ಶುಕ್ರವಾರ, ಅಕ್ಟೋಬರ್ 15, 2010

ಮುಖೇಶ್ ಅಂಬಾನಿ ಶತಕೋಟಿ ರು.ಗಳ ಅರಮನೆ!

ಜಗತ್ತಿನ ನಾಲ್ಕನೆ ಅತಿ ಶ್ರೀಮಂತ ಮುಖೇಶ್ ಅಂಬಾನಿ ಜಗತ್ತಿನ ಪ್ರಪ್ರಥಮ ಶತಕೋಟಿ (2 ಶತಕೋಟಿ ಡಾಲರ್) ವೆಚ್ಚದ ಮನೆಯೊಂದನ್ನು ಮುಂಬೈಯಲ್ಲಿ ನಿರ್ಮಿಸಿದ್ದಾರೆ. 27 ಮಹಡಿಗಳ ಈ ಮನೆ 173 ಮೀಟರ್ ಎತ್ತರವಿದೆ. ಸುಮಾರು 630 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದ್ದು, ಇಷ್ಟು ವೆಚ್ಚದ ಮನೆ ಜಗತ್ತಿನಲ್ಲೇ ಪ್ರಥಮ ಎನ್ನಲಾಗಿದೆ.

ಈ ಅರಮನೆಯಲ್ಲಿ ಅಂಬಾನಿ, ಅವರ ಪತ್ನಿ ಮತ್ತು ಮೂವರು ಮಕ್ಕಳು ವಾಸಿಸಲಿದ್ದಾರೆ. ಮನೆಯಲ್ಲಿ ವಿಶಾಲವಾದ ಜಿಮ್ ಮತ್ತು ನೃತ್ಯ ಸ್ಟುಡಿಯೊವನ್ನು ಹೊಂದಿರುವ ಆರೋಗ್ಯ ಕ್ಲಬ್ ಇದೆ. ಒಂದು ಈಜು ಕೊಳ, ಅತಿಥಿ ಕೋಣೆ, ವಿವಿಧ ರೀತಿಯ ಅಂಗಣಗಳು, 50 ಮಂದಿ ಕುಳಿತುಕೊಳ್ಳಬಹುದಾದ ಸಿನೆಮಾ ಮಂದಿರ ಮನೆಯೊಳಗೇ ಇದೆ ಎಂದು ವರದಿಯೊಂದು ಹೇಳಿದೆ.
ಮನೆಯ ಛಾವಣಿಯಲ್ಲಿ ಮೂರು ಹೆಲಿಪ್ಯಾಡ್‌ಗಳಿದ್ದು, ಕೆಳಗಿನ ಅಂತಸ್ತಿನಲ್ಲಿ ಸುಮಾರು 160 ವಾಹನಗಳನ್ನು ನಿಲ್ಲಿಸುವ ವಿಶಾಲವಾದ ಸ್ಥಳಾವಕಾಶವಿದೆ. ಅತಿಥಿಗಳನ್ನು ಪ್ರಾಂಗಣದಿಂದ ಕಾರ್ಯಕ್ರಮಗಳು ನಡೆಯುವ ವಿವಿಧ ಮಹಡಿಗಳಿಗೆ ತಲುಪಿಸಲು ಕಟ್ಟಡದಲ್ಲಿ 9 ಲಿಫ್ಟ್‌ಗಳಿವೆ. ಕಟ್ಟಡದ ಮೇಲಿನ ಮಹಡಿಯಲ್ಲಿ 53ರ ಹರೆಯದ ಉದ್ಯಮಿ ಮತ್ತು ಅವರ ಕುಟುಂಬ ಸದಸ್ಯರಿಗೆ ನಗರ ಮತ್ತು ಸಮುದ್ರದ ಸವಿಯನ್ನು ವೀಕ್ಷಿಸಲು ಅನುಕೂಲವಿದೆ.
ಕಟ್ಟಡವು 37,000 ಚದರ ಮೀಟರ್ ವಿಸ್ತಾರವಿದ್ದು, ಇದು ವೆರ್ಸಲಿಸ್ ಅರಮನೆಗೂ ದೊಡ್ಡದಾಗಿದೆ. ಇಷ್ಟು ದೊಡ್ಡ ಮನೆಯನ್ನು ಸರಿಯಾಗಿ ನಿರ್ವಹಿಸಲು ಸುಮಾರು 600 ಸಿಬ್ಬಂದಿ ಸೇವೆಗಿದ್ದಾರೆ. ಈ ಮನೆಯನ್ನು ನಿರ್ಮಿಸಲು 44 ಮಿಲಿಯನ್ ಪೌಂಡ್‌ನಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಆದರೆ ಮುಂಬೈಯ ಪ್ರಮುಖ ಕೇಂದ್ರದಲ್ಲಿ ಭೂಮಿ ಮತ್ತು ಆಸ್ತಿ ವೌಲ್ಯ ಆ ಅಂದಾಜಿನಿಂದ 15 ಪಟ್ಟು ಅಧಿಕ ವೌಲ್ಯವನ್ನು ಈ ಮನೆಗೆ ನೀಡಿದೆ. ಹೀಗಾಗಿ ಈ ಮನೆಯ ನಿರ್ಮಾಣ ವೆಚ್ಚ 630 ಮಿಲಿಯನ್ ಪೌಂಡ್ ಆಗಿದೆ ಎಂದು ಅಂದಾಜಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ