ಭಾನುವಾರ, ಜುಲೈ 25, 2010

ಕಾಂಡೋಮ್ ಕೊಳ್ಳಲು ಕಾಮಲಾಂಜ್

ಔಷಧಾಲಯದ ಗಾಜಿನ ಪೆಟ್ಟಿಗೆಯೊಳಗೆ ಮೂಲೆಯಲ್ಲಿ ಪಾಕೀಟಿನಲ್ಲಿ ಕೂತ ಕಾಂಡೋಮ್ ಗಳನ್ನು ಧೈರ್ಯವಾಗಿ ಕೇಳಿ ಪಡೆಯಲು ಹೆಚ್ಚಿನ ಯುವಕರು ಹಿಂಜರಿಯುತ್ತಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದಿದ್ದರೂ ಕಾಂಡೋಮ್ ಬೇಕು ಎಂದು ಕೇಳುವಲ್ಲಿ ಬೆವರು ಬಿಟ್ಟಿರುತ್ತಾರೆ. ಈಗ ಅಂಗಡಿಗೆ ಹೋಗಿ ಕಾಂಡೋಮ್ ಅನ್ನು ಕೊಳ್ಳುವ ಪ್ರಮೇಯವೇ ಇಲ್ಲ. ಕುಳಿತಲ್ಲಿಂದಲೇ ಕಂಪ್ಯೂಟರ್ ಬಟನ್ ಒತ್ತಿ ಯಾವ ಹಿಂಜರಿಕೆಯೂ ಇಲ್ಲದೆ ಕಾಂಡೋಮ್ ಕೊಳ್ಳಬಹುದು.

ಭಾರತದಲ್ಲಿ ಇಂಟರ್ನೆಟ್ [^] ಬಳಕೆ ಜಾಸ್ತಿಯಾಗಿರುವುದನ್ನು ಮನಗಂಡಿರುವ ಕಾಮಸೂತ್ರ [^] ಕಾಂಡೋಮ್ ಯುವಕರನ್ನು ಆಕರ್ಷಿಸಲೆಂದೇ ಕಾಮಲಾಂಜ್ ಎಂಬ ಇಂಟರ್ನೆಟ್ ತಾಣವನ್ನು ಹುಟ್ಟುಹಾಕಿದೆ. ಇಲ್ಲಿ ಯಾವುದೇ ಹಿಂಜರಿಕೆ, ಮುಜುಗರವಿಲ್ಲದೆ ಮುಕ್ತವಾಗಿ ಕಾಮಸೂತ್ರ ಕಾಂಡೋಮ್ ಮನೆಗೇ ತರಿಸಿಕೊಳ್ಳಬಹುದು.

ಕಾಂಡೋಮ್ ಕೊಳ್ಳುವ ವಿಷಯದಲ್ಲಿ ಮಡಿವಂತಿಕೆಯೇ ಮೆರೆದಾಡುತ್ತಿರುವ ಈ ಹಂತದಲ್ಲಿ ಕಾಂಡೋಮ್ ಬ್ರಾಂಡ್ ಕಾಮಲಾಂಜ್ ತೆರೆದಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೋಲ್ಡ್ ನಡೆ ಎಂದೇ ಬಣ್ಣಿಸಲಾಗಿದೆ. ಇಲ್ಲಿ ಏನಿದೆ ಏನಿಲ್ಲ? ಲೈಂಗಿಕ ಕ್ರಿಯೆ ನಡೆಸುವಾಗ ಯಾವ ರೀತಿ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂಬುದರಿಂದ ಹಿಡಿದು, ವಿಡಿಯೋ, ಬಾರ್ ಡ್ಯಾನ್ಸ್ ಬಗ್ಗೆ ಮಾಹಿತಿ ಇದೆ. ಇಲ್ಲಿ ಕಾಮದ ಬಗ್ಗೆ ಬಿಂದಾಸ್ ಆಗಿ ಮಾತಾಡಬಹುದು, ತಮ್ಮ ಅನಿಸಿಕೆಗಳನ್ನು ಇತರ ನೆಟ್ಟಿಗರೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು.

ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆಗಳಲ್ಲಿ ನಿರತರಾಗುತ್ತಿರುವುದು ಏಡ್ಸ್ ನಂಥ ಮಾರಕ ರೋಗಕ್ಕೆ ಇಂದಿನ ಯುವಜನತೆ ತುತ್ತಾಗುತ್ತಿದೆ. ಏಡ್ಸ್ ಬಗ್ಗೆ ತಿಳಿವಳಿಕೆ ಇದ್ದರೂ ಕಾಂಡೋಮ್ ಕೊಳ್ಳುವಲ್ಲಿ ಅನುಭವಿಸುತ್ತಿರುವ ಮುಜುಗರ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂಥವರು ಮುಜುಗರದ ಗೂಡಿನಿಂದ ಆಚೆಬರಲಿ ಲೈಂಗಿಕತೆಯ ಬಗ್ಗೆ ಮನಸು ತೆರೆದುಕೊಂಡಿರಲಿ ಎಂಬುದು ಕಾಮಲಾಂಜ್ ಹುಟ್ಟಿಸಿದವರ ಆಶಯ.

ಈ ವರ್ಚುವಲ್ ಜಗತ್ತಿನಲ್ಲಿ ಸೆಕ್ಸ್ ಮತ್ತು ಕಾಂಡೋಮ್ ಬಿಟ್ಟು ಮತ್ತೇನೂ ಇಲ್ಲ. ಯುವ ಮನಸುಗಳನ್ನು ಹಿಡಿದಿಡಲು ಇನ್ನೇನು ಬೇಕು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ