ಶನಿವಾರ, ಏಪ್ರಿಲ್ 24, 2010

ಓ ಮನಸೇ

 
ಓ ಮನಸೆಯ ಸಮಾಧಾನ ಅಂಕಣ ನನಗೆ ಬಹು ಪ್ರಿಯವಾದ ಅಂಕಣ. ನಾವು ಕಷ್ಟದಲ್ಲಿದ್ದಾಗ ನಮಗಿಂತಾ ಕಷ್ಟದಲ್ಲಿರುವವರನ್ನು ನೆನೆಸಿದರೆ ನಮ್ಮ ಕಷ್ಟಗಳು ದೊಡ್ಡದಲ್ಲ ಎನಿಸಿಬಿಡುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆ ಕಾರಣಕಾಗಿಯೇನೋ ಅಂಕಣಕ್ಕೆ ಬರೆಯುವ ಓದುಗರ ಸಮಸ್ಯೆಗಳನ್ನು ಓದುತ್ತಿದ್ದರೆ ನಮ್ಮ ಸಮಸ್ಯೆಗಳು ಎಷ್ಟು ಚಿಕ್ಕವು ಸ್ವಲ್ಪ ಮನಸ್ಸು ಮಾಡಿದರೆ ನಾವೇ ಸುಲಭವಾಗಿ ಪರಿಹರಿಕೊಳ್ಳಬಹುದು ಎನಿಸುತ್ತದೆ. ಆ ಕಾರಣದಿಂದಾಗಿಯೇ ನಾನು ತುಂಬಾ ದುಃಖದಲ್ಲಿದ್ದಾಗ, ಖಿನ್ನನಾಗಿದ್ದಾಗ, ಬೇಜಾರಾದಾಗ ಸಮಾಧಾನ ಅಂಕಣ ಓದಲು ಬಯಸುತ್ತೇನೆ. ಓದುಗರು ಕಲಿಸುವ ಪ್ರಶ್ನೆ ಏನೇ ಇರಲಿ, ಅವರ ಸಮಸ್ಯೆಗಳು ಏನೇ ಇರಲಿ ಅದಕ್ಕೆ ಸಿಗುವ ಉತ್ತರದಲ್ಲಿ ಎಲ್ಲರಿಗೂ ಬೇಕಾದ ಒಂದು ಸಮಾಧಾನದ ಮಾತು, ಸಮಸ್ಯೆಗೆ ಪರಿಹಾರ ಗೋಚರವಾಗುತ್ತದೆ.
ಓ ಮನಸೇಯಲ್ಲಿ ಪ್ರಕಟವಾಗುವ ಅನೇಕ ಅಂಕಣಗಳೆಲ್ಲ ಚೆನ್ನಾಗಿದ್ದು, ಇಷ್ಟವಾದರೂ ಯಾವುದಾದರು ಒಂದು ಅಂಕಣ, ಬರಹ ಕಥೆ ನಮ್ಮ ಮನಸಿಗೆ ತುಂಬ ಹತ್ತಿರವಾಗುತ್ತವೆ. ಓ ಮನಸೇಯಲ್ಲಿ ನಿಮಗೆ ಇಷ್ಟವಾದ ಬರಹ, ಅಂಕಣ ಯಾವುದು ಮತ್ತು ಏಕೆ ಎಂಬುದನ್ನು ನಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಿ.

2 ಕಾಮೆಂಟ್‌ಗಳು:

  1. hai this is ashritha . nanu nimma lekhanavannu odiddene nimma haage nanagu annisuttide. nanagu tumba bejaradaga ankana odabeku annisuttade. mattu nanahe e sandharbha dalli yavadadaru hadugalannu kelalu bayasuttene.

    ಪ್ರತ್ಯುತ್ತರಅಳಿಸಿ
  2. ನೀವು ಸಹ ಯಾಕೇ ಬರವಣಿಗೆಗೆ ಪ್ರಯತ್ನಿಸಬಾರದು?
    ಸಾದ್ಯವಾದಲ್ಲಿ ಕಥೆ,ಕವಿತೆ, ಅಂಕಣ, ವಿಚಾರ ವಿನಿಮಯ ಹೀಗೆ ನಿಮ್ಮ ಆಸಕ್ತಿಗೆ ತಕ್ಕಹಾಗೇ ಬರವಣಿಗೆಗೆ ಒತ್ತು ನೀಡಿ.. ನಮ್ಮಿಂದೇನಾದರೂ ಸಹಾಯ ಬೇಕಿದ್ದಲ್ಲಿ ನನ್ನ ಸಂಪರ್ಕ ಮಡೆಯಬಹುದು. 9740463256

    ಪ್ರತ್ಯುತ್ತರಅಳಿಸಿ