ಗುರುವಾರ, ಏಪ್ರಿಲ್ 15, 2010

ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ

ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ


ಕಂಪ್ಯೂಟರ್ ಬಳಸುವವರಿಗೆ ಮೈಕ್ರೋಸಾಫ್ಟ್ ಕಂಪೆನಿಯ ಬಗ್ಗೆ ಗೊತ್ತೇ ಇರುತ್ತದೆ.ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ ವಿಂಡೋಸ್ 7,ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತಂತ್ರಾಂಶಗಳು ಸದ್ಯ ಸುದ್ದಿಯಲ್ಲಿವೆ. ಈ ಕಂಪೆನಿಯು ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು. ವಿದ್ಯಾರ್ಥಿ ಸಹಭಾಗಿಗಳನ್ನು ನೇಮಿಸಿಕೊಳ್ಳುವ ವಿನೂತನ ತಂತ್ರ ಬಳಸುತ್ತಿದೆ.ವಿದ್ಯಾರ್ಥಿ ಸಹಭಾಗಿಗಳು ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಕೊಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಡ್ರೀಮ್‌ಸ್ಪಾರ್ಕ್ ಯಾತ್ರಾ ಎನ್ನುವ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಹಮ್ಮಿಕೊಂಡಿದ್ದು, ಎಪ್ರಿಲ್ ಐದರಂದು ಒಂದು ದಿನದ ಕಾರ್ಯಕ್ರಮವು ನಿಟ್ಟೆಯ ಎನ್ ಎಂ ಎ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರಗಲಿದೆ.ರಸಪ್ರಶ್ನೆ,ಹೆಚ್ಚು ಮಂದಿ ನೋಂದಾಯಿಸುವ ಕಾಲೇಜುಗಳಿಗೆ ಪ್ರಶಸ್ತಿಯಂತಹ ಕೊಡುಗೆಗಳಿವೆ.ವಿವರಗಳಿಗೆ
http://www.nittedreamsparkyatra.in/ ಅಂತರ್ಜಾಲತಾಣವನ್ನು ನೋಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ