ಗುರುವಾರ, ನವೆಂಬರ್ 4, 2010

ಸಾಹಿತ್ಯ ಲೋಕ

ಸಾಹಿತ್ಯ ೆಂದರೆ ನಿಮಗೆ ಇಷ್ಟವೇ? ಷೇಕ್ಸ್ ಪಿಯರ್, ಲಿಯೋ ಟಾಲ್ ಸ್ಟಾಯ್, ಪುಷ್ಕಿನ್, ಮಿಲ್ಟಾ, ವಡ್ಸ್ ವರ್ಥ್, ಕಾಪ್ಕಾ, ಕಮೂ, ಕೀಟ್ಸ್, ರಾಬರ್ಟ್ ಬ್ರೌನಿಂಗ್, ಆರಿಸ್ಟಾಟಲ್, ಟ್ಯಾಗೂರ್, ಒ.ಹೆನ್ರಿ, ಪ್ಲೇಟೂ, ಎವರನ್ನೇಲ್ಲಾ ಓದಿದ್ದೀರಾ? ಅಥವಾ ಓದಬೇಕೆಂದುಕೊಂಡಿದ್ದೀರಾ? ಈ ಧಾವಂತದ ಬದುಕಿನಲ್ಲಿ ಇವನ್ನೇಲ್ಲ ಓದೋದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಈ ತಾಣದಲ್ಲಿ ಸಾಹಿತ್ಯದ ಸಮೃದ್ದ ರಸದೌತಣ ದೊರೆಯುತ್ತದೆ. ಬಿಡುವಿನಲ್ಲಿ ಈ ತಾಣಕ್ಕೆ ಬಂದರೆ ಇವರನ್ನೆಲ್ಲ ಓದಿಕೊಳ್ಳಬಹುದು. 250 ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ಪುಸ್ತಕಗಳು ಇಲ್ಲಿ ನಿಮಗೆ ಓದಿಗೆ ದೊರೆಯುತ್ತದೆ. ಜತೆಗೆ ಈ ಎಲ್ಲ ಲೇಖಕರಜೀವನದ ಸಂಕ್ಷಿಪ್ತ ಪರಿಚಯವೂ ಇದೆ. ಜೊತೆಗೆ ಸಾಹಿತ್ಯದ ಓದುಗರಿಗಾಗಿ ಆಕರ್ಷಕ ಸ್ಪರ್ಧೆಗಳೂ ಇರುವುದು ಈ ತಾಣದ ವಿಶೇಷ. ನಿಮ್ಮ ನೆಚ್ಚಿನ ಬರಹಗಾರರನ್ನೆಲ್ಲ ಇಲ್ಲಿ ಓದಿಕೊಳ್ಳಬಹುದು. ಹಾಗಿದ್ದರೆ ಏಕೆ ತಡ? ಕೊಂಡಿ ಕ್ಲಿಕ್ಕಿಸಿ. http://www.online-literature.com/

1 ಕಾಮೆಂಟ್‌:

  1. ಕನ್ನಡಕ್ಕೂ ಅಂತಹುದೊಂದು ಇರಬೇಕಿತ್ತು . ಎಷ್ಚಂದರೂ ನಮ್ಮದು ನಾವೇ ಹೇಳಿಕೊಳ್ಳುವ ಪ್ರಕಾರ ಸಾಫ್ಟವೇರ ಜಗತ್ತಿನ ರಾಜಧಾನಿ

    ಪ್ರತ್ಯುತ್ತರಅಳಿಸಿ