ಗುರುವಾರ, ಏಪ್ರಿಲ್ 15, 2010

ಇಸ್ರೋದ ಭುವನ್‌ಗೆ ಹೊಳಪು

ಇಸ್ರೋದ ಭುವನ್‌ಗೆ ಹೊಳಪು

ಇಸ್ರೋವೂ ಗೂಗಲ್ ಅರ್ಥ್ ಅನ್ನು ಅನುಕರಿಸಿ,ತನ್ನ ಉಪಗ್ರಹಗಳ ಚಿತ್ರಗಳನ್ನು "ಭುವನ್" ಮೂಲಕ ಅಂತರ್ಜಾಲದಲ್ಲಿ ಲಭ್ಯವಾಗಿಸಿದ್ದು ಹಳೆಯ ಸುದ್ದಿ.ಈ ಸೇವೆಯು ನೋಂದಾಯಿತ ಬಳಕೆದಾರರಿಗಷ್ಟೇ ಲಭ್ಯವಿತ್ತು.ಅದನ್ನೀಗ ಮುಕ್ತವಾಗಿ ಬಳಸಬಹುದು. www.bhuvan.nrsc.gov.in ಅಂತರ್ಜಾಲ ವಿಳಾಸದಲ್ಲಿ ತಾಣವಿದೆ.IRS P6(Resourcesat-1) ಮೂಲಕ ಲಭ್ಯವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲು ಇಸ್ರೋ ಬಯಸಿದೆ. ಫೈರ್‌ಪಾಕ್ಸ್ ಬ್ರೌಸರ್ ಬಳಸಿಯೂ ಭುವನ್ ಚಿತ್ರಗಳನ್ನು ವೀಕ್ಷಿಸಬಹುದು.ಇಲ್ಲಿ ಸಿಗುವ ಚಿತ್ರಗಳಲ್ಲಿ 5.8ಮೀ ಸ್ಪಷ್ಟತೆಯವೂ ಸೇರಿವೆ.ವಿದೇಶೀ ನೆಲವನ್ನು 56ಮೀ ಸ್ಪಷ್ಟತೆಯಲ್ಲಿ ತೋರಿಸಲಾಗಿದೆ. ದೇಶದೊಳಗೆ, ರಾಜ್ಯ,ಜಿಲ್ಲೆ,ತಾಲೂಕು ಮತ್ತು ಹಳ್ಳಿಗಳ ಗಡಿಯನ್ನೂ ಗುರುತಿಸಲಾದ ಮೂರು ಆಯಾಮದ ಚಿತ್ರ ವೀಕ್ಷಣೆಯನ್ನು ಲಭ್ಯವಾಗಿಸಿದೆ.ಸದ್ಯವೇ ಭುವನ್ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುವುದಾಗಿ ಇಸ್ರೋ ಬಳಕೆದಾರರಿಗೆ ಬರೆದ
ಮಿಂಚಂಚೆಯಲ್ಲಿ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ