ಗುರುವಾರ, ಸೆಪ್ಟೆಂಬರ್ 16, 2010

ಮೈಕ್ರೋಸಾಫ್ಟ್ ಐಇ 9 ನಲ್ಲಿ ಜಾಲಾಡಿದ್ರಾ?

ವೆಬ್ ಬ್ರೌಸಿಂಗ್ ಕ್ಷೇತ್ರದಲ್ಲಿ ತನ್ನ ಹಿಡಿತ ಕೈತಪ್ಪುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಗ್ರಾಹಕರ ಬೇಡಿಕೆ ಹಾಗು ಅಭಿರುಚಿಗೆ ತಕ್ಕಂತೆ ತನ್ನ ಉತ್ಪನ್ನಗಳನ್ನು ಮೈಕ್ರೋಸಾಫ್ಟ್ ವಿನ್ಯಾಸಗೊಳಿಸತೊಡಗಿದೆ. ಇಂಟರ್ ನೆಟ್ ಎಕ್ಸ್ ಪ್ಲೋರರ್ ನ 9 ರ ಬೀಟಾ ಆವೃತ್ತಿಯನ್ನುಹೊರಬಿಟ್ಟಿದೆ. ಬ್ರೌಸಿಂಗ್ ಕ್ಷೇತ್ರದ ಪ್ರಮುಖ ಪ್ರತಿಸ್ಪರ್ಧಿ ಗೂಗಲ್ ನ ಕ್ರೋಮ್ ಗೆ ಸರಿಸಾಟಿಯಾಗಿ ನಿಲ್ಲಬಲ್ಲ ಹಾಗೂ ಇನ್ನೂ ಹೆಚ್ಚಿನ ಸೌಲಭ್ಯಗಳುಳ್ಳ ಐಇ9 ಜನಮೆಚ್ಚುಗೆ ಗಳಿಸುತ್ತದೆ ಎಂಬ ವಿಶ್ವಾಸವನ್ನು ಮೈಕ್ರೋಸಾಫ್ಟ್ ವ್ಯಕ್ತಪಡಿಸಿದೆ. ಗ್ರಾಫಿಕ್ಸ್ ಟೆಸ್ಟ್ ಸಂದರ್ಭದಲ್ಲಿ ಕ್ರೋಮ್ ಗಿಂತ ಐದು ಪಟ್ಟು ವೇಗವಾಗಿ ಐಇ9 ಕಾರ್ಯನಿರ್ವಹಿಸಿದೆ.
* ವಿಂಡೋಸ್ 7 ಹಾಗೂ ವಿಂಡೋಸ್ ವಿಸ್ತಾ OS ಬಳಕೆದಾರರಿಗೆ ಮಾತ್ರೆ ಐಇ 9 ಬೀಟಾ ಕಾರ್ಯ ನಿರ್ವಹಿಸಲಿದೆ.
* 33 ವಿವಿಧ ಭಾಷೆಗಳನ್ನು ಬೆಂಬಲಿಸುತ್ತದೆ. ಕ್ರೋಮ್ 6 ಹಾಗೂ ಫೈರ್ ಫಾಕ್ಸ್ 4 ಬೀಟಾ ಗ್ರಾಫಿಕ್ಸ್ ಎಲ್ಲವೂ ಐಇ9ನಲ್ಲಿ ಲಭ್ಯ.
* HTML 5 ಹಾಗೂ CSS 3.0 ಮಾನ್ಯತೆ ಪಡೆದಿದೆ. ಆಡ್ ಆನ್ ಗಳ ಅಳವಡಿಕೆಯಲ್ಲಿ ಬದಲಾವಣೆ.
* ಬೀಟಾ ಆವೃತ್ತಿಯಲ್ಲಿ ವೆಬ್ ಸ್ಟಾಡರ್ಡ್ ಬಗ್ಗೆ ಮಾತಿಲ್ಲ. ಇತರೆ OS ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.
* ಅಷ್ಟೇಕೆ ವಿಂಡೋಸ್ XP, 2K,98 ರಲ್ಲಿ ಬೀಟಾ ಆವೃತ್ತಿ ಕೆಲಸ ಮಾಡುವುದಿಲ್ಲ.
* ಸದ್ಯಕ್ಕೆ ವೇಗಯುತವಾದ ಬ್ರೌಸಿಂಗ್ ಸೌಲಭ್ಯ ಐಇ9 ಬೀಟಾನ ಹಿರಿಮೆ.
ಹೆಚ್ಚಿನ ಅಪ್ಲಿಕೇಷನ್ ಗಳನ್ನು ಅಳವಡಿಸಿಕೊಳ್ಳಲು ಅವಕಾಶ, ವೆಬ್ ತಾಣ ವಿಳಾಸವನ್ನು ಹುಡುಕಾಟ, ವೆಬ್ ಹಿಸ್ಟರಿ ನೋಡಲು ಗ್ರಾಹಕರಿಗೆ ಅನುಕೂಲಕರ ರೀತಿಯಲ್ಲಿ ರೂಪಿಸಲಾಗಿದೆ.
      ಇದಲ್ಲದೆ ವೆಬ್ ತಾಣಗಳನ್ನು ಟಾಸ್ಕ್ ಬಾರ್ ಗೆ ಪಿನ್ ಮಾಡುವ ಸೌಲಭ್ಯ ಒದಗಿಸಿದೆ. ಈ ಬ್ರೌಸರ್ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಸುಲಭವಾಗಿ ವಿಹರಿಸಬಹುದಾಗಿದೆ. ಸಂಗೀತ ಆಲಿಸಲು, ಸಿಸ್ಟಂನ ನಿಯಂತ್ರಿಸಲು ಬ್ರೌಸರ್ ಬಿಟ್ಟು ಹೋಗಬೇಕಿಲ್ಲ.
       ಸ್ಪೀಡ್ ಹಾಗೂ ಸೆಕ್ಯುರಿಟಿ ಎಂಬ ಮಂತ್ರವನ್ನು ಈ ಬಾರಿ ಮೈಕ್ರೋಸಾಫ್ಟ್ ಜಪಿಸುತ್ತಿದ್ದು, ಗ್ರಾಹಕ ಸ್ನೇಹಿ ಬ್ರೌಸರ್ ಗಳು, ಓಪನ್ ಸೋರ್ಸ್ ಬ್ರೌಸರ್ ಗಳ ಕಾಲದಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಒಳ್ಳೆ ಪ್ರಯತ್ನಪಟ್ಟಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ