
ಭಾಷೆ ಕಲಿಕೆಗೆ ಅಂತರ್ಜಾಲದ ಸಮುದಾಯದ ನೆರವು ಸಿಗುತ್ತದೆ.ಯಾವುದೇ ಭಾಷೆಯನ್ನು ಕಲಿಯಲು ಅದರ ಅಪರಿಮಿತ ಬಳಕೆಯೇ ಸುಲಭದ ಹಾದಿ ಎನ್ನುವುದನ್ನು ಒಪ್ಪುತ್ತೀರಾ? ಎಷ್ಟೋ ವೇಳೆ ನಮಗೆ ಭಾಷೆ ಕಲಿಯಲು ಕಲಿಸುವವರಿಲ್ಲದಿರುವುದೂ ಕಾರಣವಾಗಿರುತ್ತದೆ. ಮಾತಾನಾಡುವಾಗ, ಬರೆಯುವಾಗ ತಪ್ಪುಗಳು ಆಗುತ್ತವೆ ಎನ್ನುವ ಹಿಂಜರಿಕೆಯಿಂದಲೂ ನಮಗೆ ಕಲಿಕೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. www.livemocha.com ಅಂತಹ ತಾಣಗಳು ಉಚಿತವಾಗಿ ಭಾಷೆ ಕಲಿಕೆಗೆ ನೆರವಾಗುತ್ತವೆ.ಕನ್ನಡವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಭಾಷೆಗಳ ಕಲಿಕೆಗೆ ಇಲ್ಲಿ ನೆರವು ಸಿಗುತ್ತದೆ. ನಿಮಗೆ ಯಾವ ಭಾಷೆ ಕಲಿಯಬೇಕು ಮತ್ತು ಯಾವ ಭಾಷೆಯನ್ನು ಬಲ್ಲಿರಿ ಎಂದು ನೋಂದಾಯಿಸಿಕೊಳ್ಳುವ ವೇಳೆ ತಿಳಿಸಿದರೆ, ನಿಮಗೆ ಬಲ್ಲ ಭಾಷೆಯಲ್ಲಿ ಕಲಿಯಬೇಕಾದ ಭಾಷೆಯಲ್ಲಿ ತಿಳಿಸಬಲ್ಲ ಜನರ ಸಮುದಾಯಕ್ಕೆ ನಿಮ್ಮನ್ನು ಸಂಪಕಿಸಲಾಗುತ್ತದೆ. ನಿಮ್ಮ ಉಚ್ಛಾರವನ್ನು ಈ ಸಮುದಾಯದ ಆನ್‌ಲೈನ್ ಇರುವ ಸದಸ್ಯರು ಆಲಿಸಿ, ಸಲಹೆ ನೀಡುವರು. ನಿಮ್ಮ ಬರವಣಿಗೆಯೂ ಹೀಗೆ ಪ್ರತಿಕ್ರಿಯೆಗಿಟ್ಟಿಸಿಕೊಂಡು,ನಿಮ್ಮ ತಪ್ಪು-ಒಪ್ಪುಗಳು ನಿಮಗೆ ತಿಳಿಯುತ್ತವೆ. ಅದೇ ವೇಳೆ ನೀವೂ ನಿಮಗೆ ತಿಳಿದಿರುವ ಭಾಷೆಯಲ್ಲಿ ಇತರರಿಗೆ ನೆರವಾಗುತ್ತೀರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ