ಬುಧವಾರ, ಅಕ್ಟೋಬರ್ 6, 2010

ಮುಕ್ತ ವಿವಿಯಲ್ಲಿ ಇ-ರಿಸೋರ್ಸ್ ಸೆಂಟರ್ ಆರಂಭ

                             Ksou buliding
ಪ್ರಸಕ್ತ ಸಾಲಿನಲ್ಲಿ 2 ಲಕ್ಷ ವಿದ್ಯಾರ್ಥಿಗಳಿಂದ ವಿವಿ ಪ್ರವೇಶ

ಮೈಸೂರು: ದಿನೇ ದಿನೆ ತನ್ನ ಕಾರ್ಯವ್ಯಾಪಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ.
ಈ ಕುರಿತು ಜಸ್ಟ್ ಕನ್ನಡದೊಂದಿಗೆ ಮಾತನಾಡಿದ ಮುಕ್ತ ವಿವಿ ಕುಲಪತಿ ಪ್ರೊ. ಆರ್.ರಂಗಪ್ಪ ತನ್ನ ನೂತನ ಯೋಜನೆಗಳನ್ನು ವಿವರಿಸಿದ್ದು ಹೀಗೆ…
ತನ್ನ ವಿದ್ಯಾರ್ಥಿಗಳಿಗೆ ಕುಳಿತಲ್ಲಿಯೇ ಪಠ್ಯ ಮತ್ತಿತರ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಂಥಾಲಯದಲ್ಲಿ ವಿದ್ಯುನ್ಮಾನ-ಸಂಪನ್ಮೂಲ ಕೇಂದ್ರ (ಇ ರಿಸೋರ್ಸ್ ಸೆಂಟರ್) ಆರಂಭಿಸಲಾಗಿದೆ.
ದೂರಶಿಕ್ಷಣ ಕಲ್ಪಿಸುವ ಸವಾಲುಗಳನ್ನು ಮೀರಿ ನಿಲ್ಲಲು ಅಭ್ಯರ್ಥಿಗಳು ತಾವು ಇರುವಲ್ಲಿಯೇ ಅಥವಾ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದಲೇ ಕಲಿಕೆಗೆ ಮುಂದಾಗಲಿ ಎಂಬ ಉದ್ದೇಶದಿಂದ ಇಂತಹ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸುತ್ತಿದೆ. ಇಲ್ಲಿನ ಗ್ರಂಥಾಲಯದಲ್ಲಿ ಇ-ಸಂಪನ್ಮೂಲವಲ್ಲದೆ 1 ಲಕ್ಷಕ್ಕೂ ಹೆಚ್ಚು ಸಂಪುಟಗಳನ್ನು ಹೊಂದಿದೆ. ಸುಸಜ್ಜಿತ ಕಂಪ್ಯೂಟರ್ ಸೇವೆಗಳು, ಸಿಡಿ-ಡಿವಿಡಿ ಮೂಲಾಂಶ, ಅಂತರ್ಜಾಲ, ಇ-ಕಲಿಕಾ ಪ್ಯಾಕೇಜ್, ಸಂಪೂರ್ಣ ಪಠ್ಯವಿರುವ ಇ-ಸಂಪನ್ಮೂಲ ಮತ್ತಿತರ ಸೇವೆ ಒಳಗೊಂಡಿದೆ. ಹೀಗಾಗಿ ಸಾಂಪ್ರದಾಯಕ ಗ್ರಂಥಾಲಯವು ಸಹ ಅತ್ಯಾಧುನಿಕ ಸ್ಪರ್ಶವನ್ನು ಪಡೆದುಕೊಂಡಿದ್ದು, ಕಲಿಕಾರ್ಥಿಗಳ ಇಂದಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಸಜ್ಜಾಗಿದೆ.
KSOU VC pro.Rangappa
ಸಮರ್ಗ ಮಾಹಿತಿಗೆ ಈ ವೆಬ್ ಸೈಟ್ ನೋಡಿ
www.ksoumysore.edu.in ವೆಬ್ ಸೈಟ್ ಪ್ರವೇಶಿಸಿ, ತಮಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ಸಹ ಪಡೆಯಬಹುದು. ಒಂದೇ ಮಾಹಿತಿಯನ್ನು ಏಕಕಾಲದಲ್ಲಿ ಹಲವು ಮಂದಿ ಪಡೆಯಬಹುದು. ಒಂದೇ ಮಾಹಿತಿಯನ್ನು ಏಕಕಾಲದಲ್ಲಿ ಹಲವು ಮಂದಿ ಪಡಯಬಹುದು. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯೋದ್ದೇಶವನ್ನು ಸಾಕಾರಗೊಳಿಸುವ ಗುರಿಯೊಂದಿಗೆ ಈ ಕೇಂದ್ರ ಆರಂಭವಾಗಿದೆ. ದೃಷ್ಟಿ ದೋಷ ಉಳ್ಳವರಿಗೆ ಅಗತ್ಯ ಸಾಫ್ಟ್ ವೇರ್ ಗಳನ್ನು ಬಳಸುವ ಮೂಲಕ ವಿಶೇಷ ಸೇವೆ ಕಲ್ಪಿಸಲು ವಿವಿ ಯೋಜಿಸಿದೆ. ಇದಲ್ಲದೆ ಸಾವಿರಾರು ಇ-ಜರ್ನಲ್ ಗಳು, ಇ-ಪುಸ್ತಕಗಳು ಮೊದಲಾದವುಗಳನ್ನು ಅಂತರ್ಜಾಲದ ಮೂಲಕ ಡೆಯಬಹುದು ಎಂದು ರಂಗಪ್ಪ ವಿವರಿಸಿದರು.
2009-10ನೇ ಸಾಲಿನಲ್ಲಿ ವಿವಿಗೆ ಪ್ರವೇಶ ಪಡೆದವರ ಸಂಖ್ಯೆ 1 ಲಕ್ಷ ಮೀರಿತ್ತು. 2010-11ನೇ ಸಾಲಿನಲ್ಲಿ ಈ ಸಂಖ್ಯೆ 2 ಲಕ್ಷ ಮುಟ್ಟುವ ನಿರೀಕ್ಷೆ ಇದೆ. ಈ ಪ್ರಮಾಣದ ವಿದ್ಯಾರ್ಥಿಗಳ್ನು ಸುಲಭವಾಗಿ ತಲುಪುವಂತಗಲು ವಿವಿಯು ಅತ್ಯಾಧುನಿಕ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಗೊಂದಲ ಅಥವಾ ಮತ್ತಷ್ಟು ಮಾಹಿತಿ ಬೇಕೆಂದರೆ ದೂರವಾಣಿ ಸಂಖ್ಯೆ: 0821-2512471 ಅನ್ನು ಸಂಪರ್ಕಿಸಬಹುದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ