ಶುಕ್ರವಾರ, ನವೆಂಬರ್ 5, 2010

ಮೊಬೈಲ್ ನಲ್ಲೇ ಟ್ರಾವೆಲ್ಲಿಂಗ್ ಗೈಡ್ಸ್ !


ದೇಶ ಸುತ್ತು ಕೋಶ ಓದು ಎನ್ನುವ ಗಾಧೆ ಹಳೆಯದು. ಈಗ ದೇಶವೂ, ಕೋಶವೂ ಅಂಗೈಯಲ್ಲೇ ಇದೆ. ಸ್ಮಾರ್ಟ್ಫೋನ್ಗಳ ರೂಪದಲ್ಲಿ. ಇದರಲ್ಲಿರುವ ಸೌಲಭ್ಯಗಳೂ ಹಲವು. ಮೊಬೈಲ್ ಟ್ರಾವಲಿಂಗ್ ಗೈಡ್ಸ್ ಇಂಥದ್ದೊಂದು ಅನುಕೂಲಕರ ಮಾರ್ಗಸೂಚಿ.
ಈಗಂತೂ ಹಲವರ ಕೈಯಲ್ಲಿ ಸ್ಮಾರ್ಟ್ ಫೋನ್, ಐಫೋನ್ಗಳು ಇರುವುದರಿಂದ ಅನೇಕರಿಗೆ ಇವುಗಳೇ ದಾರಿ ಸೂಚಿಗಳು. ಸ್ಮಾರ್ಟ್ ಫೋನ್ ಕಂಪನಿಗಳು ಈ ಸೇವೆಗಾಗಿ ಬಳಕೆದಾರನಿಗೆ ಕಡಿಮೆ ದರ ವಿಧಿಸುತ್ತವೆ. ಕೈಯಲ್ಲೊಂದು ಸ್ಮಾರ್ಟ್ಫೋನ್ ಇದ್ದರೆ ಈಗ ಜಗತ್ತನ್ನೇ ಸುತ್ತಬಹುದು ಎನ್ನುವ ಮಾತಿಗೆ. ಪ್ರವಾಸಿ ಮಾರ್ಗಸೂಚಿ ಪುಸ್ತಕಗಳು, ನಕಾಶೆಗಳನ್ನು ಹೊತ್ತು ತಿರುಗಬೇಕಾದ ಅನಿವಾರ್ಯತೆ ಇಲ್ಲ ಎನ್ನುವ ನೆಮ್ಮದಿ ಪ್ರವಾಸಿಗರದು.
ಫೋಡರ್ ಐಫೋನ್ ಸಿಟಿ ಗೈಡ್ಸ್ ಅಂಡ್ರಾಯ್ಸ್ ಕಾರ್ಯನಿರ್ವಹಣಾ ತಂತ್ರಾಂಶದಲ್ಲಿ ಲಭ್ಯವಿರುವ ಲೋನ್ಲಿ ಪ್ಲಾನೆಟ್ ಕಂಪಾಸ್ ಗೈಡ್ಸ್ ಆಪಲ್ನ ಕೊಂಡ್ ನಾಸ್ಟ್ಸ್ ಟ್ರಾವಲೆಂಗ್ ಸೀರಿಸ್ ಇವೆಲ್ಲ ಅತ್ಯುತ್ತಮ ಮೊಬೈಲ್ ಟ್ರಾವಲೆಂಗ್ ಮಾರ್ಗಸೂಚಿಗಳು. ಈ ಸೌಲಭ್ಯಕ್ಕಾಗಿ ಬಳಕೆದಾರ 6 ರಿಂದ 8 ಡಾಲರ್ ಹಣ ತೆತ್ತರೆ ಸಾಕು ಸಮಯ, ಹಣ ಉಳಿಯುತ್ತದೆ.
ಪ್ರವಾಸದ ಸುರಕ್ಷತೆಯನ್ನು ಇನ್ನಷ್ಟು ಖಾತರಿಗೊಳಿಸುತ್ತವೆ ಎನ್ನುವ ಅಗ್ಗಳಿಕೆ, ಉದಾಹರಣೆಗೆ ‘ಲೋನ್ಲಿ ಪ್ಲಾನೆಟ್ ಕಂಪಾಸ್ ಗೈಡ್ಸ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿದ್ದರೆ ಇದರಲ್ಲಿ 24 ನಗರಗಳ ವಿಳಾಸ ಪತ್ತೆ ಹಚ್ಚಬಹುದು. ನಗರದ ಪ್ರತಿಯೊಂದು ಓಣಿ, ಬಡಾವಣೆ, ಗಲ್ಲಿಗಳ ನಕಾಶೆಯೂ ಇದರಲ್ಲಿದೆ. ಹೋಟೆಲ್, ರೆಸ್ಟೋರೆಂಟ್,ಪೆಟ್ರೋಲ್ ಬಂಕ್, ಆಸ್ಪತ್ರೆಗಳ ನಿಖರ ವಿಳಾಸವಿದೆ. ಹೆಚ್ಚುವರಿ ಮಾಹಿತಿ ಬೇಕಾದರೆ ಹುಡುಕಲು ಸರ್ಚ್ ವ್ಯವಸ್ಥೆ ಇದೆ. ಮಾಹಿತಿಯೊಳಗಿನ ಮಾಹಿತಿಗಾಗಿಗಿ ಹೈಪರ್ಲಿಂಕ್ ವ್ಯವಸ್ಥೆ ಕೂಡ ಇದೆ.
ಸ್ಮಾರ್ಟ್ಫೋನ್ನಲ್ಲಿರುವ ಪ್ರವಾಸಿ ಮಾರ್ಗ ಸೂಚಿಗಳಿಗಿಂತ ಇ -ಪುಸ್ತಕಗಳ ಮಾಹಿತಿಯನ್ನು ಹೆಚ್ಚು ನಂಬಬಹುದು. ಐಫೋನ್ನಲ್ಲಿರುವ ಲೋನ್ಲಿ ಪ್ಲಾನೆಟ್ ಡಿಸ್ಕವರ್ ಇ ಪುಸ್ತಕಕ್ಕೆ 13 ಡಾಲರ್ ತೆತ್ತರಾಯಿತು. ಇದು ಫ್ರಾನ್ಸ್, ಇಂಗ್ಲೆಂಡ್, ಐರ್ಲೆಂಡ್, ಥಾಯ್ಲೆಂಡ್ ಒಳಗೊಂಡಂತೆ ಪ್ರಪಂಚದ 12 ದೇಶಗಳ ಪ್ರವಾಸಿ ಸ್ಥಳದ ಮಾಹಿತಿಯನ್ನು ನೀಡುತ್ತದೆ. ಒಮ್ಮೆ ಇ-ಪುಸ್ತಕ ತೆರೆದು ನಿಮಗೆ ಬೇಕಾದ ಪುಟಗಳನ್ನು ಬುಕ್ ಮಾರ್ಕ್ ಮಾಡಿಕೊಳ್ಳಬಹುದು.
ಎಲ್ಲ ಪ್ರವಾಸಿ ಸ್ಥಳದ ಮಾಹಿತಿ ಬೆರಳ ತುದಿಯಲ್ಲೇ ಸಿಗುತ್ತದೆ. ಇಲ್ಲಿರುವ ಮಾಹಿತಿಯನ್ನು ನಕಲಿಸಿ ಬಳಕೆದಾರ ತನ್ನ ಸಾಮಾಜಿಕ ಸಂವಹನ ತಾಣಗಳಾದ ಟ್ವಿಟ್ಟರ್, ಫೇಸ್ಬುಕ್ನಲ್ಲೂ ಹಂಚಿಕೊಳ್ಳಬಹುದು. ಈ ಪುಸ್ತಕದಲ್ಲಿ ಹೈಪರ್ಲಿಂಕ್ ಸೌಲಭ್ಯ (ನೇರ ಇಂಟರ್ನೆಟ್ ಸಂಪರ್ಕ) ಕೂಡ ಇದೆ. ಬಳಕೆದಾರ ತನಗೆ ಬೇಕಾದ ಸ್ಥಳದ ಬಗ್ಗೆ ಅಂತರ್ಜಾಲದಲ್ಲಿ ಮತ್ತಷ್ಟು ಮಾಹಿತಿ ಕಲೆ ಹಾಕಬಹುದು. ಪ್ರವಾಸ ಸ್ಥಳದ ಬಗ್ಗೆ ಮುಂಚಿತವಾಗಿ ಒಂದಿಷ್ಟು ಓದಿಕೊಳ್ಳುವ ಅಭ್ಯಾಸ ಇರುವವರಿಗೆ ‘ಡಿಸ್ಕವರ್’ ಇ-ಪುಸ್ತಕ ಹೇಳಿ ಮಾಡಿಸಿದಂತದ್ದು .

1 ಕಾಮೆಂಟ್‌: