ಬುಧವಾರ, ಅಕ್ಟೋಬರ್ 6, 2010

ಕಾರು ಕಳವು ತಡೆಗೆ ನೂತನ ತಂತ್ರಜ್ಞಾನ

ಇದು ವಾಹನ ಮಾಲೀಕನಿಗೆ ಎಸ್ಎಂಎಸ್ ಕಳುಹಿಸುತ್ತದೆ
ಇತೀಚಿನ ದಿನಗಳಲ್ಲಿ ಸಿರಿವಂತರಷ್ಟೇ ಅಲ್ಲ ಮಧ್ಯಮ ವರ್ಗದವರ ಮನೆ ಮುಂದೆಯೂ ಕಾರುಗಳು ಇರುವುದು ಈಗ ಸಾಮಾನ್ಯ ನೋಟ. ಥರಹೇವಾರಿ ಕಾರುಗಳಿಗೇನು ಕೊರತೆ ಇಲ್ಲ. ತಿಂಗಳಲ್ಲಿ ಹಲವು ಹೊಸ ಮಾದರಿ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತವೆ. ಮಾರಾಟವೂ ಅಷ್ಟೇ ಭರ್ಜರಿಯಾಗಿ ನಡೆಯುತ್ತಿದೆ.
ಜತೆಗೆ ಕಾರು ಕಳ್ಳರ ಕೈಚಳಕವೂ ಹೆಚ್ಚಾಗಿದೆ. ಕಾರುಗಳ ಕಳ್ಳತನದಲ್ಲಿ ದೆಹಲಿ, ಮುಂಬಯಿ ನಂತರ ಸ್ಥಾನದಲ್ಲಿ ಬೆಂಗಳೂರು ಹಾಗೂ ಮೈಸೂರು ಇದೆ. ವಾಹನ ಕಳ್ಳತನ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವ ಅಪರಾಧವಾಗಿದೆ. ಕಾರು ಕಳೆದುಕೊಂಡು ಪರದಾಡುವವರಿಗೆ ಈಗ ತಂತ್ರಜ್ಞಾನ ನೆರವಿಗೆ ಬಂದಿದೆ. ಈ ಸಾಧನಗಳ ನೆರವಿನಿಂದ ಕಾರುಗಳನ್ನು ಕಳ್ಳತನ ಆಗದಂತೆ ತಡೆಗಟ್ಟಬಹುದು.
 
ಅದು ಮೊಬೈಲ್ ಫೋನ್ನಿಂದ ಮಾತ್ರ ಅಂದ್ರೆ ವಿಚಿತ್ರ ಅನ್ಸುತ್ತೆ. ಆದ್ರೂ ನಿಜ. ಅಂತಹ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ‘ಐಟ್ರಾನ್ಸ್ ಟೆಕ್ನಾಲಜೀಸ್’ ಪರಿಚಯಿಸಿದೆ.
ಈ ತಂತ್ರಜ್ಞಾನದ ಹೆಸರು ‘ಟಿಕಾಪ್’ ಇದು ಜಿಎಸ್ಎಂ ಆಧಾರಿತ ತಂತ್ರಜ್ಞಾನ. ಟಿಕಾಪ್ನಲ್ಲಿ ವೋಡಾಫೋನ್ ಸಿಮ್ ಕಾರ್ಡನ್ನು ಹಾಕಿ ಕಾರಿನಲ್ಲಿ ಅಳವಡಿಸಿ ಅಕ್ಟಿವೇಟ್ ಮಾಡಲಾಗುತ್ತದೆ. ಟಿಕಾಪ್ ಜತೆ ಮಾಲೀಕನ ಯಾವುದೇ ಟೆಲಿಕಾಂ ಸೇವೆಯ ಮೊಬೈಲ್ ಸಂಪರ್ಕ ಕಲ್ಪಿಸಬಹುದು. ಇದೊಂದು ಪುಟ್ಟ ಸಾಧನವಾಗಿದ್ದು, ವಾಹನ ಕಳ್ಳತನವಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಹೆಚ್ಚು ಅನುಕೂಲತೆ ಕಲ್ಪಿಸಿದೆ.
ಟಿಕಾಪ್ ತಂತ್ರಜ್ಞಾನ ಅಳವಡಿಸಿದ ವಾಹನವು ಪ್ರತಿ 5 ನಿಮಿಷಕ್ಕೊಮ್ಮೆ ಯಾವ ಸ್ಥಳದಲ್ಲಿದೆ ಎಂಬುದನ್ನು ಎಸ್ಎಂಎಸ್ ಮೂಲಕ ಸೂಚನೆ ನೀಡುತ್ತದೆ. ಯಾರಾದರೂ ಕಾರು ಕಳ್ಳತನ ಮಾಡುವ ಉದ್ದೇಶದಿಂದ ಒಳ ನುಗ್ಗಲು ಯತ್ನಿಸಿದರೆ ತಕ್ಷಣವೇ ಕಾರು ಮಾಲೀಕನಿಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನಿಸುತ್ತದೆ.
ಆಗ ಮಾಲೀಕ ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಬಹುದು. ಕಾರ್ ಕಳ್ಳತನ ಮಾಡಿದ ಕಳ್ಳನು ಟಿಕಾಪ್ ಅಳವಡಿಕೆಯ ಬಗ್ಗೆ ಗೊತ್ತಿಲ್ಲದೆ ಇದ್ದಾಗ ಮಾಲೀಕರು ತಕ್ಷಣವೇ ಎಸ್ಎಂಎಸ್ ಮಾಡಿ ಸೈರನ್ ಆನ್ ಆಗುವ ಹಾಗೆ ಮಾಡಬಹುದು. ಇದರಿಂದ ಕಳ್ಳನು ಸಿಕ್ಕಿಬೀಳುವ ಸಾಧ್ಯತೆಗಳುಂಟು. ಸೈರನ್ ಬೇಕಾದಾಗ ಆನ್ ಅಥವಾ ಆಫ್ ಮಾಡುವ ಸೌಲಭ್ಯವೂ ಉಂಟು. ಯಾರಾದರೂ ನಿಮ್ಮ ವಾಹನವನ್ನು ಕೇಳಿ ಪಡೆದು ಬೇಕಾಬಿಟ್ಟಿ ಎಲ್ಲೆಲ್ಲೊ ಸುತ್ತಾಡುವುದಕ್ಕೂ ತಡೆ ಹಾಕಬಹುದು.
ಈ ಟೆಕಾಪ್ ತಂತ್ರಜ್ಞಾನದಿಂದ ಇದೆಲ್ಲಾ ಹೇಗ್ಪಾ ಸಾಧ್ಯ ಅಂತೀರಾ? ಟೆಕಾಪ್ ಅಳವಡಿಸಿದ ಯಾವುದೇ ವಾಹನವು ಚಾಲನೆಯಾದ 72 ಗಂಟೆಗಳ ಚಲನೆಯ ದತ್ತಾಂಶಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ವಾಹನ ದುರ್ಬಳಕೆ ಮತ್ತು ಕಳ್ಳತನಕ್ಕೆ ಟೆಕಾಪ್ ದೊಡ್ಡ ಅಸ್ತ್ರವೇ ಆಗಿದೆ.
ಶಾಲಾ ವಾಹನ ಸೇರಿದಂತೆ ಅನೇಕ ವಾಹನಗಳನ್ನು ಹೊಂದಿರುವವರಿಗೂ ಇದರಿಂದ ಲಾಭವಿದೆ. ಬಳಿಯಲ್ಲಿ ಹಲವು ಚಾಲಕರು ಕೆಲಸಕ್ಕೆ ಇರುವಾಗಲೂ ಇದು ಬಹಳ ಸಹಾಯಕ. ಮಕ್ಕಳ ಪಾಲಕರಿಗೆ ಶಾಲಾ ವಾಹನ ಎಲಿದೆ. ಬರಲು ಇನ್ನೂ ಎಷ್ಟು ಸಮಯ ಬೇಕು ಎನ್ನುವ ಮಾಹಿತಿ ತಿಳಿಸಬಹುದು. ಬೇಕೆಂದಾಗ ಮೊಬೈಲ್ ಸಂಖ್ಯೆಗಳನ್ನು ಸೇರಿಸಬಹುದು ಅಥವಾ ತೆಗೆಯಬಹುದು.
ಮಾಹಿತಿಗೆ http://www.tcop.co.in/ತಾಣಕ್ಕೆ ಭೇಟಿ ನೀಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ