ಗುರುವಾರ, ಸೆಪ್ಟೆಂಬರ್ 16, 2010

ನಿಮ್ಮ ಸೆಲ್‌ಫೋನ್‌ನೊಳಗೊಂದು ಸರ್ಚ್‌ ಇಂಜಿನ್‌!

         ಕೇವಲ ಕರೆ ಮಾಡಲು, ಎಸ್ಎಮ್ಎಸ್ ಕಳಿಸಲು, ಫೋಟೋ ತೆಗೆಯಲು ಮಾತ್ರ ಬಳಸಲಾಗುತ್ತಿದ್ದ ಮೊಬೈಲ್‌ನಲ್ಲಿ ಮಾಹಿತಿ ಕಣಜ ಬಂದು ಕುಳಿತಿದೆ. ಅದನ್ನು ಅತ್ಯಂತ ವೇಗವಾಗಿ, ನಿಖರವಾಗಿ ಪಡೆಯುವ ಸೇವೆ ಜಸ್ಟ್‌ಡಯಲ್ ನೀಡುತ್ತಿದೆ.

          ಇದು ವೇಗದ ಜಗತ್ತು. ಕೂಡುತ್ತ, ನಡೆಯುತ್ತ, ಓಡುತ್ತ ಮಾಹಿತಿಯನ್ನು ಪಡೆಯುವ ಬಾಬತ್ತು. ಯಾವುದೇ ಕ್ಷಣದಲ್ಲಿ ಯಾವುದೇ ಸ್ಥಳದಲ್ಲಿ ಸೆಲ್‌ಫೋನ್‌ನಲ್ಲಿ ಮಾಹಿತಿ ನೀಡಲಿಕ್ಕಾಗಿಯೇ ಹುಟ್ಟಿಕೊಂಡಿವೆ ಹುಡುಕು ಸೇವೆಗಳು ನೂರಾಹತ್ತು. ಆದರೆ, ಯಾವ ಸಂಸ್ಥೆ ಮಾಹಿತಿಯನ್ನು ಅತ್ಯಂತ ವೇಗವಾಗಿ ನೀಡುತ್ತದೆನ್ನುವುದು ಸದ್ಯದ ಹಕೀಕತ್ತು.
         ಅಂತರ್ಜಾಲದಲ್ಲಿ ಹಾರಾಟವಾಡುತ್ತಿದ್ದ ಮಾಹಿತಿ ಜಗತ್ತು ಈಗ ನಿಮ್ಮ ಅಂಗೈಯಲ್ಲಿಯೇ ಬಂದು ಕುಳಿತಿದೆ. ಬೆರಳ ತುದಿಯಲ್ಲೇ ಮಾಹಿತಿಯ ಮಹಾಪೂರ.
         ಮೊಬೈಲ್ ಹ್ಯಾಂಡ್‌ಸೆಟ್‌ನಲ್ಲಿ ಕಡಿಮೆ ಬ್ಯಾಂಡ್‌ವಿಡ್ತ್ ಬಳಸಿ ಕೇವಲ 5ರಿಂದ 10 ಸೆಕೆಂಡುಗಳಲ್ಲಿ ಮಾಹಿತಿ ದೊರೆಯುವಂತೆ ತಂತ್ರಾಂಶವನ್ನು ಭಾರತದ ಪ್ರಮುಖ ಪ್ರಾದೇಶಿಕ ಸರ್ಚ್ ಇಂಜಿನ್ ಸಂಸ್ಥೆ www.justdial.com ಸಿದ್ಧಪಡಿಸಿದೆ. wap.justdial.com ತಾಣದಲ್ಲಿ ನಿಮಗೆ ಬೇಕಾದ ನಗರದಲ್ಲಿನ ಯಾವುದೇ ಮಾಹಿತಿಯನ್ನು ಅತ್ಯಂತ ನಿಖರವಾಗಿ ಮತ್ತು ವೇಗವಾಗಿ ನಿಮ್ಮ ಸೆಲ್‌ಫೋನ್‌ನಲ್ಲಿ ನಿಮಗೆ ದೊರೆಯಲಿದೆ.
wap.justdial.comನಲ್ಲಿನ ಹುಡುಕುವಿಕೆ ಮುಕ್ತವಾಗಿದ್ದು, ಬಳಕೆದಾರ ತನಗೆ ಬೇಕಾದಂತೆ ಅದನ್ನು ಪರಿವರ್ತಿಸಬಹುದು. ಕಂಪನಿಯ ಹೆಸರಿನಿಂದಾಗಲಿ, ಉತ್ಪನ್ನ ಅಥವ ಸೇವೆಗಳನ್ನು ತಮಗೆ ಬೇಕಾದಂತೆ ವಿಭಾಗಿಸಿ ಮಾಹಿತಿ ಪಡೆದುಕೊಳ್ಳುವ ಸೌಲತ್ತು ಜಸ್ಟ್‌ಡಯಲ್ ನೀಡಿದೆ.
         ಮುಂಬೈನಲ್ಲಿರುವ ಬಾಂದ್ರಾದಲ್ಲಾಗಲಿ, ಬೆಂಗಳೂರಿನ ವಿಜಯನಗರದಲ್ಲಾಗಲಿ ಇರುವ ಹೊಟೇಲುಗಳ ಪಟ್ಟಿ ಚಿಟಿಕೆ ಹೊಡೆಯುವ ವೇಗದಲ್ಲಿ ದೊರೆಯುತ್ತದೆ. ಉಪವಿಭಾಗದಲ್ಲಿರುವ ಆ ಹೊಟೇಲುಗಳ ದರಪಟ್ಟಿಯನ್ನು ಅಥವ ತಿಂಡಿ ತಿನಿಸುಗಳನ್ನು ಬಳಸಿ ತನಗೆ ಬೇಕಾದ ಮಾಹಿತಿಯನ್ನು ಆತ ಪಡೆಯಬಹುದು. ಒಟ್ಟು ಮೂರು ಹಂತಗಳಲ್ಲಿ ಹುಡುಕಿ ತನಗೆ ಬೇಕಾದ ನಿಖರ ಮಾಹಿತಿ ಪಡೆಯಬಹುದು.
         ಈ ಹುಡುಕುವಿಕೆಯಲ್ಲಿ ಯಾವುದೇ ಡ್ರಾಪ್‌ಡೌನ್ ಇರದ ಕಾರಣ ಹುಡುಕುವಿಕೆ ಡ್ರಾಪ್ ಆಗದೆ ವೇಗವಾಗಿದೆ ಮತ್ತು ಗ್ರಾಹಕನ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ಇಲ್ಲಿ ಹುಡುಕುವಿಕೆ ಅತ್ಯಂತ ಸರಳವಾಗಿದ್ದು, ಪುಟದ ತೂಕ ಕೂಡ ಅತಿ ಕಡಿಮೆ ಇರುತ್ತದೆ.
          ಹು‌ಡುಕಿದ ಪಟ್ಟಿಯಲ್ಲಿ ದೊರೆತ ದೂರವಾಣಿಯನ್ನು ತಾಣದಿಂದಲೇ ನೇರವಾಗಿ ಕರೆಮಾಡುವ ಸೌಲತ್ತು ಕೂಡ ಜಸ್ಟ್‌ಡಯಲ್ ನೀಡಿದೆ. ಜಿಯೋ ಕೋಡ್ ನಮೂದಿಸಿ ಕೂಡ ಅತ್ಯಂತ ನಿಖರವಾಗಿ ಮಾಹಿತಿ ಪಡೆಯಬಹುದಾಗಿದೆ. ಒಂದು ವೇಳೆ ಬಳಕೆದಾರ ತಪ್ಪಾಗಿ www.justdial.com ಅಂತ ನಮೂದಿಸಿದರೂ ಕೂಡ ತಾನು ತಲುಪಬೇಕಾದ wap.justdial.com ಗಮ್ಯಕ್ಕೆ ತಲುಪಿಸುವ ಜಾಣತನ ಈ ತಂತ್ರಾಂಶದಲ್ಲಿದೆ.

ಜಸ್ಟ್‌ಡಯಲ್ ಬಗ್ಗೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲ ಉದ್ದೇಶದಿಂದ 1994ರಲ್ಲಿ ಜಸ್ಟ್‌ಡಯಲ್ ಸೇವೆಯನ್ನು ಪ್ರಾರಂಭಿಸಲಾಯಿತು. ಮಾಹಿತಿ ಹುಡುಕುವಿಕೆ ಸೇವೆಯಲ್ಲಿ ನವನವೀನ ಬದಲಾವಣೆ ತರಬೇಕೆಂಬ ಕಂಪನಿಯ ಉದ್ದೇಶ ಮತ್ತು ಬದ್ಧತೆಯಿಂದ ಭಾರತದಲ್ಲಿ ಮಾಹಿತಿ ಹುಡುಕುವಿಕೆ ಕ್ಷೇತ್ರದಲ್ಲಿ ಮೊದಲ ಸ್ಥಾನ ತಲುಪಿದೆ.

ಜಸ್ಟ್‌ಡಯಲ್‌ನ ಪ್ರಾದೇಶಿಕ ಹುಡುಕು ಸೇವೆಯನ್ನು ಈ ಮೂಲಕವೂ ಪಡೆಯಬಹುದು

1. ಅಂತರ್ಜಾಲ ತಾಣ www.justdial.com - ಇದು 40 ನಗರಗಳನ್ನು ಒಳಗೊಂಡಿದೆ
(ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಭೋಪಾಲ್, ಚಂಡೀಗಢ್, ಚೆನ್ನೈ, ಕೊಯಂಬತ್ತೂರು, ದೆಹಲಿ, ಎರ್ನಾಕುಲಂ, ಗೋವಾ, ಹೈದರಾಬಾದ್, ಇಂದೋರ್, ಜೈಪುರ, ಜಲಂಧರ್, ಜೋಧಪುರ, ಜೆಮ್ಶೆಡ್‌ಪುರ, ಕಾನಪುರ, ಲಖನೌ, ಕೋಲ್ಕೊತಾ, ಲುಧಿಯಾನಾ, ಮಧುರೈ, ಮಂಗಳೂರು, ಮುಂಬೈ, ನಾಗಪುರ,ಆಗ್ರಾ, ಅಹ್ಮದಾಬಾದ್, ನಾಸಿಕ, ಪಟ್ನಾ, ಪಾಂಡಿಚೇರಿ, ಪುಣೆ, ರಾಂಚಿ, ರಾಜಕೋಟ್, ಸೇಲಂ, ಸೂರತ್, ತಿರುವನಂತಪುರಂ, ತಿರುನೆವೇಲಿ, ವಡೋದರ, ವಾರಣಾಸಿ, ವಿಜಯವಾಡಾ, ವಿಶಾಖಪಟ್ಟಣಂ)

2. ಭಾರತದ 42 ನಗರಗಳಲ್ಲಿ 3999 9999 ಸಂಖ್ಯೆಯನ್ನು ಕರೆ ಮಾಡುವ ಮುಖಾಂತರ. ಜಸ್ಟ್‌ಡಯಲ್ ಸೇವೆ ಪ್ರತಿವರ್ಷ 360 ಲಕ್ಷ ದೂರವಾಣಿ ಕರೆಗಳನ್ನು ಸ್ವೀಕಕಿಸುತ್ತದೆ.

ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ಅಹಮದಾಬಾದ್, ಕೋಲ್ಕೊತಾ, ಚಂಡಿಗಢ್, ಕೋಯಂಬತ್ತೂರು, ಬರೋಡ, ಜೈಪುರ, ಸೂರತ್ ಮತ್ತು ಇಂದೋರ್‌ಗಳು ಸೇರಿದಂತೆ ಭಾರತದ ಪ್ರಮುಖ ಮೆಟ್ರೋ, ಟಯರ್ 1 ಮತ್ತು ಟಯರ್ 2 ನಗರಗಳಲ್ಲಿ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಇಡೀ ಭಾರತದಲ್ಲಿ ಒಟ್ಟು 80 ಸಾವಿರ ಚದರಡಿಯಷ್ಟು ಸ್ಥಳವನ್ನು ಜಸ್ಟ್‌ಡಯಲ್ ಆಕ್ರಮಿಸಿಕೊಂಡಿದೆ.

14 ನಗರಗಳಲ್ಲಿ 28 ಸಾವಿರ ನೌಕರರನ್ನು ಹೊಂದಿರುವ ಜಸ್ಟ್‌ಡಯಲ್ ಭಾರತದಲ್ಲಿ ಮೊಬೈಲ್‌ನಲ್ಲಿ ಮಾಹಿತಿ ಸೇವೆ ಸಲ್ಲಿಸುವ ಅತಿ ದೊಡ್ಡ ಖಾಸಗಿ ಸಂಸ್ಥೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆ ಪುಟ ಸೇರಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ www.justdial.com ಕ್ಲಿಕ್ಕಿಸಿ.

2 ಕಾಮೆಂಟ್‌ಗಳು:

  1. ಈ ಮಾಹಿತಿ ನನಗೆ ಗೊತ್ತಿರಲಿಲ್ಲ.

    ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. Call 9041300726 NCP Printing Press Chandigarh-provide of best quality with services in business stationery products offset and screen printing etc etc. ncppresschandigarh.com

    ಪ್ರತ್ಯುತ್ತರಅಳಿಸಿ