ಮಂಗಳವಾರ, ಸೆಪ್ಟೆಂಬರ್ 28, 2010

ನಿಮ್ಮದೇ ಸ್ವಂತ ವೆಬ್ ಸೈಟ್ ರೂಪಿಸಿಕೊಳ್ಳಿ

ಯುವ ಪೀಳಿಗೆಯನ್ನು ಬಹುವಾಗಿ ಆಕರ್ಷಿಸುತ್ತಿರುವ ಇಂಟರ್ನೆಟ್ [^] ಈ-ಯುಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕೆಲ ವರ್ಷಗಳ ಹಿಂದೆ ಕೇವಲ ಸಂಪರ್ಕ ಸಾಧನೆಗಾಗಿ ಬಳಸಲಾಗುತ್ತಿದ್ದ ಇಂಟರ್ನೆಟ್ ಇಂದು ಬ್ಲಾಗ್ ಮತ್ತು ಸೋಷಿಯಲ್ ವೆಬ್ ಸೈಟ್ ಗಳ ಮುಖಾಂತರ ಪ್ರತಿಯೊಬ್ಬರ ವೈಯಕ್ತಿಕ, ಸಾರ್ವಜನಿಕ, ಸಾಮಾಜಿಕ, ಆರ್ಥಿಕ ಜೀವನದ ಅವಿಭಾಜ್ಯ ಅಂಗವಾಗಿ ಹೊರಹೊಮ್ಮಿದೆ.

ಬಹುಶಃ ಇಂಟರ್ನೆಟ್ ಮಾಧ್ಯಮವೊಂದೇ ಪ್ರತಿಯೋರ್ವನನ್ನು ಅನೇಕ ಹಂತಗಳಲ್ಲಿ ಬಂಧಿಸಿಟ್ಟಿದೆ. ನಮಗೆ ಸಂಬಂಧಿಸಿದ ಮಾಹಿತಿಯನ್ನು ಅಂತರ್ಜಾಲ [^]ಕ್ಕೆ ಹರಿಯಬಿಡಲು ಇತರ ವೆಬ್ ಸೈಟುಗಳನ್ನು ಅವಲಂಬಿಸುವುದಕ್ಕಿಂತ ನಮ್ಮದೇ ಆದ ವೆಬ್ ಸೈಟ್ ರೂಪಿಸಿಕೊಂಡರೆ ಹೇಗೆ? ವೆಬ್ ಸೈಟನ್ನು ಈ-ಮೇಲ್ ಅಥವಾ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟಲ್ಲಿ ಖಾತೆ ತೆರೆದಷ್ಟೇ ಸುಲಭವಾಗಿ ತಯಾರಿಸಬಹುದು.

ನಾವೇ ಏಕೆ ವೆಬ್ ಸೈಟ್ ರೂಪಿಸಿಕೊಳ್ಳಬೇಕು ಎಂಬುದಕ್ಕೆ ಇಲ್ಲಿ ಏಳು ಕಾರಣಗಳನ್ನು ನೀಡಲಾಗಿದೆ.

1) ಭಾವಚಿತ್ರ ಸಂಗ್ರಹ : ನಿಮ್ಮ ಫೋಟೋ ಗ್ಯಾಲರಿ [^]ಯನ್ನು ಜಗತ್ತಿಗೆ ತೋರ್ಪಡಲು ಫೇಸ್ ಬುಕ್ ಅಥವಾ ಟ್ವಿಟ್ಟರ್ [^] ನಂಥ ತಾಣಗಳನ್ನು ಅವಲಂಬಿಸಬೇಕಿಲ್ಲ. ನಿಮ್ಮದೇ ಆದ ವೆಬ್ ಸೈಟ್ ರೂಪಿಸಿ ಆನ್ ಲೈನ್ ಡೈರಿ ಅಥವಾ ಫೋಟೋ ಗ್ಯಾಲರಿ ಮುಖಾಂತರ ನಿಮ್ಮಿಷ್ಟದಂತೆ ಗ್ಯಾಲರಿ ತಯಾರಿಸಬಹುದು.

2) ನಿಮ್ಮ ದನಿಯನ್ನು ಜಗತ್ತೂ ಕೇಳಲಿ : ನಿಮ್ಮ ಜ್ಞಾನದ, ಅನುಭವಗಳ ಮೂಟೆಯನ್ನು ನಿಮ್ಮಂತೆಯೇ ಯೋಚಿಸುವ ಜಾಗತಿಕ ಸ್ನೇಹಿತರ ಮುಂದೆ ಬಿಚ್ಚಿಡಲು ನಿಮ್ಮ ಅಂತರ್ಜಾಲ ತಾಣಕ್ಕಿಂತ ಪ್ರಶಸ್ತ ಸ್ಥಳ ಸಿಗಲಾರದು. ಚರ್ಚಾ ವೇದಿಕೆ, ಫೋರಂಗಳಲ್ಲಿ ಯಾವುದೇ ವಿಷಯ ಕುರಿತಂತೆ ಮುಕ್ತ ಚರ್ಚೆ ನಡೆಸಬಹುದು. ನಿಮ್ಮ ದನಿಯನ್ನು ಆಲಿಸಿದವರೂ ಗೆಸ್ಟ್ ಬುಕ್ ನಲ್ಲಿ ತಮ್ಮ ಅನಿಸಿಕೆ ಪ್ರಕಟಿಸಬಹುದು.

3) ಕಡಿಮೆ ಬಂಡವಾಳ ಹೂಡಿಕೆ ಅಧಿಕ ಲಾಭ : ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಣ ಮಾಡಲು ಇಲ್ಲಿ ಸಾಧ್ಯ. ವೆಬ್ ಸೈಟ್ ಸಂದರ್ಶಕರು ಕೆಲ ಉತ್ಪನ್ನಗಳ ಮೇಲೆ ಅಥವಾ ಜಾಹೀರಾತುಗಳ ಮೇಲೆ ಅಥವಾ ಗೂಗಲ್ ಆಡ್ ಸೆನ್ಸ್, ಆಡ್ ವರ್ಡ್ಸ್ ಗಳಂಥ ಕೊಂಡಿಗಳ ಮೇಲೆ ಕ್ಲಿಕ್ಕಿಸುವಂತೆ ಮಾಡಿ ಸುಲಭವಾಗಿ ನಿಮ್ಮ ಜೇಬು ತುಂಬಿಸಿಕೊಳ್ಳಬಹುದು.

4) ಸಂಪೂರ್ಣ ಸ್ವಾತಂತ್ರ್ಯ ನಿಮ್ಮದು : ಸೋಷಿಯಲ್ ವೆಬ್ ಸೈಟುಗಳು ಇಂಟರ್ನೆಟ್ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನೀಡುವ ಸಕಲ ಸವಲತ್ತುಗಳನ್ನು ನೀಡಿದ್ದರೂ, ಅಲ್ಲಿ ನಿಮ್ಮಿಷ್ಟದ ಡಿಸೈನಿನಂತೆ ಪ್ರಕಟಿಸುವುದು ಸಾಧ್ಯವಿಲ್ಲ. ಸ್ವಂತ ವೆಬ್ ಸೈಟಿನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿಮ್ಮಿಷ್ಟದ ಡಿಸೈನ್ ಬಳಸಿ ಮಾಹಿತಿ ನೀಡುವ ಸಂಪೂರ್ಣ ಸ್ವಾತಂತ್ರ್ಯ ನಿಮ್ಮದು.

5) ಏಕತೆಯಲ್ಲಿ ಅನೇಕತೆ : ಏಕತೆಯಲ್ಲಿ ಅನೇಕತೆಗಳನ್ನು ಸಾಧಿಸುವುದು ವೆಬ್ ಸೈಟ್ ನಿಮ್ಮದೇ ಒಡೆತನದಲ್ಲಿ ಇದ್ದಾಗ ಮಾತ್ರ. ಒಂದೇ ಡೊಮೇನ್ ಅಡಿಯಲ್ಲಿ ವಿಭಿನ್ನ ಹಂತಗಳಲ್ಲಿ ವೈವಿಧ್ಯಮಯ ಹವ್ಯಾಸ, ಆಸಕ್ತಿ, ರುಚಿಗೆ ತಕ್ಕಂತೆ ವಿಶಿಷ್ಟಬಗೆಯ ಪುಟಗಳನ್ನು ತಯಾರಿಕೆ ಇಲ್ಲಿ ಸಾಧ್ಯವಿದೆ.
 
 
6) ಬ್ಲಾಗ್ ಮಂಡಲ : ಇಂಟರ್ನೆಟ್ ನಲ್ಲಿ ಬ್ಲಾಗುಗಳು ಇನ್ನಿಲ್ಲದಂತೆ ಜನಪ್ರಿಯವಾಗುತ್ತಿವೆ. ಸರ್ಚ್ ಇಂಜಿನ್ ಗಳಿಗೆ ಕೂಡ ಬ್ಲಾಗ್ ಗಳೆಂದರೆ ವಿಶೇಷ ಮಮತೆ. ಓದುಗರ ಸೃಜನಾತ್ಮಕತೆಯನ್ನು ಬಡಿದೆಬ್ಬಿಸಲು ಬ್ಲಾಗುಗಳು ಬಹಳ ಸಹಕಾರಿಯಾಗುತ್ತಿವೆ. ನೆಟ್ಟಿಗರನ್ನು ಹೆಚ್ಚು ಹೆಚ್ಚಾಗಿ ಸೆಳೆಯಲು ಬ್ಲಾಗ್ ಗಳಿಗೆ ಕೂಡ ಇಲ್ಲಿ ಅವಕಾಶ ನೀಡಲು ಸಾಧ್ಯ.

7) ಜೇಬಿಗೆ ಭಾರವಲ್ಲ : ಹಣ ಹೂಡಿಕೆ ಗಾಬರಿ ಬೀಳುವಂಥ ವಿಷಯವೇ ಅಲ್ಲ. ವೈಯಕ್ತಿಕ ಬಳಕೆಗಾಗಿಯೇ ಇರಲಿ ವ್ಯಾಪರಕ್ಕಾಗಿಯೇ ಇರಲಿ ನಿಮ್ಮ ಕೈಗೆಟಕುವ ದರದಲ್ಲಿ ವೆಬ್ ಸೈಟ್ ರೂಪಿಸುವುದು ಜೇಬಿಗೇನು ಭಾರವಾಗಲಾರದು. ವಾರಕ್ಕೆರಡು ಸಿನೆಮಾ ನೋಡುವವರು ದರ ನೋಡಿ ಬೇಸ್ತು ಬಿದ್ದರೂ ಆಶ್ಚರ್ಯವಿಲ್ಲ. ಡೊಮೇನ್ ಹೆಸರು ಪಡೆಯಲು ವರ್ಷಕ್ಕೆ ಕೇವಲ 185 ರು.! ಹೋಸ್ಟಿಂಗ್ ಪ್ಲಾನ್, ಸಾಕಷ್ಟು ಸ್ಥಳ, ಒಂದು ಉಚಿತ ಈ-ಮೇಲ್ ಖಾತೆ, ಮಾಹಿತಿ ವರ್ಗಾವಣೆ ಮುಂತಾದ ಸೌಲಭ್ಯಗಳು ಈ ದರಕ್ಕೇ ಸಿಗಲಿವೆ.

4 ಕಾಮೆಂಟ್‌ಗಳು:

 1. ಕನ್ನಡಿಗರಿಗೆ ಹೆಚ್ಚಿನ ಮಾಹಿತಿ ಕೊಟ್ಟಿದ್ದಿರಿ, ಹೀಗೆ ಮುಂದುವರಿಯಲಿ ನಿಮ್ಮ ಸೇವೆ,
  ವೆಬ್ ಡಿಸೈನ್ ಮಾಡುವವರ ಮಾಹಿತಿ ಸೇರಿಸಿರಿ,

  ಪ್ರತ್ಯುತ್ತರಅಳಿಸಿ
 2. kannadada aneka blagiggaru nanna geleyaragiddare.avrellara madde tamma blog rachne vishaya nirupane ,sangraha ellavu mechuuvadaagide. nimma pratibhege khandita protsahaa doreyttade go ahead! haagene latest aagiruva upuukta websitegal maahiti innastu postmadai.

  dhanyavaadagalondige
  sagar.s.r
  founder chairman creativefoundationbidar
  post bidar
  9242085544,8951444952

  ಪ್ರತ್ಯುತ್ತರಅಳಿಸಿ
 3. create your website in a minutes visit www.beerahost.com
  email: beerahost@gmail.com

  ಪ್ರತ್ಯುತ್ತರಅಳಿಸಿ