ಗುರುವಾರ, ಆಗಸ್ಟ್ 26, 2010

ಜಿಮೇಲ್ ನಿಂದ ನೇರವಾಗಿ ದೂರವಾಣಿ ಕರೆ ಮಾಡಿ

                              
ಈ-ಮೇಲ್ ಮುಖಾಂತರ ಸ್ನೇಹಿತರಿಗೆ, ನೆಂಟರಿಗೆ, ಪರಿಚಯದವರಿಗೆ ನೇರವಾಗಿ ದೂರವಾಣಿ ಕರೆ ಮಾಡುವುದು ಸಾಧ್ಯವೆ? ಸರ್ಚ್ ಇಂಜಿನ್ ದೈತ್ಯ ಗೂಗಲ್ ಕಂಪನಿ [^] ತನ್ನ ಈ-ಮೇಲ್ ಸೇವೆ ಜಿಮೇಲ್ ನಿಂದ ಇದನ್ನು ಸಾಧ್ಯವಾಗಿಸಿದೆ.

ಜಿಮೇಲ್ ಬಳಕೆದಾರರು ಇನ್ನು ಮುಂದೆ ಈ-ಮೇಲ್ ಮುಖಾಂತರವೇ ನೇರವಾಗಿ ಇತರರಿಗೆ ಟೆಲಿಫೋನ್ ಕರೆಗಳನ್ನು ಮಾಡಬಹುದು. ಅಮೆರಿಕ [^] ಮತ್ತು ಕೆನಡದಲ್ಲಿರುವ ಜಿಮೇಲ್ ಬಳಕೆದಾರರು 2010ರಲ್ಲಿ ಉಚಿತವಾಗಿ ಕರೆಗಳನ್ನು ಮಾಡಬಹುದು. ಆದರೆ, ಇತರ ದೇಶಗಳಲ್ಲಿರುವವರು ಈ ಸೇವೆ ಬಳಸಿಕೊಳ್ಳಲು ಅಲ್ಪ ಮೊತ್ತವನ್ನು ತೆತ್ತಬೇಕು.

ಚಾಟಿಂಗ್ ಪಟ್ಟಿಯಲ್ಲಿರುವ ಸ್ನೇಹಿತರಿಗೆ 'ಕಾಲ್ ಫೋನ್' ಬಟನ್ ಕ್ಲಿಕ್ ಮಾಡಿ ಫೋನ್ ನಂಬರ್ ಅಥವಾ ಹೆಸರು ನಮೂದಿಸಿ ಸಂಭಾಷಣೆಯನ್ನು ಆರಂಭಿಸಬಹುದು. ಆನ್ ಲೈನ್ ಖಾತೆ ಬಳಸಿ ಹಣ ಸಂದಾಯ ಮಾಡಬಹುದಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ವಿನೂತನ ಸೇವೆ ನೀಡುವ ಮುಖಾಂತರ ವೆಬ್ ಕಾಲಿಂಗ್ ಸೇವೆ ನೀಡುತ್ತಿರುವ ಸ್ಕೈಪ್ ಮತ್ತು ಎಟಿ ಅಂಡ್ ಟಿ ಹಾಗು ವೆರಿಜೋನ್ ಕಮ್ಯುನಿಕೇಷನ್ಸ್ ಕಂಪನಿಗಳಿಗೆ ನೇರವಾಗಿ ಪೈಪೋಟಿಗೆ ಗೂಗಲ್ ಇಳಿದಿದೆ.

ತುಂಟ ಪ್ರಶ್ನೆ : ಪ್ರಿಯತಮ ಪ್ರಿಯತಮೆಗೆ ಜಿಮೇಲ್ ಮುಖಾಂತರ ಫೋನ್ ಮಾಡಬೇಕಿದ್ದರೆ, 'ಈ-ಮೇಲ್ ಮುಖಾಂತರ ಫಿಮೇಲ್ ಗೆ ನೇರ ಕರೆ' ಎಂದು ಕರೆಯಬಹುದೆ?.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ