ಮಂಗಳವಾರ, ಅಕ್ಟೋಬರ್ 5, 2010

ಹೆಡ್ಫೋನ್ ಹೆಚ್ಚು ಬಳಸಿದರೆ ಕಿವಿಗೆ ಹಾನಿ

* ಕಿವಿಗೆ ಹೆಡ್ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ಹಳಿ ದಾಟಬೇಕಾದರೆ ರೈಲು ಡಿಕ್ಕಿ ಹೊಡೆದು ಮೂವರು ಮೃತಪಟ್ಟ ಪ್ರತ್ಯೇಕ ಪ್ರಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ದಾಖಲಾಗಿತ್ತು. ಅಂದರೆ ಹೆಡ್ಫೋನ್ ಹಾಕಿಕೊಂಡು ತಮ್ಮ ಪ್ರಾಣಕ್ಕೆ ಸಂಚಾಕಾರ ತಂದುಕೊಂಡ ಇವರೆಲ್ಲರೂ 20ರಿಂದ 30 ವರ್ಷದೊಳಗಿನವರು.
* ಬಸ್ಸಿನಲ್ಲೂ ಹೆಡ್ಫೋನ್ ಕಚಚಿಕೊಂಡಿರಬೇಕು, ಮೈಕಲ್ ಜಾಕ್ಸನ್ ಸ್ಟೈಲ್ನಲ್ಲಿ ಕಾಲು ಕುಣಿಸುವ ಯುವಕನನ್ನು ಕಂಡು ಪಕ್ಕದಲ್ಲಿದ್ದ ಅಜ್ಜನಿಗೂ ಉಮೇದು ! ರಸ್ತೆಯಲ್ಲಿ ಹೋಗುವಾಗ ಮ್ಯೂಸಿಕ್ನಲ್ಲಿ ಪರವಶನಾದ ಹುಡುಗ, ಎದುರು ಬಂದವರಿಗೆ ಡಿಕ್ಕಿ ಹೊಡೆದು ‘ಸಾರಿ ಯಾರ್…’ ಎನ್ನುತ್ತಲೇ ಇಯರ್ಫೋನ್ ಸರಿಪಡಿಸಿಕೊಳ್ಳುತ್ತ ಸಾಗುತ್ತಾನೆ. ಎಲ್ಲೆಡೆ ಕಾಣುವ ಹೆಡ್ಫೋನ್ ಮಾಯೆಯ ಸನ್ನಿವೇಶಗಳಿವು. 
ಆದರೆ ಈ ಮೋಹದ ಬಲೆ ಸರಿಸಿದಗ ಕೇಳುವುದೇ ಬೇರೆ.
ಇಪ್ಪತ್ತು ವರ್ಷದ ರೋಹನ್ ಈಚೆಗೆ ಟೀವಿ ನೋಡುವಾಗ ವಾಲ್ಯೂಮ್ ಅನ್ನು ಗರಿಷ್ಠ ಮಾಡಿಡುತ್ತಿದ್ದ. ಕಡಿಮೆ ಮಾಡು ಎಂದು ಅಪ್ಪ, ಅಮ್ಮ ಹೇಳಿದರೆ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಅವರೇನಾದರೂ ಸೌಂಡ್ ಕಡಿಮೆ ಮಾಡಿದರೆ ಕೇಳಿಸುವಿದಲ್ಲ ಎಂದು ತಕರಾರು ಮಾಡುತ್ತಿದ್ದ. ಈ ಸಮಸ್ಯೆಯ ರಹಸ್ಯೆ ಅರಿಯಲು ಇಎನ್ಟಿ ಸ್ಪೆಷಲಿಸ್ಟ್ ಬೇಕಾಯಿತು.
ಟೀನೇಜ್ನವರಲ್ಲಿ ಕಿವುಡುತನ ಸಂಬಂಧಿ ತೊಂದರೆಗಳು ಹೆಚ್ಚುತ್ತಿವೆ ಎಂಬುದು ವೈದ್ಯರ ಆತಂಖ. ಕಳೆದೆರಡು ದಶಕಗಳಿಂದ ಇದು ಗಮನಾರ್ಹವಾಗಿ ಏರಿದೆ.
55 ವಯಸ್ಸಿನ ನಂತರ ಕಿವಿ ಮಂದವಾಗುವ ವಯೋಸಹಜ, ರಕ್ತನಾಳಗಳು ದಪ್ಪವಾಗತೊಡಗಿರುವುದರಿಂದ ಕ್ರಮೇಣ ಶ್ರವಣ ತೊಂದರೆ, ಅಂದರೆ ವರ್ಷಕ್ಕೆ ಒಂದು ಡೆಸಿಬಲ್ನಷ್ಟು ಕಿವುಡತನ ಉಂಟಾಗುತ್ತದೆ. ಈ ಲೆಕ್ಕದಲ್ಲಿ 65 ಆಗುವ ಹೊತ್ತಿಗೆ ಸುಮಾರು 10 ಡೆಸಿಬಲ್ನಷ್ಟು ಕಿವುಡುತನ ಉಂಟಾಗುವುದು ಕಳವಳದ ವಿಚಾರವೇನಲ್ಲ.
ಈಗ ಹದಿಹರೆಯದವರು ಮತ್ತು ಯುವಜನರಲ್ಲೂ ಕಿವುಡುತನ ಸಮಸ್ಯೆ ಕಾಣಿಸುತ್ತಿದೆ. ತಂಬಾಕು ಬಳಕೆಯಿಂದ ನರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಲೌಡ್ ಮ್ಯೂಸಿಕ್ನಿಂದ ಕಿವಿಯ ಒಳಭಾಗಕ್ಕೆ ಹಾನಿಯಾಗುತ್ತದೆ. ಮೊಬೈಲ್ ಫೋನ್ ಅತಿ ಬಳಕೆಯೂ ಈ ತೊಂದರೆಗೆ ಕೊಡುಗೆ ನೀಡುವಲ್ಲಿ ಒಂದು ಮುಖ್ಯ ಕಾರಣ ಎಂದು ವೈದ್ಯರು ವಿಶ್ಲೇಷಿಸುತ್ತಾರೆ.
ದೊಡ್ಡ ಸದ್ದಿಗೆ ಹೆಚ್ಚು ಹೊತ್ತು ಕಿವಿಗೊಟ್ಟಷ್ಟು ದುಷ್ಪರಿಣಾಮ ಹೆಚ್ಚುತ್ತದೆ. ವ್ಯಕ್ತಿ ಸಣ್ಣ ವಯಸ್ಸಿನಲ್ಲೇ ಶ್ರವಣ ತೊಂದರೆ ಅನುಭವಿಸುವಂತಾಗುತ್ತದೆ.
ಇನ್ನೊಂದು ಅಪಾಯಕಾರಿ ಬೆಳವಣಿಗೆಯೆಂದರೆ ಐಪಾಡ್ ಮತ್ತು ಮೊಬೈಲ್ ಫೋನ್ ಮುಂತಾದ ಪೋರ್ಟಬಲ್ ಗ್ಯಾಜಿಟ್ಗಳ ಜನಪ್ರಿಯತೆ ಹೆಚ್ಚಿದೆ. ಹೀಗಾಗಿ ಕಿವಿಗೆ ಲೌಡ್ಸ್ಪೀಕರ್ಗಳಿಗಿಂತ ಹೆಡ್ಫೋನ್ಗಳಿಂದಾಗುವ ಹಾನಿಯ ಸಾಧ್ಯತೆಯೇ ಹೆಚ್ಚು ಎಂಬುದು ತಜ್ಞರ ವ್ಯಾಖ್ಯಾನ. ಸದ್ದಿನ ಮಟ್ಟ ಹೋಲಿಕೆಯಲ್ಲಿ ಒಂದೇ ಇದ್ದರೂ ಮೈಕಾಸುರನಿಗಿಂತ , ಹೆಡ್ಫೋನ್ನಿಂದ ಕಿವಿಗೆ ಆಗುವ ಡ್ಯಾಮೇಜ್ ಹೆಚ್ಚು. ಏಕೆಂದರೆ ಹೆಡ್ಫೋನ್ ಅಥವಾ ಇಯರ್ಫೋನ್ ಕಿವಿಯೊಳಗೇ ಎಂಟ್ರಿ ಪಡೆದಿರುತ್ತವೆ. ಹೆಡ್ಫೋನ್ ಬಳಕೆ ಹೆಚ್ಚಿದ್ದರಿಂದ ಶ್ರವಣ ಸಮಸ್ಯೆಗಳೂ ಹೆಚ್ಚಿವೆ ಎಂಬುದನ್ನು ಇಎನ್ಟಿ ತಜ್ಞರು ಹೇಳುತ್ತಾರೆ.

 

ಎಚ್ಚರ

ನಮ್ಮ ನಿತ್ಯ ಜೀವನದಲ್ಲಿ ಕಿವಿಗೊಡಬೇಕಾದ ಸದ್ದುಗಳ ಬಗೆ ಮತ್ತು ಪ್ರಮಾಣ 60 ಡೆಸಿಬಲ್. ಮಾಮೂಲು ಸಂಭಾಷಣೆ, ಟೆಲಿಫೋನ್ ರಿಂಗಿಂಗ್, 70 ಡೆಸಿಬಲ್, ರೆಸ್ಪಾರಂಟ್ 80 ಡೆಸಿಬಲ್, ಹೆವಿ ಟ್ರಾಫಿಕ್, 2 ಅಡಿ ದೂರದಲ್ಲಿರುವ ಅಲರ್ಮ್ ಕ್ಲಾರ್ಕ್, ಫ್ಯಾಕ್ಟರಿ ಸದ್ದು, ವಾಕ್ಯೂಮ್ ಕ್ಲೀನರ್, 90 ಡೆಸಿಬಲ್: ಭೂಗತ ರೈಲು, ಮೋಟಾರ್ ಸೈಕಲ್, ವರ್ಕ್ ಷಾಪ್ ಟೂಲ್ಸ್, ಚೈನು, ಗರಗಸ, 110 ಡೆಸಿಬಲ್, ಡಾನ್ಸ್ ಕ್ಲಬ್ ಸೌಂಡ್, 120 ಡೆಸಿಬಲ್ :ರಾಕ್ ಕಾರ್ಯಕ್ರಮದ ಸ್ಪೀಕರ್ ಸದ್ದು ಸ್ಯಾಂಡ್ಬ್ಲಾಸ್ಟರ್, ಸಿಡಿಲು, 130 ಡೆಸಿಬಲ್ : ಜೆಟ್ ಟೇಕಾಫ್, ಬಂದೂಕಿನ ಸದ್ದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ