಬನ್ನಿ.

ಭಾರತೀಯ ರುಪಾಯಿ ಲಾಂಚನ ಪಾಂಟ್

New Rupee Symbol of India
Step-1 Download the Rupee Font from
http://karunadu.gov.in/Documents/Rupee.ttf
Step-2
Install to Fonts folder of your System
(It is easy. Just copy the font and paste it in "Fonts" folder in the Control Panel)
Step-3 Open Your Word Processor and Select the Rupee Font
 
Step-4
 
  Top

ಉಚಿತ ಕನ್ನಡ ತಂತ್ರಾಂಶಗಳು


ಕಂಪ್ಯು ಕ್ವಿಜ್ (ಕನ್ನಡದಲ್ಲಿ ಕ್ವಿಜ್ ಕಾರ್ಯಕ್ರಮ)
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಕಂಪ್ಯು-ಕ್ವಿಜ್ ಕಾರ್ಯಕ್ರಮದಲ್ಲಿ ನಿಮಗೆ ಗಣಕ ಕ್ಷೇತ್ರಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ೪ ಆಯ್ಕೆಗಳನ್ನು ಕೊಡಲಾಗುತ್ತದೆ, ಸರಿಯಾದ ಆಯ್ಕೆಯನ್ನು ಆಯ್ದಲ್ಲಿ ನಿಮಗೆ ೧೦ ಅಂಕಗಳು ಲಭಿಸುತ್ತವೆ. ಈ ಕಾರ್ಯಕ್ರಮದಿಂದ ನಿಮ್ಮ ಗಣಕ ಕ್ಷೇತ್ರದ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ
ಗಣಕ ಉದ್ಘಾಟನಾ ತಂತ್ರಾಂಶ
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಮತ್ತು ವಿವಿಧ ಕಾರ್ಯಕ್ರಮದಲ್ಲಿ ಗಣ್ಯರಿಂದ ಗಣಕ ಯಂತ್ರಗಳನ್ನು ಉದ್ಘಾಟಿಸುತ್ತಾರೆ ಆಗ ಕೇವಲ ರಿಬ್ಬನ್ ಅನ್ನು ಕತ್ತರಿಸುವ ಮೂಲಕ ಈ ಉದ್ಘಾಟಿಸಲಾಗುತ್ತದೆ. ಇದರ ಜೊತೆಗೆ ಕಾರ್ಯಕ್ರಮಕ್ಕೆ ಬಂದ ಗಣ್ಯರಿಗೆ ಗಣಕ ಪರದೆಯ ಮೇಲೆ ಜ್ಯೋತಿ ಬೆಳಗಿಸುವ ಅವಕಾಶ ನೀಡಿದರೆ ಆ ಕಾರ್ಯಕ್ರಮಕ್ಕೆ ಮತ್ತಷ್ಟೂ ಮೆರಗು ಬರುತ್ತದೆ. ಎಂದರೆ "ಗಣಕವನ್ನು ಉದ್ಘಾಟಿಸುವಾಗ ಗಣಕ ಯಂತ್ರದ ಪರದೆಯ ಮೇಲೆ ಜ್ಯೋತಿಯನ್ನು ಬೆಳಗಿಸುವುದೇ ಈ ತಂತ್ರಾಂಶದ ಮುಖ್ಯ ಉದ್ದೇಶ".
ಕನ್ನಡ ಹಾರ್ಡ್‌ಡಿಸ್ಕ್ ವಿಜೆಟ್ ೧.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಕನ್ನಡ ಹಾರ್ಡ್ ಡಿಸ್ಕ್ ವಿಜೆಟ್‌ ಒಂದು ಉಚಿತ ತಂತ್ರಾಂಶವಾಗಿದ್ದು ಇದರಿಂದ ನೀವು ಸುಲಭವಾಗಿ ಹಾರ್ಡ್ ಡಿಸ್ಕ್‌ಗಳನ್ನು ತೆಗೆಯಬಹುದು. ಇದು ಚಿಕ್ಕ ತಂತ್ರಾಂಶವಾಗಿದ್ದು ಉಪಯುಕ್ತವಾಗಿದೆ.
ದಿನ ಮಾಹಿತಿ ೩.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ದಿನ ಮಾಹಿತಿ ತಂತ್ರಾಂಶದಿಂದ ನೀವು ಸಮಯ, ದಿನಾಂಕ ಮತ್ತು ವಾರ ಇವುಗಳನ್ನು ಕನ್ನಡದಲ್ಲಿ ನೋಡಬಹುದು ಮತ್ತು ಆ ದಿನದ ವಿಶೇಷತೆಯನ್ನು ನೋಡಬಹುದು (ಉದಾ: "ಇಂದು ಕ್ರೀಡಾ ದಿನ"). ಪ್ರತೀ ಗಂಟೆಗೊಮ್ಮೆ ಇದು ಸಮಯವನ್ನು ತೋರಿಸಿ ಶುಭಾಶಯವನ್ನು ಸೂಚಿಸುತ್ತದೆ.
Dina Maahiti Screenshot
ಕನ್ನಡ ಜಾಲತಾಣ ನಿರ್ವಾಹಕ ೨.೦.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಕನ್ನಡ ಜಾಲತಾಣ ನಿರ್ವಾಹಕ ತಂತ್ರಾಂಶದಲ್ಲಿ ತಾವು ಜಾಲತಾಣ ವಿಳಾಸ (Website URLs) ಗಳನ್ನು ಉಳಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಇದರಲ್ಲಿ ತಾವು ಆ ಜಾಲತಾಣದ ವಿ-ಅಂಚೆ ಮತ್ತು ರೇಟಿಂಗ್ ಅನ್ನೂ ಸಹ ಉಳಿಸಿಕೊಳ್ಳಬಹುದು
Kannada Jaalataana Nirvahahaka
ಗಣಕ ನಿಘಂಟು ೨.೦.೦
ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
ಗಣಕ ನಿಘಂಟು ಈ ತಂತ್ರಾಂಶವು ಗಣಕ ಯಂತ್ರಕ್ಕೆ ಸಂಬಂಧಿಸಿದ ಆಂಗ್ಲ ಪದಗಳ ಕನ್ನಡದ ಅನುವಾದವನ್ನು ನೀಡುತ್ತದೆ. ಈ ಆವೃತ್ತಿಯಲ್ಲಿ ಸುಮಾರು ೧೦೨೯ ಪದಗಳಿದ್ದು ನೀವು ಬಯಸಿದ ಆಂಗ್ಲ ಶಬ್ದಕ್ಕೆ ೧ ರಿಂದ ೨ ಕನ್ನಡ ಅನುವಾದಿತ ಪದಗಳನ್ನು ಸೂಚಿಸುತ್ತದೆ.








Ganaka Nighantu

ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್


ಜನಾಗ್ರಹ ಸಂಘಟನೆಯು ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್ ( ಐ ಪೇಡ್ ಎ ಬ್ರೈಬ್ .ಕಾಮ್)  ಆರಂಭಿಸಿದೆ. 
ಯಾವ ಇಲಾಖೆಯ ಅಧಿಕಾರಿಗೆ ಎಷ್ಟು ಲಂಚ ನೀಡಲಾಗಿದೆ ಇತ್ಯಾದಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಬರೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟನೆಯ ಸಹಸ್ಥಾಪಕಿ ಸ್ವಾತಿ ರಾಮನಾಥನ್ ಮತ್ತು ಸಮನ್ವಯಕಾರ ಟಿ.ಆರ್.ರಘುನಂದನ್ ತಿಳಿಸಿದ್ದಾರೆ.
ಕಾರು ಹಾಗೂ ಇತರ ವಾಹನಗಳ ನೋಂದಣಿ ಮಾಡುವಾಗ, ಆಪರ್ಟ್ ಮೆಮಟ್ ಮಾರಾಟಕ್ಕೆ ಅಗತ್ಯವಿರುವ ಸರ್ಟಿಫಿಕೇಟ್ ಅಥವಾ ಮತ್ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರಿ ಸಿಬ್ಬಂದಿಗೆ ಲಂಚ ನೀಡಿರಬಹುದು. ಈ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು  ( ಐ ಪೇಡ್ ಎ ಬ್ರೈಬ್ .ಕಾಮ್) ಆರಂಭಿಸಲಾಗಿದೆ.
ಈ ವೆಬ್ ಸೈಟ್ ಅನ್ನು ವಿಶ್ವಾದ್ಯಾಂತ ಸಾವಿರಾರು ಜನರು ವೀಕ್ಷಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಪಿಡುಗು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶ್ವಾದ್ಯಂತ ಈ  ಸಮಸ್ಯೆ ಇದೆ ಎಂಬುದು ಇದರಿಂದ ಗೊತ್ತಾಗಲಿದೆ.
ನೀವೂ ಸಹ ಈ ಆಂದೋಲನದಲ್ಲಿ ಭಾಗವಹಿಸಿ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಬಾರದೇಕೆ ?.

ಗುರುವಾರ, ಸೆಪ್ಟೆಂಬರ್ 23, 2010

ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳು


NH4 : ಮಹಾರಾಷ್ಟ್ರ ಗಡಿ >> ಸಂಕೇಶ್ವರ >> ಬೆಳಗಾವಿ >> ಧಾರವಾಡ >> ಹುಬ್ಬಳ್ಳಿ >> ಹಾವೇರಿ >> ರಾಣೆಬೆನ್ನೂರು >> ದಾವಣಗೆರೆ >> ಚಿತ್ರದುರ್ಗ >> ಶಿರಾ >> ತುಮಕೂರು >> ನೆಲಮಂಗಲ >> ಬೆಂಗಳೂರು [^] >> ಹೊಸಕೋಟೆ >> ಕೋಲಾರ >> ಮುಳಬಾಗಿಲು >> ಆಂಧ್ರ ಗಡಿ >> 658 ಕಿ.ಮೀ

NH4A : ಬೆಳಗಾವಿ >> ಖಾನಾಪುರ >> ಗುಂಜಿ >> ಗೋವಾ ಗಡಿ >> 82 ಕಿ.ಮೀ

NH7 : ಆಂಧ್ರ ಗಡಿ >> ಚಿಕ್ಕಬಳ್ಳಾಪುರ >> ದೇವನಹಳ್ಳಿ >> ಬೆಂಗಳೂರು >> ಇಲೆಕ್ಟ್ರಾನಿಕ್ ಸಿಟಿ >> ಚಂದಾಪುರ >> ಅತ್ತಿಬೆಲೆ >> ಹೊಸೂರು >> ತಮಿಳುನಾಡು ಗಡಿ >> 125 ಕಿ.ಮೀ

NH9 : ಮಹಾರಾಷ್ಟ್ರ ಗಡಿ >> ರಾಜೇಶ್ವರ್ >> ಹುಮ್ನಾಬಾದ್ >> ಮಂಗಳಗಿ >> ಆಂಧ್ರ ಗಡಿ >> 75 ಕಿ.ಮೀ

NH13 : ಮಹಾರಾಷ್ಟ್ರ ಗಡಿ >> ಹೊರಟಿ >> ಬಿಜಾಪುರ >> ಹುನಗುಂದ >> ಕುಷ್ಟಗಿ >> ಹೊಸಪೇಟೆ >> ಜಗಳೂರು>> ಚಿತ್ರದುರ್ಗ >> ಹೊಳಲಕೆರೆ >> ಭದ್ರಾವತಿ >> ಶಿವಮೊಗ್ಗ >> ತೀರ್ಥಹಳ್ಳಿ >> ಕಾರ್ಕಳ >> ಮಂಗಳೂರು >> 648 ಕಿ.ಮೀ

NH17 : ಗೋವಾ ಗಡಿ >> ಕಾರವಾರ >> ಅಂಕೋಲಾ >> ಕುಮಟಾ >> ಹೊನ್ನಾವರ >> ಭಟ್ಕಳ >> ಕುಂದಾಪುರ >> ಉಡುಪಿ >> ಸುರತ್ಕಲ್ >> ಮಂಗಳೂರು >> ತಲಪಾಡಿ >> ಕೇರಳ ಗಡಿ >> 280 ಕಿ.ಮೀ

NH48 : ಬೆಂಗಳೂರು >> ನೆಲಮಂಗಲ >> ಕುಣಿಗಲ್ >> ಚನ್ನರಾಯಪಟ್ಟಣ >> ಹಾಸನ >> ಸಕಲೇಶಪುರ >> ಉಪ್ಪಿನಂಗಡಿ >> ಮಂಗಳೂರು >> 328 ಕಿ.ಮೀ

NH63 : ಅಂಕೋಲಾ >> ಯಲ್ಲಾಪುರ >> ಕಲಘಟಗಿ >> ಹುಬ್ಬಳ್ಳಿ >> ಗದಗ >> ಕೊಪ್ಪಳ >> ಹೊಸಪೇಟೆ >> ಬಳ್ಳಾರಿ >> ಆಂಧ್ರ ಗಡಿ >> 370 ಕಿ.ಮೀ

NH67 : ಗುಂಡ್ಲುಪೇಟೆ >> ಬಂಡೀಪುರ >> ತಮಿಳುನಾಡು ಗಡಿ >> 50 ಕಿ.ಮೀ

NH206 : ತುಮಕೂರು >> ತಿಪಟೂರು >> ಅರಸೀಕೆರೆ >> ಕಡೂರು >> ಭದ್ರಾವತಿ >> ಶಿವಮೊಗ್ಗ >> ಸಾಗರ >> ಹೊನ್ನಾವರ (NH 17ಕ್ಕೆ ಸೇರುವುದು)>> 363 ಕಿ.ಮೀ

NH207 : ಹೊಸೂರು >> ಸಜ್ಜಾಪುರ >> ದೇವನಹಳ್ಳಿ >> ದೊಡ್ಡಬಳ್ಳಾಪುರ >> ನೆಲಮಂಗಲ >> 135 ಕಿ.ಮೀ

NH209 : ತಮಿಳುನಾಡು ಗಡಿ >> ಚಾಮರಾಜನಗರ >> ಕೊಳ್ಳೇಗಾಲ >> ಮಳವಳ್ಳಿ >> ಕನಕಪುರ >> ಬೆಂಗಳೂರು >> 170 ಕಿ.ಮೀ

NH212 : ಕೇರಳ ಗಡಿ >> ಮದ್ದೂರು >> ಗುಂಡ್ಲುಪೇಟೆ >> ಬೇಗೂರು >> ಮೈಸೂರು >> ಟಿ ನರಸೀಪುರ >> ಕೊಳ್ಳೇಗಾಲ >> 160 ಕಿ.ಮೀ

NH218 : ಹುಬ್ಬಳ್ಳಿ >> ನರಗುಂದ >> ಕೆರೂರು >> ಬಿಜಾಪುರ >>ಸಿಂದಗಿ >> ಜೇವರ್ಗಿ >> ಗುಲ್ಬರ್ಗ (NH9 ಹುಮ್ನಾಬಾದ್ ಬಳಿ ಸೇರುವುದು) >>399 ಕಿ.ಮೀ

ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಗಳ ಪಟ್ಟಿ


ಕರ್ನಾಟಕದ ಪ್ರಾದೇಶಿಕ ಸಾರಿಗೆ ಕಚೇರಿಗಳ ವಿವರ ಕೆಳಗಿನಂತಿದೆ.

ಕೆಎ > 01 > ಬೆಂಗಳೂರು [^] ಕೇಂದ್ರ > ಕೋರಮಂಗಲ
ಕೆಎ > 02 > ಬೆಂಗಳೂರು ಪಶ್ಚಿಮ > ರಾಜಾಜಿನಗರ
ಕೆಎ > 03 > ಬೆಂಗಳೂರು ಪೂರ್ವ > ಇಂದಿರಾನಗರ
ಕೆಎ > 04 > ಬೆಂಗಳೂರು ಉತ್ತರ > ಯಶವಂತಪುರ
ಕೆಎ > 05 > ಬೆಂಗಳೂರು ದಕ್ಷಿಣ > ಜಯನಗರ
ಕೆಎ > 06 > ತುಮಕೂರು > ತುಮಕೂರು ಜಿಲ್ಲೆ
ಕೆಎ > 07 > ಕೋಲಾರ > ಕೋಲಾರ ಜಿಲ್ಲೆ
ಕೆಎ > 08 > ಕೋಲಾರ ಚಿನ್ನದಗಣಿ (KGF) > ಕೋಲಾರ ಜಿಲ್ಲೆ
ಕೆಎ > 09 > ಮೈಸೂರು ಪಶ್ಚಿಮ > ಮೈಸೂರು ಜಿಲ್ಲೆ
ಕೆಎ > 10 > ಚಾಮರಾಜನಗರ > ಚಾಮರಾಜನಗರ ಜಿಲ್ಲೆ
ಕೆಎ > 11 > ಮಂಡ್ಯ > ಮಂಡ್ಯ ಜಿಲ್ಲೆ
ಕೆಎ > 12 > ಮಡಿಕೇರಿ > ಕೊಡಗು ಜಿಲ್ಲೆ
ಕೆಎ > 13 > ಹಾಸನ > ಹಾಸನ ಜಿಲ್ಲೆ
ಕೆಎ > 14 > ಶಿವಮೊಗ್ಗ [^] > ಶಿವಮೊಗ್ಗ ಜಿಲ್ಲೆ
ಕೆಎ > 15 > ಸಾಗರ > ಶಿವಮೊಗ್ಗ ಜಿಲ್ಲೆ
ಕೆಎ > 16 > ಚಿತ್ರದುರ್ಗ > ಚಿತ್ರದುರ್ಗ ಜಿಲ್ಲೆ
ಕೆಎ > 17 > ದಾವಣಗೆರೆ > ದಾವಣಗೆರೆ ಜಿಲ್ಲೆ
ಕೆಎ > 18 > ಚಿಕ್ಕಮಗಳೂರು [^] > ಚಿಕ್ಕಮಗಳೂರು ಜಿಲ್ಲೆ
ಕೆಎ > 19 > ಮಂಗಳೂರು > ದಕ್ಷಿಣಕನ್ನಡ ಜಿಲ್ಲೆ
ಕೆಎ > 20 > ಉಡುಪಿ >ಉಡುಪಿ ಜಿಲ್ಲೆ
ಕೆಎ > 21 > ಪುತ್ತೂರು > ದಕ್ಷಿಣಕನ್ನಡ ಜಿಲ್ಲೆ
ಕೆಎ >22 > ಬೆಳಗಾವಿ > ಬೆಳಗಾವಿ ಜಿಲ್ಲೆ
ಕೆಎ > 23 > ಚಿಕ್ಕೋಡಿ > ಬೆಳಗಾವಿ ಜಿಲ್ಲೆ
ಕೆಎ > 24 > ಬೈಲಹೊಂಗಲ > ಬೆಳಗಾವಿ ಜಿಲ್ಲೆ
ಕೆಎ > 25 > ಹುಬ್ಬಳ್ಳಿ-ಧಾರವಾಡ > ಧಾರವಾಡ ಜಿಲ್ಲೆ
ಕೆಎ > 26 > ಗದಗ > ಗದಗ ಜಿಲ್ಲೆ
ಕೆಎ > 27 > ಹಾವೇರಿ > ಹಾವೇರಿ ಜಿಲ್ಲೆ
ಕೆಎ > 28 > ಬಿಜಾಪುರ > ಬಿಜಾಪುರ ಜಿಲ್ಲೆ
ಕೆಎ > 29 > ಬಾಗಲಕೋಟೆ > ಬಾಗಲಕೋಟೆ ಜಿಲ್ಲೆ
ಕೆಎ > 30 > ಕಾರವಾರ > ಉತ್ತರಕನ್ನಡ ಜಿಲ್ಲೆ
ಕೆಎ > 31 > ಶಿರಶಿ > ಉತ್ತರಕನ್ನಡ ಜಿಲ್ಲೆ
ಕೆಎ > 32 > ಗುಲ್ಬರ್ಗ > ಗುಲ್ಬರ್ಗ ಜಿಲ್ಲೆ
ಕೆಎ > 33 > ಯಾದಗೀರ್ > ಯಾದಗೀರ್ ಜಿಲ್ಲೆ
ಕೆಎ > 34 > ಬಳ್ಳಾರಿ > ಬಳ್ಳಾರಿ ಜಿಲ್ಲೆ
ಕೆಎ > 35 > ಹೊಸಪೇಟೆ > ಬಳ್ಳಾರಿ ಜಿಲ್ಲೆ
ಕೆಎ > 36 > ರಾಯಚೂರು > ರಾಯಚೂರು ಜಿಲ್ಲೆ
ಕೆಎ > 37 > ಕೊಪ್ಪಳ > ಕೊಪ್ಪಳ ಜಿಲ್ಲೆ
ಕೆಎ > 38 > ಬೀದರ್ > ಬೀದರ್ ಜಿಲ್ಲೆ
ಕೆಎ > 39 > ಭಾಲ್ಕಿ > ಬೀದರ್ ಜಿಲ್ಲೆ
ಕೆಎ > 40 > ಚಿಕ್ಕಬಳ್ಳಾಪುರ [^] > ಚಿಕ್ಕಬಳ್ಳಾಪುರ ಜಿಲ್ಲೆ
ಕೆಎ > 41 > ರಾಜರಾಜೇಶ್ವರಿ ನಗರ > ಬೆಂಗಳೂರು ಜಿಲ್ಲೆ
ಕೆಎ > 42 > ರಾಮನಗರ > ಬೆಂಗಳೂರು ಗ್ರಾಮಾಂತರ ಜಿಲ್ಲೆ
ಕೆಎ > 43 > ದೇವನಹಳ್ಳಿ > ಬೆಂಗಳೂರು ಗ್ರಾಮಾಂತರ ಜಿಲ್ಲೆ
ಕೆಎ > 44 > ತಿಪಟೂರು > ತುಮಕೂರು ಜಿಲ್ಲೆ
ಕೆಎ > 45 > ಹುಣಸೂರು > ಮೈಸೂರು ಜಿಲ್ಲೆ
ಕೆಎ > 46 > ಸಕಲೇಶಪುರ > ಹಾಸನ ಜಿಲ್ಲೆ
ಕೆಎ > 47 > ಹೊನ್ನಾವರ > ಉತ್ತರಕನ್ನಡ ಜಿಲ್ಲೆ
ಕೆಎ > 48 > ಜಮಖಂಡಿ > ಬಾಗಲಕೋಟೆ ಜಿಲ್ಲೆ
ಕೆಎ > 49 > ಗೋಕಾಕ್ > ಬೆಳಗಾವಿ ಜಿಲ್ಲೆ
ಕೆಎ > 50 > ಯಲಹಂಕ > ಬೆಂಗಳೂರು ಗ್ರಾಮಾಂತರ ಜಿಲ್ಲೆ
ಕೆಎ > 51 > ಬನ್ನೇರುಘಟ್ಟ > ಬೆಂಗಳೂರು ಗ್ರಾಮಾಂತರ ಜಿಲ್ಲೆ
ಕೆಎ > 52 > ನೆಲಮಂಗಲ > ಬೆಂಗಳೂರು ಗ್ರಾಮಾಂತರ ಜಿಲ್ಲೆ
ಕೆಎ > 53 > ಕೆಆರ್ ಪುರಂ > ಬೆಂಗಳೂರು ಜಿಲ್ಲೆ
ಕೆಎ > 54 > ನಾಗಮಂಗಲ > ಮಂಡ್ಯ ಜಿಲ್ಲೆ
ಕೆಎ > 55 > ಮೈಸೂರು ಪೂರ್ವ > ಮೈಸೂರು ಜಿಲ್ಲೆ

ಕನ್ನಡ ಮತ್ತು ಕನ್ನಡಿಗರ ಬ್ಲಾಗ್

ರಗಥ್ ಪ್ಯಾರಡೈಸ್ : ರಘು ಹರಿಹರಪುರ
ಅಭಿವ್ಯಕ್ತಿ : ಮತ್ತೂರು ರಘು
ಅಭಿವ್ಯಕ್ತಿ : ಅರಕಲಗೂಡು ಜಯಕುಮಾರ್
ಅರ್ಚನಾ : ಅರ್ಚನಾ ಹೆಬ್ಬಾರ್
ಅಚ್ಚರಿ : ಐದನೇ ತರಗತಿ ಹುಡುಗನ 'ಅಚ್ಚರಿ' ಮೂಡಿಸುವ ಕನ್ನಡ ಬ್ಲಾಗ್
ಅವಧಿ : ಸದಭಿರುಚಿಯುಳ್ಳ ತಂಡದ ಸದಸ್ಯರು
ಅಲೆಮಾರಿಯ ಅನುಭವಗಳು : ರಾಜೇಶ್ ನಾಯ್ಕ್
ಅಲೆಯುವ ಮನ : ಶಿವಪ್ರಸಾದ್ [^] ಟಿಆರ್
ಇನಿ ದನಿ, ಮನದ ಪಿಸು ಮಾತು : ದೀಪಸ್ಮಿತಾ
ಈ-ಪ್ರಪಂಚ : ರವೀಶ್ ಕುಮಾರ್
ಏನ್ ಗುರು ಕಾಫಿ ಆಯ್ತಾ : ಬನವಾಸಿ ಬಳಗ
ಅಂತರಾಳದ ಮಾತು : ಸೂರ್ಯ ಕಿರಣ್
ಅಂತರಂಗದಾ ಮೃದಂಗ : ಗುರು ಕುಲಕರ್ಣಿ
ಕಥೆ, ಸುದ್ದಿ, ಜೋಕ್ಸು : ಪ್ರಸನ್ನ
ಕನ್ನಡ ರಂಗಭೂಮಿ : ಹಾಲಸ್ವಾಮಿ
ಕನ್ನಡ ಬ್ಲಾಗ್ ಪಟ್ಟಿ : ರೋಹಿತ್ ರಾಮಚಂದ್ರಯ್ಯ
ಕನ್ನಡ ಬಲ : ರೋಹಿತ್ ರಾಮಚಂದ್ರಯ್ಯ
ಕನ್ನಡ ಮಿತ್ರ : ಕನ್ನಡಿಗಕ ಸಮಸ್ಯೆಗಳಿಗೆ ಸ್ಪಂದನ
ಕನ್ನಡ ಹನಿಗಳು
ಕಪ್ಪು ಬಿಳುಪು : ಗಿರೀಶ್ ಜಮದಗ್ನಿ
ಕಲರವ : ಯುವ ಮನಸುಗಳು
ಕಳ್ಳ ಕುಳ್ಳ : ವಿಕಾಸ ನೇಗಿಲೋಣಿ, ಚೇತನ್ ನಾಡಿಗೇರ್
ಕ್ಷಕಿರಣ : ರಾಕೇಶ್ ಮಥಾಯಿಸ್
ಕಾರ್ಟೂನ್ ಕಾರ್ಟೂನ್ : ವ್ಯಂಗ್ಯಚಿತ್ರಗಳ ಒಂದು ನೋಟ
ಕಾನದನಿ : ರೇಖಾ ಹೆಗಡೆ ಬಾಳೇಸರ
ಕಾಡು ಹರಟೆ : ಸಂತೋಷಕುಮಾರ್
ಕುಂಟಿನಿ : Most handsome [^] man on the earth
ಗಣಕಿಂಡಿ : ಡಾ. ಯುಬಿ ಪವನಜ
ಗ್ರೀಷ್ಮಗಾನ : ಗ್ರೀಷ್ಮ
ಗುಳಿಗೆ : ಎಚ್. ಆನಂದರಾಮ್ ಶಾಸ್ತ್ರೀ
ಗುಜರಿ ಅಂಗಡಿ : ಬಿಎಂ ಬಶೀರ್, ಮಂಗಳೂರು
ಗೋಪಿಗೀತ : ಟಿಎಸ್ ಗೋಪಾಲ್ ಕುರಿತ ಬ್ಲಾಗ್
ಥಂಡಾಕೂಲ್ : ನಾಗರಾಜ್ ಮತ್ತಿಗಾರ್
ಚಾರಣ ಮತ್ತು ಪ್ರವಾಸ : ಅರವಿಂದ್ ಜಿಜೆ
ಚುರುಮುರಿ : ಸ್ವಲ್ಪ ಸಿಹಿ, ಸ್ವಲ್ಪ ಸ್ಪೈಸಿ
ಚೈತ್ರಪಥ : ರಾಘವೇಂದ್ರ ಮಹಾಬಲೇಶ್ವರ
ಚುಂ ಬನವಾಸಿ : ಪವ್ವಿಯ ಟುವ್ವಿಟುವ್ವಿ
ಛಾಯಾಕನ್ನಡಿ : ಶಿವು, ಬೆಂಗಳೂರು
ಜಯ ಶ್ರೀರಾಮ : ಗೋಪಾಲ್ ಕುಲಕರ್ಣಿ
ಜೋಳಿಗೆ : ಶಂಶೀರ್ ಬುಡೋಳಿ, ಶಿವಮೊಗ್ಗ
ನಕ್ಕುನಲಿ : ಬಾಲು
ನನ್ನ ಹಾಡು... ಭಾವನೆಗಳ ಭರಪೂರ ಸಂಗಮ : ಮಲ್ಲಿಕಾರ್ಜುನ ತಿಪ್ಪಾರ
ನಾದ : ಪ್ರಭುಪ್ರಸಾದ್ ನಡುತೋಟ
ನೀವು ನಕ್ಕರೆ ಹಾಲು ಸಕ್ಕರೆ : ಗೋಪಾಲ್ ಮಾ ಕುಲಕರ್ಣಿ
ನೆನಪಿನ ದೋಣಿಯಲಿ….
ನವಿಲುಗರಿ : ವೀರನ್ನಾರಾಯಣ
ನ್ಯಾನೋ ಕಥೆಗಳು : ವಿ ಗೋಪಕುಮಾರ್
ನೆಂಪು : ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯ ಚಿತ್ರಣ
ನಂದೊಂದ್ಮಾತು : ಡಾ.ಬಿ.ಆರ್.ಸತ್ಯನಾರಾಯಣ
ಪರಸ್ಪರ : ಡಾ. ಎಚ್ಎಸ್ ವೆಂಕಟೇಶ ಮೂರ್ತಿ
ಪ್ರಕೃತಿ : ರಾಜೇಂದ್ರ ಭಟ್
ಪಾರಿಜಾತ : ಶುಭದಾ
ಪ್ರಾರ್ಥನಾ : ರಾಘವೇಂದ್ರ ಮಹಾಬಲೇಶ್ವರ
ಪಿಚ್ಚರ್ : ಪರಮೇಶ್ವರ ಗುಂಡ್ಕಲ್
ಪ್ರೀತಿ, ನಂಬಿಕೆ ಮತ್ತು ಭರವಸೆ : ಅಮಿತ್ ಎ
ಪ್ರೀತಿಯ ತಳಹದಿ : ಅಮಿತ್ ಎ
ಫರಂಗಿಮಣೆ : ರಾಜೇಂದ್ರ ಚಿಂತಾಮಣಿ
ಪುಸ್ತಕಪ್ರೀತಿ : ಪುಸ್ತಕದ ಒನ್ ಸ್ಟಾಪ್ ಶಾಪ್
ಭಾವ ತೀರದ ಯಾನ : ಶ್ರೀಪ್ರಿಯೆ
ಭಾವನಾ ತೋಟದೊಳಗೆ : ಸುನೀಲ್ ಮಲ್ಲೇನಹಳ್ಳಿ
ಬಿಜಿ ಲಿವಿಂಗ್ : ಸನತ್ ಮೈಸೂರು
ಬೆಂದಕಾಳೂರು : ರಾಧಿಕಾ ಎಂಜಿ
ಬುಡಬುಡಿಕೆ : ಚೇಳಯ್ಯ, ಮಂಗಳೂರು
ಬೇದ್ರೆ ಬ್ರೈನ್ಸ್ : ಬೇದ್ರೆ ಮಂಜುನಾಥ್
ಬೇದ್ರೆ ಭಾಷೆ : ಮಂಜುನಾಥ್ ಬೇದ್ರೆ
ಮನದ ಮಾತು : ವಿಜಯ್, ಹಾಸನ
ಮಹಾಜನ : ನೀರ್ಚಾಲು ಸಂಸ್ಕೃತ ಶಾಲೆಯ ಇ-ಪತ್ರಿಕೆ
'ಮೂರ್ತಿ'ಪೂಜೆ : ಪೂಜಾರಿಗಳು
ಮೈಸೂರು ಪೋಸ್ಟ್ : ಅಬ್ದುಲ್ ರಶೀದ್
ಮೈಸೂರು ಮಲ್ಲಿಗೆ : ಅಶೋಕ್ ಉಚ್ಚಂಗಿ
ಮೋಟುಗೋಡೆಯಾಚೆ ಇಣುಕಿ : ಅಶ್ಲೀಲತೆಯೆಂಬ ಮೋಟುಗೋಡೆಯ ಆಚೆ
ನಿವೇದನೆ : ಅಮಿತ್ ಎ
ಯುವಪ್ರೇಮಿ : ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಬೇರೆ ಹೆಸರೇ ಇಲ್ಲ
ಯೋಚನಾ ಲಹರಿ : ಹೊಳೆದಿದ್ದು, ತಿಳಿದಿದ್ದೂ ಮೂಡಿದ್ದು
ರವಿ ಬೆಳಗೆರೆ : ಭಾಸ್ಕರ್
ರೈತಾಪಿ : ನಾಗರಾಜ್ ಮತ್ತಿಗಾರ್
ಲೋಕಪಾವನಿ ಕನ್ನಡ ಗಂಗೆ : ಅಜಿತ್, ಬೆಂಗಳೂರು
ವಾರ(ರೆ) ನೋಟ : ಹರೀಶ್
ವ್ಯಾಸಪಥ : ಹರೀಶ್ ಕೆ. ಆದೂರು
ವಿ.ಎಸ್.ಆಚಾರ್ಯ, ಗೃಹ ಸಚಿವರು, ಕರ್ನಾಟಕ ಸರ್ಕಾರ
ವಿಜಯ ಪರ್ವ : ವಿಜಯ್ ಅಬ್ಬಿಗೇರಿ
ವಿಮರ್ಶಕಿ : ಪತ್ರಿಕಾರಂಗದ ಯಾರೋ ಒಬ್ಬರು
ವಿಶ್ವ ಕನ್ನಡಿಗ ನ್ಯೂಸ್ : ವಿಶ್ವ ಕನ್ನಡಿಗರ ಒಕ್ಕೂಟ
ಶರಧಿ : ಚಿತ್ರಾ ಕರ್ಕೇರಾ
ಸಾಂಗತ್ಯ : ಕನ್ನಡ ಚಿತ್ರಗಳ ಚರ್ಚಾ ವೇದಿಕೆ
ಸ್ವರ ಚಿತ್ತಾರ : ಕಲೆ, ಸ೦ಗೀತ, ಸಾಹಿತ್ಯ, ಪರಿಸರ, ಸಾಮಾಜಿಕ ಕಳಕಳಿಯುಳ್ಳ ಗೆಳೆಯರ ಬಳಗ
ಸುದ್ದಿಮಾತು : ಸುದ್ದಿ ಮೇಲೊಂದು ಕಣ್ಣ
ಸಿದ್ದು ಕಾಲ : ಸಿದ್ದು ಯಾಪಲಪರವಿ
ಸಿದ್ದುಲೋಕ : ಸಿದ್ದು ಯಾಪಲಪರವಿ
ಸಿಹಿಮಾತು : ಕೇಶವ ಪ್ರಸಾದ್ ಮಾರ್ಗ
ಶ್ರೀನಿಧಿಯ ಪ್ರಪಂಚ : ಟಿ.ಜಿ. ಶ್ರೀನಿಧಿ
ಶ್ರೀಶಂ, ಎರಡು ತಲೆಯ ಹಾವು ನಾನಲ್ಲ : ರಾಘವೇಂದ್ರ ಶರ್ಮಾ, ತಲವಾಟ
ಸಂಭವಾಮಿ ಯುಗೇ ಯುಗೇ : ಮಂದಾರ
ಸುದ್ದಿಜೀವಿ : ಎಚ್‌. ಎನ್‌. ಸುಧೀಂದ್ರ
ಹಾಗೆ ಸುಮ್ಮನೆ : ಪ್ರಶಾಂತ್ ಕುಮಾರ್
ಹಾಗೆ ಸುಮ್ಮನೆ ಅನ್ನಿಸಿದ್ದು ಮಾತ್ರ : ಆದಿತ್ಯ ನಾಡಿಗ್
ಹಾಲ್ದೊಡ್ಡೇರಿ : ಎಚ್.ಎನ್. ಸುಧೀಂದ್ರ
http://kalsakri.blogspot.com/
http://nannakanda.blogspot.com/
http://suvarnaangala.blogspot.com/
http://anchemane.blogspot.com/
http://antaranga.blogspot.com/
http://www.kannadabala.blogspot.com/
http://chilipilimatu.blogspot.com/
http://nitinmuttige.blogspot.com/
http://agniprapancha.blogspot.com
http://drvsacharya.blogspot.com
http://hasirumatu.blogspot.com
http://jutkannada.blogspot.com
http://kannadabook.blogspot.com
http://sumanalaxmish.blogspot.com
http://bidarakote.blogspot.com
http://kumri.blogspot.com
http://manasa-hegde.blogspot.com
http://uknishada.blogspot.com
http://mounakanive.blogspot.com
http://oppanna.blogspot.com
http://raitapu.blogspot.com
http://manadamaatugalu.blogspot.com
http://kanasahuduga.blogspot.com

ಸ್ನೇಹಿತರೆ, ಕನ್ನಡಕ್ಕಾಗಿ, ಕನ್ನಡಿಗರಿಗೋಸ್ಕರ, ಕನ್ನಡಿಗರಿಂದ ಪ್ರಾರಂಭಿಸಲಾಗಿರುವ ಕೆಲ ಬ್ಲಾಗ್ [^] ತಾಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಕಾಲಾಂತರದಲ್ಲಿ ಎಲ್ಲ ಕನ್ನಡ ಬ್ಲಾಗ್ [^] ಗಳನ್ನು ಇಲ್ಲಿ ದಾಖಲಿಸಲಾಗುವುದು. ಇಲ್ಲಿ ಪಟ್ಟಿ ಮಾಡದಿರುವ ಮತ್ತು ನಿಮಗೆ ತಿಳಿದಿರುವ ಕನ್ನಡ ಬ್ಲಾಗ್ ತಾಣದ ವಿಳಾಸವನ್ನು ನಮಗೆ ತಿಳಿಸಿ.

ಮಂಗಳವಾರ, ಸೆಪ್ಟೆಂಬರ್ 21, 2010

ಎಸ್ಎಂಎಸ್ ಮೂಲಕ ಪೊಲೀಸರಿಗೆ ದೂರು ನೀಡಿ

ಬೆಂಗಳೂರು, ಸೆ.20 : ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ ಎಸ್‌ಎಂಎಸ್ ಸಂದೇಶಕ್ಕೆ ಮೊರೆ ಹೋಗಿದೆ. ಅಪರಾಧ ಪ್ರಕರಣ ಕುರಿತು ಮಾಹಿತಿಯನ್ನು ದೂರು ನೀಡಿದವರಿಗೆ ಎಸ್ಎಂಎಸ್ ಮೂಲಕ ರವಾನೆ ಮಾಡುವ ಹೊಸ ಬಗೆ ಪ್ರಯೋಗಕ್ಕೆ ನಗರ ಪೊಲೀಸ್ ಇಲಾಖೆ ಮುಂದಾಗಿದ್ದು, ಇದು ದೇಶದಲ್ಲೇ ಪ್ರಥಮ ಎನ್ನಲಾಗಿದೆ.

ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರಿನ ಕಬ್ಬನ್‌ಪಾರ್ಕ್, ಎಸ್.ಜಿ.ಪಾರ್ಕ್ ಸೇರಿದಂತೆ ಕೆಲವು ಠಾಣೆಯಲ್ಲಿ ಸಾರ್ವಜನಿಕರು ನೀಡುವ ದೂರಿನ ಕ್ಷಣ ಕ್ಷಣದ ಮಾಹಿತಿಯ ಎಸ್‌ಎಂಎಸ್ ಸಂದೇಶ ರವಾನೆ ಮಾಡಲಾಗುತ್ತಿದೆ.

ದೂರು ದಾಖಲಿಸುವ ವಿಧಾನ : ಮನೆಯಲ್ಲಿ ಕಳ್ಳತನವಾದರೆ, ಇಲ್ಲವೇ ಕೊಲೆಯಾಗಿದ್ದರೆ, ತಕ್ಷಣ ಪೊಲೀಸರು ನೀಡುವ ಅಧಿಕೃತ ಮೊಬೈಲ್ ನಂಬರಿಗೆ ಘಟನೆ ಬಗ್ಗೆ ಪ್ರಾಥಮಿಕವಾಗಿ ಮಾಹಿತಿಯ ಸಂದೇಶವನ್ನು ಕಳುಹಿಸಿ, ಕಡ್ಡಾಯವಾಗಿ ಎಸ್‌ಎಂಎಸ್ ಸಂದೇಶದಲ್ಲಿ ನಿಮ್ಮ ಹೆಸರು, ವಿಳಾಸ ನಮೂದಾಗಿರಬೇಕು.

ಸಂದೇಶ ಸ್ವೀಕರಿಸುವ ಪೊಲೀಸರು ಸಂಬಂಧಪಟ್ಟ ಠಾಣೆಗೆ ಸಂದೇಶವನ್ನು ಇನ್ಸ್‌ಪೆಕ್ಟರ್ ಇಲ್ಲವೇ ಕ್ರೈಮ್ ರೈಟರ್‌ಗೆ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ.ತಕ್ಷಣ ಅದಕ್ಕೊಂದು ಕ್ರೈಮ್ ನಂಬರ್ ನೀಡಿ, ಪ್ರಕರಣ ದಾಖಲಾಗಿರು ವುದನ್ನು ದೃಢೀಕರಿಸುವ ಸಂದೇಶ ಪೊಲೀಸ್ ಇಲಾಖೆಯಿಂದ ನಿಮ್ಮ ಮೊಬೈಲ್‌ಗೆ ಬರುತ್ತದೆ. ಅಷ್ಟರೊಳಗಾಗಿ ಪೊಲೀಸ್ ತಂಡವೊಂದು ಘಟನಾ ಸ್ಥಳಕ್ಕೆ ಧಾವಿಸಿ ಅಪರಾಧದ ಕುರಿತು ಮಾಹಿತಿ ಸಂಗ್ರಹಿಸುತ್ತದೆ.

ಈಗಾಗಲೇ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಎಸ್‌ಎಂಎಸ್ ಸಂದೇಶ ರವಾನೆ ಸಂಬಂಧ ಕಂಪ್ಯೂಟರ್ ಆಪರೇಟರ್ ಹಾಗೂ ಠಾಣೆಯ ಇನ್ಸ್‌ಪೆಕ್ಟರ್ ಜತೆ ಚರ್ಚೆ ನಡೆಸಲಾಗುತ್ತಿದೆ. ಇದಕ್ಕಾಗಿ ಸೂಕ್ತ ತರಬೇತಿಯನ್ನು ಸಹ ನುರಿತ ತಜ್ಞರಿಂದ ನೀಡಲಾಗುತ್ತಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಸೂಚನೆ: ಸಾರ್ವಜನಿಕರು ಪೊಲೀಸರೊಂದಿಗೆ ತಮ್ಮ ಪ್ರಕರಣಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು 100 ಇಲ್ಲವೇ ಮೊಬೈಲ್ ಸಂಖ್ಯೆ 92432 58181 ಸಂಖ್ಯೆಗೆ ದೂರವಾಣಿ ಮಾಡಬಹುದಾಗಿದೆ. ಇದರ ಜೊತೆ ಎಸ್ಎಂಎಸ್ ಸಂದೇಶಗಳನ್ನು ಕಳುಹಿಸಿ ಮಾಹಿತಿ ಪಡೆಯಲು ಅವಕಾಶವನ್ನು ನೀಡಲಾಗಿದೆ.
http://thatskannada.oneindia.in/news/2010/09/20/police-complaint-through-sms-bcp-alok-kumar.html

ಟೆಕ್-ಕನ್ನಡ ತಂತ್ರಜ್ಞಾನದ ಬಗ್ಗೆ ಮಾಹಿತಿ



ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್‌ನ್ನು ಟೆಕ್-ಕನ್ನಡದಲ್ಲಿ ನೀಡಲಾಗುವುದು. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು. ಅದಕ್ಕಾಗಿ techkannada(at)gmail(dot)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮ್ಮನ್ನು ಲೇಖಕರನ್ನಾಗಿ  ಸೇರಿಸಿಕೊಳ್ಳಲಾಗುವುದು. (ನೂರು ಜನರಿಗೆ authorಗಳಾಗುವ ಅವಕಾಶವಿದೆ. ಎಲ್ಲರಿಗೂ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚು ಕ್ರಿಯಾಶೀಲರಾಗಿರುವವರನ್ನು ಉಳಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ techkannada[at]gmail[dot]com ಸಂಪರ್ಕಿಸಿ.) ಅಥವಾ ನೀವು ಅನುಮತಿ ನೀಡಿದರೆ ನಿಮ್ಮ ಲೇಖನಗಳನ್ನು ನಿಮ್ಮ ಹೆಸರಿನ ಜೊತೆ ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗುವುದು. (ಲೇಖಕರಿಗಾಗಿ ಸೂಚನೆಗಳನ್ನು ಇಲ್ಲಿ ಓದಬಹುದು). ಹಾಗೂ ಈ ತಾಣವನ್ನು ನಿರ್ವಹಿಸುವಲ್ಲಿ ಆಸಕ್ತಿ ಹೊಂದಿದ್ದರೆ ಅಂತಹವರನ್ನು Adminಗಳಾಗಿ ಸೇರಿಸಲಾಗುವುದು. ನೀವು Adminಗಳಾಗಲು ಬಯಸಿದಲ್ಲಿ ಅದನ್ನು ನಿಮ್ಮ ಇ-ಅಂಚೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಟೆಕ್-ಕನ್ನಡೇತರ Adminಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಇಲ್ಲಿ ಓದಿಕೊಳ್ಳಬೇಕು.

ಇದರ ಮೊದಲ ಪ್ರಯತ್ನವಾಗಿ ಸದಸ್ಯರೊಬ್ಬರು ಸಂಪದದಲ್ಲಿ ಪ್ರಕಟಿಸಿರುವ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಅವರ ಅನುಮತಿಯೊಂದಿಗೆ ಟೆಕ್-ಕನ್ನಡದಲ್ಲಿ ಹಾಕಲಾಗಿದೆ ಹಾಗೂ ಕೆಲವು ಕನ್ನಡ ತಾಣಗಳಿಗೆ ಲಿಂಕ್ ನೀಡಲಾಗಿದೆ. ಇದರ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ನೀವೂ ಈ ಪ್ರಯತ್ನದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಸ್ನೇಹಿತರನ್ನೂ ಟೆಕ್-ಕನ್ನಡಕ್ಕೆ ಕರೆತನ್ನಿ. ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಇತರ ತಾಣಗಳು ನಿಮಗೆ ಗೊತ್ತಿದ್ದರೆ ಅದರ ವಿಳಾಸ (URL) ತಿಳಿಸಿ. ಆ ತಾಣಕ್ಕೆ ಟೆಕ್-ಕನ್ನಡದಲ್ಲಿ ಒಂದು ಲಿಂಕ್ ಕೊಡಲಾಗುವುದು. 

ಟೆಕ್-ಕನ್ನಡಕ್ಕೆ ನಿಮ್ಮಿಂದ ಈ ಸಹಾಯಗಳು ದೊರೆಯಬಹುದೇ:

  • ಈ ತಾಣಕ್ಕೆ ನಿರ್ವಾಹಕರಾಗಿ
  • ಈ ತಾಣಕ್ಕೆ  ಲೇಖಕರಾಗಿ
  • ಈ ತಾಣವನ್ನು ನಿಮ್ಮ  ಸ್ನೇಹಿತರಿಗೆ ತಿಳಿಸಿ
  • ಕನ್ನಡದ ಇತರ ತಾಣಗಳ ವಿಳಾಸ ತಿಳಿಸಿ
  • ಈ ತಾಣವನ್ನು Follow ಮಾಡಬಹುದು
ಟೆಕ್‌-ಕನ್ನಡದ ಇನ್ನೊಂದು ವಿಳಾಸ: http://techkannada.co.nr
ಟೆಕ್-ಕನ್ನಡ ಇತರ ತಾಣಗಳಲ್ಲಿ:
ಸಂಪದದಲ್ಲಿ ಟೆಕ್-ಕನ್ನಡ ಪ್ರೊಫೈಲ್
ಟ್ವಿಟರ್‌ನಲ್ಲಿ
ಫೇಸ್‌‌ಬುಕ್‌‌ನಲ್ಲಿ
ಆರ್ಕುಟ್‌‌ನಲ್ಲಿ
 
 
ಧನ್ಯವಾದಗಳೊಂದಿಗೆ,
-ಟೆಕ್-ಕನ್ನಡ ಬಳಗ.

ಗುರುವಾರ, ಸೆಪ್ಟೆಂಬರ್ 16, 2010

ನಿಮ್ಮ ಸೆಲ್‌ಫೋನ್‌ನೊಳಗೊಂದು ಸರ್ಚ್‌ ಇಂಜಿನ್‌!

         ಕೇವಲ ಕರೆ ಮಾಡಲು, ಎಸ್ಎಮ್ಎಸ್ ಕಳಿಸಲು, ಫೋಟೋ ತೆಗೆಯಲು ಮಾತ್ರ ಬಳಸಲಾಗುತ್ತಿದ್ದ ಮೊಬೈಲ್‌ನಲ್ಲಿ ಮಾಹಿತಿ ಕಣಜ ಬಂದು ಕುಳಿತಿದೆ. ಅದನ್ನು ಅತ್ಯಂತ ವೇಗವಾಗಿ, ನಿಖರವಾಗಿ ಪಡೆಯುವ ಸೇವೆ ಜಸ್ಟ್‌ಡಯಲ್ ನೀಡುತ್ತಿದೆ.

          ಇದು ವೇಗದ ಜಗತ್ತು. ಕೂಡುತ್ತ, ನಡೆಯುತ್ತ, ಓಡುತ್ತ ಮಾಹಿತಿಯನ್ನು ಪಡೆಯುವ ಬಾಬತ್ತು. ಯಾವುದೇ ಕ್ಷಣದಲ್ಲಿ ಯಾವುದೇ ಸ್ಥಳದಲ್ಲಿ ಸೆಲ್‌ಫೋನ್‌ನಲ್ಲಿ ಮಾಹಿತಿ ನೀಡಲಿಕ್ಕಾಗಿಯೇ ಹುಟ್ಟಿಕೊಂಡಿವೆ ಹುಡುಕು ಸೇವೆಗಳು ನೂರಾಹತ್ತು. ಆದರೆ, ಯಾವ ಸಂಸ್ಥೆ ಮಾಹಿತಿಯನ್ನು ಅತ್ಯಂತ ವೇಗವಾಗಿ ನೀಡುತ್ತದೆನ್ನುವುದು ಸದ್ಯದ ಹಕೀಕತ್ತು.
         ಅಂತರ್ಜಾಲದಲ್ಲಿ ಹಾರಾಟವಾಡುತ್ತಿದ್ದ ಮಾಹಿತಿ ಜಗತ್ತು ಈಗ ನಿಮ್ಮ ಅಂಗೈಯಲ್ಲಿಯೇ ಬಂದು ಕುಳಿತಿದೆ. ಬೆರಳ ತುದಿಯಲ್ಲೇ ಮಾಹಿತಿಯ ಮಹಾಪೂರ.
         ಮೊಬೈಲ್ ಹ್ಯಾಂಡ್‌ಸೆಟ್‌ನಲ್ಲಿ ಕಡಿಮೆ ಬ್ಯಾಂಡ್‌ವಿಡ್ತ್ ಬಳಸಿ ಕೇವಲ 5ರಿಂದ 10 ಸೆಕೆಂಡುಗಳಲ್ಲಿ ಮಾಹಿತಿ ದೊರೆಯುವಂತೆ ತಂತ್ರಾಂಶವನ್ನು ಭಾರತದ ಪ್ರಮುಖ ಪ್ರಾದೇಶಿಕ ಸರ್ಚ್ ಇಂಜಿನ್ ಸಂಸ್ಥೆ www.justdial.com ಸಿದ್ಧಪಡಿಸಿದೆ. wap.justdial.com ತಾಣದಲ್ಲಿ ನಿಮಗೆ ಬೇಕಾದ ನಗರದಲ್ಲಿನ ಯಾವುದೇ ಮಾಹಿತಿಯನ್ನು ಅತ್ಯಂತ ನಿಖರವಾಗಿ ಮತ್ತು ವೇಗವಾಗಿ ನಿಮ್ಮ ಸೆಲ್‌ಫೋನ್‌ನಲ್ಲಿ ನಿಮಗೆ ದೊರೆಯಲಿದೆ.
wap.justdial.comನಲ್ಲಿನ ಹುಡುಕುವಿಕೆ ಮುಕ್ತವಾಗಿದ್ದು, ಬಳಕೆದಾರ ತನಗೆ ಬೇಕಾದಂತೆ ಅದನ್ನು ಪರಿವರ್ತಿಸಬಹುದು. ಕಂಪನಿಯ ಹೆಸರಿನಿಂದಾಗಲಿ, ಉತ್ಪನ್ನ ಅಥವ ಸೇವೆಗಳನ್ನು ತಮಗೆ ಬೇಕಾದಂತೆ ವಿಭಾಗಿಸಿ ಮಾಹಿತಿ ಪಡೆದುಕೊಳ್ಳುವ ಸೌಲತ್ತು ಜಸ್ಟ್‌ಡಯಲ್ ನೀಡಿದೆ.
         ಮುಂಬೈನಲ್ಲಿರುವ ಬಾಂದ್ರಾದಲ್ಲಾಗಲಿ, ಬೆಂಗಳೂರಿನ ವಿಜಯನಗರದಲ್ಲಾಗಲಿ ಇರುವ ಹೊಟೇಲುಗಳ ಪಟ್ಟಿ ಚಿಟಿಕೆ ಹೊಡೆಯುವ ವೇಗದಲ್ಲಿ ದೊರೆಯುತ್ತದೆ. ಉಪವಿಭಾಗದಲ್ಲಿರುವ ಆ ಹೊಟೇಲುಗಳ ದರಪಟ್ಟಿಯನ್ನು ಅಥವ ತಿಂಡಿ ತಿನಿಸುಗಳನ್ನು ಬಳಸಿ ತನಗೆ ಬೇಕಾದ ಮಾಹಿತಿಯನ್ನು ಆತ ಪಡೆಯಬಹುದು. ಒಟ್ಟು ಮೂರು ಹಂತಗಳಲ್ಲಿ ಹುಡುಕಿ ತನಗೆ ಬೇಕಾದ ನಿಖರ ಮಾಹಿತಿ ಪಡೆಯಬಹುದು.
         ಈ ಹುಡುಕುವಿಕೆಯಲ್ಲಿ ಯಾವುದೇ ಡ್ರಾಪ್‌ಡೌನ್ ಇರದ ಕಾರಣ ಹುಡುಕುವಿಕೆ ಡ್ರಾಪ್ ಆಗದೆ ವೇಗವಾಗಿದೆ ಮತ್ತು ಗ್ರಾಹಕನ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಇಲ್ಲಿ ಹುಡುಕುವಿಕೆ ಅತ್ಯಂತ ಸರಳವಾಗಿದ್ದು, ಪುಟದ ತೂಕ ಕೂಡ ಅತಿ ಕಡಿಮೆ ಇರುತ್ತದೆ.
          ಹು‌ಡುಕಿದ ಪಟ್ಟಿಯಲ್ಲಿ ದೊರೆತ ದೂರವಾಣಿಯನ್ನು ತಾಣದಿಂದಲೇ ನೇರವಾಗಿ ಕರೆಮಾಡುವ ಸೌಲತ್ತು ಕೂಡ ಜಸ್ಟ್‌ಡಯಲ್ ನೀಡಿದೆ. ಜಿಯೋ ಕೋಡ್ ನಮೂದಿಸಿ ಕೂಡ ಅತ್ಯಂತ ನಿಖರವಾಗಿ ಮಾಹಿತಿ ಪಡೆಯಬಹುದಾಗಿದೆ. ಒಂದು ವೇಳೆ ಬಳಕೆದಾರ ತಪ್ಪಾಗಿ www.justdial.com ಅಂತ ನಮೂದಿಸಿದರೂ ಕೂಡ ತಾನು ತಲುಪಬೇಕಾದ wap.justdial.com ಗಮ್ಯಕ್ಕೆ ತಲುಪಿಸುವ ಜಾಣತನ ಈ ತಂತ್ರಾಂಶದಲ್ಲಿದೆ.

ಜಸ್ಟ್‌ಡಯಲ್ ಬಗ್ಗೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲ ಉದ್ದೇಶದಿಂದ 1994ರಲ್ಲಿ ಜಸ್ಟ್‌ಡಯಲ್ ಸೇವೆಯನ್ನು ಪ್ರಾರಂಭಿಸಲಾಯಿತು. ಮಾಹಿತಿ ಹುಡುಕುವಿಕೆ ಸೇವೆಯಲ್ಲಿ ನವನವೀನ ಬದಲಾವಣೆ ತರಬೇಕೆಂಬ ಕಂಪನಿಯ ಉದ್ದೇಶ ಮತ್ತು ಬದ್ಧತೆಯಿಂದ ಭಾರತದಲ್ಲಿ ಮಾಹಿತಿ ಹುಡುಕುವಿಕೆ ಕ್ಷೇತ್ರದಲ್ಲಿ ಮೊದಲ ಸ್ಥಾನ ತಲುಪಿದೆ.

ಜಸ್ಟ್‌ಡಯಲ್‌ನ ಪ್ರಾದೇಶಿಕ ಹುಡುಕು ಸೇವೆಯನ್ನು ಈ ಮೂಲಕವೂ ಪಡೆಯಬಹುದು

1. ಅಂತರ್ಜಾಲ ತಾಣ www.justdial.com - ಇದು 40 ನಗರಗಳನ್ನು ಒಳಗೊಂಡಿದೆ
(ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಭೋಪಾಲ್, ಚಂಡೀಗಢ್, ಚೆನ್ನೈ, ಕೊಯಂಬತ್ತೂರು, ದೆಹಲಿ, ಎರ್ನಾಕುಲಂ, ಗೋವಾ, ಹೈದರಾಬಾದ್, ಇಂದೋರ್, ಜೈಪುರ, ಜಲಂಧರ್, ಜೋಧಪುರ, ಜೆಮ್ಶೆಡ್‌ಪುರ, ಕಾನಪುರ, ಲಖನೌ, ಕೋಲ್ಕೊತಾ, ಲುಧಿಯಾನಾ, ಮಧುರೈ, ಮಂಗಳೂರು, ಮುಂಬೈ, ನಾಗಪುರ,ಆಗ್ರಾ, ಅಹ್ಮದಾಬಾದ್, ನಾಸಿಕ, ಪಟ್ನಾ, ಪಾಂಡಿಚೇರಿ, ಪುಣೆ, ರಾಂಚಿ, ರಾಜಕೋಟ್, ಸೇಲಂ, ಸೂರತ್, ತಿರುವನಂತಪುರಂ, ತಿರುನೆವೇಲಿ, ವಡೋದರ, ವಾರಣಾಸಿ, ವಿಜಯವಾಡಾ, ವಿಶಾಖಪಟ್ಟಣಂ)

2. ಭಾರತದ 42 ನಗರಗಳಲ್ಲಿ 3999 9999 ಸಂಖ್ಯೆಯನ್ನು ಕರೆ ಮಾಡುವ ಮುಖಾಂತರ. ಜಸ್ಟ್‌ಡಯಲ್ ಸೇವೆ ಪ್ರತಿವರ್ಷ 360 ಲಕ್ಷ ದೂರವಾಣಿ ಕರೆಗಳನ್ನು ಸ್ವೀಕಕಿಸುತ್ತದೆ.

ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಅಹಮದಾಬಾದ್, ಕೋಲ್ಕೊತಾ, ಚಂಡಿಗಢ್, ಕೋಯಂಬತ್ತೂರು, ಬರೋಡ, ಜೈಪುರ, ಸೂರತ್ ಮತ್ತು ಇಂದೋರ್‌ಗಳು ಸೇರಿದಂತೆ ಭಾರತದ ಪ್ರಮುಖ ಮೆಟ್ರೋ, ಟಯರ್ 1 ಮತ್ತು ಟಯರ್ 2 ನಗರಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಇಡೀ ಭಾರತದಲ್ಲಿ ಒಟ್ಟು 80 ಸಾವಿರ ಚದರಡಿಯಷ್ಟು ಸ್ಥಳವನ್ನು ಜಸ್ಟ್‌ಡಯಲ್ ಆಕ್ರಮಿಸಿಕೊಂಡಿದೆ.

14 ನಗರಗಳಲ್ಲಿ 28 ಸಾವಿರ ನೌಕರರನ್ನು ಹೊಂದಿರುವ ಜಸ್ಟ್‌ಡಯಲ್ ಭಾರತದಲ್ಲಿ ಮೊಬೈಲ್‌ನಲ್ಲಿ ಮಾಹಿತಿ ಸೇವೆ ಸಲ್ಲಿಸುವ ಅತಿ ದೊಡ್ಡ ಖಾಸಗಿ ಸಂಸ್ಥೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆ ಪುಟ ಸೇರಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ www.justdial.com ಕ್ಲಿಕ್ಕಿಸಿ.