ಮಂಗಳವಾರ, ಸೆಪ್ಟೆಂಬರ್ 21, 2010

ಎಸ್ಎಂಎಸ್ ಮೂಲಕ ಪೊಲೀಸರಿಗೆ ದೂರು ನೀಡಿ

ಬೆಂಗಳೂರು, ಸೆ.20 : ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ನಗರ ಪೊಲೀಸ್ ಇಲಾಖೆ ಎಸ್‌ಎಂಎಸ್ ಸಂದೇಶಕ್ಕೆ ಮೊರೆ ಹೋಗಿದೆ. ಅಪರಾಧ ಪ್ರಕರಣ ಕುರಿತು ಮಾಹಿತಿಯನ್ನು ದೂರು ನೀಡಿದವರಿಗೆ ಎಸ್ಎಂಎಸ್ ಮೂಲಕ ರವಾನೆ ಮಾಡುವ ಹೊಸ ಬಗೆ ಪ್ರಯೋಗಕ್ಕೆ ನಗರ ಪೊಲೀಸ್ ಇಲಾಖೆ ಮುಂದಾಗಿದ್ದು, ಇದು ದೇಶದಲ್ಲೇ ಪ್ರಥಮ ಎನ್ನಲಾಗಿದೆ.

ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರಿನ ಕಬ್ಬನ್‌ಪಾರ್ಕ್, ಎಸ್.ಜಿ.ಪಾರ್ಕ್ ಸೇರಿದಂತೆ ಕೆಲವು ಠಾಣೆಯಲ್ಲಿ ಸಾರ್ವಜನಿಕರು ನೀಡುವ ದೂರಿನ ಕ್ಷಣ ಕ್ಷಣದ ಮಾಹಿತಿಯ ಎಸ್‌ಎಂಎಸ್ ಸಂದೇಶ ರವಾನೆ ಮಾಡಲಾಗುತ್ತಿದೆ.

ದೂರು ದಾಖಲಿಸುವ ವಿಧಾನ : ಮನೆಯಲ್ಲಿ ಕಳ್ಳತನವಾದರೆ, ಇಲ್ಲವೇ ಕೊಲೆಯಾಗಿದ್ದರೆ, ತಕ್ಷಣ ಪೊಲೀಸರು ನೀಡುವ ಅಧಿಕೃತ ಮೊಬೈಲ್ ನಂಬರಿಗೆ ಘಟನೆ ಬಗ್ಗೆ ಪ್ರಾಥಮಿಕವಾಗಿ ಮಾಹಿತಿಯ ಸಂದೇಶವನ್ನು ಕಳುಹಿಸಿ, ಕಡ್ಡಾಯವಾಗಿ ಎಸ್‌ಎಂಎಸ್ ಸಂದೇಶದಲ್ಲಿ ನಿಮ್ಮ ಹೆಸರು, ವಿಳಾಸ ನಮೂದಾಗಿರಬೇಕು.

ಸಂದೇಶ ಸ್ವೀಕರಿಸುವ ಪೊಲೀಸರು ಸಂಬಂಧಪಟ್ಟ ಠಾಣೆಗೆ ಸಂದೇಶವನ್ನು ಇನ್ಸ್‌ಪೆಕ್ಟರ್ ಇಲ್ಲವೇ ಕ್ರೈಮ್ ರೈಟರ್‌ಗೆ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ.ತಕ್ಷಣ ಅದಕ್ಕೊಂದು ಕ್ರೈಮ್ ನಂಬರ್ ನೀಡಿ, ಪ್ರಕರಣ ದಾಖಲಾಗಿರು ವುದನ್ನು ದೃಢೀಕರಿಸುವ ಸಂದೇಶ ಪೊಲೀಸ್ ಇಲಾಖೆಯಿಂದ ನಿಮ್ಮ ಮೊಬೈಲ್‌ಗೆ ಬರುತ್ತದೆ. ಅಷ್ಟರೊಳಗಾಗಿ ಪೊಲೀಸ್ ತಂಡವೊಂದು ಘಟನಾ ಸ್ಥಳಕ್ಕೆ ಧಾವಿಸಿ ಅಪರಾಧದ ಕುರಿತು ಮಾಹಿತಿ ಸಂಗ್ರಹಿಸುತ್ತದೆ.

ಈಗಾಗಲೇ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಎಸ್‌ಎಂಎಸ್ ಸಂದೇಶ ರವಾನೆ ಸಂಬಂಧ ಕಂಪ್ಯೂಟರ್ ಆಪರೇಟರ್ ಹಾಗೂ ಠಾಣೆಯ ಇನ್ಸ್‌ಪೆಕ್ಟರ್ ಜತೆ ಚರ್ಚೆ ನಡೆಸಲಾಗುತ್ತಿದೆ. ಇದಕ್ಕಾಗಿ ಸೂಕ್ತ ತರಬೇತಿಯನ್ನು ಸಹ ನುರಿತ ತಜ್ಞರಿಂದ ನೀಡಲಾಗುತ್ತಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಸೂಚನೆ: ಸಾರ್ವಜನಿಕರು ಪೊಲೀಸರೊಂದಿಗೆ ತಮ್ಮ ಪ್ರಕರಣಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು 100 ಇಲ್ಲವೇ ಮೊಬೈಲ್ ಸಂಖ್ಯೆ 92432 58181 ಸಂಖ್ಯೆಗೆ ದೂರವಾಣಿ ಮಾಡಬಹುದಾಗಿದೆ. ಇದರ ಜೊತೆ ಎಸ್ಎಂಎಸ್ ಸಂದೇಶಗಳನ್ನು ಕಳುಹಿಸಿ ಮಾಹಿತಿ ಪಡೆಯಲು ಅವಕಾಶವನ್ನು ನೀಡಲಾಗಿದೆ.
http://thatskannada.oneindia.in/news/2010/09/20/police-complaint-through-sms-bcp-alok-kumar.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ