ಸೋಮವಾರ, ಅಕ್ಟೋಬರ್ 4, 2010

ಇನ್ಮುಂದೆ ಮೌಸ್ ಸದ್ದು ಮಾಡುವುದಿಲ್ಲ…

Magic track pad
ಕಂಪ್ಯೂಟರ್ ಜತೆಗೆ ಕೀ ಬೋರ್ಡ್, ಮೌಸ್, ಯುಪಿಎಸ್ ಇದ್ದೇ ಇರಬೇಕೆಂಬುದೇನೋ ಸರಿ. ಆದರೆ ಕಾಲ ಬದಲಾದಂತೆಲ್ಲ ಎಲ್ಲವೂ ಬದಲಾಗುತ್ತದೆ. ಈಗ ಏನಿದ್ದರೂ ಆಲ್ ಇನ್ ಒನ್ !
ಗಣಪತಿಯ ಪಕ್ಕ ಇಲಿಯಂತೆ ರಾರಾಜಿಸುತ್ತಿದ್ದ ಮೌಸ್ ಮತ್ತು ಕಂಪ್ಯೂಟರ್ನ ಸಂಬಂಧ ಇನ್ನು ಕಡಿದು ಹೋಗಲಿದೆ. ಅರ್ಥಾತ್ ಮೌಸಿಲ್ಲದೇನೇ ಗಣಕಯಂತ್ರವನ್ನು ನಿರ್ವಹಿಸಬಹುದಾಗಿದೆ. ಅದು ಹೇಗೆ ಬಲ್ಲಿರಾ ? ಅದೇ ಆ್ಯಪಲ್ ಕಂಪನಿ ಇಲ್ವಾ, ಅದು ಹೊಸದೊಂದು ಕಂಪ್ಯೂಟರ್ನಂಥ ‘ಮ್ಯಾಜಿಕ್ ಟ್ರ್ಯಾಕ್ಪ್ಯಾಡ್’ ಎಂಬ ಉಪಕರಣವೊಂದನ್ನು ಅಭಿವೃದ್ಧಿಪಡಿಸಿದೆ. ಈ ಟ್ರ್ಯಾಕ್ ಪ್ಯಾಡ್ನಲ್ಲಿ ಕೈ ಬೆರಳಿನ ಕೈಚಳಕದಲ್ಲೇ ಡೆಸ್ಕ್ಟಾಪ್ ಸೇರಿದಂತೆ ಎಲ್ಲ ಕೆಲವನ್ನೂ ಮಾಡಬಹುದು. ಇದೊಂದು ಬ್ಯಾಟರಿ ಆಧಾರಿತ ಟಚ್ಪ್ಯಾಡ್. ಇದು ಮೌಸ್ನ ಕೆಲಸ ಮಾಡುತ್ತೆ. ಇದನ್ನು ಗ್ಲಾಸ್ ಮತ್ತು ಅಲ್ಯುಮಿನಿಯಂನಿಂದ ತಯಾರಿಸಲಾಗಿದ್ದು, ನೋಟ್ಪ್ಯಾಡ್ನಂತಿದೆ. ಬ್ಲ್ಯೂಟೂಥ್ ಮೂಲಕ ಆ್ಯಪಲ್ನ ಮ್ಯಾಕ್ ಪ್ಯಾಡ್ನ ಬೆಲೆ ಆನ್ಲೈನ್ನಲ್ಲಿ 69 ಡಾಲರ್ಗಳು (ಅಂದಾಜು 3250 ರೂ.) ಐಫೋನ್ ಮತ್ತು ಐಪ್ಯಾಡ್ನ ಅನುಭವ ಉಳ್ಳವರಿಗೆ ಇದು ಸಲೀಸು. ಇದು ಕಂಪ್ಯೂಟರ್ನಿಂದ 10 ಮೀಟರ್ ಅಂತರದಲ್ಲಿದ್ದರೂ ಕಾರ್ಯನಿರ್ವಹಿಸುತ್ತದೆ ಎನ್ನುತ್ತದೆ ಕಂಪನಿ.
ಮೌಸ್ನಿಂದಾಗುವ ಕಿರಿಕಿರಿಗಳು ಅಷ್ಟಿಷ್ಟಲ್ಲ. ಸಿಕ್ಕಾಪಟ್ಟೆ ಜಾಗಬೇಕು. ಕೈ ಕೂಡ ನೋಯುತ್ತೆ. ಪಕ್ಕದಲ್ಲಿದ್ದ ಪೇಪರ್ ಮತ್ತಿತರ ವಸ್ತುಗಳಿಗೆ ತಗುಲುತ್ತೆ ಎಂದೆಲ್ಲ ಗೊಣಗುವವರು ಇನ್ನು ಟ್ರ್ಯಾಕ್ ಪ್ಯಾಡ್ಗೆ ಮೊರೆ ಹೋಗಬಹುದು ಅಲ್ವೇ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ