ಯುಟ್ಯೂಬ್ ವಿಡಿಯೋ ತುಣುಕುಗಳನ್ನು ಒದಗಿಸಿ,ಅಂತರ್ಜಾಲ ಬಳಕೆದಾರರ ಮನಗೆದ್ದ ಗೂಗಲ್ ತಾಣ. ಈಗದು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಚಾನೆಲನ್ನು ಆರಂಭಿಸಿದೆ.ಇದರಲ್ಲಿ ವಿಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳ ಉಪನ್ಯಾಸಗಳ ವಿಡಿಯೋ ತುಣುಕುಗಳು ಲಭ್ಯವಿವೆ. ಇವನ್ನು www.youtube.com/eduನಲ್ಲಿ ಪಡೆಯಬಹುದು. ಎಂಐಟಿ, ಸ್ಟಾನ್‌ಫರ್ಡ್, ಕೊಲಂಬಿಯಾ, ಕಾರ್ನೆಲ್, ಡ್ಯೂಕ್, ಹಾವರ್ಡ್,ಯಾಲೆ, ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರುಗಳ ಉಪನ್ಯಾಸಗಳು ವಿವಿಧ ವಿಷಯಗಳ ಮೇಲೆ ಲಭ್ಯವಿವೆ. ದಂತವೈದ್ಯಕೀಯದ ಬಗ್ಗೆ ಮಿಚಿಗನ್ ವಿವಿಯ 426 ವಿಡಿಯೋಗಳಿವೆ. ಅಮೆರಿಕಾದ ವಿದ್ಯಾರ್ಥಿಗಳು ತಮ್ಮ ಕೋರ್ಸಿನ ಕೆಲವು ವಿಷಯಗಳನ್ನು ಸಂಪೂರ್ಣ ಆನ್‌ಲೈನ್ ಮೂಲಕವೇ ಪಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಶೈಕ್ಷಣಿಕ ವೆಚ್ಚ ತಗ್ಗಿಸಲು ಈ ರೀತಿ ಕಲಿಯುವುದು ಸಹಾಯಕವಾಗುತ್ತದೆ.ಇಲ್ಲವಾದರೆ ತರಗತಿಗೆ ಹಾಜರಾಗಲು ದೂರದಿಂದ ಪ್ರಯಾಣಿಸಿ,ಸಮಯ-ಪ್ರಯತ್ನ ಮತ್ತು ಹಣ ಇವನ್ನು ವ್ಯಯಿಸಬೇಕಾಗುತ್ತದಲ್ಲ ಎನ್ನುವುದು ಅವರ ಲೆಕ್ಕಾಚಾರ.
ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ