ಭಾನುವಾರ, ಜುಲೈ 25, 2010

ಬೆರಳ ತುದಿಯಲ್ಲಿ ಹೊಸ ಪ್ಲೇಬಾಯ್ ಲಭ್ಯ!

ಮೆರಿಕದ ಜನಪ್ರಿಯ ನಿಯತಕಾಲಿಕೆ ಪ್ಲೇಬಾಯ್ ಇನ್ನು ಮುಂದೆ ಅಂತರ್ಜಾಲ [^]ದಲ್ಲಿ ಹೊಸದಾಗಿ ದರ್ಶನ ನೀಡಲಿದೆ. ಇನ್ನು ಮುಂದೆ ಪ್ಲೇಬಾಯ್ ಪತ್ರಿಕೆಯನ್ನ್ನು ಅಂತರ್ಜಾಲದಲ್ಲಿ ಕದ್ದು ಮುಚ್ಚಿ ಓದುವ ಅಗತ್ಯವಿಲ್ಲ. ತನ್ನ ಹೊಸ ಅಂತರ್ಜಾಲ ತಾಣವನ್ನು ಯಾವುದೇ ಅಶ್ಲೀಲ ಚಿತ್ರಗಳಿಲ್ಲದಂತೆ ಪ್ಲೇಬಾಯ್ ರೂಪಿಸಿದೆ. ಒಮ್ಮೆ ಕ್ಲಿಕ್ಕಿಸಿ ನೋಡಿ.

ಇಂಟರ್ನೆಟ್ ಸಂಪರ್ಕ ಇರುವವರು ಕಚೇರಿಯಲ್ಲೇ ಕುಳಿತು ಇನ್ನು ಮುಂದೆ ಯಾವುದೇ ಬಿಗುಮಾನವಿಲ್ಲದೆ ಪ್ಲೇಬಾಯ್ ಓದಬಹುದು. ಹೊಸ ಅಂತರ್ಜಾಲ ತಾಣದಲ್ಲಿ ಜೋಕ್ ಗಳು, ವಿಡಿಯೋ [^]ಗಳೊಂದಿಗೆ ಮನರಂಜನೆಗೆ ಒತ್ತು ಕೊಡಲಾಗಿದೆ. ಒಟ್ಟಿನಲ್ಲಿ ಯುವ ಸಮುದಾಯವನ್ನು ಆಕರ್ಷಿಸಲು ಈ ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ ಎನ್ನುತ್ತದೆ ಪ್ಲೇಬಾಯ್.

ತನ್ನ ಬಹುಸಂಖ್ಯಾತ ಓದುಗರಾದ 25 ರಿಂದ 34ರ ವಯೋಮಾನದವರಿಗಾಗಿ ಈ ವೆಬ್ ಸೈಟನ್ನು ರೂಪಿಸಲಾಗಿದ್ದು ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಲೈಂಗಿಕ ಸುದ್ದಿಗಳು, ಲೇಖನಗಳು, ಹಾಟ್ ವಿಡಿಯೋಗಳು, ಜೀವನ ಶೈಲಿ, ಕಾಮಿಡಿ ವಿಡಿಯೋಗಳು, ಗಾಸಿಪ್ ಸುದ್ದಿಗಳು...ಹೀಗೆ ವೈವಿಧ್ಯಮಯ ಮನರಂಜನೆ ಹೊಸ ಅಂತರ್ಜಾಲ ತಾಣದಲ್ಲಿ ಲಭ್ಯವಾಗಲಿದೆ.

ನಮ್ಮ ಬಹಳಷ್ಟು ಓದುಗರು ಕಚೇರಿಯಲ್ಲಿ ಹಳೆ ಪ್ಲೇಬಾಯ್ ವೆಬ್ ಸೈಟನ್ನು ನೋಡಲು ಸಾಧ್ಯವಾಗುತ್ತಿರುವಲಿಲ್ಲ. ಪ್ಲೇಬಾಯ್ ಗೆ ಭೇಟಿ ಕೊಡುವ ಸುವರ್ಣಾವಕಾಶದಿಂದ ನಮ್ಮ ಓದುಗರು ವಂಚಿತರಾಗುತ್ತಿದ್ದರು. ಹಾಗಾಗಿ ಈ ಹೊಸ ವೆಬ್ ಸೈಟನ್ನು ಆರಂಭಿಸಿದ್ದೇವೆ ಎನ್ನುತ್ತಾರೆ ಪ್ಲೇಬಾಯ್ ಪತ್ರಿಕೆಯ ಜಿಮ್ಮಿ ಜೆಲ್ಲಿನೆಕ್.

ಈ ಹೊಸ ಅಂತರ್ಜಾಲ ತಾಣದಲ್ಲಿ ಪ್ಲೇಬಾಯ್ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಕ್ಲಿಕ್ಕಿಸಬಹುದು. ಈಜುಡುಗೆ ಸುಂದರಿಯರು, ತಮಾಷೆಯ ಛಾಯಾಚಿತ್ರಗಳನ್ನು ನೋಡಬಹುದು. ದೂರದರ್ಶನದ ಜನಪ್ರಿಯ ಕಾರ್ಯಕ್ರಮಗಳು, ಜನಪ್ರಿಯ ವೆಬ್ ಸೈಟ್ ಗಳ ಕೊಂಡಿಗಳು, ವಿಡಿಯೋಗಳನ್ನು ಸವಿಯಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ