ಭಾನುವಾರ, ಏಪ್ರಿಲ್ 25, 2010

ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು!!!

ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು!!!

             ಮುಂಗಾರುಮಳೆ ಹಾಡು ಕೇಳದೆ ತುಂಬಾ ದಿನ ಆಗಿದೆ.- ಹೀಗೆಂದು ಅನ್ನಿಸುತ್ತಿದ್ದಂತೆ ಕರ್ಸರ್ Music ಮೇಲೆ ಹೋಗುತ್ತದೆ. ಅಲ್ಲಿ Mungaaru male ಫೈಲ್ ಕ್ಲಿಕ್ ಮಾಡುತ್ತೀರಿ. "ಅನಿಸುತಿದೆ ಯಾಕೋ ಇಂದು " ಹಾಡು ಕೇಳಬೇಕೆನ್ನಿಸುತ್ತದೆ. Anisutide yaako indu ಎಂಬ ಫೈಲ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ ಆಲಿಸುತ್ತೀರಿ.

ಅದೇ ರೀತಿ ಫೋಟೋ ಫೈಲ್ ಗಳಿಗೂ ನಾವು ಸಾದಾರಣವಾಗಿ ಇಂಗ್ಲಿಷ್ನಲ್ಲೇ ಹೆಸರು ಕೊಟ್ಟಿರುತ್ತೇವೆ.- Bayakemane photos, flowers, kids at home, falls ಇತ್ಯಾದಿ, ಇತ್ಯಾದಿ.

              ಈಗ ನೀವು ಸೇವ್ ಮಾಡುವ ಫೈಲ್ ಗಳಿಗೂ ಕನ್ನಡದಲ್ಲೇ ಹೆಸರು ಕೊಡಬಹುದು!!! ಆಶ್ಚರ್ಯವಾಯಿತೇ?. ಇದು ನಿಜ.(ಹಾಗೂ ತುಂಬಾ ಸುಲಭ).ಮೊದಲು ಅಂತರ್ಜಾಲದಿಂದ Google Transliteration IME
ಎಂಬ ಇನ್ ಪುಟ್ ಮೆಥಡ್
ಇಳಿಸಿಕೊಳ್ಳಬೇಕು. ಆ ಜಾಲತಾಣದ ಲಿಂಕ್ ಇಂತಿದೆ- http://www.google.com/ime/transliteration/ .ಈ ಪುಟದಲ್ಲಿ Choose your IME language ನಲ್ಲಿ Kannada ಆಯ್ಕೆ ಮಾಡಿಕೊಂಡು Download Google IME ಕ್ಲಿಕ್ ಮಾಡಿ ಡೌನ್ಲೋಡ್ ಆದ ಫೈಲನ್ನು ರನ್ ಮಾಡಿದರೆ ಮುಗಿಯಿತು. Taskbar ನ notification area ದಲ್ಲಿ (ಬಲಬದಿಯ ಕೆಳ ಮೂಲೆಯಲ್ಲಿ) EN ಎಂದು ಕೂತಿರುತ್ತದೆ. ನಾವು ಯಾವುದಾದರೊಂದು ಕಡೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡಬೇಕೆಂದಾಗ ಈ EN ಮೇಲೆ ಕ್ಲಿಕ್ ಮಾಡಿ KD Kannada ಆಯ್ಕೆ ಮಾಡಿಕೊಂಡು ಟೈಪಿಸಿದರೆ ಕನ್ನಡ ಅಕ್ಷರ ಮೂಡಿಸಬಹುದು. ಇಲ್ಲಿ ಯಾವುದಾದರೂ ಕಡೆ ಎಂದರೆ ಚಾಟ್ ಬಾಕ್ಸ್ ಇರಬಹುದು, ಹೊಸ ಮೇಲ್ ಇರಬಹುದು, ಅಥವಾ ಎಂ.ಎಸ್. ಆಫೀಸ್ ಇರಬಹುದು.

 
                ಈಗ ಮತ್ತೆ Mungaaru male ಗೆ ಹೋಗೋಣ. Mungaaru male ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ Rename ಆಪ್ಶನ್ ಕ್ಲಿಕ್ ಮಾಡಿ. ಈಗ ಬಲಬದಿಯ ಕೆಳ ಮೂಲೆಯಲ್ಲಿರುವ EN ಮೇಲೆ ಕ್ಲಿಕ್ ಮಾಡಿ KD Kannada ಆರಿಸಿಕೊಂಡು ಕನ್ನಡದಲ್ಲೇ "ಮುಂಗಾರು ಮಳೆ" ಎಂದು ಫೈಲ್ ಗೆ ಹೆಸರು ಕೊಡಬಹುದು.!!! ಹೀಗೆ ಯಾವ ಫೈಲ್ ಗೂ ಬೇಕಾದರೂ ಕನ್ನಡದಲ್ಲೇ ಹೆಸರು ಕೊಡಬಹುದು.

                   ನಾನು ಆದಷ್ಟು ಮಟ್ಟಿಗೆ ಸರಳವಾಗಿ ಹೇಳಲು ಪ್ರಯತ್ನಪಟ್ಟು ಬರೆದಿದ್ದೇನೆ. ಮಾಡಿ ನೋಡಿ. ಏನಾಯಿತು ಹೇಳಿ. ನಿಮಗೆ ಈ ವಿಷಯ ಮೊದಲೇ ಗೊತ್ತಿತ್ತಾ? (ಅಥವಾ ನನಗೆ ಗೊತ್ತಾಗಿದ್ದು ಇತ್ತೀಚೆಗಾ?)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ