ಬೀಜಿಂಗ್: ತಂತ್ರಜ್ಞಾನದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸದಾ ಮುಂದಿರುವ ಚೀನಾ ಇದೀಗ ಕಾರುಗಳ ಮೇಲಿನಿಂದ ಹೋಗುವ ಬಸ್ಸುಗಳನ್ನು ತಯಾರಿಸುತ್ತಿದೆ. ಇದರಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಶೇ ೩೦ ರಷ್ಟು ಕಡಿಮೆಯಾಗುತ್ತದೆ ಎಂಬುವುದು ಇಲ್ಲಿನ ತಂತ್ರಜ್ಞರ ಅಭಿಪ್ರಾಯ. ಈ ಬಸ್ಸು ಗಂಟೆಗೆ ೬೦ ಕಿ.ಮೀ. ವೇಗದಲ್ಲಿ ಚಲಿಸಲಿದ್ದು ಇದರ ಮೇಲ್ಭಾಗದಲ್ಲಿ ಪ್ರಯಾಣಿಕರಿರುತ್ತಾರೆ. ಕೆಲ ಭಾಗದಲ್ಲಿ ಸಂಪೂರ್ಣ ರಸ್ತೆ ಇದ್ದು ಇದರೊಳಗಿನಿಂದ ಇತರ ಕಾರುಗಳು ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು. ಈ ಬಸ್ಸಿನಲ್ಲಿ ಏಕಕಾಲಕ್ಕೆ ೧೪೦೦ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಅಬ್ಬಾ:!!!! ಚೀನಾದ ಇಂಜಿನಿಯರುಗಳು ಇನ್ನೂ ಏನೇನನ್ನು ಕಂಡು ಹಿಡಿಯುತ್ತಾರೋ ?.
Filed under: ಅಂತರಾಷ್ಟ್ರೀಯ ಸುದ್ಧಿಗಳು | Leave a Comment »
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ