ಗುರುವಾರ, ಆಗಸ್ಟ್ 19, 2010

3 ಜಿ ಬಳಸಿ 1ರೂಪಾಯಿಗೆ ವಿದೇಶಕ್ಕೆ ಕರೆ ಮಾಡಿ

3ಜಿ ತರಂಗಾಂತರ ಸೇವೆಯಿಂದ ಮೊಬೈಲ್ ಇಂಟರ್ ನೆಟ್ ಬಳಕೆ ಗಣನೀಯವಾಗಿ ಹೆಚ್ಚುವುದಲ್ಲದೆ, ಇಂಟರ್ ನೆಟ್ ಮೂಲಕ ಮಾಡುವ ಅಂತಾರಾಷ್ಟ್ರೀಯ ಕರೆ ದರಗಳಲ್ಲಿ ಗಣನೀಯವಾಗಿ ಇಳಿಮುಖ ಆಗಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಗ್ಲೋಬಲ್ ಮಾರ್ಕೆಟಿಂಗ್ ಅಂಡ್ ಸ್ಟ್ರಾಟಜಿಯ ವ್ಯವಸ್ಥಾಪಕ ನಿರ್ದೇಶಕ ಸಂಜಿತ್ ಚಟರ್ಜಿ ಪ್ರಕಾರ ಅಂತಾರಾಷ್ಟ್ರೀಯ ಕರೆಗಳನ್ನು ಧ್ವನಿ ವರ್ಗಾವಣೆ ಮೂಲಕ ಕರೆ (VoIP)ಮಾಡುವುದರಿಂದ ಕರೆ ದರಗಳು ತೀವ್ರವಾಗಿ ಕಡಿಮೆಯಾಗಲಿವೆ. ಈ ಕರೆಗಳನ್ನು ಮಾಡಬೇಕಾದರೆ ಮೊಬೈಲ್ ಬಳಕೆದಾರರು 100 ಕೆಬಿ ಗಾತ್ರದ ಐ ಟೆಲ್ ನ ಸಾಫ್ಟ್ ವೇರ್ [^] ಅಳವಡಿಸಿಕೊಳ್ಳಬೇಕಾಗುತ್ತದೆ.

ಇದನ್ನು ಬಳಸಿ ವಿದೇಶೀ ಮೊಬೈಲ್ ಅಥವಾ ಲ್ಯಾಂಡ್ ಲೈನ್ ನಂಬರಿಗೆ ಕರೆ ಮಾಡಬಹುದಾಗಿದೆ. ಈಗ ಅಮೆರಿಕಾಗೆ ಕರೆ ಮಾಡುವ ದರ ನಿಮಿಷಕ್ಕೆ 8-10 ರೂಪಾಯಿಗಳಾಗಿದ್ದು 3ಜಿ ಸೇವೆ ಯ ಇಂಟರ್ ನೆಟ್ ಬಳಸಿದರೆ ಕೇವಲ ಒಂದು ರುಪಾಯಿ ಆಗಲಿದೆ.

ಗ್ಲೋಬಲ್ ಮಾರ್ಕೆಟಿಂಗ್ ಸ್ಟ್ರಾಟಜಿಯ ಅಂಗ ಸಂಸ್ಥೆ ರೀವ್ 50ಕ್ಕೂ ಹೆಚ್ಚು ದೇಶಗಳಲ್ಲಿ 1,200 ಇಂಟರ್ ನೆಟ್ ಸರ್ವೀಸ್ ಪ್ರೊವೈಡರ್ ಗಳನ್ನು ಹೊಂದಿದ್ದು, 50 ದೇಶಗಳ 30 ಮಿಲಿಯನ್ ಗೂ ಅಧಿಕ ಗ್ರಾಹಕರು ಈ ಸಂಬಂಧ ಸಾಫ್ಟ್ ವೇರ್ ಅಳವಡಿಸಿಕೊಂಡಿದ್ದಾರೆ.

ಈ ಹಿಂದೆ ಅಮೆರಿಕಾದ ಎಟಿ ಟಂಡ್ ಟಿ ಯ ಗ್ರಾಹಕರು ಐಫೋನ್ ಮೂಲಕ ವೈ ಫೈ ಸೇವೆ ಬಳಸಿಕೊಂಡು ಅಂತಾರಾಷ್ಟ್ರೀಯ ಕರೆ ಮಾಡುತ್ತಿದ್ದರು.ಗ್ರಾಹಕರ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಟಿ ಅಂಡ್ ಟಿ ತನ್ನ ಗ್ರಾಹಕರಿಗೆ ಐ ಫೋನ್ ವಿಒಐಪಿ(VoIP) ಸೌಲಭ್ಯದ ಮೂಲಕ ಕರೆ ಮಾಡುವ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಸಿಂಗಪುರ ಮೂಲದ ರೀವ್, ಭಾರತ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ನಲ್ಲಿ ಕಚೇರಿಗಳನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ