www.pressdisplay.com ನಲ್ಲಿ ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ ಲಭ್ಯವಿದೆ.ಇಲ್ಲಿ ನೋಂದಾಯಿಸಿಕೊಂಡರೆ, ಸೀಮಿತ ಅವಧಿಗೆ ಉಚಿತ ಪ್ರಯೋಗಾರ್ಥ ಸೇವೆ ಲಭ್ಯವಿದೆ. ನಂತರ ಹಣ ಪಾವತಿಸಿ ಚಂದಾದಾರರಾಗಬಹುದು.ಸದ್ಯ ಕನ್ನಡಪತ್ರಿಕೆಗಳ ಪೈಕಿ "ಉದಯವಾಣಿ" ಮಾತ್ರಾ ಲಭ್ಯವಿದೆ.ವಿದೇಶಗಳ ಪತ್ರಿಕೆಗಳೂ ಇಲ್ಲಿ ಲಭ್ಯವಿದೆ.ದೇಶಾವಾರು ರೀತ್ಯ ಪತ್ರಿಕೆಗಳನ್ನು ವಿಭಾಗಿಸಿಟ್ಟಿರುವುದರಿಂದ ಪತ್ರಿಕೆಗಳನ್ನು ಹುಡುಕುವುದು ಸುಲಭ.
ಚಿತ್ರ ಬ್ಲಾಗ್‌ಗಳು
ಚಿತ್ರಗಳನ್ನೇ ಪ್ರಧಾನವಾಗಿ ಅಳವಡಿಸಲಾದ ಕನ್ನಡಿಗರ ಬ್ಲಾಗುಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ.ಉದಯವಾಣಿ ಓದುಗರಿಗೆ ಚಿರಪರಿಚಿತರಾದ ಆಸ್ಟ್ರೋ ಮೋಹನ್ ಅವರ ಚಿತ್ರ ಬ್ಲಾಗು ವಿಳಾಸದಲ್ಲಿ ಲಭ್ಯವಿದೆ. ಕಾಸರಗೋಡಿನ www.astromohan.blogspot.com ವೃತ್ತಿಪರ ಛಾಯಾಗ್ರಾಹಕ ಹರೀಶ್ ಹಳೆಮನೆ ಅವರ ಬ್ಲಾಗ್ ವಿಳಾಸ http://www.drishyaphotos.blogspot.com ವಾದರೆ ತಂತ್ರಜ್ಞ ಪಾಲಚಂದ್ರರ ಬ್ಲಾಗ್ http://palachandra.blogspot.com/ ನಲ್ಲಿದೆ. ಪಾಲಚಂದ್ರರ ಅನುಭವ ಮಂಟಪದಲ್ಲಿ ಛಾಯಾಚಿತ್ರಗಳನ್ನು ತೆಗೆಯುವುದು ಹೇಗೆ ಎಂಬ ತಂತ್ರಗಳನ್ನು ಚರ್ಚಿಸಿ, ಸೋದಾಹರಣ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ