ಸೋಮವಾರ, ಸೆಪ್ಟೆಂಬರ್ 6, 2010

ಫೈಲ್ ಮಾಹಿತಿ

ನಿಮ್ಮ ಸ್ನೇಹಿತರೊಬ್ಬರು ನಿಮಗೆ ಒಂದು ಫೈಲ್ (ಕಡತ) ಅನ್ನು ಇಮೈಲ್ ಮೂಲಕ ಕಳುಹಿಸಿದ್ದಾರೆ. ಆದರೆ ಅದು ಯಾವ ತಂತ್ರಾಂಶದಲ್ಲಿ ತೆರೆಯುತ್ತದೆ ಎಂದು ನಿಮಗೆ ಗೊತ್ತಿಲ್ಲ. ಅವರು ತಿಳಿಸಿಯೂ ಇಲ್ಲ. ಆಗ ಏನು ಮಾಡುತ್ತೀರಿ? ಎಲ್ಲ ಫೈಲ್‌ಗಳಿಗೂ ಕಡತ ವಿಸ್ತರಣೆ (file extension) ಇರುತ್ತದೆ. ಕಡತದ ಹೆಸರಿನಲ್ಲಿ ಕೊನೆಯ ಚುಕ್ಕಿಯ ನಂತರ ಇರುವ 3 ಅಥವಾ 4 ಅಕ್ಷರಗಳು ಆ ಕಡತ (ಫೈಲ್) ಯಾವ ತಂತ್ರಾಂಶಕ್ಕೆ ಸಂಬಂಧಿಸಿದ್ದು ಎಂಬುದನ್ನು ಸೂಚಿಸುತ್ತದೆ. ಕೆಲವು ಉದಾಹರಣೆಗಳು - doc -ಮೈಕ್ರೋಸಾಫ್ಟ್ ವರ್ಡ್, txt -ಕೇವಲ ಪಠ್ಯ (Notepad), p65 -ಪೇಜ್‌ಮೇಕರ್ 6.5, ಇತ್ಯಾದಿ. ಯಾವ ಕಡತ ವಿಸ್ತರಣೆ ಯಾವ ತಂತ್ರಾಂಶಕ್ಕೆ ಸಂಬಧಿಸಿದ್ದು ಎಂದು ತಿಳಿಯಬೇಕೇ? ಹಾಗಿದ್ದರೆ www.fileinfo.com ಜಾಲತಾಣಕ್ಕೆ ಭೇಟಿ ನೀಡಿ. 
ಕೃಪೆಃ ಈ ಕೆಳಗಿನ ಎಲ್ಲಾ ಮಾಹಿತಿಗಳು.
Pavanaja U Bರವರ ಬ್ಲಾಗಿನಿಂದ. http://ganakindi.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ