ಗುರುವಾರ, ಏಪ್ರಿಲ್ 15, 2010

"ಕಣಜ"ವನ್ನು ತುಂಬಿ

"ಕಣಜ"ವನ್ನು ತುಂಬಿ


ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾವು ಎರಡು ಕೋಟಿ ಅನುದಾನವನ್ನು ನೀಡಿದೆ.ಕನ್ನಡ ವಿಕಿಪೀಡಿಯಾದ ತಾಣವನ್ನು ಹೋಲದೆ,ಈ ತಾಣ ಪ್ರತ್ಯೇಕ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ.ಯುನಿಕೋಡಿನಲ್ಲಿ ಬರಹಗಳು ಲಭ್ಯವಿರುವುದು ಪ್ಲಸ್ ಪಾಯಿಂಟ್.ಅಂತರ್ಜಾಲ ಶೋಧ ಸಾಧ್ಯವಾಗಲು, ಈ ಅಂಶ ನೆರವಾಗಲಿದೆ.ಈ ಜ್ಞಾನಕೋಶವನ್ನು ಸಮೃದ್ಧಗೊಳಿಸಲು,ಕನ್ನಡಿಗರೆಲ್ಲಾ ಕೈಗೂಡಿಸಿಬೇಕಿದೆ.ತಮ್ಮ ಬರಹಗಳನ್ನು ಈ ವಿಶ್ವಕೋಶಕ್ಕೆ ಸೇರಿಸಿ,ಇದನ್ನು ಜ್ಞಾನದ ಕಣಜವಾಗಿಸುವುದು ಅವಶ್ಯಕ.ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಕೋಶಕ್ಕೆ ಬರಹವನ್ನು ಸೇರಿಸುವಂತಹ ಕೆಲಸಗಳನ್ನು ನೀಡಿ,ಆ ಮೂಲಕ ವಿದ್ಯಾರ್ಥಿ ಸಮುದಾಯದ ಸಹಭಾಗಿತ್ವವನ್ನು ಪಡೆಯಲು ಪ್ರಯತ್ನಿಸಬೇಕು.ಜ್ಞಾನ ಎಂಬುವುದು ಎಲ್ಲರಲ್ಲೂ ಇದೆ,ಮತ್ತು ಜ್ಞಾನ ಎಲ್ಲರಿಗಾಗಿ ಎನ್ನುವ ಧ್ಯೇಯ ವಾಕ್ಯವನ್ನು ಹೊಂದಿದ ಕಣಜ,ಸರಕಾರದ ಬೊಕ್ಕಸವನ್ನು ಮಾತ್ರಾ ಬರಿದಾಗಿಸದೆ,ಕನ್ನಡಿಗರ ಪ್ರಯೋಜನಕ್ಕೆ ಸಿಗಲಿ. ಅತ್ತ ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾ ಮುಕ್ತ ವಿಶ್ವಕೋಶ, http://kn.wikipedia.org/wiki ಈಗಾಗಲೇ ಏಳೂವರೆ ಸಾವಿರ ಬರಹಗಳನ್ನು ಕಲೆ ಹಾಕಿ ದಾಪುಗಾಲು ಹಾಕುತ್ತಿದೆ.ವಿಕಿಪೀಡಿಯಾಕ್ಕೆ ಯಾರು ಬೇಕಾದರೂ ಬರಹಗಳನ್ನು ಸೇರಿಸಲು ಅವಕಾಶವಿದೆ.ಆನ್‌ಲೈನ್‌ನಲ್ಲಿ ಇರುವಾಗ ಈ ಬರಹಗಳನ್ನು ಸೇರಿಸಬಹುದು,ಇತರರ ಬರಹಗಳನ್ನು ತಿದ್ದಬಹುದು.ಸರ್ಕಾರಿ ವಿಶ್ವಕೋಶವಾದರೋ,ಜನರಲ್ಲಿ ಬರಹಗಳನ್ನು ಬರೆದು ಕಳುಹಿಸಿ ಎಂದು ವಿನಂತಿಸುತ್ತಿದೆ! ಆನ್‌ಲೈನಿನಲ್ಲಿದ್ದು ಬರಹ ಸೇರಿಸುವ ಅವಕಾಶವನ್ನು ಸದ್ಯಕ್ಕಂತೂ ಕೊಟ್ಟಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ