ಶುಕ್ರವಾರ, ಅಕ್ಟೋಬರ್ 8, 2010

ಚೆಕ್ ಬರೆಯುವಾಗ ಇರಲಿ ಎಚ್ಚರ

ಇನ್ನು ಮುಂದೆ ಹಿಂದಿನಂತೆ ಚೆಕ್ ಬರೆಯುವಾಗ ಸ್ಪೆಲ್ಲಿಂಗ್ ಅಥವಾ ಡೇಟ್ ತಪ್ಪಾದರೆ ಅದನ್ನೇ ತಿದ್ದಿ, ಅದರ ಮೇಲೆಯೇ ಸಣ್ಣದೊಂದು ಸಹಿ ಮಾಡಿ ಚೆಕ್ ಪ್ರೆಸೆಂಟ್ ಮಾಡುವ ಹಾಗಿಲ್ಲ. ತಿದ್ದಿದ ಚೆಕ್ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿಬಿಟ್ಟಿದೆ. ಅದಕ್ಕೆಂದೇ ಪ್ರತ್ಯೇಕ ನಿಯಮವನ್ನೂ ಜಾರಿಗೊಳಿಸುತ್ತಿದೆ. ಚೆಕ್ ತಿದ್ದುವಿಕೆಗಳು ವಂಚನೆಗೆ ಕಾರಣವಾಗುತ್ತಿವೆ ಎಂದು ಭಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರುತ್ತಿದೆ. ಚೆಕ್ಗಳಿಗೆ ನಿರ್ದಿಷ್ಟ ಸ್ಟ್ಯಾಂಡರ್ಡ್ ಹಾಗೂ ಸೆಕ್ಯೂರಿಟಿ ಇರಬೇಕೆನ್ನುವ ಕಾರಣವೂ ಹೊಸ ನಿಯಮ ರೂಪಿಸಲು ಕಾರಣವಾಗಿದೆ.
ಹೊಸ ನಿಯಮ ಇನ್ನೊಂದು ತಿಂಗಳಲ್ಲಿ  ಜಾರಿಗೆ ಬರಲಿದೆ. ಅನುಷ್ಠಾನಕ್ಕೆ ಬರಲಿರುವ ನಿಯಮಗಳನ್ನು ಸಿ.ಟಿ.ಎಸ್. 2010 ಸ್ಟ್ಯಾಂಡರ್ಡ್ ಎಂದು ಕರೆಯಲಾಗಿದೆ.  ಸಿಟಿಎಸ್ ಎಂದರೆ ಚೆಕ್ ಟ್ರಂಕೇಶನ್ ಸಿಸ್ಟಮ್. ಹಾಗೂ ತಿದ್ದಿದ ಚೆಕ್ ಅನ್ನೇ ಕೊಟ್ಟರೆ ಅದಕ್ಕೆ ದಂಡವನ್ನೂ ವಿಧಿಸಲಾಗುತ್ತದೆ ಎಂಬುದೂ ನಿಮ್ಮ ಗಮನದಲ್ಲಿರಲಿ. ತಿದ್ದಿದ ಚೆಕ್ಗಳಿಗೆ ದಂಡ ವಿಧಿಸುವ ಅಧಿಕಾರವನ್ನು ಬ್ಯಾಂಕ್ಗಳಿಗೆ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು 100 ರೂಪಾಯಿನಿಂದ 250 ರೂ.ಗಳ ವರೆಗೆ ದಂಡ ವಿಧಿಸಬಹುದಾದರೆ ಖಾಸಗಿ ವಲಯದ ಬ್ಯಾಂಕ್ಗಳು 550 ರೂಪಾಯಿಗಳ ವರೆಗೆ ದಂಡ ವಿಧಿಸಬಹುದು.
ಸಿಟಿಎಸ್ 2010ರ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಆರ್ಬಿಐ ಬ್ಯಾಂಕ್ಗಳಿಗೆ ನೀಡಿದೆ. ಎಲ್ಲ ಬ್ಯಾಂಕ್ಗಳು ಗ್ರಾಹಕರಿಗೆ ಈ ಬಗ್ಗೆ ಇನ್ನೂ ಮಾಹಿತಿ ನೀಡಬೇಕಿದೆ.

ಸಿಟಿಎಸ್ ಏನು ಹೇಳುತ್ತದೆ?

=    ಚೆಕ್ ಪ್ರಿಂಟ್ ಮಾಡುವ ಪೇಪರ್ಗಳ ಗುಣಮಟ್ಟಕ್ಕೆ ಒತ್ತು
=    ಚೆಕ್ ಲೀಫ್ನ ಮೇಲೆ ಸಿಟಿಎಸ್ ಇಂಡಿಯಾ ಎನ್ನುವ ವಾಟರ್ ಮಾಕರ್್ ಕಡ್ಡಾಯ
=    ಈ ವಾಟರ್ ಮಾಕರ್್ ಎಲ್ಲ ರೀತಿಯ ಬೆಳಕಿಗೆ ಕಾಣುವಂತಿರಬೇಕು.
=    ಚೆಕ್ ಬರೆಯುವಾಗ ದಿನಾಂಕ ತಪ್ಪಿದರೆ ಅದನ್ನು ತಿದ್ದಲು ಮಾತ್ರ ಅವಕಾಶ
=    ಆದರೆ ಪೇಯೀಸ್ ನೇಮ್, ಲೀಗಲ್ ಅಮೌಂಟ್ (ಅಕ್ಷರದಲ್ಲಿ ಮೊತ್ತ) ಹಾಗೂ ಕರ್ಟಸಿ ಅಮೌಂಟ್ 
       (ಅಂಕೆಗಳಲ್ಲಿ ಮೊತ್ತ)     ತಿದ್ದುವಂತಿಲ್ಲ.
=    ಬರೆಯುವಾಗ ಏನಾದರೂ ತಪ್ಪಿತೆಂದರೆ ಹೊಸ ಚೆಕ್ ಬರೆಯಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ