ಗುರುವಾರ, ಸೆಪ್ಟೆಂಬರ್ 16, 2010

ಅನ್ನಪೂರ್ಣ ಇದು ಭಾರತದ ಹೊಸ ಸೂಪರ್ ಗಣಕ

ಭಾರತದ ಅತ್ಯಂತ ವೇಗದ ಕಂಪ್ಯೂಟರ್ ಗಳ ಪಟ್ಟಿಯಲ್ಲಿ ಏಳನೇ ಸೂಪರ್ ಗಣಕವಾಗಿ ಅನ್ನಪೂರ್ಣ ಸೇರ್ಪಡೆಗೊಂಡಿದೆ.

ಅನ್ನಪೂರ್ಣ high-performance computation (HPC) ಕ್ಲಸ್ಟರ್ ನ ಜೊತೆ 1.5 Tera Byte ಮೆಮೋರಿ ಹಾಗೂ 30 ಟಿಬಿ ಸ್ಥಳಾವಕಾಶ ಕ್ಲಸ್ಟರ್ ಸೌಲಭ್ಯವಿರುತ್ತದೆ. ಉನ್ನತ ಸ್ತರದ ಭೌತ ವಿಜ್ಞಾನ ಹಾಗೂ ಗಣಿತದ ಲೆಕ್ಕಗಳನ್ನು ಬಗೆಹರಿಸಲು ಇದು ಸಹಕಾರಿಯಾಗಲಿದೆ.
http://news.oneindia.in/2010/07/31/india-launches-7th-supercomputer-annapurna.html

ಸಾಮಾನ್ಯ ಕಂಪ್ಯೂಟರುಗಳ ಇನ್ನೂರೈವತ್ತು ಪಟ್ಟು ಹೆಚ್ಚು ವೇಗದಲ್ಲಿ ಕೆಲಸ ಮಾಡುವ ಪಿಸಿಗಳೀಗ ಲಭ್ಯ. ಟೆಸ್ಲಾ ಕಂಪ್ಯೂಟರ್ ಎಂಬ ಹೆಸರಿನೊಂದಿಗೆ ಈ ಕಂಪ್ಯೂಟರುಗಳು ಮಾರುಕಟ್ಟೆ ಪ್ರವೇಶಿಸಲಿವೆ.ಇವುಗಳ ಬೆಲೆ ಮಾತ್ರಾ ಸಾಮಾನ್ಯರ ಕೈಗೆಟುದಷ್ಟು ಹೆಚ್ಚು-ಎರಡು ಲಕ್ಷ ರುಪಾಯಿಗಳು.ಇವುಗಳನ್ನು ಬಳಸಿದರೆ,ವೈದ್ಯರುಗಳಿಗೆ ಸ್ಕ್ಯಾನ್ ಫಲಿತಾಂಶಗಳನ್ನು ಕೆಲವೇ ತಾಸುಗಳು ಸಾಕು. ಸಾಮಾನ್ಯ ಕಂಪ್ಯೂಟರುಗಳಾದರೆ, ಈ ಫಲಿತಾಂಶಕ್ಕೆ ದಿನವಿಡೀ ಕಾಯಬೇಕಾದೀತು.tesla
    ಟೆಸ್ಲಾ ಕಂಪ್ಯೂಟರ್ ಏಕಕಾಲದಲ್ಲಿ ಕಾರ್ಯಾಚರಿಸಬಲ್ಲ ಒಂಭೈನೂರ ಅರುವತ್ತು ಕೋರ್(ಗಣಕ ಕೇಂದ್ರ)ಗಳನ್ನು ಹೊಂದಿದೆ. ಹೀಗಾಗಿ ಗಣಕಕಾರ್ಯ ಅತಿ ವೇಗದಲ್ಲಿ ನಡೆಯುತ್ತದೆ.ಇತ್ತೀಚೆಗೆ ಇಂಟೆಲ್-ಇಂಡಿಯಾದಲ್ಲಿ ವಿನ್ಯಾಸಗೊಂಡ ಹೊಸ ಸಂಸ್ಕಾರಕವು ಆರು ಕೋರ್‌ಗಳನ್ನು ಹೊಂದಿದೆ.ಪ್ರತಿ ಸೆಕೆಂಡಿಗೆ ನಾಲ್ಕು ಟೆರಾ ಫ್ಲಾಪ್ ಗಣನೆಗಳನ್ನು ಮಾಡಬಲ್ಲುದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ